ಬೆಳಗಾವಿಯಲ್ಲಿ CM

[20/12, 11:34 AM] Cm Ps: ಪೂಜ್ಯ ಹಾನಗಲ್ ಶ್ರೀ ಕುಮಾರ ಶಿವಯೋಗಿ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಚಿತ್ರದ ಧ್ವನಿ ಸುರುಳಿ, ಟ್ರೈಲರ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬಿಡುಗಡೆ ಮಾಡಿದರು. 
ಈ ಸಮಾರಂಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೊರೆ, ಮಾಜಿ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ಹಾಗೂ ಸ್ವಾಮೀಜಿಗಳು ಹಾಜರಿದ್ದರು.
[20/12, 11:43 AM] Cm Ps: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಇಂದು ನಾಮಪತ್ರ ಸಲ್ಲಿಸಿದರು. 
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಸಚಿವರಾದ ಜೆ.ಸಿ‌‌. ಮಾಧುಸ್ವಾಮಿ,  ಗೋವಿಂದ ಕಾರಜೋಳ, ವಿಧಾನ ಪರಿಷತ್ ಸರ್ಕಾರದ ಮುಖ್ಯ ಸಚೇತಕ ವೈ ಎ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಸ್.ವಿ‌. ಸಂಕನೂರು ಹಾಜರಿದ್ದರು.
[20/12, 12:37 PM] Cm Ps: *ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ಅವರ ಸಂಪರ್ಕದಲ್ಲಿದ್ದೇನೆ; ಸಿಎಂ.ಬೊಮ್ಮಾಯಿ*

ಬೆಳಗಾವಿ, ಡಿಸೆಂಬರ್ 20: 

 ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ಅವರೊಂದಿಗೆ  ಸಂಪರ್ಕದಲ್ಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು 
ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ಅವರು ವಿಧಾನಮಂಡಲ ಅಧಿವೇಶನದಲ್ಲಿ ಭಾಗವಹಿಸದೇ ಇರುವುದು ಬಹಿಷ್ಕಾರವಲ್ಲ. ತಮ್ಮ ಮೇಲಿದ್ದ ಪ್ರಕರಣಗಳಲ್ಲಿ ಮುಕ್ತರಾದ ಮೇಲೆ ಮತ್ತೊಮ್ಮೆ ಸಂಪುಟಕ್ಕೆ ಸೇರಬೇಕೆನ್ನುವ ಅವರ ಚಿಂತನೆ ಸರಿಯಿದೆ. ಅವರ ವಿಚಾರವನ್ನು ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಚರ್ಚೆ ಮಾಡಿದ್ದೇನೆ. ಅವರೂ ಕೂಡ ಸಕಾರಾತ್ಮಕ ವಾಗಿದ್ದಾರೆ. ಮಿಕ್ಕ ವಿಚಾರಗಳನ್ನು ವೈಯಕ್ತಿಕವಾಗಿ ಹೇಳಲಾಗುವುದು. ಕೆಲವು ವಿಚಾರಗಳನ್ನು  ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ   ಎಂದರು.
 
*ಸಿಬಿಐ ದಾಳಿ*
ಸಿಬಿಐ ದಾಳಿ ಬಗ್ಗೆ ಡಿ.ಕೆ ಶಿವಕುಮಾರ್ ಅವರ ಹೇಳಿಕೆ ಗೆ ಉತ್ತರಿಸಿ ಸಂವಿಧಾನಾತ್ಮಕವಾಗಿ ಸ್ವಾಯತ್ತವಾಗಿರುವ ಸಂಸ್ಥೆ  ಅವರ ಬಳಿ ಇರುವ ಪ್ರಕರಣ ಇದೆ ಅದರ ಮೇಲೆ ಅವರು ಕ್ರಮ ಕೈಗೊಳ್ಳುತ್ತಾರೆ. ಇದು ಡಿ.ಕೆ.ಶಿವಕುಮಾರ್ ಅವರಿಗೂ ತಿಳಿದಿರುವ ವಿಚಾರ ಎಂದರು. 

*ಹಾಲಾಲ್ ಕಟ್*
ಹಾಲಾಲ್ ಕುರಿತು ಸುದ್ದಿದಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಹಾಲಾಲ್ ವಿಷಯಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
[20/12, 12:45 PM] Cm Ps: ಪೂಜ್ಯ ಹಾನಗಲ್ ಶ್ರೀ ಕುಮಾರಸ್ವಾಮಿ ಚಲನಚಿತ್ರ ಟ್ರೈಲರ್ ಬಿಡುಗಡೆ :

*ಪೂಜ್ಯರ ಜೀವನಚರಿತ್ರೆ ಇಂದಿನ ಸಮಾಜಕ್ಕೆ ಪ್ರೇರಣೆಯಾಗಲಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಬೆಳಗಾವಿ, ಡಿಸೆಂಬರ್ 20 : 

ಪೂಜ್ಯ ಹಾನಗಲ್ ಶ್ರೀ ಕುಮಾರಸ್ವಾಮಿ ಅವರ ಜೀವನಾದರ್ಶಗಳನ್ನು ಸಾರುವ ಚಲನಚಿತ್ರ ಈಗಿನ ಸಮಾಜ ಹಾಗೂ ಯುವಪೀಳಿಗೆಗೆ ಪ್ರೇರಣೆಯಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪೂಜ್ಯ ಹಾನಗಲ್ ಶ್ರೀ ಕುಮಾರ ಶಿವಯೋಗಿ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಚಿತ್ರದ ಧ್ವನಿ ಸುರುಳಿ, ಟ್ರೈಲರ್ ನ್ನು ಅವರು ಇಂದು ಬಿಡುಗಡೆ ಮಾಡಿ ಮಾತನಾಡಿದರು.

*ವೀರಶೈವ ಲಿಂಗಾಯತ ಸಮಾಜವನ್ನು ಎತ್ತಿಹಿಡಿದ ಮಹಾನ್ ಯೋಗಿ :*
ಪೂಜ್ಯ ಹಾನಗಲ್ ಶ್ರೀ ಕುಮಾರ್ ಶಿವಯೋಗಿಗಳು ಮಹಾನ್ ಸಾಧಕರು. ಹಾನಗಲ್ ಕುಮಾರಸ್ವಾಮಿಗಳು 12 ನೇ ಶತಮಾನದ ಸಾಮಾಜಿಕ ಕ್ರಾಂತಿ ತೆರೆಗೆ ಸರಿಯುತ್ತಿರುವ ಸಂದರ್ಭದಲ್ಲಿ ಹಾನಗಲ್ ಕುಮಾರಸ್ವಾಮಿಯವರು ಹೊಸ ರೂಪ ಕೊಟ್ಟರು.ವೀರಶೈವ ಲಿಂಗಾಯತ ಸಮಾಜವನ್ನು ಎತ್ತಿಹಿಡಿದ ಮಹಾನ್ ಯೋಗಿ. ಅವರು ಸ್ಥಾಪನೆ ಮಾಡಿರುವ ಶಿವಯೋಗಿ ಮಂದಿರ ಇಂದಿಗೂ ಕೂಡ ಎಲ್ಲ ಅಧ್ಯಾತ್ಮಿಕ ಚಿಂತನೆಯನ್ನು ಮಾಡುವ ಸಂಸ್ಥೆಯಾಗಿದೆ. ವ್ಯವಸ್ಥಿತವಾದ ಇಂತಹ ಸಂಸ್ಥೆ ಬೇರೆಲ್ಲೂ ಕಾಣಲು ಸಿಗುವುದಿಲ್ಲ. ನಮ್ಮ ಪರಂಪರೆ, ಸಂಸ್ಕೃತಿ, ಸಂಸ್ಕಾರ ಗಳನ್ನು ಶಿವಯೋಗಿ ಮಂದಿರದ ಮೂಲಕ ಕಾಪಾಡಿಕೊಂಡು ಬರಲಾಗಿದೆ. ಇಂತಹ ಸಂಸ್ಥೆಯನ್ನು ಕಟ್ಟಿದ ಹಾನಗಲ್ ಕುಮಾರಸ್ವಾಮಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

*ಚಲನಶೀಲ ಸಮಾಜ :*
ಶಿವಯೋಗಿ ಮಂದಿರ ಜೀರ್ಣೊದ್ದಾರಕ್ಮೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಣ ನೀಡಿ ಜೀರ್ಣೊದ್ದಾರ ಮಾಡಿದ್ದಾರೆ. ವೀರಶೈವ ಲಿಂಗಾಯತ ಸಮಾಜ ಪ್ರಗತಿಪರವಾಗಿದ್ದು, ಈ ಸಮಾಜ ಕಾಲಕ್ಕೆ ತಕ್ಕಂತೆ ಎಲ್ಲವನ್ನು ಒಪ್ಪಿಕೊಳ್ಳುವ ಚಲನಶೀಲ ಸಮಾಜವಾಗಿದೆ. ಈ ಸಮಾಜ ಚಲನಶೀಲವಾಗಿರುವುದರಿಂದ ಈ ಸಮಾಜಕ್ಕೆ ಯಾವುದೇ ಧಕ್ಕೆ ಇಲ್ಲ. ಅವರು ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ ಮಾಡಿದ ಪೂಜ್ಯ ಹಾನಗಲ್ ಕುಮಾರಸ್ವಾಮಿಯವರು, ಪ್ರಥಮ ಅಧ್ಯಕ್ಷರಾಗಿದ್ದರು‌ ಅವರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕೆ ಅದ್ಯತೆ ನೀಡಿದರು‌.

*ತ್ರಿವಿಧ ದಾಸೋಹದಲ್ಲಿ ತೊಡಗಿರುವ ಮಠ :*
ಕರ್ನಾಟಕದಲ್ಲಿ  ಶಿಕ್ಷಣ ಉತ್ತಮಗೊಳ್ಳುವಲ್ಲಿ ಮಠಮಾನ್ಯಗಳು ಶಿಕ್ಷಣ ಕ್ಷೇತ್ರಕ್ಕೆ  ನೀಡುತ್ತಿರುವ ಕೊಡುಗೆ ಕಾರಣವಾಗಿದೆ. ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸುವ ಮೂಲಕ ಸರ್ಕಾರ ಮಾಡುವ ಕೆಲಸವನ್ನು ಮಾಡಿದರು. ಬೆಳಗಾವಿಯ ನಿಪ್ಪಾಣಿಹಿಂದ ಕೊಳ್ಳೆಗಾಲದವರೆಗೆ ಬೀದರ್ ನಿಂದ ಕೊಳ್ಳೆಗಾಲದವರೆಗು ಎಲ್ಲ ಗ್ರಾಮಗಳಲ್ಲಿ ವೀರಶೈವ ಲಿಂಗಾಯತ ಮಠಗಳು ಅಧ್ಯಾತ್ಮದ ಜೊತೆಗೆ ತ್ರಿವಿಧ ದಾಸೋಹದಲ್ಲಿ ತೊಡಗಿಕೊಂಡಿವೆ ವಿಜಯ ಸಂಕೇಶ್ವರ್ ಅವರ ಜೀವನ ಚರಿತ್ರೆ ಚಿತ್ರ ಬಿಡುಗಡೆಯಾಗಿದೆ.  ಯಶಸ್ಸು ನಮಗಾಗಿ ಅಲ್ಲ ಸಮಾಜಕ್ಕಾಗಿ ಪ್ರೇರಣೆಯಾಗಬೇಕೆಂದು  ವಿಜಯ ಸಂಕೇಶ್ವರರು ತಿಳಿಸಿದ್ದನ್ನು  ಸ್ಮರಿಸಿದರು


ಈ ಸಮಾರಂಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೊರೆ, ಮಾಜಿ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ಹಾಗೂ ಸ್ವಾಮೀಜಿಗಳು ಹಾಜರಿದ್ದರು.
[20/12, 1:22 PM] Cm Ps: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ವಿಧಾನಸಭೆಯ ಕಲಾಪದಲ್ಲಿ ಪಾಲ್ಗೊಂಡಿದ್ದರು.
[20/12, 5:27 PM] Cm Ps: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ವಿಧಾನಸಭೆಯ ಕಲಾಪದಲ್ಲಿ ಪಾಲ್ಗೊಂಡಿದ್ದರು.

Post a Comment

Previous Post Next Post