[30/04, 3:42 PM] pannangaraj1: *ಲೋಕಾಯುಕ್ತ ದುರ್ಬಲಗೊಳಿಸಿದ ಕುಖ್ಯಾತಿ ಸಿದ್ದರಾಮಯ್ಯರದ್ದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಗದಗ: ಲೋಕಾಯುಕ್ತವನ್ನು ದುರ್ಬಲಗೊಳಿಸಿದ ಕುಖ್ಯಾತಿ ಸಿದ್ದರಾಮಯ್ಯರಿಗೆ ಸಲ್ಲುತ್ತದೆ. ಭ್ರಷ್ಟಾಚಾರ ಪರವಾಗಿ ನಿಂತಿರೋದು ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಇಂದು ಗದಗ ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಪ್ರಧಾನಿಗಳ ಕಾರ್ಯಕ್ರಮ ಮುಗಿಸಿ ಬೀದರ್ ನಿಂದ ಬೆಳ್ಳಾರಿ ಜಿಲ್ಲೆಯಲ್ಲಿದ್ದೆ. ವಿಜಯನಗರ ಜಿಲ್ಲೆಯಲ್ಲಿ ಪ್ರಚಾರ ಮುಗಿಸಿ ಹುಬ್ಬಳ್ಳಿಗೆ ಹೊರಟಿದ್ದೆ. ಮಾರ್ಗ ಮಧ್ಯೆ ಮುಂಡರಗಿ, ಗದಗ ಸ್ನೇಹಿತರನ್ನ ಭೇಟಿಯಾಗಲು ಬಂದಿದ್ದೇನೆ. ಈ ಭೇಟಿಗೆ ವಿಶೇಷ ಅರ್ಥ ಏನಿಲ್ಲ. ಶಿರಹಟ್ಟಿ, ಗದಗ ಕ್ಷೇತ್ರದ ಏನೆಲ್ಲ ನಡೆದಿದೆ ಅಂತಾ ತಿಳಿದುಕೊಂಡು, ಸಲಹೆ ಸೂಚನೆ ಕೊಡಲು ಬಂದಿದ್ದೇನೆ ಎಂದರು.
ರಾಜ್ಯದ ಮುಖ್ಯಮಂತ್ರಿಯಾಗಿ 224 ಕ್ಷೇತ್ರ ಕಾಳಜಿ ಮಾಡುತ್ತೇನೆ ಗದಗನೂ ಕಾಳಜಿ ಮಾಡುತ್ತಿದ್ದೇನೆ. ದಾರಿ ಮಧ್ಯೆ ಭೇಟಿಯಾಗಿ ಸಲಹೆ ಸೂಚನೆ ಕೊಡಲು ಬಂದಿದ್ದೇನೆ. ಕಾಂಗ್ರೆಸ್ ಐದು ಬಿಟ್ಟು ಐವತ್ತು ಕ್ಯಾರಂಟಿ ಘೋಷಣೆ ಮಾಡಲಿ. ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. 10 ನೇ ತಾರೀಕು ವರೆಗು ಮತ್ರ ಗ್ಯಾರಂಟಿ ಎಂದರು.
ಭ್ರಷ್ಟಾಚಾರ ಆರೋಪ ಮಾಡುವ ಕಾಂಗ್ರೆಸ್. ಒಂದು ಕೇಸ್ ತೋರಿಸಲಿ. ಕಾಂಗ್ರೆಸ್ ಭ್ರಷ್ಟಾಚಾರದ 60 ಪ್ರಕರಣಗಳೊ ಎಸಿಬಿಯಲ್ಲಿ ಮುಚ್ಚಿಹಾಕಿದ್ದರು. ಆ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೇನೆ. ಸಿದ್ದರಾಮಯ್ಯ ಮೇಲೂ ಸೇರಿ ಪ್ರಕರಣಗಳಿದ್ದವು. ಅವುಗಳ ತನಿಖೆ ಮಾಡದೇ ಬಿ ರಿಪೋರ್ಟ್ ಕೊಟ್ಟು ಮುಚ್ಚಿಹಾಕಿದ್ದಾರೆ ಎಂದರು.
ಎಸಿಬಿ ಮಾಡಿದ್ದೇ ಕೇಸ್ ಮುಚ್ಚಿಹಾಕುಲು ಅಂತಾ ಹೈ ಕೋರ್ಟ್ ಹೇಳಿದೆ. ಆರೋಪವನ್ನು ಮುಚ್ಚಿ ಹಾಕಲು ಎಸಿಬಿ ರಚನೆಯಾಗಿದೆ ಅಂತಾ ಉಲ್ಲೇಖಿಸಿದ್ದಾರೆ. ಹೀಗಾಗಿ ಲೋಕಾಯುಕ್ತಕ್ಕೆ ಪ್ರಕರಣಗಳನ್ನು ನೀಡಿದ್ದೇನೆ ಎಂದರು.
ಪಿಎಂ ವಿರುದ್ಧ 91 ಬೈಗುಳ ಬಳಕೆ ಆರೋಪಕ್ಕೆ ಪ್ರತಿಕ್ರಿಯೆಯಿಸಿ ಸಿಎಂ ಬೊಮ್ಮಾಯಿ ಅವರು, ಮೋದಿಯವರು ಏನು ಹೇಳಬೇಕು ಅಂತಾ ಖರ್ಗೆ ಹೇಳಬೇಕಿಲ್ಲ ಎಂದರು.
*ಪರಮೇಶ್ವರ ಮೇಲೆ ಹಲ್ಲೆ ಪ್ರಕರಣ: ತನಿಖೆಯಾಗಲಿ*
ಮಾಜಿ ಸಿಎಂ ಜಿ ಪರಮೇಶ್ವರ ಮೇಲೆ ಕಲ್ಲು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ, ಪ್ರಕರಣ ತನಿಖೆಯಾಗಲಿ. ಚುನಾವಷೆ ಆಯೋಗ ಗಮನಿಸುತ್ತದೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗುತ್ತದೆ ಎಂದರು.
[30/04, 3:42 PM] pannangaraj1: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಸ್ವ ಕ್ಷೇತ್ರ ಶಿಗ್ಗಾವಿಗೆ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ಬಳಿ ಇರುವ ಪಾರ್ಶ್ವ ಪದ್ಮಾಲಯ ಧಾಮ ಜೈನ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
[30/04, 3:42 PM] pannangaraj1: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 100 ಮನ್ ಕಿ ಬಾತ್ ಕಾರ್ಯಕ್ರಮವನ್ನು ವೀಕ್ಷಿಸಿದರು.
[30/04, 3:42 PM] pannangaraj1: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಹುಬ್ಬಳ್ಳಿಯ ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
[30/04, 3:42 PM] pannangaraj1: *ಮನ್ ಕಿ ಬಾತ್ ದೇಶದ ಭಾವನೆ ಅಭಿವ್ಯಕ್ತ ಪಡಿಸುವ ವೇದಿಕೆಯಾಗಿದೆ ; ಸಿಎಂ ಬೊಮ್ಮಾಯಿ*
ಹಾವೇರಿ, (ಶಿಗ್ಗಾಂವಿ): ಮನ್ ಕಿ ಬಾತ್ ದೇಶದ ಭಾವನೆ ಅಭಿವ್ಯಕ್ತ ಪಡಿಸುವ ವೇದಿಕೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಶಿಗ್ಗಾಂವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
*ಅಭೂತಪೂರ್ವ ಕಾರ್ಯಕ್ರಮ*
ದೇಶದ ಪ್ರತಿ ಮನೆಯಲ್ಲಿ ಮನ್ ಕಿ ಬಾತ್ ಕೇಳುತ್ತಾರೆ. ಮನ್ ಕಿ ಬಾತ್ ದೇಶದ ಜನರ ಭಾವನೆಯಾಗಿದೆ. ಇದರಲ್ಲಿ ಜನರ ಸಮಸ್ಯೆ ಕೇಳಿ ಪರಿಹಾರ ಸೂಚಿಸುವ ವೇದಿಕೆಯಾಗಿದೆ. ಹಳ್ಳಿಗಳಲ್ಲಿ, ಸಣ್ಣ ಸಣ್ಣ ಉದ್ಯೋಗ ಮಾಡುವವರನ್ನು ದೇಶಕ್ಕೆ ಪರಿಚಯ ಮಾಡುವ ಕೆಲಸವಾಗುತ್ತಿದೆ. ಇದರಿಂದ ಅನೇಕರು ತಮ್ಮ ಉದ್ಯೋಗ ಬದಲಾಯಿಸಿ ಸ್ವಯಂ ಉದ್ಯೋಗ ಕಂಡು ಕೊಂಡಿದ್ದಾರೆ. ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದ್ದು, ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಷ್ಟು ದೊಡ್ಡ ವೇದಿಕೆ ಸಿಕ್ಕಾಗ ಇಡೀ ದೇಶಕ್ಕೆ ಸ್ಪೂರ್ತಿಯಾಗುತ್ತದೆ ಎಂದರು. ಸರ್ವರಿಗೂ ಸರ್ವ ವ್ಯಾಪಿಯಾಗಿ ಅಭಿಪ್ರಾಯ ಹಂಚಿಕೊಳ್ಳುವ ವೇದಿಕೆ ಇದಾಗಿದೆ ಎಂದರು.
*ಅಭಿನಂದನೆ*
ಮೋದಿಯವರು ಮಹಾನ್ ನಾಯಕರಾಗಿದ್ದಾರೆ. ಅವರಿಗೆ 100 ನೆ ಸಂಚಿಕೆ ನಡೆಸಿಕೊಟ್ಟಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
[30/04, 3:42 PM] pannangaraj1: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಎನ್. ಎಂ. ತಡಸ್ ಗ್ರಾಮದಲ್ಲಿ ರೋಡ್ ಶೋ ನಡೆಸಿ ಮಾತನಾಡಿದರು
[30/04, 3:42 PM] pannangaraj1: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 100 ಮನ್ ಕಿ ಬಾತ್ ಕಾರ್ಯಕ್ರಮವನ್ನು ವೀಕ್ಷಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
[30/04, 3:42 PM] pannangaraj1: *ಜೆ.ಪಿ ನಡ್ಡಾ ಅವರ ಮಾತಿಗೆ ಚಿರಋಣಿ: ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
*ನಡ್ಡಾ ಅವರು ಮುಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ*
ಹುಬ್ಬಳ್ಳಿ: ಜೆ.ಪಿ ನಡ್ಡಾ ಅವರು
ನನ್ನ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟು ಒಳ್ಳೆಯ ಮಾತು ಹೇಳಿದ್ದಾರೆ. ಅಮಿತ್ ಶಾ ಅವರು ಬಂದಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದಾಗಿ ಹೇಳಿದ್ದೆ. ನಮ್ಮ ಪಕ್ಷದಲ್ಲಿ ಸ್ಪಷ್ಟ ನಿಲುವಿದೆ. ಸಿಎಂ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ಕೇಂದ್ರ ಸಂಸದೀಯ ಮಂಡಳಿ ಮತ್ತು ಶಾಸಕರು ಸಿಎಮ್ ಆಯ್ಕೆ ಮಾಡುತ್ತಾರೆ. ನಡ್ಡಾ ಅವರು ಹೇಳಿದ ಮಾತಿಗೆ ನಾನು ಚಿರಋಣಿಯಾಗಿರುತ್ತೇನೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಪ್ರವಾಹದ ಸಂದರ್ಭದಲ್ಲಿ ಮೋದಿ ರಾಜ್ಯಕ್ಕೆ ಬಂದಿಲ್ಲ ಎನ್ನುವ ಪ್ರಿಯಾಂಕಾ ಗಾಂಧಿಗೆ ತಿರುಗೇಟು ನೀಡಿದ ಸಿಎಂ, ಪ್ರವಾಹ ಬಂದಾಗ ಹೆಚ್ಚಿನ ಅನುದಾನ ಕೊಟ್ಟಿದ್ದು ಮೋದಿ ಸರ್ಕಾರ. ಪ್ರಿಯಾಂಕಾ ಗಾಂಧಿಯವರ ಸರ್ಕಾರದ ಇದ್ದಾಗ ಮನೆ ಬಿದ್ದರೆ 2 ಸಾವಿರ ಕೊಡುತ್ತಿದ್ದರು. ಅತಿವೃಷ್ಟಿ ಪರಿಹಾರ ಮೋದಿ ಕಾಲದಲ್ಲಿ ಹೆಚ್ಚಿಸಲಾಗಿದೆ. ಅತಿಹೆಚ್ಚು ರೈತರ ಆತ್ಮಹತ್ಯೆ ಆಗಿದ್ದು ಸಿದ್ದರಾಮಯ್ಯ ಅವರು ಕಾಲದಲ್ಲಿ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಪ್ರಿಯಾಂಕಾ ರಾಹುಲ್ ಬಂದೋದ್ರಾ ? ಯಾವುದು ಸೂಕ್ತವಲ್ಲವೋ ಅದನ್ನು ಮಾತನಾಡಿ ಜನರನ್ನು ಮರಳು ಮಾಡಲು ಸಾದ್ಯವಿಲ್ಲ. ಜನತೆಗೆ ಗೊತ್ತಿರುವ ಮಾಹಿತಿ
ಪ್ರಿಯಾಂಕಾ ಗಾಂಧಿಗೆ ಕಾಂಗ್ರೆಸ್ ಸರಿಯಾದ ಮಾಹಿತಿ ನೀಡಿಲ್ಲ ಎಂದರು.
ಐಟಿ ರೇಡ್ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ವಿಚಾರಕ್ಕೆ, ಕಳ್ಳನ ಜೀವ ಉಳ್ಳುಳ್ಳಗೆ ಎಂದು ಸಿಎಂ ವ್ಯಂಗ್ಯವಾಡಿದರು.
ಇದೇ ವೇಳೆ ಜಗದೀಶ್ ಶೆಟ್ಟರ್ ಎಲ್ಲ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ. ಮೋದಿಯವರಿಗೆ ದಿನಕ್ಕೆ ಐದು ಕಡೆ ಪ್ರಚಾರ ಮಾಡುವ ಶಕ್ತಿ ಇದೆ ಮಾಡುತ್ತಾರೆ. ಎಐಸಿಸಿಯ ಅಧ್ಯಕ್ಷ ಖರ್ಗೆಯವರು ಸೀನಿಯರ್ ಲೀಡರ್. ಅವರ ಬಾಯಿಂದ ಇಂತ ಮಾತು ಬಂದಿದೆ ಅಂದಾಗ, ಉಳಿದವರಿಂದ ಪ್ರತಿಕ್ರಿಯೆ ಬರೋದು ಸಹಜ. ಇನ್ನೂ ದೇವೇಗೌಡರು ಯಾವ ರಾಷ್ಟ್ರೀಯ ಪಕ್ಷದವರು ಮೈತ್ರಿಗೆ ಮುಂದಾಗಿದ್ದಾರೆ ಬಹಿರಂಗವಾಗಿ ಹೇಳಲಿ ಎಂದರು.
[30/04, 3:42 PM] pannangaraj1: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶಿಗ್ಗಾವಿ ಕ್ಷೇತ್ರದ ಹಿರೇಬೆಂಡಿಗೇರಿ, ಹಿರೇಮಣಕಟ್ಟಿ ಗ್ರಾಮದಲ್ಲಿ ರೋಡ್ ಶೋ ನಡೆಸಿ ಮಾತನಾಡಿದರು.
[30/04, 3:42 PM] pannangaraj1: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶಿಗ್ಗಾವಿ ಕ್ಷೇತ್ರದ ಕಬನೂರು ಗ್ರಾಮದಲ್ಲಿ ರೋಡ್ ಶೋ ನಡೆಸಿ ಮಾತನಾಡಿದರು.
Post a Comment