ರಾಷ್ಟ್ರಕ್ಕೆ ವಿವಿಧ ಯೋಜನೆಗಳ ಸಮರ್ಪಣೆ ಹಾಗೂ ಶಂಕುಸ್ಥಾಪನೆ* PM, CM ಕಾರ್ಯಕ್ರಮ ದಲ್ಲಿ

[11/03, 10:34 PM] Cm Ps: *ಮೈಸೂರು ರಸ್ತೆ ಕ್ರೆಡಿಟ್ ಯಾರಿಗೆ ಎನ್ನುವುದನ್ನು ಜನರೇ ತೀರ್ಮಾನ ಮಾಡಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌*

ಬೆಂಗಳೂರು: ಮೈಸೂರು ದಶಪಥ ರಸ್ತೆಯ ಕ್ರೆಡಿಟ್ ಯಾರಿಗೆ ಸಿಗಬೇಕು ಎನ್ನುವುದನ್ನು ಜನರೇ ತೀರ್ಮಾನ ಮಾಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಹೇಳಿದರು.

ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಮೈಸೂರು ಹೈವೆ ಮೊದಲು ನಾಲ್ಕು ಪಥದ ರಸ್ತೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಾರಂಭವಾಯಿತು.  2004/2007 ರಲ್ಲಿ ಪ್ರಾರಂಭ ಆದ ಬಳಿಕ ಭಾರತ ಸರ್ಕಾರ ಇದನ್ನು ಅಂತರಾಷ್ಟ್ರೀಯ ಹೆದ್ದಾರಿ ಎಂದು 2014 ರಲ್ಲಿ ಘೋಷಣೆ ಮಾಡಿತು. ಘೋಷಣೆ ಮಾಡಿ 10-15 ವರ್ಷವಾದರೂ ಯುಪಿಎ ಸರ್ಕಾರ ಅಂತರರಾಷ್ಟ್ರೀಯ ಹೆದ್ದಾರಿ ಕೆಲಸವನ್ನು ಪೂರ್ಣ ಮಾಡಲಿಲ್ಲ. ಕೇವಲ ಘೋಷಣೆ ಆಗಿತ್ತು. 2014 ರಲ್ಲಿ ಘೋಷಣೆ ಆಗಿ, ಡಿಪಿಆರ್ ಆದ ಬಳಿಕ ಅಲೈನ್ಮೆಂಟ್ ಆಗಿದ್ದು 2015 ರಲ್ಲಿ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

2015 ರಲ್ಲಿ ಎನ್ ಡಿಎ  ಸರ್ಕಾರವಿತ್ತು‌. ಬೆಂಗಳೂರು  ಮೈಸೂರು ಹೆದ್ದಾರಿ 2016 ರಲ್ಲಿ ಅಂತರಾಷ್ಟ್ರೀಯ ಹೆದ್ದಾರಿಯ ಅಥಾರಿಟಿ ಹ್ಯಾಂಡ್ ಓವರ್ ಆಯ್ತು‌. ಆಗ  ಎನ್‌ಡಿಎ ಸರ್ಕಾರವಿತ್ತು‌.
ಅಮೇಲೆ ಟೆಂಡರ್ ಪ್ರೋಸೆಸ್ ಮಾಡಿ ಹಣ ಬಿಡುಗಡೆ ಮಾಡಲಾಗಿದ್ದು,
2023ರಲ್ಲಿ ಇದು ರಸ್ತೆ ಕೆಲಸ ಮುಗಿದಿದೆ. ಸಂಪೂರ್ಣ ಕೆಲಸ ಎನ್ ಡಿಎ ಸರ್ಕಾರದ ಅವಧಿಯಲ್ಲೇ ಈ ಯೋಜನೆ ಆಗಿದೆ. ಪ್ರಧಾನಮಂತ್ರಿ ಮೋದಿಯವರ ನೇತೃತ್ವದಲ್ಲಿ ಈ ಯೋಜನೆಯಾಗಿದೆ. ಜನರಿಗೆ ಈ ಮಾಹಿತಿ ಕೊಡಬೇಕು ಅಂತ ನಾನು ಕೊಟ್ಟಿದ್ದೇನೆ ಎಂದರು.

ಈ ಮಧ್ಯೆ ನೈಸ್ ರೋಡ್ ಮಾಡ್ತೀವಿ ಅಂತ ನಿಲ್ಲಿಸಿದರು.
ನೈಸ್ ರೋಡ್ ಸಹ ಬರಲಿಲ್ಲ ಇದು ಆಗಲಿಲ್ಲ. ಆಗ ವಾಹನ ದಟ್ಟನೆ ಜಾಸ್ತಿ ಆಯ್ತು. ಸಮಸ್ಯೆ ಆಗುತ್ತದೆ ಎಂದಾಗ ನ್ಯಾಷನಲ್ ಹೈವೇ ನವರು ತಗೆದುಕೊಂಡು ಮೋದಿ ನೇತೃತ್ವದ ಸರ್ಕಾರ ಈ ಯೋಜನೆ ಮುಗಿಸಿದ್ದಾರೆ. ಯಾರಿಗೆ ಕ್ರೆಡಿಟ್ ಅನ್ನುವುದನ್ನು ಜನರ ತೀರ್ಮಾನ ಮಾಡಲಿ.
ಮೋದಿ ನೇತೃತ್ವದ ಸರ್ಕಾರವೇ ಹಣ ಬಿಡುಗಡೆ ಮಾಡಿ ಯೋಜನೆ ಮುಗಿಸಿದೆ. ಮೋದಿ ಸರ್ಕಾರವೇ ಈ ಯೋಜನೆ ಮಾಡಿದ್ದು ಅಂತ ಜನರಿಗೂ ಗೊತ್ತಾಗಿದೆ ಅಂತ ನಾನು ಭಾವಿಸುತ್ತೇನೆ ಎಂದರು.
[12/03, 12:08 AM] Cm Ps: *ಜನೋಪಯೋಗಿ ಶಾಸಕರಿಗೆ ನಿಮ್ಮ ಆಶೀರ್ವಾದ ಇರಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌*


ಬೆಂಗಳೂರು: ಕೃಷ್ಣಪ್ಪ ಅವರು ನಿಮ್ಮ ಜೊತೆಗೆ ಇದ್ದು, ನಿಮ್ಮ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಕಂಕಣಬದ್ದವಾಗಿ ಕೆಲಸ ಮಾಡುವ ಜನೋಪಯೋಗಿ ಶಾಸಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ಉತ್ತರಹಳ್ಳಿಯ ಊರು ಹಬ್ಬದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ಕೃಷ್ಣಪ್ಪ ಅವರು ಜನಪ್ರಿಯ ಶಾಸಕರು ಅಂತ ನಾನು ಹೇಳಿಲ್ಲ. ಯಾಕೆ ಅಂತ ಕೇಳಿದರೆ, ಏನು ಕೆಲಸ ಮಾಡದೇ ಜನಪ್ರಿಯ ಶಾಸಕರು ಅಂತ ಹೇಳಿಕೊಂಡು ಮೇಲೆ ಹೋದವರು ತುಂಬ ಜನರು ಇದ್ದಾರೆ. ಜನರಿಗೆ ಉಪಯೋಗ ಆಗುವ ಕೆಲಸ ಮಾಡುವ ಶಾಸಕ ಕೃಷ್ಣಪ್ಪರು. ಜನರ ಕಷ್ಟಗಳನ್ನು, ಸಮಸ್ಯೆಗಳನ್ನು ತಿಳಿದುಕೊಂಡು ಬಗೆಹರಿಸುವ ಶಾಸಕರು. ಸದಾ ಕ್ರಿಯಾಶೀಲವಾಗಿ ನಿಮ್ಮ ಹಿತರಕ್ಷಣೆ ಮಾಡುವ ಶಾಸಕ. ಅದಕ್ಕೆ ಜನೋಪಯೋಗಿ ಶಾಸಕ ಎಂದು ಹೇಳಿದ್ದೇನೆ ಎಂದರು.

ರಸ್ತೆ, ರಾಜಕಾಲುವೆ, ಹಳ್ಳಿಗಳ ಅಭಿವೃದ್ಧಿಗೆ ನನಗೆ ಗೊತ್ತಿಲ್ಲದ ಹಾಗೇ ಅನುದಾನ ತೆಗೆದುಕೊಂಡು ಹೋಗಿ ಕೆಲಸ ಮಾಡಿದ್ದಾರೆ. ಅದಕ್ಕಾಗಿ ನನಗೆ ಕೃಷ್ಣಣ್ಣ ಎಂದರೆ ಪ್ರೀತಿ. ಪ್ರೀತಿ ವಿಶ್ವಾಸದಿಂದ ಈ ಕ್ಷೇತ್ರದ ಜನರಿಗೊಸ್ಕರ ಯಾವ ರೀತಿ ಕೆಲಸ ಮಾಡಬೇಕು ಎನ್ನುವುದಕ್ಕೆ ಕೃಷ್ಣಪ್ಪ ಅವರು ಸಾಕ್ಷಿ. ಅವರ ಕುಟುಂಬಕ್ಕೆ ದೊಡ್ಡ ಇತಿಹಾಸ ಇದೆ. ಅವರ  ಅಣ್ಣನವರು ಈ ಭಾಗದ ಶಾಸಕರು, ಸಂಸದರಾಗಿ ಕೆಲಸ ಮಾಡಿದ್ದಾರೆ. ಇವರು 25/30 ವರ್ಷ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಿ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಈ ಭಾಗದ ಜನರ ಹಾಗೂ ರಾಜ್ಯದ ಜನರ ಮನಸ್ಸು ಗೆದ್ದಿರುವ ಕೃಷ್ಣಪ್ಪನವರನ್ನು ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ. ಊರ ಹಬ್ಬ ಅಂದರೆ ಬೆಂಗಳೂರಿಗರಿಗೆ ಗೊತ್ತಾಗುವುದಿಲ್ಲ. ದಕ್ಷಿಣ ಕ್ಷೇತ್ರದಲ್ಲಿ ಹಳ್ಳಿಯ ಸೊಗಡು, ಶಹರದ ವೈಭವ ಇಲ್ಲಿದೆ‌. ಅಲ್ಲದೇ ಬೆಂಗಳೂರಿಗೆ ಹೆಚ್ಚು ಆದಾಯ ಕೊಡುವ ಕ್ಷೇತ್ರದಲ್ಲಿ ದಕ್ಷಿಣದ ಕ್ಷೇತ್ರವು ಒಂದು ಎಂದು ಹೇಳಿದರು.

ಬೆಂಗಳೂರು ಅಭಿವೃದ್ಧಿಗೆ 6 ಸಾವಿರ ಕೋಟಿ ಕೊಡಲಾಗಿದೆ. ರಾಜಕಾಲುವೆ ಅಭಿವೃದ್ಧಿಗೆ 2 ಸಾವಿರ ಕೋಟಿ ಕೊಟ್ಟಿದ್ದೇವೆ. ನಮ್ಮ ಕ್ಲಿನಿಕ್ ಆಸ್ಪತ್ರೆಗಳನ್ನು ಮಾಡಿದ್ದೇವೆ. ಬೆಂಗಳೂರು ದಕ್ಷಿಣ ಕ್ಷೇತ್ರ ಹೆಚ್ಚು ಬೆಳೆಯುತ್ತಿದೆ. ಒಳ್ಳೆಯ ಜನರು, ಒಳ್ಳೆಯ ದೇವಸ್ಥಾನ ಇಲ್ಲಿವೆ. ಒಳ್ಳೆಯ ಶಾಸಕರನ್ನು ನೀವು ಪಡೆದಿದ್ದಿರಿ. ಮುಂದಿನ ಬಾರಿಯೂ ಕೃಷ್ಣಪ್ಪರನ್ನು ಆಯ್ಕೆ ಮಾಡಿ. ನಾನು ಮುಂದಿನ ವರ್ಷದ ಊರು ಹಬ್ಬಕ್ಕೆ ಬರುತ್ತೇನೆ ಎಂದರು. ನೀವು ಸಂಪೂರ್ಣ ಆಶೀರ್ವಾದ ಮಾಡಲಿ, ನಮ್ಮ ನಾಡು ಸುಭಿಕ್ಷು ನಾಡು ಆಗಲಿ ಎಂದರು.
[12/03, 2:10 PM] Cm Ps: ಮಂಡ್ಯ, ಮಾರ್ಚ್ 12: *ಮಾನ್ಯ* *ಮುಖ್ಯಮಂತ್ರಿ ಬಸವರಾಜ* *ಬೊಮ್ಮಾಯಿ* ಅವರು ಇಂದು *ಬೆಂಗಳೂರು - ಮೈಸೂರು ಎಕ್ಸ್* *ಪ್ರೆಸ್  ವೇ*  ಲೋಕಾರ್ಪಣೆ ಹಾಗೂ *ಮೈಸೂರು* - *ಕುಶಾಲನಗರ 4* ಪಥಗಳ ಹೆದ್ದಾರಿ ಕಾಮಗಾರಿಗೆ *ಶಂಕುಸ್ಥಾಪನಾ ಸಮಾರಂಭದಲ್ಲಿ*  *ಪ್ರಧಾನ* *ಮಂತ್ರಿ ನರೇಂದ್ರ* *ಮೋದಿಯವರೊಂದಿಗೆ* ಪಾಲ್ಗೊಂಡು *ಮಾತನಾಡಿದರು.*
[12/03, 2:21 PM] Cm Ps: ಮಂಡ್ಯ, ಮಾರ್ಚ್ 12 : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು  8479 ಕೋಟಿ ರೂ.ಗಳ ವೆಚ್ಚದ ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್  ವೇ  ರಾಷ್ಟಕ್ಕೆ ಸಮರ್ಪಿಸಿದರು. ಇದೇ ವೇಳೆ  4128 ಕೋಟಿ ರೂ.ವೆಚ್ಚದ ಮೈಸೂರು - ಕುಶಾಲನಗರ 4 ಪಥಗಳ ಹೆದ್ದಾರಿ ಕಾಮಗಾರಿಯ 4 ಪ್ಯಾಕೇಜ್  ಹಾಗೂ ಷಟ್ಪಥ ಬೆಂಗಳೂರು- ಮೈಸೂರು ವಿಭಾಗ ರಾಷ್ಟ್ರೀಯ ಹೆದ್ದಾರಿ 275 ರ 2 ಪ್ಯಾಕೇಜ್ ಗಳ  ಶಂಕುಸ್ಥಾಪನೆ ನೆರವೇರಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ರಾಷ್ಟ್ರೀಯ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ, ಸಂಸದರಾದ ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್  ಮೊದಲಾದ ಗಣ್ಯರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.
[12/03, 6:20 PM] Cm Ps: ಪ್ರಧಾನಿ ಮೋದಿಯವರಿಂದ ಬೆಂಗಳೂರು- ಮೈಸೂರು ದಶಪಥ ರಸ್ತೆ ಲೋಕಾರ್ಪಣೆ


*ಮಂಡ್ಯ ಜಿಲ್ಲೆಯನ್ನು ದೇಶದಲ್ಲಿಯೇ ನಂಬರ್ ಒನ್ ಮಾಡಲು ಕಂಕಣಬದ್ಧ: ಸಿಎಂ ಬೊಮ್ಮಾಯಿ*


ಮಂಡ್ಯ, ಮಾರ್ಚ್ 12: 

ಮಂಡ್ಯ ಜಿಲ್ಲೆಯನ್ನು ದೇಶದಲ್ಲಿಯೇ ನಂಬರ್ ಒನ್ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಂಗಳೂರು- ಮೈಸೂರು ಎಕ್ಸ್‍ಪ್ರೆಸ್‍ವೇ, 8479 ಕೋಟಿ ರೂ.ವೆಚ್ಚದ 118 ಕಿಮೀ.ಉದ್ದ ಮೈಸೂರು-ಬೆಂಗಳೂರು ದಶಪಥ ರಸ್ತೆ  ಲೋಕಾರ್ಪಣೆ  ಹಾಗೂ  4128 ಕೋಟಿ ರೂ.ವೆಚ್ಚದ ಮೈಸೂರು - ಕುಶಾಲನಗರ 4 ಪಥಗಳ ಹೆದ್ದಾರಿ ಕಾಮಗಾರಿಯ 4 ಪ್ಯಾಕೇಜ್  ಹಾಗೂ ಷಟ್ಪಥ ಬೆಂಗಳೂರು- ಮೈಸೂರು ವಿಭಾಗ ರಾಷ್ಟ್ರೀಯ ಹೆದ್ದಾರಿ 275 ರ 2 ಪ್ಯಾಕೇಜ್ ಗಳ  ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಭಾಗವಹಿಸಿ ಮಾತನಾಡಿದರು.


 ಡಬಲ್ ಇಂಜಿನ್ ಸರ್ಕಾರ ಕರ್ನಾಟಕದ ಅಭಿವೃದ್ದಿಗೆ ನಿರಂತರವಾಗಿ ಕೆಲಸ ಮಾಡುತ್ತಿದೆ. 100 ಕೋಟಿಗೂ ಹೆಚ್ಚು ಅನುದಾನ ನೀಡಿ, ಮುಚ್ಚಿಹೋಗಿದ್ದ ಮಂಡ್ಯದ ಸಕ್ಕರೆ ಕಾರ್ಖಾನೆ ಪುನರಾರಂಭಿಸಿದ್ದು ನಮ್ಮ ಸರ್ಕಾರ. ಈ ವರ್ಷ ಎಥನಾಲ್ ಘಟಕವನ್ನು ಮೈಶುಗರ್ ಕಾರ್ಖಾನೆಯಲ್ಲಿ  ಪ್ರಾರಂಭಿಸಲಾಗುವುದು ಎಂಸು ಭರವಸೆ ನೀಡಿದರು.

*ಮಂಡ್ಯ  ಇಸ್ ಇಂಡಿಯಾ  :*
ವಿ.ಸಿ ನಾಲೆ, ಪೂರಿಗಾಲಿ ಏತ ನೀರಾವರಿ ಯೋಜನೆಗಳಿಗೆ ನಮ್ಮ ಸರ್ಕಾರ  ಒತ್ತು ನೀಡಿದೆ.  ಪ್ರಧಾನ ಮಂತ್ರಿ ಸಡಕ್ ಯೋಜನೆಯಡಿ 152 ಕಿ.ಮೀ. ರಸ್ತೆಯನ್ನು ಮಂಡ್ಯ ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ. ಮಂಡ್ಯದಲ್ಲಿ  ಕಿಸಾನ್ ಸಮ್ಮಾನ್ ಯೋಜನೆಯಡಿ 2, 70, 522 ರೈತರಿಗೆ ಅನುಕೂಲವಾಗಿದೆ.  35 ಸಾವಿರ ಮಕ್ಕಳಿಗೆ ರೈತ ವಿದ್ಯಾ ನಿಧಿ, 4.92 ಲಕ್ಷ ಆಯುಷ್ಮಾನ್ ಕಾರ್ಡುಗಳನ್ನು ವಿತರಿಸಿಸಲಾಗಿದೆ. ಮಂಡ್ಯ  ಇಸ್ ಇಂಡಿಯಾ ಎಂಬ ಕಲ್ಪನೆಯ ಆಧಾರದ ಮೇಲೆ ಅಭಿವೃದ್ಧಿ ಕೈಗೊಳ್ಳಲಾಗಿದೆ. ಮೂವತ್ತು ವರ್ಷಗಳ ಮಂಡ್ಯದ ವ್ಯವಸ್ಥೆ ಬದಲಾಗುತ್ತದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿಗಳೂ ವ್ಯಕ್ತಪಡಿಸಿದರು.  

*53 ಲಕ್ಷ ರೈತರಿಗೆ 20,000 ಕೋಟಿ ಕಿಸಾನ್ ಸಮ್ಮಾನ್ ಯೋಜನೆ :*

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ 53 ಲಕ್ಷ ರೈತರಿಗೆ 20,000 ಕೋಟಿ ರೂ. ನೀಡಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 17 ಲಕ್ಷ ಜನರಿಗೆ ಮಂಜೂರಾಗಿದೆ. 1.25 ಕೋಟಿ ಆಯುಷ್ಮಾನ್ ಕಾರ್ಡ್ ಜನರಿಗೆ ವಿತರಿಸಲಾಗಿದೆ.ರಾಜ್ಯದಲ್ಲಿ 64 ಸಾವಿರ ಕೋಟಿ ರೂ. ವೆಚ್ಚದಲ್ಲಿ 6000 ಕಿ.ಮಿ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗುತ್ತಿದೆ. ಜನಕಲ್ಯಾಣ, ರಾಜ್ಯ ಕಲ್ಯಾಣ, ರಾಷ್ಟ್ರಕಲ್ಯಾಣಗಳನ್ನು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಸಾಕಾರಗೊಳಿಸಲಾಗುತ್ತಿದೆ ಎಂದರು.

*ಎಕ್ಸ್ ಪ್ರೆಸ್ವೇ- ಅಭಿವೃದ್ಧಿ ವೇಗದ ಪ್ರತಿಬಿಂಬ*

ಭಾರತದ ಮಿತ್ರದೇಶಗಳು ಪ್ರಧಾನಿ ಮೋದಿಯವರನ್ನು ವಿಶ್ವನಾಯಕರೆಂದು ಒಪ್ಪಿಕೊಂಡಿದ್ದಾರೆ. ಜಿ20ಯ ಅಧ್ಯಕ್ಷತೆ ಭಾರತಕ್ಕೆ ಬಂದಿರುವುದಕ್ಕೆ ಪ್ರಧಾನಿ ಮೋದಿಯವರ ನಾಯಕತ್ವೇ ಕಾರಣ. ಬೆಂಗಳೂರು ಮೈಸೂರು ವಾಹನ ಪ್ರಧಾನಿ ಮೋದಿಯವರ ಅವಧಿಯಲ್ಲಿಯೇ ದಟ್ಟಣೆ ನಿವಾರಿಸುವ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ವೇ ರಸ್ತೆ ನಿರ್ಮಾಣದ ಯೋಜನೆಗೆ ಚಾಲನೆ, ಡಿಪಿಆರ್ ಅನುಮೋದನೆ, 4000 ಕೋಟಿ ರೂ. ಹೆಚ್ಚುವರಿ ಅನುದಾನ  ಮಂಜೂರು ಮಾಡಿ,ಅಡಿಗಲ್ಲು ಹಾಕಿ, ಭೂ ಸ್ವಾಧೀನ ಪ್ರಕ್ರಿಯೆ, ಯೋಜನೆಯ ಸಂಪೂರ್ಣ ಅನುಷ್ಠಾನಗೊಳಿಸಿ, ಲೋಕಾರ್ಪಣೆ ಮಾಡಿರುವುದು, ಪ್ರಧಾನಿ ಮೋದಿಯವರ ಕಾರ್ಯದಕ್ಷತೆ ಹಾಗೂ ಅಭಿವೃದ್ಧಿಯ ವೇಗವನ್ನು ಬಿಂಬಿಸುತ್ತದೆ. ಡಬಲ್ ಇಂಜಿನ್ ಸರ್ಕಾರದಿಂದ ಈ ಯೋಜನೆಯು ಸಾಕಾರಗೊಳಿಸಲಾಗಿದೆ ಎಂದರು.

ಕೇಂದ್ರ ರಾಷ್ಟ್ರೀಯ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ, ಸಂಸದರಾದ ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್  ಮೊದಲಾದ ಗಣ್ಯರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.
[12/03, 6:50 PM] Cm Ps: ಧಾರವಾಡ: ಪ್ರಧಾನಮಂತ್ರಿ ‌ನರೇಂದ್ರ ಮೋದಿಯವರು ಇಂದು ಧಾರವಾಡ ಐಐಟಿ ಸೇರಿದಂತೆ‌ ವಿವಿಧ ಅಭಿವೃದ್ಧಿ ‌ಯೋಜನೆಗಳನ್ನು ಉದ್ಘಾಟನೆ ಮಾಡಿದರು. 
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಸಿಸಿ ಪಾಟೀಲ್, ಗೋವಿಂದ ಕಾರಜೋಳ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿಎಂ ನಿಂಬಣ್ಣನವರ, ವಿಧಾನ  ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರು, ಪ್ರದೀಪ್ ಶೆಟ್ಟರ್ ಮತ್ತಿತರರು ಹಾಜರಿದ್ದರು
[12/03, 7:18 PM] Cm Ps: ಪ್ರಧಾನಿಗಳಿಂದ ಧಾರವಾಡ ಐಐಟಿ ಉದ್ಘಾಟನೆ


*ರಾಜ್ಯದಲ್ಲಿ ಐದು ವರ್ಷಗಳಲ್ಲಿ ಸುಮಾರು 33 ಲಕ್ಷ ಉದ್ಯೋಗ ಸೃಜನೆ : ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ*


ಧಾರವಾಡ, ಮಾರ್ಚ್ 12:ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 13 ಲಕ್ಷ ಕೆಲಸಗಳಂತೆ  ಕಳೆದ ಐದು ವರ್ಷಗಳಲ್ಲಿ ಸುಮಾರು 33 ಲಕ್ಷ ಉದ್ಯೋಗ ಸೃಜನೆ  ಮಾಡಿರುವುದರ ಹಿಂದೆ ಕೇಂದ್ರ ಸರ್ಕಾರದ ಶಕ್ತಿ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ಧಾರವಾಡ  ಐಐಟಿ ಉದ್ಘಾಟನೆ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ಸಮಾರಂಭದಲ್ಲಿ  ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಪಾಲ್ಗೊಂಡು    ಮಾತನಾಡಿದರು.

 ದೇಶದಲ್ಲಿ ಅತಿ ಕಡಿಮೆ ನಿರುದ್ಯೋಗ ಇರುವ ರಾಜ್ಯ ಕರ್ನಾಟಕ ಎಂದ ಅವರು,  ರಾಜಕಾರಣಿಗಳ ಕಣ್ಣು ಮುಂದಿನ ಚುನಾವಣೆಗಳ ಮೇಲಿದ್ದರೆ, ಒಬ್ಬ ಮುತ್ಸದ್ಧಿಯ ಕಣ್ಣು ಮುಂದಿನ ಪೀಳಿಗೆಯ ಭವಿಷ್ಯದ ಮೇಲಿರುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಂತಹ ಮುತ್ಸದ್ಧಿತನ ಹೊಂದಿರುವ ನೇತಾರ.  ತಾಂತ್ರಿಕವಾಗಿ ದೇಶವನ್ನು ಸಶಕ್ತಗೊಳಿಸಲು ಧಾರವಾಡ ಐಐಟಿ ಸ್ಥಾಪಿಸಿದ್ದಾರೆ. ಹೊಸಪೇಟೆ -ಹುಬ್ಬಳ್ಳಿ- ತಿನೈಘಾಟ್ ರೈಲ್ವೇ ಮಾರ್ಗದ ವಿದ್ಯುದ್ದೀಕರಣ ಸೇರಿದಂತೆ ಅನೇಕ ಸುಧಾರಣೆಗಳನ್ನು ತಂದಿದ್ದಾರೆ ಎಂದರು. 

*ರೈಲ್ವೇ ಸುಧಾರಣೆಗೆ 7651 ಕೋಟಿ ಮೀಸಲು*
 ಪ್ರಸಕ್ತ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೇ ಸುಧಾರಣೆಗೆ 7651 ಕೋಟಿ ಮೀಸಲಿಟ್ಟಿರುವ ಡಬಲ್ ಇಂಜಿನ್ ಸರ್ಕಾರ ಇದಾಗಿದೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡಿದೆ. ಶಿಕ್ಷಣ,ಮೂಲಭೂತ ಸೌಕರ್ಯ, ಕೈಗಾರೀಕರಣದಂತಹ ಮಹತ್ವದ ಕಾರ್ಯಗಳು  ರಾಜ್ಯ ಮತ್ತು ಕೇಂದ್ರದಲ್ಲಿ ಏಕಕಾಲದಲ್ಲಿ ನಡೆಯುತ್ತಿವೆ ಎಂದರು.

*ಸಂಪರ್ಕ*

ಪೋರ್ಟ್ ನಿಂದ ಇನ್ ಲ್ಯಾಂಡ್ ವರೆಗೆ ಸಂಪರ್ಕ ಕಲ್ಪಿಸುವ ಕೆಲಸ ಮಾಡಿದ್ದಾರೆ‌. 
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ದಿಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಉತ್ತರ ಕರ್ನಾಟಕ ಹಿಂದೆಂದೂ  ಇಲ್ಲದಷ್ಟು ಅಭಿವೃದಿಯಾಗುತ್ತಿದೆ ಎಂದರು. 

 
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಗೋವಿಂದ ಕಾರಜೋಳ,ಸಿ.ಸಿ.ಪಾಟೀಲ, ವಿ.ಸೋಮಣ್ಣ,ಬಿ.ಎ.ಬಸವರಾಜ, ಶಂಕರ ಪಾಟೀಲ ಮುನೇನಕೊಪ್ಪ,ಮಾಜಿಮುಖ್ಯಮಂತ್ರಿ-ಶಾಸಕ ಜಗದೀಶ್ ಶೆಟ್ಟರ್, ಶಾಸಕರಾದ ಸಿ.ಎಂ.ನಿಂಬಣ್ಣವರ,ಅರವಿಂದ ಬೆಲ್ಲದ,ಅಮೃತ ದೇಸಾಯಿ,ವಿಧಾನಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್,ಎಸ್.ವಿ.ಸಂಕನೂರ,ಮಹಾನಗರಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ  ವೇದಿಕೆಯಲ್ಲಿ ಉಪಸ್ಥಿತರಿದ್ದರು.
[12/03, 7:42 PM] Cm Ps: *ಉತ್ತಮ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಆದ್ಯತೆ*
*ಸಾರಿಗೆ ಸಂಪರ್ಕ ಜಾಲದ ಆಧುನೀಕರಣ*
*-ಪ್ರಧಾನಿ ನರೇಂದ್ರ ಮೋದಿ*

ಧಾರವಾಡ:  ಮಾ.12:

ಉತ್ತಮ ಶಿಕ್ಷಣವು ಪ್ರತಿಯೊಬ್ಬರಿಗೆ ದೊರಕಬೇಕಿದೆ. ಉತ್ತಮ ಶಿಕ್ಷಣ ಸಂಸ್ಥೆ ಆರಂಭಿಸಿದಷ್ಟು ಉತ್ತಮ ಶಿಕ್ಷಣ ದೊರಕುವುದು ಸಾಧ್ಯವಾಗಲಿದೆ.
ಆದ್ದರಿಂದ ಉತ್ತಮ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಸರಕಾರ ಆದ್ಯತೆ ನೀಡಿದೆ.ದೇಶದಲ್ಲಿ ಕಳೆದ 9 ವರ್ಷಗಳಿಂದ ಆಧುನೀಕರಣಕ್ಕೆ ಒತ್ತು ನೀಡಲಾಗಿದೆ. ಗ್ರಾಮೀಣ ರಸ್ತೆ ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ರೈಲು ಮಾರ್ಗಗಳ ವಿಸ್ತರಣೆ ಹಾಗೂ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ .ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ಇಲ್ಲಿನ ಚಿಕ್ಕಮಲ್ಲಿಗವಾಡದಲ್ಲಿ ನಿರ್ಮಾಣವಾಗಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ನೂತನ ಕಟ್ಟಡ ಉದ್ಘಾಟಿಸಿ,ವಿವಿಧ ಯೋಜನೆಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.


ಜಗದ್ಗುರು ಬಸವೇಶ್ವರ ಅವರಿಗೆ ನನ್ನ ನಮಸ್ಕಾರಗಳು. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಈ ನಾಡಿನ ಸಹೋದರ ಸಹೋದರಿಯರಿಗೆ ನನ್ನ ನಮಸ್ಕಾರಗಳು ಎಂದು ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತು ಆರಂಭಿಸಿದರು.

ಹುಬ್ಬಳ್ಳಿ, ಬೆಳಗಾವಿ, ಕಲಬುರ್ಗಿ ಮತ್ತಿತರ ಕಡೆಗಳಲ್ಲಿ ರೋಡ್ ಶೋ ಸಂದರ್ಭದಲ್ಲಿ ನೀಡಿದ ಅದ್ಭುತ ಪ್ರೀತಿ. ಮತ್ತು ಆ ಕ್ಷಣ ಮರೆಯಲಾಗದು‌.
ಜನರು ಪ್ರೀತಿ ಮತ್ತು ಆಶೀರ್ವಾದವು ನನ್ನ ಮೇಲಿನ ದೊಡ್ಡ ಋಣವಾಗಿದೆ‌. ನಿರಂತರ ಸೇವೆಯ ಮೂಲಕ ಕರ್ನಾಟಕ ಜನರ ಈ ಋಣವನ್ನು ತೀರಿಸುತ್ತೇನೆ ಎಂದು ಪ್ರಧಾನಮಂತ್ರಿಗಳು ವಿನಮೃತೆಯಿಂದ ಭರವಸೆಯನ್ನು ನೀಡಿದರು.


ಡಬಲ್ ಎಂಜಿನ್ ಸರಕಾರವು ರಾಜ್ಯದ ಹಳ್ಳಿ ಹಳ್ಳಿಗಳ ಸಮಗ್ರ ಪ್ರಗತಿಗೆ ಬದ್ಧವಾಗಿದೆ. ಪ್ರಗತಿಯ ಹೊಸ ಶಕೆಯು ಇಡಿ ರಾಜ್ಯದ ಪ್ರಗತಿಗೆ ಮುನ್ನುಡಿ ಬರೆಯಲಿದೆ.
ಮಲೆನಾಡು ಮತ್ತು ಬಯಲುಸೀಮೆಯ ನಡುವಿನ ದ್ವಾರಬಾಗಿಲು ಆಗಿರುವ ಈ ಭಾಗವು ಪ್ರತಿಯೊಬ್ಬರನ್ನು ಪ್ರಿತಿಯಿಂದ ಸ್ವಾಗತಿಸಿದೆ. 

ಧಾರವಾಡವು ಕರ್ನಾಟಕ ಮತ್ತು ಭಾರತದ ಜೀವಂತಿಕೆಯ ಪ್ರತಿಬಿಂಬವಾಗಿದೆ.ಧಾರವಾಡದ ಪರಿಚಯವು ದ.ರಾ.ಬೇಂದ್ರೆ, ಸಮೃದ್ಧ ಸಂಗೀತ ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್, ಕುಮಾರ್ ಗಂಧರ್ವ,ಬಸವರಾಜ ರಾಜಗುರು,  ಮಲ್ಲಿಕಾರ್ಜುನ ಮನಸೂರ ಅವರಂತಹ ಸಂಗೀತ ದಿಗ್ಗಜರ ತವರೂರಾಗಿದೆ.
ಧಾರವಾಡ ಪೇಢೆಯ ಸ್ವಾದವು ಮರೆಯಲಾರದಂತದು. 

ಐಐಟಿಯ ಹೊಸ ಕ್ಯಾಂಪಸ್ ಧಾರವಾಡದ ಪರಿಚಯವನ್ನು ಮತ್ತಷ್ಟು ಬಲಗೊಳಿಸಲಿದೆ. ಕರ್ನಾಟಕದ ವಿಕಾಸದಲ್ಲಿ ಐಐಟಿ ಹೊಸ ಅಧ್ಯಯವಾಗಲಿದೆ. ಇಲ್ಲಿನ ಮೂಲ ಸೌಕರ್ಯಗಳು ಈ ಸಂಸ್ಥೆಯನ್ನು ವಿಶ್ವದ ಮುನ್ನೆಲೆಗೆ ತರಲಿದೆ.

ಐಐಟಿ ಸಂಸ್ಥೆಯು ಬಿಜೆಪಿ ಸರಕಾರದ ಸಂಕಲ್ಪದ ಸಿದ್ಧಿಯಾಗಿದೆ. ಶಂಕುಸ್ಥಾಪನೆ ನೆರವೇರಿಸಿದ ನಾಲ್ಕು ವರ್ಷಗಳಿಂದ ಡಬಲ್ ಎಂಜಿನ್ ಸರಕಾರವು ಅದೇ ವೇಗದಲ್ಲಿ ನಡೆದಿದೆ.

ಶಂಕುಸ್ಥಾಪನೆ ನೆರವೇರಿಸಿ ಮರೆತುಬಿಡುವ ಕಾಲ ಹೋಯಿತು. ನಾವೇ ಶಂಕುಸ್ಥಾಪನೆ ನೆರವೇರಿಸಿ ನಾವೇ ಲೋಕಾರ್ಪಣೆ ಮಾಡುವುದು ನಮ್ಮ ಬದ್ಧತೆಯಾಗಿದೆ‌.



ದೇಶದಲ್ಲಿ ಕೇವಲ 380 ವೈದ್ಯಕೀಯ ಕಾಲೇಜುಗಳಿದ್ದವು 9 ವರ್ಷಗಳಲ್ಲಿ 250 ಕಾಲೇಜು ಸ್ಥಾಪಿಸಲಾಗಿದೆ. ಇದೇ ರೀತಿ ಐಐಟಿ ಗಳನ್ನು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆರಂಭಿಸಲಾಗಿದೆ.

ಮುಂದಿನ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡ ನಗರಗಳು ಅಭಿವೃದ್ಧಿ ಯ ತುತ್ತತುದಿಗೆ ತಲುಪಲಿವೆ.ಜಯದೇವ ಹೃದ್ರೋಗ ಆಸ್ಪತ್ರೆ ಆರಂಭದಿಂದ ಈ ಭಾಗದ ಜನರಿಗೆ ಉತ್ತಮ ಚಿಕಿತ್ಸೆ ಲಭಿಸಲಿದೆ.

ಜಲಜೀವನ್ ಮಿಷನ್ ಯೋಜನೆ ಮೂಲಕ 1 ಸಾವಿರ ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಮಲಪ್ರಭಾ ನದಿಯ ನೀರನ್ನು ನಳಗಳ ಮೂಲಕ ಮನೆ ಮನೆಗೆ ತಲುಪಿಸಲಾಗುವುದು. 
ತುಪ್ಪರಿಹಳ್ಳದ ಯೋಜನೆ ಮೂಲಕ ಪ್ರವಾಹ ಹಾನಿ ತಪ್ಪಿಸಲಿದೆ.

ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ವಿಶ್ವದ ಅತೀ ದೊಡ್ಡ  ಫ್ಲ್ಯಾಟ್ ಫಾರ್ಮ್ ಇದು ದಾಖಲೆಯಲ್ಲ; ಮೂಲಸೌಕರ್ಯ ಅಭಿವೃದ್ಧಿಗೆ ನಾವು ನೀಡಿದ ಆದ್ಯತೆ ಗೆ ಸಾಕ್ಷಿಯಾಗಿದೆ.


ರೈಲು ಮಾರ್ಗದ ವಿದ್ಯುದ್ದೀಕರಣದಿಂದ ತೈಲದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಪರಿಸರ ರಕ್ಷಣೆಗೂ ಸಹಕಾರಿಯಾಗಲಿದೆ.

ರಸ್ತೆ, ಸಾರಿಗೆ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸುವುದರಿಂದ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತಿದೆ.ಹಳ್ಳಿ ಹಳ್ಳಿಗೆ ಅಂತರ್ಜಾಲ ಸಂಪರ್ಕವನ್ನು ಒದಗಿಸಿರುವುದರಿಂದ ಇಂದು ಭಾರತವು ಜಗತ್ತಿನ ಡಿಜಿಟಲ್ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದೆ.
ಪಿಎಂ -ಗತಿಶಕ್ತಿ ಮಾಸ್ಟರ್ ಪ್ಲ್ಯಾನ್ ಮೂಲಕ ಅಗತ್ಯ ಮೂಲಸೌಕರ್ಯ ಒದಗಿಸಲಾಗುತ್ತಿದೆ.
ಆಸ್ಪತ್ರೆ, ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಭವಿಷ್ಯದ ಭಾರತ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿದೆ.

ಬಸವಣ್ಣನವರು ಅನುಭವ ಮಂಟಪ ಸ್ಥಾಪನೆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮುನ್ನುಡಿ ಬರೆದಿದ್ದಾರೆ. ಲಂಡನ್ ನಲ್ಲಿ ಬಸವೇಶ್ವರ ಪುತ್ಥಳಿ ಲೋಕಾರ್ಪಣೆ ಅವಕಾಶ ಸಿಕ್ಕಿತ್ತು.
ಆದರೆ ಅದೇ ಲಂಡನ್‌ ನಲ್ಲಿ ಇತ್ತೀಚೆಗೆ ಭಾರತದ ಪ್ರಜಾಪ್ರಭುತ್ವ ಕ್ಕೆ ಅವಮಾನಿಸುವ ಮಾತುಗಳನ್ನು ಕೇಳುವುದು ದೌರ್ಭಾಗ್ಯವಾಗಿದೆ ಎಂದು ಹೇಳಿದರು.
ಇಂತಹ ಮಾತುಗಳು ಭಾರತದ ಪರಂಪರೆಗೆ ಮಾತ್ರವಲ್ಲ; ಇಡೀ ಭಾರತೀಯರಿಗೆ ಅವಮಾನಿಸಿದಂತಾಗಿದೆ. 

ಕರ್ನಾಟಕವು ಹೈಟೆಕ್ ಇಂಡಿಯಾದ ಎಂಜಿನ್ ಆಗಿದೆ ಎಂದು  ಬಣ್ಣಿಸಿದ ಅವರು, ಡಬಲ್ ಎಂಜಿನ್ ಸರಕಾರಕ್ಕೆ ಇಲ್ಲಿನ ಜನರ ಆಶೀರ್ವಾದ ಬಲ ತುಂಬಲಿದೆ ಎಂದು ಪ್ರಧಾನಿ ಹೇಳಿದರು.

ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ ಮಾತನಾಡಿ,ಘೋಷಣೆಗೆ ಸೀಮಿತವಾಗಿದ್ದ ಬಡತನ ನಿವಾರಣೆ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ, ಮಹಿಳೆಯರು, ಮಕ್ಕಳನ್ನು ಸಶಕ್ತಗೊಳಿಸಿ,ಜಗತ್ತಿಗೆ ಭಾರತವನ್ನು ಹಿರಿಯಣ್ಣನಾಗಿ ರೂಪಿಸುತ್ತಿರುವ ಶ್ರೇಯಸ್ಸು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ.ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಹೊಸ ಯೋಜನೆಗಳನ್ನು ಪ್ರಧಾನಿಯವರು ದೇಶಕ್ಕೆ ನೀಡಿದ್ದಾರೆ.ಧಾರವಾಡಕ್ಕೆ ಪ್ರತಿಷ್ಠಿತ ಐಐಟಿ ಬರಲು ಅವರು ಕಾರಣರಾಗಿದ್ದಾರೆ.2019 ರಲ್ಲಿ ಈ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ್ದ ಪ್ರಧಾನಿಯವರೇ ಈ ಕಟ್ಟಡ ಉದ್ಘಾಟಿಸುತ್ತಿರುವುದು ಸಂತಸದ ಸಂಗತಿಯಾಗಿದೆ.ಹುಬ್ಬಳ್ಳಿಯ ರೈಲು ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢರ ಹಾಗೂ ಬೆಂಗಳೂರಿನ ರೈಲು ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಹೆಸರಿಟ್ಟ ಶ್ರೇಯಸ್ಸು ಪ್ರಧಾನಿಯವರದ್ದಾಗಿದೆ ಎಂದರು.



*ಸನ್ಮಾನ* ಹಾವೇರಿಯ ಏಲಕ್ಕಿ ಹಾರ,ಮುತ್ತಿನಿಂದ ಅಲಂಕರಿಸಿದ ಪೇಟ ,ಶಾಲು ಹೊದಿಸಿ,ಶ್ರೀ ಸಿದ್ಧಾರೂಢರ ವಿಗ್ರಹ,ಕಲಘಟಗಿಯ ಆಕರ್ಷಕ ತೊಟ್ಟಿಲು ಹಾಗೂ ಧಾರವಾಡ ಪೇಡ ನೀಡಿ  ಪ್ರಧಾನಿ ನರೇಂದ್ರ ಮೋದಿಯವರನ್ನು ಸತ್ಕರಿಸಲಾಯಿತು.


ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಗೋವಿಂದ ಕಾರಜೋಳ,ಸಿ.ಸಿ.ಪಾಟೀಲ, ವಿ.ಸೋಮಣ್ಣ,ಬಿ.ಎ.ಬಸವರಾಜ, ಶಂಕರ ಪಾಟೀಲ ಮುನೇನಕೊಪ್ಪ,ಮಾಜಿಮುಖ್ಯಮಂತ್ರಿ-ಶಾಸಕ ಜಗದೀಶ್ ಶೆಟ್ಟರ್, ಶಾಸಕರಾದ ಸಿ.ಎಂ.ನಿಂಬಣ್ಣವರ,ಅರವಿಂದ ಬೆಲ್ಲದ,ಅಮೃತ ದೇಸಾಯಿ,ವಿಧಾನಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್,ಎಸ್.ವಿ.ಸಂಕನೂರ,ಮಹಾನಗರಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ  ವೇದಿಕೆಯಲ್ಲಿ ಉಪಸ್ಥಿತರಿದ್ದರು.



*ರಾಷ್ಟ್ರಕ್ಕೆ ವಿವಿಧ ಯೋಜನೆಗಳ ಸಮರ್ಪಣೆ ಹಾಗೂ ಶಂಕುಸ್ಥಾಪನೆ*


*ಧಾರವಾಡ ಐಐಟಿ*

410 ಎಕರೆ ವಿಸ್ತೀರ್ಣದ ವಿಶಾಲ ನಿವೇಶನದಲ್ಲಿ ,852 ಕೋಟಿ ರೂ.ಯೋಜನಾ ವೆಚ್ಚದಲ್ಲಿ ಸ್ಥಾಪನೆಯಾಗಿರುವ ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮೊದಲ ಹಂತದ ಕಟ್ಟಡದ ಉದ್ಘಾಟನೆ.

ಪ್ರಸ್ತುತ ಈ ಸಂಸ್ಥೆಯಲ್ಲಿ 73 ಬೋಧಕರು,35 ಸಿಬ್ಬಂದಿ ಹಾಗೂ 856 ವಿದ್ಯಾರ್ಥಿಗಳಿದ್ದಾರೆ.

ಬಿ-ಟೆಕ್,ಬಿ.ಎಸ್,ಎಂ ಎಸ್,ಎಂ ಟೆಕ್ ಹಾಗೂ ಪಿಹೆಚ್‌ಡಿ ಪದವಿಗಳು ಲಭ್ಯ.

*ವಿಶ್ವದ ಅತಿ ಉದ್ದನೆಯ ರೈಲ್ವೇ ಪ್ಲಾಟ್ ಫಾರ್ಮ್*

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ರೈಲ್ವೇ ನಿಲ್ದಾಣದಲ್ಲಿ 20 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಪಾದಚಾರಿ ಕೆಳಸೇತುವೆ ಹಾಗೂ 1507 ಮೀ.ಉದ್ದದ ವಿಶ್ವದ ಅತಿ ಉದ್ದನೆಯ ರೈಲ್ವೇ ಪ್ಲಾಟ್ ಫಾರ್ಮ್ ಉದ್ಘಾಟನೆ.

*ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ರೈಲ್ವೇ ಮಾರ್ಗದ ವಿದ್ಯುದೀಕರಣ*

ವಿಜಯನಗರ,ಕೊಪ್ಪಳ,ಗದಗ ,ಧಾರವಾಡ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳ ಮೂಲಕ ಹಾಯ್ದು ಹೋಗುವ 245 ರೈಲ್ವೇ ಕಿ.ಮೀ.ಉದ್ದದ ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ರೈಲ್ವೇ ಮಾರ್ಗದ ವಿದ್ಯುದೀಕರಣ ಕಾಮಗಾರಿ 519 ಕೋಟಿ ರೂ.ವೆಚ್ಚದಲ್ಲಿ ಪೂರ್ಣಗೊಂಡಿದೆ‌.

*ಉನ್ನತೀಕರಣಗೊಂಡ ಹೊಸಪೇಟೆ ರೈಲು ನಿಲ್ದಾಣ*

13 ಕೋಟಿ ರೂ.ವೆಚ್ಚದಲ್ಲಿ ಉನ್ನತೀಕರಣಗೊಂಡಿರುವ ಹೊಸಪೇಟೆ ರೈಲ್ವೇ ನಿಲ್ದಾಣ ಲೋಕಾರ್ಪಣೆ.

*353 ಕೋಟಿ ರೂ.ಗಳ ಸ್ಮಾರ್ಟ್ ಸಿಟಿ ಯೋಜನೆಗಳು*

ನಾಗರಿಕರ ಜೀವನ ಮಟ್ಟ ಸುಧಾರಣೆಗೆ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ 353 ಕೋಟಿ ರೂ.ವೆಚ್ಚದಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ.


*ಶಂಕುಸ್ಥಾಪನೆಗೊಂಡ ಕಾರ್ಯಕ್ರಮಗಳು*

*ಜಲಜೀವನ ಮಿಷನ್ ಬಹುಗ್ರಾಮ ಕುಡಿಯುವ ನೀರು  ಯೋಜನೆ*

1042 ಕೋಟಿ ರೂ.ವೆಚ್ಚದಲ್ಲಿ,
86 ಎಂಎಲ್‌ಡಿ ನೀರು ಸಂಸ್ಕರಣಾ ಘಟಕ ನಿರ್ಮಾಣ.ಮಲಪ್ರಭಾ ನದಿಯ ರೇಣುಕಾಸಾಗರ ಜಲಾಶಯದಿಂದ 2 ಲಕ್ಷ ಮನೆಗಳಿಗೆ ಶುದ್ಧೀಕರಿಸಿದ ಕುಡಿಯುವ ನೀರು ಸರಬರಾಜು.

ಜಿಲ್ಲೆಯ 396 ಗ್ರಾಮೀಣ ವಸತಿ ಪ್ರದೇಶಗಳು ಹಾಗೂ ಒಂದು ಪಟ್ಟಣಕ್ಕೆ ಸುಸ್ಥಿರ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಗೆ ಶಂಕುಸ್ಥಾಪನೆ .

*ಕ್ರೀಡಾ ಸಂಕೀರ್ಣ*
ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ 166 ಕೋಟಿ ರೂ.ವೆಚ್ಚದಲ್ಲಿ ಕ್ರೀಡಾ ಸಂಕೀರ್ಣಕ್ಕೆ ಶಂಕುಸ್ಥಾಪನೆ.

*ಜಯದೇವ ಹೃದ್ರೋಗಗಳ ಆಸ್ಪತ್ರೆ*

ಹುಬ್ಬಳ್ಳಿಯ ರಾಯನಾಳ ಬಳಿ 11.36 ಎಕರೆ ಪ್ರದೇಶದಲ್ಲಿ,250 ಕೋಟಿ ರೂ.ವೆಚ್ಚದಲ್ಲಿ ಜಯದೇವ ಹೃದ್ರೋಗಗಳ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಶಂಕುಸ್ಥಾಪನೆ.

*ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ ಯೋಜನೆ*

150 ಕೋಟಿ ರೂ.ವೆಚ್ಚದಲ್ಲಿ ತುಪ್ಪರಿಹಳ್ಳ  ಪ್ರವಾಹ ಹಾನಿ ತಡೆಯಲು, ಆಯ್ದ ಭಾಗಗಳಲ್ಲಿ ತಡೆಗೋಡೆ ಹಾಗೂ ವಡ್ಡುಗಳನ್ನು ನಿರ್ಮಾಣಕ್ಕೆ ಚಾಲನೆ ಪ್ರಧಾನಿಯವರು ವೇದಿಕೆಯ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.
[12/03, 10:11 PM] Cm Ps: ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಶಿಗ್ಗಾವಿಯ ಕುನ್ನೂರಿನಲ್ಲಿ ನಡೆದ ಭಗವಾನ ಶ್ರೀ 1008  ಆದಿನಾಥ ಜಿನ ತೀರ್ಥಂಕರ ನೂತನ ಜಿನ ಮಂದಿರ ಧಾಮ ಸಂಪ್ರೋಕ್ಷಣೆ ಹಾಗೂ ಮಾನಸ್ತಂಭೋಪರಿ ಚತುರ್ಮುಖ ಜಿನ ಬಿಂಬ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
[12/03, 10:46 PM] Cm Ps: *ತ್ಯಾಗದ ಆಧಾರದ ಮೇಲೆ ಜೈನ ಧರ್ಮ ಉದಯ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌*

ಹಾವೇರಿ: ಮಹಾವೀರರು ಚಿಕ್ಕ ವಯಸ್ಸಿನಲ್ಲಿಯೇ ಎಲ್ಲವನ್ನೂ ತ್ಯಾಗ ಮಾಡಿ ಜನರಿಗೆ ಕೊಟ್ಟವರು. ತ್ಯಾಗದ ಆಧಾರದ ಮೇಲೆ ಹುಟ್ಟಿರುವ ಧರ್ಮ ಜೈನ್ ಧರ್ಮ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲ್ಲೂಕಿನ ಕುನ್ನುರು ಗ್ರಾಮದಲ್ಲಿ ಆದಿನಾಥ ತೀರ್ಥಂಕರ ಜಿನಮಂದಿರ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಪರಮಪೂಜ್ಯರ ನುಡಿಯುವ ಪ್ರತಿಯೊಂದು ಮಾತು ಸತ್ಯ ಆಗುತ್ತದೆ. ಪೂಜ್ಯರು ಸದಾಕಾಲ ನನಗೆ ಆಶೀರ್ವಾದ ಮಾಡುತ್ತಿದ್ದಾರೆ. ಜೈನ ತೀರ್ಥಂಕರರು ಇಡೀ ಜಗತ್ತಿಗೆ ಆಧ್ಯಾತ್ಮದ ಸಾಧನೆಯನ್ನು ಸಮರ್ಪಿಸಿದರು. ಆದ್ಯಾತ್ಮದಲ್ಲಿ ಸಾಧನೆ ಮಾಡಿದವರು ಬೌದ್ಧ ಮತ್ತು ಜೈನ ತೀರ್ಥಂಕರರು. ಜೈನ ಧರ್ಮ ಆಚರಣೆ ಮಾಡುವುದಯ ತುಂಬ ಕಷ್ಟ. ಪೂಜ್ಯರಿಗಂತೂ ಬಹಳ ಕಷ್ಟ. ಬಸವಣ್ಣನವರು ಹೇಳಿದ ಸಕಲ ಜೀವಗಳಿಗೆ ಲೇಸು ಬಯಸುವ ಧರ್ಮ ಜೈನ ಧರ್ಮ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ಯಾವುದೇ ಕಾಯಕ ಮಾಡಿದರು. ಧರ್ಮ ನಿಷ್ಠೆಯಿಂದ ಜೈನ ಬಾಂಧವರು ಮಾಡುತ್ತಾರೆ. ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೆ ಜೈನ ಧರ್ಮ ಪಸರಿಸಿದೆ. ಪುಣ್ಯಸಾಗರ ಮಹಾರಾಜರು ಬರೆದಿರುವ ತತ್ವಾರ್ಥ ಸುತ್ರ ಪುಸ್ತಕವನ್ನು ಓದಿ ಅದನ್ನು ನನ್ನ ಜಗಲಿ ಮನೆ ಮೇಲೆ ಇಟ್ಟಿದ್ದೆನೆ. ಜೈನ ಸಮಾಜದ ಆಚರಣೆ ಬಹಳ ಕಷ್ಟ. ಅದರ ಬಗ್ಗೆ ತುಂಬ ಗೌರವ ಇದೆ. ಅಂಹಿಸೆ ಯನ್ನು ಸಾರುವ ಧರ್ಮ ಈ ಭೂಮಿ ಮೇಲೆ ಇರಬೇಕು ಎಂದರು.

ನನ್ನ ಕ್ಷೇತ್ರದ ಎಲ್ಲ ಬಸದಿಗಳನ್ನು ಅಭಿವೃದ್ಧಿ ಮಾಡಿದ್ದೇನೆ. ನಾನು ಹಲವಾರು ಅಭಿವೃದ್ಧಿ ಕಾರ್ಯ ಮಾಡುತ್ತಿರುತ್ತೇನೆ‌. ಆದರೆ, ಜೈನ ಸಮಾಜಕ್ಕಾಗಿ ಮಾಡಿದ ಕೆಲಸ ನನಗೆ ಬಹಳ ಇಷ್ಟವಾಗಿದೆ ಎಂದರು.

*ಬಸವರಾಜ ಬೊಮ್ಮಾಯಿ‌ ಅವರು ಮಹಾವೀರ ಭಗವಾನರ ಭಕ್ತರು: ಮುನಿಶ್ರೀ 108 ಸಾಗರ ಮಹರಾಜರು*

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಮಹಾವೀರ ಭಗವಾನರ ಭಕ್ತರು. ಅದಕ್ಕಾಗಿ ಅವರು ಇಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ ಎಂದು ಮುನಿಶ್ರೀ 108 ಸಾಗರ ಮಹರಾಜರು ಹೇಳಿದರು.

ಈ ಹಿಂದೆ ಕೆಜೆಪಿ ಬಿಜೆಪಿ ಆದಾಗ ಏನು ಮಾಡಲಿ ಎಂದು ನನ್ನ ಬಳಿ ಬಂದು ಕೇಳಿದ್ದರು. ಈಗ ಇದಿಯಾ ಹಾಗೆ ಇದ್ದಬಿಡು‌. ಬೇರೆ ಕಡೆಗೆ ಹೋಗಬೇಡ ಅಂದಿದ್ದೆ. ಅವರು ಬಿಜೆಪಿಯಲ್ಲಿಯೇ ಮುಂದುವರೆದಿದ್ದಕ್ಕೆ ಇಂದು ರಾಜ್ಯದ ಸಿಎಂ ಆಗಿದ್ದಾರೆ. ನಮ್ಮ ಸಮಾಜಕ್ಕೆ ಯಾತ್ರಿ ನಿವಾಸಕ್ಕಾಗಿ ನಾವು ಯಾವತ್ತೂ ಮನವಿ ಮಾಡಿರಲಿಲ್ಲ. ಆದರೆ ನಮ್ಮ ಸಮಾಜದ ಮೇಲಿನ ಅಭಿಮಾನದಿಂದ ಯಾತ್ರಿ ನಿವಾಸ ಮಂಜೂರು ಮಾಡಿದರು. ಜೈನ ಧರ್ಮವನ್ನು ಆಚರಣೆ ಮಾಡುವ ಪ್ರತಿಯೊಬ್ಬರು ಜೈನ ಧರ್ಮೀಯರು. ಜೈನ ಧರ್ಮದಲ್ಲಿ ಹುಟ್ಟಿದವರು ಮಾತ್ರ ಜೈನ ಧರ್ಮದವರಲ್ಲ ಎಂದರು.

Post a Comment

Previous Post Next Post