ಸಿದ್ಧರಾಮಯ್ಯನವರಿಗೆ ಕೆಲವು ಪ್ರಶ್ನೆಗಳು,, ಮೂಡ denotification ಆರೋಪ,, ಲೋಕಾಯುಕ್ತದಲ್ಲಿ ದೂರು

ಹರಿವ ನೀರೊಳು ಉರುಳೋ ಮರಳು ಜೊತೆಯಾಗಿ ದಡಸೇರಿದಾಗ ಮರಳು ಹೊಳಪಾಗಿತ್ತಯ್ಯ
ನೀರು ಶುದ್ಧವಾಗಿತ್ತಯ್ಯ
ಅರಿಯೋ ಪ್ರಭುವೇ!
            - ಸಿದ್ದೇಶ್ ತ್ಯಾಗಟೂರು
 ಸಿದ್ಧರಾಮಯ್ಯನವರಿಗೆ ಕೆಲವು ಪ್ರಶ್ನೆಗಳು

ಸಿದ್ಧರಾಮಯ್ಯನವರೇ, “ನಾನು ಶುದ್ಧ ಚಾರಿತ್ರ್ಯ ಉಳ್ಳವನು” ಎಂದು ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುವ ನೀವೇ ನಿಮ್ಮ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಕಾನೂನುಬಾಹಿರವಾಗಿ ನಿಮ್ಮ ಶಿಷ್ಯನ ಮೂಲಕ De - notification ಮಾಡಿಕೊಂಡಿರುವ ಭೂ ಹಗರಣಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸಿ

1. ದಿನಾಂಕ 26/11/1997 ರಂದು ಮೈಸೂರು ವಿಜಯನಗರ 2ನೇ ಹಂತದಲ್ಲಿರುವ ಸರ್ವೆ ನಂ: 70/4A ರ 9,600 ಚ. ಅಡಿ ವಿಸ್ತೀರ್ಣದ ನಿವೇಶನ ಖರೀದಿ ಮಾಡಿರುವುದು ನಿಜವೇ ? ಸುಳ್ಳೇ ?

2. ಕೇವಲ 6,72,000 ರೂಪಾಯಿಗಳಿಗೆ ಈ ನಿವೇಶನ ಖರೀದಿ ಮಾಡಿದ್ದು ನಿಜವೇ ? ಸುಳ್ಳೇ ?

3. ಖರೀದಿ ಮಾಡಿದ ಕೇವಲ 06 ವರ್ಷಗಳಲ್ಲಿ ಅಂದರೆ ದಿನಾಂಕ 29/09/2003 ರಂದು ಇದನ್ನು 01 ಕೋಟಿ ರೂಪಾಯಿಗೆ ಮಾರಾಟ ಮಾಡಿರುವುದು ನಿಜವೇ ? ಸುಳ್ಳೇ ?

4. ವಾಸ್ತವದಲ್ಲಿ ನೀವು ಖರೀದಿ ಮಾಡಿದ್ದ ಸರ್ವೆ ನಂ: 70/4A ಇನಕಲ್ ಗ್ರಾಮದ ಸಾಕಮ್ಮ ಎಂಬುವವರಿಗೆ ಸೇರಿದ್ದ ಈ ಜಮೀನನ್ನು ನೀವು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ De - notify ಮಾಡಿಸಿಕೊಂಡು ಖರೀದಿ ಮಾಡಿದ್ದೀರಿ ಎಂಬುದು ನಿಜವೇ ? ಸುಳ್ಳೇ ?

5. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಿಮ್ಮ ಆಪ್ತ ಸಿ. ಬಸವೇಗೌಡರು ಅಕ್ರಮವಾಗಿ  23/10/1997 ರಂದು ಸದರಿ ಹತ್ತು ಗುಂಟೆ ಜಮೀನನ್ನು De - notification ಮಾಡಿರುವುದು ನಿಜವೇ ? ಸುಳ್ಳೇ ?

6. ನಿಯಮ ಬಾಹಿರವಾಗಿ De - notify ಮಾಡಿದ ಇಪ್ಪತ್ತೇಳನೇ ದಿನ ಅಂದರೆ 26/11/1997 ರಂದು ನೀವು ಇದನ್ನು ಖರೀದಿ ಮಾಡಿರುವುದು ನಿಜವೇ ? ಸುಳ್ಳೇ ?

7. ಉಪ ಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ನೀವು ಒತ್ತಡ ಹೇರಿ ಈ ಜಮೀನನ್ನು De - notification ಮಾಡಿಸಿಕೊಂಡಿರುವುದು ನಿಜವಲ್ಲವೇ ?

8. ಸದರಿ ಸರ್ವೆ ನಂಬರ್‍ ನ ಜಮೀನಿಗೆ MUDA ವಿಶೇಷ ಭೂಸ್ವಾಧೀನಾಧಿಕಾರಿ ಅದರ ಮಾಲೀಕರಿಗೆ ದಿನಾಂಕ 22/11/1985 ರಂದು Award ಜಾರಿ ಮಾಡಿರುವುದು ನಿಮಗೆ ಗೊತ್ತಿರಲಿಲ್ಲವೇ ?

9. ಸದರಿ ಜಮೀನನ್ನು MUDA ವಶಪಡಿಸಿಕೊಂಡ ನಂತರ ವಿಜಯನಗರ 2ನೇ ಹಂತ ಬಡಾವಣೆ ನಿರ್ಮಿಸಿ ಇದೇ ಜಾಗದಲ್ಲಿ ನಿವೇಶನಗಳ ಸಂಖ್ಯೆಯ 3160, 3161, 3162, 3163 ನಿವೇಶನಗಳನ್ನಾಗಿ ವಿಂಗಡಿಸಿ ಸದರಿ ನಿವೇಶನಗಳನ್ನು ಹಂಚಿಕೆ ಮಾಡಿದ ನಂತರ, ಅದರಲ್ಲೂ ನಿವೇಶನ ಸಂಖ್ಯೆ 3161 ರಲ್ಲಿ ಸುಂದರ್ ರಾಜ್ ಎಂಬುವವರು ಮನೆ ಕಟ್ಟಿಕೊಂಡು MUDA ವತಿಯಿಂದ ನಕ್ಷೆ ಮಂಜೂರಾತಿಯನ್ನು ಪಡೆದುಕೊಂಡಿದ್ದರೂ ಸಹ ನೀವು ಕಾನೂನು ಬಾಹಿರವಾಗಿ De - notification ಮಾಡಿಸಿ ನಿಮ್ಮ ಹೆಸರಿಗೆ ನೊಂದಣಿ ಮಾಡಿಸಿಕೊಂಡು ನಂತರ ಈ ಮನೆಗಳನ್ನು ಕೆಡವಿ ಹಾಕಿ ನಿಮ್ಮ ಬಂಗಲೆ ಕಟ್ಟಿಕೊಂಡಿದ್ದು ನಿಜವಲ್ಲವೇ ?

10. ಅಂದಿನ MUDA ಆಯುಕ್ತರು ದಿನಾಂಕ 21/12/1995 ರಂದು ಸದರಿ ಸರ್ವೆ ನಂಬರ್ 70/4A ನಲ್ಲಿ ಬಡಾವಣೆ ನಿರ್ಮಾಣ ಮಾಡಿ, ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದ ಈ ಜಮೀನನ್ನು De - notification ಮಾಡಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ ಎಂದು ಆದೇಶ ಮಾಡಿರುವುದನ್ನು ನೀವು ಮುಚ್ಚಿಟ್ಟಿದ್ದು ಸರಿಯೇ ?

11. ನಿಮ್ಮ ಆಪ್ತ ಹಾಗೂ ಆಗಿನ MUDA ಅಧ್ಯಕ್ಷ ಸಿ. ಬಸವೇಗೌಡ ರವರು ದಿನಾಂಕ 19/09/1997 ರಂದು ಸದರಿ ಕಡತವನ್ನು ತರಾತುರಿಯಲ್ಲಿ ತರಿಸಿ De - notification ಮಾಡಿಸಿಕೊಟ್ಟಿರುವುದು ಈಗ ದಾಖಲೆಗಳ ಸಹಿತ ಜಗಜ್ಜಾಹೀರವಾಗಿದೆ. ಇದಕ್ಕೆ ಏನು ಹೇಳುತ್ತೀರಿ ?

12. De - notification ಗೆ ಸಂಬಂಧಿಸಿದ ಕಡತದ ಅನುಮೋದನೆಗೆಂದು ರಾಜ್ಯ ಸರ್ಕಾರಕ್ಕೆ ಕಳುಹಿಸದೆಯೇ ನೇರವಾಗಿ MUDA ದಿಂದಲೇ De - notification ಮಾಡಿಸಿರುವುದು ಕಾನೂನು ಬಾಹಿರ ಕಾರ್ಯವಲ್ಲವೇ ?

Post a Comment

Previous Post Next Post