[01/02, 6:47 PM] +91 91644 68888: 🔯 ಆಧ್ಯಾತ್ಮಿಕ ವಿಚಾರ.🔯
*ಕೃಷ್ಣವೇಣೀ ತೀರಸಂಸ್ಥಂ| ಕಾರ್ಪರ ಗ್ರಾಮವಾಸಿನಂ||*
*ತತ್ತೀರೇ ಪಿಪ್ಪಲಸ್ಥಂ| ಶ್ರೀ ನೃಸಿಂಹಂ ಮನಸಾ ನಮೇ||*
*ನಿತ್ಯ ಪಂಚಾಂಗ NITYA PANCHANGA 02.02.2023 THURSDAY ಗುರುವಾರ*
*----------------------*
*SAMVATSARA :* SHUBHAKRAT.
*ಸಂವತ್ಸರ:* ಶುಭಕೃತ್.
*AYANA:* UTTARAAYANA.
*ಆಯಣ:* ಉತ್ತರಾಯಣ.
*RUTHU:* SHISHIRA.
*ಋತು:* ಶಿಶಿರ.
*MAASA:* MAGHA.
*ಮಾಸ:* ಮಾಘ.
*PAKSHA:* SHUKLA.
*ಪಕ್ಷ:* ಶುಕ್ಲ.
*----------------------*
*TITHI:* DWADASHI.
*ತಿಥಿ:* ದ್ವಾದಶೀ.
*----------------------*
*SHRADDHA TITHI:* EKADASHI & DWADASHI.
*ಶ್ರಾದ್ಧ ತಿಥಿ:* ಏಕಾದಶೀ & ದ್ವಾದಶೀ.
*_________________*
*VAASARA:* BRAHASPATIVAASARA.
*ವಾಸರ:* ಬ್ರಹಸ್ಪತಿವಾಸರ.
*NAKSHATRA:* ARDRA.
*ನಕ್ಷತ್ರ:* ಆರ್ದ್ರಾ.
*YOGA:* VAIDHRATI.
*ಯೋಗ:* ವೈಧೃತಿ.
*KARANA:* BALAVA.
*ಕರಣ:* ಬಾಲವ.
*-----------------------*
*ಸೂರ್ಯೊದಯ (Sunrise):* 06.58
*ಸೂರ್ಯಾಸ್ತ (Sunset):* 06:23
*----------------------*
*ರಾಹು ಕಾಲ (RAHU KAALA) :* 01:30PM To 03:00PM.
*ದಿನ ವಿಶೇಷ (SPECIAL EVENT'S)*
*02.02.2023*
*ಭೀಮ ದ್ವಾದಶೀ (ಸಂತಾನ ದ್ವಾದಶೀ), ಪಾರಣೆ, ಪ್ರದೋಷ, ತಿಲೋತ್ಪತ್ತಿ.*
*BHEEMA DWADASHI (SANTANA DWADASHI), PARANE, PRADOSHA, TILOTPATTI.*
*Quote of the day*:
सुसूक्ष्मेणापि रंध्रेण प्रविश्याभ्यंतरं रिपु: | नाशयेत् च शनै: पश्चात् प्लवं सलिलपूरवत् |
Hindi Translation:- नाव में पानी पतले छेद से भीतर आने लगता है और भर कर उसे डूबा देता है, उसी तरह शत्रु को घुसने का छोटा रास्ता या कोई भेद मिल जाए तो उसी से भीतर आ कर वह कबाड़ कर ही देता है।
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ .*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. ಸಂಪಾದಕೀಯ ಶಾಖೆ ಮಂಗಳೂರು.ಮೊಬೈಲ್ +919945295560 ಮುಖ್ಯ ಕಛೇರಿ ಯುರೋಪ್.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. WhatsApp:https://chat.whatsapp.com/ISbrOeVLYcP5M7irDdsxKc
⬆️ಇಲ್ಲಿ ಕ್ಲಿಕ್ ಮಾಡಿ.
[01/02, 6:47 PM] +91 91644 68888: 🔯 ಆಧ್ಯಾತ್ಮಿಕ ವಿಚಾರ.🔯
*ಗೀತಾಂತರಂಗ - 207*
*ಸಕ್ತಾಃ ಕರ್ಮಣ್ಯವಿದ್ವಾಂಸೋ*
*ಯಥಾ ಕುರ್ವಂತಿ ಭಾರತ |*
*ಕುರ್ಯಾದ್ವಿದ್ವಾಂಸ್ತಥಾಸಕ್ತಃ*
*ಚಿಕೀರ್ಷುರ್ಲೋಕಸಂಗ್ರಹಮ್ || (3-25)*
ಕರ್ಮಫಲದಲ್ಲಿ ಆಸಕ್ತಿಯುಳ್ಳ ಅಜ್ಞಾನಿಗಳು ಕರ್ಮವನ್ನು ಮಾಡುವಂತೆಯೇ, ಕರ್ಮಫಲದಲ್ಲಿ ಆಸಕ್ತಿಯಿಲ್ಲದ ಜ್ಞಾನಿಗಳು ಲೋಕಕಲ್ಯಾಣಕ್ಕೋಸ್ಕರ ಕರ್ಮವನ್ನು ಮಾಡಬೇಕು. ಜ್ಞಾನಿಯಾದರೂ ಕೂಡ ಅಜ್ಞಾನಿಯಂತೆಯೇ ಕರ್ಮದಲ್ಲಿ ತೊಡಗಬೇಕು. `ಜ್ಞಾನಿ-ಅಜ್ಞಾನಿ’ ಇವರಿಬ್ಬರಲ್ಲಿ ವ್ಯತ್ಯಾಸವಿಷ್ಟೆ; ಅಜ್ಞಾನಿಗಳು ಕರ್ಮ ಮತ್ತು ಫಲದ ಕುರಿತಾಗಿ ಸಂಗವನ್ನಿಟ್ಟುಕೊಂಡು ಕರ್ಮದಲ್ಲಿ ತೊಡಗುತ್ತಾರೆ. ಜ್ಞಾನಿಯಾದವನು ಕರ್ಮಫಲಾಸಂಗ ರಹಿತನಾಗಿ ಕರ್ಮದಲ್ಲಿ ತೊಡಗುತ್ತಾನೆ. ಆದರೆ ಮೇಲ್ನೋಟಕ್ಕೆ ಕರ್ಮದಲ್ಲಿ ತೊಡಗುವಿಕೆ ಎಂಬುದು ಇಬ್ಬರಲ್ಲಿಯೂ ಸಮಾನವಾದದ್ದು. ಉದಾಹರಣೆಗೆ; ಅಜ್ಞಾನಿಗಳು ಮಡಿವಸ್ತ್ರವನ್ನು ಉಟ್ಟು, ಭಸ್ಮಧಾರಣೆಯನ್ನು ಮಾಡಿ, ಘಂಟಾನಾದವನ್ನು ಮಾಡಿ ಪೂಜೆಯನ್ನು ಮಾಡುತ್ತಾರೆ. ಜ್ಞಾನಿಗಳೂ ಪೂಜೆಯನ್ನು ಹಾಗೆಯೇ ಮಾಡುತ್ತಾರೆ, ಮಾಡಬೇಕು. `ಸಕ್ತಾಃ’ ಎಂದರೆ, ಕರ್ಮ-ಫಲಗಳಲ್ಲಿ ಆಸಕ್ತಿಯುಳ್ಳವರು. ಇಲ್ಲಿ ಒಂದು ವಿಷಯ ಗಮನಾರ್ಹ; ಆಸಕ್ತಿ ಮತ್ತು ತನ್ಮಯತೆ ಬೇರೆ ಬೇರೆ. ನಾನು, ನನ್ನದು, ನನಗೆ ಎಂಬ ಭಾವನೆ ಆಸಕ್ತಿ. ತನ್ಮಯತೆ ಎಂದರೆ ಅವುಗಳಲ್ಲಿಯೇ ಅನನ್ಯ ಮನಸ್ಸಿನಿಂದ ಲಕ್ಷ್ಯಕೊಡುವಿಕೆ ಏಕಾಗ್ರತೆ. ಶ್ರೀ ರಾಮಕೃಷ್ಣ ಪರಮಹಂಸರು ಇದಕ್ಕೆ ಒಂದು ಉತ್ತಮ ಉದಾಹರಣೆಯನ್ನು ಕೊಡುತ್ತಾರೆ; `ದಾಸಿಯಾದವಳು ತನ್ನ ಯಜಮಾನನ ಮನೆಯಲ್ಲಿ ಪರಿಚರ್ಯೆ ಮಾಡುತ್ತಾಳೆ. ಅವಳು ಒಳ್ಳೆಯ ದಾಸಿಯಾಗಿದ್ದರೆ, ಅವಳು ಬಹಳ ತನ್ಮಯತೆಯಿಂದ ಕೆಲಸ ಮಾಡುತ್ತಾಳೆ. ಅವಳ ತನ್ಮಯತೆ ಎಷ್ಟರ ಮಟ್ಟಿಗೆ ಎಂದರೆ; ಯಜಮಾನನ ಮಗುವನ್ನು ತನ್ನ ಮಗುವಿನಂತೆಯೇ ತಿಳಿದು, ಎಣ್ಣೆ ಹಚ್ಚಿ ಸ್ನಾನಮಾಡಿಸುತ್ತಾಳೆ. ಆ ಮನೆಯ ಒಳಗೆ, ಹೊರಗೆ ಎಲ್ಲ ಕಡೆಯಲ್ಲಿ ಓಡಾಡುತ್ತಾಳೆ. ಅಡಿಗೆಯೇ ಮೊದಲಾಗಿ ಎಲ್ಲ ಕೆಲಸವನ್ನು ಮಾಡುತ್ತಾಳೆ. ಅವಳು ಅತ್ಯಂತ ವಿಶ್ವಾಸದವಳಾಗಿದ್ದರೆ, ಆ ಯಜಮಾನ ಆಕೆಗೆ ಮನೆಯ ಬಹುತೇಕ ಜವಾಬ್ದಾರಿಗಳನ್ನು ವಹಿಸಿಕೊಡುತ್ತಾನೆ. ಇಷ್ಟೆಲ್ಲ ಇದ್ದರೂ, ಈ ಯಾವುದೂ ತನ್ನದಲ್ಲವೆಂಬುದು ಆ ದಾಸಿಗೆ ಗೊತ್ತು. ಎಣ್ಣೆ ಹಚ್ಚಿ ಸ್ನಾನ ಮಾಡಿಸಿದ ಮಗು ತನ್ನದಲ್ಲ. ತನ್ನ ಮಗು ತನ್ನ ಮನೆಯಲ್ಲಿದೆ. ತಾನು ಸ್ವಚ್ಛಗೊಳಿಸಿದ ಮನೆ ತನ್ನದಲ್ಲವೆಂಬುದೂ ಗೊತ್ತು. ತನ್ಮಯತೆಯಿಂದ ಕೆಲಸ ಮಾಡಿದರೂ, ಇದಾವುದೂ ನನ್ನದಲ್ಲವೆಂಬ ಅಸಂಗ ಬುದ್ಧಿ ಅಲ್ಲಿದೆ’. ತನ್ಮಯತೆ ಎಂದರೆ ಹೀಗೆ. ಎಲ್ಲಿ ತಾನು ತನ್ನದು ತನಗೆ ಎಂಬ ಭಾವನೆ ಇರುತ್ತದೋ ಅದು ಆಸಕ್ತಿ ಅಥವಾ ಸಂಗ. ಅಜ್ಞಾನಿಗಳು ಸಂಗದಿಂದ ಕರ್ಮವನ್ನು ಮಾಡುವಂತೆಯೇ, ಜ್ಞಾನಿಗಳು ಸಂಗರಹಿತರಾಗಿ ಏಕಾಗ್ರತೆಯಿಂದ ಕರ್ಮ ಮಾಡಬೇಕು.
*ವ್ಯಾಖ್ಯಾನ: ಶ್ರೀ ಶ್ರೀಮತ್ಪರಮಹಂಸಾದಿ ಬಿರುದಾಂಕಿತ ಶ್ರೀ ಶ್ರೀಮದ್ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀಸ್ವರ್ಣವಲ್ಲೀ ಮಹಾಸಂಸ್ಥಾನ*
*(ಇದರ ಸಂಪೂರ್ಣ ಆವೃತ್ತಿ ಗೀತಾಂತರಂಗ ೧,೨,೩ ಪುಸ್ತಕಗಳು ಶ್ರೀಮಠದ ಭಗವತ್ಪಾದ ಪ್ರಕಾಶನದಲ್ಲಿ ಲಭ್ಯವಿದ್ದು ಆಸಕ್ತರು ಕೊಂಡುಕೊಳ್ಳಬಹುದು.08384-279359)*
(©® *ಶ್ರೀಭಗವತ್ಪಾದ ಪ್ರಕಾಶನ*)
*ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ*
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ .*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. ಸಂಪಾದಕೀಯ ಶಾಖೆ ಮಂಗಳೂರು.ಮೊಬೈಲ್ +919945295560 ಮುಖ್ಯ ಕಛೇರಿ ಯುರೋಪ್.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. WhatsApp:https://chat.whatsapp.com/ISbrOeVLYcP5M7irDdsxKc
⬆️ಇಲ್ಲಿ ಕ್ಲಿಕ್ ಮಾಡಿ.
[01/02, 6:47 PM] +91 91644 68888: 🔯 ಆಧ್ಯಾತ್ಮಿಕ ವಿಚಾರ.🔯
ಗೀತಾ ಮಹಾತ್ಮೆ. (102) 31.01.2023*
ಯತ್ರ ಯೋಗೇಶ್ವರಃ ಕೃಷ್ಣೋ
ಯತ್ರ ಪಾರ್ಥೋ ಧನುರ್ಧರಃ |
ತತ್ರ ಶ್ರೀರ್ವಿಜಯೋ ಭೂತಿ:
ಧ್ರುವಾ ನೀತಿರ್ಮತಿರ್ಮಮ ||
ವೇದೋಪನಿಷತ್ತಿನ ಸಾರವಾದ ಶ್ರೀಮದ್ಭಗವದ್ಗೀತೆಯ 700ನೇ ಶ್ಲೋಕವಿದು. ಶ್ರೀ ವೇದವ್ಯಾಸರು ಕರುಣಿಸಿದ ದಿವ್ಯದೃಷ್ಟಿಯ ಹಿನ್ನೆಲೆಯಲ್ಲಿ ಸಂಜಯ ನುಡಿದ ಮಾತಿದು. ಕುರುಕ್ಷೇತ್ರ ಯುದ್ಧದ ಫಲಿತಾಂಶವೇ ಈ ಶ್ಲೋಕದಲ್ಲಿ ಅಡಗಿದೆ. "ಎಲ್ಲಿ ಯೋಗೇಶ್ವರನಾದ ಶ್ರೀಕೃಷ್ಣನು ಇರುವನೋ, ಎಲ್ಲಿ ಧನುರ್ಧಾರಿಯಾದ ಅರ್ಜುನನು ಇರುವನೋ, ಅಲ್ಲಿ ಸಂಪತ್ತು, ಜಯ, ಅಸಾಮಾನ್ಯ ವೈಭವ, ಸುಸ್ಥಿರವಾದ ಧರ್ಮನೀತಿ, ಉತ್ತರೋತ್ತರ ಅಭ್ಯುದಯ, ಭಗವಂತನ ವಿಶಿಷ್ಟ ವಿಭೂತಿ ಇವೆಲ್ಲ ಶಾಶ್ವತವಾಗಿ ಇರುತ್ತವೆ ಎಂಬುದು ನನ್ನ ಅಭಿಮತ" ಎನ್ನುತ್ತಾನೆ ಸಂಜಯ.
ಶ್ರೀಕೃಷ್ಣ ಹಾಗೂ ಅರ್ಜುನರು ಇದ್ದಲ್ಲಿ ವಿಜಯ ಪ್ರಾಪ್ತಿ ಖಚಿತ. ನಮ್ಮೆಲ್ಲರ ಜೀವನದ ಹಾದಿ ಸುಗಮವಾಗಲು, ಗುರಿ ತಲುಪಿ ಗೆಲುವು ಸಾಧಿಸಲು, ಶ್ರೀಕೃಷ್ಣನ ಅನುಗ್ರಹ ಅತ್ಯಗತ್ಯ. ಆಗಲೇ ಮಾನವನು ಮಾಧವನಾಗುವನು. ಜಗತ್ತಿನ ನಿಯಾಮಕನಾದ ಮಾಧವನಿದ್ದಲ್ಲಿ ಜಯ ಸಹಜವೂ, ನಿಶ್ಚಿತವೂ ಆಗಿದೆ. ಆದರೆ ಮಾನವನದು ಹಾಗಲ್ಲ; ಮಾಧವನ ಕರುಣೆಗೆ ಪಾತ್ರನಾದ ವ್ಯಕ್ತಿಗೆ ಕೀರ್ತಿ, ವಿಜಯ ಮೊದಲಾದವುಗಳು ನಿಶ್ಚಿತ ಎಂಬುದು ಇಲ್ಲಿನ ಸಂದೇಶ.
ಭಗವದ್ಗೀತೆಯೇ ಶ್ರೀಕೃಷ್ಣ. ಹಾಗೆಯೇ ಶ್ರೀಕೃಷ್ಣ ಎಂದರೆ ಜ್ಞಾನ. ಗೀತಾ ಪಠಣದ ಮೂಲಕ ಜ್ಞಾನಿಗಳಾಗುತ್ತಾ ಎಲ್ಲರೂ ಕೃಷ್ಣ ಸ್ವರೂಪಿಗಳಾಗೋಣ. ಜ್ಞಾನಯುಕ್ತರಾಗಿ ವಿಹಿತ ಧರ್ಮ - ಕರ್ಮಗಳಲ್ಲಿ ತೊಡಗಿಸಿಕೊಂಡು ಅರ್ಜುನರಾಗೋಣ. ಕುರುಕ್ಷೇತ್ರದ ರಣರಂಗದಲ್ಲಿ ಧನುರ್ಧಾರಿಯಾಗಿದ್ದ ಅರ್ಜುನ ಬೇರೆಯಲ್ಲ; ಪಾರ್ಥ ಸಾರಥಿಯಾದ ಕೃಷ್ಣ ಬೇರೆಯಲ್ಲ. ಸಾಕ್ಷಾತ್ ನರ - ನಾರಾಯಣರು. ಭಕ್ತ ಮತ್ತು ಭಗವಂತನ ರೂಪದಲ್ಲಿ ಪ್ರಕಟಗೊಂಡ ಅರ್ಜುನ - ಶ್ರೀಕೃಷ್ಣರ ಕುರುಕ್ಷೇತ್ರ ಸಂವಾದವಾದ ಗೀತೋಪದೇಶದ ಸಂದೇಶವನ್ನು, ಸಮಾಜಕ್ಕೆ ಅರ್ಪಿಸುವ ಪ್ರತಿಜ್ಞೆ ಮಾಡೋಣ. ಈ ದಿವ್ಯ ಸಂದೇಶವನ್ನು ಇತರರಿಗೆ ತಿಳಿಸುತ್ತಾ ಭಗವಂತನ ಪ್ರೀತಿಗೆ ಪಾತ್ರರಾಗೋಣ.
ಇಂದು ಯೋಗೇಶ್ವರನಾದ ಕೃಷ್ಣನಾಗಲೀ, ಧನುರ್ಧಾರಿಯಾದ ಪಾರ್ಥನಾಗಲೀ ಪ್ರಾಪಂಚಿಕ ಆಶೆ ಆಮಿಷಗಳಿಗೆ ಒಳಗಾದವರ ಬಾಹ್ಯ ಕಣ್ಣಿಗೆ ಅಗೋಚರವೇ ಸರಿ. ಭಗವಂತನ ನುಡಿಯ ಪ್ರಕಾರ, ಆತನು ಪ್ರತಿಯೊಬ್ಬರ ಹೃದಯ ಮಂದಿರದಲ್ಲಿ ನೆಲೆನಿಂತಿದ್ದಾನೆ. ಇದೀಗ ನಾವು ಅರ್ಜುನರಾಗಬೇಕು. ಅರ್ಜುನ ಎಂದರೆ ಅನುರಾಗ ಎಂದರ್ಥ. ನಮ್ಮಲ್ಲಿ ಭಗವಂತನ ಕುರಿತಾದ ಅನುರಾಗ ಮೂಡಿದಾಗ, ಭಗವದರ್ಪಣ ಮನೋಭಾವದಿಂದ ಕರ್ಮನಿರತವಾದಾಗ ಭಗವಂತನ ಶಾಶ್ವತವಾದ ಪ್ರೀತಿ, ವಿಭೂತಿ ನಮ್ಮದಾಗುವುದು. ಭಗವಂತನ ಅನುಗ್ರಹದ ವಿಜಯ ನಮ್ಮದಾಗುವುದು.
ಭಗವದ್ಗೀತೆಯು ಗೀತಾಶಾಸ್ತ್ರ; ಇದು ಸಕಲ ವೇದಗಳ ಸಾರ. ಸಾಕ್ಷಾತ್ ಭಗವಂತನ ಮುಖವಾಣಿಯಿಂದ ಹೊರಹೊಮ್ಮಿದ ದಿವ್ಯಾಮೃತ. ಇದು ಗೀತಾ ಮಕರಂದ; ಇದುವೇ ಗೀತಾ ಕಲ್ಪತರು. ಇದು ಮೋಕ್ಷಶಾಸ್ತ್ರ, ಭಕ್ತಿಶಾಸ್ತ್ರ. ಇದುವೇ ಪರಮಪವಿತ್ರ. ಜೈ ಭಗವದ್ಗೀತೆ. ಹರಿ: ಓಂ
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ .*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. ಸಂಪಾದಕೀಯ ಶಾಖೆ ಮಂಗಳೂರು.ಮೊಬೈಲ್ +919945295560 ಮುಖ್ಯ ಕಛೇರಿ ಯುರೋಪ್.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. WhatsApp:https://chat.whatsapp.com/ISbrOeVLYcP5M7irDdsxKc
⬆️ಇಲ್ಲಿ ಕ್ಲಿಕ್ ಮಾಡಿ.
[01/02, 6:47 PM] +91 91644 68888: 🔯 ಆಧ್ಯಾತ್ಮಿಕ ವಿಚಾರ.🔯
ಭಾಗವತದ ಮಹಿಮೆ:-
ಹರಿದಾಸಕೃಷ್ಣ, ಎಂಬ ಪಂಡಿತನು ಮಣಿಪುರ ಗ್ರಾಮದಲ್ಲಿ ವಾಸಿಸುತ್ತಿದ್ದನು.
ಅವನು ಪ್ರತಿನಿತ್ಯವೂ ಭಾಗವತ ಪ್ರವಚನ ವನ್ನು ಮಾಡುತ್ತಿದ್ದನು. ವಿಶೇಷ ಎಂದರೆ, ಭಾಗವತದಲ್ಲಿ ಬರುವ ಆಯಾ ಪಾತ್ರಗಳಿಗೆ ಜೀವವನ್ನು ತುಂಬಿದಂತೆ ಭಾವಾಭಿನಯದ ಮೂಲಕ ಪ್ರವಚನ ಮಾಡುವುದನ್ನು ನೋಡುತ್ತಾ , ಕೇಳುತ್ತಿದ್ದರೆ, ರಾತ್ರಿ ಕಳೆದಿದ್ದು ಯಾರಿಗೂ ತಿಳಿಯುತ್ತಿರಲಿಲ್ಲ. ಅಮೃತಪಾನ ದಂತ ಇಂಥ ಭಾಗವತವನ್ನು ಕೇಳದಿರುವವರು ಇರಲಿಲ್ಲ. ಕಣ್ಣಿಗೆ ಕಟ್ಟಿದಂತೆ ಅಲ್ಲಿಯೇ ನಡೆಯುತ್ತಿರುವಂತೆ, ಹೇಳುವುದನ್ನು ಕೇಳಲು ದೂರ ದೂರದಿಂದ ಬಂದು ಕೇಳುತ್ತಿದ್ದರು. ಪಂಡಿತನು ಸಾತ್ವಿಕ ಸ್ವಭಾವದವನು, ಕಥಾಕಾಲಕ್ಷೇಪ ಮುಗಿದ ನಂತರ ಯಾರು ಏನು ಕೊಡುತ್ತಿದ್ದರೋ ಅದನ್ನೇ ಸಂತೋಷದಿಂದ ತೆಗೆದುಕೊಳ್ಳುತ್ತಿದ್ದನು. ಅವನು ಒಂದು ಜೋಪಡಿಯಲ್ಲಿ
ಇರುತ್ತಿದ್ದನು. ನಿದ್ದೆ ಮಾಡುವ ಸಮಯ ಬಿಟ್ಟು ಉಳಿದ ಸಮಯದಲ್ಲೆಲ್ಲ ಹರಿನಾಮಸ್ಮರಣೆ ಮಾಡುತ್ತಿದ್ದನು. ಅವನ ಜೋಪಡಿಯ ಸಮೀಪದಲ್ಲಿ ಒಂದು ಮರವಿದ್ದು, ಅದರೊಳಗೊಂದು ಗೂಡಿನಲ್ಲಿ ಪುಟ್ಟಹಕ್ಕಿ ವಾಸಿಸುತ್ತಿತ್ತು.
ಅದು ಸಹ ದಿನರಾತ್ರಿ ದೇವರ ಸ್ಮರಣೆ ಮಾಡುತ್ತಿತ್ತು.
ಪಂಡಿತನು ಕಥಾಕ್ಷೇಪ ಮಾಡಲು ಹೋದಲ್ಲೆಲ್ಲ ತಾನು ಅವನ ಹಿಂದೆಯೇ ಹೋಗಿ ಅಲ್ಲೊಂದು ಮರದ ಮೇಲೆ ಕುಳಿತು ಪಂಡಿತರು ಹೇಳುತ್ತಿದ್ದ ಭಾಗವತವನ್ನು ಕೇಳುತ್ತಿತ್ತು, ಹಾಗೂ ಪಂಡಿತನು ಭಾಗವತ ಮುಗಿಸಿ ಮನೆಗೆ ಹೊರಟಾಗ ಅವನ ಹಿಂದೆಯೇ ಹಾರಿ ಬಂದು ತನ್ನ ಗೂಡಿನಲ್ಲಿ ಸೇರುತ್ತಿತ್ತು. ಇದೊಂದು ಪಂಡಿತನಿಗೆ ಗೊತ್ತಿರಲಿಲ್ಲ. ಒಂದು ದಿನ ಪಂಡಿತನಿಗೆ ಹುಷಾರು ತಪ್ಪಿತು. ಆಹಾರ, ನೀರು, ಔಷಧಿ ಗಳಿಲ್ಲದೆ , ನಿಶ್ಯಕ್ತಿಯಾಗಿ ಮಂಚದಿಂದ ಏಳಲಾಗದೇ ಹಾಗೆಯೇ ಮಲಗಿದ್ದನು. ರಾತ್ರಿ ಒಂದು ಹೊತ್ತಿನಲ್ಲಿ ಅವನಿಗೆ ಬಹಳ ಬಾಯಾರಿಕೆಯಾಯಿತು. ನೀರು ಕುಡಿಯಲು ಏಳಲು ಹೊರಟರೆ ಆಗಲಿಲ್ಲ . ಬಹಳ ಆಯಾಸದಿಂದ ನೀರು ನೀರು ಎಂದು ಕೂಗುತ್ತಿದ್ದುದು ಮರದ ಮೇಲೆ ಕುಳಿತಿದ್ದ ಹಕ್ಕಿಗೆ ಕೇಳಿಸಿತು. ಪಂಡಿತನ ಧ್ವನಿ ಕೇಳಿ ಹಾರಿ ಬಂದು ಗುಡಿಸಲ ಕಿಟಕಿ ಸಂದಿಯಿಂದ ಒಳಗೆ ಬಂದಿತು. ಮನೆಯೊಳಗೆ ಸುತ್ತಲೂ ನೋಡಿತು. ಒಂದು ತಾಮ್ರದ ತಂಬಿಗೆಯಲ್ಲಿ ನೀರು ಕಂಡಿತು. ಅದು ತನ್ನ ಕೊಕ್ಕಿನಲ್ಲಿ ನೀರು ತಂದು ಪಂಡಿತನ ಬಾಯೊಳಗೆ ಹಾಕಿತು. ಮತ್ತೆ ಹೋಗಿ ನೀರು ತರುವುದು ಮತ್ತೆ ಬಾಯಲ್ಲಿ ಹಾಕುವುದು. ಇದೇ ರೀತಿ ಒಂದು ರಾತ್ರಿ ಪೂರ್ತಿ ಮಾಡಿತು.
ನೀರು ಕುಡಿದುದರಿಂದ ಪಂಡಿತನಿಗೆ ಸ್ವಲ್ಪ ನಿದ್ರೆ ಬಂದು ಆರಾಮವಾಗಿ ಮರುದಿನಕ್ಕೆ ಪೂರ್ತಿ ಗುಣವಾಯಿತು. ನನ್ನ ಕಷ್ಟಕಾಲದಲ್ಲಿ ಶ್ರೀಹರಿಯೇ ಹಕ್ಕಿಯ ರೂಪದಲ್ಲಿ ಬಂದು ನನಗೆ ಸಹಾಯ ಮಾಡಿದ್ದಾನೆ ಎಂದುಕೊಂಡು ಮರದ ಹತ್ತಿರ ಬಂದು, ಹಕ್ಕಿಗೆ ಕೃತಜ್ಞತೆ ಹೇಳಿ, ಅಂದಿನಿಂದ ಒಂದು ಬಟ್ಟಲಿನಲ್ಲಿ ದವಸ ಧಾನ್ಯ ಇನ್ನೊಂದು ಬಟ್ಟಲಲ್ಲಿ ನೀರು ತುಂಬಿಸಿ ಮರದ ಕೆಳಗೆ ಇಡುತ್ತಿದ್ದನು. ಹಕ್ಕಿ ಪ್ರತಿನಿತ್ಯವೂ ಅದೇ ಧಾನ್ಯವನ್ನು ತಿಂದು ನೀರು ಕುಡಿಯುತ್ತಿತ್ತು. ಒಂದು ದಿನ ಪಂಡಿತ ಮರದ ಹತ್ತಿರ ಬಂದು ಹಕ್ಕಿಗೆ ನೋಡು ನಾನು ಪಕ್ಕದ ಗ್ರಾಮಕ್ಕೆ ಭಾಗವತ ಸಪ್ತಾಹ ಮಾಡಲು ಹೋಗುತ್ತಿದ್ದೇನೆ ಬರುವುದು ಏಳು ದಿನವಾಗುತ್ತದೆ ಅಲ್ಲಿಯತನಕ ನೀನು ಉಪವಾಸ ಇರಬೇಡ ಸಾಕಷ್ಟು ದವಸಧಾನ್ಯ ನೀರು ಇಟ್ಟಿದ್ದೇನೆ ಇದನ್ನು ತೆಗೆದುಕೋ ಎಂದು ಹೇಳಿ ಮರದ ಕೆಳಗೆ ಇಟ್ಟನು.
ಸಪ್ತಾಹ ಮಾಡಲು ಪಕ್ಕದ ಗ್ರಾಮಕ್ಕೆ ಪಂಡಿತನು ಹೊರಟನು. ಅವನು ಹೋದ ಸ್ವಲ್ಪಹೊತ್ತಿನಲ್ಲೇ ಹಕ್ಕಿಯು ಅವನ ಹಿಂದೆಯೇ ಹಾರಿ ಬಂದಿತು.ತಿರುಗಿ ನೋಡಿದ ಪಂಡಿತನು ಪಕ್ಷಿಯೇ ನಾನು ಏಳುದಿನಗಳ ಭಾಗವತ ಮಾಡಲು ದೂರದ ಹಳ್ಳಿಗೆ ಹೋಗುತ್ತಿದ್ದೇನೆ ನೀನು ಗೂಡಿಗೆ ಹೋಗು ಎಂದನು. ಆದರೆ ಹಕ್ಕಿ ಕೇಳದೆ ಅವರ ಹಿಂದೆ ಹಿಂದೆಯೇ ಹಾರುತ್ತ ಬಂದು ಭಾಗವತ ಹೇಳುತ್ತಿದ್ದ ಜಾಗದ ಸಮೀಪದಲ್ಲೇ ಇದ್ದ ಮರದ ಮೇಲೆ ಕುಳಿತು
ಏಳು ದಿನಗಳ ತನಕವು ಭಾಗವತ ಸಪ್ತಾಹ ವನ್ನು ಕೇಳಿತು. ನಂತರ ಪಂಡಿತನು ಮನೆಗೆ ಹೊರಟನು ಅವನ ಹಿಂದೆ ತಾನು ಗೂಡಿಗೆ ಬಂದಿತು. ಆ ದಿನ ರಾತ್ರಿ ಪಂಡಿತನು ಮಲಗಿರುವಾಗ ಪಕ್ಷಿ ಜೋರಾಗಿ ಅಳುತ್ತಿರುವುದು ಕೇಳಿತು. ಹೊರಗೆ ಮರದ ಹತ್ತಿರ ಬಂದು ಪಕ್ಷಿಯೇ ಏಕೆ ಅಳುತ್ತಿರುವೆ ನಿನಗೆ ಬಾಯಾರಿಕೆ ಆಗಿದೆಯೇ ಹಸಿವಾಗಿದೆಯೇ, ಹೇಳು ಕೊಡುತ್ತೇನೆ ಎಂದನು.
ಇದ್ದಕ್ಕಿದ್ದಂತೆ ಹಕ್ಕಿ ಮಾತಾಡತೊಡಗಿತು. ಪಂಡಿತರೆ, ನಾನೊಬ್ಬಳು ರಾಜಕುಮಾರಿ, ಪೂರ್ವಜನ್ಮದಲ್ಲಿ ನೀವು ಮಹರ್ಷಿ ಗಳಾಗಿದ್ದು ಊರಿನ ಜನಗಳಿಗೆ ಭಾಗವತವನ್ನು ಹೇಳುತ್ತಿದ್ದೀರಿ. ರಾಜಕುಮಾರಿಯಾದ ನಾನು
ಒಂದು ದಿನ, ತಿರುಗಾಡುತ್ತಾ ತಿರುಗಾಡುತ್ತಾ ಒಂದು ದಿನ ಅಲ್ಲಿಗೆ ಬಂದೆ, ಹಾಗೂ ನಿಮ್ಮನ್ನು ನೋಡಿ ವ್ಯಂಗ್ಯದಿಂದ ಗಹಗಹಿಸಿ ನಕ್ಕೆ, ಆಗ ನೀವು ಹೇಳುವ ಭಾಗವತವು ಅರ್ಧಕ್ಕೆ ನಿಂತು ಹೋಯಿತು. ನೀವು ಕೋಪದಿಂದ ನೀನು ಮುಂದಿನ ಜನ್ಮದಲ್ಲಿ ನಗಲಾಗದ ಹಕ್ಕಿಯಾಗು ಎಂದು ಶಾಪ ಕೊಟ್ಟಿರಿ. ನನಗೆ ಅರ್ಥವಾಗಿ ನಿಮ್ಮ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದೆ. ಆಗ ಸಮಾಧಾನಗೊಂಡ ನೀವು, ಮುಂದಿನ ಜನ್ಮದಲ್ಲಿ ನೀನು ಹಕ್ಕಿಯಾದರೆ, ನಾನು ಅದೇ ಊರಿನಲ್ಲಿ ಪಂಡಿತನಾಗಿ ಜನ್ಮತಾಳಿ. ಪ್ರತಿನಿತ್ಯವೂ ಭಾಗವತವನ್ನು ಮಾಡುತ್ತೇನೆ. ನೀನು ಭಾಗವತವನ್ನು ಕೇಳುತ್ತಾ 7 ವರ್ಷ ಕಳೆಯಬೇಕು ಹಾಗೂ ಒಂದು ಸಪ್ತಾಹ ವನ್ನು ಕೇಳಬೇಕು ಆಗ ನಿನ್ನ ಹಕ್ಕಿಯ ಜನ್ಮದಿಂದ ಮುಕ್ತಿಯಾಗಿ ವಿಷ್ಣು ಸಾಯುಜ್ಯ ಪದವಿಯನ್ನು ಪಡೆಯುವೆ. ಈ ರೀತಿ ಶಾಪದಿಂದ ನನಗೆ ಮುಕ್ತಿ ಮಾರ್ಗವನ್ನು ತೋರಿಸಿದಿರಿ. ನಾನು ಇದೇ ಮರದಲ್ಲಿ ವಾಸವಿದ್ದು ನಿಮ್ಮ ಭಾಗವತವನ್ನು ಕೇಳುತ್ತಾ ಏಳು ವರ್ಷಗಳು ಆಯಿತು ಹಾಗೂ ಪಕ್ಕದ ಊರಿಗೆ ಬಂದು ನೀವು ಮಾಡುತ್ತಿದ್ದ ಭಾಗವತ ಸಪ್ತಾಹವನ್ನು ಕೇಳಿದೆ. ಆದ್ದರಿಂದ ನನ್ನ ಶಾಪ ವಿಮೋಚನೆಯಾಗಿ ನಾಳೆ ದಿನ ಸೂರ್ಯೋದಯ ಆಗುತ್ತಿದ್ದಂತೆ ನಾನು ಸ್ವರ್ಗ ಲೋಕಕ್ಕೆ ಹೋಗುತ್ತೇನೆ ಎಂದಿತು.
ಇದನ್ನು ಕೇಳಿದ ಪಟ್ಟ ಪಂಡಿತನು ಹಾಗಾದರೆ ಸಂತೋಷ ಪಡುವ ವಿಷಯ ಆದರೆ ನೀನು ಏಕೆ ಅಳುತ್ತಿರುವೆ ಎಂದನು. ಆಗ ಹಕ್ಕಿಯು, ಪಂಡಿತರೇ ನಾನು ಏಳು ವರ್ಷಗಳಿಂದ ನಿಮ್ಮ ಭಾಗವತ ಕಥಾಕಾಲಕ್ಷೇಪ ವನ್ನು ಕೇಳುತ್ತಾ ಬಂದಿದ್ದೇನೆ. ಇದರಿಂದ ನನಗೆ ಅತೀವ ಆನಂದವಾಗುತ್ತಿತ್ತು. ಸಾಕ್ಷಾತ್ ವಿಷ್ಣು ದರ್ಶನ ಕೊಟ್ಟಷ್ಟೇ ಸಂತೋಷವಾಗಿತ್ತು .ಇನ್ನು ಅಂತಹ ಸುಂದರವಾದ ಭಾಗವತ ಕೇಳುವುದನ್ನು ಬಿಟ್ಟು ಸ್ವರ್ಗಲೋಕಕ್ಕೆ ಹೋಗಬೇಕಲ್ಲ ಇದೇ ಚಿಂತೆಯಾಗಿದೆ. ನಾನು ಭಾಗವತ ಕೇಳುವುದನ್ನು ಬಿಟ್ಟು ಎಲ್ಲಿಗೂ ಹೋಗಲು ಇಷ್ಟವಿಲ್ಲ ಎಂದಿತು. ಆಗ ಪಂಡಿತನು, ನೀನು ಪುಣ್ಯವಂತೆ. ಭಾಗವತ ಕೇಳುವುದೇ ವಿಷ್ಣು ಸಾಯುಜ್ಯ ಪಡೆಯುವುದಕ್ಕಾಗಿ, ಸಾಕ್ಷಾತ್ ಶ್ರೀಹರಿಯೇ ಭಾಗವತ. ಒಂದು ಸಾರಿ ಭಾಗವತ ಕೇಳಿದರೇನೇ ವಿಷ್ಣು ತನ್ನ ಚರಣದಲ್ಲಿ ಸ್ಥಾನ ನೀಡುತ್ತಾನೆ. ಅಂತಹದರಲ್ಲಿ ನೀನು ಬಿಡದೆ ಏಳು ವರ್ಷಗಳ ಕಾಲ ಭಾಗವತ ಕೇಳಿರುವೆ. ನೀನಗೆ ಖಂಡಿತ ವಿಷ್ಣು ಸಾನಿದ್ಯವಿರುವ ವೈಕುಂಠ ಪ್ರಾಪ್ತಿಯಾಗುತ್ತದೆ. ಈಗ ಸಂತೋಷವಾಗಿ ಸ್ವರ್ಗಕ್ಕೆ ಹೋಗು ಎಂದು ಪಂಡಿತನು ಆಶೀರ್ವದಿಸಿದನು. ಪಕ್ಷಿ ಆನಂದದಿಂದ ಸ್ವರ್ಗಲೋಕಕ್ಕೆ ಹೋಯಿತು.
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು!
ಜಗದುದರನ ಅತಿ ವಿಮಲ ಗುಣ ರೂಪಗಳನು ಆಲೋಚನದಿ
ಭಾರತ ನಿಗಮತತಿಗಳ ಅತಿಕ್ರಮಿಸಿ ಕ್ರಿಯಾ ವಿಶೇಷಗಳ
ಬಗೆಬಗೆಯ ನೂತನವ ಕಾಣುತ ಮಿಗೆ ಹರುಷದಿಂ ಪೊಗಳಿ ಹಿಗ್ಗುವ ತ್ರಿಗುಣ ಮಾನಿ ಮಹಾಲಕ್ಷ್ಮಿಗೆ ಸಂತೈಸಲಿ ಅನುದಿನವು.
ಕೃಪೆ : ವಾಟ್ಸಪ್ಪ್
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ .*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. ಸಂಪಾದಕೀಯ ಶಾಖೆ ಮಂಗಳೂರು.ಮೊಬೈಲ್ +919945295560 ಮುಖ್ಯ ಕಛೇರಿ ಯುರೋಪ್.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. WhatsApp:https://chat.whatsapp.com/ISbrOeVLYcP5M7irDdsxKc
⬆️ಇಲ್ಲಿ ಕ್ಲಿಕ್ ಮಾಡಿ.
[01/02, 6:47 PM] +91 91644 68888: 🔯 ಆಧ್ಯಾತ್ಮಿಕ ವಿಚಾರ.🔯
*ದೈನಂದಿನ ಪ್ರಾರ್ಥನಾ ಶ್ಲೋಕಗಳಿವು.. ಪ್ರತಿನಿತ್ಯ ಈ ಶ್ಲೋಕಗಳನ್ನು ತಪ್ಪದೇ ಪಠಿಸಿ*
*ಪ್ರತಿನಿತ್ಯದ ದೇವರ ಪೂಜೆಯಲ್ಲಿ ಹೂವು, ದೀಪ ಎಷ್ಟು ಮುಖ್ಯವೋ ಅಷ್ಟೇ ದೈನಂದಿನ ಪ್ರಾರ್ಥನಾ ಶ್ಲೋಕಗಳು ಕೂಡ ಮುಖ್ಯವಾದವುಗಳಾಗಿವೆ. ದಿನನಿತ್ಯ ಪಠಿಸಬೇಕಾದ ಪ್ರಾರ್ಥನಾ ಶ್ಲೋಕಗಳಾವುವು..? ದಿನನಿತ್ಯ ಪ್ರಾರ್ಥನಾ ಶ್ಲೋಕಗಳನ್ನು ಪಠಿಸುವುದರಿಂದಾಗುವ ಪ್ರಯೋಜನಗಳೇನು..?*
ಪ್ರತಿನಿತ್ಯ ನಾವು ದೇವರನ್ನು ಪೂಜಿಸುವಾಗ ದೇವರೇ ನನಗೆ ಅದನ್ನು, ಇದನ್ನು ಕರುಣಿಸು ಎಂದು ಕೇಳುತ್ತೇವೆ. ಆದರೆ ನಾವೆಂದಿಗೂ ಕೂಡ ದೇವರ ಬಳಿ ಏನನ್ನಾದರೂ ಬೇಡುವ ಮುನ್ನ ಅವನನ್ನು ಸಂತೋಷಗೊಳಿಸಬೇಕೆಂದು ಯೋಚಿಸುವುದಿಲ್ಲ. ಹೌದು, ನಮ್ಮ ಬಯಕೆಗಳನ್ನು, ಆಸೆ , ಆಕಾಂಕ್ಷೆಗಳನ್ನು ದೇವರು ಪೂರೈಸಬೇಕಾದರೆ ಅವನನ್ನು ಸಂತೋಷಗೊಳಿಸಬೇಕು.
ದೇವರನ್ನು ನಮ್ಮ ಪ್ರತಿನಿತ್ಯ ಆರಾಧನೆಯಲ್ಲಿ ಅಥವಾ ಪೂಜೆಯಲ್ಲಿ ಸಂತೋಷಗಳಿಸುವ ಪ್ರಮುಖ ವಿಧಾನಗಳಲ್ಲಿ ಪ್ರಾರ್ಥನಾ ಶ್ಲೋಕಗಳು ಕೂಡ ಒಂದು. ನಾವು ಎಲ್ಲಾ ದೇವರಿಗೂ ಒಂದೇ ಪ್ರಾರ್ಥನಾ ಶ್ಲೋಕವನ್ನು ಹೇಳಿದರೆ ಅದರಿಂದ ಏನೂ ಪ್ರಯೋಜನವಿಲ್ಲ. ಪ್ರತಿಯೊಂದು ದೇವರಿಗೂ ಪ್ರಾರ್ಥನಾ ಶ್ಲೋಕಗಳಿವೆ. ನಮ್ಮ ದಿನನಿತ್ಯದ ಪೂಜೆಯಲ್ಲಿ ಯಾವ ದೇವರಿಗೆ ಯಾವ ಶ್ಲೋಕವನ್ನು ಹೇಳಬೇಕು ನೋಡಿ:
1) *ಶ್ರೀ ಗಣಪತಿ ಶ್ಲೋಕ:*
ಎಲ್ಲಾ ಶುಭ ಸಮಾರಂಭದ ಆರಂಭ ಭಗವಾನ್ ಗಣೇಶ. ಪ್ರಥಮ ವಂದಿತನೀತ. ವಿಘ್ನನಿವಾರಕನೀತ. ಪ್ರತಿಯೊಂದು ಹಬ್ಬದಲ್ಲೂ ಅಷ್ಟೇ ಯಾಕೆ. ನಾವು ನಾಳೆ ಆಚರಿಸಲಿರುವ ಮಂಗಳ ಗೌರಿ ವ್ರತದಲ್ಲೂ ಮೊದಲ ಪೂಜೆ ಗಣೇಶನಿಗೆ ಸಲ್ಲತಕ್ಕದ್ದು. ಹಾಗಂದ ಮೇಲೆ ಗಣೇಶನಿಗೆ ಪ್ರಾರ್ಥನಾ ಶ್ಲೋಕ ಬೇಕೇ ಬೇಕಲ್ಲವೇ..?
ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಂ |
ಅನೇಕ ದಂ ತಂ ಭಕ್ತಾನಾಂ ಏಕದಂತ ಮುಪಾಸ್ಮಹೇ ||
2) *ಶ್ರೀ ಶಾರದಾ ಶ್ಲೋಕ:*
ಯಾಕುಂದೇಂದು ತುಷಾರ ಹಾರಧವಳಾ | ಯಾ ಶುಭ್ರ ವಸ್ತ್ರಾನ್ವಿತಾ |
ಯಾ ವೀಣಾ ವರದಂಡ ಮಂಡಿತಕರಾ | ಯಾ ಶ್ವೇತ ಪದ್ಮಾಸನಾ ||
ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್ದೇವೈಃ ಸದಾ ಪೂಜಿತಾ |
ಸಾ ಮಾಂ ಪಾತು ಸರಸ್ವತೀಂ ಭಗವತೀಂ ನಿಃಶೇಷ ಜಾಡ್ಯಾಪಹಾ ||
3) *ಶ್ರೀ ಕೃಷ್ಣ ಶ್ಲೋಕ:*
ವಸುದೇವಸುತಂ ದೇವಂ ಕಂಸ ಚಾಣೂರ ಮರ್ದನಂ|
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ||
4) *ಶ್ರೀ ರಾಮ ಶ್ಲೋಕ:*
ವೈದೇಹಿ ಸಹಿತಂ ಸುರದ್ರು ಮತಲೇ ಹೈಮೇ ಮಹಾಮಂಟಪೇ
ಮಧ್ಯೇ ಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸುಸ್ಥಿತಂ |
ಅಗ್ರೇ ವಾಚಯತಿ ಪ್ರಭಂಜನಸುತೇ ತತ್ತ್ವಂ ಮುನಿಭ್ಯ: ಪರಂ
ವ್ಯಾಖ್ಯಾಂತಂ ಭರತಾದಿಭಿ: ಪರಿವೃತಂ ರಾಮಂ ಭಜೇ ಶ್ಯಾಮಲಮ್ ||
5) *ಶ್ರೀ ರಾಮ ಶ್ಲೋಕ:*
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯಾ: ಪತಯೇ ನಮ: ||
6) *ನವಗ್ರಹ ಶ್ಲೋಕ:*
ನಮ: ಸೂರ್ಯಾಯ ಚಂದ್ರಾಯ ಮಂಗಲಾಯ ಬುಧಾಯ ಚ |
ಗುರುಶುಕ್ರಶ್ಯನಿಭ್ಯಶ್ಚ ರಾಹುವೇ ಕೇತುವೇ ನಮ: ||
7) *ಶ್ರೀ ಲಕ್ಷ್ಮಿ ಶ್ಲೋಕ:*
ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ ||
8) *ಶ್ರೀ ಲಕ್ಷ್ಮಿನರಸಿಂಹ ಶ್ಲೋಕ:*
ಶ್ರೀಮತ್ಪಯೋನಿಧಿ ನಿಕೇತನ ಚಕ್ರಪಾಣೇ
ಭೋಗೀಂದ್ರ ಭೋಗ ಮಣಿರಂಜಿತ-ಪುಣ್ಯಮೂರ್ತೇ |
ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿಪೋತ
ಲಕ್ಷ್ಮಿನರಸಿಂಹ ಮಮ ದೇಹಿ ಕರಾವಲಂಬಂ ||
9) *ಶ್ರೀ ಶಿವ ಶ್ಲೋಕ:*
ಪ್ರಭೋ ಶೂಲಪಾಣಿ ವಿಭೋ ವಿಶ್ವನಾಥ
ಮಹಾದೇವ ಶಂಭೋ ಮಹೇಶ: ತ್ರಿನೇತ್ರ: |
ಶಿವಾಕಾಂತ: ಶಾಂತಸ್ಸ್ಮರಾರೇ ಪುರಾರೇ
ತ್ವ ದನ್ಯೋ ವರೇಣ್ಯೋ ನ ಮಾಸೇ ನ ಗಣ್ಯ: ||
10) *ಶ್ರೀ ಶಿವ ಮೃತ್ಯುಂಜಯ ಶ್ಲೋಕ:*
ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ |
ಅಮೃತೇಶಾಯ ಸರ್ವಾಯ ಮಹಾದೇವಾಯ ತೇ ನಮ: ||
11) *ಶ್ರೀ ಮಹಾಮೃತ್ಯುಂಜಯ ಶ್ಲೋಕ:*
ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ |
ಉರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷೀಯಮಾಮೃತಾತ್ ||.
12) *ಶ್ರೀ ಆಂಜನೇಯ ಶ್ಲೋಕ:*
ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಂ ಆರೋಗ್ಯತಾ |
ಅಜಾಡ್ಯಂ ವಾಕ್ಪಟುತ್ವಂ ಚ ಹನುಮತ್ ಸ್ಮರಣಾದ್ ಭವೇತ್ ||
13) *ಶ್ರೀ ಆಂಜನೇಯ ಶ್ಲೋಕ:*
ಮನೋಜವಂ ಮಾರುತತುಲ್ಯವೇಗಂ |
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ||
ವಾತಾತ್ಮಜಂ ವಾನರಯೂಥ ಮುಖ್ಯಂ |
ಶ್ರೀರಾಮದೂತಂ ಶಿರಸಾ ನಮಾಮಿ ||
14) *ಶ್ರೀ ವಿಷ್ಣು ಶ್ಲೋಕ:*
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ |
ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಂ ||
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಭಿರ್ಧ್ಯಾನ ಗಮ್ಯಂ |
ವಂದೇ ವಿಷ್ಣುಂ ಭವಭಯ ಹರಂ ಸರ್ವಲೋಕೈಕನಾಥಂ ||
15) *ಶ್ರೀ ದತ್ತಾತ್ರೇಯ ಶ್ಲೋಕ:*
ಜಟಾಧರಂ ಪಾಂಡುರಂಗಂ ಶೂಲಹಸ್ತ ಕೃಪಾನಿಧಿಂ |
ಸರ್ವರೋಗ ಹರಂ ದೇವಂ ದತ್ತಾತ್ರೇಯಮಹಂ ಭಜೇ ||
16) *ಶ್ರೀ ರಾಘವೇಂದ್ರ ಶ್ಲೋಕ :*
ಪೂಜ್ಯಾಯ ರಾಘವೇಂದ್ರಾಯ ಸಥ್ಯಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಯ ನಮತಾಂ ಕಾಮಧೇನವೇ
ದುರ್ವಾಧಿದ್ವಾಂತರವಯೇ ವೈಷ್ಣವೇಂದೀವರೇಂದವೇ
ಶ್ರೀ ರಾಘವೇಂದ್ರ ಗುರುವೇ ನಮೊತ್ಯಂತ ದಯಾಲವೇ
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ .*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. ಸಂಪಾದಕೀಯ ಶಾಖೆ ಮಂಗಳೂರು.ಮೊಬೈಲ್ +919945295560 ಮುಖ್ಯ ಕಛೇರಿ ಯುರೋಪ್.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. WhatsApp:https://chat.whatsapp.com/ISbrOeVLYcP5M7irDdsxKc
⬆️ಇಲ್ಲಿ ಕ್ಲಿಕ್ ಮಾಡಿ.
Post a Comment