[29/03, 9:29 PM] +91 96117 15956: 30-03-2023 ಗುರುವಾರ ಶ್ರೀ ರಾಮನವಮಿ
ಶ್ರೀಪಟ್ಟಾಭಿರಾಮಚಂದ್ರ
ಶ್ರೀಸಂಸಾರಿ:_
ಶ್ರಿರಾಮನು ತಾನೊಬ್ಬನೆ ಎಲ್ಲೂ ಪೂಜೆಗೊಳ್ಳುವುದು ಕಂಡಿಲ್ಲ
ಹೋಗಿ ನೋಡಿ ನೀವ್ಯಾವುದೆ ಊರಿನ ಯಾವುದೆ ರಾಮನ ಗುಡಿಗೆ!
ಯಾವುದೇ ಮನೆಯ ಗೋಡೆಯ ಮೇಲಿನ ಪಠವನ್ನಾದರು ನೋಡಿ
ರಾಮನೊಬ್ಬನೇ ಎಂದೂ ಎಲ್ಲೂ ಬಾರನು ಪೂಜೆಯ ಮಣೆಗೆ
ಎಡಕ್ಕೆ ಸೀತ, ಬಲಕ್ಕೆ ಲಕ್ಷ್ಮಣ, ಕಾಲ ಕೆಳಗೆ ಹನುಮಂತ
ಕೆಲವು ಪಠದಲ್ಲಿ ತಮ್ಮ ಶತೃಘ್ನ ಚಾಮರ ಹಾಕುವ ಭಂಗಿ
ಹಿಂದೆ ಕೊಡೆ ಹಿಡಿದ ಭರತ, ವಿಭೀಷಣ-ಜಾಂಬವ-ದೊರೆ ಸುಗ್ರೀವ.
ಉಳಿದ ದೇವರಂತೆ ರಾಮ ಒಬ್ಬನೆ ಪೂಜೆಯ ಕೊಳ್ಳನು
ರಾಮಪೂಜೆ ಬರಿ ರಾಮನ ಪೂಜೆಯೆ? ಅದೊಂದು ಕುಟುಂಬ ಪೂಜೆ
ಎಷ್ಟು ವಿಶಾಲ...ಎಷ್ಟು ವಿಸ್ತೃತ...ಶ್ರಿರಾಮನ ಈ ಸಂಸಾರ!
ಇದು ತಾನಾಯಿತು ತನ್ನ ಕಣ್ಗೊಂಬೆ ತಾನಾಯಿತು-ಚೌಕಟ್ಟಲ್ಲ.
ರಾಮ ಸಂಸಾರ ಒಟ್ಟು ಸಂಸಾರ. ತಮ್ಮಂದಿರು ನಾದಿನಿ ತಾಯಿ
ಆಳು ಕಾಳಿಗೂ ಮನ್ನಣೆಯುಂಟು. ಜೊತೆಗೆ ಗೆಳೆಯರಿಗು ಕೂಡ
ಅಯೋಧ್ಯೆಯಲ್ಲೇ ಲಂಕೆ-ಕಿಷ್ಕಿಂಧ-ಗುಡ್ಡಗಾಡು ಸೇರಿರಲು
ಆರ್ಯ-ದ್ರಾವಿಡ-ಆದಿವಾಸಿಗೂ ರಾಮಪೂಜೆಯಲಿ ಪಾಲು
ಶ್ರೀರಾಮಚಂದ್ರ ಎಂಬುವ ದಿವ್ಯಮೌಲ್ಯ
ರಾಮಾಯಣವನ್ನು ವಾಲ್ಮೀಕಿ ಮಹರ್ಷಿಯವರು ರಚಿಸುವುದಕ್ಕೆ ಪೂರ್ವಭಾವಿಯಾಗಿ ವಾಲ್ಮೀಕಿ ಮಹರ್ಷಿಗಳಿಗೆ, ನಾರದ ಮಹರ್ಷಿಗಳಿಂದ ಪ್ರೇರಣೆ ಒದಗುವ ಒಂದು ಸಂಭಾಷಣೆ ಇದೆ. ಈ ಸಂಭಾಷಣೆಯಲ್ಲಿ ನಾರದ ಮಹರ್ಷಿಗಳನ್ನು ಮುನಿಶ್ರೇಷ್ಠರಾದ ವಾಲ್ಮೀಕಿ ಪ್ರಶ್ನಿಸುತ್ತಾರೆ:
“ಈ ಲೋಕದಲ್ಲಿ ಈಗ ಸಕಲ ಸದ್ಗುಣ ಸಂಪನ್ನ, ಪರಾಕ್ರಮಶಾಲಿ, ಧರ್ಮಜ್ಞ, ಸತ್ಯದ ವ್ರತ ಹಿಡಿದವನು, ಮಾಡಿದ ಸಂಕಲ್ಪವನ್ನು ಬಿಡದವನು, ಪರಂಪರೆಯಾಗಿ ಬಂದ ಸದಾಚಾರ ಸಂಪನ್ನ, ಎಲ್ಲ ಭೂತಗಳ ಹಿತದಲ್ಲಿ ನಿರತ, ಸರ್ವಶಾಸ್ತ್ರಗಳನ್ನು ಬಲ್ಲವನು, ಸರ್ವ ಕಾರ್ಯ ದುರಂಧರ, ಪ್ರಿಯದರ್ಶನ, ಧೈರ್ಯಶಾಲಿ, ಕಾಂತಿಮಂತ, ಕೋಪವನ್ನು ಜಯಿಸಿದವನು, ಅಹಂಕಾರ ರಹಿತ, ಅಸೂಯೆ ಇಲ್ಲದವನು, ಯುದ್ಧಕ್ಕೆ ನಿಂತರೆ ದೇವತೆಗಳನ್ನೇ ಗೆಲ್ಲಬಲ್ಲವನು ಇದ್ದಾನೆಯೇ? - ಈ ಹದಿನಾರು ಗುಣಗಳಿಂದ ಕೂಡಿದಂಥವ ಈಗ ಲೋಕದಲ್ಲಿ ಇದ್ದರೆ ದಯವಿಟ್ಟು ತಿಳಿಸಿ."
ವಾಲ್ಮೀಕಿಗಳ ಈ ಪ್ರಶ್ನೆಯನ್ನು ಕೇಳಿದ ನಾರದರು ಸಂತೋಷದಿಂದ ವಾಲ್ಮೀಕಿಗಳಿಗೆ “ನೀವು ಕೇಳುವಂತೆ ಸಕಲ ಗುಣಗಳಿಂದ ಕೂಡಿದವನು ಇದ್ದಾನೆ. ಅವನೇ ಇಕ್ಷ್ವಾಕು ವಂಶದಲ್ಲಿ ಅವತರಿಸಿದ ಶ್ರೀರಾಮ” ಎಂದು ಶ್ರೀರಾಮನ ಕಥೆಯನ್ನು ವಿವರಿಸುತ್ತಾರೆ.
ಮೇಲೆ ಹೇಳಿದ ಒಂದೊಂದು ಗುಣಕ್ಕೂ ಶ್ರೀರಾಮಚಂದ್ರನ ಕಥೆ ತಿಳಿದವರಿಗೆ ಅರ್ಥ ತಿಳಿದಿರುತ್ತದೆ. ಅದರಲ್ಲಿ “ಧರ್ಮಜ್ಞ” ಎಂಬ ಮಾತಿದೆ. ಜಗತ್ತಿನಲ್ಲಿ ಧರ್ಮವನ್ನು ಸಂಸ್ಥಾಪಿಸಲು ಅವತಾರವೆತ್ತಿದ ಶ್ರೀರಾಮ, ಕೈಕೇಯಿಗೆ ಹೀಗೆ ಹೇಳುತ್ತಾನೆ “ನನಗೆ ಹಣ, ರಾಜ್ಯ, ಭೋಗ ಭಾಗ್ಯ ಇವೆಲ್ಲದರ ಚಿಂತೆ ಇಲ್ಲ. ಧರ್ಮಾಚರಣೆಯೇ ನನ್ನ ವ್ರತ”. ಹಾಗೆಯೇ “ಶುದ್ಧಚಾರಿತ್ರ್ಯ” ಎಂಬ ಮಾತು ಶ್ರೀರಾಮನ ವಿಚಾರದಲ್ಲಿ ಬರುತ್ತದೆ. ಅಂದರೆ ಬ್ರಹ್ಮಚರ್ಯ ನಿಷ್ಠೆಯಿಂದ ಕೂಡಿದವ. ಸರ್ವ ಭೂತಗಳಿಗೂ ಸದಾ ಹಿತವನ್ನೇ ಬಯಸತಕ್ಕವ. ವಿದ್ವಾಂಸನಾಗಿರುವವ. ಸರ್ವಶಾಸ್ತ್ರಗಳನ್ನೂ ತಿಳಿದವನು ಮಾತ್ರವಲ್ಲ ಅವೆಲ್ಲವನ್ನೂ ಯಥಾವತ್ತಾಗಿ ಅನುಷ್ಟಾನಕ್ಕೆ ತಂದಿರುವಂಥವ. ಎಂಥ ಕಷ್ಟಕಾರ್ಯವನ್ನಾದರೂ ಸಾಧಿಸುವಂತಹ ಧೃತಿಯುಳ್ಳವ.
ಹೀಗೆ ಶ್ರೀರಾಮಂಚಂದ್ರನ ಕಥೆಯನ್ನು ನಾವು ಕೇಳುತ್ತಾ, ಓದುತ್ತಾ ಹೋದಲ್ಲಿ ಅಲ್ಲಿ ಕಾಣುವುದು ಗುಣಗಳ ಸೊಬಗು. ಇದನ್ನು ನೋಡುವಾಗಲೆಲ್ಲಾ ಸೂಕ್ಷ್ಮವಾಗಿ ಅನಿಸುತ್ತದೆ. ಇಗ್ಲಿಷಿನಲ್ಲಿ ‘God’ ಅಂದರೆ, ಯಾವುದ್ಯಾವುದು ‘Good’ ಎಂಬುದಿದೆಯೋ ಅದರ ಸಂಗ್ರಹ ಸಾರಾಂಶವಾಗಿರಬಹುದಲ್ಲವೇ! ಅಂತ.
ಸುಮಾರು 5000 – 6000 ವರ್ಷಗಳಿಗೂ ಹಿಂದೆ ನಡೆದಿದ್ದೆಂದು ಊಹಿಸಲಾಗಿರುವ ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ಎಂಬ ವ್ಯಕ್ತಿ ಅದೆಷ್ಟೆಷ್ಟೋ ಹಿಂದಿನ ಸಹಸ್ರವರ್ಷಗಳ ಹಿಂದಿನಿಂದ ನಡೆದುಕೊಂಡು ಬಂದ ಶ್ರೇಷ್ಠ ಪರಂಪರೆಯನ್ನು ಈ ರೀತಿ ಮುಂದುವರೆಸಿದ ಎಂಬುದು ಭಾರತೀಯರಾದ ನಾವು ಅತ್ಯಂತ ಹೆಮ್ಮೆಪಟ್ಟುಕೊಳ್ಳಬೇಕಾದ ಸಂಗತಿ.
ಸಂಸಾರದ ಈ ಸಾರ ವ್ಯವಸ್ಥೆ ಪೂಜೆಗೊಳ್ವುದೀ ನೆಲದಲ್ಲಿ
ನಿತ್ಯಾರಾಧನೆ ನಿತ್ಯನೈವೇದ್ಯ ರಾಮನ ಪೂಜೆಯ ನೆವದಲ್ಲಿ
ವರ್ಗ ವರ್ಣ ವೈಷಮ್ಯ ಲೆಕ್ಕಿಸದೆ ಪೂಜೆಗೊಳ್ಳುತಿದೆ ಸಂಸಾರ
ಸ್ವರ್ಗವೆನ್ನುವುದು ಇನ್ನೆಲ್ಲಿರುವುದು-ಇಲ್ಲೇ.
ಶ್ರೀರಾಮಚಂದ್ರ ಹೇಳುವಂತೆ "ಅಭಯಂ ಸರ್ವ ಭೂತೇಭ್ಯೋ ದದಾಮಿ ಏತದ್ ವ್ರತಂ ಮಮಃ" ಅಂದರೆ 'ಯಾರು ನನ್ನಲ್ಲಿ ಶರಣು ಕೋರಿ ಬರುತ್ತಾರೋ ಅವರಿಗೆ ಜಗತ್ತಿನಿಂದ ರಕ್ಷಣೆ ಕೊಡುವುದು ನನ್ನ ವ್ರತ.
ಶ್ರೀ ರಾಮ ಜಯರಾಮ ಜಯ ಜಯ ರಾಮ.
ಲೋಕಾಃ ಸಮಸ್ತಾಃ ಸುಖಿನೋ ಭವಂತು.
[29/03, 10:12 PM] +91 89713 62063: 🌸🌸🌸🌸🌸🌸🌸
*#ಶ್ರೀರಾಮನವಮಿ_ಆಚರಣೆ_ವಿಧಿವಿಧಾನ*
🌸🌸🌸🌸🌸🌸🌸
ರಾಮ ನವಮಿ ಬಹಳ ಒಳ್ಳೆಯ ದಿನ
ಸ್ನೇಹಿತರೇ ಇವತ್ತು ನಾನು ನಿಮಗೆ ರಾಮಾ ನವಮಿ ಆಚರಣೆ ಯನ್ನು ಮನೆಯಲ್ಲಿಯೇ ಸರಳವಾಗಿ ಹೇಗೆ ಆಚರಿಸಬೇಕು ಅಂತ ಹೇಳಿ ಕೊಡುತ್ತೇನೆ...
ಶ್ರೀರಾಮನ ಜನ್ಮದಿನ ಚೈತ್ರ ಶುಕ್ಲ ನವಮಿ ಪುನರ್ವಸು ನಕ್ಷತ್ರ ಕರ್ಕಲಗ್ನ ಮಧ್ಯಾಹ್ನದ ಸಮಯದಲ್ಲಿ ಐದು ಗ್ರಹಗಳು ಉಚ್ಚರಿರುವಾಗ ಶ್ರೀರಾಮನ ಜನ್ಮವಾಗಿದೆ.. ಇಂತಹ ಒಂದು ಭಗವಂತನ ಜನ್ಮೋತ್ಸವವನ್ನು ಪ್ರತಿಯೊಬ್ಬರು ಆಚರಿಸಬೇಕು , ಪ್ರತಿ ವರುಷ ದೇವಸ್ಥಾನದಲ್ಲಿ ಸಂಭ್ರಮ ದಿಂದ ಾಚರಿಸುತ್ತಿದ್ದೇವು ಆದರೆ ಈ ವರುಷ ಇದಕ್ಕೆ ಅವಕಾಶವಿಲ್ಲ . ಇರಲಿ ನಮ್ಮ ನಮ್ಮ ಮನೆಗಳಲ್ಲಿಯೇ ಸರಳವಾಗಿ ಆಚರಿಸೋಣ...
ಇನ್ನು ಮನೆಯಲ್ಲಿ ಯಜಮಾನರು ಮಾಡಿದರೆ ಒಳ್ಳೆಯದು ಇಲ್ಲ ಅವರಿಗೆ ಆಗಲ್ಲ ಅಂತಾದರೆ ಹೆಣ್ಣು ಮಕ್ಕಳು ಸಹ ಮಾಡಬಹುದು... ಸ್ನಾನ ಮಾಡಿ ಮಡಿಬಟ್ಟೆಯನುಟ್ಟು (ಒಗೆದು ಹಾಕಿದ , ನಿಮ್ಮ ಅನಕೂಲ)
ಮೊದಲು ಪೂರ್ವ ದಿಕ್ಕಿಗೆ ಮುಖಮಾಡಿ ಒಂದು ಮಣೆ ಹಾಕಿ ಸುತ್ತಲೂ ರಂಗೋಲಿ ಹಾಕಿ ಮಣೆಯ ಮೇಲೆ ಶ್ರೀರಾಮನ ಪೋಟೊ ಇಟ್ಟು ಎರಡೂ ಬದಿಯಲ್ಲಿ ದೀಪವನ್ನು ಹಚ್ಚಿ .. ಅಕಸ್ಮಾತ್ತಾಗಿ ನಮ್ಮ ಮನೆಯಲ್ಲಿ ರಾಮನ ಭಾವಚಿತ್ರ ಇಲ್ಲ ಅಂತಾದರೆ ಕಲಶವನ್ನು ಕೂಡಾ ಇಡಬಹುದು.... ಇದು ಆಗಲ್ಲ ಅಂದರೆ ಒಂದು ಮಣೆಯ ಮೇಲೆ ಶ್ರೀರಾಮನ ತೊಟ್ಟಿಲು ರಂಗವಲ್ಲಿ ಬಿಡಿಸಿ ಕೂಡಾ ಪೂಜೆ ಮಾಡಬಹುದು
ದೇವರ ಪೂಜೆಗೆ ನೀರು ಎಲ್ಲ ಸಾಮಗ್ರಿಗಳನ್ನು ಸಿದ್ದವಾಗಿದ್ದು ಕೊಂಡು
#ಸಂಕಲ್ಪ ..
ಬಲಗೈಯಲ್ಲಿ ಅಕ್ಷತೆ ಹಿಡಿದು ಅದನ್ನು ಎಡಗೈಯಿಂದ ಮುಚ್ಚಿ ಬಲ ತೊಡೆಯ ಮೇಲೆ ಇಟ್ಟುಕೊಂಡು
ಹೀಗೆ ಹೇಳಿ
* ಶ್ರೀರಾಮ ಪ್ರೀತಯೇ ದಾಸ್ಯೇ ರಾಮಭಕ್ತಾಯ ಧೀಮತೇ
ಶ್ರೀ ರಾಮನವಮಿ ವೃತಾಂಗಭೂತಾಂ ಷೋಡಶೋಪಚಾರೈಃ ಶ್ರೀರಾಮ ಪೂಜಾಂ ಕರಿಷ್ಯೇ *
ಅಂತ ಹೇಳಿ ಪೂಜೆಗೆ ಇಟ್ಟು ಕೊಂಡಿದ್ದ ನೀರಿನಿಂದ ಒಂದು ಸೌಟು ನೀರು ಬಲಗೈಯಲ್ಲಿರುವ ಅಕ್ಷತೆಗೆ ಹಾಕಿ ತಟ್ಟೆಯಲ್ಲಿ ಬಿಡಬೇಕು
ನಂತರ..
ಆಹ್ವಾನಾರ್ಥೇ ಅಕ್ಷತಾ ಸಮರ್ಪಯಾಮಿ ಅಂತ ಹೇಳಿ ಅಕ್ಷತೆ ಹಾಕಿ ಶ್ರೀ ರಾಮನನ್ನು ಆಹ್ವಾನ ಮಾಡಬೇಕು
ಆಸನಾರ್ಥೇ ಅಕ್ಷತಾ ಸಮರ್ಪಯಾಮಿ
ಅಂತ ಪೀಠಕ್ಕೆ ಅಕ್ಷತೆಯನ್ನು ಹಾಕಬೇಕು
ಪಾದ ಯೋ ಪಾದ್ಯಂ ಸಮರ್ಪಯಾಮಿ
ಒಂದು ಹೂವಿನಿಂದ ನೀರನ್ನು ಸಿಂಪಡಿಸಬೇಕು
(ಪಾದಗಳಿಗೆ ನೀರು )
ಹಸ್ತ ಯೋ ಅರ್ಘ್ಯಮ್ ಸಮರ್ಪಯಾಮಿ
ಮತ್ತೆ ಒಂದು ಹೂವಿನಿಂದ ಶ್ರೀರಾಮನಿಗೆ ನೀರನ್ನು ಸಿಂಪಡಿಸಬೇಕು
(ಕೈಗಳಿಗೆ ನೀರು )
ಮುಖೇ ಆಚಮನೀಯಂ ಸಮರ್ಪಯಾಮಿ
(ಮುಖ ತೊಳೆಯಲು ನೀರು )
ಮತ್ತು ಒಂದು ಹೂವಿನಿಂದ ನೀರನ್ನು ಸಿಂಪಡಿಸಬೇಕು
ಸ್ನಾನಂ ಸಮರ್ಪಯಾಮಿ ದೇವರಿಗೆ ಮತ್ತೇ ನೀರನ್ನು ಪ್ರೋಕ್ಷಣೆ ಮಾಡಿ ನಂತರ
ಮನೆಗೆ ಬಂದ ಅತಿಥಿಗೆ ಹೇಗೆ ಸತ್ಕರಿಸುತ್ತೇವೊ ಹಾಗೆ ಭಗವಂತನಿಗೂ ಕೂಡಾ
ಅನಕೂಲವಿದ್ದರೆ ಪಂಚಾಮೃತ ಅಭಿಷೇಕ ಮಾಡಿ ಅದನ್ನು ಒಂದು ಹೂವಿನಿಂದ ಶ್ರೀರಾಮನಿಗೆ ಪ್ರೋಕ್ಷಣೆ ಮಾಡಿ
ನಂತರ ಶುದ್ದ್ಧೋದಕ ಸ್ನಾನಂ ಅಂತ ಹೇಳಿ ಮತ್ತೊಂದು ಹೂವಿನಿಂದ ಪೂಜೆಗೆ ಇಟ್ಟುಕೊಂಡಿದ್ದ ಕೇಳುವುದು ನೀರನ್ನು ಪ್ರೋಕ್ಷಣೆ ಮಾಡಿ
ಒರೆಸಿ ಗೆಜ್ಜೆ ವಸ್ತ್ರ , ಗಂಧ , ಅಕ್ಷತೆ ಅರಿಶಿಣ ಕುಂಕುಮ ಏರಿಸಿ ನಂತರ ಮಾಲೆ ನಾನಾ ತರಹದ ಪಾತ್ರ ಪುಷ್ಪ ಗಳನ್ನು ಏರಿಸಿ , ಹೂಮಾಲೆ ಇಲ್ಲದಿದ್ದರೆ ಒಂದು ದಳ ತುಳಸಿ ಗಂಧೋದಕ ಸಾಕು ಭಗವಂತನಿಗೆ , ಅವನಿಗೆ ಬೇಕಿರುವುದು ಭಕ್ತಿಯ ಪ್ರಾಧಾನ್ಯತೆ.. ಭಕ್ತಿಯಿಂದ ನೀವು ಶ್ರೀರಾಮನ ಅಷ್ಟೋತ್ತರ ಹೇಳುತ್ತಾ ಅಕ್ಷತೆಯನ್ನು ಏರಿಸಿ ಅದು ಭಗವಂತನಿಗೆ ನಾನಾ ತರಹದ ಪರಿಮಳ ಭರಿತ ಪತ್ರಪುಷ್ಗಳು ಆಗುತ್ತವೆ...
ಇಷ್ಟಾದ ಮೇಲೆ ಧೂಪ , ದೀಪ , ನೈವೇದ್ಯ
ನೈವೇದ್ಯಕ್ಕೆ ಏನು ? ಹೇಳ್ತೇನೆ ಕೇಳಿ
ಒಂದು ದಪ್ಪ ತಳದ ಬಾಣಲೆಯಲ್ಲಿ ಎರಡು ಮೂರು ಚಮಚ ತುಪ್ಪ ( ಹೆಚ್ಚಿಗೆ ಹಾಕಿದರೂ ನಡೆಯುತ್ತೆ )
ಹಾಕಿ ಸಣ್ಣ ಉರಿಯಲ್ಲಿ ಗೋದಿ ಹಿಟ್ಟು ಹಾಕಿ ಪರಿಮಳ ಬರುವವರೆಗೂ ಹುರಿಯಿರಿ ಹಿಟ್ಟು ಆರಿದಮೇಲೆ ತಕ್ಕಷ್ಟು ಬೆಲ್ಲ ಸೇರಿಸಿ ಉಂಡಿ ಮಾಡಿ , ನಂತರ ಕೊಸಂಬರಿ , ಪಾನಕ ಎಲ್ಲವನ್ನು ನೈವೇದ್ಯ ಮಾಡಿ ನಂತರ ತಾಂಬೂಲ ದಕ್ಷಿಣೆ ಅರ್ಪಿಸಿ ಆರತಿ ಮಾಡಬೇಕು ನಂತರ ಮಂಗಳಾಷ್ಟಕ ಹೇಳಿ ಅಕ್ಷತೆಯನ್ನು ಹಾಕಿ .. ಪ್ರದಕ್ಷಿಣೆ ನಮಸ್ಕಾರ ಮಾಡಿ ....
ಪ್ರಾರ್ಥನೆ ...
ಮಾತಾರಾಮೋ ಮತ್-ಪಿತಾ ರಾಮಚಂದ್ರಃ
ಸ್ವಾಮೀ ರಾಮೋ ಮತ್-ಸಖಾ ರಾಮಚಂದ್ರಃ
ಸರ್ವಸ್ವಂ ಮೇ ರಾಮಚಂದ್ರೋ ದಯಾಳುಃ
ನಾನ್ಯಂ ಜಾನೇ ನೈವ ನ ಜಾನೇ
ನಂತರ ಪೂಜಾ ಸಮರ್ಪಣೆ ಮಾಡಬೇಕು
ಅನೇನ ಶ್ರೀ ರಾಮನವಮಿ ವೃತಾಂಗತ್ವೇನ ದ್ಯಾನಾವಾಹನಾದಿ ಷೋಡಶೋಪಚಾರ ಪೂಜೆನೇನ ಶ್ರೀರಾಮ ದೇವತಾಃ ಪ್ರಿಯತಾಂ ಪ್ರೀಯತೋಭವ
ಶ್ರೀಕೃಷ್ಣಾರ್ಪಣಮಸ್ತು ಅಂತ ಅಕ್ಷತೆ ಬಿಟ್ಟು ದೇವರಿಗೆ ಮತ್ತೆ ಅಕ್ಷತೆ ಏರಿಸಿ....ಕೆಲವರ ಮನೆಯಲ್ಲಿ ನಾಳೆ ಉಪವಾಸ ವೃತ ಇದ್ದರೆ ಕೆಲವರು ಅಡುಗೆ ನೈವೇದ್ಯ ಮಾಡುತ್ತಾರೆ ಅದು ಅವರವರ ಪದ್ದತಿಗೆ ಅನುಸಾರ ..
ನಂತರ ಮಧ್ಯಾಹ್ನದಲ್ಲಿ ಶ್ರೀರಾಮನಿಗೆ ಅರ್ಘ್ಯವನ್ನು ಕೊಡಬೇಕು
#ಅರ್ಘ್ಯಮಂತ್ರ
ದಶಾನನ ವಧಾರ್ಥಾಯ ಧರ್ಮ ಸಂಸ್ಥಾಪನಾಯ ಚ ವಾನ ವಾನಾಂ ವಿನಾಶಾಯ ಧೈತ್ಯಾನಾಂ ನಿಧನಾಯ ಚ l ಪರಿತ್ರಾಣಾಯ ಸಾಧೂನಾಂ ಜಾತೋರಾಮಃ ಸ್ವಯಂಹರಿಃ l ಗ್ರಹಣಾರ್ಘ್ಯಂ ಮಯಾದತ್ತಂ ಭಾತೃಭಿಃ ಸಹಿತೋನಘಃ ll
ಈ ರೀತಿ ಮನೆಯಲ್ಲಿ ಪೂಜೆ ಮಾಡಿ ಅರ್ಘ್ಯವನ್ನು ಕೊಟ್ಟು ರಾಮನಾಮ , ರಾಮನ ತೊಟ್ಟಿಲು ಹಾಕುವೆ ಹಾಡು , ರಾಮನ ಹಾಡು , ರಾಮರಕ್ಷಾ ಸ್ತೋತ್ರ ಮಂತ್ರಗಳನ್ನು ಹೇಳಿ ಈ ರೀತಿ ಭಗವಂತನ ಜನ್ಮೋತ್ಸವಗಳನ್ನು ಆಚರಿಸಿದರೆ ಯಾವ ಜನ್ಮದಲ್ಲಿಯೂ ಕೂಡಾ ಪುತ್ರಪೌತ್ರ ಸಂತತಿ ಆರೋಗ್ಯ ಐಶ್ವರ್ಯ ಗಳಿಂದ ಅಭಿವೃದ್ಧಿ ಹೊಂದುತ್ತದೆ .....
.. ✍️✍️ವೀಣಾ ಜೋಶಿ
[29/03, 10:17 PM] +91 89713 62063: 🌺🌺🌺🌺🌺🌺
*ರಾಮ ನವಮಿ: ಶ್ರೀರಾಮನ ಪೂಜೆಗೆ ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಮಹತ್ವ #ಹೀಗಿದೆ..!*
🌺🌺🌺🌺🌺🌺
ಪೌರಾಣಿಕ ನಂಬಿಕೆಗಳಲ್ಲಿ, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಭಗವಾನ್ ರಾಮ ಜನಿಸಿದನೆನ್ನುವ ನಂಬಿಕೆಯಿದೆ. ಈ ದಿನವನ್ನು ಹಿಂದೂಗಳು ರಾಮ ನವಮಿ ಎಂದು ಆಚರಿಸುತ್ತಾರೆ. ಈ ವರ್ಷ ರಾಮ ನವಮಿಯನ್ನು ಮಾರ್ಚ್ 30 ರಂದು ಗುರುವಾರ ಆಚರಿಸಲಾಗುವುದು. ಭಗವಾನ್ ರಾಮನು ಮಧ್ಯಾಹ್ನದ ಸಮಯದಲ್ಲಿ ಜನಿಸಿದನೆಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿ ರಾಮ ನವಮಿಯ ಆಚರಣೆಗಳನ್ನು ಮಧ್ಯಾಹ್ನ ಮಾಡಲಾಗುತ್ತದೆ.
ವಸಂತ ನವರಾತ್ರಿಯ 9 ದಿನಗಳಲ್ಲಿ, ಮಾತೆ ದುರ್ಗೆಯ 9 ರೂಪಗಳನ್ನು ಪೂಜಿಸಲಾಗುತ್ತದೆ ಮತ್ತು ಕೊನೆಯದಾಗಿ ರಾಮ ನವಮಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಮನೆ ಮತ್ತು ದೇವಾಲಯಗಳಲ್ಲಿ ಭಗವಾನ್ ರಾಮ ಮತ್ತು ತಾಯಿ ಸೀತೆಯನ್ನು ಸಂಪೂರ್ಣ ವಿಧಿ - ವಿಧಾನಗಳ ಮೂಲಕ ಪೂಜಿಸಲಾಗುತ್ತದೆ. ರಾಮ ನವಮಿಯ ಪೂಜೆಯನ್ನು ಹೇಗೆ ಮಾಡಲಾಗುತ್ತದೆ..? ರಾಮ ನವಮಿ ಪೂಜೆಗೆ ಶುಭ ಮುಹೂರ್ತ ಮತ್ತು ಈ ವ್ರತದ ಮಹತ್ವವನ್ನು ಇಲ್ಲಿ ತಿಳಿಯೋಣ ಮುಹೂರ್ತ:*
ರಾಮ ನವಮಿ ಶುಭ ದಿನ - 2023 ಮಾರ್ಚ್ 30, ಗುರುವಾರ
ನವಮಿ ತಿಥಿ ಪ್ರಾರಂಭ - 2023 ಮಾರ್ಚ್ 29 ರಂದು ರಾತ್ರಿ 09:06 ನಿಮಿಷಗಳಿಂದ
ನವಮಿ ತಿಥಿ ಮುಕ್ತಾಯ - 2023 ಮಾರ್ಚ್ 30 ರಂದು ರಾತ್ರಿ 11:29 ರವರೆಗೆ
*ಪೂಜೆ ಮುಹೂರ್ತ* - ಮಾರ್ಚ್ 30 ರಂದು ಗುರುವಾರ ಬೆಳಿಗ್ಗೆ *11:11* ರಿಂದ *01:38* ನಿಮಿಷಗಳವರೆಗೆ.
*ರಾಮ ನವಮಿಯ ಮಹತ್ವ:*
ಪೌರಾಣಿಕ ನಂಬಿಕೆಗಳಲ್ಲಿ, ಭಗವಾನ್ ರಾಮನು ವಿಷ್ಣುವಿನ ಏಳನೇ ಅವತಾರ ಎಂದು ಹೇಳಲಾಗುತ್ತದೆ. ತ್ರೇತಾಯುಗದಲ್ಲಿ ಭೂಮಿಯ ಮೇಲೆ ರಾಕ್ಷಸ ಶಕ್ತಿಗಳ ಮತ್ತು ದುಷ್ಟ ಜನಗಳ ಅಟ್ಟಹಾಸವು ಮಿತಿಮೀರಿದಾಗ, ಶ್ರೀಹರಿಯು ರಾಜ ದಶರಥ ಮತ್ತು ತಾಯಿ ಕೌಸಲ್ಯಳ ಮಗನಾಗಿ ಜನಿಸಿದನು. ಈ ದಿನವು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೆಯ ದಿನವಾಗಿತ್ತು ಎಂಬುದು ಧಾರ್ಮಿಕ ನಂಬಿಕೆ.
ಧರ್ಮವನ್ನು ರಕ್ಷಿಸಲು ಮತ್ತು ಉತ್ತಮ ನಡತೆಯ ಮಾದರಿಯನ್ನು ಹೊಂದಿಸಲು ಅವರು ತಮ್ಮ ಇಡೀ ಜೀವನವನ್ನು ಪಣಕ್ಕಿಟ್ಟರು, ಅವರು ತಮ್ಮನ್ನು ತಾವು ಆದರ್ಶ ಪುರುಷ ಎಂದು ಜೀವನದುದ್ದಕ್ಕೂ ನೋಡಿಕೊಂಡರು. ಈ ಕಾರಣದಿಂದ ಅವನನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮ ಎಂದು ಕರೆಯುತ್ತಾರೆ. ಕಷ್ಟಕಾಲದಲ್ಲಿಯೂ ಶ್ರೀರಾಮನು ಧರ್ಮ ಮಾರ್ಗವನ್ನು ಅರ್ಧಕ್ಕೆ ಬಿಡದೆ ಸಮಾಜದ ಮುಂದೆ ತಾನೊಬ್ಬ ಪರಿಪೂರ್ಣ ವ್ಯಕ್ತಿ ಎಂದು ಸಾಬೀತುಪಡಿಸಿದನು.
*ರಾಮ ನವಮಿಯ ಪೂಜೆ ವಿಧಾನ:*
- ರಾಮ ನವಮಿಯ ದಿನದಂದು ಬ್ರಹ್ಮ ಮುಹೂರ್ತದಲ್ಲಿ ಎದ್ದು, ಸ್ನಾನ ಮಾಡಿದ ನಂತರ ಶುಭ್ರವಾದ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ ಉಪವಾಸದ ಪ್ರತಿಜ್ಞೆ ಮಾಡಿ. ಇದರೊಂದಿಗೆ ಗಂಗಾಜಲವನ್ನು ಸಿಂಪಡಿಸಿ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ.
- ರಾಮನ ಪೂಜೆಯಲ್ಲಿ ತುಳಸಿ ಎಲೆಗಳು ಮತ್ತು ಕಮಲದ ಹೂವು ಕಡ್ಡಾಯವಾಗಿರಬೇಕೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
- ಮರದ ಪೀಠವನ್ನು ತೆಗೆದುಕೊಂಡು, ಅದರ ಮೇಲೆ ಕೆಂಪು ಬಟ್ಟೆಯನ್ನು ಹರಡಿ ಮತ್ತು ಅದರ ಮೇಲೆ ರಾಮನು ಸಿಂಹಾಸನದ ಮೇಲೆ ಕುಳಿತಿರುವ ಚಿತ್ರವನ್ನು ಅಥವಾ ವಿಗ್ರಹವನ್ನು ಸ್ಥಾಪಿಸಿ.
- ಇದರ ನಂತರ ಗಂಗಾಜಲವನ್ನು ಸಿಂಪಡಿಸಿ ಮತ್ತು ಅಕ್ಕಿಯಿಂದ ಅಷ್ಟದಳವನ್ನು ಮಾಡಿ. ಅಷ್ಟದಳದ ಮೇಲೆ ತಾಮ್ರದ ಕಲಶವನ್ನು ಇಟ್ಟು ನಾಲ್ಕು ಮುಖದ ದೀಪವನ್ನು ಬೆಳಗಿಸಿ.
- ಬೇಕಿದ್ದರೆ ತೊಟ್ಟಿಲಿನಲ್ಲಿ ಬಾಲ ರಾಮನ ಅಥವಾ ರಾಮ ಲೀಲೆಯ ವಿಗ್ರಹವನ್ನು ಇಟ್ಟು ತೂಗಿ, ನಂತರ ರಾಮನಿಗೆ ಆರತಿಯನ್ನು ಮಾಡಬೇಕು ಅಥವಾ ವಿಷ್ಣು ಸಹಸ್ರನಾಮ ಪಠಿಸಬಹುದು. ಇದರ ನಂತರ, ಖೀರು ಅಂದರೆ ಪಾಯಸ, ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ.
- ಈ ದಿನ ನೀವು ರಾಮನ ಭಕ್ತಿಯಲ್ಲಿ ಮುಳುಗಿ ಕೀರ್ತನೆಯನ್ನು ಹಾಡಬಹುದು. ಹಾಗೂ ಈ ದಿನ ರಾಮಚರಿತ ಮಾನಸ ಮತ್ತು ರಾಮ ಸ್ತೋತ್ರವನ್ನು ಸಹ ಪಠಿಸಬಹುದು. ಇದರೊಂದಿಗೆ ಸಂಜೆ ರಾಮನಿಗೆ ಸಂಬಂಧಿಸಿದ ಕಥೆಯನ್ನು ಕೂಡ ಕೇಳಿ.
- ರಾಮನವಮಿ ಉಪವಾಸವನ್ನು ಆಚರಿಸುವುದರಿಂದ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ಪಡೆದುಕೊಳ್ಳಬಹುದು. ಅಷ್ಟು ಮಾತ್ರವಲ್ಲ, ಇದು ಶ್ರೀರಾಮನ ಆಶೀರ್ವಾದವನ್ನು ಪಡೆದುಕೊಳ್ಳಲು ಕೂಡ ಹೆಚ್ಚು ಸಹಕಾರಿಯಾಗಿದೆ.
ರಾಮ ನವಮಿಯಂದು ಈ ಮೇಲಿನಂತೆ ರಾಮನನ್ನು ಪೂಜಿಸುವುದರಿಂದ ಅಥವಾ ರಾಮ ನವಮಿ ವ್ರತವನ್ನು ಆಚರಿಸುವುದರಿಂದ ಭಗವಾನ್ ರಾಮನ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ರಾಮ ನವಮಿ ದಿನದಂದು ಶುಭ ಮುಹೂರ್ತದಲ್ಲಿ ರಾಮನನ್ನು ಪೂಜಿಸಿದರೆ ಪೂಜೆಯ ಫಲ ಮತ್ತಷ್ಟು ಹೆಚ್ಚಾಗುತ್ತದೆ ಎನ್ನುವುದು ವಾಡಿಕೆ.🙏✍️ ಸಂಕ್ಷಿಪ್ತ ಸಂಗ್ರಹ ಪ್ರಶಾಂತ್ ಮೈಸೂರ್ 🕉️🚩
[29/03, 11:04 PM] +91 94802 97677: 🕉️ಹಿಂದೂ ಧರ್ಮದಲ್ಲಿ ಶ್ರೀ ರಾಮನವಮಿ ಎಂದರೆ ಹಬ್ಬದ ಸಂಭ್ರಮ. ಚೈತ್ರ ಮಾಸದ ಒಂಭತ್ತನೇ ದಿನ, ಅಂದರೆ ನೂತನ ಸಂವತ್ಸರದ ಮೊದಲ ಮಾಸದಲ್ಲಿ ಬರುವ ಹಬ್ಬ. ಮಹಾವಿಷ್ಣುವಿನ ಏಳನೇಯ ಅವತಾರವಾದ ಶ್ರೀರಾಮನು ಜನಿಸಿದ ನವಮಿಯಂದು ಈ ಹಬ್ಬ ಆಚರಿಸಲಾಗುತ್ತದೆ. ಈ ದಿನ ಪುನರ್ವಸು ನಕ್ಷತ್ರದಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಕರ್ಕಾಟಕ ಲಗ್ನದಲ್ಲಿ ಅಯೋಧ್ಯೆಯಲ್ಲಿ ರಾಮನು ಜನಿಸಿದನೆಂಬ ನಂಬಿಕೆ ಇದೆ. ಈ ಬಾರಿ ರಾಮನವಮಿಯನ್ನು ಮಾರ್ಚ್ 30 ಗುರುವಾರದಂದು ಆಚರಿಸಲಾಗುತ್ತದೆ.
ಭಗವಾನ್ ರಾಮನು ಮಧ್ಯಾಹ್ನದ ಸಮಯದಲ್ಲಿ ಜನಿಸಿದನೆಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿ ರಾಮ ನವಮಿಯ ಆಚರಣೆಗಳನ್ನು ಮಧ್ಯಾಹ್ನ ಮಾಡಲಾಗುತ್ತದೆ.
ವಸಂತ ನವರಾತ್ರಿಯ 9 ದಿನಗಳಲ್ಲಿ, ಮಾತೆ ದುರ್ಗೆಯ 9 ರೂಪಗಳನ್ನು ಪೂಜಿಸಲಾಗುತ್ತದೆ ಮತ್ತು ಕೊನೆಯದಾಗಿ ರಾಮ ನವಮಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಮನೆ ಮತ್ತು ದೇವಾಲಯಗಳಲ್ಲಿ ಭಗವಾನ್ ರಾಮ ಮತ್ತು ತಾಯಿ ಸೀತೆಯನ್ನು ಸಂಪೂರ್ಣ ವಿಧಿ - ವಿಧಾನಗಳ ಮೂಲಕ ಪೂಜಿಸಲಾಗುತ್ತದೆ.
*ರಾಮ ನವಮಿಯ ಮಹತ್ವ:*
ಪೌರಾಣಿಕ ನಂಬಿಕೆಗಳಲ್ಲಿ, ಭಗವಾನ್ ರಾಮನು ವಿಷ್ಣುವಿನ ಏಳನೇ ಅವತಾರ ಎಂದು ಹೇಳಲಾಗುತ್ತದೆ. ತ್ರೇತಾಯುಗದಲ್ಲಿ ಭೂಮಿಯ ಮೇಲೆ ರಾಕ್ಷಸ ಶಕ್ತಿಗಳ ಮತ್ತು ದುಷ್ಟ ಜನಗಳ ಅಟ್ಟಹಾಸವು ಮಿತಿಮೀರಿದಾಗ, ಶ್ರೀಹರಿಯು ರಾಜ ದಶರಥ ಮತ್ತು ತಾಯಿ ಕೌಸಲ್ಯಳ ಮಗನಾಗಿ ಜನಿಸಿದನು. ಈ ದಿನವು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೆಯ ದಿನವಾಗಿತ್ತು ಎಂಬುದು ಧಾರ್ಮಿಕ ನಂಬಿಕೆ.
ಧರ್ಮವನ್ನು ರಕ್ಷಿಸಲು ಮತ್ತು ಉತ್ತಮ ನಡತೆಯ ಮಾದರಿಯನ್ನು ಹೊಂದಿಸಲು ಅವರು ತಮ್ಮ ಇಡೀ ಜೀವನವನ್ನು ಪಣಕ್ಕಿಟ್ಟರು, ಅವರು ತಮ್ಮನ್ನು ತಾವು ಆದರ್ಶ ಪುರುಷ ಎಂದು ಜೀವನದುದ್ದಕ್ಕೂ ನೋಡಿಕೊಂಡರು. ಈ ಕಾರಣದಿಂದ ಅವನನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮ ಎಂದು ಕರೆಯುತ್ತಾರೆ. ಕಷ್ಟಕಾಲದಲ್ಲಿಯೂ ಶ್ರೀರಾಮನು ಧರ್ಮ ಮಾರ್ಗವನ್ನು ಅರ್ಧಕ್ಕೆ ಬಿಡದೆ ಸಮಾಜದ ಮುಂದೆ ತಾನೊಬ್ಬ ಪರಿಪೂರ್ಣ ವ್ಯಕ್ತಿ ಎಂದು ಸಾಬೀತುಪಡಿಸಿದನು.
*ರಾಮನವಮಿ ಪೂಜಾ ಮುಹೂರ್ತ*
ನವಮಿ ತಿಥಿ ಆರಂಭ ಸಮಯ : 29 ಮಾರ್ಚ್ 2023, ಬುಧವಾರ ರಾತ್ರಿ 09:06
ನವಮಿ ತಿಥಿ ಅಂತ್ಯ ಸಮಯ : 30 ಮಾರ್ಚ್ 2023 ರಾತ್ರಿ 11:29
ರಾಮ ನವಮಿ ಪೂಜಾ ಮುಹೂರ್ತ: ಮಾರ್ಚ್ 30, ಗುರುವಾರ, ಬೆಳಗ್ಗೆ 11:11 ರಿಂದ ಮಧ್ಯಾಹ್ನ 01:38 ರವರೆಗೆ. *02 ಗಂಟೆ 27 ನಿಮಿಷಗಳು*
*ರಾಮ ನವಮಿಯ ಪೂಜೆ ವಿಧಾನ:* - ರಾಮ ನವಮಿಯ ದಿನದಂದು ಬ್ರಹ್ಮ ಮುಹೂರ್ತದಲ್ಲಿ ಎದ್ದು, ಸ್ನಾನ ಮಾಡಿದ ನಂತರ ಶುಭ್ರವಾದ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ.
- ರಾಮನ ಪೂಜೆಯಲ್ಲಿ ತುಳಸಿ ಎಲೆಗಳು ಮತ್ತು ಕಮಲದ ಹೂವು ಕಡ್ಡಾಯವಾಗಿರಬೇಕೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
- ಮರದ ಪೀಠವನ್ನು ತೆಗೆದುಕೊಂಡು, ಅದರ ಮೇಲೆ ಕೆಂಪು ಬಟ್ಟೆಯನ್ನು ಹರಡಿ ಮತ್ತು ಅದರ ಮೇಲೆ ರಾಮನು ಸಿಂಹಾಸನದ ಮೇಲೆ ಕುಳಿತಿರುವ ಚಿತ್ರವನ್ನು ಅಥವಾ ವಿಗ್ರಹವನ್ನು ಸ್ಥಾಪಿಸಿ.
- ಇದರ ನಂತರ ಗಂಗಾಜಲವನ್ನು ಸಿಂಪಡಿಸಿ ಮತ್ತು ಅಕ್ಕಿಯಿಂದ ಅಷ್ಟದಳವನ್ನು ಮಾಡಿ. ಅಷ್ಟದಳದ ಮೇಲೆ ತಾಮ್ರದ ಕಲಶವನ್ನು ಇಟ್ಟು ನಾಲ್ಕು ಮುಖದ ದೀಪವನ್ನು ಬೆಳಗಿಸಿ.
- ಬೇಕಿದ್ದರೆ ತೊಟ್ಟಿಲಿನಲ್ಲಿ ಬಾಲ ರಾಮನ ಅಥವಾ ರಾಮ ಲೀಲೆಯ ವಿಗ್ರಹವನ್ನು ಇಟ್ಟು ತೂಗಿ, ನಂತರ ರಾಮನಿಗೆ ಆರತಿಯನ್ನು ಮಾಡಬೇಕು ಅಥವಾ ವಿಷ್ಣು ಸಹಸ್ರನಾಮ ಪಠಿಸಬಹುದು. ಇದರ ನಂತರ, ಖೀರು ಅಂದರೆ ಪಾಯಸ, ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ.
- ಈ ದಿನ ನೀವು ರಾಮನ ಭಕ್ತಿಯಲ್ಲಿ ಮುಳುಗಿ ಕೀರ್ತನೆಯನ್ನು ಹಾಡಬಹುದು. ಹಾಗೂ ಈ ದಿನ ರಾಮಚರಿತ ಮಾನಸ ಮತ್ತು ರಾಮ ಸ್ತೋತ್ರವನ್ನು ಸಹ ಪಠಿಸಬಹುದು. ಇದರೊಂದಿಗೆ ಸಂಜೆ ರಾಮನಿಗೆ ಸಂಬಂಧಿಸಿದ ಕಥೆಯನ್ನು ಕೂಡ ಕೇಳಿ.
*ಪೌರಾಣಿಕ ಹಿನ್ನೆಲೆ*
ಧರ್ಮ ಶಾಸ್ತ್ರಗಳ ಪ್ರಕಾರ, ಅಯೋಧ್ಯೆಯ ರಾಜನಾದ ದಶರಥನಿಗೆ ಕೌಸಲ್ಯಾ, ಕೈಕೇಯೀ ಹಾಗೂ ಸುಮಿತ್ರೆ ಮೂರು ಜನ ಪತ್ನಿಯರಿದ್ದರು. ಆದರೆ ಯಾರಿಗೂ ಪುತ್ರ ಸಂತಾನವಾಗಿರಲಿಲ್ಲ. ನಂತರ ದಶರಥನು ಋಷಿಮುನಿಗಳ ಸಲಹೆಯಂತೆ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸಿದ. ಈ ಯಜ್ಞದಿಂದ ಸಂತುಷ್ಟನಾದ ಪ್ರಜಾಪತಿಯು ದಶರಥನಿಗೆ ದಿವ್ಯಪಾಯಸವನ್ನು ನೀಡುತ್ತಾನೆ. ಈ ದಿವ್ಯ ಪಾಯಸವನ್ನು ದಶರಥನು ತನ್ನ ಮೂವರು ಪತ್ನಿಯರಿಗೂ ಹಂಚುತ್ತಾನೆ. ಇದರಂತೆ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಕೌಸಲ್ಯೆಗೆ ರಾಮನೂ, ಪುಷ್ಯನಕ್ಷತ್ರದ ದಶಮಿಯಂದು ಸೂರ್ಯೋದಯಕ್ಕೆ ಮುನ್ನ ಕೈಕೇಯಿಗೆ ಭರತನೂ, ಅದೇ ದಿನ ಆಶ್ಲೇಷಾ ನಕ್ಷತ್ರದಲ್ಲಿ ಮಧ್ಯಾಹ್ನ ಲಕ್ಷ್ಮಣ, ಶತ್ರುಘ್ನರೂ ಜನಿಸುತ್ತಾರೆ. ಹೀಗೆ ರಾಮನು ಜನಿಸಿದ ನವಮಿಯಂದು ರಾಮನವಮಿಯನ್ನಾಗಿ ಆಚರಿಸುತ್ತಾರೆ.
ಧಾರ್ಮಿಕ ನಂಬಿಕೆಯ ಪ್ರಕಾರ ದೇವತೆಗಳು ಹಾಗೂ ದೇವರುಗಳು ಅವತಾರ ತಾಳಿದ ದಿನದಂದು ಭೂಮಿಯ ಮೇಲೆ ಅವರ ದೈವೀ ತತ್ವಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಯಂದು ಶ್ರೀರಾಮತತ್ವವು ಎಂದಿಗಿಂತಲೂ ಸಾವಿರಪಟ್ಟು ಹೆಚ್ಚು ಭೂಮಿಯಲ್ಲಿ ಕಾರ್ಯನಿರತವಾಗಿರುತ್ತದೆ. ಹೀಗಾಗಿ ಈ ದಿನ ರಾಮನಾಪ ಜಪ, ಶ್ರೀರಾಮನ ಉಪಾಸನೆಗಳನ್ನು ಮಾಡುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದೆಂದು ಹೇಳಲಾಗುತ್ತದೆ.
*ರಾಮನವಮಿಯ ಆಧ್ಯಾತ್ಮಿಕ ಮಹತ್ವ*
*ರಾಮ* ಎನ್ನುವ ಎರಡು ಅಕ್ಷರದಲ್ಲಿ ಮಹತ್ವಪೂರ್ಣವಾದ ಅರ್ಥವಿದೆ 'ರಾ' ಎಂದರೆ ಬೆಳಕು 'ಮ' ಎಂದರೆ ಒಳಗೆ. ಅಂದರೆ ನಿಮ್ಮೊಳಗಿನ ದೈವಿಕ ಬೆಳಕು ರಾಮ.
*ದಶರಥ*: ಶ್ರೀರಾಮನ ತಂದೆ ದಶರಥ 'ದಶ' ಎಂದರೆ ಹತ್ತು, 'ರಥ' ಎಂದರೆ ರಥ. ಹತ್ತು ರಥಗಳು ಎಂದರೆ ಐದು ಕಾರ್ಯ ಇಂದ್ರಿಯಗಳು. ಇದನ್ನು ಕರ್ಮೇಂದ್ರಿಯಗಳು ಎಂದೂ ಕರೆಯುತ್ತಾರೆ. ಇದರಲ್ಲಿ ಮಾತನಾಡುವ ಸಾಮರ್ಥ್ಯ, ಕೈಗಳು, ಕಾಲುಗಳು, ಚಲಿಸುವ ಭಾಗಗಳು ಹಾಗೂ ಜನನಾಂಗಗಳು ಸೇರಿವೆ. ಉಳಿದವು ಐದು ಜ್ಞಾನೇಂದ್ರಿಗಳು ಇದರಲ್ಲಿ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಸ್ಪರ್ಶ ಪ್ರಜ್ಞೆ ಸೇರಿದೆ.
*ಕೌಸಲ್ಯಾ*: ಕೌಸಲ್ಯೆ ರಾಮನ ತಾಯಿ. ಕೌಸಲ್ಯಾ ಹೆಸರಿನ ಅರ್ಥ 'ಕೌಶಲ್ಯ' . ಒಬ್ಬ ನುರಿತ ರಥಿಕನು ಹತ್ತು ರಥಗಳನ್ನು ಸವಾರಿ ಮಾಡುತ್ತಾನೆ. ಇಂತಹ ಶಕ್ತಿಯು ರಾಮನಲ್ಲಿದೆ.
*ಅಯೋಧ್ಯೆ*: ಶ್ರೀರಾಮನು ಜನಿಸಿದ ಸ್ಥಳ. 'ಯೋಧ್ಯಾ' ಎಂದರೆ ಯುದ್ಧ, 'ಅ' ಎಂದರೆ ಯುದ್ಧದ ಋಣಾತ್ಮಕ ಪೂರ್ವಪ್ರತ್ಯಯ. ಅಂದರೆ ಯುದ್ಧವಿಲ್ಲದ, ಸಮೃದ್ಧಿ ಹಾಗೂ ನ್ಯಾಯಯುತವಾಗಿರುವ ಸ್ಥಳವನ್ನು ಅಯೋಧ್ಯೆ ಎಂದು ಕರೆಯುತ್ತಾರೆ.
ನಮ್ಮೊಳಗಿರುವ ಶ್ರೀ ರಾಮ
ಸತ್ಯಯುಗದಲ್ಲಿ ವಿವಿಧ ಗ್ರಹಗಳ ದೇವರು ಹಾಗೂ ರಾಕ್ಷಸರ ಮಧ್ಯೆ ಯುದ್ಧ ನಡೆದವು. ತ್ರೇತಾಯುಗದಲ್ಲಿ ಒಂದೇ ಗ್ರಹದಲ್ಲಿ ವಾಸಿಸುತ್ತಿದ್ದ ದೇವರು ಮತ್ತು ಅಸುರರ ಮಧ್ಯೆ ಯುದ್ಧ ನಡೆದವು. ಅಂದರೆ ಅಯೋಧ್ಯೆಯಿಂದ ರಾಮ ಹಾಗೂ ಲಂಕೆಯ ರಾವಣನ ಮಧ್ಯೆ ಯುದ್ಧ ನಡೆಯಿತು. ದ್ವಾಪರ ಯುಗದಲ್ಲಿ ಒಂದೇ ಕುಟುಂಬದಲ್ಲಿರುವ ಜನರ ಮಧ್ಯೆ ಯುದ್ಧಗಳು ನಡೆದವು. ಅಂದರೆ ಪಾಂಡವರು ಮತ್ತು ಕೌರವರ ಮಧ್ಯೆ. ಕಲಿಯುಗದಲ್ಲಿ ಯುದ್ಧಗಳು ನಮ್ಮೊಳಗೇ ನಡೆಯುತ್ತಿವೆ.
ರಾಮನು ನಮ್ಮ ಆತ್ಮವಾದರೆ, ಸೀತೆಯು ನಮ್ಮ ಮನಸ್ಸು, ಹನುಮಾನ್ ನಮ್ಮ ಜೀವಶಕ್ತಿಯಾದರೆ ರಾವಣನು ನಮ್ಮ ಅಹಂ. ಅಹಂ ಮನಸ್ಸನ್ನು ಆವರಿಸಿಕೊಂಡಾಗ ನಮ್ಮ ಆತ್ಮವು ಪ್ರಕ್ಷುಬ್ಧಗೊಳ್ಳುತ್ತದೆ. ಮನಸ್ಸು ಮತ್ತು ಆತ್ಮವನ್ನು ಸಮನತ್ವಯಗೊಳಿಸಲು, ಧ್ಯಾನ ಮಾಡಿ, ಉಸಿರಾಟದ ಮೂಲಕ ನಮ್ಮ ಮನಸ್ಸು ಮತ್ತು ಆತ್ಮವನ್ನು ನಿಯಂತ್ರಿಸಬಹುದು. ರಾಮ ಮತ್ತು ಸೀತೆ ಒಂದಾದರೆ ಅಹಂ ನಾಶವಾಗುತ್ತದೆ.
ರಾಮ ನವಮಿಯ ಆಚರಣೆ
ಅನೇಕ ಕಡೆಗಳಲ್ಲಿ ಚೈತ್ರ ಮಾಸದ ಪ್ರತಿಪಾದದಿಂದ ಒಂಭತ್ತು ದಿನಗಳವರೆಗೆ ರಾಮನವಮಿ ಉತ್ಸವವು ನಡೆಯುತ್ತದೆ. ರಾಮನವಮಿಯಂದು ಶ್ರೀರಾಮನನ್ನು ಪೂಜಿಸಿ, ಅರ್ಚಿಸಲಾಗುತ್ತದೆ.ಈ ದಿನದಂದು ಉಪವಾಸವನ್ನು ಮಾಡಿದರೆ ಅತ್ಯಂತ ಶ್ರೇಷ್ಠ. ರಾಮನವಮಿಯಂದು ಬೆಳಗ್ಗೆಯಿಂದ ಮರುದಿನ ಬೆಳಗ್ಗೆಯವರೆಗೂ ಉಪವಾಸವನ್ನು ಕೈಗೊಳ್ಳಬೇಕು. ಈ ಸಮಯದಲ್ಲಿ ಶ್ರೀರಾಮ ಜಪ, ರಾಮಾಯಣ ಪಾರಾಯಣ, ಶ್ರೀ ರಾಮ ಸೀತಾ ಕಲ್ಯಾಣ್ಯೋತ್ಸವವನ್ನೂ ಮಾಡಬಹುದು.
ಕೆಲವೆಡೆ ಪ್ರತಿಪಾದದಿಂದ ನವಮಿಯವರೆಗೂ ಒಂಭತ್ತು ದಿನಗಳಲ್ಲಿ ಭಜನೆ ಹಾಗೂ ಕೀರ್ತನೆಗಳನ್ನು ಆಯೋಜಿಸುತ್ತಾರೆ.ಈ ದಿನ ಕೆಲವು ಭಕ್ತರು ಕಟ್ಟುನಿಟ್ಟಾದ ಉಪವಾಸ ವ್ರತವನ್ನು ಆಚರಿಸುತ್ತಾರೆ ಮತ್ತು ನಿರಾಹಾರ ಉಪವಾಸವನ್ನೂ ಮಾಡುವವರಿದ್ದಾರೆ. ಕೆಲವರು ಸೌಮ್ಯವಾದ ಉಪವಾಸವನ್ನು ಆಚರಿಸಿ, ನೀರು ಹಾಗೂ ಹಣ್ಣುಗಳನ್ನು ಸೇವಿಸುತ್ತಾರೆ. ರಾಮನವಮಿಯಂದು ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಗೆ ಭೇಟಿ ನೀಡಿ ಸರಯೂ ನದಿಯಲ್ಲಿ ಮಿಂದು ಶ್ರೀರಾಮನ ದರ್ಶನ ಮಾಡಿ ಪಾವನರಾಗುತ್ತಾರೆ.
ನಾಳೆ ಎಲ್ಲರ ಮನೆಯಲ್ಲಿ ಗೊಜ್ಜವಲಕ್ಕಿ , ಪಾನಕ ,ಕೋಸಂಬರಿ ಸಮಾರಾಧನೆ ರಾಮಭಜನೆ ಯೊಂದಿಗೆ ಜೋರಾಗಿ ನೆಡೆಯಲಿ ಎಂದು ಹಾರೈಸುತ್ತೇನೆ. ಹತ್ತಿರದ ಎಲ್ಲಾ ದೇವಸ್ಥಾನ ಗಳಲ್ಲಿ ಪಾನಕ ಕೋಸಂಬರಿ ಜೋರಾಗಿ ಹಂಚುತ್ತಾರೆ ! ಎಲ್ಲರೂ ಶ್ರದ್ಧಾಭಕ್ತಿಯಿಂದ ಯಥಾಶಕ್ತಿ ರಾಮನವಮಿಯನ್ನು ಸರಳವಾಗಿ ಆಚರಿಸಿ , "ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ಬೆರೆಸಿ ವಿಠಲನಾಮ ತುಪ್ಪವ ಬೆರೆಸಿ ಬಾಯಿಚಪ್ಪರಿಸಿರಿ" ! ಎಲ್ಲರೂ ಮರೆಯದೇ ಶ್ರೀ ರಾಮರಕ್ಷಾ ಸ್ತೋತ್ರ ಪಠಿಸಿರಿ
" ಶ್ರೀ ರಾಮ ಜಯರಾಮ ಜಯ ಜಯ ರಾಮ "
[30/03, 7:28 AM] +91 91644 68888: 🌹ಶ್ರೀರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ'' ಶ್ರೀರಾಮನ ಕೃಪಾಕಟಾಕ್ಷ ಸದಾ ನಿಮ್ಮ ಮೇಲಿರಲಿ ಎಂದು ಶುಭ ಹಾರೈಸುತ್ತೇನೆ. 🌹ನಿಮಗೂ ನಿಮ್ಮ ಕುಟುಂಬಕ್ಕೂ ರಾಮ ನವಮಿ 2023 ರ ಹಾರ್ದಿಕ ಶುಭಾಶಯಗಳು. 4. ನಿಮಗೂ ನಿಮ್ಮ ಕುಟುಂಬಕ್ಕೂ ಶ್ರೀರಾಮನ ಅನುಗ್ರಹ ಪ್ರಾಪ್ತವಾಗಲಿ, ನಿಮ್ಮೆಲ್ಲಾ ಕಷ್ಟಗಳು ಕ್ಷಣಾರ್ಧದಲ್ಲೇ ಕರಗಲಿ, ಸರ್ವರಿಗೂ ಶ್ರೀರಾಮ ನವಮಿಯ ಶುಭಾಶಯಗಳು.💐👏
[30/03, 7:29 AM] +91 97400 36026: 🙏 *ಶ್ರೀರಾಮಚಂದ್ರದೇವರ ಸ್ತುತಿ*🙏
*ವಾಯುನಂದನ* / ವಾಯು ಪುತ್ರನಾದ ಹನುಮಂತನ
*ಮಿತ್ರನ* / ಸಖನಾದ ಸುಗ್ರೀವನ
*ಪತ್ನಿಯ* / ಪತ್ನಿಯಾದ ರುಮೆಯ
*ಅಪಹರಿಸಿದವನ* / ವಾಲಿಯ
*ಅಯ್ಯನ* / ತಂದೆಯಾದ ಇಂದ್ರದೇವರ
*ಸುತನ* / ಪುತ್ರನಾದ ಅರ್ಜುನನ
*ಕಾಯಜ* / ದೇಹದಿಂದ ಹುಟ್ಟಿದಂಥ ಅಭಿಮನ್ಯುವಿನ
*ಶ್ವಶುರನ* / ಹೆಣ್ಣು ಕೊಟ್ಟ ಮಾವನಾದ ವಿರಾಟರಾಜನ
*ಪುತ್ರನ* / ಸುತನಾದ ಉತ್ತರಕುಮಾರನ
*ಸೋದರಮಾವಯ್ಯನ* /
ಸುದೇಷ್ಣೆಯ ತಮ್ಮನಾದ ಕೀಚಕನ
*ರಿಪು* / ಭೀಮಸೇನದೇವರ
*ಶತ್ರುವಿನ* / ಶತ್ರುವಾದ ದುರ್ಯೋಧನನ
*ತಂದೆಯ* / ಧ್ರುತರಾಷ್ಟ್ರನ
*ಅನುಜನ* / ತಮ್ಮನಾದ ಪಾಂಡುರಾಜನ
*ಪುತ್ರನ* / ಧರ್ಮರಾಜನ
*ತಂದೆಯ* / ಯಮಧರ್ಮರಾಜನ
*ತಂದೆಯ* / ಸೂರ್ಯದೇವನ
*ರಮಣಿಯ* / ಪತ್ನಿಯಾದ
ಛಾಯಾದೇವಿಯ
*ಸುತನೊಡನೆ* / ಸುತನಾದ ಶನೈಶ್ಚರನೊಡನೆ
*ಕುಂದದೆ ಕದನಗೈದವನ* /
ಕುಂದಿಲ್ಲದೆ ಯುದ್ಧ ಮಾಡಿದ ದಶರಥ ಮಹಾರಾಜನ
*ಸುತನ* / ನಿಮಿತ್ತ ಕಾರಣದಿಂದ ಸುತನಾಗಿ ಲೋಕವಿಡಂಬನೆಗಾಗಿ ಲೋಕಕಲ್ಯಾಣಾರ್ಥವಾಗಿ ಅವತರಿಸಿದ *ಶ್ರೀರಾಮಚಂದ್ರದೇವರನ್ನು* ಭಕ್ತಿಯಿಂದ ಸೇವಿಸಿ ಚೆಂದದಿ ಭಜಿಸಿ ಸ್ತುತಿಸಿ ಆರಾಧಿಸಿ ಎಂಬುದರಲ್ಲಿ ಮುಖ್ಯ ತಾತ್ಪರ್ಯವಿದೆ
🙏 *ಜಯ ಜಯ ರಾಮ ಹರೇ* 🙏
Post a Comment