cm, ವಿಶೇಷ

[27/02, 3:41 PM] Cm Ps: ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠ, ಎಡಿಜಿಪಿ(ಕಾ&ಸು) ಅಲೋಕ್ ಕುಮಾರ್, ಮಾಜಿ ಶಾಸಕ ಸಂಜಯ್  ಪಾಟೀಲ ಮತ್ತಿತರರು ಬರಮಾಡಿಕೊಂಡರು.
[27/02, 4:46 PM] Cm Ps: *ಶಿವಮೊಗ್ಗ ವಿಮಾನ ನಿಲ್ದಾಣ  ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ:*
 *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಶಿವಮೊಗ್ಗ, ಫೆಬ್ರವರಿ 02: ಇನ್ನೆರಡು ವರ್ಷಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ  ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ ಎಂದು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಶಿವಮೊಗ್ಗ ನಿಲ್ದಾಣದ ಉದ್ಗಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಪಾಲ್ಗೊಂಡು  ಮಾತನಾಡಿದರು.

ಮಲೆನಾಡಿನ  ಹೆಬ್ಬಾಗಿಲಾಗಿರುವ ಶಿವಮೊಗ್ಗದ ವಾಣಿಜ್ಯೋದ್ಯಮ, ವ್ಯಾಪಾರ, ವಹಿವಾಟು, ಕೃಷಿ, ಕೈಗಾರಿಕೆ, ಔದ್ಯೋಗೀಕರಣ ಇವೆಲ್ಲಕ್ಕೂ ಈ ವಿಮಾನ ನಿಲ್ದಾಣ ಹೆಬ್ಬಾಗಿಲಾಗಲಿದೆ.  ಇಡೀ ಭಾರತದ ಮೂಲೆ ಮೂಲೆಗೆ ಈ ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸಲಿದೆ ಎಂದರು.

*ಭಾರತದ ಪ್ರಗತಿ ಕರ್ನಾಟಕದಿಂದ ಸಾಧ್ಯ*
ನರೇಂದ್ರ ಮೋದಿಯವರು ದೇಶ ಸೇರಿದಂತೆ  ಕರ್ನಾಟಕಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.  ಭಾರತ ವಿಶ್ವಮಾನ್ಯವಾದಂತೆ ಕರ್ನಾಟಕ ದೇಶದಲ್ಲಿ ನಂಬರ್ ಒನ್ ಆಗಲಿದೆ ಎಂದರು. 2014 ರಿಂದೀಚೆಗೆ 30 ಕ್ಕಿಂತ  ಹೆಚ್ಚು ವಿಮಾನ ನಿಲ್ದಾಣಗಳು ಈ ದೇಶದಲ್ಲಿ ಉದ್ಘಾಟನೆಗೊಂಡಿವೆ. ಇನ್ನು 10-15  ವಿಮಾನ ನಿಲ್ದಾಣಗಳು ಉದ್ಘಾಟನೆಗೊಳ್ಳಲಿವೆ. ಸ್ವಾತಂತ್ರ್ಯಾ ನಂತರ  ಆಗಿರುವ ವೈದ್ಯಕೀಯ ಕಾಲೇಜುಗಳಿಗಿಂತಲೂ 2014 ರಿಂದೀಚೆಗೆ ಅತ್ಯಧಿಕ ವೈದ್ಯಕೀಯ ಕಾಲೇಜು ದೇಶದಲ್ಲಿ ಆಗಿವೆ. ಕಳೆದÀ ವರ್ಷ ರಾಜ್ಯಕ್ಕೆ  ನಾಲ್ಕು ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. ಸ್ವಾತಂತ್ರ್ಯಾ ನಂತರದಲ್ಲಿ ಆಗಿರುವ ಕುಡಿಯುವ ನೀರಿನ ಸೌಲಭ್ಯಕಿಂತ ಮೂರು ಪಟ್ಟು ಹೆಚ್ಚು ಕುಡಿಯುವ ನೀರಿನ ಸೌಲಭ್ಯವನ್ನು ಮನೆಮನೆಗೆ ಜಲ್ ಜೀವನ್ ಮಿಷನ್ ಅಡಿಯಲ್ಲಿ ನೀಡಲಾಗಿದೆ ಎಂದರು.  2014 ರ ನಂತರ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಪ್ರಧಾನಿಗಳು ದುಪ್ಪಟ್ಟು ಮನೆಗಳನ್ನು ಕಟ್ಟಿದ್ದಾರೆ. ಸ್ವಾತಂತ್ರ್ಯಾನಂತರದಲ್ಲಿ ಆಗಿರುವ ಶೌಚಾಲಯಗಳಿಗಿಂತಲೂ ಮೂರು ಪಟ್ಟು ಶೌಚಾಲಯಗಳನ್ನು ಕೇವಲ 7 ವರ್ಷಗಳಲ್ಲಿ ನೀಡಿದ್ದಾರೆ ಎಂದರು.

*ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರ*
 ಭಾರತ ದೇಶ ಆರ್ಥಿಕವಾಗಿ ಸಬಲವಾಗಿದ್ದು, ಜಿ 20 ಅಧ್ಯಕ್ಷ ಸ್ಥಾನ  ಭಾರತಕ್ಕೆ ಬಂದಿದೆ. ಅದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾರಣೀಭೂತರು.  ಈ 20 ಇಡೀ ವಿಶ್ವದ ಆರ್ಥಿಕ, ಸಾಮಾಜಿಕ ಸೇರಿದಂತೆ ಎಲ್ಲಾ ವಲಯಗಳಲ್ಲಿ ನಿರ್ಣಯ ಕೈಗೊಳ್ಳುವ ಜಿ 20 ಅಧ್ಯಕ್ಷ ಸ್ಥಾನ ಭಾರತದ ಪ್ರಧಾನಿಗಳಿಂದ ಲಭಿಸಿರುವುದು ಹೆಮ್ಮೆಯ ವಿಚಾರ.  ಕರ್ನಾಟಕ ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಆರ್ಥಿಕವಾಗಿ ಅತಿ ಹೆಚ್ಚು  ವಿದೇಶಿ ಬಂಡವಾಳ ರಾಜ್ಯಕ್ಕೆ ಬರುತ್ತದೆ.  ನಾವೀನ್ಯತೆ, ತಂತ್ರಜ್ಞಾನದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದು, ಸಮಾಜಿಕವಾಗಿಯೂ ನಂಬರ್ ಒನ್ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಶಿವಮೊಗ್ಗ ವಿಮಾನನಿಲ್ದಾಣ ಉದ್ಘಾಟನೆಗೊಂಡಿದೆ. ಬಿಜಾಪುರ ವಿಮಾನನಿಲ್ದಾಣ  ಈಗಾಗಲೇ ಸಿದ್ದವಿದ್ದು, ಹಾಸನದಲ್ಲಿ ಪ್ರಗತಿಯಲ್ಲಿದೆ.  ಕಾರವಾರದಲ್ಲಿ ಕಾಮಗಾರಿ ಪ್ರಾರಂಭವಾಗುತ್ತಿದ್ದು, ರಾಯಚೂರು, ಕೊಪ್ಪಳ ಮತ್ತು ದಾವಣಗೆರೆಯಲ್ಲಿ ಈ ವರ್ಷ ಕಾಮಗಾರಿಗಳು ಪ್ರಾರಂಭವಾಗಲಿದೆ.  ವಿಮಾನನಿಲ್ದಾಣದ ಜಾಲ  ಹಾಗೂ ಪ್ರಧಾನಿಗಳ ಆಶಯದಂತೆ ಸಾಗರಮಾಲಾ ಯೋಜನೆಯಡಿ ಏಳು ಬಂದರುಗಳ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ. ಕಳೆದ 5 ವರ್ಷಗಳಲ್ಲಿ ಆರು ಸಾವಿರ ಕಿಮೀ ರಾಷ್ಟ್ರೀಯ ಹೆದ್ದಾರಿ ಮಂಜೂರಾತಿಯಾಗಿದೆ. ಈ ಕಾರ್ಯಕ್ಕಾಗಿ 64 ಸಾವಿರ ಕೋಟಿ ಮಂಜೂರಾಗಿದ್ದು, ಈ ಪೈಕಿ 34 ಕೋಟಿ ರೂ.ಗಳು ಕರ್ನಾಟಕಕ್ಕೆ  ಪ್ರಧಾನಿಗಳು ಬಿಡುಗಡೆ ಮಾಡಿದ್ದಾರೆ ಎಂದರು.

*ಜನಪರ ಯೋಜನೆ*
ಮಾರ್ಚ್ 11 ಕ್ಕೆ ಬೆಂಗಳೂರು – ಮೈಸೂರು ಹೆದ್ದಾರಿ ಉದ್ಘಾಟನೆಗೊಳ್ಳುತ್ತಿದ್ದು, ಧಾರವಾಡದಲ್ಲಿ ಐಐಟಿ ಉದ್ಘಾಟನೆಯಾಗುತ್ತಿದೆ. ಇವೆಲ್ಲವೂ ಡಬಲ್ ಇಂಜಿನ್ ಸರ್ಕಾರದಿಂದ ಆಗುತ್ತಿರುವುದು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಮೇಲೆ ಮಾರಾಣಾಂತಿಕ ಹಲ್ಲೆಯಾದರೂ, ಪುನ: ಹುಟ್ಟಿ ಬಂದು ಹೋರಾಟ ಮಾಡಿದರು.  ಜನಪರ ಯೋಜನೆಗಳನ್ನು  ರಾಜ್ಯಕ್ಕೆ ನೀಡಿದರು ಎಂದು ತಿಳಿಸಿದರು.

--
[27/02, 5:28 PM] Cm Ps: ಬೆಳಗಾವಿ,ಫೆ.27:  ಜಲಜೀವನ ಮಿಷನ್ ಯೋಜನೆಗೆ ಶಂಕುಸ್ಥಾಪನೆ, ನವೀಕೃತ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವಿಕೆ,ಲೊಂಡ-ಬೆಳಗಾವಿ-ಘಟಪ್ರಭಾ ಮಾರ್ಗದ ಡಬ್ಲಿಂಗ್ ಕಾಮಗಾರಿ ಸೇರಿದಂತೆ 2240 ಕೋಟಿ‌ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಳಗಾವಿಯ ಹೊರವಲಯದ ಮಾಲಿನಿ ಸಿಟಿ ಮೈದಾನಲ್ಲಿ ಏರ್ಪಡಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ಸೋಮವಾರ ರಾಷ್ಟ್ರಕ್ಕೆ ಸಮರ್ಪಿಸಿದರು.

ಅಂತಾರಾಷ್ಟ್ರೀಯ ಸಿರಿ ಧಾನ್ಯ ಮೇಳದ ನೆನಪಿನಾರ್ಥ
ಸಿರಿಧಾನ್ಯಗಳನ್ನು ಮಡಿಕೆಗೆ ತುಂಬುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ‌ ಅಡಿ 13ನೇ ಕಂತಿನ 16800 ಕೋಟಿ ರೂ.ಹಣವನ್ನು ಎಂಟು ಕೋಟಿಗೂ ಅಧಿಕ ರೈತರಿಗೆ ನೇರ ನಗದು ವರ್ಗಾವಣೆ ಮುಖಾಂತರ ವರ್ಗಾಯಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ,
ನರೇಂದ್ರಸಿಂಗ್ ತೋಮರ್,ಶೋಭಾ ಕರಂದ್ಲಾಜೆ, ರಾಜ್ಯದ ಸಚಿವರಾದ ಗೋವಿಂದ ಕಾರಜೋಳ,ಬಿ.ಸಿ.ಪಾಟೀಲ್,ಶಶಿಕಲಾ ಜೊಲ್ಲೆ, ಸಂಸದರಾದ ಮಂಗಳಾ ಸುರೇಶ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ,ಈರಣ್ಣ ಕಡಾಡಿ,ಶಾಸಕರಾದ ಮಹೇಶ ಕುಮಠಳ್ಳಿ,ಪಿ.ರಾಜೀವ,ದುರ್ಯೋಧನ ಐಹೊಳೆ,ಬಾಲಚಂದ್ರ ಜಾರಕಿಹೊಳಿ,ರಮೇಶ ಜಾರಕಿಹೊಳಿ,ಅಭಯ್ ಪಾಟೀಲ,ಮಹದೇವಪ್ಪ ಯಾದವಾಡ,ಶ್ರೀಮಂತ್ ಪಾಟೀಲ, ಅನಿಲ ಬೆನಕೆ,ಮಹಾಂತೇಶ ದೊಡ್ಡಗೌಡರ್,ಲಕ್ಷ್ಮಣ ಸವದಿ,ಹನುಮಂತ ನಿರಾಣಿ,ಡಾ.ಸಾಬಣ್ಣ ತಳವಾರ, ಸೇರಿದಂತೆ ಇನ್ನೀತರರು ಇದ್ದರು.
----
[27/02, 6:27 PM] Cm Ps: *ಜಲಜೀವನ ಮಿಷನ್ ಯೋಜನೆಯಡಿ ರಾಜ್ಯದಲ್ಲಿ 40 ಲಕ್ಷ ಮನೆಗಳಿಗೆ ನೀರು : ಸಿಎಂ ಬೊಮ್ಮಾಯಿ*

ಬೆಳಗಾವಿ, ಫೆಬ್ರವರಿ 27 : 

 ಜಲಜೀವನ ಮಿಷನ್ ಯೋಜನೆಯಡಿ ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರು ತಲುಪಿಸಲಾಗಿದೆ. ಈ ಬೃಹತ್ ಯೋಜನೆಯ ಬಗ್ಗೆ ಇದ್ದ ಸಂಶಯವನ್ನು ಸಂಕಲ್ಪವನ್ನಾಗಿಸಿ, ಅನಿಶ್ಚಿತತೆಯಿಂದ ನಿಶ್ಚಿತತೆಗೆ ಕೊಂಡೊಯ್ದು, ಆಸಾಧ್ಯವಾದುದನ್ನು ಪ್ರಧಾನಿ ಮೋದಿಯವರು ಸಾಧ್ಯವಾಗಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಳಗಾವಿಯಲ್ಲಿ 2240 ಕೋಟಿ‌ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಸಮರ್ಪಿಸಲು ಏರ್ಪಡಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರೈತರಿಗಾಗಿ ಕೃಷಿ ಸಮ್ಮಾನ್ ಯೋಜನೆಯ ಮೂಲಕ ರೈತರ ಖಾತೆಗೆ ನೇರವಾಗಿ ಹಣ ತಲುಪಿಸಲಾಗುತ್ತಿದ್ದು, ರೈತರು ಕೃಷಿಗೆ ಬೀಜ, ಗೊಬ್ಬರ ಖರೀದಿಗೆ ಅನುಕೂಲ ಕಲ್ಪಿಸಲಾಗಿದೆ. ರೈತರ ಪರವಾಗಿ ನಿಂತು ಯೋಜನೆಗಳನ್ನು ಪ್ರಧಾನಿ ಮೋದಿಯವರು ರೂಪಿಸಿದ್ದಾರೆ. ರಾಜ್ಯದಲ್ಲಿ ರೈತವಿದ್ಯಾನಿಧಿ, ಯಶಸ್ವಿನಿ, ಭೂಸಿರಿಯಂತಹ ರೈತಪರ ಯೋಜನೆಗಳನ್ನು  ಜಾರಿಗೊಳಿಸಲಾಗಿದೆ. ರೈತರಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡುತ್ತಿದೆ. ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆಯಲ್ಲಿ ಹೆಚ್ಚಿನ ಬೆಳೆ ವಿಮೆ ಬಿಡುಗಡೆಯಾಗಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ರೈಲ್ವೆ ನಿಲ್ದಾಣಗಳ ನಿರ್ಮಾಣ , ಕಳೆದ ಐದು ವರ್ಷದಲ್ಲಿ 6 ಸಾವಿರ ಕಿ.ಮಿ. ರಾಷ್ಟ್ರೀಯ ಹೆದ್ದಾರಿಯನ್ನು ರಾಜ್ಯಕ್ಕೆ ನೀಡಲಾಗಿದೆ. ಧಾರವಾಡ-ಬೆಳಗಾವಿ, ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಗಳು ಶೀಘ್ರದಲ್ಲಿ ಪ್ರಾರಂಭವಾಗುತ್ತದೆ.ಜಲಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ತಲುಪಿಸುವ ಸಂಕಲ್ಪವನ್ನು ಪ್ರಧಾನಿ ಮೋದಿಯವರು ಮಾಡಿದರು. ಕಳೆದ 3 ವರ್ಷಗಳಲ್ಲಿ 10 ಕೋಟಿಗೂ ಮನೆಗಳಿಗೆ ನೀರು ತಲುಪಿಸಿದ ಭಾರತದ ಭಗೀರಥ ಎನಿಸಿದ್ದಾರೆ. ಭಾರತದ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಕರ್ನಾಟಕವೂ 1 ಟ್ರಿಲಿಯನ್ ಆರ್ಥಿಕತೆಯ ಕೊಡುಗೆ ನೀಡುವ ಸಂಕಲ್ಪವನ್ನು ಸರ್ಕಾರ ಮಾಡಿದೆ ಎಂದರು.
[27/02, 6:28 PM] Cm Ps: *ಬೆಳಗಾವಿ* , ಫೆಬ್ರವರಿ 27: *ಮಾನ್ಯ* *ಮುಖ್ಯಮಂತ್ರಿ ಶ್ರೀ* *ಬಸವರಾಜ ಬೊಮ್ಮಾಯಿ* ಅವರು *ಬೆಳಗಾವಿಯ ಮಾಲಿನಿ* *ಸಿಟಿ* *ಇಲ್ಲಿ* ಆಯೋಜಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ *ಉದ್ಘಾಟನೆ ಮತ್ತು ಶಂಕಸ್ಥಾಪನೆ* ಹಾಗೂ *ಪಿ.ಎಂ.* *ಕಿಸಾನ್ ಯೋಜನೆಯಡಿ 13ನೇ* *ಕಂತಿನ ಮೊತ್ತವನ್ನು* ಫಲಾನುಭವಿಗಳಿಗೆ ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ *ಗೌರವಾನಿತ್ವ* *ಪ್ರಧಾನಮಂತ್ರಿ ಶ್ರೀ ನರೇಂದ್ರ* *ಮೋದಿ ಅವರೊಂದಿಗೆ* ಪಾಲ್ಗೊಂಡು *ಮಾತನಾಡಿದರು.*
[27/02, 6:53 PM] Cm Ps: ಬೆಳಗಾವಿ, ಫೆಬ್ರವರಿ 27: *ಗೌರವಾನಿತ್ವ ಪ್ರಧಾನಮಂತ್ರಿ ಶ್ರೀ* *ನರೇಂದ್ರ ಮೋದಿ ಅವರು* ಬೆಳಗಾವಿಯ ಮಾಲಿನಿ ಸಿಟಿ ಇಲ್ಲಿ ಆಯೋಜಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ *ಉದ್ಘಾಟನೆ ಮತ್ತು ಶಂಕಸ್ಥಾಪನೆ* ಹಾಗೂ ಪಿ ಎಂ. ಕಿಸಾನ್ ಯೋಜನೆಯಡಿ *13ನೇ* *ಕಂತಿನ ಮೊತ್ತವನ್ನು* ಫಲಾನುಭವಿಗಳಿಗೆ *ಬಿಡುಗಡೆಗೊಳಿಸಿ* *ಕಾರ್ಯಕ್ರಮವನ್ನುದ್ದೇಶಿಸಿ* ಮಾತನಾಡಿದರು.
[27/02, 10:47 PM] Cm Ps: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಸವಣೂರು ತಾಲೂಕಿನ ದೊಡ್ಡ ಹುಣಸೆ ಕಲ್ಮಠದ ಶರಣ ಸಂಸ್ಕೃತಿ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪಾಲ್ಗೊಂಡು ಮಾತನಾಡಿದರು. 
ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು ಹಾಜರಿದ್ದರು.
[28/02, 11:02 AM] Cm Ps: *7 ನೇ ವೇತನ ಆಯೋಗ:  ಮಧ್ಯಂತರ ವರದಿ ಪಡೆದು ಅನುಷ್ಠಾನ: ಸಿಎಂ ಬೊಮ್ಮಾಯಿ*.

ಹುಬ್ಬಳ್ಳಿ, ಫೆಬ್ರವರಿ 28: 7 ನೇ ವೇತನ ಆಯೋಗದ ಮಧ್ಯಂತರ ವರದಿ ಪಡೆದು ಅನುಷ್ಠಾನ ಮಾಡಲಾಗುವುದು. ಬಜೆಟ್ ನಲ್ಲಿ ಅದಕ್ಕಾಗಿ ಹಣವನ್ನೂ ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. 

 ಮಧ್ಯಂತರ ವರದಿ ಪಡೆದು ವೇತನ ಪರಿಷ್ಕರಣೆ ಮಾಡಬೇಕೆಂಬ  ಸರ್ಕಾರಿ ನೌಕರರ ಬೇಡಿಕೆಯನ್ನು ಸರ್ಕಾರ ಒಪ್ಪಿದೆ. ನಾವು ಕೂಡಲೇ 7 ನೇ ಆಯೋಗಕ್ಕೆ ಸೂಚನೆ ನೀಡಿ ಮಧ್ಯಂತರ ವರದಿ ಪಡೆದು ಅದರ ಅನುಷ್ಠಾನಕ್ಕೆ ಸಿದ್ಧರಿದ್ದೇವೆ ಎಂದು ತಿಳಿಸಿದರು. 

ಸಿ.ಎ.ಆರ್ ಸಿಬ್ಬಂದಿ ಬಲ ಪಡಿಸುವ ಬಗ್ಗೆ ಡಿ.ಜಿ ಅವರಿಗೆ ಸೂಚನೆ ನೀಡಲಾಗಿದೆ ಎಂದರು.
[28/02, 11:03 AM] Cm Ps: *ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟರೇ*: *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಹುಬ್ಬಳ್ಳಿ, ಫೆಬ್ರವರಿ 28: ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆಯೇ ಎಂದು   ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
 
ಮಾಜಿ ಮುಖ್ಯಮಂತ್ರಿಗಳ
ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಗೃಹ ಸಚಿವ  ಅಮಿತ್ ಶಾ ಅವರು  ಚುನಾವಣಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ   ಕಾಂಗ್ರೆಸ್ ಎಷ್ಟು ಹತಾಶರಾಗಿದ್ದಾರೆ ಎಂದು ಈ ಮಾತು  ತಿಳಿಸುತ್ತದೆ. ಮೋದಿಯವರ ಭೇಟಿ ಸಂದರ್ಭದಲ್ಲಿ ಅವರಿಗೆ ದೊರೆತ ಜನಬೆಂಬಲ  ಕಂಡು ಆತಂಕಗೊಂಡು ಈ ಮಾತುಗಳನ್ನಾಡುತ್ತಾರೆ.  ಒಬ್ಬ ಅನುಭವಿ ಮಾಜಿ ಮುಖ್ಯಮಂತ್ರಿಗಳು ಈ ರೀತಿ  ಮಾತನಾಡುವುದು ಎಷ್ಟು ಸರಿ ಎನ್ನುವುದನ್ನು ಜನರಿಗೆ ಬಿಡುತ್ತೇವೆ ಎಂದರು. 

*ಹೆಚ್.ಡಿ.ಕುಮಾರಸ್ವಾಮಿ ನಿವೃತ್ತ ರಾಗುವ ವಯಸ್ಸಲ್ಲ*
ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಇದು ತಮ್ಮ ಕೊನೆಯ ಚುನಾವಣೆ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಎಂದು ತಿಳಿದಿಲ್ಲ. ಅವರದ್ದು ನಿವೃತ್ತಿ ಯಾಗುವ ವಯಸ್ಸಲ್ಲ. ಬಹಳ ಸೇವೆಯನ್ನು ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಎಲ್ಲಾ ರೀತಿಯದ್ದೂ ನಡೆಯುತ್ತದೆ. ಪ್ರತಿ ಚುನಾವಣೆಗೂ ಜನರ ಪ್ರಬುದ್ಧತೆ   ಹೆಚ್ಚಾಗಿದೆ. ನಾವು ಮಾತನಾಡುವಾಗ ಅದರ ಹಿಂದಿನ ಚಿಂತನೆ , ಕಲ್ಪನೆ ಜನರಿಗೆ ತಿಳಿಯುತ್ತದೆ ಎಂದರು. 



*ಮಾರ್ಚ್ ಒಂದರಿಂದ ರಥಯಾತ್ರೆ*
ಮಾರ್ಚ್ ಒಂದರಿಂದ ನಾಲ್ಕರವರೆಗೆ ರಥಯಾತ್ರೆ ಪ್ರಾರಂಭವಾಗಳಿದ್ದು,  ಎಲ್ಲಾ ಮತ ಕ್ಷೇತ್ರಗಳಿಗೆ ಭೇಟಿ ನೀಡಿ ದಾವಣಗೆರೆಯಲ್ಲಿ  ಬೃಹತ್ ಸಮಾವೇಶವಾಗಲಿದೆ. ಈ  ರಥಯಾತ್ರೆ  ಸಂದರ್ಭದಲ್ಲಿ ಹಲವಾರು ಜನ ಭಾಗವಹಿಸಲಿದ್ದಾರೆ ಎಂದರು. 

ಪ್ರಧಾನಮಂತ್ರಿಗಳು, ಗೃಹ ಸಚಿವರು, ಬಿಜೆಪಿ ಅಧ್ಯಕ್ಷ ನಡ್ಡಾ ಅವರು ಹಾಗೂ ಧರ್ಮೇಂದ್ರ ಪ್ರಧಾನ್ ಅವರೂ  ರಾಜ್ಯಕ್ಕೆ ಬಂದು ಹೋಗಿದ್ದು, ದೊಡ್ಡ ಪ್ರಮಾಣದಲ್ಲಿ ಪ್ರಚಾರವಾಗುತ್ತದೆ ಹಾಗೂ ಎಲ್ಲಾ ಪ್ರಮುಖ ನಾಯಕರೂ ಬರುತ್ತಾರೆ ಎಂದರು

*ಚುನಾವಣಾ ಪಟ್ಟಿ*
ಚುನಾವಣೆಗೆ ಸ್ಪರ್ಧಿಸುವರ ಪಟ್ಟಿ  ಸಂಸದೀಯ ಮಂಡಳಿ ತೀರ್ಮಾನ ಮಾಡಲಿದೆ  ಎಂದರು. 

*ಗೋ ಬ್ಯಾಕ್ ಮಾಮೂಲಾಗಿದೆ*
ಬನವಾಸಿಯಲ್ಲಿ ಸಿಎಂ ಗೋ ಬ್ಯಾಕ್ ಅಭಿಯಾನ ಪ್ರಾರಂಭಿಸಿರುವ ಬಗ್ಗೆ ಉತ್ತರಿಸಿ, ಗೋ ಬ್ಯಾಕ್ ಎನ್ನುವುದು ಬಹಳ ಮಾಮೂಲಿಯಾಗಿದೆ. ಕಾರ್ಯಕ್ರಮ ಪೂರ್ಣ ಮಾಡುತ್ತೇವೆ ಎಂದರು.
[28/02, 12:21 PM] Cm Ps: ಉತ್ತರ ಕನ್ನಡ (ಸಿದ್ಧಾಪುರ) ಫೆಬ್ರವರಿ 28:  ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಜಿಲ್ಲೆ ಹಾಗೂ ಕರ್ನಾಟಕ ಸರ್ಕಾರ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನೆಹರು ಮೈದಾನದಲ್ಲಿ  ಹಮ್ಮಿಕೊಂಡಿರುವ “ಸಿದ್ಧಾಪುರ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯವನ್ನು ನೆರವೇರಿಸಿ ಹಾಗೂ ವಿವಿಧ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ,  ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳು  ಉಪಸ್ಥಿತರಿದ್ದರು.
[28/02, 2:46 PM] Cm Ps: *ಅಬಕಾರಿ ಟೆಂಡರ್ ಅವ್ಯವಹಾರ: ಕಾಂಗ್ರೆಸ್ ವಿವರ ನೀಡಲಿ: ಸಿಎಂ ಬೊಮ್ಮಾಯಿ*

ಉತ್ತರ ಕನ್ನಡ ( *ಸಿದ್ಧಾಪುರ)* ಫೆಬ್ರವರಿ 28:  ಅಬಕಾರಿ ಟೆಂಡರ್ ನಲ್ಲಿ ಹಗರಣವಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದ್ದು, ಈ ಬಗ್ಗೆ ವಿವರಗಳನ್ನು ನೀಡಲಿ. ಯಾವುದೇ ತನಿಖೆಗೆ ನಾವು ಸಿದ್ದ.  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

 ಅವರು  ಇಂದು ಸಿದ್ಧಾಪುರ ವಿವಿಧ  ಯೋಜನೆಗಳ ಅಡಿಯಲ್ಲಿ ಸೌಲಭ್ಯ ವಿತರಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ  ನೀಡಿದರು.

ಅಬಕಾರಿ ಟೆಂಡರ್ ನಲ್ಲಿ ಹಗರಣವಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿರುವ ಬಗ್ಗೆ  ವಿವರ ಪ್ರತಿಕ್ರಿಯೆ ನೀಡಿ ವಿವರಗಳನ್ನು ನೀಡಲಿ. ಯಾವುದೇ ವಿವರಗಳನ್ನು ನೀಡದೇ ಆರೋಪ ಮಾಡಿದರೆ ಪ್ರಯೋಜನವಿಲ್ಲ ಎಂದರು. 

*ಲೋಕಾಯುಕ್ತಕ್ಕೆ ದೂರು ನೀಡಲಿ*
ಶಾಸಕ ಪ್ರಿಯಾಂಕ ಖರ್ಗೆ ಆಡಿಯೋ ಬಿಡುಗಡೆ ಮಾಡಿರುವ ಬಗ್ಗೆ ಉತ್ತರಿಸಿ ಅವರ ಬಗ್ಗೆಯೇ ಸಾಕಷ್ಟು ಆರೋಪಗಳಿವೆ ಪಿ.ಎಸ್.ಐ ಪ್ರಕರಣದಲ್ಲಿ ಅವರ ಮೇಲೆ ಆರೋಪವಿದೆ. ವಿವರಗಳನ್ನು ನೀಡಲಿ. ಈಗ ಲೋಕಾಯುಕ್ತವಿದ್ದು, ದೂರು ನೀಡಿದರೆ, ತನಿಖೆಯಾಗುತ್ತದೆ ಎಂದರು. 

*ವೇತನ ಪರಿಷ್ಕರಣೆ: ಇತ್ಯರ್ಥಪಡಿಸಲಾಗುವುದು*
ಇಂದು ಸಂಜೆ ವೇತನ ಆಯೋಗ ಹಾಗೂ  ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಯನ್ನು ಇತ್ಯರ್ಥ ಮಾಡಲಾಗುವುದು ಎಂದರು. 
ಸರ್ಕಾರಿ ನೌಕರರು ನಮ್ಮವರು. ಅವರ ವೇತನ  ಪರಿಷ್ಕರಣೆಗೆ 7 ನೇ ವೇತನ ಆಯೋಗ ರಚನೆಯಾಗಿದೆ. ನೌಕರರು ಮಧ್ಯಂತರ ವರದಿಯನ್ನು ಪಡೆದು ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಬೇಡಿಕೆ ಇದೆ. ಆಯೋಗದ ಸಂಪರ್ಕದಲ್ಲಿ ರಾಜ್ಯ ಸರ್ಕಾರವಿದ್ದು, ಕೂಡಲೇ ಮಧ್ಯಂತರ ವರದಿ ನೀಡಲು ಕೋರಲಾಗಿದೆ ಎಂದರು.

ವಿಧಾನಸಭೆಯಲ್ಲಿಯೂ ಈ ಬಗ್ಗೆ ಸ್ಪಷ್ಟಪಡಿಸಲಾಗಿದೆ.  ವೇತನ ಆಯೋಗ ರಚನೆಯಾದ ನಂತರ ಅದರ ಶಿಫಾರಸ್ಸುಗಳನ್ನು ಜಾರಿ ಮಾಡಬೇಕಾಗುತ್ತದೆ ಎಂದರು.
[28/02, 5:30 PM] Cm Ps: *ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ ವಿಶ್ವವಿದ್ಯಾಲಯ ಸ್ಥಾಪನೆಗೆ ಕ್ರಮ: ಸಿಎಂ ಬೊಮ್ಮಾಯಿ*

ಉತ್ತರ ಕನ್ನಡ (ಸಿದ್ದಾಪುರ), ಫೆಬ್ರವರಿ 28 : 

ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು  ಇಂದು “ಸಿದ್ಧಾಪುರ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯವನ್ನು ನೆರವೇರಿಸಿ ಹಾಗೂ ವಿವಿಧ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಮಾತನಾಡಿದರು.

ಭಾರತ ದೇಶದಲ್ಲಿ ನಿಂತ ನೀರಾಗಿದ್ದ ಅಭಿವೃದ್ಧಿ ಕೆಲಸಗಳಿಗೆ ಇಂದು ವೇಗ ನೀಡಲಾಗಿದೆ. ದೇಶದ ಪ್ರತಿ ಮನೆ ಮನೆಗೆ ಕುಡಿಯುವ ನೀರು ತಲುಪಿಸುವ ಗುರಿ ತಲುಪಿಸಲು ಜಲಜೀವನ ಮಿಷನ್ ಯೋಜನೆಯಡಿ ದೇಶದ 10 ಕೋಟಿ ಮನೆಗಳಿಗೆ ಕುಡಿಯುವ ನೀರು ತಲುಪಿಸಲಾಗಿದೆ. ರಾಜ್ಯದಲ್ಲಿ ಕಳೆದ 3 ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರು ತಲುಪಿಸಲಾಗಿದೆ.  ಸರ್ವೋದಯದೊಂದಿಗೆ ನವೋದಯವನ್ನು ಸಾಧಿಸಿ , ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ಭಾರತ ಬದಲಾವಣೆಯ ಪರ್ವದಲ್ಲಿದೆ. ಇಡೀ ವಿಶ್ವವೇ ಆರ್ಥಿಕ ಹಿಂಜರಿಕೆಯ ಪರಿಸ್ಥಿತಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಭಾರತ ಶೇ. 6.7 ರಷ್ಟು ಅಭಿವೃದ್ಧಿಯನ್ನು ಕಂಡಿದೆ. ದೇಶದ ಜನಸಂಖ್ಯೆಯನ್ನು ಶಾಪವೆಂದು ಪರಿಗಣಿಸುವ ಕಾಲವೊಂದಿತ್ತು. ಆದರೆ ಈಗ ಜನಸಂಖ್ಯೆಯ ಶೇ.46 ರಷ್ಟು ಯುವಜನರಿದ್ದು, ಪ್ರಧಾನಿ ಮೋದಿಯವರು ಈ ಯುವಶಕ್ತಿಯೇ ದೇಶದ ಶಕ್ತಿ ಎಂದರು. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ದೇಶದ ಯುವಶಕ್ತಿ ಪ್ರಮುಖ ಪಾತ್ರವಹಿಸಲಿದೆ ಎಂದರು. ನಕಾರಾತ್ಮಕತೆಯಿಂದ ಸಕಾರಾತ್ಮಕತೆಯೆಡೆಗೆ, ಸವಾಲುಗಳನ್ನು ಅವಕಾಶಗಳಾಗಿ ಮಾಡಿಕೊಳ್ಳುವ ಕಾಲಘಟ್ದಲ್ಲಿ ನಾವಿದ್ದೇವೆ ಎಂದು ತಿಳಿಸಿದರು.

*ರೈತ ವಿದ್ಯಾನಿಧಿ :*
ರಾಜ್ಯದಲ್ಲಿ ಶಿಕ್ಷಣಕ್ಕೆ  ಒತ್ತು ನೀಡಲಾಗುತ್ತಿದೆ.  ವಿದೇಶಿ ಬಂಡವಾಳ, ಆವಿಷ್ಕಾರದಲ್ಲಿ ರಾಜ್ಯ ಮುಂದಿದೆ. ಆರೋಗ್ಯ, ಶಿಕ್ಷಣ, ಪೌಷ್ಟಿಕ ಆಹಾರ , ಬಡತನನಿರ್ಮೂಲನೆಯಲ್ಲಿ ಅಲ್ಲಲ್ಲಿ ಅಸಮಾನತೆಯನ್ನು ಕಂಡುಬರುತ್ತಿದ್ದ ಕಾರಣ, ಹಲವು ಜನಪರ ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದೆ. ರೈತರ, ರೈತ ಕೂಲಿಕಾರ್ಮಿಕರ, ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗುತ್ತಿದೆ.  ಪಿಯುಸಿ ಮತ್ತು  ಪದವಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದ್ದು, ಸುಮಾರು 8 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ.100 ಪಿಹೆಚ್ ಸಿಗಳನ್ನು  ಸಮುದಾಯ ಆರೋಗ್ಯಕೇಂದ್ರಗಳಿಗೆ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು.

*ಎಲ್ಲ ವರ್ಗದ ಜನರಿಗೆ ಸ್ವಾಭಿಮಾನದ ಬದುಕು :*
ರಾಜ್ಯದಾದ್ಯಂತ 438 ನಮ್ಮ  ಕ್ಲೀನಿಕ್ , ಉಚಿತ ಕಣ್ಣಿನ ಚಿಕಿತ್ಸೆ ಹಾಗೂ ಕನ್ನಡಕ ವಿತರಣೆ, ಶ್ರವಣ ಸಾಧನಾ ವಿತರಣೆ, ಡಯಾಲಿಸಿಸ್ ಸೈಕಲ್ ಗಳ ಹೆಚ್ಚಳ, ಕಿಮೋಥೆರಪಿ ಸೈಕಲ್ಗಳನ್ನು ಹೆಚ್ಚಿಸಲಾಗಿದೆ. ರಾಜ್ಯದಲ್ಲಿ 8000 ಶಾಲಾಕೊಠಡಿಗಳ ನಿರ್ಮಾಣ ದಾಖಲೆಯ ಕಾರ್ಯಕ್ರಮ. ಈ ವರ್ಷದ ಆಯವ್ಯಯದ ಶೇ.12 ರಷ್ಟು ಪ್ರಮಾಣವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲಾಗಿದೆ.  ಮೀನುಗಾರರಿಗೆ ವಿಶೇಷ ಯೋಜನೆಗಳು, ಎಸ್ ಸಿ ಎಸ್ ಟಿ , ಹಿಂದುಳಿದ ವರ್ಗದವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಯೋಜನೆಗಳಿಂದ ,ಜನರನ್ನು ಆರ್ಥಿಕ ಸ್ವಾವಲಂಬನೆಯನ್ನು ನೀಡಿ ಸ್ವಾಭಿಮಾನ ಬದುಕು ನಡೆಸಲು ಸರ್ಕಾರ ಸಹಕರಿಸುತ್ತಿದೆ. ಸರ್ಕಾರ ದುಡಿಯುವ ವರ್ಗಕ್ಕೆ ಬೆಂಬಲವನ್ನು  ನೀಡುತ್ತಿದೆ. ದುಡಿಮೆಯೇ ದೊಡ್ಡಪ್ಪ ಎನ್ನುವ ಕಾಲ ಬಂದಿದೆ. ಅಭಿವೃದ್ಧಿ ಆಕಾಂಕ್ಷೆ ತಾಲ್ಲೂಕುಗಳನ್ನು  ಗುರುತಿಸಲಾಗಿದೆ. ಸ್ತ್ರೀ ಸಾಮಥ್ರ್ಯ ಯೋಜನೆ,  ಯುವಕರಿಗೆ ಸ್ವಾಮಿ ವಿವೇಕಾನಂದ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಶಿಕ್ಷಣ, ಉದ್ಯೋಗ, ಸಬಲೀಕರಣವನ್ನು ತಳವರ್ಗದವರಿಗೆ ನೀಡದರೆ ಅವರೂ ಮುಖ್ಯವಾಹಿನಿಗೆ ಸೇರುತ್ತಾರೆ ಎಂದರು.

*ಆದರ್ಶ ಜನನಾಯಕ*
ವಿಶ್ವೇಶ್ವರ ಹೆಗಡೆ ಕಾಗೇರಿಯವರು ಆದರ್ಶ ಜನನಾಯಕ. ರಾಜಕೀಯ ಆಸೆ ಆಮಿಷಗಳಿಗೆ ತಲೆ ಬಾಗದೇ ದೃಢವಾಗಿದ್ದಾರೆ.  ಆನರ ಮೇಲಿನ ಅವರ ಪ್ರೀತಿ ಶಾಶ್ವತವಾದ್ದುದು. ಕಳೆದ ಮೂರೂವರೆ ವರ್ಷದಲ್ಲಿ ಶಿರಶಿ ಕುಮಟಾ ತಾಲ್ಲೂಕುಗಳು ಸಮಗ್ರವಾಗಿ ಅಭಿವೃದ್ಧಿಯಾಗುತ್ತಿವೆ. ಯಾವಾಗಲೂ ಒಂದು ವರ್ಗ ಅಭಿವೃದ್ಧಿಗೆ ವಿರೋಧವಾಗಿ ಇದ್ದೇ ಇರುತ್ತದೆ.  ಸಮಸ್ಯೆ ಬರಲಿಲ್ಲ ಅಂದರೆ ಅದು ಪ್ರಮುಖ ಯೋಜನೆಯೇ ಇಲ್ಲ ಎಂದರು.


ನವ ಕರ್ನಾಟದಿದ ನವ ಭಾರತ ನಿರ್ಮಾಣ ಮಾಡೋಣ ಎಂದರು.  ಜನಕಲ್ಯಾಣಕ್ಕೆ ಯಾವ ಸ್ಥಾನವೂ ಅಡ್ಡಿಬರುವುದಿಲ್ಲ. ರಾಜಕಾರಣದಲ್ಲಿ ಜನ ರಾಜಕಾರಣ ಮಾಡಿದವರಿಗೆ ಅಧಿಕಾರವೂ ಬರುತ್ತದೆ ಜನರ ಪ್ರೀತಿಯೂ ಇರುತ್ತದೆ.  ಆರು ಬಾರಿ ಶಿರಶಿಯಲ್ಲಿ  ಆರಿಸಿ ಬರಬೇಕಾದರೆ ಅವರು ಮಾಡಿರುವ ಕೆಲಸವೇ ಸಾಕ್ಷಿ.  ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು ಎಂದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ,  ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳು  ಉಪಸ್ಥಿತರಿದ್ದರು.
[28/02, 6:17 PM] Cm Ps: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಏತ ನೀರಾವರಿ ಯೋಜನೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಗೋವಿಂದ ಕಾರಜೋಳ, ಶಿವರಾಮ ಹೆಬ್ಬಾರ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮತ್ತಿತರರು ಹಾಜರಿದ್ದರು.
[28/02, 6:21 PM] Cm Ps: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ ಮಧುಕೇಶ್ವರ ರಥ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಗೋವಿಂದ ಕಾರಜೋಳ, ಶಿವರಾಮ ಹೆಬ್ಬಾರ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮತ್ತಿತರರು ಹಾಜರಿದ್ದರು.
[28/02, 6:26 PM] Cm Ps: ಉತ್ತರ ಕನ್ನಡ ( *ಶಿರಸಿ - ಬನವಾಸಿ)* ಫೆಬ್ರವರಿ 28: *ಮಾನ್ಯ* *ಮುಖ್ಯಮಂತ್ರಿ ಶ್ರೀ* *ಬಸವರಾಜ ಬೊಮ್ಮಾಯಿ ಅವರು* ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ *ಬನವಾಸಿ ಅಭಿವೃದ್ಧಿ ಪ್ರಾಧಿಕಾರ* ವತಿಯಿಂದ *ಬನವಾಸಿಯ ಮಯೂರವರ್ಮ* ವೇದಿಕೆಯಲ್ಲಿ ಆಯೋಜಿಸಿರುವ *ಕನ್ನಡದ ಪ್ರಥಮ* *ರಾಜಧಾನಿ* ಬನವಾಸಿಯಲ್ಲಿ “ *ಕಂದಬೋತ್ಸವ-2023”ನ್ನು* ಉದ್ಘಾಟಿಸಿ *ಮಾತನಾಡಿದರು.*
[28/02, 6:49 PM] Cm Ps: *ಗಣೇಶ್ ಹೆಗಡೆ ದೊಡ್ಮನೆ ಸಾರ್ಥಕ ಬದುಕು ಬದುಕಿದವರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಉತ್ತರ ಕನ್ನಡ(ಸಿದ್ದಾಪುರ) ಫೆಬ್ರವರಿ 28: ವಿಚಾರವಂತರಾಗಿದ್ದ ಗಣೇಶ್ ಹೆಗಡೆ ದೊಡ್ಮನೆಯವರು   ಯಾವುದೇ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಸಾರ್ಥಕತೆಯ ಬದುಕನ್ನು ಬದುಕಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು  ಶ್ರೀ ಗಣೇಶ ಹೆಗಡೆ ದೊಡ್ಮನೆಯವರ ಜನ್ಮಶತಮಾನೋತ್ಸವ 2023 -ಶತಸ್ಮೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು,
 
 ಗಣೇಶ್ ಹೆಗಡೆಯವರು ಆತ್ಮಸಾಕ್ಷಿಯಾಗಿ ನಡೆದುಕೊಂಡಿದ್ದು, ಎನ್ನುವುದಕ್ಕೆ  ಅವರು ಮಾಡಿರುವ ಕೆಲಸಗಳು  ಸಾಕ್ಷಿ.  ಶಿಕ್ಷಣ ಹಾಗೂ ಸಹಕಾರಿ ಸಂಸ್ಥೆಗಳನ್ನು ಕಟ್ಟಿದರು. ರಾಜ್ಯಮಟ್ಟದ  ಸಂಸ್ಥೆಯನ್ನು ಪ್ರತಿನಿಧಿಸಿ, ಸಹಕಾರಿ ರಂಗದಲ್ಲಿ ದೊಡ್ಡ ಸಾಧನೆಯನ್ನು ಮಾಡಿದರು.   ರಾಮಕೃಷ್ಣ ಹೆಗಡೆ ಮತ್ತು ಗಣೇಶ ಹೆಗಡೆಯವರ ಸಂಬಂಧ  ಎಲ್ಲರಿಗೂ ತಿಳಿದಿರುವ ಸಂಬಂಧ.  ಅಂದಿನ ಕಾಲದಲ್ಲಿ ಕುಟುಂಬದ ಒಬ್ಬರೇ  ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿದ್ದ ಕಾಲವದು. ತಮ್ಮ ತಂದೆಯೂ ಅವರ ಸಹೋದರನಿಂದಲೇ ಉನ್ನತ ಶಿಕ್ಷಣ ಪಡೆದಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಕೌಟುಂಬಿಕ ಸಂಬಂಧಗಳ ಮಹತ್ವವನ್ನು ಇದು ತೋರಿಸುತ್ತದೆ.  ಸಂಬಂಧಗಳ ಮೌಲ್ಯಗಳು ಇಂದು ಕಾಣದಾಗಿದೆ. ಇಂದು ಎಲ್ಲವೂ ವ್ಯವಹಾರಿಕವಾಗಿದೆ. ಒಬ್ಬ ನಾಯಕ ಹಾಗೂ ಜನರ ಮಧ್ಯೆ ಭಾವನಾತ್ಮಕ ಸಂಬಂಧವಿತ್ತು. ಇಂದು ಅಂತಹ ಸಂಬಂಧಗಳು ಮರೆಯಾಗಿರುವ ಸಂದರ್ಭದಲ್ಲಿ ಗಣೇಶ್ ಹೆಗಡೆಯವರ ಬದುಕನ್ನು ಸ್ಮರಿಸುವುದು ಅವರ ಮೌಲ್ಯಗಳನ್ನು ಸ್ಮರಿಸಿದಂತೆ. ಅವರ ಸಾಧನೆಗಳು ಅಪಾರವಾಗಿತ್ತು ಎಂದರು.

*ಗಟ್ಟಿ ನಿಲುವು*
ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಿದ್ದಾಗ ಗಣೇಶ್ ಹೆಗಡೆಯವರ ಮೇಲೆ ಆಪಾದನೆ ಬಂದಿತು. ಅಕ್ಕಿ ವ್ಯವಹಾರದಲ್ಲಿ. ಆ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಮತ್ತು ಗಣೇಶ್ ಹೆಗಡೆಯವರು ಬಹಳ ಗಟ್ಟಿ ನಿಲುವು ತೆಗೆದುಕೊಂಡು ಸಮಿತಿ ರಚಿಸಿ ತನಿಖೆಯಾಯಿತು. ಗಣೇಶ್ ಹೆಗಡೆಯವರು ನಿರಪರಾಧಿಯಾಗಿ ಹೊರಬಂದರು. ನೇರ ನುಡಿ, ವಿಚಾರಗಳನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದರು.  ಬಹಳ ಗಟ್ಟಿ ಮನುಷ್ಯರಾಗಿದ್ದ ಅವರು ಕಷ್ಟಗಳಿದ್ದರೂ ಅದನ್ನು ಮೆಟ್ಟಿ ನಿಂತವರು. ನೆನಪಿನ ಅಂಗಳದಲ್ಲಿ ಅವರ ನನಪು ಚಿರಸ್ಥಾಯಿ ಎಂದರು.

*ತತ್ವಾಧಾರಿತ ನಿರ್ಣಯ*
 ರಾಮಕೃಷ್ಣ ಹೆಗಡೆ ಅವರ ಕೊಡುಗೆ ದೇಶ ಹಾಗೂ ರಾಜ್ಯಕ್ಕೆ ಅಪಾರವಾದುದು. ಪ್ರತಿ ವಿಚಾರದಲ್ಲಿಯೂ ತತ್ವಾಧಾರಿತ ನಿರ್ಣಯಗಳನ್ನು ತೆಗೆದುಕೊಳ್ಳುವ ಜೀವಂತಿಕೆ ಅವರಲ್ಲಿತ್ತು. ರಾಷ್ಟ್ರಮಟ್ಟದ ಶ್ರೇಷ್ಠ ನಾಯಕತ್ವ ಅವರಲ್ಲಿತ್ತು. ಅವರನ್ನು ಹತ್ತಿರದಿಂದ ಬಲ್ಲವರೇ ಅದನ್ನು ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ.  ರಾಮಕೃಷ್ಣ ಹೆಗಡೆಯವರೊಂದಿಗೆ ಹತ್ತು ನಿಮಿಷಗಳನ್ನು ಕಳೆದರೂ ಅವರ  ಅಭಿಮಾನಿಯಾಗುವುದು ನಿಶ್ಚಿತ. ಅವರ ಜೊತೆಗೆ ಹತ್ತಿರದಿಂದ ಕೆಲಸ ಮಡುವ ಅವಕಾಶ ಕಲ್ಪಿಸಿದ್ದರು. ಅವರಿಂದ ಬಹಳಷ್ಟು ಕಲಿತಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.  

*ನಮ್ಮ ನಡುವೆ ಇನ್ನೂ ಜೀವಂತ*
ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವರು ಸಾಧಕ ಎಂದು  ಸ್ವಾಮಿ ವಿವೇಕಾನಂದರು ಹೇಳಿದ್ದರು. ಗಣೇಶ್ ಹೆಗಡೆ ಅವರ ಸ್ಮರಣೆ ಮಾಡುತ್ತಿರುವುದು ಅವರು ನಮ್ಮ ನಡುವೆ ಇನ್ನೂ ಜೀವಂತವಾಗಿದ್ದಾರೆ ಎನ್ನುವುದಕ್ಕೆ ಸಾಕ್ಷಿ.  ಸಾಧನೆ ಸದಾ ಜೀವಂತವಾಗಿರುತ್ತದೆ. ಅಧಿಕಾರ ಇಲ್ಲದೆ  ಜನರ ಹೃದಯ ಗೆದ್ದಿರುವುದು ಸಾಧಕನಿಗೆ ಕಿರೀಟಪ್ರಾಯ ಎಂದರು. ಗಣೇಶ್ ಹೆಗಡೆ ಹಾಗೂ ರಾಮಕೃಷ್ಣ ಹೆಗಡೆಯವರ ಮಾರ್ಗದರ್ಶನದಲ್ಲಿ ನಡೆಯೋಣ ಎಂದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,   ವಿಧಾನ ಪರಿಷತ್  ಸಭಾಪತಿ ಬಸವರಾಜ ಹೊರಟ್ಟಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಉತ್ತರ ಕನ್ನಡ ಜಿಲ್ಲೆ  ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ. ರಾಷ್ಟ್ರೀಯ ನವ ನಿರ್ಮಾಣ ವೇದಿಕೆ ಅಧ್ಯಕ್ಷರು ಹಾಗೂ ರಾಮಕೃಷ್ಣ ಹೆಗಡೆಯವರ ಪುತ್ರಿ  ಮಮತಾ ನಿಚ್ಛಾನಿ ಮೊದಲಾದವರು ಉಪಸ್ಥಿತರಿದ್ದರು. 

--
[28/02, 7:47 PM] Cm Ps: *ಬನವಾಸಿಯ ಸಮಗ್ರ ಅಭಿವೃದ್ಧಿಯ ಮೂಲಕ ಪ್ರವಾಸೋದ್ಯಮಕ್ಕೆ ಆದ್ಯತೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಉತ್ತರ ಕನ್ನಡ , ಫೆಬ್ರವರಿ 28 : 

 ಐತಿಹಾಸಿಕ ಮಹತ್ವವುಳ್ಳ ಬನವಾಸಿಯ ಸಮಗ್ರ ಅಭಿವೃದ್ಧಿಯ ಮೂಲಕ ಯಾತ್ರಾ ಹಾಗೂ ಐತಿಹಾಸಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು ಎಂದರು.

ಅವರು ಇಂದು ಕನ್ನಡದ ಪ್ರಥಮ ರಾಜಧಾನಿ ಬನವಾಸಿಯಲ್ಲಿ “ಕಂದಬೋತ್ಸವ-2023”ನ್ನು ಉದ್ಘಾಟಿಸಿ ಮಾತನಾಡಿದರು.


*ಪುರಾತನ ದೇವಾಲಯಗಳ ವಿಶೇಷ ಕಾರಿಡಾರ್ ನಿರ್ಮಾಣ :*
ಮುಂಡಗೋಡ ಮತ್ತು ಬನವಾಸಿ ಭಾಗದಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. ಕಳೆದ ಮೂರು ವರ್ಷದಲ್ಲಿ  ರಾಜ್ಯದಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಈ ಭಾಗದಲ್ಲಿ ನೀರಾವರಿಗೆ ಕೊರತೆಯಾಗದಂತೆ ಬನವಾಸಿ ಏತ ನೀರಾವರಿ ಯೋಜನೆಯ ಮೂಲಕ , 62 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಮಾಡಲಾಗಿದೆ. ಈ ಬಾರಿಯ ಬಜೆಟ್ ನಲ್ಲಿ ರಾಜ್ಯವನ್ನಾಳಿದ ಶ್ರೇಷ್ಠ ಆಡಳಿತಗಾರರ ಕದಂಬರು,ಚಾಲುಕ್ಯರು, ಹೊಯ್ಸಳರು, ರಾಷ್ಟ್ರಕೂಟರ ಸಾಮ್ರಾಜ್ಯದ ಗತವೈಭವವನ್ನು ಪರಿಚಯಿಸುವ ಯೋಜನೆಗೆ ವಿಶೇಷ ಅನುದಾನವನ್ನು ಮೀಸಲಿರಿಸಿದೆ. ಆ ಕಾಲದ ಐತಿಹಾಸಿಕ ಮಹತ್ವವುಳ್ಳ ಪುರಾತನ ದೇವಾಲಯಗಳ ವಿಶೇಷವಾದ ಕಾರಿಡಾರ್ ನ್ನು ನಿರ್ಮಾಣಕ್ಕಾಗಿ ಅನುದಾನ ಒದಗಿಸಲಾಗುವುದು. ಆದಿಕವಿ ಪಂಪ ಕವಿಯ ಹುಟ್ಟೂರು, ಅಣ್ಣಿಗೇರಿಯ ಅಭಿವೃದ್ಧಿಗಾಗಿ ಹೆಚ್ಚಿನ ಗಮನ ನೀಡಲಾಗಿದೆ ಎಂದರು.

*ಬನವಾಸಿಯಲ್ಲಿ ಕನ್ನಡ ಭಾಷೆಗೆ ಮುನ್ನುಡಿ :*
ಕದಂಬರು ಇಲ್ಲದೇ ಕರ್ನಾಟಕದ ಇತಿಹಾಸ ಪೂರ್ಣವಾಗುವುದಿಲ್ಲ. ಪರಕೀಯರ ಆಳ್ವಿಕೆಯ ವಿರುದ್ಧ ಸಿಡಿದೆದ್ದ ಮಯೂರವರ್ಮ ಕದಂಬರ ಸಾಮ್ರಾಜ್ಯವನ್ನು ಸ್ಥಾಪಿಸಿ, ಬನವಾಸಿಯನ್ನು ತನ್ನ ಸಾಮ್ರಾಜ್ಯದ ರಾಜಧಾನಿಯನ್ನಾಗಿಸಿದರು. ಬನವಾಸಿ , ಕನ್ನಡ ನಾಡಿನ ಪ್ರಥಮ ರಾಜಧಾನಿ ಎಂದು ಪ್ರಸಿದ್ಧಿ ಪಡೆದಿದೆ. ಕನ್ನಡ ಆದಿಕವಿ ಪಂಪರು, ಬನವಾಸಿಯ ನಾಡಿನಲ್ಲಿ ಸಾಹಿತ್ಯ ರಚನೆ ಮಾಡುವ ಮೂಲಕ ಕನ್ನಡ ಭಾಷೆಗೆ ಮುನ್ನುಡಿ ಬರೆದರು. ಇಲ್ಲಿನ ಅಲ್ಲಮಪ್ರಭುಗಳ ಶ್ರೀಮಠವಿದ್ದು, ಅಲ್ಲಮಪ್ರಭುಗಳ  ವಿಚಾರಧಾರೆಗಳು ಮಾರ್ಗದರ್ಶಿಯಾಗಿದೆ. ಮಧುಕೇಶ್ವರ ದೇವಸ್ಥಾನ ಕದಂಬರ ರಾಜ ವೈಭವ, ಶಿಲ್ಪಕಲೆಯನ್ನು ಬಿಂಬಿಸುವ ಐತಿಹಾಸಿಕ ಪುರಾತನ ದೇವಸ್ಥಾನವಾಗಿದೆ. ಗತವೈಭವ ಹೊಂದಿರುವ ಬನವಾಸಿ ಇಂದು ಕೃಷಿಯ ನಾಡಾಗಿದ್ದು, ಫಲವತ್ತಾದ ಭೂಮಿಯನ್ನು ಹೊಂದಿದೆ ಎಂದರು.

ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಮ್ ಹೆಬ್ಬಾರ್, ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯಕ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
[28/02, 10:14 PM] Cm Ps: . ಟಿವಿ-9 ನವ ನಕ್ಷತ್ರ ಸನ್ಮಾನ  -2022

*ನಾರಾಯಣಮೂರ್ತಿ ದಂಪತಿ ಕನ್ನಡದ ಆಸ್ತಿ* :*ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*


ಬೆಂಗಳೂರು, ಫೆಬ್ರವರಿ 28: ಇನ್ಫೋಸಿಸ್ ಸಂಸ್ಥೆಯ ಸುಧಾ ಮೂರ್ತಿ ಹಾಗೂ ನಾರಾಯಣಮೂರ್ತಿ ಇಬ್ಬರೂ ಕನ್ನಡದ ಆಸ್ತಿ ಹಾಗೂ ನಿಜವಾದ ನಕ್ಷತ್ರಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

 ಅವರು ಇಂದು ಟಿವಿ-9 ಕನ್ನಡ  ಸುದ್ದಿವಾಹಿನಿಯ 16ನೇ  ಹುಟ್ಟುಹಬ್ಬದ ಸಂಭ್ರಮಾಚರಣೆಯ ಅಂಗವಾಗಿ  ಆಯೋಜಿಸಿದ್ದ  ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ 
ಸಾಧನೆ ಮಾಡಿರುವ ಸಾಧಕರಿಗೆ ಗೌರವ ಪುರಸ್ಕಾರ ಟಿವಿ-9 ನವ ನಕ್ಷತ್ರ ಸನ್ಮಾನ  -2022” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

 ಜನಸಮೂಹದಲ್ಲಿ ಹೊಸ ವಾತಾವರಣ ಸೃಷ್ಟಿಸಿ ಐಟಿ ಬಿಟಿ ಕ್ಷೇತ್ರದಲ್ಲಿ ಮೌಲ್ಯಗಳನ್ನು ಉಳಿಸಿಕೊಂಡು ಸಂಸ್ಥೆ ಕಟ್ಟಿರುವುದು ಹೆಮ್ಮೆಯ ವಿಷಯ. ಮೌಲ್ಯ ಗಳೊಂದಿಗೆ ರಾಜಿ ಮಾಡಿಕೊಳ್ಳದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡಿರುವುದು ಬಹಳ ಮುಖ್ಯ.   ನಾರಾಯಣ ಮೂರ್ತಿಯವರನ್ನು ನಾನು ಹತ್ತಿರದಿಂದ ಬಲ್ಲೆ, ಅವರಲ್ಲಿ  ಮುಗ್ದತೆ ಈಗಲೂ ಹಾಗೆ ಇದೆ. ಆತ್ಮಸಾಕ್ಷಿ ಉಳಿಸಿಕೊಂಡು ಕೆಲಸ ಮಾಡುವುದು ಅಷ್ಟು ಸುಲಭವಲ್ಲ. ಅವರು ನಮಗೆಲ್ಲಾ ಸ್ಪೂರ್ತಿಯ ಸೆಲೆ ಎಂದರು.

ಸುಧಾಮೂರ್ತಿಯವರು ನಾನು ಒಂದೇ ಕಾಲೇಜಿನಲ್ಲಿ ಕಲಿತವರು. ಒಂದೇ ಸಂಸ್ಥೆಯಲ್ಲಿ ಕೆಲಸ ಕೂಡ  ಮಾಡಿದ್ದೇವೆ. ಅವರ ಕೊಡುಗೆಯಿಂದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 300 ಹಾಸಿಗೆಗಳ ಸಾಮರ್ಥ್ಯವನ್ನು ಹೆಚ್ವಿಸಲಾಗಿದೆ.   ಅವರು ಮುಂದಿನ ಪೀಳಿಗೆಗೆ ಪ್ರೇರಣೆಯಾಗಿದ್ದಾರೆ ಎಂದರು. 

 *ಮಠದ ಸುಧಾರಣೆ*
ಮಂತ್ರಾಲಯದ ಶ್ರೀಗಳು ಮಠದ ಸುಧಾರಣೆ ಎಂದರು ಏನು ಎಂದು ತೋರಿಸಿಕೊಟ್ಟಿದ್ದಾರೆ. ಲಕ್ಷಾಂತರ   ಭಕ್ತರು ಭೇಟಿ ನೀಡುವ  ಮಂತ್ರಾಲಯವನ್ನು  ಸ್ವಚ್ಚವಾಗಿ,  ಸುಂದರವಾಗಿ,  ಇಟ್ಟುಕೊಂಡಿದ್ದಾರೆ. ಭಕ್ತರ ಸಮೂಹವನ್ನು ಕಟ್ಟಿಕೊಂಡು ಅವರು ಮಾಡಿರುವ ಕಾರ್ಯ ಶ್ಲಾಘನೀಯ ಎಂದರು. ಅವರು ಈ ಪ್ರಶಸ್ತಿಗೆ ಅತ್ಯಂತ ಯೋಗ್ಯರು ಎಂದರು. 


ಟಿವಿ9 ಕನ್ನಡ ನವ ನಕ್ಷತ್ರ 

*ಯಶಸ್ವಿ ಕನ್ನಡ ವಾಹಿನಿ.*
ಟಿ ವಿ 9 ಈ ರಾಜ್ಯದ ಅತ್ಯಂತ ಯಶಸ್ವಿ ಕನ್ನಡ ವಾಹಿನಿ. 
ಟಿವಿ9 ಕನ್ನಡ ರಾಜ್ಯದ ಪ್ರತಿ ಮನೆಯಲ್ಲೂ ತನ್ನ  ಶಾಶ್ವತ ಸ್ಥಾನವನ್ನು ಗಳಿಸಿದೆ.  ಸುದ್ದಿಯನ್ನು ಖಾತ್ರಿಪಡಿಸಿಕೊಳ್ಳಲು ಟಿ. ವಿ.9  ನೋಡಬೇಕಾಗುತ್ತದೆ.  ನಂಬರ್ ಒನ್ ಸ್ಥಾನ ನಿರಂತರವಾಗಿ16 ವರ್ಷಗಳ ಕಾಲ ಕಾಪಾಡಿಕೊಂಡು ಬಂದಿರುವುದು ಸುಲಭದ  ಮಾತಲ್ಲ. ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಟಿ. ವಿ.9 ನಕ್ಷತ್ರ ಮುಂತಾದ ಪ್ರಶಸ್ತಿಗಳನ್ನು ನೀಡುವ ಮೂಲಕ  ಟಿವಿ9 ಸಮಾಜದಲ್ಲಿ ಒಳ್ಳೆಯವರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ಟಿವಿ9 ಸಾಮಾಜಿಕ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುತ್ತಿದೆ. ಒಳ್ಳೆಯ ಕಾರ್ಯ ಮುಂದುವರೆಸಲಿ ಎಂದು ಆಶಿಸಿದರು.

Post a Comment

Previous Post Next Post