*ಬದುಕಲು ಕಲಿಯುವುದು*

 *ಬದುಕಲು ಕಲಿಯುವುದು*

                ಸಂಜೀವಣ್ಣ ಸುಶೀಲಕ್ಕ ನನಗೆ ದೂರದ ಸಂಬಂಧಿಕರು. ಹತ್ತಿರದ ಊರಲ್ಲೇ ಇದ್ದರೂ ತುಂಬಾ ವರ್ಷಗಳಿಂದ ಹೋಗಲಾಗಿರಲಿಲ್ಲ. ಮೊದಲೆಲ್ಲಾ ಅಗಾಗ ಹೋಗಿ ಒಂದೆರಡು ದಿನ ಉಳಿದು ಸಹ ಬರುತ್ತಿದ್ದೆ. ಈಗ ಅದೇ ಊರಿನಲ್ಲಿ ಗೆಳತಿಯೊಬ್ಬಳ ಮನೆಯ ಕಾರ್ಯಕ್ರಮಕ್ಕೆ ಹೋಗೋದಿತ್ತು. ಅವರನ್ನೂ ಭೇಟಿಯಾಗಿ ಬರೋಣವೆಂದು ಬೇಗನೇ ಹೊರಟಿದ್ದೆ.
                             ಸಂಜೀವಣ್ಣ ದಂಪತಿಗೆ ಆರತಿಗೆ ಮಗಳು ಕೀರುತಿಗೆ ಮಗ. ಓದಿನಲ್ಲಿ ಜಾಣ ಮಕ್ಕಳು. ಮಗಳು ಎಂಬಿಬಿಎಸ್ ಮಾಡಿ, ಎಂ ಡಿ ಮಾಡಲೆಂದು ಅಮೇರಿಕೆಗೆ ಹೋಗಿ ಅಲ್ಲಿನ ಹುಡುಗನನ್ನು ಪ್ರೀತಿಸಿ ಮದುವೆಯಾಗಿ ಅಲ್ಲೇ ಸೆಟಲ್ ಆಗಿದ್ದಳು. ಮಗನೂ ಇಂಜಿನಿಯರ್ ಆಗಿ ಜರ್ಮನಿಯಲ್ಲಿ ನೆಲೆಸಿದ್ದ. ಈ ಇಳೀವಯಸ್ಸಿನಲ್ಲಿ ಇವರಿಬ್ಬರೇ ಊರಲ್ಲೇ ಇದ್ದರು.
                      ಹಿರಿಯರನ್ನು ಭೇಟಿಯಾಗಲು ಹೋದಾಗ ಏನಾದರೂ ತಗೊಂಡು ಹೋಗಬೇಕು ಎಂದುಕೊಂಡೆ. ವಯಸ್ಸಾಗಿದೆ ಡಯಾಬಿಟೀಸ್ ಇರಬಹುದು ಎಂದು ಸ್ವಲ್ಪವೇ ಮೈಸೂರ್ ಪಾಕು, ಚಕ್ಕುಲಿ, ನಿಪ್ಪಟ್ಟು ಮುಂತಾದ ಕುರುಕಲು ಕಟ್ಟಿಸಿಕೊಂಡು ಹೊರಟಿದ್ದೆ. ಇವರನ್ನು ಮಾತಾಡಿಸಿ ಗೆಳತಿಯ ಮನೆಯ ಕಾರ್ಯಕ್ರಮ ಮುಗಿಸಿ ಹಾಗೇ ವಾಪಸಾಗೋದು ಅಂತ ಲೆಕ್ಕ ಹಾಕಿದ್ದೆ. 
                         ಹನ್ನೊಂದು ಗಂಟೆಯಾಗಿತ್ತು ಕರೆಗಂಟೆ ಒತ್ತಿದಾಗ. ಬಾಗಿಲು ತೆಗೆದ ಸುಶೀಲಕ್ಕ " ಓಹೋ ನೀನಾ... ಬಾರೇ.. ಒಳಗೆ ಬಾ... ತುಂಬಾ ಅಪರೂಪಕ್ಕೆ ಬಂದಿದ್ದಿ" ಅಂತ ಹಾರ್ದಿಕವಾಗಿ ಸ್ವಾಗತಿಸಿದರು. ಒಳಗಿಂದ ಸಂಜೀವಣ್ಣ " ಒಂದು ಕಪ್ ಅಕ್ಕಿ ತಗೊಂಡಿದ್ದೀನಿ ... ನೀರು ಎಷ್ಟು ಹಾಕಲೇ" ಅಂತ ಹೇಳೋದು ಕೇಳಿಸ್ತು. ನಾನು ಸುಶೀಲಕ್ಕನ ಕಡೆಗೆ ಪ್ರಶ್ನಾರ್ಥಕವಾಗಿ ನೋಡಿದೆ. ಅವರು ಇರು ಅಂತ ಸನ್ನೆ ಮಾಡಿ " ಕೇಳಿಸ್ತಾ... ವಿದ್ಯಾ ಬಂದಿದ್ದಾಳೆ ಹಾಗೇ ಕಾಫೀ ಮಾಡ್ಕೊಂಡು ಬನ್ನಿ" ಅಂದರು. ನನಗೆ ಆಶ್ಚರ್ಯವಾಯಿತು. "ಏನಾಯ್ತು" ಕೇಳಿದೆ.
                           ಸಂಜೀವಣ್ಣ ಲೊಟದಲ್ಲಿ ಕಾಫೀ ತಗೊಂಡು ಬಂದರು. ಕಾಫೀ ಕುಡೀತಾ ಸುಶೀಲಕ್ಕ ವಿವರಿಸಿದರು. "ನೋಡು ಮಗು.. ನಮಗೆ ವಯಸ್ಸಾಗಿದೆ. ಇವರಿಗೆ ಎಂಬತ್ತು ದಾಟಿದೆ... ನನಗೂ ಎಪ್ಪತ್ತೆಂಟು. ಈಗ ವಾಪಸ್ಸು ಹೋಗುವ ದಿನಗಳನ್ನು ಕಾಯುತ್ತಿದ್ದೇವೆ. ಯಾರ ಸರದಿ ಮೊದಲು ಬರುವುದು ಅಂತ ಗೊತ್ತಿಲ್ಲ. ಮಕ್ಕಳು ಕೊನೆಗಾಲಕ್ಕೆ ಬಂದಿರ್ತಾರೆ ಅನ್ನೋದು ಸುಳ್ಳು. ಅವರವರ ಜೀವನ ಅವರವರಿಗೆ. ಮೇಲೆ ಹೋದವರ ಗತಿ ಏನಾಗುತ್ತದೆ ಯಾರಿಗೂ ಗೊತ್ತಿಲ್ಲ. ಇಲ್ಲಿ ಉಳಿದವರು ಬದುಕಬೇಕಲ್ಲಾ... ಅದಕ್ಕೆ ಬದುಕಲು ಕಲಿಯುತ್ತಿದ್ದೇವೆ ಎಂದರು.
                         ಬದುಕಲು ಕಲಿಯುವುದು ಎಂದರೆ ಏನು?  ಇಷ್ಟು ವರ್ಷಗಳ ಸಂಸಾರದಲ್ಲಿ ಬದುಕಲು ಕಲಿಯಲೇ ಇಲ್ಲವೆ ಹಾಗಾದರೆ !!.. ಸಂಜೀವಣ್ಣ ಸ್ಪಷ್ಟಪಡಿಸಿದರು. " ನಾನು ಉಳಿದರೆ ಸ್ವಲ್ಪಮಟ್ಟಿಗೆ ನಿತ್ಯದ ಅಡಿಗೆಯಾದರೂ ಬರಬೇಕಲ್ಲ... ಅದಕ್ಕೆ ಅನ್ನ ಸಾರು ಕಾಫೀ ಟೀ ಮಾಡೋದು ಕಲೀತಾ ಇದ್ದೀನಿ... ಇವಳಿಗೆ ಇದುವರೆಗೆ ಬರದ ವಿಷಯ ಎಟಿಎಮ್ ನಿಂದ ದುಡ್ಡು ಡ್ರಾ ಮಾಡೋದು...online ಬಿಲ್ಲುಗಳನ್ನು ಕಟ್ಟೋದು.. ಇಂಥದ್ದು ಅವಳು ಕಲೀತಿದ್ದಾಳೆ. ಒಟ್ನಲ್ಲಿ ಒಬ್ಬರೇ ಆದಾಗ ಬದುಕೋದು ಹೇಗೆ ಅಂತ ಕಲೀತಿದ್ದೀವಿ" ಅಂದ್ರು.
                            ಯಾಕೋ ಕಾಫೀ ಕಹಿ ಎನಿಸಿ ಇನ್ನೊಮ್ಮೆ ಗುಟುಕರಿಸಿದೆ. ಕಹಿಯಾಗಿದ್ದು ಕಾಫೀ ಅಲ್ಲ... ಈ ದಂಪತಿಗಳು ಹೇಳಿದ ಕಹಿಸತ್ಯ ಎಂದೆನಿಸಿ ಭಾರವಾದ ಮನಸ್ಸಿಂದ ಅವರಿಂದ ಬೀಳ್ಕೊಂಡು ಹೊರಬಂದೆ.
*ವಿದ್ಯಾ ಭಾವೆ*
[13/01, 5:03 PM] +91 98456 85410: ಗಂಡ ಅತಿಯಾಗಿ ಪ್ರೀತಿಸ್ತಾನೆ, ಜಗಳಾನೇ ಆಡಲ್ಲ..ಡಿವೋರ್ಸ್ ಬೇಕು ಅಂತಿದ್ದಾಳೆ ಪತ್ನಿ!

http://dhunt.in/Ik5Ef?s=a&uu=0x9c1d8083ea778e3c&ss=wsp
Source : "Suvarna News" via Dailyhunt

Post a Comment

Previous Post Next Post