[02/02, 10:12 PM] +91 91644 68888: 🔯 ಆಧ್ಯಾತ್ಮಿಕ ವಿಚಾರ.🔯
*ಕೃಷ್ಣವೇಣೀ ತೀರಸಂಸ್ಥಂ| ಕಾರ್ಪರ ಗ್ರಾಮವಾಸಿನಂ||*
*ತತ್ತೀರೇ ಪಿಪ್ಪಲಸ್ಥಂ| ಶ್ರೀ ನೃಸಿಂಹಂ ಮನಸಾ ನಮೇ||*
*ನಿತ್ಯ ಪಂಚಾಂಗ NITYA PANCHANGA 03.02.2023 FRIDAY ಶುಕ್ರವಾರ*
*----------------------*
*SAMVATSARA :* SHUBHAKRAT.
*ಸಂವತ್ಸರ:* ಶುಭಕೃತ್.
*AYANA:* UTTARAAYANA.
*ಆಯಣ:* ಉತ್ತರಾಯಣ.
*RUTHU:* SHISHIRA.
*ಋತು:* ಶಿಶಿರ.
*MAASA:* MAGHA.
*ಮಾಸ:* ಮಾಘ.
*PAKSHA:* SHUKLA.
*ಪಕ್ಷ:* ಶುಕ್ಲ.
*----------------------*
*TITHI:* TRAYODASHI.
*ತಿಥಿ:* ತ್ರಯೋದಶೀ.
*----------------------*
*SHRADDHA TITHI:* TRAYODASHI.
*ಶ್ರಾದ್ಧ ತಿಥಿ:* ತ್ರಯೋದಶೀ.
*_________________*
*VAASARA:* BARGAVAASARA.
*ವಾಸರ:* ಭಾರ್ಗವಾಸರ.
*NAKSHATRA:* PUNARVASU.
*ನಕ್ಷತ್ರ:* ಪುನರ್ವಸು.
*YOGA:* VISHKAMBHA.
*ಯೋಗ:* ವಿಷ್ಕಂಭ.
*KARANA:* TAITILA.
*ಕರಣ:* ತೈತಿಲ.
*-----------------------*
*ಸೂರ್ಯೊದಯ (Sunrise):* 06.58
*ಸೂರ್ಯಾಸ್ತ (Sunset):* 06:24
*----------------------*
*ರಾಹು ಕಾಲ (RAHU KAALA) :* 10:30AM To 12:00PM.
*ದಿನ ವಿಶೇಷ (SPECIAL EVENT'S)*
*03.02.2023*
*ಕಲ್ಪಾದಿ,ಶಿಂಶುಮಾರ ಜಯಂತೀ, ಅಂತ್ಯಪುಷ್ಕರಣೀ.*
*KALPAADI, SHINSHUMARA JAYANTI, ANTYA PUSHKARANI.*
*Quote of the day*:
श्रूयतां धर्मसर्वस्वं, श्रुत्वा चैवावधार्यताम्। आत्मनः प्रतिकूलानि, परेषां न समाचरेत्।।
Hindi Translation:- धर्म का सार तत्व यह है कि जो आप को बुरा लगता है वह काम आप दूसरों के लिए भी न करें ।
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ .*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. ಸಂಪಾದಕೀಯ ಶಾಖೆ ಮಂಗಳೂರು.ಮೊಬೈಲ್ +919945295560 ಮುಖ್ಯ ಕಛೇರಿ ಯುರೋಪ್.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. WhatsApp:https://chat.whatsapp.com/ISbrOeVLYcP5M7irDdsxKc
⬆️ಇಲ್ಲಿ ಕ್ಲಿಕ್ ಮಾಡಿ.
[02/02, 10:12 PM] +91 91644 68888: 🔯 ಆಧ್ಯಾತ್ಮಿಕ ವಿಚಾರ.🔯
*ಗೀತಾಂತರಂಗ - 209*
*ಅಜ್ಞಾನದ ಕುರಿತಾದ ಅಜ್ಞಾನ || (3-26)*
ಅನೇಕರು ತಮ್ಮ ಜೀವನದಲ್ಲಿ ಹೆಚ್ಚಿನ ವೇಳೆ ಮಾನಸಿಕವಾಗಿ ಕೊರಗುತ್ತಲೇ ಇರುತ್ತಾರೆ. ತನ್ಮೂಲಕ ಶಾರೀರಿಕವಾಗಿ, ಸೊರಗುತ್ತಲೂ ಇರುತ್ತಾರೆ. ಇವಕ್ಕೆಲ್ಲ ಮೂಲ ಕಾರಣ ಅಜ್ಞಾನ. ಈ ಅಜ್ಞಾನವೆಂಬುದು ಬಹಳ ವಿಚಿತ್ರವಾದದ್ದು. ಅಜ್ಞಾನದ ಕುರಿತಾಗಿ ಅನೇಕರು ಅನೇಕ ರೀತಿಯಿಂದ ವಿವರಿಸಿರುವುದನ್ನು ನಾವು ಕೇಳಿರುತ್ತೇವೆ, ಅಥವಾ ಓದಿರುತ್ತೇವೆ. ಆದರೂ `ನನ್ನಲ್ಲಿ ಅಜ್ಞಾನವಿದೆ’ ಎಂದು ಬಹುಶಃ ಯಾರೂ ಒಮ್ಮೇಲೆ ಒಪ್ಪಿಕೊಳ್ಳಲಾರರು. ಏಕೆಂದರೆ ಅಜ್ಞಾನದ ಮಹಾತ್ಮೆಯೇ ಹಾಗೆ. ನಿದ್ದೆ ಮಾಡುತ್ತಿರುವವನಿಗೆ, ಅವನು ಎಷ್ಟೇ ದೊಡ್ಡ ಮನಃಶಾಸ್ತ್ರಜ್ಞನೇ ಆಗಿದ್ದರೂ, `ತಾನು ಈಗ ನಿದ್ದೆ ಮಾಡುತ್ತಿದ್ದೇನೆ’ ಎಂದು ಆ ಕಾಲದಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲ. ನಿದ್ದೆಯಿಂದ ಎಚ್ಚೆತ್ತುಕೊಂಡ ನಂತರವೇ ಈ ಹಿಂದೆ ನಾನು ನಿದ್ದೆ ಮಾಡುತ್ತಿದ್ದೆ ಎಂಬುದು ಗೊತ್ತಾಗುತ್ತದೆ. ಹಾಗೆ ಜ್ಞಾನ ಬಂದ ನಂತರವೇ ಮೊದಲು ಇದ್ದ ಅಜ್ಞಾನದ ಅರಿವು ಉಂಟಾಗುತ್ತದೆ. ಕೆಲವೊಮ್ಮೆ ನಿದ್ದೆಯಲ್ಲಿಯೇ ಎಚ್ಚರವಾದಂತೆ ಸ್ವಪ್ನ ಬೀಳುವುದೂ ಉಂಟು. `ನಾನು ನಿದ್ದೆಯಿಂದ ಎಚ್ಚೆತ್ತುಕೊಂಡಿದ್ದೇನೆ. ಬೆಳಿಗಿನ ಎಂಟು ಗಂಟೆಯಾದರೂ ಉಳಿದವರೆಲ್ಲ ನಿದ್ದೆ ಮಾಡುತ್ತಿದ್ದಾರೆ. ನಾನೇ ಅವರನ್ನೆಲ್ಲ ತಟ್ಟಿ ಎಬ್ಬಿಸುತ್ತಿದ್ದೇನೆ’ ಎಂಬ ಸ್ವಪ್ನ ಬೀಳಬಹುದು. ಆ ನಂತರದಲ್ಲಿ “ಏ, ಏಳೋ” ಎಂದು ಹೇಳಿ ತಾಯಿ ಬಂದು ಮುಸುಕನ್ನು ತೆಗೆದರೆ ಎಂಟು ಗಂಟೆಯಲ್ಲ, ಒಂಬತ್ತು ಗಂಟೆಯಾಗಿದೆ. ಮಕ್ಕಳೆಲ್ಲರೂ ಆಗಲೇ ಶಾಲೆಗೆ ಹೋಗಿ ಆಗಿದೆ. ಅಂದರೆ, ‘ನಾನು ಎಚ್ಚರವಾಗಿದ್ದೇನೆ’ ಎಂಬ ಸ್ವಪ್ನವೂ ಬೀಳುತ್ತದೆ ಎಂದಾಯಿತು. ಆದರೆ ಆ ಸ್ವಪ್ನದಲ್ಲಿ ಕಂಡ ಎಚ್ಚರವು ನಿಜವಾದ ಎಚ್ಚರವಲ್ಲ. ಅಂತೆಯೇ, ನಮಗೆ ಅಜ್ಞಾನವಿದೆ, ಎಂದು ಯಾರಾದರೂ ಹೇಳಿದರೆ, ಏನೋ ಹೇಳುತ್ತಾರೆ, ಇದ್ದರೂ ಇರಬಹುದು ಎಂದು ಕೆಲವೊಮ್ಮೆ ಅನ್ನಿಸುತ್ತದೆ. ಆದರೆ ಆ ಅಜ್ಞಾನದ ಆಳವೆಷ್ಟು ಎಂಬ ಪರಿಜ್ಞಾನ ಇರುವುದಿಲ್ಲ. ಪಾರದರ್ಶಿಗಳಾದ ಜ್ಞಾನಿಗಳಿಗೆ ಮಾತ್ರ ಅರ್ಥವಾಗುವ ವಿಷಯವದು. ಆ ಮಟ್ಟದಲ್ಲಿ ಸಾಧನೆಯನ್ನು ಮಾಡಿ, ಜ್ಞಾನಿಗಳಾದವರು ಜ್ಞಾನಯೋಗಿಗಳೆಂದು ಕರೆಯಲ್ಪಡುತ್ತಾರೆ. ಯಾರು ಆ ಸ್ಥಿತಿಯನ್ನು ತಲುಪಲು ಪ್ರಯತ್ನವನ್ನು ಆರಂಭಿಸಿದ್ದಾರೋ, ಇನ್ನೂ ತಲುಪಿಲ್ಲವೋ, ಅವರು ಕರ್ಮಯೋಗಿಗಳೆನಿಸಿಕೊಳ್ಳುತ್ತಾರೆ. ನನಗೆ ಜ್ಞಾನ ಬಂದಿದೆಯೆಂದು ಭಾವಿಸಿಕೊಂಡು, ಜ್ಞಾನದ ಸಿದ್ಧಿಯೂ ಇಲ್ಲದೇ, ಕರ್ಮಯೋಗವನ್ನೂ ಪರಿತ್ಯಜಿಸಿ, ಉಭಯ ಭ್ರಷ್ಟರಾಗುವುದಕ್ಕಿಂತ ಕರ್ಮಯೋಗಿಯಾಗುವುದೇ ಒಳ್ಳೆಯದು. ಇದನ್ನು ಈ ಮೂರನೇ ಅಧ್ಯಾಯವು ಸ್ಪಷ್ಟವಾಗಿ ವಿವರಿಸುತ್ತದೆ.
*ವ್ಯಾಖ್ಯಾನ: ಶ್ರೀ ಶ್ರೀಮತ್ಪರಮಹಂಸಾದಿ ಬಿರುದಾಂಕಿತ ಶ್ರೀ ಶ್ರೀಮದ್ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀಸ್ವರ್ಣವಲ್ಲೀ ಮಹಾಸಂಸ್ಥಾನ*
*(ಇದರ ಸಂಪೂರ್ಣ ಆವೃತ್ತಿ ಗೀತಾಂತರಂಗ ೧,೨,೩ ಪುಸ್ತಕಗಳು ಶ್ರೀಮಠದ ಭಗವತ್ಪಾದ ಪ್ರಕಾಶನದಲ್ಲಿ ಲಭ್ಯವಿದ್ದು ಆಸಕ್ತರು ಕೊಂಡುಕೊಳ್ಳಬಹುದು.08384-279359)*
(©® *ಶ್ರೀಭಗವತ್ಪಾದ ಪ್ರಕಾಶನ*)
*ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ*
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ .*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. ಸಂಪಾದಕೀಯ ಶಾಖೆ ಮಂಗಳೂರು.ಮೊಬೈಲ್ +919945295560 ಮುಖ್ಯ ಕಛೇರಿ ಯುರೋಪ್.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. WhatsApp:https://chat.whatsapp.com/ISbrOeVLYcP5M7irDdsxKc
⬆️ಇಲ್ಲಿ ಕ್ಲಿಕ್ ಮಾಡಿ.
Post a Comment