ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ರಾಜ್ಯಪಾಲರಾದ ಥಾವರಚಂದ ಗೆಲ್ಹೋತ್ ಹಾಗೂ ಮತ್ತಿತರರು ಹಾಜರಿದ್ದರು.
[06/02, 12:49 PM] Cm Ps: ಬೆಂಗಳೂರು, ಫೆಬ್ರವರಿ 06: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ವತಿಯಿಂದ ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ “ಇಂಡಿಯನ್ ಎನರ್ಜಿ ವೀಕ್-2023”ನ್ನು ಉದ್ಘಾಟಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಇಂಧನ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ. ಸಿಂಗ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
[06/02, 3:52 PM] Cm Ps: ಇಂಡಿಯಾ ಎನರ್ಜಿ ವೀಕ್ 2023 ಉದ್ಘಾಟನೆ -
*ಕರ್ನಾಟಕದಲ್ಲಿ 15000 ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಫೆಬ್ರವರಿ 6 :
ಕರ್ನಾಟಕದಲ್ಲಿ 15,000 ಮೆಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದಿಸಲಾಗುತ್ತಿದ್ದು, ಮುಂದಿನ 5 ವರ್ಷ ನವೀಕರಿಸಬಹುದಾದ ಇಂಧನ ಉತ್ಪಾದನೆ ಕ್ಷೇತ್ರದಲ್ಲಿ ಮಹತ್ವಯುತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿ ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಉದ್ಘಾಟಿಸಿದ “ಇಂಡಿಯನ್ ಎನರ್ಜಿ ವೀಕ್-2023”ನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದ ಶೇ. 50 ರಷ್ಟು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ನವೀಕರಿಸಬಹುದಾದ ಇಂಧನವನ್ನು ಸಂಗ್ರಹಿಸಲು ಪಂಪ್ ಸ್ಟೋರೇಜ್ ಸೇರಿದಂತೆ ವಿವಿಧ ರೀತಿಯ ಸಂಗ್ರಹಣೆಯತ್ತ ರಾಜ್ಯ ಗಮನ ಹರಿಸುತ್ತಿದೆ ಎಂದರು.
*ಕರ್ನಾಟಕವನ್ನು ಇವಿ ವಾಹನ ಉತ್ಪಾದನೆಯಲ್ಲಿ ದೇಶದಲ್ಲಿಯೇ ನಂ.1 ಆಗಿಸುವ ಗುರಿ :*
ಕಳೆದ ತಿಂಗಳು ಬಂಡವಾಳ ಹೂಡಿಕೆ ಸಮಾವೇಶ ಆಯೋಜಿಸಲಾಗಿದ್ದು, ಸುಮಾರು 9 ಉದ್ದಿಮೆಗಳು ಗ್ರೀನ್ ಹೈಡ್ರೊಜನ್ ವಿದ್ಯುತ್ ಉತ್ಪಾದನೆಗೆ 3ಲಕ್ಷ ಕೋಟಿ ಬಂಡವಾಳದಲ್ಲಿ ಸುಮಾರು 2 ಲಕ್ಷ ಕೋಟಿ ನವೀಕರಿಸಬಹುದಾದ ಇಂಧನ ಉತ್ಪಾದನೆ ಕ್ಷೇತ್ರಕ್ಕೆ ಅವಕಾಶ ಕಲ್ಪಿಸಿದೆ. ಕರ್ನಾಟಕ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ.. ರಾಜ್ಯದಲ್ಲಿ ಅತ್ಯಧಿಕ ಸಂಖ್ಯೆಯ ಸಂಶೋಧನೆ ಇವಿ ವಾಹನ ಹಾಗೂ ಇವಿ ಸಾರಿಗೆ ವಾಹನಗಳ ಕ್ಷೇತ್ರದಲ್ಲಾಗಿವೆ. ಕರ್ನಾಟವನ್ನು ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಯಲ್ಲಿ ದೇಶದಲ್ಲಿಯೇ ನಂ.1 ಆಗಿಸುವ ಗುರಿಯಿದೆ. ಇದಕ್ಕೆ ಪೂರಕವಾಗಿ ಬಂಡವಾಳ ಸ್ನೇಹಿ ಇವಿ ನೀತಿಯನ್ನು ರಾಜ್ಯದಲ್ಲಿ ತರಲಾಗಿದೆ ಎಂದರು.
*ಕರ್ನಾಟಕ ಎಥನಾಲ್ ಉತ್ಪಾದನೆಯಲ್ಲಿ ದೊಡ್ಡ ಕೊಡುಗೆಯನ್ನು ನೀಡಲಿದೆ :*
ಬಯೋ ಇಂಧನವಾದ ಎಥನಾಲ್ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿ ನಿಲ್ಲುತ್ತದೆ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬು ಅರಿಯುವ ಘಟಕಗಳಿವೆ. ರಾಜ್ಯದ ಯುವ ಉದ್ಯಮಿ ಶ್ರೀ ವಿಜಯ್ ನಿರಾಣಿಅವರು ದೇಶದಲ್ಲಿಯೇ ದೊಡ್ಡ ಪ್ರಮಾಣದ ಎಥನಾಲ್ ಉತ್ಪಾದನೆಯಲ್ಲಿ ನಿರತರಾಗಿದ್ದಾರೆ. ಭಾರತದ ಎಥನಾಲ್ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ದೊಡ್ಡ ಕೊಡುಗೆಯನ್ನು ನೀಡಲಿದೆ. ಪ್ರಧಾನಿ ಮೋದಿಯವರ ಅಮೃತ ಕಾಲದಲ್ಲಿ ಇಂಧನ ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮ ಗುರಿ ಬಹಳ ಮಹತ್ವಯುತವಾದದ್ದು. ಗರಿಷ್ಠ ಇಂಧನ ಕನಿಷ್ಠ ಮಾಲಿನ್ಯ ಎಂಬ ಘೋಷವಾಕ್ಯದ ಗುರಿಯನ್ನು ಸಾಧಿಸಲಾಗುವುದು ಎಂದು ತಿಳಿಸಿದರು.
*2046 ರೊಳಗೆ ಮಾಲಿನ್ಯ ರಹಿತ ವಿದ್ಯುತ್ ಉತ್ಪಾದನೆ :*
ಇಂಧನ ಸಂಶೋಧನೆ ಹಾಗೂ ಸಾಮರ್ಥ್ಯವುಳ್ಳ ಬೆಂಗಳೂರಿನಲ್ಲಿ ಇಂಡಿಯಾ ಇಂಧನ ಸಪ್ತಾಹ -2023 ನ್ನು ಆಯೋಜಿಸಿರುವುದಕ್ಕೆ ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಇಂಧನ ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕೊರೊನಾ ನಂತರ ಜೀವನದ ವ್ಯಾಖ್ಯಾನ ಬದಲಾಗಿದ್ದು, ಹೊಸ ಗುರಿ, ಸಾಧನೆ ಹಾಗೂ ನಿಲುವುಗಳೂ ಬದಲಾವಣೆಗಳಾಗಿವೆ. ಗುಜರಾತ್ ರಾಜ್ಯದ ಯಶಸ್ವಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ, ಇಂಧನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಪ್ರಧಾನಿ ಮೋದಿಯವರು ತಂದಿದ್ದಾರೆ. ಆ ಅನುಭವದಿಂದ ದೇಶದ ಇಂಧನ ಕ್ಷೇತ್ರದಲ್ಲಿ ಮಹತ್ವಪೂರ್ಣ ಹಾಗೂ ಮಾದರಿ ಬದಲಾವಣೆಗಳಿಗೆ ಕಾರಣರಾಗಿದ್ದಾರೆ. ಇಂಧನ ಕ್ಷೇತ್ರದಲ್ಲಿ ಹೊಸ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಮಾಲಿನ್ಯ ರಹಿತ ವಿದ್ಯುತ್ ಉತ್ಪಾದನೆ ದೊಡ್ಡ ಸವಾಲು. ಪ್ರಧಾನಿ ಮೋದಿಯವರು 2046 ರೊಳಗೆ ಮಾಲಿನ್ಯ ರಹಿತ ವಿದ್ಯುತ್ ಉತ್ಪಾದನೆಯ ಗುರಿ ಹೊಂದಿದ್ದಾರೆ ಎಂದು ತಿಳಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಇಂಧನ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ. ಸಿಂಗ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
[06/02, 6:09 PM] Cm Ps: ಬೆಂಗಳೂರು, ಫೆಬ್ರವರಿ 06: *ಮಾನ್ಯ* *ಮುಖ್ಯಮಂತ್ರಿ ಶ್ರೀ* *ಬಸವರಾಜ ಬೊಮ್ಮಾಯಿ ಅವರು* ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ *ಅನಿಲ ಸಚಿವಾಲಯದ ವತಿಯಿಂದ* ಬೆಂಗಳೂರು *ಅಂತರಾಷ್ಟ್ರೀಯ ಪ್ರದರ್ಶನ* ಕೇಂದ್ರದಲ್ಲಿ ಆಯೋಜಿಸಿರುವ “ *ಇಂಡಿಯನ್ ಎನರ್ಜಿ* *ವೀಕ್-2023ರ” ಉದ್ಘಾಟನಾ* ಕಾರ್ಯಕ್ರಮದಲ್ಲಿ *ಗೌರವಾನಿತ್ವ* *ಪ್ರಧಾನಮಂತ್ರಿ ಶ್ರೀ ನರೇಂದ್ರ* *ಮೋದಿ ಜೀ ಅವರೊಂದಿಗೆ* ಪಾಲ್ಗೊಂಡು *ಮಾತನಾಡಿದರು.*
[06/02, 6:21 PM] Cm Ps: ತುಮಕೂರು ( *ಗುಬ್ಬಿ* ), ಫೆಬ್ರವರಿ 06: *ಮಾನ್ಯ ಮುಖ್ಯಮಂತ್ರಿ ಶ್ರೀ* *ಬಸವರಾಜ ಬೊಮ್ಮಾಯಿ* ಅವರು *ಗುಬ್ಬಿ ತಾಲ್ಲೂಕಿನ* *ಬಿದರೆಹಳ್ಳಿ ಕಾವಲ್* ಗ್ರಾಮದ ಹೆಚ್‍ಎಎಲ್ ಘಟಕದಲ್ಲಿ ಆಯೋಜಿಸಿರುವ *ಹೆಚ್‍ಎಎಲ್* *ಹೆಲಿಕಾಪ್ಟರ್ ತಯಾರಿಕಾ* ಕಾರ್ಖಾನೆ ಉದ್ಘಾಟನೆ, *ಬಹುಗ್ರಾಮ ಕುಡಿಯುವ ನೀರು* ಸರಬರಾಜು ಯೋಜನೆಯ ಶಂಕುಸ್ಥಾಪನೆ ಕಾಮಗಾರಿ ಹಾಗೂ *ತುಮಕೂರು ಇಂಡಸ್ಟ್ರಿಯಲ್* *ಕಾರಿಕಾರ್ ಯೋಜನೆ ಹಂತ* *-2ರ ಶಂಕುಸ್ಥಾಪನಾ* ಕಾರ್ಯಕ್ರಮದಲ್ಲಿ *ಗೌರವಾನಿತ್ವ* *ಪ್ರಧಾನಮಂತ್ರಿ ಶ್ರೀ ನರೇಂದ್ರ* *ಮೋದಿ ಜೀ ಅವರೊಂದಿಗೆ* ಪಾಲ್ಗೊಂಡು *ಮಾತನಾಡಿದರು.*
[06/02, 6:22 PM] Cm Ps: ತುಮಕೂರು (ಗುಬ್ಬಿ), ಫೆಬ್ರವರಿ 06: *ಗೌರವಾನಿತ್ವ ಪ್ರಧಾನಮಂತ್ರಿ ಶ್ರೀ* *ನರೇಂದ್ರ ಮೋದಿ* *ಜೀ* ಅವರು *ಗುಬ್ಬಿ ತಾಲ್ಲೂಕಿನ* *ಬಿದರೆಹಳ್ಳಿ ಕಾವಲ್ ಗ್ರಾಮದ* ಹೆಚ್‍ಎಎಲ್ ಘಟಕದಲ್ಲಿ ಆಯೋಜಿಸಿರುವ “ *ಹೆಚ್‍ಎಎಲ್* *ಹೆಲಿಕಾಪ್ಟರ್* ತಯಾರಿಕಾ ಕಾರ್ಖಾನೆ ಉದ್ಘಾಟನೆ”, “ *ಜಲ್‍ಜೀವನ್* *ಮಿಷನ್* ಯೋಜನೆಯ ಕಾಮಗಾರಿ” ಹಾಗೂ “ *ತುಮಕೂರು* *ಇಂಡಸ್ಟ್ರಿಯಲ್* ಕಾರಿಕಾರ್ *ಯೋಜನೆ ಹಂತ-ಎ”ರ* ಶಂಕುಸ್ಥಾಪನಾ ಕಾರ್ಯವನ್ನು ನೆರವೇರಿಸಿ *ಕಾರ್ಯಕ್ರಮವನ್ನುದ್ದೇಶಿಸಿ* ಮಾತನಾಡಿದರು.
[06/02, 6:23 PM] Cm Ps: ತುಮಕೂರು (ಗುಬ್ಬಿ), ಫೆಬ್ರವರಿ 06: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಬ್ಬಿನ ತಾಲ್ಲೂಕಿನ ಬಿದರೆಹಳ್ಳಿ ಕಾವಲ್ ಗ್ರಾಮದ ಹೆಚ್‍ಎಎಲ್ ಘಟಕದಲ್ಲಿ ಆಯೋಜಿಸಿರುವ “ಹೆಚ್‍ಎಎಲ್ ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಉದ್ಘಾಟನೆ”, “ಜಲ್‍ಜೀವನ್ ಮಿಷನ್ ಯೋಜನೆಯ ಕಾಮಗಾರಿ” ಹಾಗೂ “ತುಮಕೂರು ಇಂಡಸ್ಟ್ರಿಯಲ್ ಕಾರಿಕಾರ್ ಯೋಜನೆ ಹಂತ-ಎ”ರ ಶಂಕುಸ್ಥಾಪನೆ ನೆರವೇರಿಸಿದರು.
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಮುರುಗೇಶ್ ನಿರಾಣಿ, ಬಿ.ಸಿ.ನಾಗೇಶ್, ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ಕೇಂದ್ರ ಸಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಸಂಸದ ಜಗ್ಗೇಶ್, ಮತ್ತಿತರರು ಉಪಸ್ಥಿತರಿದ್ದರು.
[06/02, 7:27 PM] Cm Ps: ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ “ಇಂಡಿಯನ್ ಎನರ್ಜಿ ವೀಕ್-2023ರ” ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೈಕಲ್ ತುಳಿಯುವುದರ ಮೂಲಕ ವಿದ್ಯುತ್ ಉತ್ಪಾದನೆಯ ಪ್ರಾತ್ಯಕ್ಷಿಕೆಯನ್ನು ಪರಿಶೀಲಿಸಿರು.
[06/02, 8:01 PM] Cm Ps: *ತುಮಕೂರಿನಲ್ಲಿ ಔದ್ಯೋಗಿಕ ಕ್ರಾಂತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ತುಮಕೂರು, (ಗುಬ್ಬಿ) ಫೆಬ್ರವರಿ 06: ಕರ್ನಾಟಕದ ಇತಿಹಾಸದಲ್ಲಿ ತುಮಕೂರಿನಲ್ಲಿ ಔದ್ಯೋಗಿಕ ಕ್ರಾಂತಿಯಾಗಿದ್ದು, ಹೆಚ್.ಎ.ಎಲ್ ಘಟಕದಿಂದ ಸುಮಾರು ಹತ್ತು ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಗುಬ್ಬಿ ತಾಲ್ಲೂಕಿನ ಬಿದರೆಹಳ್ಳಿ ಕಾವಲ್ ಗ್ರಾಮದ ಹೆಚ್.ಎ.ಎಲ್ ಘಟಕದಲ್ಲಿ ಆಯೋಜಿಸಿರುವ ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಉದ್ಘಾಟನೆ, ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಶಂಕುಸ್ಥಾಪನೆ ಕಾಮಗಾರಿ ಹಾಗೂ ತುಮಕೂರು ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆ ಹಂತ 2 ರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯರೊಂದಿಗೆ ಪಾಲ್ಗೊಂಡು ಮಾತನಾಡಿದರು.
ಸ್ವತಂತ್ರಪೂರ್ವದ ಸಂಸ್ಥೆಯಾದ ಹೆಚ್.ಎ.ಎಲ್ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಪಿ. ಎಸ್.ಯು ಗಳ ಪೈಕಿ ಅಗ್ರಮಾನ್ಯ ಸಂಸ್ಥೆಯಾಗಿದ್ದು, ಇಡೀ ದೇಶದಲ್ಲಿಯೇ ಅತ್ಯಂತ ಶ್ರೇಷ್ಠ ಏರೋಸ್ಪೇಸ್ ಕೈಗಾರಿಕೆಯಾಗಿದೆ. ಈ ಸಂಸ್ಥೆ ತುಮಕೂರು ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಉತ್ಪಾದನೆ ಮಾಡುವ ಘಟಕವನ್ನು ತೆರೆದಿದೆ. ಮೂರು ವರ್ಷಗಳ ಹಿಂದೆ ನಮ್ಮ ಪ್ರಧಾನಿಗಳೇ ಇದಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು, ಇಂದು ಅವರೇ ಉದ್ಘಾಟನೆಯನ್ನೂ ಮಾಡುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ವೇಗಕ್ಕೆ ಶಕ್ತಿ ನೀಡಿದ್ದಾರೆ. ಅವರೇ ಅಡಿಗಲ್ಲು ಹಾಕಿ ಅವರೇ ಉದ್ಘಾಟಿಸಿರುವುದು ಅಭೂತಪೂರ್ವ ಘಟನೆ. ಆತ್ಮನಿರ್ಭರ್ ಭಾರತದಲ್ಲಿ ಮುಂದಿನ ದಿನಗಳಲ್ಲಿ ಹೆವಿಡ್ಯೂಟಿ ರಕ್ಷಣಾ ಹೆಲಿಕಾಪ್ಟರ್ ತಯಾರಿಸುವ ಸಾಮಥ್ರ್ಯ ತುಮಕೂರಿನ ಗುಬ್ಬಿ ಘಟಕಕ್ಕೆ ಇದೆ. 120 ಕ್ಕಿಂತ ಹೆಚ್ಚು ಪೂರಕ ಘಟಕಗಳಿಗೆ ತಮ್ಮ ಉತ್ಪನ್ನಗಳನ್ನು ತಯಾರಿಸಲು ಅವಕಾಶ ದೊರೆಯಲಿದೆ ಎಂದರು.
ಅಸಾಧ್ಯವಾಗಿದ್ದು, ಸಾಧ್ಯವಾಗಿದೆ
ರಕ್ಷಣಾ ವಲಯದಲ್ಲಿ ಶೇ. 90 ಷ್ಟು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಈಗ ಶೇ 60 ರಷ್ಟನ್ನು ನಾವೇ ತಯಾರಿಸಿ ಹೊರದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಯಾವುದು ಇದುವರೆಗೂ ಅಸಾಧ್ಯವಾಗಿತ್ತೋ, ಅದನ್ನು ಪ್ರಧಾನಿಗಳು ಹಾಗೂ ರಕ್ಷಣಾ ಸಂಸ್ಥೆ ಸಾಧ್ಯವಾಗಿಸಿದ್ದಾರೆ ಎಂದರು.
*2024 ರ ಅಂತ್ಯದೊಳಗೆ ಎಲ್ಲಾ ಮನೆಗಳಿಗೆ ನೀರು*
ಜಲ್ ಜೀವನ್ ಮಿಷನ್ ಅಡಿ ಚಿಕ್ಕನಾಯಕನಹಳ್ಳಿ ಹಾಗೂ ತುಮಕೂರಿನ ಮನೆ ಮನೆಗೆ ಮೂರು ಲಕ್ಷಕ್ಕಿಂತ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗಿದೆ. ಜಲ್ ಜೀವನ್ ಮಿಷನ್ ಕೂಡ ಪ್ರಧಾನ ಮಂತ್ರಿಗಳ ಕನಸಿನ ಯೋಜನೆ. ದೇಶದಲ್ಲಿ 10 ಕೋಟಿ ಗಿಂತ ಹೆಚ್ಚು ಮನೆಗಳಿಗೆ ನೀರು ಒದಗಿಸಲಾಗಿದೆ. ಕರ್ನಾಟಕದಲ್ಲಿ ಈ ಮೂರು ವರ್ಷಗಳಲ್ಲಿ 30 ಲಕ್ಷ ಮನೆಗಳಿಗೆ ಜಲ್ ಜೀವನ್ ಮಿಷನ್ ಅಡಿಯಲ್ಲಿ ನೀರು ಕೊಟ್ಟು ದಾಖಲೆ ಸೃಷ್ಟಿಸಿದ್ದೇವೆ. 2024 ರ ಅಂತ್ಯದೊಳಗೆ ಎಲ್ಲಾ ಮನೆಗಳಿಗೆ ನೀರು ಒದಗಿಸುವ ಮಹತ್ವಾಕಾಂಕ್ಷಿ ಉದ್ದೇಶವಿದೆ. ಡಬಲ್ ಇಂಜಿನ್ ಸರ್ಕಾರ ಇದ್ದುದರಿಂದ ಜಲ್ ಜೀವನ್ ಮಿಷ್ ಅಡಿಯಲ್ಲಿ ಈ ಕಾರ್ಯಸಾಧ್ಯವಾಗಿದೆ. ಕೇಂದ್ರ ಸರ್ಕಾರ ಇದಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ಸಹಕಾರ ನೀಡುತ್ತಿದೆ ಎಂದರು.
*ಸಾವಿರಾರು ಜನರಿಗೆ ಉದ್ಯೋಗ*
ಬೆಂಗಳೂರು- ಚನ್ನೈ-ಕಾರಿಡಾರ್ ನಲ್ಲಿ ಇಂಡಸ್ಟ್ರಿಯಲ್ ಟೌನ್‍ಶಿಪ್ ನಿರ್ಮಾಣವಾಗುತ್ತಿದ್ದು. ರಾಜ್ಯ ಸರ್ಕಾರ ಅದಕ್ಕೆ 800 ಎಕರೆ ಜಮೀನು ಒದಗಿಸಿದೆ. 574 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಒದಗಿಸಿದೆ. ಇದು ವಿಶೇಷವಾದ ಉತ್ಪಾದನಾ ಘಟಕವಾದ ಮಲ್ಟಿ ಮೋಡ್ ಅಪ್ರೋಚ್‍ವುಳ್ಳ ಕೈಗಾರಿಕೆಯಾಗುತ್ತಿದ್ದು, ಸಾವಿರಾರು ಜನರಿಗೆ ಉದ್ಯೋಗ ಲಭಿಸಲಿದೆ. ತುಮಕೂರು ಬೆಂಗಳೂರಿನ ನಂತರ ಔದ್ಯೋಗಿಕ, ಶೈಕ್ಷಣಿಕ, ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
*ಕರ್ತವ್ಯ ಕಾಲ*
ಅಮೃತ ಕಾಲದಲ್ಲಿ ಜಿ -20 ದೇಶಗಳ ಅಧ್ಯಕ್ಷ ಸ್ಥಾನ ಭಾರತಕ್ಕೆ ಲಭಿಸಿರುವುದು ನಮಗೆ ಅತ್ಯಂತ ಹೆಮ್ಮೆಯ ಸಂಗತಿ. ನರೇಂದ್ರ ಮೋದಿಯವರ ನಾಯಕತ್ವಕ್ಕೆ ವಿಶ್ವಮಾನ್ಯತೆ ದೊರೆಯುತ್ತಿದೆ ಎನ್ನುವುದು ಅವರಿಗೆ ದೊರೆತಿರುವ ಜಿ-20 ದೇಶಗಳ ಅಧ್ಯಕ್ಷ ಸ್ಥಾನವೇ ಸಾಕ್ಷಿ ಎಂದರು. ಅದರಡಿ ಒಂದೇ ಕುಟುಂಬ, ಒಂದೇ ಜಗತ್ತು, ಒಂದೇ ವಿಶ್ವ ಎಂಬ ಘೋಷಣೆಯಿಂದ ಇಡೀ ಜಗತ್ತಿಗೆ ಮಾರ್ಗದರ್ಶನ ಮಾಡುವ ಶಕ್ತಿ ಭಾರತ ದೇಶಕ್ಕೆ ದೊರಕಿದೆ; ಅಮೃತ ಕಾಲವನ್ನು ಕರ್ತವ್ಯ ಕಾಲವೆಂದು ಹೇಳಿರುವ ಪ್ರಧಾನಿಗಳು, ನಮ್ಮ ಕರ್ತವ್ಯವನ್ನು ನಾವು ಮಾಡಬೇಕು. ಭಾರತಕ್ಕೆ ಸ್ವಾತಂತ್ರ್ಯ ಬಂದು ನೂರು ವರ್ಷಗಳಾದ ಸಂದರ್ಭದಲ್ಲಿ ಭಾರತ ನಂಬರ್ ಇನ್ ದೇಶವಾಗಬೇಕಾದರೆ ಕರ್ತವ್ಯ ಕಾಲದಲ್ಲಿ ಕರ್ನಾಟಕ ತನ್ನ ಕರ್ತವ್ಯವನ್ನು ಮಾಡಿ ನವ ಭಾರತಕ್ಕೆ ನವ ಕರ್ನಾಟಕವನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದರು. ಡಬಲ್ ಇಂಜಿನ್ ಸರ್ಕಾರ ಅತ್ಯಂತ ವೇಗದಲ್ಲಿ ಪ್ರಗತಿ ಮಾಡುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವೆಂದು ಹೇಳಿದರು.
[06/02, 9:25 PM] Cm Ps: ಬೆಂಗಳೂರು, ಫೆಬ್ರವರಿ 06: ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಹಾಗೂ ಗೋವಾ ರಾಜ್ಯ ಎನ್ ಸಿ ಸಿ ಕೆಡೆಟ್ ಗಳಿಗೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡು ಮಾತನಾಡಿದರು
[06/02, 10:13 PM] Cm Ps: *ಈ ವರ್ಷ ಕರ್ನಾಟಕದಲ್ಲಿ ಎರಡು ಎನ್.ಸಿ.ಸಿ ಶಿಬಿರ* *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಫೆಬ್ರವರಿ 06; ಈ ವರ್ಷ ಕಲ್ಯಾಣ ಕರ್ನಾಟಕ ಹಾಗೂ ಮದ್ಯ ಕರ್ನಾಟಕ ಭಾಗದಲ್ಲಿ ಎರಡು ಎನ್.ಸಿ.ಸಿ ಶಿಬಿರ ಗಳನ್ನು ಏರ್ಪಡಿಸಲಾಗುವುದು ಹಾಗೂ ಅದಕ್ಕೆ ಅಗತ್ಯವಿರುವ ಎಲ್ಲ ಸವಲತ್ತುಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಹಾಗೂ ಗೋವಾ ರಾಜ್ಯ ಎನ್ ಸಿ ಸಿ ಕೆಡೆಟ್ ಗಳಿಗೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡು ಮಾತನಾಡಿದರು.
ಎನ್ ಸಿಸಿ ಕೆಡೆಟ್ ಗಳು ಗಣ ರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಂಡು ಕರ್ನಾಟಕ ಹಾಗೂ ಗೋವಾ ರಾಜ್ಯ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಹಾಗೂ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಳ್ಳುವುದು ಸುಲಭವಲ್ಲ. 95 ಸಾವಿರ ಕೆಡೆಟ್ ಗಳ ಪೈಕಿ 111 ಮಾತ್ರ ಆಯ್ಕೆಯಾಗಿದ್ದು, ಇದು ನಿಮ್ಮ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಎಂದರು.
*ಶಿಸ್ತು ಮುಖ್ಯ*
ಅತ್ಯಂತ ಬಲಿಷ್ಠ, ಯುವ ಪರೇಡ್ ನ್ನು ಕಟ್ಟುವ ಉದ್ದೇಶದಿಂದ ಎನ್.ಸಿ.ಸಿ 1947 ರಿಂದಲೂ ಅಸ್ತಿತ್ವಕ್ಕೆ ಬಂದಿತು. ಜೀವನದಲ್ಲಿ ಶಿಸ್ತು ಬಹಳ ಮುಖ್ಯ. ಶಿಸ್ತು ಇದ್ದರೆ ವ್ಯಕ್ತಿತ್ವ ಬೆಳೆಯುತ್ತದೆ. ದೇಶಕ್ಕೆ ಚಾರಿತ್ರ್ಯ ಅಗತ್ಯ. ದೇಶಕ್ಕೆ ಚರಿತ್ರೆ ಇದೆ, ಆದರೆ ಚಾರಿತ್ರ್ಯ ಬೇಕಿದೆ. ಆಚಾರ್ಯರನ್ನು ಹೊಂದಿದ್ದೇವೆ. ಆಚರಣೆ ಬೇಕಿದೆ. ಆಚರಣೆ ಎನ್ ಸಿ ಸಿಯಲ್ಲಿದೆ ಎಂದು ಅಭಿಪ್ರಾಯ ಪಟ್ಟರಲ್ಲದೇ ಆಧುನಿಕ ಜಗತ್ತಿನಲ್ಲಿ ಎನ್ ಸಿಸಿಗೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಅಧಿಕಾರಿಗಳು ಎನ್ ಸಿ ಸಿ ಸೇರುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬೇಕು ಎಂದರು.
*ರೆಜಿಮೆಂಟ್ ಮಾದರಿಯಲ್ಲಿ ಎನ್.ಸಿ.ಸಿ ಬೆಳೆಯಬೇಕು*
ಎನ್ ಸಿ ಸಿ ರೆಜಿಮೆಂಟ್ ಮಾದರಿಯಲ್ಲಿ ಬೆಳೆಯಬೇಕು. ಬೆಟಾಲಿಯನ್ ಗಳನ್ನು ರೇಜಿಮೆಂಟ್ ಗಳಾಗಿ ಕಟ್ಟಿದಂತೆಯೇ ಎನ್.ಸಿ.ಸಿ ಯನ್ನೂ ರೆಜಿಮೆಂಟ್ ಗಳಾಗಿ ಬೆಳೆಸಬೇಕು. ಆಗ ಮಾತ್ರ ಎನ್.ಸಿ.ಸಿ ಗೆ ಪ್ರಾಮುಖ್ಯತೆ ದೊರೆಯುತ್ತದೆ ಹಾಗೂ ಯುವಕರೂ ಸೇರ್ಪಡೆ ಯಾಗಲು ಉತ್ತೇಜನ ದೊರೆಯುತ್ತದೆ ಎಂದರು.
*ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ*
ಎನ್.ಸಿ.ಸಿ ವ್ಯಕ್ತಿತ್ವ ವಿಕಸನಕ್ಕೆ ಕೂಡ ಸಹಕಾರಿಯಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ, ಗ್ರಾಮೀಣ ಪ್ರದೇಶಗಳಿಂದ ಸೇರ್ಪಡೆ ಯಾಗಿದ್ದಾರೆ. ಈ ಎಲ್ಲಾ ಮಕ್ಕಳೂ ಪ್ರತಿಭಾವಂತರು ಹಾಗೂ ಬುದ್ಧಿವಂತರಿದ್ದಾರೆ. ಅವರಲ್ಲಿ ಆತ್ಮವಿಶ್ವಾಸದ ಅಗತ್ಯವಿದೆ. ಇದು ಎನ್.ಸಿ.ಸಿ ಯಿಂದ ಅವರಿಗೆ ದೊರೆಯುತ್ತದೆ. ಜೀವನದ ಸವಾಲುಗಳನ್ನು ಎದುರಿಸಬೇಕು. ಜೀವನವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬೇಕು.
ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಎನ್ ಸಿಸಿ ಸೇರುವ ಮೊದಲು ಇರುವ ಅಭಿಪ್ರಾಯಕ್ಕೂ ನಂತರದ ಅಭಿಪ್ರಾಯಕ್ಕೂ ಬದಲಾವಣೆಯಾಗಿರುತ್ತದೆ. ಇಲ್ಲಿ ಕಲಿತ ಶಿಸ್ತನ್ನು ಜೀವನದುದ್ದಕ್ಕೂ ಪಾಲಿಸಬೇಕು ಎಂದರು.
*ಈ ವರ್ಷ ಹೊಸ 75 ಯುನಿಟ್ ಗಳ ಪ್ರಾರಂಭ*
ಎನ್ ಸಿಸಿಯಲ್ಲಿ ಕಲಿತ ಧೈರ್ಯ, ಆತ್ಮವಿಶ್ವಾಸ ಜೀವನದಲ್ಲಿ ನಿಮ್ಮನ್ನು ಯಶಸ್ವಿಗೊಳಿಸುತ್ತದೆ. ರಾಜ್ಯ ಸರ್ಕಾರ ಎನ್.ಸಿ.ಸಿ ಗೆ ಅಗತ್ಯವಿರುವ ನೆರವು ನೀಡುತ್ತದೆ. ಕಳೆದ ವರ್ಷ ಸುಭಾಸಚಂದ್ರ ಬೋಸ್ ಅವರ ಜನ್ಮ ದಿನಾಚರಣೆ ಅಂಗವಾಗಿ 75 ಹೊಸ ಯುನಿಟ್ ಆರಂಭಿಸುವುದಾಗಿ ಹೇಳಿದ್ದೆವು. ಈ ವರ್ಷ ಹೊಸದಾಗಿ 75 ಯುನಿಟ್ ಗಳನ್ನು ಆರಂಭವಾಗಲಿವೆ. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ 75 ಯೂನಿಟ್ ಗಳನ್ನು ಸೇರಿಸಲಾಗಿದೆ. ಎನ್ ಸಿಸಿಯನ್ನು ಪ್ರೌಢ ಶಾಲಾ ಮಟ್ಟಕ್ಕೆ ವಿಸ್ತರಿಸಬೇಕು. ಕರಾವಳಿಯಲ್ಲಿ ಈ ವರ್ಷ 2800 ಕ್ಕೂ ಹೆಚ್ಚು ಹೊಸ ಎನ್ ಸಿಸಿ ಕೆಡೆಟ್ ಗಳು ಸೇರ್ಪಡೆಯಾಗಿದ್ದಾರೆ ಎಂದರು.
*ಯುವಕರು ನಮ್ಮ ದೇಶದ ಆಸ್ತಿ*
ನಮ್ಮ ಪ್ರಧಾನ ಮಂತ್ರಿಗಳು ದೇಶ ಮೊದಲು ಎಂದು ಆಲೋಚಿಸುತ್ತಾರೆ. ದೇಶ ಆರ್ಥಿಕವಾಗಿ ಬೆಳೆಯಬೇಕೆಂಬ ಆಲೋಚನೆ ಹೊಂದಿದ್ದಾರೆ. ಈಗ ನಾವು ವಿಶ್ವದಲ್ಲಿ 5 ನೇ ಸ್ಥಾನದಲ್ಲಿದ್ದೇವೆ. ಹತ್ತು ವರ್ಷಗಳಲ್ಲಿ ದೇಶ ವಿಶ್ವದಲ್ಲಿ ನಂಬರ್ ಒನ್ ಸ್ಥಾನಕ್ಕೆ ತಲುಪುವ ಗುರಿ ಹೊಂದಿದ್ದೇವೆ. ಅದಕ್ಕೆ ಯುವಕರ ಪಾತ್ರ ಬಹಳ ಮುಖ್ಯ.ದೇಶದ ಶೇ 46% ಜನಸಂಖ್ಯೆಯ ಯುವಕರು ನಮ್ಮ ದೇಶದ ಆಸ್ತಿ ಎಂದ ನಮ್ಮ ಪ್ರಧಾನಿ ದೇಶದ ಯುವಕರ ಸಾಮರ್ಥ್ಯ ಅರಿತು ಸ್ಕಿಲ್ ಇಂಡಿಯಾ ತರಬೇತಿ ಆರಂಭಿಸಿದರು.
ಯುವಕರು ತಮ್ಮ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಇರುವವರಿಗೆ ಕೌಶಲ್ಯ ತರಬೇತಿ. ನೀಡಲಾಗುವುದು ಎಂದರು.
*ಪರಿಶ್ರಮ ಅಗತ್ಯ*
ಬಹುತೇಕರು ಅದೃಷ್ಟದ ಮೇಲೆ ಹೆಚ್ಚು ನಂಬಿಕೆ ಇಟ್ಟಿರುತ್ತಾರೆ. ಆದರೆ ಪರಿಶ್ರಮಕ್ಕೂ ಮಿಗಿಲಾದುದು ಯಾವುದೂ ಇಲ್ಲ. ಎನ್ ಸಿ ಸಿ ಕೆಡೆಟ್ ಗಳು ದೇಶ, ರಾಜ್ಯ ತಂದೆ ತಾಯಿಗಳನ್ನು ಪ್ರೀತಿಸಿ ಗೌರವಿಸುವ ಕೆಲಸ ಮಾಡಬೇಕು ಎಂದರು.
ಸಚಿವರಾದ ಡಾ: ಸಿ.ಎನ್ ಅಶ್ವತ್ಥ್ ನಾರಾಯಣ್, ಬಿ.ಎ. ಬಸವರಾಜ , ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಎನ್.ಸಿ.ಸಿ.ಕಂಟಿಂಜೆಂಟ್ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Post a Comment