cm, ವಿಶೇಷ

[07/03, 7:44 PM] Cm Ps: *ಹೈ ಡೆನ್ಸಿಟಿ ಕಾರಿಡಾರ್ ಗಳಲ್ಲಿ ತಡೆರಹಿತ ವಾಹನ ಸಂಚಾರ ವ್ಯವಸ್ಥೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

 

ಬೆಂಗಳೂರು, ಮಾರ್ಚ್ 07 :  

ಹೈ ಡೆನ್ಸಿಟಿ ಕಾರಿಡಾರ್ ಗಳಲ್ಲಿ ತಡೆರಹಿತ ವಾಹನ ಸಂಚಾರ ವ್ಯವಸ್ಥೆಗೊಳಿಸಲಾಗುತ್ತಿದ್ದು, ಸುರಕ್ಷತೆ,ವಾಹನ ಸಂಖ್ಯೆ ಪರಿಶೀಲಿಸುವ, ವಾಹನ ಸಾಮರ್ಥ್ಯವನ್ನು ಪರಿಶೀಲಿಸುವ ಆಧುನಿಕ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈ ಕಾರಿಡಾರ್ ಗಳಿಗೆ ವಿಶೇಷವಾದ ಸೂಚನಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದರು.

ಅವರು ಇಂದು ಬೆಂಗಳೂರು ನಗರ ಪೊಲೀಸ್ ಇಲಾಖೆಯ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.

*ವಾಹನ ದಟ್ಟಣೆ ನಿರ್ವಹಣೆಗೆ ಕ್ರಮ :*
ಬೆಂಗಳೂರು ನಗರದ ವಾಹನ ದಟ್ಟಣೆ ನಿರ್ವಹಣೆಗಾಗಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಉನ್ನತ ಮಟ್ಟದ ನಿರ್ವಹಣೆಗಾಗಿ ವಿಶೇಷ ಆಯುಕ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಸುಗಮ ಸಂಚಾರ ಹಾಗೂ ವಾಹನ ದಟ್ಟಣೆ ಕಡಿಮೆಗೊಳಿಸಲು ನೂತನ ತಂತ್ರಜ್ಞಾನದ ಕ್ಯಾಮೆರಾ ಅಳವಡಿಸಲಾಗುತ್ತಿದೆ ಎಂದರು.

 *6  ಹೊಸ ಸಂಚಾರ ಪೊಲೀಸ್ ಠಾಣೆ :*
ಎರಡು ಸಂಚಾರ ಪೊಲೀಸ್ ಠಾಣೆಯ ಅಂತರದಲ್ಲಿ ಉಂಟಾಗುವ ವಾಹನದಟ್ಟಣೆಯ ನಿರ್ವಹಣೆಗೆ ನಾಲ್ಕು ಹೊಸ ಸಂಚಾರ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದ್ದು, 2023-24 ರಲ್ಲಿ 6  ಹೊಸ ಸಂಚಾರ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು ನಗರದ ಕಾನೂನು ಸುವ್ಯವಸ್ಥೆಗಾಗಿ 9 ಹೊಸ ಪೊಲೀಸ್ ಠಾಣೆಗಳನ್ನು ಮಾಡಲಾಗುವುದು ಎಂದರು.
[07/03, 8:13 PM] Cm Ps: ಬೆಂಗಳೂರು, ಮಾರ್ಚ್ 07: *ಮಾನ್ಯ ಮುಖ್ಯಮಂತ್ರಿ ಶ್ರೀ* *ಬಸವರಾಜ ಬೊಮ್ಮಾಯಿ* ಅವರು *ಬೆಂಗಳೂರು ನಗರ* *ಪೊಲೀಸ್ ಇಲಾಖೆಯ ವತಿಯಿಂದ* ಆಯೋಜಿಸಿರುವ *ಬೆಳ್ಳಂದೂರು, ಮಹದೇವಪುರ,* *ಹೆಣ್ಣೂರು* ಮತ್ತು *ತಲಘಟ್ಟಪುರ ಸಂಚಾರ* *ಪೊಲೀಸ್ ಠಾಣೆ ಉದ್ಘಾಟಿಸಿ* ಮಾತನಾಡಿದರು.
[07/03, 8:19 PM] Cm Ps: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ವತಿಯಿಂದ ಪ್ರಕಟಿಸಲಾದ ವಿವಿಧ ವರದಿಗಳು ಹಾಗೂ 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಕ್ರಿಯಾಯೋಜನೆ ಹಾಗೂ FICCI ಸಹಯೋಗದೊಂದಿಗೆ ಟಿ.ವಿ. ಮೋಹನ್ ದಾಸ್ ಪೈ ನೇತೃತ್ವದ ಸಮಿತಿಯು ಸಿದ್ಧಪಡಿಸಿರುವ ದೇಶದ ಮೊದಲ ಉದ್ಯೋಗ ವರದಿಯನ್ನು ಬಿಡುಗಡೆ ಮಾಡಿದರು. ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಟಿ.ವಿ. ಮೋಹನ್ ದಾಸ್ ಪೈ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
[07/03, 9:44 PM] Cm Ps: *1 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿ ಕರ್ನಾಟಕ- ಕ್ರಿಯಾ ಯೋಜನೆ ಬಿಡುಗಡೆ*
ಬೆಂಗಳೂರು, ಮಾರ್ಚ್‌ 7- ರಾಜ್ಯವನ್ನು 1 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿ ಅಭಿವೃದ್ಧಿ ಪಡಿಸಲು ರೂಪಿಸಿದ ಕ್ರಿಯಾಯೋಜನೆಯು ಈ ಗುರಿಸಾಧನೆಯತ್ತ ಸರಿಯಾದ ದಿಸೆಯಲ್ಲಿ ಸಾಗಲು ನೆರವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು.
ಅವರು ಇಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ವಿವಿಧ ವರದಿಗಳು ಹಾಗೂ ಪ್ರಕಟಣೆಗಳು, 1 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಗುರಿ ಸಾಧನೆಯ ಕ್ರಿಯಾ ಯೋಜನೆ ಹಾಗೂ ರಾಜ್ಯದ ಉದ್ಯೋಗ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ರಾಜ್ಯದಲ್ಲಿ ಉದ್ಯೋಗ ಸೃಜನೆ ಹಾಗೂ ಕೌಶಲ್ಯಾಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ ಉದ್ಯೋಗ ನೀತಿಯನ್ನು ಜಾರಿಗೊಳಿಸಿದೆ. ಇದರೊಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿಯ ಸಾಂಸ್ಥೀಕರಣದ ಮೂಲಕ ಗುಣಮಟ್ಟ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ದುಡಿಯುವ ವರ್ಗ ಸಮಾಜದ ಪಿರಮಿಡ್‌ ನ ತಳಹದಿಯಾಗಿದ್ದಾರೆ. ಅವರ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಹಿಳೆಯರು, ಯುವಕರು ಹಾಗೂ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಸರ್ಕಾರ ಹೆಚ್ಚಿನ ಬೆಂಬಲ ನೀಡುತ್ತಿದೆ. ಇದಲ್ಲದೆ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೂ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ವಿವರಿಸಿದರು. 
1 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯ ಕ್ರಿಯಾ ಯೋಜನೆ ಹಾಗೂ ಉದ್ಯೋಗ ವರದಿ ನೀಡುವಲ್ಲಿ ಸಹಕರಿಸಿದ ಎಲ್ಲ ಅಧಿಕಾರಿಗಳೂ ಹಾಗೂ FICCI ಪ್ರತಿನಿಧಿಗಳು ಮತ್ತು ಇತರ ತಜ್ಞರ ಸಹಯೋಗವನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು.
ಸಭೆಯಲ್ಲಿ ಮಾತನಾಡಿದ ಟಿ.ವಿ. ಮೋಹನ್‌ ದಾಸ್‌ ಪೈ ಅವರು ರಾಜ್ಯದಲ್ಲಿ ಉದ್ಯೋಗ ಸೃಜನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದು, ರಾಜ್ಯದ ಅಭಿವೃದ್ಧಿ ಮಾದರಿಯು ದೇಶದಲ್ಲೇ ಅತ್ಯುತ್ತಮವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಇತ್ತೀಚೆಗೆ ರಾಜ್ಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಯುವ ಜನೋತ್ಸವ 2023ರಲ್ಲಿ ಪ್ರಪ್ರಥಮ ಬಾರಿಗೆ ಯುವ ಸಮ್ಮೇಳನದ ಚಟುವಟಿಕೆಗಳನ್ನು ಒಳಗೊಂಡ ಕಾಫೀ ಟೇಬಲ್‌ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ನವಭಾರತಕ್ಕೆ ನವ ಕರ್ನಾಟಕ ನಿರ್ಮಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆಯಲ್ಲಿ(SITK) 8 ತಜ್ಞರನ್ನು ಆಯ್ಕೆ ಮಾಡಲು ಪೋರ್ಟಲ್‌ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲು,  ಪೋರ್ಟಲ್‌ನ ಉದ್ಘಾಟನೆ ಹಾಗೂ SITK ಲಾಂಛನದ ಲೋಕಾರ್ಪಣೆ ಮಾಡಲಾಯಿತು. ಕರ್ನಾಟಕ ರಾಜ್ಯದ 26 ಅತ್ಯುತ್ತಮ ಆಡಳಿತ ಅಭ್ಯಾಸಗಳಿರುವ ಕೈಪಿಡಿಯನ್ನು ಮುಖ್ಯ ಮಂತ್ರಿಗಳು ಬಿಡುಗಡೆ ಮಾಡಿದರು. ಕರ್ನಾಟಕ ಅಂಕಿ ಅಂಶಗಳ ನೋಟ 2021-22 ನ್ನು ಬಿಡುಗಡೆ ಮಾಡಲಾಯಿತು. ಸಾಂಖ್ಯಿಕ ಮತ್ತು ಆರ್ಥಿಕ ನಿರ್ದೇಶನಾಲಯದ ಸಹಯೋಗದೊಂದಿಗೆ Federation of Indian Chambers of Commerce & Industry (FICCI) ಮೂಲಕ ತಯಾರಿಸಲಾದ ಕರ್ನಾಟಕ ಉದ್ಯೋಗಗಳ ವರದಿ (job report) ಯನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಟಿ.ವಿ. ಮೋಹನ್ ದಾಸ್ ಪೈ, ನಿಶಾ ಹೊಳ್ಳ, ಅಜಿತ್‌ ಐಸಾಕ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
[07/03, 10:55 PM] Cm Ps: *ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವ ನಗರ ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌*

ಬೆಂಗಳೂರು: ಬೆಂಗಳೂರು ವಿಶೇಷವಾಗಿರುವ ನಗರ. ಭಾರತ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವ ನಗರ. ಪ್ರತಿದಿನ 3/4 ಲಕ್ಷ ಜನರು ಬೆಂಗಳೂರಿಗೆ ಬಂದು ಹೋಗುತ್ತಾರೆ. ವಿದೇಶದಿಂದ ವಿಮಾನಗಳಲ್ಲಿ ವಿಜ್ಞಾನಿಗಳು, ಎಂಜಿನಿಯರ್ಸ್ ಗಳು,  ಸಾಫ್ಟವೇರ್ ಎಂಜಿನಿಯರ್ ಗಳಂತಹ ವಿಶೇಷ ಅತಿಥಿಗಳೇ  5 ಸಾವಿರದಷ್ಟು ಜನರು ಬರುತ್ತಾರೆ. 1.30 ಕೋಟಿ ಜನಸಂಖ್ಯೆಯಷ್ಟಿರುವ ನಗರದಲ್ಲಿ ಜನಸಂಖ್ಯೆಗಿಂತ ವೇಗವಾಗಿ ವಾಹನಗಳ ಸಂಖ್ಯೆ ಬೆಳೆಯುತ್ತಿದೆ. ಬೆಂಗಳೂರಿನಲ್ಲಿ ಜನಸಂಖ್ಯೆ ಮತ್ತು ವಾನಹಗಳ ಸಂಖ್ಯೆಯ ನಡುವೆ ಪೈಪೋಟಿ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ಬೆಂಗಳೂರಿನ ಹೆಣ್ಣೂರು ಟ್ರಾಫಿಕ್ ಪೊಲೀಸ್ ಠಾಣೆಯನ್ನು ಉದ್ಘಾಟನೆ ಮಾಡಿದ ಬಳಿಕ ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ಇನ್ನು ಐದು ವರ್ಷದಲ್ಲಿ ಜನಸಂಖ್ಯೆಯನ್ನು ದಾಟಿ ವಾಹನಗಳ ಸಂಖ್ಯೆ ಮುಂದೆ ಹೋಗುವ ವಿಶ್ವಾಸ ನನಗೆ ಇದೆ. ಇದನ್ನು ನಾವು ಯಾವ ರೀತಿ ತೆಗೆದುಕೊಳ್ಳುತ್ತೆವೆ. ಒಂದು ನಗರ ಬೃಹತ್ತಾಗಿ ಔದ್ಯೋಗಿಕವಾಗಿ, ಆರ್ಥಿಕವಾಗಿ  ಎಲ್ಲ ದೃಷ್ಟಿಯಿಂದ ಬೆಳೆಯುತ್ತಿರುವಾಗ ಇವೆಲ್ಲವೂ ಬಹಳ ಸಹಜ. ಬೆಳವಣಿಗೆ ಆಗಬೇಕು. ಬೆಳವಣಿಗೆ ‌ಅದಾಗಲೇ ಎಲ್ಲರ ಕೈಗೆ ಕೆಲಸ ಸಿಕ್ಕು ಆದಾಯ ಹೆಚ್ಚಾಗುತ್ತದೆ. ‌ರಾಜ್ಯದ ಆದಾಯ ಕೂಡ ಹೆಚ್ಚಾಗುತ್ತದೆ. ಆದರೆ ಈ ಬೆಳವಣಿಗೆ ಹಲವಾರು ಸಮಸ್ಯೆಗಳನ್ನು ಜತೆಗೆ ತರುತ್ತದೆ. ಅವುಗಳನ್ನು ಯಾವ ರೀತಿ ನಿವಾರಣೆಗೆ ಮಾಡಬೇಕು ಎನ್ನುವುದು ನಮ್ಮ ಮುಂದೆ ಇರುವ ಸವಾಲು. ಇದರ ಅರ್ಥ ಬೆಳವಣಿಗೆ ಬೇಡ ಅಂತಲ್ಲ.‌ ಬೆಳವಣಿಗೆ ಬೇಕು ಎಂದರೆ ಆ ಸಮಸ್ಯೆಗೆ ಪರಿಹಾರ ಬೇಕಾಗುತ್ತದೆ. ಹೀಗಾಗಿ ಒಂದು ನಗರದ ಯೋಜನೆಯನ್ನು ಕಲ್ಪನೆ, ಬೆಳವಣಿಗೆಯ ಗತಿಯನ್ನು ನೋಡಿದಾಗ ಅದಕ್ಕೆ ತಕ್ಕದಾದ ಯೋಜನೆಗಳನ್ನು ರೂಪಿಸುವುದು ಅವಶ್ಯಕವಾಗಿದೆ ಎಂದರು.

ಜಗತ್ತಿನ ಬೃಹತ್ ನಗರಗಳಲ್ಲಿ ಟ್ರಾಪಿಕ್ ಸಮಸ್ಯೆ ಇದೆ. ನ್ಯೂಯಾರ್ಕ್, ಲಂಡನ್‌, ಪ್ಯಾರಿಸ್, ಟೋಕಿಯೊ, ಶಾಂಘೈ ಸೇರಿದಂತೆ ಎಲ್ಲ ನಗರಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚು ಆಗುತ್ತದೆ. ಅದನ್ನು ನಾನು ಅನುಭವಿಸಿದ್ದೇನೆ. ಅದನ್ನು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ನಿಯಂತ್ರಣ ಮಾಡಲು ಪ್ರಯತ್ನ ಮಾಡುತ್ತಾರೆ. ಒಂದು ಸಣ್ಣ ಅಪಘಾತವಾದರೆ 50 ರಿಂದ 60 ಕಿ.ಮೀ ನಷ್ಟು ಟ್ರಾಫಿಕ್ ಜಾಮ್ ಆಗುತ್ತದೆ. ಇವತ್ತು ಅಂತಹದ್ದೇ ಪರಿಸ್ಥಿತಿ ನಮಗೆ ಬಂದಿದೆ. 


ನಗರದಲ್ಲಿ ಎಲ್ಲರ ಮನೆಯಲ್ಲಿಯೂ ಎರಡು ಮೂರು ಕಾರು,ಬೈಕ್ ಇರುತ್ತವೆ. ಎಲ್ಲರಿಗೂ ಪ್ರತ್ಯೆಕ ವಾಹನ ವ್ಯವಸ್ಥೆ ಬೇಕು.
ದೇಶದ ಬೇರೆ ನಗರಗಳಾದ ಮುಂಬೈ ದೆಹಲಿ, ಚೆನೈನಲ್ಲಿ ಪ್ರವಾಹ ಬಂದರೆ ಯಾರೂ ಮಾತನಾಡುವುದಿಲ್ಲ. ಆದರೆ ಬೆಂಗಳೂರಿನಲ್ಲಿ ಸ್ವಲ್ಪ ಪ್ರವಾಹ ಬಂದರೂ ಹೆಸರು ಕೆಡಿಸುವ ಕೆಲಸ ಮಾಡುತ್ತಾರೆ.‌
ಸಾಮಾಜಿಕ ಜಾಲ ತಾಣದಲ್ಲಿ ಟ್ರೋಲ್ ಮಾಡುವವರು ಹೆಚ್ಚಾಗಿದೆ ಎಂದರು.

ಬೆಂಗಳೂರಿನಲ್ಲಿ ಸಮಸ್ಯೆಗಳು ಇಲ್ಲ ಅಂತ ನಾನು ಹೇಳುತ್ತಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿಲಿಕಾನ್ ವ್ಯಾಲಿ ಅಂತ ಬೆಂಗಳೂರನ್ನು ಕರೆಯುತ್ತಾರೆ.  ಬೆಂಗಳೂರು ವಿಶ್ವ ಮಟ್ಟದಲ್ಲಿ ಸಾಕಷ್ಟು ಮುಂಚೂಣಿಯಲ್ಲಿದೆ. ಅತಿ ಹೆಚ್ಚು ಉದ್ಯೋಗ, ಏರೋಪ್ಲೇನ್ ಬಿಡಿಭಾಗಗಳ ತಯಾರಿಕೆ ಇಲ್ಲಿ ಆಗುತ್ತಿದೆ. ಎಫ್ ಡಿಐ, ಐಟಿ-ಬಿಟಿ, 400  ಫಾರ್ಚೂನ್ ಕಂಪನಿಗಳು ಬೆಂಗಳೂರಿನಲ್ಲಿವೆ. ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಎಲ್ಲ ಕ್ಷೇತ್ರದಲ್ಲಿ ಬೆಂಗಳೂರು ಬೃಹತ್ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಇಂತಹ ಹೆಸರು ಕೆಡಿಸುವ ಕೆಲಸವನ್ನು ನಾವು ಯಾರು ಮಾಡಬಾರದು. ಬೆಂಗಳೂರಿನ ಬಗ್ಗೆ ‌ಬೆಂಗಳೂರಿಗೆ ಅಭಿಮಾನ ಇರಬೇಕು ಎಂದರು.


ಬೆಂಗಳೂರು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನರ ಇದ್ದ ಹಾಗೆ. ಆ ಭಾಗದಿಂದ ಬಹಳ ವಾಹನಗಳ ಬರುತ್ತವೆ. ರಸ್ತೆ ಎಷ್ಟಿದೆಯೋ ಅಷ್ಟೇ ಇತ್ತು. ಹೀಗಾಗಿ‌ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಇದನ್ನು ನಿಯಂತ್ರಣ ಮಾಡಲು   ಸಲೀಮ್ ಅವರನ್ನು ವಿಶೇಷ ಆಯುಕ್ತರನ್ನಾಗಿ‌‌ ನೇಮಿಸಿದ್ದೇವೆ. ಅವರಿಂದ
ಸಾಕಷ್ಟು ಟ್ರಾಪಿಕ್ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಇನ್ನೂ ಕೆಲವು ಕೆಲಸ ಆಗಬೇಕು. ಫ್ಲೈ ಓವರ್ ಗಳು, ಸೀಮ್‌ಲೆಸ್ ಟ್ರಾಫಿಕ್, ಸಿಗ್ನಲ್ ಸಿಂಕ್ರನೈಸ್ ವ್ಯವಸ್ಥೆ ಮಾಡಲಾಗುತ್ತಿದೆ. ಟ್ರಾಫಿಕ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿ ಎಂದರು.

*ಹೆಚ್ಚುವರಿ ಪೊಲೀಸ್ ಠಾಣೆಗಳಿಗೆ ಅನುಮೋದನೆ*

ಬೆಂಗಳೂರಿನಲ್ಲಿ 4 ಪೊಲೀಸ್ ಸ್ಟೇಷನ್ ಗಳಿಗೆ ಕಳೆದ  ವರ್ಷ ಅನುಮೋದನೆ ನೀಡಿ ಈ ವರ್ಷ ಪ್ರಾರಂಭ ಮಾಡಿದ್ದೇವೆ. ಈ ವರ್ಷ 5 ಹೊಸ ಟ್ರಾಫಿಕ್ ಪೊಲೀಸ್ ಸ್ಟೇಷನ್ ಮಾಡುತ್ತಿದ್ದೇವೆ. 9 ಹೊಸ ಕಾನೂನು ಮತ್ತು ಸುವ್ಯವಸ್ಥಿತ ಪೊಲೀಸ್ ಸ್ಟೇಷನ್ ಮತ್ತು 6 ಮಹಿಳಾ ಪೊಲೀಸ್ ಸ್ಟೇಷನ್ ಸೇರಿ ಒಟ್ಟು 20 ಹೊಸ ಪೊಲೀಸ್ ಸ್ಟೇಷನ್ ಮಾಡಬೇಕು ಎಂದು ನಾನು ಗೃಹ ಸಚಿವನಾಗಿದ್ದರಿಂದಲೂ ಬಹಳ ಪ್ರಯತ್ನ ಪಟ್ಟಿದ್ದೆ. ಈಗ ಅದಕ್ಕೆ ಮುಖ್ಯಮಂತ್ರಿಯಾಗಿ ಅನುಮೋದನೆ ಕೊಟ್ಟಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ಸಚಿವ ಬೈರತಿ ಬಸವರಾಜ, ಕಮಿಷನರ್ ಪ್ರತಾಪ್ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Post a Comment

Previous Post Next Post