ಜನವರಿ 15, 2023 | , | 9:54PM |
3ನೇ ODIನಲ್ಲಿ ಭಾರತವು ಶ್ರೀಲಂಕಾವನ್ನು ದಾಖಲೆಯ 317 ರನ್‌ಗಳಿಂದ ಸೋಲಿಸಿತು; 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್

ಇದಕ್ಕೂ ಮೊದಲು ನ್ಯೂಜಿಲೆಂಡ್ ಜುಲೈ 2008 ರಲ್ಲಿ ಅಬರ್ಡೀನ್‌ನಲ್ಲಿ ಐರ್ಲೆಂಡ್ ವಿರುದ್ಧ 290 ರನ್‌ಗಳ ಜಯ ದಾಖಲಿಸಿತ್ತು. 391 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ 22 ಓವರ್‌ಗಳಲ್ಲಿ 73 ರನ್‌ಗಳಿಗೆ ಆಲೌಟ್ ಆಗಿತ್ತು. ಭಾರತದ ಪರ ಮೊಹಮ್ಮದ್ ಸಿರಾಜ್ ನಾಲ್ಕು ವಿಕೆಟ್ ಪಡೆದರು.
ಇದಕ್ಕೂ ಮೊದಲು, ಶುಭ್‌ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಅವರ ತಲಾ ಒಂದು ಶತಕದ ನೆರವಿನಿಂದ ಟೀಮ್ ಇಂಡಿಯಾ 5 ವಿಕೆಟ್‌ಗೆ 390 ರನ್ ಗಳಿಸಿತು.
ಶುಭಮನ್ ಗಿಲ್ 97 ಎಸೆತಗಳಲ್ಲಿ 116 ರನ್‌ಗಳೊಂದಿಗೆ ತಮ್ಮ ವೃತ್ತಿಜೀವನದ ಎರಡನೇ ODI ಶತಕವನ್ನು ಸಿಡಿಸಿದರು. ವಿರಾಟ್ ಕೊಹ್ಲಿ 110 ಎಸೆತಗಳಲ್ಲಿ 166 ರನ್ ಗಳಿಸಿ ಅಜೇಯರಾಗಿ ತಮ್ಮ ವೃತ್ತಿಜೀವನದ 46 ನೇ ಏಕದಿನ ಶತಕವನ್ನು ಗಳಿಸಿದರು.
ಶ್ರೀಲಂಕಾ ಪರ ಲಹಿರು ಕುಮಾರ ಮತ್ತು ಕಸುನ್ ರಜಿತಾ ತಲಾ ಎರಡು ವಿಕೆಟ್ ಪಡೆದರೆ, ಚಮಿಕಾ ಕರುಣಾರತ್ನೆ ಒಂದು ವಿಕೆಟ್ ಪಡೆದರು.
ವಿರಾಟ್ ಕೊಹ್ಲಿ ಭಾನುವಾರ ಸಚಿನ್ ತೆಂಡೂಲ್ಕರ್ ಅವರ ಎರಡು 'ಸಾರ್ವಕಾಲಿಕ ದಾಖಲೆ'ಗಳನ್ನು ಮುರಿದಿದ್ದಾರೆ. 101 ಇನ್ನಿಂಗ್ಸ್‌ಗಳಲ್ಲಿ 21 ನೇ ಶತಕದೊಂದಿಗೆ, ಕೊಹ್ಲಿ ತವರಿನಲ್ಲಿ ಅತಿ ಹೆಚ್ಚು ODI ಶತಕಗಳ ಪಟ್ಟಿಯಲ್ಲಿ ತೆಂಡೂಲ್ಕರ್‌ಗಿಂತ ಮುಂದಿದ್ದಾರೆ.
50 ಓವರ್‌ಗಳ ಮಾದರಿಯಲ್ಲಿ ಎದುರಾಳಿ ವಿರುದ್ಧ ಅತಿ ಹೆಚ್ಚು ಏಕದಿನ ಶತಕಗಳನ್ನು ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದರು. ಇದು ಶ್ರೀಲಂಕಾ ವಿರುದ್ಧ ಕೊಹ್ಲಿ ಗಳಿಸಿದ 10ನೇ ಶತಕ. ಸಚಿನ್ ತೆಂಡೂಲ್ಕರ್ ಅವರು ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ 9 ಶತಕಗಳ ದಾಖಲೆಯನ್ನು ಹೊಂದಿದ್ದರು.
ಮಹೇಲಾ ಜಯವರ್ಧನೆ ಅವರ 12,650 ರನ್‌ಗಳ ದಾಖಲೆಯನ್ನು ಕೊಹ್ಲಿ ಮುರಿದು ಏಕದಿನ ಕ್ರಿಕೆಟ್‌ನಲ್ಲಿ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು.
Post a Comment