ಮಹಿಳೆಯರ U-19 T20 ವಿಶ್ವಕಪ್‌ನಲ್ಲಿ ಭಾರತ 122 ರನ್‌ಗಳಿಂದ ಯುಎಇಯನ್ನು ಸೋಲಿಸಿತು

ಜನವರಿ 16, 2023
8:51PM

ಮಹಿಳೆಯರ U-19 T20 ವಿಶ್ವಕಪ್‌ನಲ್ಲಿ ಭಾರತ 122 ರನ್‌ಗಳಿಂದ ಯುಎಇಯನ್ನು ಸೋಲಿಸಿತು

@BCCI ಮಹಿಳೆಯರು
ದಕ್ಷಿಣ ಆಫ್ರಿಕಾದ ಬೆನೋನಿಯ ವಿಲೋಮೂರ್ ಪಾರ್ಕ್‌ನಲ್ಲಿ ಸೋಮವಾರ ನಡೆದ U-19 T20 ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ 122 ರನ್‌ಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅನ್ನು ಸೋಲಿಸಿತು ಮತ್ತು ಗುಂಪು-ಡಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ ನೀಡಿದ 220 ರನ್‌ಗಳ ಗುರಿ ಬೆನ್ನತ್ತಿದ ಯುಎಇ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 97 ರನ್ ಗಳಿಸಲಷ್ಟೇ ಶಕ್ತವಾಯಿತು.

ಮೊದಲು ಬ್ಯಾಟ್ ಮಾಡಿದ ಭಾರತ ಮೂರು ವಿಕೆಟ್ ಕಳೆದುಕೊಂಡು 219 ರನ್ ಗಳಿಸಿತ್ತು. ಶ್ವೇತಾ ಸೆಹ್ರಾವತ್ 49 ಎಸೆತಗಳಲ್ಲಿ ಅಜೇಯ 74 ರನ್ ಗಳಿಸಿದರು. ನಾಯಕ ಶಫಾಲಿ ವರ್ಮಾ 34 ಎಸೆತಗಳಲ್ಲಿ 78 ರನ್ ಗಳಿಸಿದರು. ರಿಚಾ ಘೋಷ್ 49 ರನ್ ಕೊಡುಗೆ ನೀಡಿದರು. ಶಫಾಲಿಯನ್ನು ಪಂದ್ಯದ ಆಟಗಾರ್ತಿ ಎಂದು ಘೋಷಿಸಲಾಯಿತು.

ಭಾರತವು ಗುರುವಾರ (ಜನವರಿ 19) ಸ್ಕಾಟ್ಲೆಂಡ್ ವಿರುದ್ಧ ಮುಂದಿನ ಪಂದ್ಯವನ್ನು ಆಡಲಿದೆ.

Post a Comment

Previous Post Next Post