ಫೆಬ್ರವರಿ 02, 2023 | , | 8:32PM |
ಪ್ರಯಾಣಿಕರ ವಿಭಾಗದಲ್ಲಿ ರೈಲ್ವೆ ಆದಾಯ 73% ಹೆಚ್ಚಳ

@RailMinIndia
ರೈಲ್ವೆಯು ಪ್ರಯಾಣಿಕರ ವಿಭಾಗದ ಆದಾಯ ಗಳಿಕೆಯಲ್ಲಿ ಶೇಕಡಾ 73 ರಷ್ಟು ಏರಿಕೆ ದಾಖಲಿಸಿದೆ. ಕಳೆದ ವರ್ಷದ ಸುಮಾರು 31,000 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಏಪ್ರಿಲ್‌ನಿಂದ ಜನವರಿ 2023 ರವರೆಗಿನ ಪ್ರಯಾಣಿಕರ ವಿಭಾಗದಲ್ಲಿ ಒಟ್ಟು ಗಳಿಕೆಯು 54,733 ಕೋಟಿ ರೂಪಾಯಿಗಳಾಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 6,181 ಲಕ್ಷಕ್ಕೆ ಹೋಲಿಸಿದರೆ, ಇದೇ ಅವಧಿಯಲ್ಲಿ ಒಟ್ಟು ಅಂದಾಜು 6,590 ಲಕ್ಷ ಪ್ರಯಾಣಿಕರು ಬುಕ್ ಆಗಿದ್ದಾರೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಕಾಯ್ದಿರಿಸದ ಪ್ರಯಾಣಿಕರ ವಿಭಾಗದಿಂದ ಗಳಿಸಿದ ಆದಾಯವು ಕಳೆದ ವರ್ಷ 2,555 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ 11,788 ಕೋಟಿ ರೂಪಾಯಿಗಳಿಗಿಂತ ಹೆಚ್ಚಿದ್ದು, ಶೇಕಡಾ 361 ರಷ್ಟು ಹೆಚ್ಚಳವಾಗಿದೆ ಎಂದು ಸಚಿವಾಲಯ ತಿಳಿಸಿದೆ.
Post a Comment