ಲಿಂಗಾಯತ/ದಲಿತ ಸಮಾಜ ಒಡೆಯಲು ಮುಂದಾದ ಕಾಂಗ್ರೆಸ್ಸಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ: ಛಲವಾದಿ ನಾರಾಯಣಸ್ವಾಮಿ


ಲಿಂಗಾಯತ/ದಲಿತ ಸಮಾಜ ಒಡೆಯಲು ಮುಂದಾದ ಕಾಂಗ್ರೆಸ್ಸಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ: ಛಲವಾದಿ ನಾರಾಯಣಸ್ವಾಮಿ
ಬೆಳಗಾವಿ: ಮಾನ್ಯ ಜಗದೀಶ್ ಶೆಟ್ಟರ್ ಹಾಗೂ ಮಾನ್ಯ ಲಕ್ಷ್ಮಣ ಸವದಿ ಅವರು ಸ್ವಾರ್ಥದಿಂದಾಗಿ ಪಕ್ಷ ತ್ಯಜಿಸಿ ಹೋಗಿದ್ದಾರೆ. ಆದರೇ, ಅವರಿಗೆ ಪಕ್ಷ ಸರ್ವ ಅಧಿಕಾರಗಳನ್ನು ನೀಡಿದ್ದರೂ ಇಂತಹ ಲೋಪವನ್ನು ಮಾಡಬಾರದಿತ್ತು ಎಂದು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಬೈಟ್ ನೀಡಿದ ಅವರು, ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಸದೃಢವಾಗಿದ್ದು ಕಾರ್ಯಕರ್ತರು ಗಟ್ಟಿಯಾಗಿದ್ದಾರೆ. ಲಿಂಗಾಯತ ಸಮುದಾಯ ಬಿಜೆಪಿಯಿಂದ ದೂರ ಹೋಗುವ ಪ್ರಶ್ನೆ ಉದ್ಭವಿಸದು ಎಂದು ತಿಳಿಸಿದರು. ನಿಜವಾಗಿಯೂ ಲಿಂಗಾಯತ ಅಥವಾ ವೀರಶೈವ ಸಮಾಜವನ್ನು ಒಡೆಯಲು ಪ್ರಯತ್ನಿಸಿದ್ದು ಕಾಂಗ್ರೆಸ್ ಪಕ್ಷ. ಅದಕ್ಕೆ ಅವರು ಕಳೆದ ಚುನಾವಣೆಯಲ್ಲಿ ಬೆಲೆಯನ್ನೂ ತೆತ್ತಿದ್ದಾರೆ ಎಂದು ನುಡಿದರು.
ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಮತ್ತು ಸಮಾಜವನ್ನು ಕಟ್ಟುವ ಕೆಲಸವನ್ನು ಬಿಜೆಪಿ  ಮಾಡಲಿದೆ ಎಂದು ಸ್ಪಷ್ಟಪಡಿಸಿದರು. ಇಲ್ಲಿ ತನಕ ಪಕ್ಷ ಬಿಟ್ಟು ಹೋದ ನಾಯಕರು ಬೆಳೆದು ಬಂದ ನೀತಿ ಸಿದ್ಧಾಂತಗಳಿಗೆ ತಿಲಾಂಜಿಲಿ ನೀಡಿದ್ದಾರೆ. ಸಂಪೂರ್ಣ ಕಾಂಗ್ರೆಸ್ ವಿರೋಧಿ ನೀತಿ ಅನುಸರಿಸಿದವರು ಇಂದು ಅದೇ ಸಿದ್ಧಾಂತವನ್ನು ಒಪ್ಪಿಕೊಳ್ಳುವುದಾದರೆ ಇದೊಂದು ವಿಪರ್ಯಾಸ ಮತ್ತು ಪಕ್ಷ ಹಾಗೂ ಕಾರ್ಯಕರ್ತರಿಗೆ ಮಾಡಿದ ದ್ರೋಹ ಎಂದು ಬಣ್ಣಿಸಿದ್ದಾರೆ. 
ಇಂದು ಕೋಲಾರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಸ್ಥಳೀಯ ಮುಖಂಡರು ಸೇರಿ ದಲಿತರಿಗೆ ನೀಡಿರುವ ಮೀಸಲಾತಿಯನ್ನು ಹಿಂಪಡೆಯುವ ಮಾತುಗಳನ್ನು ಆಡಿದ್ದಾರೆ, ಇದು ಡಾ|| ಬಿ.ಆರ್. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಮನಸ್ಥಿತಿ, ದಲಿತರನ್ನು ದಮನಗೊಳಿಸಿ ಅವರನ್ನು ಕೇವಲ ಓಟ್ ಬ್ಯಾಂಕ್‍ಗಾಗಿ ಬಳಸಿ ಅವರ ಶ್ರೇಯೋಭಿವೃದ್ಧಿಯನ್ನು ಬಯಸದ ಮನಸ್ಥಿತಿ ಈಗಲೂ ಕಾಂಗ್ರೆಸ್ ಅನುಸರಿಸುತ್ತಿದೆ ಎಂಬುದು ಎದ್ದು ಕಾಣುತ್ತದೆ. 
ಅವರದೇ ಪಕ್ಷದ ಶಾಸಕ ಶ್ರೀ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಇಟ್ಟು ಖುಷಿ ಪಟ್ಟ ನಿದರ್ಶನ ಜನರ ಕಣ್ಣ ಮುಂದಿದೆ. ಇಂದು ಅವರ ಮನೆಗೆ ಬೆಂಕಿ ಹಚ್ಚಿದ್ದಲ್ಲದೇ ಹಚ್ಚಿದವರ ಪರ ನಿಂತು ಶ್ರೀನಿವಾಸಮೂರ್ತಿಗೆ ಚುನಾವಣೆಗೆ ಟೀಕೆಟ್ ನೀಡದೇ ಮೋಸ ಮಾಡಿರುವುದಕ್ಕಿಂತ ದಲಿತ ವಿರೋಧಿ ನೀತಿ ಇನ್ನೊಂದಿಲ್ಲ ಇದು, ಕಾಂಗ್ರೆಸ್ ಸಂಸ್ಕøತಿ ಇಂತದನ್ನು ಬಹು ಹಿಂದೆಯೇ ಅರ್ಥ ಮಾಡಿಕೊಂಡಿದ್ದ ಬಾಬಾ ಸಾಹೇಬ್ ಡಾ|| ಬಿ.ಆರ್. ಅಂಬೇಡ್ಕರ್ ಅವರು ಕಾಂಗ್ರೆಸ್ ಸುಡುವ ಮನೆಯಾಗಿದೆ ದಲಿತರು ಆ ಮನೆ ಪ್ರವೇಶಿಸಿದರೆ ನೀವು ಸುಡುವುದು ಗ್ಯಾರಂಟಿ ಎಂದು ಹಿಂದೆಯೇ ಹೇಳಿದ್ದಾರೆ. ಈಗ ಅಖಂಡ ಶ್ರೀನಿವಾಸಮೂರ್ತಿಗೆ ಆಗಿರುವುದು ಕೂಡ ಅದೇ ಇದರಿಂದ ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ, ದಲಿತ ವಿರೋಧಿ, ಸಂವಿಧಾನ ವಿರೋಧಿ, ಮೀಸಲಾತಿ ವಿರೋಧಿಯೂ ಕೂಡ ಆಗಿದೇ ಎಂಬುದಕ್ಕೆ ಉತ್ತಮ ನಿದರ್ಶನಗಳು ಕಣ್ಣ ಮುಂದೆ ರಾರಾಜಿಸುತ್ತಿವೆ. 
ಆದ್ದರಿಂದ ದಲಿತರೂ ಮಾತ್ರವಲ್ಲ ಹಿಂದುಳಿದವರು, ಅಲ್ಪಸಂಖ್ಯಾತರು, ಲಿಂಗಾಯತ ವೀರಶೈವರು, ಎಲ್ಲರೂ ಇವರ ನೀತಿಯನ್ನು ಅರ್ಥ ಮಾಡಿಕೊಂಡು ಈಗಲಾದರೂ ಅವರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಿ ಕಾಂಗ್ರೆಸ್‍ನ್ನು ಮನೆಗೆ ಕಳಿಸಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡುತ್ತೇನೆ. 



(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ

Post a Comment

Previous Post Next Post