ಕಡಿಮೆ ಆದಾಯದ, 2 ಮಿಲಿಯನ್ ಕುಟುಂಬಗಳಿಗೆ 10 ಕೆಜಿ ಅಕ್ಕಿ ನೀಡುವ ಅಧ್ಯಕ್ಷರ ಪ್ರಸ್ತಾವನೆಗೆ ಶ್ರೀಲಂಕಾ ಕ್ಯಾಬಿನೆಟ್ ಅನುಮೋದನೆ

ಜನವರಿ 17, 2023
3:52PM

 ಕಡಿಮೆ ಆದಾಯದ,                      2 ಮಿಲಿಯನ್ ಕುಟುಂಬಗಳಿಗೆ 10 ಕೆಜಿ ಅಕ್ಕಿ ನೀಡುವ ಅಧ್ಯಕ್ಷರ ಪ್ರಸ್ತಾವನೆಗೆ ಶ್ರೀಲಂಕಾ ಕ್ಯಾಬಿನೆಟ್ ಅನುಮೋದನೆ

ಫೈಲ್ PIC
2 ಮಿಲಿಯನ್ ಕಡಿಮೆ ಆದಾಯದ ಕುಟುಂಬಗಳಿಗೆ ತಿಂಗಳಿಗೆ 10 ಕಿಲೋಗ್ರಾಂಗಳಷ್ಟು ಅಕ್ಕಿಯನ್ನು ನೀಡುವ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಪ್ರಸ್ತಾವನೆಯನ್ನು ಶ್ರೀಲಂಕಾದ ಕ್ಯಾಬಿನೆಟ್ ಅನುಮೋದಿಸಿದೆ. 2 ತಿಂಗಳ ಕಾಲ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕ್ರಮವು ಬಡತನ ನಿರ್ಮೂಲನೆಗಾಗಿ ದ್ವೀಪದ ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮವಾದ ಸಮೃದ್ದಿಯ ಫಲಾನುಭವಿಗಳನ್ನು ಸಹ ಒಳಗೊಂಡಿದೆ. ಒಟ್ಟು ಅಂದಾಜು ವೆಚ್ಚ 8,040 ಮಿಲಿಯನ್ ರೂಪಾಯಿಗಳು ಇದರಲ್ಲಿ 61,000 MT ಭತ್ತದ ಖರೀದಿಗೆ 6,200 ಮಿಲಿಯನ್ ರೂಪಾಯಿಗಳು ಸೇರಿವೆ.

ಸಣ್ಣ ಮತ್ತು ಮಧ್ಯಮ ಪ್ರಮಾಣದ ಭತ್ತದ ಗಿರಣಿಗಳ ನೆರವಿನೊಂದಿಗೆ ಜಿಲ್ಲಾ ಕಾರ್ಯದರ್ಶಿಗಳು ಮತ್ತು ವಿಭಾಗೀಯ ಕಾರ್ಯದರ್ಶಿಗಳು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಾರೆ. ಈಗಿರುವ ವ್ಯವಸ್ಥೆಯನ್ನು ಬಳಸಿಕೊಂಡು ಕಡಿಮೆ ಆದಾಯ ಹೊಂದಿರುವವರು ಸೇರಿದಂತೆ ಗುರುತಿಸಲಾದ ಸಮೃದ್ಧಿ ಫಲಾನುಭವಿಗಳಿಗೆ ಅಕ್ಕಿ ವಿತರಿಸಲಾಗುವುದು. ಮಹಿಳಾ, ಮಕ್ಕಳ ವ್ಯವಹಾರಗಳು ಮತ್ತು ಸಾಮಾಜಿಕ ಸಬಲೀಕರಣ ಸಚಿವಾಲಯವು ಜಿಲ್ಲಾ ಕಾರ್ಯದರ್ಶಿಗಳನ್ನು ಸಮನ್ವಯಗೊಳಿಸುತ್ತದೆ ಮತ್ತು ಅವರಿಗೆ ಅಗತ್ಯ ಸೂಚನೆಗಳನ್ನು ನೀಡುತ್ತದೆ.

Post a Comment

Previous Post Next Post