ಜಾತಿ ರಾಜಕಾರಣದಲ್ಲಿ ಕಾಂಗ್ರೆಸ್ ರಾಜಕೀಯ ರೊಟ್ಟಿ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದೆ* : *ಸಿಎಂ ಬೊಮ್ಮಾಯಿ*।। CM ವಿಶೇಷ ಇಲ್ಲಿದೆ....,।।

[14/01, 3:53 PM] Cm Ps: *ಜಾತಿ ರಾಜಕಾರಣದಲ್ಲಿ ಕಾಂಗ್ರೆಸ್  ರಾಜಕೀಯ ರೊಟ್ಟಿ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದೆ* : *ಸಿಎಂ ಬೊಮ್ಮಾಯಿ*
ಬೆಂಗಳೂರು, ಜನವರಿ 14:  ಜಾತಿ ರಾಜಕಾರಣದಲ್ಲಿ ಕಾಂಗ್ರೆಸ್  ರಾಜಕೀಯ ರೊಟ್ಟಿ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಸರ್ಕಾರ ಹಾಗೂ ಪಕ್ಷದ ವಿರುದ್ಧ ಮಾತನಾಡುವವರ ಬಗ್ಗೆ ಪಕ್ಷವು ಸರಿಯಾದ ನಿರ್ಧಾರ ಕೈಗೊಳ್ಳಲಿದೆ. ನಮ್ಮ ಮೇಲೆ ದೊಡ್ಡ  ಜವಾಬ್ದಾರಿ ಇದೆ. ಎಲ್ಲಾ ಸಮುದಾಯವನ್ನು ಸಮನಾಗಿ ನೋಡಬೇಕು ಹಾಗೂ ನ್ಯಾಯ ನೀಡಬೇಕು. ಯಾವುದೇ ಸಮುದಾಯಕ್ಕೆ ಅನ್ಯಾಯ ವಾಗಬಾರದು. ನಾನು ಕಾಲಮಿತಿ ನೀಡಿಲ್ಲ. ಅವರೇ ಮಾಡಿ ಎಂದು ಹೇಳಿದ್ದು. ಅವರು ಕೊಟ್ಟ ಒಂದು ವಾರದಲ್ಲಿಯೇ ನಾವು ತೀರ್ಮಾನ ಕೈಗೊಂಡಿದ್ದೇವೆ. ಕಾಶಪ್ಪನವರ್ ಅಧ್ಯಕ್ಷರು ಹಾಗೂ ಶಾಸಕರಿದ್ದರು. ಹಾಗೂ ಅವರ ತಂದೆ ಸಚಿವರಿದ್ದಾಗ ಕಾಂಗ್ರೆಸ್ ಯಾಕೆ ಮಾಡಿಲ್ಲ. 2016 ರಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು, ಸಿದ್ದರಾಮಯ್ಯ ಮುಖ್ಯ ಮಂತ್ರಿಗಳಿದ್ದರು.  ಕಾಂತರಾಜ ಸಮಿತಿ ಇವರ ಅರ್ಜಿಯನ್ನು ತಿರಸ್ಕರಿಸಿತು. 2 ಎ ನೀಡಲಾಗುವುದಿಲ್ಲ 3 ಬಿ ನಲ್ಲಿಯೇ ಇರಬೇಕು ಎಂದು  ಆದೇಶವಾಗಿದೆ. 2016 ರಿಂದ 18 ರವಗೆ ಅವರದ್ದೇ ಸರ್ಕಾರವಿತ್ತು. ಆಗ ಪ್ರಶ್ನೆ ಕೇಳದವರು ಈಗ ಏಕೆ ಕೇಳುತ್ತಾರೆ.ಅವರಿಗೆ ಯಾವ ನೈತಿಕ ಹಕ್ಕಿದೆ.  ಕಾಂಗ್ರೆಸ್ ನವರು ಈ ಜಾತಿ ರಾಜಕಾರಣದಲ್ಲಿ ತಮ್ಮ ರಾಜಕೀಯ ರೊಟ್ಟಿ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಸ್ವಾಮಿಗಳು ಅವರ ಅಕ್ಕಪಕ್ಕದಲ್ಲಿರುವವರಿಗೆ ಅವರು ಇದ್ದಾಗ ಏನು ಮಾಡಿದರು ಎಂಬ ಪ್ರಶ್ನೆ ಕೇಳಬೇಕು.  ಅದು ಬಿಟ್ಟು ಈ ರೀತಿಯ ವಿಷಮ ವಾತಾವರಣ ಸೃಷ್ಟಿ ಸುವುದು ಸರಿಯಲ್ಲ ಎಂದರು.

*ವೈಯಕ್ತಿಕ ನಿಂದನೆ ಮಾಡುವುದು ಕರ್ನಾಟಕದ ರಾಜಕೀಯ ಸಂಸ್ಕೃತಿ ಯಲ್ಲ*

ಮೀಸಲಾತಿ ವಿಚಾರದಲ್ಲಿ ಬದ್ಧತೆಯಿಂದ ಸರ್ಕಾರ ಕೆಲಸ ಮಾಡುತ್ತಿದ್ದೇವೆ. ಸದಾಶಿವ ಆಯೋಗ ಹತ್ತು ವರ್ಷವಾದರೂ ಅನುಷ್ಠಾನಕ್ಕೆ ಬಂದಿಲ್ಲ. ಕಾಂತರಾಜ ಆಯೋಗವೂ ಬೆಳಕು ಕಂಡಿಲ್ಲ. ಹಿಂದುಳಿದ ವರ್ಗದ ಆಯೋಗ ನೀಡಿರುವ ಮಧ್ಯಂತರ ವರದಿಯನ್ನು ಒಂದು ವಾರದಲ್ಲಿ ಸಂಪುಟದಲ್ಲಿಟ್ಟು, ತಾತ್ವಿಕ ಒಪ್ಪಿಗೆ ನೀಡಿ, ಬೇಡಿಕೆ ಇಟ್ಟವರನ್ನು ಗಮನಿಸಿ, ಪ್ರವರ್ಗ 2 ರಲ್ಲಿ ಸೇರಿಸಲು ನಾವು ಘೋಷಣೆ ಮಾಡಿದ್ದೇವೆ. ಇದು ನಮ್ಮ ಬದ್ಧತೆ ಮ್ ಹೆಚ್ಚಿಸಬೇಕೆಂದು ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ.  ದತ್ತಾಂಶ ಸಂಗ್ರಹ ಮಾಡಿ  ಅಂತಿಮ ವರದಿ ನೀಡಲಾಗುವುದು ಎಂದಿದ್ದಾರೆ.  ಆದಷ್ಟು ಬೇಗ ನೀಡಲು ತಿಳಿಸಲಾಗಿದೆ. 
ವೈಯಕ್ತಿಕ ವಿಚಾರಗಳನ್ನು ಎಲ್ಲರೊಂದಿಗೆ  ತಿಳಿಸಿದ್ದಾರೆ. ರಾಜಕಾರಣದಲ್ಲಿ ಎಲ್ಲರೂ ಜನ ಮನ್ನಣೆ ಪಡೆದೆ ಬಂದಿರುತ್ತಾರೆ. ಯಾರು ಎನಿದ್ದಾರೆ ಎಂದು ಜನರಿಗೆ ತಿಳಿದಿದೆ.  ವೈಯಕ್ತಿಕವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು  ನಾವು ಚಿಂತಿಸಬೇಕು. ಕರ್ನಾಟಕದ ರಾಜಕೀಯ ಸಂಸ್ಕೃತಿ ಇದಲ್ಲ. ವಿಷಯಾಧಾರಿತ ಭಿನ್ನಾಭಿಪ್ರಾಯ ಇರಬೇಕು. ಆದರೆ ವೈಯಕ್ತಿಕ ನಿಂದನೆ ಸರಿಯಲ್ಲ.  ಅದಕ್ಕೆ ಹೊರತಾಗಿ ಮಾತನಾಡಿದರೆ,  ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.

*ಎಸ್ಕಾಂ ಗಳನ್ನು ಸಾಲದ ಸುಳಿಗೆ ನೂಕಿದ ಕಾಂಗ್ರೆಸ್*
ಕಾಂಗ್ರೆಸ್ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಈಗಾಗಲೇ ಎಸ್ಕಾಮ್ ಗಳನ್ನು ಸಾಲದ ಶೂಲಕ್ಕೆ ನೂಕಿದ್ದಾರೆ. ಅವುಗಳಿಗೆ ನೇರವಾಗಿ 8 ಸಾವಿರ ಕೋಟಿ ರೂ. ನೀಡಿದ್ದೇವೆ.
13 ಸಾವಿರ ಕೋಟಿ ರೂ.ಗಳಿಗೆ ಗ್ಯಾರಂಟಿ ಕೊಟ್ಟು ಸಾಲ ಪಡೆಯಲಾಗಿದೆ. ಅಂದರೆ 21 ಸಾವಿರ ಕೋಟಿ ರೂ. ಎಸ್ಕಾಂ ಮತ್ತು ಇಂಧನ ಕ್ಷೇತ್ರದಲ್ಲಿ ತೊಡಗಿಸಿದ್ದರಿಂದ ಅವು ಜೀವಂತವಾಗಿವೆ. ಇದು ಕಾಂಗ್ರೆಸ್ ಕಾಣಿಕೆ. ಅವರು ಬಿಟ್ಟು ಹೋದ ಬಳುವಳಿ. ಈಗ ಮತ್ತೆ ಚುನಾವಣೆ ಯಲ್ಲಿ ಸೋಲುತ್ತೇವೆ ಎಂದು ಗೊತ್ತಾಗಿ ಹತಾಶರಾಗಿ ಈ ರೀತಿ ಘೋಷಣೆಗಳನ್ನು ಮಾಡಿದ್ದಾರೆ. ಅವರಿಗೆ ಇದ್ಯಾವುದೂ ಅನುಷ್ಠಾನ ಮಾಡಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ. ದಾರಿ ತಪ್ಪಿಸುವ, ಮೋಸ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ.  ಅವರ ಘೋಷಣೆಗೆ ಸುಮಾರು 9 ಸಾವಿರ ಕೋಟಿಗಿಂತ ಹೆಚ್ಚು ರೂ.ಗಳ ಅವಶ್ಯಕತೆ ಇದೆ. 9 ಸಾವಿರ ಕೋಟಿ ಇಲ್ಲಿ ನೀಡಿದರೆ, ಬೇರೆ ಯೋಜನೆಗಳಿಗೆ ಕಡಿತ ಮಾಡುತ್ತಾರೆ. ಸಾಮಾಜಿಕ ವಲಯದಲ್ಲಿ ಕಡಿತವಾಗುತ್ತದೆ. ಅವರು ಆರಿಸು ಬರುವುದಿಲ್ಲ. ಜನರಿಗೆ ದಾರಿ ತಪ್ಪಿಸುವ ಕೆಲಸ ವನ್ನು ಮಾಡುತ್ತಿದ್ದಾರೆ. ನಾವು ಜವಾಬ್ದಾರಿ ಯುತ ಸರ್ಕಾರ ವಾಗಿರುವುದರಿಂದ ಜವಾಬ್ದಾರಿಯಿಂದ ಮಾತಮಾಡುತ್ತೇವೆ. ನಮಗೂ ಜನರ ಕಷ್ಟ ಕಾರ್ಪಣ್ಯಗಳು ತಿಳಿದಿವೆ ಎಂದರು.
[14/01, 4:30 PM] Cm Ps: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಪಂಚಮಸಾಲಿ ಜಗದ್ಗುರು ಪೀಠ, ಹರಿಹರ ಇವರ ವತಿಯಿಂದ ಆಯೋಜಿಸಿದ್ದ ಹರಜಾತ್ರಾ 2023 ಹಾಗೂ ರೈತ ಸಮಾವೇಶವನ್ನು ಉದ್ಘಾಟಿಸಿದರು.

ಹರಿಹರ ಪಂಚಮಸಾಲಿ ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಸ್ವಾಮೀಜಿ, ಅಲಗೂರು ವೀರಶೈವ ಲಿಂಗಾಯತ ಪಂಚಮಶಾಲಿ ಪೀಠದ ಶ್ರೀ ಮಹದೇವ ಶಿವಾಚಾರ್ಯ ಸ್ವಾಮೀಜಿ, ಕನಕ ಗುರುಪೀಠ, ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶ್ರೀ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು, ಮನಗುಳಿ ಹಿರೇಮಠದ ಶ್ರೀ ಷ.ಬ್ರ. ಸಂಗನ ಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಸಚಿವರಾದ ಸಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ, ಸಂಸದ ಜಿ.ಎಂ.ಸಿದ್ದೇಶ್ವರ. ಮತ್ತಿತರರು ಉಪಸ್ಥಿತರಿದ್ದರು.
[14/01, 5:08 PM] Cm Ps: *ಗೃಹ ನಿರ್ವಹಣೆಗೆ  ಮಹಿಳೆಯರಿಗೆ ಆರ್ಥಿಕ ನೆರವು*:*ಬಜೆಟ್ ನಲ್ಲಿ ಘೋಷಣೆ* *ಸಿಎಂ ಬೊಮ್ಮಾಯಿ*
 
ಬೆಂಗಳೂರು, ಜನವರಿ 14: ಕೋವಿಡ್ ಹಾಗೂ ಪ್ರವಾಹದ ಕಾರಣದಿಂದ ದುಡಿಯುವ ವರ್ಗಕ್ಕೆ ಸಹಾಯ ಹಾಗೂ ಹೆಣ್ಣುಮಕ್ಕಳಿಗೆ ಸಹಾಯ ಮಾಡುವ ಯೋಜನೆಗಳನ್ನು ಸರ್ಕಾರ ರೂಪಿಸುತ್ತಿದ್ದು,   ಒಂದು ಕುಟುಂಬದ ಮಹಿಳೆ ಸ್ವತಂತ್ರವಾಗಿ  ಕನಿಷ್ಠ ಮನೆ  ನಿರ್ವಹಣೆಗೆ ಅಗತ್ಯವಿರುವ  ಆರ್ಥಿಕ ನೆರವು ನೀಡಲಾಗುವ ಯೋಜನೆಯ ನ್ನು ಆಯವ್ಯಯದಲ್ಲಿ  ಘೊಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 


ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಪ್ರತೀ ಕುಟುಂಬಕ್ಕೆ ಮನೆ ನಡೆಸಲು ವಿಶೇಷ ಕಾರ್ಯಕ್ರಮವನ್ನು ಹೆಣ್ಣು ಮಕ್ಕಳಿಗೆ ನೀಡಲಾಗುವುದು. ಸ್ತ್ರೀ ಸಾಮರ್ಥ್ಯದ ಜೊತೆಗೆ ಸ್ತ್ರೀ ಶಕ್ತಿ ಯೋಜನೆಯಡಿ ಮನೆ ನಡೆಸಲು, ಕೋವಿಡ್  ಉಪಚಾರ, ಆರೋಗ್ಯ, ಮುಂತಾದವುಕ್ಕೆ ಸಹಾಯವಾಗುವ ವಿಶೇಷ ಯೋಜನೆ ಇದಾಗಿದೆ. ಪ್ರತಿ ಕುಟುಂಬದ ಅಗತ್ಯವನ್ನು ನೋಡಿಕೊಂಡು 1000, 1500, 2000, ಎಷ್ಟು ವೆಚ್ಚವಾಗುತ್ತದೆ ಎನ್ನುವುದನ್ನು ಪರಿಗಣಿಸಿ  ಮನೆಯ ಜವಾಬ್ದಾರಿ ನೋಡಿಕೊಳ್ಳುವ ಮಹಿಳೆಗೆ ನೀಡಲಾಗುವುದು. ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಮೊದಲು ಚಾಲನೆಗೊಳಿಸಿ ಅದನ್ನು ಅನುಷ್ಠಾನ ಗೊಳಿಸಿ, ಪ್ರತಿ ಮನೆಗೆ ಸ್ತ್ರೀಯರ ಹೆಸರಿನಲ್ಲಿ ಸಹಾಯ ನೀಡಲಾಗುವುದು ಎಂದರು. 

*ಯುವಕರಿಗೆ, ಮಹಿಳೆಯರಿಗೆ ಶಕ್ತಿ ತುಂಬುವ ಕಾರ್ಯಕ್ರಮ*
ಜನಕಲ್ಯಾಣ ಕಾರ್ಯಕ್ರಮಕ್ಕೆ ಹೆಚ್ಚಿನ   ಒತ್ತು ನೀಡುವ ಯೋಜನೆಗಳ ಚಿಂತನೆ ಮಾಡುತ್ತಿದ್ದೇವೆ. ದುಡಿಯುವ ವರ್ಗಕ್ಕೆ ಹೆಚ್ವಿನ ಅನುಕೂಲ ಮಾಡುವ ಚಿಂತನೆ ಮಾಡಲಾಗುತ್ತಿದೆ.  ರೈತರು, ಕಾರ್ಮಿಕರು, ಮಹಿಳೆಯರು ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಜನಾಂಗದವರ ಶ್ರೇಯೋಭಿವೃದ್ಧಿಗೆ ಕಾರ್ಯಕ್ರಮ ಗಳನ್ನು ರೂಪಿಸಲಾಗುತ್ತಿದೆ. ಯುವಕರಿಗೆ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ಕ್ಕೆ ಒಂದು ಲಕ್ಷ ನೀಡಿ, ಬ್ಯಾಂಕ್ ಜೋಡಿಸಿ ಅವರನ್ನು ಸ್ವಾವಲಂಬಿ ಮಾಡಲು ಎಂಡ್ ಟು ಎಂಡ್ ಅಪ್ರೋಚ್ ವುಳ್ಳ ಕಾರ್ಯಕ್ರಮ ಇದಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಇದೇ ತಿಂಗಳು ಪ್ರಾರಂಭ ಮಾಡಲಾಗುತ್ತಿದೆ.  ಪ್ರತಿ ಗ್ರಾಮದಲ್ಲಿ 2 ಸ್ತ್ರೀ ಶಕ್ತಿ ಸಂಘಕ್ಕೆ  5 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುವುದು. ಜನವರಿ ಅಂತ್ಯ ಹಾಗೂ ಫೆಬ್ರವರಿ ಪ್ರಾರಂಭದಲ್ಲಿ  ಚಾಲನೆ ನೀಡಲಾಗುವುದು. ಯುವಕರಿಗೆ, ಮಹಿಳೆಯರಿಗೆ ಶಕ್ತಿ ತುಂಬುವ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

*ಬಜೆಟ್ ಗೆ ಪೂರ್ವಭಾವಿ ಸಿದ್ಧತೆ*
ಸಚಿವ ಸಂಪುಟದಲ್ಲಿ ವಿಧಾನಸಭೆಯ  ಜಂಟಿ ಅಧಿವೇಶನ ಕ್ಕೆ ದಿನಾಂಕ ಗೊತ್ತು ಮಾಡಲಾಗುವುದು. ಬಜೆಟ್ ಅಧಿವೇಶನವನ್ನು ಫೆ. 17 ನೇ ತಾರೀಖು ಮಾಡುವ ಸಾಧ್ಯತೆ ಇದೆ. ಅದಕ್ಕೆ ಪೂರ್ವಭಾವಿಯಾಗಿ ಎಲ್ಲಾ ಸಿದ್ಧತೆಗಳನ್ನು ಪ್ರಾರಂಭ ಮಾಡಿದ್ದೇವೆ.   ಈಗಾಗಲೇ ಡಿಸೆಂಬರ್ ವರೆಗೆ  ನಮ್ಮ  ರಾಜ್ಯದ  ಆದಾಯವು  ಮೂರುಪಟ್ಟು ಹೆಚ್ಚಾ ಗಿದೆ. ಇದನ್ನು ಇನ್ನಷ್ಟು ಹೆಚ್ಚು ಮಾಡಲು ಗುರಿಗಳನ್ನು ಹೆಚ್ಚು ಮಾಡಲು ಸೂಚನೆ ನೀಡಲಾಗಿದೆ. ಜನಪರ ಆಯವ್ಯಯ ನೀಡಲು ತೀರ್ಮಾನ ಮಾಡಲಾಗಿದೆ.
ಚುನಾವಣೆ ಇರುವುದರಿಂದ ವಿಶೇಷ ಬಜೆಟ್ ಇರಲಿದೆ. ಅಸ್ಸಾಂ ಹಾಗೂ , ಗುಜರಾತ್ ಸರ್ಕಾರ ಕೆಲವು ಘೋಷಣೆಗಳನ್ನು ಮಾಡಿವೆ. ಆದರೆ  ಘೋಷಣೆ ಬೇರೆ ಅನುಷ್ಠಾನ ಬೇರೆ ಎಂದರು. 

*ದುಡಿಯುವ ವರ್ಗಕ್ಕೆ ಹೆಚ್ಚಿನ ಸಹಾಯ*
ಪೌಷ್ಟಿಕ ಆಹಾರ ನೀಡಲು ದೊಡ್ಡ ಪ್ರಮಾಣದ ಘೋಷಣೆ ಮಾಡಲಾಗಿದೆ. ತೀವ್ರ, ಮಧ್ಯಮ ಎಂಬ ವರ್ಗೀಕರಣವಿದ್ದು, ತೀವ್ರ ಕೊರತೆಯಿರುವವರಿಗೆ ನೀಡುವ ಆಹಾರವನ್ನೇ ಮಧ್ಯಮ ಕೊರತೆ ಇರುವವರಿಗೆ ನೀಡುವುದು ಈಗಾಗಲೇ ಅನುಷ್ಠಾನಗೊಳ್ಳುತ್ತಿದೆ.  5- 6 ಜಿಲ್ಲೆಗಳಲ್ಲಿ ಐ.ಎಂ.ಆರ್ ಎಂಎಮರ್ ಕಡಿಮೆಯಿದ್ದು, ಅಡನ್ನು ಹೆಚ್ಚಿಗೆ ಮಾಡುವ ಸಲುವಾಗಿ ನಾವು ಚಿಂತನೆ ಮಾಡುತ್ತಿದ್ದೇವೆ. ಜನಸಾಮಾನ್ಯರ ಆರೋಗ್ಯ, ಶಿಕ್ಷಣ, ಉದ್ಯೋಗ ಆರ್ಥಿಕ ನೆರವು, ದುಡಿಯುವ ವರ್ಗಕ್ಕೆ ಹೆಚ್ಚಿನ ಸಹಾಯ ಯುವಕರಿಗೆ ಮತ್ತು ಸ್ತ್ರೀಯರಿಗೆ ಸಹಾಯ ಮಾಡಲಾಗುವುದು ಎಂದರು.
[14/01, 6:08 PM] Cm Ps: *ಪಂಚಮಸಾಲಿಸಮುದಾಯಕ್ಕೆ ಸಾಮಾಜಿಕ ಬದ್ಧತೆಯ ನ್ಯಾಯ*: *ಸಿಎಂ ಬೊಮ್ಮಾಯಿ*

ದಾವಣಗೆರೆ, ( ಹರಿಹರ) ಜನವರಿ 14: ಪಂಚಮಸಾಲಿ ಸಮುದಾಯಕ್ಕೆ ಸಾಮಾಜಿಕ ಬದ್ಧತೆಯ ನ್ಯಾಯವನ್ನು ಒದಗಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. 

 ಅವರು ಇಂದು ಪಂಚಮಸಾಲಿ ಜಗದ್ಗುರು ಪೀಠ, ಹರಿಹರ ಇವರ ವತಿಯಿಂದ ಆಯೋಜಿಸಿದ್ದ ಹರಜಾತ್ರಾ 2023 ಹಾಗೂ ರೈತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಸಮುದಾಯದಲ್ಲಿ ಹೆಚ್ಚಿರುವ ರೈತಾಪಿ ವರ್ಗಕ್ಕೆ ಶಕ್ತಿಯನ್ನು ತುಂಬಬೇಕು. ಶಕ್ತಿ ತುಂಬಲು ಸಾಮಾಜಿಕ ನ್ಯಾಯ ನೀಡಬೇಕು. ಅದಕ್ಕೆ ಅವರ ಪಾಲನ್ನು ಸರಿಯಾಗಿ ಕೊಡಬೇಕಾಗುತ್ತದೆ. ನಾವು ಈ ವಿಷಯದಲ್ಲಿ ಟೀಕೆಟಿಪ್ಪಣಿಗಳಿಗೆ ಗಮನ ನೀಡದೆ ಸಾಮಾಜಿಕ ಬದ್ಧತೆಯಿಂದ ನಿಮ್ಮ ಪಾಲನ್ನು ನ್ಯಾಯಸಮ್ಮತವಾಗಿ ನೀಡುತ್ತೇವೆ. ಆದರೆ ಇತರರಿಗೆ ಎಲ್ಲಿಯೂ ಅನ್ಯಾಯವಾಗದಂತೆ ಮಾಡಬೇಕು. ಶಾಶ್ವತವಾಗಿ ನಿಮಗೆ ನ್ಯಾಯ ನೀಡುವ ಕೆಲಸ ಮಾಡುತ್ತೇವೆ. ನ್ಯಾಯಾಲಯದಲ್ಲಿ ವಾದವನ್ನು ಪ್ರಬಲವಾಗಿ ಮಂಡಿಸಿ ನಮ್ಮ ತೀರ್ಮಾನವನ್ನು ನ್ಯಾಯವಾಗಿ ಸಮರ್ಪಿಸಿ ಮುಂದಿನ ಹೆಜ್ಜೆಯನ್ನು ಇಡುತ್ತೇವೆ. ಅಂತಿಮ ವರದಿ ಬಂದ ಕೂಡಲೇ ಕ್ರಮ ತೆಗೆದುಕೊಂಡು ನಿಮ್ಮ ನಿರೀಕ್ಷೆ ಗೆ ನ್ಯಾಯ ನೀಡಲಾಗುವುದು. ನಿಮ್ಮ ವಿಶ್ವಾಸಕ್ಕೆ ಕೂದಲೆಳೆಯಷ್ಟೂ  ಧಕ್ಕೆ ಬರದಂತೆ ನೋಡಿಕೊಳ್ಳಲಾಗುವುದು ಎಂದರು.

*ಟೀಕೆಟಿಪ್ಪಣಿಗೆ ಗಮನ ನೀಡೋಲ್ಲ*
 ಕೆಲವರು ಅವಸರದಲ್ಲಿ ನನ್ನ ಬಗ್ಗೆ ಮಾತನಾಡುತ್ತಾರೆ. ಸ್ವಲ್ಪ ದಿನಗಳಲ್ಲಿ ಯಾರು ಸರಿ ಯಾರು ತಪ್ಪು ಮಾಡಿದ್ದಾರೆ ಎಂದು ತಿಳಿಯುತ್ತದೆ. ವೈಯಕ್ತಿಕವಾಗಿ ಅವರು ಮಾತನಾಡಲಿ. ನಾನು ಅದನ್ನು ಮಾಡುವುದಿಲ್ಲ. ನಮ್ಮ ಮುಂದೆ  ಕೇವಲ ಸಮಾಜವಿರುವುದು. ಅವರಿಗೆ ನ್ಯಾಯ ನೀಡಬೇಕು. ದುಡಿಯುವವರಿಗೆ ನ್ಯಾಯ ನೀಡಲು ನಾವಿದ್ದೇವೆ. ನಿಮ್ಮ ಇಚ್ಛೆಯನ್ನು ಈಡೇರಿಸಲಾಗುವುದು. 
ಮಠದ ಏಳಿಗೆಗೆ ಶ್ರಮಿಸಿರುವ ಗುರುಪೀಠ ಸರ್ಕಾರ ಮಾಡುವ ಕೆಲಸವನ್ನು ಮಠಗಳು ಮಾಡಿವೆ. ಅದಕ್ಕಾಗಿಯೇ ನಾವು ಸಹಾಯ ಮಾಡಿದ್ದೇವೆ.  ಎಲ್ಲಾ ಮಠಗಳನ್ನು ಸರಿಸಮಾನವಾಗಿ ಕಂಡು ಅಭಿವೃದ್ಧಿ ಮಾಡುತ್ತಿದ್ದೇವೆ.  ಯಾರು ಕೂಡ ಅನ್ಯಥಾ ಮಾತನಾಡಬಾರದು. ನಮ್ಮ ಸಮಾಜ ಅಭಿವೃದ್ಧಿಯಾದರೆ ಸಾವಿರಾರು ಜನ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಕಿತ್ತೂರು ಪ್ರಾಧಿಕಾರವನ್ನು ಸ್ಥಾಪಿಸಿ 50 ಕೋಟಿ ರೂ.ಗಳನ್ನು ನೀಡಲಾಗಿದೆ. ಸಂಗೊಳ್ಳಿ ರಾಯಣ್ಣ , ವಾಲ್ಮೀಕಿ ಪೀಠ ಎಲ್ಲವನ್ನೂ ಸರಿ ಸಮಾನವಾಗಿ ಕಂಡಿದ್ದೇವೆ ಎಂದರು.

*ಕಾನೂನಿನ ಚೌಕಟ್ಟಿನಲ್ಲಿ ನಿರ್ಣಯ*
 ಕೆಲವರಿಗೆ ರೈತರಿಗೆ ಸಹಾಯ ಮಾಡಿದರೆ ಲಾಭವಿಲ್ಲ ಎಂಬ  ಮನೋಭಾವವಿದೆ.  ಸಾಮಾಜಿಕ ನ್ಯಾಯ ನೀಡುವುದು ನಮ್ಮ ಇಚ್ಛೆ.  ಸಂವಿಧಾನಬದ್ದ , ಕಾನೂನಿನ ಚೌಕಟ್ಟಿನಲ್ಲಿ ನಿರ್ಣಯ ಮಾಡಬೇಕು, ಶಾಶ್ವತ ನಿರ್ಣಯ ಗಳಾಗಬೇಕು. ಇದು ರಾಜಕಾರಣವಲ್ಲ. ಸಮಾಜಕ್ಕೆ ನೀಡುವ ಉತ್ತರದಾಯಿತ್ವ. ಮೂಲದ ಹೆಜ್ಜೆಯನ್ನು ಸರಿಯಾದ ದಿಕ್ಕಿನತ್ತ ಇಟ್ಟಿದ್ದೇವೆ. ಪ್ರವರ್ಗ  2 ಆಗಲು ಇಟ್ಟಿದ್ದೇವೆ.  2ನೇ ಯೋಜನೆಯನ್ನು ಇಡಲು ಸಿದ್ಧತೆಗಳನ್ನು ಮಾಡಲಾಗಿದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಧ್ಯಂತರ ವರದಿಯನ್ನು ಅನುಷ್ಠಾನ ಮಾಡಲಾಗಿದೆ. ಸದಾಶಿವ ಆಯೋಗ ನೀಡಿರುವ ವರದಿಯನ್ನು ಯಾವುದೇ ಸರ್ಕಾರ ತಿರುಗಿ ನೋಡಿಲ್ಲ. ಸಾಮಾಜಿಕ ಸಮೀಕ್ಷೆ ಮಾಡಿರುವ ಕಾಂತರಾಜ್ ವರದಿ ಬಂದು 6 ವರ್ಷವಾದರೂ ಯಾರೂ ತಿರುಗಿ ನೋಡಿಲ್ಲ. ಜೈಪ್ರಕಾಶ್ ಹೆಗಡೆಯವರ ನೇತೃತ್ವದಲ್ಲಿ ನೇಮಕವಾಗಿರುವ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ವರದಿ ಸಲ್ಲಿದ ಒಂದು ವಾರದೊಳಗೆ ಸಂಪುಟದಲ್ಲಿ ನಿರ್ಣಯ ಮಾಡಲಾಗಿದೆ. ಇದು ನಮ್ಮ ಬದ್ಧತೆ. ಇನ್ನೊಬ್ಬರಿಗೆ ಅನ್ಯಾಯವಾಗದೆ  ಶಾಶ್ವತವಾಗಿ ನ್ಯಾಯ ಸಿಗುವ ರೀತಿಯಲ್ಲಿ ದಿಟ್ಟ ನಿರ್ಧಾರ ಕೈಗೊಂಡಿದೆ. ಗಡುವು ನೀಡಿದರೆ ಆಗುವುದಿಲ್ಲ. ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕಾರ ಮಾಡಿ ಸಮಾಜಕ್ಕೆ ನ್ಯಾಯ ನೀಡಲು ಸಿದ್ದ ಎಂದರು. 

*ಅಂತರ್ಗತ ಶಕ್ತಿ*
ಪ್ರತಿಯೊಂದಕ್ಕೂ ತನ್ನದೇ ಆದ ಅಂತರ್ಗತ ಶಕ್ತಿಯಿರುತ್ತದೆ. ಅದೇ ರೀತಿ ವ್ಯಕ್ತಿ ಅಥವಾ ಸಮಾಜಕ್ಕೆ ತನ್ನದೇ ಶಕ್ತಿ ಇದೆ. ಆ ಶಕ್ತಿಯನ್ನು ಗುರುತಿಸಿ, ಗೌರವಿಸಬೇಕು.ಇದು ನಮ್ಮೆಲ್ಲರ ಕರ್ತವ್ಯ.  ನ್ಯಾಯ  ಸಿಗದಿರುವವರಿಗೆ ನ್ಯಾಯ ದೊರಕಬೇಕು. ಹೆಚ್ಚುಗಾರಿಕೆ,  ನಮ್ಮನಮ್ಮಲ್ಲೇ ಬೇಧ ಭಾವ ತರುವುದರಿಂದ ನಮ್ಮ ವೈಯಕ್ತಿಕ ಪ್ರತಿಷ್ಠೆ ಹೆಚ್ಚು ಕಡಿಮೆಯಾಗಬಹುದು ಆದರೆ ಲಾಭವಾಗುವುದಿಲ್ಲ. ಸಮಾಜಕ್ಕೆ ಒಳಿತಾಗಬೇಕೆಂದರೆ ನಾವು ಒಟ್ಟಾಗಿ  ಒಗ್ಗಟ್ಟಿನಿಂದ ತಲ ತಲಾಂತರದಿಂದ ಬಂದ ರೈತಾಪಿ ವರ್ಗದ ವೃತ್ತಿ ಹಾಗೂ ಶಿಕ್ಷಣ ನೀಡಬೇಕು. ಈ ಎರಡು ಜವಾಬ್ದಾರಿ ನಮ್ಮ ಮೇಲಿದೆ.  ನ್ಯಾಯ ನೀಡುವ ಕೆಲಸ ಬಹಳ ಮುಖ್ಯ. ಈ ಕೆಲಸ ವನ್ನು ನಾವು ಮಾಡಿಯೇ ತೀರುತ್ತೇವೆ ಎಂದರು.  ರೈತಾಪಿ ವರ್ಗದ ಕುಟುಂಬದ ಸ್ಥಿತಿ ಉತ್ತಮವಾಗಿಲ್ಲ.  ರೈತ ವಿದ್ಯಾನಿಧಿ ಕಾರ್ಯಕ್ರಮ ರೂಪುಗೊಂಡಿರುವುದು ರೈತನ ಮಕ್ಕಳ ಶಿಕ್ಷಣಕ್ಕಾಗಿ. ರೈತರ ಮಕ್ಕಳಿಗೆ ಇದರ ಅಗತ್ಯ ಮನಗಂಡು ಮುಖ್ಯ ಮಂತ್ರಿಯಾದ ನಾಲ್ಕು ತಾಸಿನಲ್ಲಿ ಯೋಜನೆ ಘೋಷಣೆ ಮಾಡಲಾಗಿದೆ.  11 ಲಕ್ಷಕ್ಕಿಂತ ಹೆಚ್ಚು ರೈತರ ಮಕ್ಕಳಿಗೆ  ಈ ಯೋಜನೆ ತಲುಪುತ್ತಿದೆ. ಹೆಣ್ಣುಮಕ್ಕಳಿಗೆ  8 ನೇ ತರಗತಿಗೆ ಹಾಗೂ ಗಂಡುಮಕ್ಕಳಿಗೆ  10 ನೇ ತರಗತಿಗೆ ವಿದ್ಯಾರ್ಥಿ ವೇತನ ದೊರೆಯುತ್ತಿದೆ. ಪ್ರಧಾನಮಂತ್ರಿ ಗಳ ರೈತ ಸಮ್ಮಾನ್  ಯೋಜನೆ,ರೈತ ಶಕ್ತಿ ಯೋಜನೆ, 30 ಲಕ್ಷಕ್ಕಿಂತ ಹೆಚ್ಚು ರೈತರಿಗೆ ಸಾಲ ನೀಡಲಾಗಿದೆ.3 ಲಕ್ಷ ಹೊಸ ರೈತರಿಗೆ ಸಾಲ ನೀಡಲಾಗಿದೆ. ಕೃಷಿಗೆ ಎಲ್ಲಾ ಬೆಂಬಲ ನೀಡಿದೆ. ಕೇಂದ್ರ ಸರ್ಕಾರದ ಪರಿಹಾರದ ದುಪ್ಪಟ್ಟು ಮೊತ್ತವನ್ನು ಪ್ರಥಮ ಬಾರಿಗೆ ನೀಡಲಾಗಿದೆ. ನಮ್ಮ ಸರ್ಕಾರ ರೈತ ಪರವಾದ ನಿಲುವು ಹೊಂದಿದೆ. 10 ಹೆಚ್.ಪಿ ಉಚಿತ ವಿದ್ಯುತ್, ಹಾಲು ಉತ್ಪಾದನೆಗೆ ಪ್ರೋತ್ಸಾಹ ಧನ ವನ್ನು ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ ಎಂದರು.


ಈ ಸಂದರ್ಭದಲ್ಲಿ ಅಲಗೂರು ವೀರಶೈವ ಲಿಂಗಾಯತ ಪಂಚಮಶಾಲಿ ಪೀಠದ ಶ್ರೀ ಮಹದೇವ ಶಿವಾಚಾರ್ಯ ಸ್ವಾಮೀಜಿ, ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ವಚನಾನಂದ ಸ್ವಾಮೀಜಿ, ಕನಕ ಗುರುಪೀಠ, ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶ್ರೀ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು, ಮನಗುಳಿ ಹಿರೇಮಠದ ಶ್ರೀ ಷ.ಬ್ರ. ಸಂಗನ ಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಸಚಿವರಾದ ಸಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ, ಸಂಸದ ಜಿ.ಎಂ.ಸಿದ್ದೇಶ್ವರ. ಮತ್ತಿತರರು ಉಪಸ್ಥಿತರಿದ್ದರು.

Post a Comment

Previous Post Next Post