*#DeleteBJPNotVoterID**ಇದು ಕರ್ನಾಟಕ INC ಯಿಂದ ಪ್ರಾರಂಭಿಸಲಿರುವ ಡಿಜಿಟಲ್ ಅಭಿಯಾನದ ಒಂದು ಮಾದರಿಯಾಗಿದೆ*

[02/12, 11:36 AM] Kpcc official: *#DeleteBJPNotVoterID*

*ಇದು ಕರ್ನಾಟಕ INC ಯಿಂದ ಪ್ರಾರಂಭಿಸಲಿರುವ ಡಿಜಿಟಲ್ ಅಭಿಯಾನದ ಒಂದು ಮಾದರಿಯಾಗಿದೆ*

ದೇಶವನ್ನೇ ಬೆಚ್ಚಿ ಬೀಳಿಸುತ್ತಿರುವ ಬೆಂಗಳೂರು ಮತದಾರರ ದತ್ತಾಂಶ ಕಳ್ಳತನ ಪ್ರಕರಣ ಬಹಿರಂಗಗೊಂಡ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಡಿಜಿಟಲ್ ಅಭಿಯಾನ ಆರಂಭಿಸಲಿದೆ. ಕರ್ನಾಟಕದ ಬಿಜೆಪಿ ಸರ್ಕಾರದ ಮೂಗಿನ ಕೆಳಗೆ ನಡೆಯುತ್ತಿರುವ ವೋಟರ್ ಐಡಿ ಡೇಟಾ ಕಳ್ಳತನವು ಇತ್ತೀಚೆಗೆ ಬಹಿರಂಗಗೊಂಡಿತು ಮತ್ತು ಚುನಾವಣಾ ಆಯೋಗದ ಕಾರಿಡಾರ್ ಅನ್ನು ಬೆಚ್ಚಿಬೀಳಿಸಿದೆ, ಹೀಗಾಗಿ ರಾಷ್ಟ್ರೀಯ ಚುನಾವಣಾ ಸಂಸ್ಥೆಯು ಸಮಗ್ರ ತನಿಖೆ ನಡೆಸುವಂತೆ ಮಾಡಿದೆ. ಬೆಂಗಳೂರಿನಲ್ಲಿ 6.6 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಅಂದಾಜಿಸಲಾಗಿದ್ದರೂ, ಮತದಾರರ ಪಟ್ಟಿಯಲ್ಲಿ ತಮ್ಮ ನೋಂದಣಿಯನ್ನು ಟೋಲ್ ಫ್ರೀ ಸಂಖ್ಯೆ ಮತ್ತು ವೆಬ್‌ಸೈಟ್‌ನೊಂದಿಗೆ ಪರಿಶೀಲಿಸಲು ಇಸಿಐ ಮತದಾರರಿಗೆ ವಿನಂತಿಸಿದೆ. ಬಿಜೆಪಿ ಸರ್ಕಾರವು ದೇಶದ ಪ್ರಜಾಪ್ರಭುತ್ವವನ್ನು ಹಾಳುಮಾಡಲು ಪ್ರಯತ್ನಿಸಿದ ನಂತರ ಅವರ ಮತದಾರರ ಪಟ್ಟಿಯನ್ನು ಪರಿಶೀಲಿಸಲು ಜಾಗೃತಿ ಮೂಡಿಸಲು ಕಾಂಗ್ರೆಸ್ ವಾಟ್ಸಾಪ್ ಮೂಲಕ ಬೆಂಗಳೂರಿನಲ್ಲಿ 10 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಲಿದೆ.
[02/12, 11:37 AM] Kpcc official: ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸುವ ಹಾಗೂ ಸ್ಯಾನಿಟರಿ ನ್ಯಾಪ್ಕಿನ್ ನೀಡುವ ಶುಚಿ ಯೋಜನೆಯನ್ನು ಸ್ಥಗಿತಗೊಳಿಸಿದ್ದೇಕೆ @BSBommai ಅವರೇ?

ನೈರ್ಮಲ್ಯದ ಜಾಗೃತಿ ಇಲ್ಲದೆ ಹೆಣ್ಣುಮಕ್ಕಳು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ, ಹೊಸ ಯೋಜನೆಗಳನ್ನಂತೂ ರೂಪಿಸಲಿಲ್ಲ, ಇರುವ ಯೋಜನೆಗಳನ್ನು ಮುಂದುವರೆಸಲೂ ಸಹ ಸಾಮರ್ಥ್ಯವಿಲ್ಲವೇ ನಿಮ್ಮ ಸರ್ಕಾರಕ್ಕೆ?
[02/12, 3:06 PM] Kpcc official: *ಕೆಪಿಸಿಸಿ ಉಪಾಧ್ಯಕ್ಷರಾದ ವಿ.ಎಸ್ ಉಗ್ರಪ್ಪ ಹಾಗೂ ವಿಧಾನ ಪರಿಷತ್ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರಾದ ಪ್ರಕಾಶ್ ರಾಥೋಡ್ ಅವರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು:*

ರಾಜ್ಯ ಹಾಗೂ ರಾಷ್ಟ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ಆಡಳಿತದಲ್ಲಿದ್ದು ಪ್ರಧಾನಿ ಮೋದಿಯವರು ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಧಿಕಾರ ನಡೆಸುತ್ತಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿ ಸಾಮಾಜಿಕ ನ್ಯಾಯ ಸಮಾಧಿಯಾಗುತ್ತಿದೆ.

ಸಮಾಜದ ವ್ಯವಸ್ಥೆಯ ಕಟ್ಟ ಕಡೆಯ ಬಡವರು ಅದರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಮಕ್ಕಳ ಭವಿಷ್ಯದ ಮೇಲೆ ಚಪ್ಪಡಿ ಕಲ್ಲು ಎಳೆಯುವಂತಹ ಪ್ರಯತ್ನ ನರೇಂದ್ರ ಮೋದಿಯವರಿಂದ ನಡೆದಿದೆ. 

ಪ್ರಾಥಮಿಕ ಹಾಗೂ ಮಧ್ಯಮ ಶಾಲೆ ಗಳಲ್ಲಿ 22.56 ಕೋಟಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, 14.89 ಲಕ್ಷ ಶಾಲೆಗಳಲ್ಲಿ ಈ ಮಕ್ಕಳು ಕಲಿಯುತ್ತಿದ್ದಾರೆ. ಅದರಲ್ಲಿ 10.22 ಲಕ್ಷ ಸರ್ಕಾರಿಶಾಲೆಗಳು ಆಗಿವೆ. ಈ ಶಾಲೆಗಳಲ್ಲಿ ಗ್ರಾಮೀಣ ಭಾಗದ ಹಾಗೂ ಎಲ್ಲಾ ವರ್ಗದ ಮಕ್ಕಳು ಕಲಿಯುತ್ತಿದ್ದಾರೆ. ಶಿಕ್ಷಣ ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾಗಿತ್ತು.

ಕಾಂಗ್ರೆಸ್ ಅವಧಿಯಲ್ಲಿ ಸಂವಿಧಾನಕ್ಕೆ ಆರ್ಟಿಕಲ್ 21ಎ ಮೂಲಕ ಶಿಕ್ಷಣ ಹಕ್ಕು ತರುವ ಮೂಲಕ ಸಮಾಜದ ಎಲ್ಲಾ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ಸಿಗುವಂತೆ ಮಾಡಲಾಗಿತ್ತು. ಇದರ ಜೊತೆಗೆ ಬಡವರು ಅಲ್ಪಸಂಖ್ಯಾತರು ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ವಿದ್ಯಾರ್ಥಿ ವೇತನ ನೀಡಲು ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು. ಈ ವಿದ್ಯಾರ್ಥಿ ವೇತನವನ್ನು ಕೇಂದ್ರ ಸರ್ಕಾರ ಶೇಕಡ 75ರಷ್ಟು ಹಾಗೂ ರಾಜ್ಯ ಸರ್ಕಾರ ಶೇಕಡ 25 ರಷ್ಟು ನೀಡುತ್ತಿತ್ತು.

ಈಗ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿದ ನಂತರ ಈ ಅನುಪಾತ 60:40 ರಷ್ಟು ಆಗಿದೆ ಎಂಬ ಮಾಹಿತಿ ನೀಡಿದರು. ಆದರೆ ಇಲ್ಲಿ ಆಘಾತಕಾರಿ ವಿಚಾರ ಏನೆಂದರೆ, ಒಂದರಿಂದ ಎಂಟನೇ ತರಗತಿಯವರೆಗಿನ ಬಡ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ಮೋದಿಯವರು ಸರ್ಕಾರ ನಿಲ್ಲಿಸಿದ್ದಾರೆ. ಮೋದಿ ಅವರ ಸರ್ಕಾರ ಮಕ್ಕಳ ಭವಿಷ್ಯದ ವಿಚಾರದಲ್ಲಿ ಇಂತಹ ಕೆಟ್ಟ ನಿರ್ಧಾರ ತೆಗೆದುಕೊಂಡಿದೆ. ಇದೇ ಕಾರಣಕ್ಕೆ ನಾನು ಮೋದಿ ಅವರನ್ನು ಹಾಕಕ್ಕೆ ಆಧುನಿಕ ಭಸ್ಮಾಸುರರು ಎಂದು ಕರೆಯುತ್ತಿರುತ್ತೇನೆ.

ದೇಶದ ಮುಂದಿನ ಶಿಲ್ಪಿಗಳ ಆಗುವಂತಹ ಮಕ್ಕಳ ಭವಿಷ್ಯ ಹಾಗೂ ಬದುಕಿನ ಜೊತೆ ಬಿಜೆಪಿ ನಾಯಕರು ಚೆಲ್ಲಾಟವಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಇದನ್ನು ಅತ್ಯಂತ ಕಠಿಣ ಶಬ್ದಗಳಿಂದ ಖಂಡಿಸುತ್ತೇವೆ.

ಮೋದಿ ಅವರ ಸರ್ಕಾರ 2015 ರಿಂದ 2021 ರವರೆಗೆ ಸಂಸತ್ತಿನಲ್ಲಿ ನೀಡಲಾಗಿರುವ ಅಂಕಿ ಅಂಶಗಳ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಶ್ರೀಮಂತರ ಸುಮಾರು 10 ಲಕ್ಷ ಕೋಟಿ ರೂಪಾಯಿಯಷ್ಟು ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಿದೆ. ಕೇಂದ್ರ ಸರ್ಕಾರ ಬಡವರ ಪರವಾಗಿಲ್ಲಾ ಶ್ರೀಮಂತರ ಪರವಾಗಿ ಇದೆ ಎಂಬುದಕ್ಕೆ ಇದೇ ಸಾಕ್ಷಿ. 2017- 18ರಲ್ಲಿ 1.61 ಲಕ್ಷ ಕೋಟಿಯಷ್ಟು, 2018-19 ರಲ್ಲಿ 2.36 ಲಕ್ಷ ಕೋಟಿ, 2019-20 ರಲ್ಲಿ 2.34 ಲಕ್ಷ ಕೋಟಿ, 2020-21ರಲ್ಲಿ 2.02 ಲಕ್ಷ ಕೋಟಿ 2021- 22 ರಲ್ಲಿ 1.57 ಲಕ್ಷ ಕೋಟಿ ಶ್ರೀಮಂತ ಉದ್ಯಮಿಗಳ ಸಾಲ ಮನ್ನ ಮಾಡಿದೆ.

ಹಿಂದೂ ಪ್ರಾಜೆಕ್ಟ್ ಲಿಮಿಟೆಡ್ ಎಂಬ ಕಂಪನಿ 835 ಕೋಟಿ ಸಾಲ ಮಾಡಿದ್ದು, ಅದರಲ್ಲಿ 830 ಕೋಟಿಯನ್ನು ಮನ್ನಾ ಮಾಡಲಾಗಿದೆ. ಅದೇ ರೀತಿ ಕಿಂಗ್ಫಿಶರ್ ಏರ್ಲೈನ್ಸ್ ವಿವಿಧ ಬ್ಯಾಂಕುಗಳಲ್ಲಿ 1335 ಕೋಟಿ ಸಾಲ ಮಾಡಿದ್ದಾರೆ ಇದರಲ್ಲಿ 1935 ಕೋಟಿಯನ್ನು ಮನ್ನಾ ಮಾಡಲಾಗಿದೆ. ಅದೇ ರೀತಿ ಟ್ರಾನ್ಸ್ಪರಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ 1217 ಕೋಟಿ ಸಾಲ ಮಾಡಿದ್ದು ಅದರಲ್ಲಿ ಸಂಪೂರ್ಣ 1217 ಕೋಟಿ ಮನ್ನಾ ಮಾಡಿದೆ. ಕೆಎಸ್ಐ ಲಿಮಿಟೆಡ್ ಕಂಪನಿ, 861 ಕೋಟಿ ಸಾಲ ಪಡೆದಿದ್ದು ಇದರಲ್ಲಿ 859 ಕೋಟಿ ಮನ ಮಾಡಿದೆ. ಜೂಮ್ ಡೆವಲಪರ್ಸ್ ಕಂಪನಿ ಸಾಲ ಪಡೆದಿದ್ದು 1968 ಕೋಟಿ ಮೊನ್ನ ಆಗಿರುವುದು ಕೂಡ 1968 ಕೋಟಿ. ರೋಡ್ ಮ್ಯಾಕ್ ಗ್ಲೋಬಲ್ 2851 ಕೋಟಿ ಮನ್ನಾ ಆಗಿರುವುದು 1302ಕೋಟಿ. ಹೀಗೆ ಹಲವು ಕಂಪನಿಗಳ ಸಾಲ ಮನ್ನಾ ಮಾಡಲಾಗಿದೆ. ಆದರೆ ನಮ್ಮ ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದು ಕೇವಲ 400 ಕೋಟಿ ಮಾತ್ರ. ಇದನ್ನು ನೀಡಲು ಸಾಧ್ಯವಿಲ್ಲ ಎಂದರೆ ಇವರ ಆದ್ಯತೆ ಕೇವಲ ಹಣವಂತರು ಶ್ರೀಮಂತರು ಮಾತ್ರವೇ ಹೊರತು ಬಡವರು ಪರಿಶಿಷ್ಟರು ಅಲ್ಲ. 

ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಸಾಧ್ಯವಾಗದ ಸರ್ಕಾರ, ಅದಾನಿ ಅಂಬಾನಿ ಸೇರಿದಂತೆ ಕೆಲವೇ ಕೆಲವು ಮಂದಿಯ ಲಕ್ಷಾಂತರ ಕೋಟಿ ಸಾಲವನ್ನು ಮನ್ನಾ ಮಾಡುವ ಮೂಲಕ ಬಡ ಮಕ್ಕಳ ಶಿಕ್ಷಣದ ಮೇಲೆ ಚಪ್ಪಡಿ ಕಲ್ಲು ಎಳೆಯುತ್ತಿದ್ದಾರೆ. ಇವರು ಯಾವ ಮುಖ ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾರೆ.

ರಾಜ್ಯದಲ್ಲಿ 2013ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಈ ಸಮುದಾಯಗಳ ಜನಸಂಖ್ಯೆ ಅನುಗುಣವಾಗಿ ಬಜೆಟ್ ನಲ್ಲಿ ಎಲ್ಲಾ ಇಲಾಖೆಗಳಲ್ಲಿ ಹಣವನ್ನು ಮೀಸಲಿಡುವ ಕಾನೂನನ್ನು ಜಾರಿಗೆ ತರಲಾಯಿತು. ಇಂತಹ ಕಾನೂನು ಇರುವುದು ದೇಶದಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಮಾತ್ರ. ಅದರ ಪರಿಣಾಮವಾಗಿ ಶೇಕಡ 17ರಷ್ಟು ಇರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಸುಮಾರು 30 ಸಾವಿರ ಕೋಟಿಗಿಂತ ಹೆಚ್ಚು ಅನುದಾನವನ್ನು ಪ್ರತಿ ವರ್ಷ ನೀಡಲಾಗುವುದು. ಈ ಅನ್ನದಾನವನ್ನು ಆಯಾ ವರ್ಷ ಬಳಕೆ ಮಾಡಿಕೊಳ್ಳಬೇಕು. ಹಾಗೂ ಈ ಹಣವನ್ನು ಬೇರೆ ವಿಚಾರಗಳಿಗೆ ವರ್ಗಾವಣೆ ಮಾಡಬಾರದು ಎಂದು ಕಾನೂನಿನಲ್ಲಿ ತಿಳಿಸಿದೆ. ಒಂದು ವೇಳೆ ಈ ಅನುದಾನ ಬಳಕೆ ಆಗದಿದ್ದರೆ ಅದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವ ಕಾನೂನನ್ನು ತರಲಾಗಿದೆ.

ರಾಜ್ಯ ಸರ್ಕಾರ ಈಗ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಬಗ್ಗೆ ಎಲ್ಲಿಲ್ಲದ ಪ್ರೀತಿಯ ಮಾತುಗಳನ್ನಾಡುತ್ತಿದೆ. ಆದರೆ ರಾಜ್ಯ ಸರ್ಕಾರ ಈ ಅನುದಾನವನ್ನು ಈ ವರ್ಷ 29,165 ಕೋಟಿ ನೀಡಿದ್ದು, ಇದರ ಪೈಕಿ 15% ಗಿಂತ ಕಡಿಮೆ ಅನುದಾನ ಬಳಕೆಯಾಗಿದೆ. ಅದರಲ್ಲೂ ವಿಶೇಷವಾಗಿ ಉನ್ನತ ಶಿಕ್ಷಣ ಇಲಾಖೆಯಲ್ಲಿ 2.2% ನಷ್ಟು ಮಾತ್ರ ಬಳಕೆಯಾಗಿದೆ. ಕೌಶಲ್ಯ ಅಭಿವೃದ್ಧಿ ಇಲಾಖೆ 4.5% ಅನುದಾನವನ್ನು ಬಳಕೆ ಮಾಡಿದೆ. 

ಪರಿಶಿಷ್ಟರ ಮೀಸಲಾತಿ ಹೆಚ್ಚಳ ವಿಚಾರವಾಗಿ ಸಮಿತಿ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಈ ಸಮಿತಿ ವರದಿ ನೀಡಿ ಮೂರು ವರ್ಷಗಳಾದರು ಯಾವುದೇ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ ಈಗ ರಾಜ್ಯಪಾಲರ ಮೂಲಕ ಸುಗ್ರೀವಾಜ್ಞೆ ಹೊರಡಿಸಿ, ಪರಿಶಿಷ್ಟ ಜಾತಿಯವರಿಗೆ 17%, ಪರಿಶಿಷ್ಟ ಪಂಗಡದವರಿಗೆ 7% ಮೀಸಲಾತಿ ನೀಡುವುದಾಗಿ ಹೇಳಿದ್ದಾರೆ.

2004-05ರಲ್ಲಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ, ಶಿಕ್ಷಣ ಹಾಗೂ ಉದ್ಯೋಗ ವಿಚಾರದಲ್ಲಿ ಈ ಮೀಸಲಾತಿಯನ್ನು ನೀಡಿತ್ತು. ರಾಜ್ಯ ಸರ್ಕಾರ ಸುಗ್ರೀವ ಹೊರಡಿಸಿದ್ದು ಆದರೆ ಇದುವರೆಗೂ ಯಾವುದೇ ಅಧಿಕೃತ ಆದೇಶವನ್ನು ಬಿಡುಗಡೆ ಮಾಡಿಲ್ಲ ಎಂಬ ಆಘಾತಕಾರಿ ವಿಚಾರ ಇಂದು ಬೆಳಗ್ಗೆ ತಿಳಿಯಿತು. ಬಿಜೆಪಿ ಸರ್ಕಾರಕ್ಕೆ ಪರಿಶಿಷ್ಟರಿಗೆ ಮೀಸಲಾತಿ ನೀಡಲು ನಿಜವಾಗಿ ಆಸಕ್ತಿ ಇದ್ದರೆ ಸುಗ್ರೀವಾಜ್ಞೆ ಹೊರಡಿಸಿದ ಮರುದಿನವೇ ಸರ್ಕಾರದ ಆದೇಶವನ್ನು ಹೊರಡಿಸಬೇಕಿತ್ತು. 

ಇತ್ತೀಚಿಗೆ ಶ್ರೀರಾಮುಲು ಬಳ್ಳಾರಿ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತ ನಾವು ಕೈಗೆ ಬಳೆ ತೊಟ್ಟುಕೊಂಡಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಶ್ರೀರಾಮುಲು ಅವರು ಸ್ತ್ರೀ ಸಮುದಾಯಕ್ಕೆ ಅಪಚಾರ ಎಸಗಿದ್ದಾರೆ. ಈ ಹೇಳಿಕೆಯನ್ನು ಖಂಡಿಸಿ ಆರ್ ಎಸ್ ಎಸ್ ಆಗ ಬಿಜೆಪಿಯವರು ಶ್ರೀರಾಮುಲುವರಿಂದ ಕ್ಷಮೆ ಹೇಳಿಸುತ್ತಾರೆ ಎಂದು ಭಾವಿಸಿದ್ದೆ. ಆದರೆ ಬಿಜೆಪಿಯವರಾಗಲಿ ಅಥವಾ ಆರ್ ಎಸ್ ಎಸ್ ನವರಾಗಲಿ ಹಿಂದುತ್ವದ ಪರವಾಗಿಲ್ಲಾ, ಅವರು ಮನುವಾದದ ಪರವಾಗಿದ್ದಾರೆ. ಸ್ತ್ರೀಯರನ್ನು ದ್ವಿತೀಯ ದರ್ಜೆ ಪ್ರಜೆಗಳಂತೆ ಕಾಣುತ್ತಾರೆ ಎಂಬುದು ಶ್ರೀರಾಮುಲು ಅವರ ಮಾತಿನ ಮೂಲಕ ಸ್ಪಷ್ಟವಾಗಿದೆ. 

ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗಾಗಿ ನೀಡಲಾಗಿರುವ ಅನುದಾನದಲ್ಲಿ ಕೇವಲ 15% ಮಾತ್ರ ಬಳಕೆಯಾಗಿದ್ದು, ಶ್ರೀರಾಮುಲು ಏನು ಮಾಡುತ್ತಿದ್ದರು? ಕೇಂದ್ರ ಸರ್ಕಾರ ಬಡ ಮಕ್ಕಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ನಿಲ್ಲಿಸಿದ್ದು ಈ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಯಾಕೆ ಒತ್ತಡ ತರುತ್ತಿಲ್ಲ? ನಿಮಗೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಕ್ಕಳು ಹಿಂದುಳಿದ, ಅಲ್ಪಸಂಖ್ಯಾತ ವರ್ಗದ ಮಕ್ಕಳು ಬೇಡವಾಗಿದ್ದಾರೆ. ಇದೆಲ್ಲವನ್ನು ನೋಡಿದರೆ ನೀವು ಸರ್ವಾಧಿಕಾರಿ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದೀರಿ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಸರ್ಕಾರ ತನ್ನ ಈ ಪ್ರವೃತ್ತಿಯನ್ನು ಕೂಡಲೇ ನಿಲ್ಲಿಸಬೇಕು. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಜಮೀನು ಕೊಡಿಸುವ ಯೋಜನೆ ಇದೆ. ನಿಮ್ಮ ಆಡಳಿತದ ಅವಧಿಯಲ್ಲಿ ಪರಿಶಿಷ್ಟರಿಗೆ ಎಷ್ಟು ಜಮೀನನ್ನು ಕೊಡಿಸಿದ್ದೀರಿ. ನನ್ನ ಪ್ರಕಾರ ಈ ಸರ್ಕಾರ ಬಂದ ನಂತರ ಯಾರಿಗೂ ಜಮೀನು ಕೊಡಿಸಿಲ್ಲ. ಮಕ್ಕಳಿಗೆ ವಿದ್ಯಾರ್ಥಿ ವೇತನಗಳನ್ನು ನೀಡಿಲ್ಲ. ಪರಿಶಿಷ್ಟ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮಾತುಕೋತರ ಪದವಿ ಮಾಡುತ್ತಿರುವಾಗ ಅವರಿಗೆ ವಿದ್ಯಾರ್ಥಿ ವೇತನ ನೀಡಿಲ್ಲ.

ಪರಿಶಿಷ್ಟ ಸಮುದಾಯಕ್ಕೆ ನೀಡಲಾಗಿರುವ ಗಂಗಾ ಕಲ್ಯಾಣ ಕೊಳವೆಬಾವಿ ಯೋಜನೆ ಯಲ್ಲಿ ಅಕ್ರಮ ನಡೆದಿದೆ. ಹಾಗಿದ್ದರೆ ಈ ಸರ್ಕಾರ ಏನು ಮಾಡುತ್ತಿದೆ? ವಿಧಾನಸೌಧದಲ್ಲಿ ಮುಖ್ಯಮಂತ್ರಿ ಹಾಗೂ ಯಾವುದೇ ಸಚಿವರು ಇರುವುದಿಲ್ಲ. ಹೀಗಾಗಿ ವಿಧಾನಸೌಧಕ್ಕೆ ಬೀಗ ಹಾಕಿದ ರೀತಿಯಲ್ಲಿ ಇರುತ್ತದೆ. 

ಇದೆಲ್ಲದರ ಜೊತೆಗೆ ಬಿಜೆಪಿ ರೌಡಿಗಳನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿದೆ. ಪ್ರತಿ ಮಂತ್ರಿಗಳು ಒಂದಿಷ್ಟು ರೌಡಿಗಳನ್ನು ಹಂಚಿಕೊಳ್ಳಲು ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ಬೆಂಗಳೂರು ಇಂದು ಅಪರಾಧಗಳ ನಗರವಾಗಿದೆ.

 ಮುಖ್ಯಮಂತ್ರಿಗಳು ಗೃಹ ಸಚಿವರು ಹಾಗೂ ಇತರೆ ಮಂತ್ರಿಗಳು ಈ ವರ್ಗದ ಜನರ ಅನುದಾನ ಬಳಕೆ, ವಿದ್ಯಾರ್ಥಿ ವೇತನ ವಿಚಾರವಾಗಿ ನಿರ್ಲಕ್ಷ್ಯ ವಹಿಸಿದೆ. ಮುಂದಿನ ಚುನಾವಣೆಯಲ್ಲಿ ಸೋಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಅರಿತು ಎಲ್ಲಾ  ವಾಮ ಮಾರ್ಗಗಳನ್ನು ಹಿಡಿದಿದೆ.

ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಕಾಂಗ್ರೆಸ್ ಪರವಾಗಿರುವ ಪರಿಶಿಷ್ಟರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಮತಗಳನ್ನು  ಕೈಬಿಡಲಾಗಿದೆ. ಅವರ ಪರವಾಗಿರುವ ಮತದಾರ ಹೆಸರು ಸೇರ್ಪಡೆ ಮಾಡಲಾಗುತ್ತಿದೆ. ಈ ಬಗ್ಗೆ ಆರಂಭದಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಿದಾಗ ಏನೂ ನಡೆದಿಲ್ಲ ಎಂದು ಸರ್ಕಾರ ಹೇಳಿತ್ತು. ಆದರೆ ಚುನಾವಣಾ ಆಯೋಗ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿದೆ.

*ರಮೇಶ್:*

ದೇಶದಲ್ಲಿ ಸ್ವಾತಂತ್ರ ಬರುವ ಮುನ್ನ ಸಾಕ್ಷರತಾ ಪ್ರಮಾಣ 12% ಇತ್ತು. ಇಂದು ಸಾಕ್ಷರತಾ ಪ್ರಮಾಣ 78% ಇದೆ. 75 ವರ್ಷಗಳ ಸುದೀರ್ಘ ಪರಿಶ್ರಮದಿಂದ ಈ ಬೆಳವಣಿಗೆ ಕಂಡಿದೆ. ಇದರ ಹಿಂದೆ ವಿದ್ಯಾರ್ಥಿ ವೇತನ ಕೂಡ ಒಂದು ಪ್ರಮುಖ ಕಾರಣವಾಗಿದೆ. ಆದರೆ ಈಗ ಆರ್ ಎಸ್ ಎಸ್ ಅವರ ಧೋರಣೆಯಿಂದ ಈ ವಿದ್ಯಾರ್ಥಿ ವೇತನ ನೀಡುವುದನ್ನು ಕೈಬಿಟ್ಟರೆ, ಹಿಂದೂ ರಾಷ್ಟ್ರದಲ್ಲಿ ಕೇವಲ ಹಿಂದುಗಳು ಮಾತ್ರವಲ್ಲ ಎಲ್ಲಾ ವರ್ಗದ ಜನ ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಸಾಕ್ಷರತಾ ಪ್ರಮಾಣ ಕಡಿಮೆಯಾಗಲು ನಾಂದಿ ಹಾಡಲಿದೆ.  ಮಕ್ಕಳು ಶಾಲೆಗೆ ಹೋಗುವುದು ಕಡಿಮೆಯಾದರೆ ಕೆಲಸಕ್ಕೆ ಹೋಗುವ ಸಾಧ್ಯತೆ ಹೆಚ್ಚಾಗುತ್ತದೆ. ಅಲ್ಲದೆ ಸಮಾಜಘಾತಕ ವಿಚಾರದಲ್ಲಿ ಹೆಚ್ಚಿನ ಮಕ್ಕಳು ತೊಡಗಿಸಿಕೊಳ್ಳುವ ಅಪಾಯ ಹೆಚ್ಚಾಗಿದೆ. 

ಬಡವರ ಸಾಮಾಜಿಕ ನ್ಯಾಯ ಬಹಳ ಪ್ರಮುಖವಾದದ್ದು. ಇದನ್ನೇ ಸಂವಿಧಾನ ನಮಗೆ ತಿಳಿಸುತ್ತದೆ. ಆದರೆ ಬಿಜೆಪಿ ಸರ್ಕಾರ ಕಾರ್ಪೊರೇಟ್ ವರ್ಗದ ಜನರನ್ನು ವಿದ್ಯಾವಂತರನ್ನಾಗಿ ಮಾಡಿ ಅವರಿಗೆ ಅನುಕೂಲ ಮಾಡಿಕೊಡುವ, ಅವರ ಚಿಂತನೆಗೆ ತಕ್ಕಂತೆ ನೀತಿ ರೂಪಿಸುವ ಪ್ರಯತ್ನ ದೇಶಕ್ಕೆ ಮಾರಕವಾಗಿದೆ.

ಇದು ಗಂಭೀರವಾದ ವಿಚಾರವಾಗಿದ್ದು ಸದನದಲ್ಲೂ ಈ ವಿಚಾರವಾಗಿ ಚರ್ಚೆ ಮಾಡಬೇಕಿದೆ. ಈ ದೇಶದ ಮಾನವ ಸಂಪನ್ಮೂಲವನ್ನು ಹೆಚ್ಚು ಮಾಡುವುದು ಸರ್ಕಾರ ಹಾಗೂ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆದರೆ ಈ ರೀತಿಯಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮತ್ತು ಹಿಂದುಳಿದ ವರ್ಗದ ಜನ ದೇಶದಲ್ಲಿ ಸುಮಾರು 80% ರಷ್ಟು ಇದ್ದಾರೆ. ಇದರಲ್ಲಿ ಸುಮಾರು 70ರಿಂದ 75% ಜನ ಆರ್ಥಿಕವಾಗಿ ಹಿಂದುಳಿದಿರುವಂತಹ ಜನ.

ದರ್ಶನ್ ದರ್ಪವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ಆದರೆ ಬಿಜೆಪಿ ಇದರ ಬಗ್ಗೆ ಚಿಂತನೆ ಮಾಡದೆ ಕೇವಲ ಮತ ಗಳಿಕೆಗೆ ಮಾತ್ರ ಈ ವರ್ಗದ ಓಲೈಕೆಗೆ ಕಾರ್ಯಕ್ರಮ ರೂಪಿಸುತ್ತಿದೆ. ಈ ವರ್ಗದ ಜನರ ಕಲ್ಯಾಣಕ್ಕೆ ಬಿಜೆಪಿ ಸರ್ಕಾರ ಶ್ರಮಿಸುತ್ತಿಲ್ಲ. ಈ ಬಗ್ಗೆ ಸರ್ಕಾರ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗಬೇಕಿದೆ.

*ಪ್ರಶ್ನೋತ್ತರ:*

ರೌಡಿಗಳು ಬಿಜೆಪಿ ನಾಯಕರು ಪದೇ ಪದೇ ಭೇಟಿ ಮಾಡುತ್ತಿರುವುದಕ್ಕೆ ಎಂಬ ಪ್ರಶ್ನೆಗೆ, ' ಈ ಪ್ರಶ್ನೆಗೆ ಬಹುಶ ರಾಜ್ಯದ ಗೃಹ ಸಚಿವರು ಹಾಗೂ ಜಗ್ಗೇಶ್ ಅವರು ಉತ್ತರ ನೀಡಬೇಕು. ಇತ್ತೀಚಿನ ಬೆಳವಣಿಗೆಗಳಿಂದ ಬಿಜೆಪಿ ಅವರಿಗೆ ತಮ್ಮ ಶಕ್ತಿಯಿಂದ ಚುನಾವಣೆಗೆಲ್ಲಲು ಸಾಧ್ಯವಿಲ್ಲ  ಎಂಬುದು ಅರಿವಾಗುತ್ತಿದೆ. ಹೀಗಾಗಿ ವಾಮ ಮಾರ್ಗಗಳ ಹಿಡಿದಿದೆ.  ರೌಡಿಗಳ ಒಕ್ಕೂಟವನ್ನು ಏರ್ಪಡಿಸುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಬೆಂಗಳೂರಿನಲ್ಲಿ ಶೇಕಡ 25ರಷ್ಟು ಮಂದಿ ಕೊಳಗೇರಿ ಪ್ರದೇಶದ ಮತದಾರರಿದ್ದು, ಇನ್ನು ಆರ್ಥಿಕವಾಗಿ ಹಿಂದುಳಿದ ವರ್ಗಗಳು ಸೇರಿ ಶೇಕಡ 35ರಷ್ಟು ಮತಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಬಿಜೆಪಿ ಉಪದೇಶಗಳನ್ನು ತಯಾರು ಮಾಡುತ್ತಿದ್ದು ಇದಕ್ಕೆ ಆಧಾರವಾಗಿ ಬೆಂಗಳೂರಿನಲ್ಲಿರುವ ಸಮಾಜಘಾತಕ ಶಕ್ತಿಗಳ ಗುಂಪನ್ನು ಕಟ್ಟುತ್ತಿದೆ. ಸೋಮಣ್ಣ ಅವರು ವಸತಿ ಸಚಿವರಾಗಿದ್ದು ಬೆಂಗಳೂರಿನಲ್ಲಿ ಎಲ್ಲೆಲ್ಲಿ ಕೊಡಗೇರಿ ಪ್ರದೇಶಗಳಿವೆ ಎಂದು ಮ್ಯಾಪಿಂಗ್ ಮಾಡುತ್ತಿದ್ದಾರೆ. ಸರ್ಕಾರ ಉತ್ತಮ ಆಡಳಿತ ನೀಡಲು ವೈಫಲ್ಯವಾಗಿದ್ದು, ಅಭಿವೃದ್ಧಿಯಲ್ಲಿ ವಿಫಲರಾಗಿದ್ದಾರೆ. ಈಗ ಮತದಾರರ ಪಟ್ಟಿ ತೀರಿಚುವಲ್ಲಿಯೂ ವಿಫಲರಾಗಿದ್ದು. ಈಗ ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಗುಜರಾತ್ ಹಾಗೂ ಮಹಾರಾಷ್ಟ್ರದ ಕಡೆ ಈ ವಿಚಾರದ ಬಗ್ಗೆ ಗಮನಹರಿಸಿದರೆ, ಬಿಜೆಪಿ ಹಾಗೂ ಆರ್ ಎಸ್ ಎಸ್ ನ ಸಂಸ್ಕೃತಿ ಅರಿವಾಗುತ್ತದೆ. ಅದೇ ಸಂಸ್ಕೃತಿಯನ್ನು ಕರ್ನಾಟಕದಲ್ಲಿ ಆರಂಭಿಸಲು ಮುಂದಾಗಿದ್ದಾರೆ. ರಾಜ್ಯದ ಜನ ಬಹಳ ಪ್ರಬುದ್ಧರಾಗಿದ್ದು ಬದ್ಧತೆ ಇರುವಂತ ವಿಚಾರವಂತರಾಗಿದ್ದಾರೆ. ಬಿಜೆಪಿಯ ರೌಡಿಸಂ ಸಂಸ್ಕೃತಿಗೆ ಜನ ಮುಂದಿನ ದಿನಗಳಲ್ಲಿ ಪಾಠ ಕಲಿಸಲಿದ್ದಾರೆ ಎಂದು ನಂಬಿದ್ದೇನೆ' ಎಂದು ತಿಳಿಸಿದರು.

ನಿಮ್ಮ ಪಕ್ಷದಲ್ಲಿ ರೌಡಿಗಳು ಇಲ್ಲವೇ ಎಂಬ ಪ್ರಶ್ನೆಗೆ, ' ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ನಮ್ಮ ಪಕ್ಷದಲ್ಲಿ ರೌಡಿ ಹಿನ್ನೆಲೆ ಇರುವವರು ಇದ್ದರೆ ಅವರ ಪಟ್ಟಿ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ನಾವು ಇದಕ್ಕೆ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ' ಎಂದು ತಿಳಿಸಿದರು.

ನಿಮ್ಮ ಪಕ್ಷದ ಅಧ್ಯಕ್ಷರು ಸಂಪತ್ ರಾಜ್ ಅಂತವರನ್ನು ಜೊತೆಯಲ್ಲೇ ಇಟ್ಟುಕೊಂಡಿರುತ್ತಾರೆ ಇದು ಯಾವ ಸಂದೇಶ ರವಾನೆ ಆಗುತ್ತದೆ ಎಂದು ಕೇಳಿದ ಪ್ರಶ್ನೆಗೆ, ' ಯಾವುದಾದರೂ ನ್ಯಾಯಾಲಯದಲ್ಲಿ ತನಿಖೆ ಹಂತದಲ್ಲಿ ಆ ವಿಚಾರದ ಪರ ಅಥವಾ ವಿರೋಧವಾಗಿ ಹೇಳಿಕೆ ನೀಡುವುದು ಸರಿಯಲ್ಲ. ನಮ್ಮ ಪಕ್ಷದಲ್ಲಿ ಯಾರೇ ಇದ್ದರೂ ಅವರ ವಿರುದ್ಧ ಕ್ರಮ ಜರುಗಿಸಲಿ' ಎಂದು ಉತ್ತರಿಸಿದರು.

ಬಿಬಿಎಂಪಿ ಮಾಜಿ ಮಹಾಪೌರರಾದ ರಮೇಶ್ ಹಾಗೂ ರಾಮಚಂದ್ರಪ್ಪನವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
[02/12, 3:23 PM] Kpcc official: *ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ:*

ಮಹಾರಾಷ್ಟ್ರ ಜತೆಗಿನ ಗಡಿ ವಿವಾದದ ಬಗ್ಗೆ ಮುಖ್ಯಮಂತ್ರಿಗಳ ಮಾತಿಗೆ ಪ್ರಾಮುಖ್ಯತೆ ನೀಡುತ್ತೇನೆ. ಬೇರೆಯವರ ಮಾತಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ತಮ್ಮ ಪಕ್ಷದಲ್ಲಿ ಆಂತರಿಕ ಒಪ್ಪಂದ ಮಾಡಿಕೊಂಡು, ರಾಜ್ಯದ ಗಂಭೀರ ವಿಚಾರಗಳನ್ನು ಮರೆಮಾಚಲು ಈ ವಿವಾದ ಎಬ್ಬಿಸುತ್ತಿದ್ದಾರೆ. 

ಡಿ.6 ರಂದು ಮಹಾರಾಷ್ಟ್ರ ಸಚಿವರು ಬೆಳಗಾವಿ ಜಿಲ್ಲೆಗೆ ಭೇಟಿ ನೀಡುತ್ತಿರುವ ಬಗ್ಗೆ ಸರ್ಕಾರಕ್ಕೆ ಯಾವ ಸಲಹೆ ನೀಡುತ್ತೀರಿ ಎಂದು ಕೇಳಿದಾಗ, ' ಸರ್ಕಾರ ನಮ್ಮ ಅಭಿಪ್ರಾಯ ಕೇಳಿದರೆ ನಾವು ಸಲಹೆ ನೀಡಬಹುದು. ಆದರೆ ಅವರು ಪ್ರಮುಖ ವಿಚಾರ ಮರೆಮಾಚಲು ಈ ವಿವಾದ ಬಳಸಿಕೊಳ್ಳುತ್ತಿದ್ದಾರೆ ' ಎಂದರು.

ಚುನಾವಣಾ ಸಮಿತಿ ರಚನೆ ಹಾಗೂ ಚುನಾವಣೆ ಟಿಕೆಟ್ ಮೊದಲ ಪಟ್ಟಿ ಬಗ್ಗೆ ಕೇಳಿದ ಪ್ರಶ್ನೆಗೆ, ' ಆದಷ್ಟು ಶೀಘ್ರವಾಗಿ ಪಟ್ಟಿ ಬರಲಿದೆ ' ಎಂದರು.
[02/12, 3:45 PM] Kpcc official: ದಲಿತ, ಹಿಂದುಳಿದ ವರ್ಗಗಳ ಏಳಿಗೆ ನಿಮಗೆ ಇಷ್ಟವಿಲ್ಲವೇ @BSBommai ಅವರೇ?

ದಲಿತರ ಪಾಲಿನ ಹಣದಲ್ಲಿ ಕೇವಲ 15% ಮಾತ್ರ ಬಳಕೆ ಮಾಡಿ ಮಿಕ್ಕಿದ್ದನ್ನು 40% ಕಮಿಷನ್ ಲೆಕ್ಕದಲ್ಲಿ ನುಂಗಲಾಗಿದೆಯೇ?

ದಲಿತ ವಿರೋಧಿ @BJP4Karnataka ದಲಿತರ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಿಂದೇಟು ಹಾಕುತ್ತಿದೆ.

ಇದು ಕೇಶವಕೃಪದ ಆಜ್ಞೆಯ ಪಾಲನೆಯೇ?
[02/12, 3:54 PM] Kpcc official: ಕಳೆದ 2,3 ವರ್ಷಗಳಿಂದ ರಾಜ್ಯದ ರೈತರು ಬೆಳೆ ಹಾನಿ ಅನುಭವಿಸಿದ್ದಾರೆ,
@BJP4Karnataka ದೊಡ್ಡದಾಗಿ ಪ್ರಚಾರ ಮಾಡುವ ವಿಮಾ ಯೋಜನೆಯಿಂದ ನಯಾಪೈಸೆ ಹಣ ರೈತರಿಗೆ ಸಿಕ್ಕಿಲ್ಲ.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಲ್ಲ "ಪ್ರಧಾನಮಂತ್ರಿ ಧೋಖಾ ಯೋಜನೆ"!

ವಿಮಾ ಕಂಪೆನಿಗಳ ಜೇಬು ತುಂಬಿಸುವ ರೈತರಿಗೆ ಮಹಾ ದ್ರೋಹವೆಸಗಿದೆ #TroubleEngineSarkara
[02/12, 5:29 PM] Kpcc official: ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಮಕ್ಕಳ ಮರಣ ಪ್ರಮಾಣ ಹೆಚ್ಚಿದೆ, ಆದರೆ ಸರ್ಕಾರ ಅಂಗನವಾಡಿಗಳಿಗೆ ಅನುದಾನ ಕೊಡಲಿಲ್ಲ, ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಕೊಡಿಲಿಲ್ಲ.

@BSBommai ಅವರೇ,
ಮೈಕ್ ಮುಂದೆ ನಿಂತು ದಮ್ಮು ತಾಕತ್ತು ಎಂದು ಮಾತಾಡಿದಂತಲ್ಲ ಆಡಳಿತ ನಡೆಸುವುದು.

ಸಣ್ಣ ಯೋಜನೆಗಳನ್ನೂ ನಿರ್ವಹಿಸಲಾಗದ ತಮ್ಮದು ಯಾವ ಸೀಮೆಯ ತಾಕತ್ತು?
[02/12, 5:29 PM] Kpcc official: ದೇಶದಲ್ಲಿ ನಿರುದ್ಯೋಗ ದರ ಏರುಗತಿಯಲ್ಲೇ ಸಾಗಿದೆ, ಜೊತೆಗೆ ಆರ್ಥಿಕ ಹಿಂಜರಿತ, ಬೆಲೆ ಏರಿಕೆಗಳೂ ಸಹ.

ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದ ಪ್ರಧಾನಿ ಈಗ ಬಣ್ಣ ಬಣ್ಣದ ಬಟ್ಟೆ ಹಾಕಿಕೊಂಡು ಫೋಟೋಶೂಟ್‌ನಲ್ಲೇ ಮಗ್ನರಾಗಿದ್ದಾರೆ.

ಕೈಗೆ ಉದ್ಯೋಗ ಕೊಡುವ ಬದಲು ಯುವಕರ ಮನಸಿಗೆ ದ್ವೇಷದ ಅಮಲು ತುಂಬಿದರೆ ವೈಫಲ್ಯ ಸರಿಹೋಗದು.
[02/12, 9:21 PM] Kpcc official: ಬಳ್ಳಾರಿ ಹರಪನಹಳ್ಳಿಯ ಯುವ ಕಾಂಗ್ರೆಸ್ ಮುಖಂಡ ಜಯಪ್ರಕಾಶ್ ಸಾರಥಿ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಶುಕ್ರವಾರ ಭೇಟಿ ಮಾಡಿ ದಾರದಲ್ಲಿ ರಚಿಸಿದ ಡಿ ಕೆ ಶಿವಕುಮಾರ್ ಅವರ ಭಾವಚಿತ್ರವನ್ನು ನೀಡಿದರು.
[02/12, 9:22 PM] Kpcc official: ಬಿಜೆಪಿ ಆಡಳಿತದಲ್ಲಿ ದಲಿತರು ಬೈಕನ್ನೂ ಓಡಿಸದಿರುವ ಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ.

ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸದಿರುವುದು ಬಿಜೆಪಿಯ ದಲಿತ ವಿರೋಧಿ ಮನಸ್ಥಿತಿಗೆ ಸಾಕ್ಷಿ.

ಬಿಜೆಪಿಯ ಯಾವೊಬ್ಬ ನಾಯಕನೂ ದೌರ್ಜನ್ಯಗಳ ಬಗ್ಗೆ ತುಟಿ ಬಿಚ್ಚದಿರುವುದೇಕೆ?
[02/12, 11:03 PM] Kpcc official: ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳ ಕಾಂಗ್ರೆಸ್ (INTUC) ನೂತನ ಅಧ್ಯಕ್ಷ ಲಕ್ಷ್ಮೀ ವೆಂಕಟೇಶ್ ಹಾಗೂ ಇತರ ಸದಸ್ಯರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ರಾತ್ರಿ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.

Post a Comment

Previous Post Next Post