[27/01, 5:21 PM] +91 83103 04771: 27-1-2023
ಗೆ,
ಸಂಪಾದಕರು / ವರದಿಗಾರರು.
ಪ್ರಕಟಣೆಯ ಕೃಪೆಗಾಗಿ
‘ಕಾಂಗ್ರೆಸ್ ಪಾರ್ಟಿ ಝೂಟೆ ವಾದೊಂಕಿ ಸೌದಾಗರ್’: ಅರುಣ್ ಸಿಂಗ್
ಬೆಂಗಳೂರು: ‘ಕಾಂಗ್ರೆಸ್ ಪಾರ್ಟಿ ಔರ್ ನೇತಾ ಇಸ್ ಸಮಯ್ ಝೂಟೆ ವಾದೊಂಕಿ ಸೌದಾಗರ್ ಹೋ ಚುಕೇ ಹೇ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ಟೀಕಿಸಿದರು.
ಹುಬ್ಬಳ್ಳಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನವರು ತಾವು ಅಧಿಕಾರಕ್ಕೆ ಬಂದರೆ ಆಕಾಶದಿಂದ ನಕ್ಷತ್ರ ತಂದು ಕೊಡುವ ಭರವಸೆಯನ್ನೂ ಕೊಡುತ್ತಾರೆ. ಕರ್ನಾಟಕದ ಜನರನ್ನು ಗೊಂದಲ ಮತ್ತು ಭ್ರಮೆಯಲ್ಲಿಡಲು ಕಾಂಗ್ರೆಸ್ಸಿಗರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬಂದರೆ 10 ದಿನಗಳೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದರು. ಈಗ ಕಾಂಗ್ರೆಸ್ ಪಕ್ಷದ 5ನೇ ವರ್ಷದ ಆಡಳಿತ ನಡೆಯುತ್ತಿದೆ. ಲಕ್ಷಗಟ್ಟಲೆ ರೈತರು ಕಾಯುತ್ತಿದ್ದಾರೆ. ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿರುದ್ಯೋಗಿ ಯುವಕರಿಗೆ 3,500 ರೂಪಾಯಿ ಮಾಸಿಕ ಭತ್ಯೆ ಕೊಡುವುದಾಗಿ ಹೇಳಿದ್ದರು. ಒಂದು ರೂಪಾಯಿ ಭತ್ಯೆಯನ್ನೂ ಕೊಟ್ಟಿಲ್ಲ. ಆದರೆ, ಈ ಎರಡೂ ಭರವಸೆಗಳು ಈಡೇರಿಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಈ ಸುಳ್ಳು ಭರವಸೆಗಳ ಕುರಿತು ಜನರಿಗೆ ಸ್ಪಷ್ಟನೆ ಕೊಡಬೇಕು. ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ಭರವಸೆ ಈಡೇರಿದೆಯೇ ಎಂದು ತಿಳಿದುಕೊಳ್ಳಲು ಅಲ್ಲಿಗೆ ಹೋಗಿ ವಸ್ತುಸ್ಥಿತಿ ಅರಿತು ಬರಲಿ ಎಂದು ಆಗ್ರಹಿಸಿದರು.
ದೇಶದೆಲ್ಲೆಡೆ ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ ನಡೆಯುತ್ತಿದೆ. ಇಲ್ಲಿಯೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ನಡುವೆ ಒಳಜಗಳ ಇದೆ. ಸಿಎಂ ಸ್ಥಾನಕ್ಕಾಗಿ ಅವರೊಳಗೆ ಸ್ಪರ್ಧೆ ಇದೆ. ಒಬ್ಬ ಮುಖಂಡರು ಸಿದ್ದರಾಮಯ್ಯರನ್ನು ಹೊಗಳಿದರೆ, ಇನ್ನೊಬ್ಬರು ಹೊಗಳದಂತೆ ತಡೆಯುತ್ತಾರೆ. ಇಂಥ ಅನೇಕ ಘಟನೆಗಳಾಗಿವೆ ಎಂದು ವಿವರಿಸಿದರು.
ಚುನಾವಣೆಗೆ ಮೊದಲೇ ಸಿಎಂ ಆಗಲು ಜಗಳ ನಡೆಯುತ್ತಿದ್ದರೆ ಚುನಾವಣೆ ನಂತರ ಎಂಥ ಸ್ಥಿತಿ ಬಂದೀತು ಎಂದು ಪ್ರಶ್ನಿಸಿದರು. ಡಿ.ಕೆ.ಶಿವಕುಮಾರ್- ಸಿದ್ದರಾಮಯ್ಯರವರು ವೈಯಕ್ತಿಕ ಹಿತಾಸಕ್ತಿ ಮುಂದಿಟ್ಟು ಪ್ರವಾಸ ಮಾಡುತ್ತಾರೆ ಎಂದ ಅವರು, ಛತ್ತೀಸಗಡದಲ್ಲೂ ಕಾಂಗ್ರೆಸ್ ಒಳಜಗಳ ಇದೆ. ರಾಜಸ್ಥಾನದ ಮುಖ್ಯಮಂತ್ರಿ ಗೆಹಲೋಟ್ ಅವರು ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್‍ರನ್ನು ದ್ರೋಹಿ ಎನ್ನುತ್ತಾರೆ; ಅಲ್ಲದೆ ಕೋವಿಡ್‍ಗೆ ಹೋಲಿಸುತ್ತಾರೆ ಎಂದು ತಿಳಿಸಿದರು. ಇದೇ ಮಾದರಿಯನ್ನು ಇಲ್ಲಿಯೂ ಮುಂದೆ ಅನುಸರಿಸುತ್ತಾರೆ ಎಂದು ನುಡಿದರು.
ಜನರು ಬಿಜೆಪಿಯನ್ನು ಬೆಂಬಲಿಸಿ 150 ಸೀಟ್ ಗೆಲ್ಲಲು ಮತದಾನ ಮಾಡುವ ವಿಶ್ವಾಸ ನಮಗಿದೆ. ಬೂತ್ ವಿಜಯ, ವಿಜಯ ಸಂಕಲ್ಪ ಅಭಿಯಾನದಲ್ಲಿನ ಜನರ ಬೆಂಬಲವು ಇದನ್ನೇ ವ್ಯಕ್ತಪಡಿಸುವಂತಿದೆ ಎಂದು ತಿಳಿಸಿದರು. ಸಿದ್ದರಾಮಯ್ಯರು ನಮ್ಮ ಜನಪರ, ಕಾಮನ್ ಮ್ಯಾನ್ ಮುಖ್ಯಮಂತ್ರಿಗಳ ಅವಮಾನ ಮಾಡುವುದಲ್ಲದೆ, ನಾಯಿಮರಿಗೆ ಹೋಲಿಸುತ್ತಿದ್ದಾರೆ. ಕಾಂಗ್ರೆಸ್‍ನ ಈ ಕ್ರಮವನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಸವರಾಜ ಬೊಮ್ಮಾಯಿಯವರ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಾಗಿದೆ. ಅವರ ಕೆಲಸಗಳ ಕುರಿತು ಜನಾಭಿಪ್ರಾಯ ರೂಪುಗೊಂಡಿದೆ. ನಾವು ರಾಜ್ಯದಲ್ಲಿ ಯಡಿಯೂರಪ್ಪ ಅವರ ಮಾರ್ಗದರ್ಶನ ಮತ್ತು ಬೊಮ್ಮಾಯಿಯವರ ನೇತೃತ್ವದಲ್ಲಿ 150 ಸೀಟು ಗೆಲ್ಲಲಿದ್ದೇವೆ ಎಂದು ನುಡಿದರು.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಕರ್ನಾಟಕದಲ್ಲಿ 4 ಕೋಟಿ ಜನರಿಗೆ ಪಡಿತರ ಕೊಡಲಾಗಿದೆ. ಪ್ರಧಾನಮಂತ್ರಿ ನಗರ ಗೃಹ ನಿರ್ಮಾಣ ಯೋಜನೆಯಡಿ 2.83 ಲಕ್ಷ ಮನೆ ನಿರ್ಮಾಣವಾಗಿದೆ. 32 ಲಕ್ಷ ಮನೆಗಳಿಗೆ ಎಲ್‍ಪಿಜಿ ಸಿಲಿಂಡರ್ ಸಂಪರ್ಕ ಕೊಟ್ಟಿದ್ದೇವೆ. ಕಾಂಗ್ರೆಸ್ ಏನನ್ನೂ ಮಾಡಿರಲಿಲ್ಲ ಎಂದು ಟೀಕಿಸಿದರು.
ನಲ್ ಸೆ ಜಲ್ ಯೋಜನೆಯಡಿ ಕರ್ನಾಟಕದಲ್ಲಿ 35 ಲಕ್ಷ ಮನೆಗಳಿಗೆ ನಳ್ಳಿನೀರಿನ ಸಂಪರ್ಕ ಕೊಟ್ಟಿದ್ದೇವೆ. ಮೋದಿಜಿ ಮತ್ತು ಇಲ್ಲಿನ ಬಿಜೆಪಿ ಸರಕಾರ ಈ ಎಲ್ಲ ಸಾಧನೆ ಮಾಡಿದೆ. ಕಾಂಗ್ರೆಸ್ ಕೇವಲ ಮಾತಿನಲ್ಲಷ್ಟೇ ಭರವಸೆ ಕೊಟ್ಟಿತ್ತು ಎಂದು ಆರೋಪಿಸಿದರು. ಬಿಜೆಪಿ ಸರಕಾರವು ಎಸ್‍ಸಿ, ಎಸ್‍ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿದೆ. ಕಾಂಗ್ರೆಸ್ ಏನನ್ನೂ ಮಾಡಿಲ್ಲ. ಇವೆಲ್ಲ ವಿಚಾರಗಳನ್ನು ಮನೆಮನೆಗೆ ತೆರಳಿ ತಿಳಿಸಲಾಗುತ್ತಿದೆ ಎಂದು ವಿವರಿಸಿದರು.
ಈಗ ವಿಜಯ ಸಂಕಲ್ಪ ಅಭಿಯಾನ ನಡೆಯುತ್ತಿದ್ದು, ಸರಕಾರದ ಸಾಧನೆ ಬಗ್ಗೆ ಜನರಿಗೆ ತಿಳಿಸಲಾಗುತ್ತಿದೆ. ಕರಪತ್ರ ಹಂಚುವಿಕೆ, ಮನೆ ಮನೆ ಸಂಪರ್ಕ ನಡೆಯುತ್ತಿದೆ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಜಯಶಾಲಿಯಾಗಿ ಅಧಿಕಾರ ನಡೆಸಲಿದೆ ಎಂಬ ಪ್ರತಿಕ್ರಿಯೆ ಹಳ್ಳಿಗಳಿಂದ ಬಂದಿದೆ. ದೇಶದ ಗೃಹ ಸಚಿವ ಅಮಿತ್ ಶಾ ಅವರು ನಾಳೆ ಬರಲಿದ್ದಾರೆ ಹಾಗೂ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ, ಬೂತ್ ವಿಜಯ ಅಭಿಯಾನವನ್ನು ಪೂರ್ಣಗೊಳಿಸಿದೆ. 51,872 ಬೂತ್‍ಗಳಲ್ಲಿ 15 ಲಕ್ಷ ಕಾರ್ಯಕರ್ತರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. 32 ಲಕ್ಷ ಮನೆಗಳ ಸಂಪರ್ಕ ಮಾಡಿ ಧ್ವಜ ಹಾರಿಸಿದ್ದಾರೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ಮುಖ್ಯ ವಕ್ತಾರ ಮಹೇಶ್ ಎಂ.ಜಿ., ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ್, ಮಹಾನಗರ ಜಿಲ್ಲಾ ಅಧ್ಯಕ್ಷ ಸಂಜಯ್ ಕಪಾಟ್ಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
[27/01, 5:25 PM] +91 83103 04771: 27-1-2023
ಗೆ,
ಸಂಪಾದಕರು / ವರದಿಗಾರರು.
ಪ್ರಕಟಣೆಯ ಕೃಪೆಗಾಗಿ
ಭಾರತ್ ಜೋಡೋ, ಪ್ರಜಾಧ್ವನಿ ಯಾತ್ರೆ ಸಂಪೂರ್ಣ ವಿಫಲ: ಅರುಣ್ ಸಿಂಗ್
ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಸಂಪೂರ್ಣ ವಿಫಲವಾಗಿದೆ. ನಕ್ಸಲೈಟ್‍ಗಳು, ವಿಭಜನವಾದಿಗಳು, ಗಡಿ ಸಮಸ್ಯೆಗಳಿಗೆ ಮತ್ತು ದೇಶ ವಿಭಜಿಸುವ ಶಕ್ತಿಗಳನ್ನು ಕಾಂಗ್ರೆಸ್ ಬೆಂಬಲಿಸಿತ್ತು ಎಂದು ಜನರಿಗೆ ತಿಳಿದಿತ್ತು. ಆದ್ದರಿಂದ ಈ ಯಾತ್ರೆಗೆ ಜನ ಸಮರ್ಥನೆ ಸಿಕ್ಕಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ತಿಳಿಸಿದರು.
ಗದಗದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ತುಷ್ಟೀಕರಣದ ರಾಜಕೀಯ ಮಾಡುತ್ತದೆ. ದಿಗ್ವಿಜಯ್ ಸಿಂಗ್ ಮತ್ತು ಕಂಪೆನಿಯು ಸರ್ಜಿಕಲ್ ಸ್ಟ್ರೈಕ್‍ಗೆ ಸಾಕ್ಷಿ ಕೇಳುತ್ತಾರೆ. ದೇಶದ ಏಕತೆ, ಅಖಂಡತೆ ಕುರಿತು ಕಾಂಗ್ರೆಸ್ ಎಂದೂ ಚಿಂತಿಸಿಲ್ಲ. ನೆಹರೂ ಆಡಳಿತದಲ್ಲಿದ್ದಾಗ ಕಾಶ್ಮೀರದಲ್ಲಿ ಪ್ರತ್ಯೇಕ ಧ್ವಜ, ವಿಶೇಷ ಸ್ಥಾನಮಾನಕ್ಕೆ ಒಪ್ಪಂದ ಆಗಿತ್ತು. ಮೋದಿಜಿ ಅವರು 370ನೇ ವಿಧಿಯನ್ನು ರದ್ದುಪಡಿಸಿದರು. ಬಿಜೆಪಿ ದೇಶದ ಏಕತೆ, ಅಖಂಡತೆಗಾಗಿ ಶ್ರಮಿಸುತ್ತಿದೆ ಎಂದು ವಿವರಿಸಿದರು.
ಪ್ರಜಾಧ್ವನಿ ಯಾತ್ರೆಯಲ್ಲೂ ಕುರ್ಚಿಗಳು ಖಾಲಿ ಇವೆ. ಡಿ.ಕೆ.ಶಿವಕುಮಾರ್- ಸಿದ್ದರಾಮಯ್ಯ ನಡುವೆ ಜಗಳ ಮುಂದುವರಿದಿದೆ. ಇಬ್ಬರೂ ಸಿಎಂ ಹುದ್ದೆಯÀ ಸ್ಪರ್ಧೆಯಲ್ಲಿದ್ದಾರೆ. ಇದರಿಂದ ಜನರ ವಿಶ್ವಾಸವನ್ನು ಕಾಂಗ್ರೆಸ್ ಕಳೆದುಕೊಂಡಿದೆ ಎಂದು ವಿಶ್ಲೇಷಿಸಿದರು. ಕಾಂಗ್ರೆಸ್ ಸರಕಾರವಿದ್ದಾಗ 35 ಸಾವಿರ ಕೋಟಿಯ ಹಗರಣ, ಶಿಕ್ಷಕರ ನೇಮಕಾತಿ ಹಗರಣ ನಡೆದಿತ್ತು. ಪಿಎಫ್‍ಐಗೆ ಬೆಂಬಲ ಕೊಟ್ಟಿದ್ದ ಅವರಲ್ಲಿ ಹೇಳಿಕೊಳ್ಳಲು ಏನೂ ಉಳಿದಿಲ್ಲ ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನು ಮಾಡಿದ್ದಾರೆ? ಹೇಳಲು ಅವರಲ್ಲಿ ಒಂದು ಶಬ್ದವೂ ಇಲ್ಲ ಎಂದರು. ಅವರು ಈಗ ಜನರು ಕನಸು ಕಾಣುವಂತೆ ಮಾಡುತ್ತಿದ್ದಾರೆ. ತಾವು ಅಧಿಕಾರ ಪಡೆದರೆ ಆಕಾಶದಿಂದ ನಕ್ಷತ್ರ ತಂದು ಕೊಡುವ ಭರವಸೆಯನ್ನೂ ನೀಡುತ್ತಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಪಾರ್ಟಿ ಝೂಟೇವಾದೊಂಕಿ ಸೌದಾಗರ್ ಹೋ ಗಯಿ ಹೇ ಎಂದು ಪುನರುಚ್ಚರಿಸಿದರು.
ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ನೀಡಿದ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸಿಲ್ಲ. ರೈತರ ಸಾಲ ಮನ್ನಾ, ನಿರುದ್ಯೋಗ ಭತ್ಯೆ ಕುರಿತು ಭರವಸೆ ಈಡೇರಿಲ್ಲ ಎಂದು ಟೀಕಿಸಿದ ಅವರು, ಗದಗದಲ್ಲಿ 1 ಲಕ್ಷಕ್ಕೂ ಹೆಚ್ಚು ರೈತರಿಗೆ ನಮ್ಮ ಸರಕಾರಗಳು ಒಟ್ಟು 10 ಸಾವಿರ ಮೊತ್ತವನ್ನು ಕಿಸಾನ್ ಸಮ್ಮಾನ್ ಅಡಿಯಲ್ಲಿ ಖಾತೆಗೆ ಭರ್ತಿ ಮಾಡುತ್ತಿವೆ. ಇವರು ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿದರು. ಗದಗ ಜಿಲ್ಲೆಯಲ್ಲಿ 1.65 ಲಕ್ಷ ಮನೆಗಳಿಗೆ ನಳ್ಳಿನೀರಿನ ಸಂಪರ್ಕ ಕೊಡಲಾಗಿದೆ. ನೀವೇನು ಮಾಡಿದ್ದೀರಿ? ಈ ಜಿಲ್ಲೆಯಲ್ಲಿ 3 ಲಕ್ಷ ಜನರಿಗೆ ಆಯುಷ್ಮಾನ್ ಕಾರ್ಡಿನ ಪ್ರಯೋಜನ ಸಿಕ್ಕಿದೆ ಎಂದು ವಿವರಿಸಿದರು. ವಿವಿಧ ಯೋಜನೆಗಳ ಅನುಷ್ಠಾನ ಕುರಿತು ಅವರು ಮಾಹಿತಿ ಕೊಟ್ಟರು.
ಕಾಂಗ್ರೆಸ್ ಆಡಳಿತ ಇರುವ ರಾಜಸ್ಥಾನ - ಛತ್ತೀಸಗಡದಲ್ಲಿ ರಾತ್ರಿ ಮಾತ್ರ ವಿದ್ಯುತ್ ಸರಬರಾಜು ಇರುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ 10 ವರ್ಷ ಹಿಂದಕ್ಕೆ ರಾಜ್ಯ ಹೋಗಲಿದೆ. ಇದನ್ನು ಜನರು ಅರಿತಿದ್ದಾರೆ. ಗದಗದಲ್ಲಿ ನಾಲ್ಕರಲ್ಲಿ ನಾಲ್ಕೂ ಸೀಟು ಸೇರಿ ರಾಜ್ಯದಲ್ಲಿ 150 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಭ್ರಷ್ಟರ ಪಕ್ಷ. ಒಳಸಂಚು ಅದರ ಭಾಗವಾಗಿದೆ. ಕಾಮನ್ ಮ್ಯಾನ್ ಸಿಎಂ ವಿರುದ್ಧ ವಾಗ್ದಾಳಿ ನಡೆಸುವುದು ಅವÀರ ಕುತಂತ್ರ. ಅವರ ಬಳಿ ನೈಜ ವಿಷಯವೇ ಇಲ್ಲ. ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬೊಮ್ಮಾಯಿಯವರ ಕುರಿತ ಮಾತನ್ನು ಮತ್ತು ಟೀಕೆಯನ್ನು ಜನರು ಸಹಿಸುವುದಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಲಿದೆ. ಮೋದಿಜಿ ಅವರ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಿದೆ. ಜನರು ಕರ್ನಾಟಕದ ಅಸೆಂಬ್ಲಿ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿ ಮತ್ತು ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ್, ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ್, ಶಾಸಕ ಕಳಸಪ್ಪ ಬಂಡಿ, ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
Post a Comment