ರೈಲ್ವೆಯು ಪ್ರಯಾಣಿಕರ ವಿಭಾಗದಲ್ಲಿ 71 ಪ್ರತಿಶತದಷ್ಟು ಆದಾಯ

ಜನವರಿ 02, 2023
7:33PM

ರೈಲ್ವೆಯು ಪ್ರಯಾಣಿಕರ ವಿಭಾಗದಲ್ಲಿ 71 ಪ್ರತಿಶತದಷ್ಟು ಆದಾಯವನ್ನು ದಾಖಲಿಸಿದೆ

@RailMinIndia
ಭಾರತೀಯ ರೈಲ್ವೇಯು ಪ್ರಯಾಣಿಕರ ವಿಭಾಗದಲ್ಲಿ ಒಟ್ಟು ಅಂದಾಜು ಗಳಿಕೆಯಲ್ಲಿ ಶೇಕಡಾ 71 ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಇದರ ಆದಾಯವು ಏಪ್ರಿಲ್‌ನಿಂದ ಡಿಸೆಂಬರ್ 2022 ರವರೆಗೆ ಹಿಂದಿನ ವರ್ಷದ ಇದೇ ಅವಧಿಯಲ್ಲಿ 28 ಸಾವಿರ 569 ಕೋಟಿ ರೂಪಾಯಿಗಳಿಂದ 48 ಸಾವಿರ 913 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

2022 ರ ಏಪ್ರಿಲ್ 1 ರಿಂದ ಡಿಸೆಂಬರ್ 31 ರ ಅವಧಿಯಲ್ಲಿ ಕಾಯ್ದಿರಿಸಿದ ಪ್ರಯಾಣಿಕರ ವಿಭಾಗದಿಂದ ಗಳಿಸಿದ ಆದಾಯವು 38 ಸಾವಿರದ 483 ಕೋಟಿ ರೂಪಾಯಿಗಳಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ 26 ಸಾವಿರದ 400 ಕೋಟಿಗಳಿಗೆ ಹೋಲಿಸಿದರೆ ಶೇಕಡಾ 46 ರಷ್ಟು ಹೆಚ್ಚಳವಾಗಿದೆ.

2022 ರ ಏಪ್ರಿಲ್ 1 ರಿಂದ ಡಿಸೆಂಬರ್ 31 ರ ಅವಧಿಯಲ್ಲಿ ಕಾಯ್ದಿರಿಸದ ಪ್ರಯಾಣಿಕರ ವಿಭಾಗದಿಂದ ಗಳಿಸಿದ ಆದಾಯವು 10 ಸಾವಿರದ 430 ಕೋಟಿ ರೂಪಾಯಿಗಳಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಎರಡು ಸಾವಿರದ 169 ಕೋಟಿಗಳಿಗೆ ಹೋಲಿಸಿದರೆ ಶೇಕಡಾ 381 ರಷ್ಟು ಹೆಚ್ಚಳವಾಗಿದೆ.

Post a Comment

Previous Post Next Post