cm, updates

[15/04, 12:54 PM] Cm Ps: *ಎರಡು ದಿನಗಳಲ್ಲಿ ಗೊಂದಲ ಬಗೆಹರಿಯಲಿದೆ*: *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಹುಬ್ಬಳ್ಳಿ, ಏಪ್ರಿಲ್ 15:  ಎರಡು ದಿನಗಳಲ್ಲಿ  ಭಿನ್ನಮತದ ಸಮಸ್ಯೆ ಬಗೆಹರಿಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 


ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. 

ಶಾಸಕ ನೆಹರೂ ಓಲೇಕಾರ್ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿ ಅವರು  ಆರೋಪಗಳಿಗೆ  ದಾಖಲೆ ಕೊಡಲಿ‌.  ನೆಹರೂ ಒಲೆಕಾರ್ ಅವರಿಗೆ  ಪ್ರಕರಣವೊಂದರಲ್ಲಿ  ಅಪರಾಧ ಸಾಬೀತಾಗಿದೆ ಎಂದರು. 

*ಬಹುಮತದ ದೊರೆಯುವ ಆತ್ಮವಿಶ್ವಾಸ*
 ಇಂದು ಇಡೀ ದಿನ ಕ್ಷೇತ್ರದಲ್ಲಿ ಇರುವುದಾಗಿ ತಿಳಿಸಿದ ಅವರು, ರಾಜ್ಯದಲ್ಲಿ ಚುನಾಚಣೆ ಕಣ ಸಿದ್ದವಾಗಿದೆ. ಸಂಪೂರ್ಣ ಬಹುಮತ ದೊರೆಯಲಿದೆ ಎಂಬ  ಆತ್ಮವಿಶ್ವಾಸ ನಮಗಿದೆ ಎಂದರು. ಉಳಿದ ಕ್ಷೇತ್ರಗಳಿಗೆ  ಇನ್ನೆರಡು ದಿನಗಳಲ್ಲಿ ಕೇಂದ್ರ ಚುನಾವಣೆ ಸಮಿತಿ ತೀರ್ಮಾನ ಮಾಡಲಿದ್ದು, ಹನ್ನೆರಡು  ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿದೆ ಎಂದರು. 

*ಜಗದೀಶ್ ಶೆಟ್ಟರ್ ಮನವೊಲಿಕೆ ಪ್ರಯತ್ನ*

ಜಗದೀಶ ಶೆಟ್ಟರ್ ಅವರ ಮನವೊಲಿಕೆಗೆ ಇಂದಿಗೂ ಪ್ರಯತ್ನ ನಡೆಯುತ್ತಿದ್ದು,  ನಿನ್ನೆ ಧರ್ಮೇಂದ್ರ ಪ್ರಧಾನ ಅವರ ಬಳಿ ಚರ್ಚೆ ಮಾಡಲಾಗಿದೆ ಎಂದರು.

*ಜಗದೀಶ್ ಶೆಟ್ಟರ್ ಅವರನ್ನು ಉಳಿಸಿಕೊಳ್ಳುವ ವಿಶ್ವಾಸ*
ಜಗದೀಶ್  ಶೆಟ್ಟರ್ ಅವರದ್ದು,  ಜನಸಂಘ ಕಾಲದ ಮನೆತನ. ಬಿಜೆಪಿಗೆ ಅವರು  ಅತ್ಯಂತ ನಿಷ್ಠರು.
ಉತ್ತರ ಕರ್ನಾಟಕ ಭಾಗಕ್ಕೆ ಅತ್ಯಂತ ಅವಶ್ಯಕವಾಗಿದ್ದಾರೆ. ಅತ್ಯಂತ ಅವಶ್ಯ ಇರೋ ನಾಯಕ.ಅವರನ್ನು ಉಳಿಸಿಕೊಳ್ಳಬೇಕೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಮಾತನಾಡಿದ್ದು,  ಅವರನ್ನು ಉಳಿಸಿಕೊಳ್ಳುವ ವಿಶ್ವಾಸ ಇದೆ ಎಂದರು.

*ಸುಳ್ಳು ವದಂತಿ*

ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಲು ಸಿಎಂ ಅವರೇ  ಕಾರಣ ಎಂಬ ಆರೋಪದ ಬಗ್ಗೆ  ಪ್ರತಿಕ್ರಿಯೆ
ನೀಡಿದ ಮುಖ್ಯಮಂತ್ರಿಗಳು ಇದು ಸುಳ್ಳು ವದಂತಿ.  ಯಾರೂ ಅದನ್ನು ಹೇಳಬಾರದು ಅತ್ಯಂತ ಪ್ರಾಮಾಣಿಕವಾಗಿ ಶೆಟ್ಟರ್ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೇವೆ.  ಹೇಳುವವರು ನೂರಾರು ಹೇಳುತ್ತಾರೆ. ಶೆಟ್ಟರ್ ಮತ್ತು ನಾವು ಆತ್ಮೀಯರು ಎಂದರು. 

*ಚುನಾವಣೆ ಒಂದು ಸವಾಲು*
ಕಾಂಗ್ರೆಸ್ ಗೆ ಚುನಾವಣೆ ಗೆಲ್ಲುವ ಶಕ್ತಿ  ಇಲ್ಲ.   ಚುನಾವಣೆ ಅಂದರೆ ಒಂದು ಸವಾಲು ಎಂದು ತಿಳಿಸಿದರು.
[15/04, 2:04 PM] Cm Ps: ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರಾದ ಸಿ.ಸಿ. ಪಾಟೀಲ್, ಸಂಸದರಾದ ಶಿವಕುಮಾರ ಉದಾಸಿ, ಸಿಎಂ ಪುತ್ರ ಭರತ್ ಬೊಮ್ಮಾಯಿ ಹಾಗೂ ಮತ್ತಿತರರು ಹಾಜರಿದ್ದರು.
[15/04, 3:14 PM] Cm Ps: *ಜನರ ಅಭೂತಪೂರ್ವ ಬೆಂಬಲ ಸಿಕ್ಕಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಹಾವೇರಿ: ಶಿಗ್ಗಾಂವಿ ಕ್ಷೇತ್ರದಲ್ಲಿ ನನಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಹಲವಾರು ಬಾರಿ ಶಿಗ್ಗಾಂವಿ ಮತಕ್ಷೇತ್ರದ ಜನರು ಆಶೀರ್ವಾದ ಮಾಡಿ, ಬೆಂಬಲವನ್ನು ಕೊಟ್ಟಿದ್ದಾರೆ. ಈ ಬಾರಿಯೂ ಹಿಂದಿನ ದಾಖಲೆಯನ್ನು ಮುರಿದು, ಅತ್ಯಧಿಕ ಮತದಿಂದ ಆರಿಸಿ ಬರುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಶಿಗ್ಗಾಂವಿಯ ತಹಶೀಲ್ದಾರ ಕಚೇರಿಯಲ್ಲಿ 2023 ರ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಈ ತಾಲೂಕಿನ ಮತದಾರರು ಪ್ರಭುದ್ದ, ಜಾಗೃತ ಮತದಾರರಿದ್ದಾರೆ. ಈ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಮತವನ್ನು ಕ್ಷೇತ್ರದ ಜನರು ನೀಡಿದ್ದಾರೆ. ಈ ಬಾರಿ ಕಳೆದ ಬಾರಿಗಿಂತಲೂ ಹೆಚ್ಚಿನ ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ. ಎಲ್ಲ ವರ್ಗಕ್ಕೆ ಸಮಾನವಾದ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ ಎಂದರು.

ಹೊಸ ಕೈಗಾರಿಕೆ, ಟೈಕ್ಸ್ಟೈಲ್ ಪಾರ್ಕ್, ಐಐಟಿ, ಆಯುರ್ವೇದಿಕ ಆಸ್ಪತ್ರೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ಆಗಿವೆ. ಹೀಗಾಗಿ ಜನರು ಹಿಂದಿನಕ್ಕಿಂತಲೂ ಹೆಚ್ಚಿನ ಬೆಂಬಲವನ್ನು ಕೊಡುತ್ತಾರೆ. ನಮ್ಮದು ಆಡಳಿತ ಪಕ್ಷವಾಗಿರುವುದರಿಂದ ಆಕಾಂಕ್ಷಿಗಳು ಬಹಳ ಇದ್ದಾರೆ. ಹಲವು ಹಾಲಿ ಶಾಸಕರನ್ನು ಬದಲಾವಣೆ ಮಾಡಿದಾಗ ಬಂಡಾಯ ಸಹಜ. ಎರಡು ಮೂರು ದಿನಗಳಲ್ಲಿ ಎಲ್ಲವೂ ಶಮನವಾಗುತ್ತದೆ. ಸದ್ಯದಲ್ಲಿಯೇ ಈ ಕೊನೆಯ ಪಟ್ಟಿ ಬಿಡುಗಡೆಯಾಗಲಿದೆ ಎಂದರು.

ಚುನಾವಣೆ ಎಂದರೆ ಕುಸ್ತಿ ಕಣ ನನ್ನ ಕ್ಷೇತ್ರದಲ್ಲಿ ಎದುರಾಳಿ ಯಾರೇ ಬರಲಿ, ಪ್ರತಿಸ್ಪರ್ಧಿ ಗಟ್ಟಿಯಾಗಿದ್ದರೆ ಚುನಾವಣೆ ಚೆನ್ನಾಗಿ ನಡೆಯುತ್ತದೆ. ನನ್ನ ವಿಶ್ವಾಸ ನನ್ನ ಕ್ಷೇತ್ರದ ಜನರ ಮೇಲಿದೆ. ಹತ್ತು ಹಲವರು ಪೈಪೋಟಿ ಮಾಡಿದರು, ಜನರು ನನಗೆ ಬೆಂಬಲ ಕೊಡುತ್ತಾರೆ. ಏಪ್ರಿಲ್ 19 ರಂದು ಇನ್ನೊಂದು ಬಾರಿ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಆಗ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರು ಆಗಮಿಸಲಿದ್ದಾರೆ ಎಂದರು.

*ಆರೋಪ ಸಾಬೀತು ಪಡಿಸಲಿ*

ನೆಹರು ಓಲೇಕಾರ ನನ್ನ ಮೇಲೆ ಆರೋಪ ಮಾಡಿದ್ದನ್ನು ಸಾಬೀತು ಮಾಡಲಿ. ನಾನು ಎಲ್ಲದಕ್ಕೂ ಸಿದ್ದನಿದ್ದೇನೆ. ಆದರೆ, ಓಲೇಕಾರ ಅವರು ಅವರ ಮೇಲಿರುವ ಆರೋಪಗಳ ಬಗ್ಗೆ ಮೊದಲು ಸ್ಪಷ್ಠೀಕರಣ ಕೊಡಲಿ ಎಂದರು.
[15/04, 9:12 PM] Cm Ps: *130 ಸ್ಥಾನಗಳಲ್ಲಿ ಬಿಜೆಪಿ  ಮುಂದಿರಲಿದೆ *: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*  

ಹಾವೇರಿ, ಏಪ್ರಿಲ್ 15:  ಈವರೆಗೆ ನಡೆದಿರುವ ಸಮೀಕ್ಷೆಗಳಲ್ಲಿ ಬಿಜೆಪಿಗೆ ಜಯ ದೊರೆಯಲಿದೆ ಎಂದು ವರದಿಗಳು ತಿಳಿಸಿದ್ದು, ಮೇ 10 ನೇ ತಾರೀಖು ನಡೆಯುವ  ಮತದಾನದಂದು 130 ಸ್ಥಾನಗಳಲ್ಲಿ ಬಿಜೆಪಿ  ಮುಂದಿರಲಿದೆ ಎಂದು 
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ಶಿಗ್ಗಾಂವ - ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಕಾರಡಗಿ, ಹುರುಳಿಕೊಪ್ಪಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಕಾರ್ಯಕರ್ತರ  ಸಭೆಯಲ್ಲಿ ಮಾತನಾಡುತ್ತಿದ್ದರು. 

ಕಾಂಗ್ರೆಸ್ ನಿಂದ ಹಲವಾರು ಜನ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ.  ಈ ಬಾರಿ ಅತಿ ಹೆಚ್ಚು ಅಭಿವೃದ್ಧಿ ಕೆಲಸಗಳು ಆಗಿವೆ. ನಮ್ಮ ಕೆಲಸ ಮಾತಾಡಬೇಕು. ನಮ್ಮ ಕೆಲಸ ನೋಡಿ ಜನ ಮತ ಕೊಡಬೇಕಿದೆ ಎಂದರು. ವಿರೋಧ ಪಕ್ಷದವರು ಮನ ಬಂದಂತೆ ಮಾತನಾಡುತ್ತಾರೆ. ಯಾರು ಅಭಿವೃದ್ಧಿ ಮಾಡಿದ್ದಾರೆ ಎನ್ನುವುದು ಜನರಿಗೆ ತಿಳಿದಿದೆ ಎಂದರು.   ಮಾಜಿ ಶಾಸಕ ಮಂಜುನಾಥ್ ಕುನ್ನೂರು ಅವರು 2000 ಇಸವಿಯಲ್ಲಿ ಮಂಜೂರು ಮಾಡಿದ್ದನ್ನು ಈಗ ತಿಳಿಸುತ್ತಾರೆ ಎಂದರು.   ಕೆಲವರು ಹೊರಗಿನ ತಾಲೂಕಿನಿಂದ ಚುನಾವಣೆಗೆ ಬರುತ್ತಾರೆ.  ಚುನಾವಣೆ ಆದ ಮೇಲೆ ಅವರು  ಬರಲ್ಲ, ಕಷ್ಟ ಸುಖ ಕೇಳುವುದಿಲ್ಲ. 
ಹಾಲಿನಲ್ಲಿ ಉಪ್ಪು ಹಾಕೋಕೆ ಬರುತ್ತಾರೆ.  ಇಂಥವರ  ಮಾತು ಕೇಳಬೇಡಿ ಎಂದರು. 

*ಏಪ್ರಿಲ್ 19 ರಂದು ಎಲ್ಲರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ*
ಜನರ  ಆಶೀರ್ವಾದದಿಂದ ಇಂದು ನಾಮಪತ್ರ ಸಲ್ಲಿಸಿದ್ದು, ಎಪ್ರಿಲ್ 19 ನೇ ತಾರೀಖು ಬೃಹತ್ ಸಂಖ್ಯೆಯಲ್ಲಿ ಸೇರಬೇಕು. ಅಂದು ನಿಮ್ಮೆಲ್ಲರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಾಗುವುದು ಎಂದರು. 

*ಸುಭದ್ರ ಸರ್ಕಾರ*
ಕಳೆದ ಬಾರಿ ಬಿಜೆಪಿಗೆ 104 ಸ್ಥಾನ ಬಂದಿತ್ತು.  ಆದರೆ ಕಾಂಗ್ರೆಸ್- ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡರು.  ಬಳಿಕ ಲೋಕಸಭಾ ಚುನಾವಣೆಯಲ್ಲಿ ಜನಾದೇಶ ಯಾರ ಕಡೆ ಇದೆ ಎಂದು  ತೋರಿಸಿದರು.  ಬಳಿಕ ಒಂದು ಸುಭದ್ರ ಸರಕಾರ ರಚನೆ ಮಾಡಲಾಯಿತು ಎಂದರು. 
ಕೋವಿಡ್ ಪರಿಸ್ಥಿತಿಯಲ್ಲಿ ಸವಣೂರು ಕೂಡಾ ತತ್ತರಿಸಿತ್ತು. ಅಂದು ಉಚಿತ  ರೇಷನ್,ಹಾಗೂ  ಲಸಿಕೆ ನೀಡಲಾಯಿತು ಎಂದು ವಿವರಿಸಿದರು.

 *16 ಗಂಟೆ ಕೆಲಸ*
ದಿನವೊಂದರಲ್ಲಿ 16 ತಾಸು ಕೆಲಸ ಮಾಡಿದ್ದು, ಕೇವಲ ಐದು  ತಾಸು ನಿದ್ದೆ ಮಾಡಿರುವುದಾಗಿ ತಿಳಿಸಿದ ಅವರು ಪ್ರವಾಹ ಬಂದಾಗ ಎಲ್ಲಾ ಜಿಲ್ಲೆಗಳಲ್ಲಿ ಓಡಾಡಿ ದೊಡ್ಡ ಪ್ರಮಾಣದ ಸಹಾಯ ಶಿಗ್ಗಾವಿ - ಸವಣೂರು ತಾಲೂಕಿನಲ್ಲಿ ನಮ್ಮ ಸರ್ಕಾರದಿಂದ ಮಾಡಲಾಗಿದೆ ಎಂದರು. 

*ಆರ್ಥಿಕ ಸುಧಾರಣೆ*
ಆರ್ಥಿಕ ಸುಧಾರಣೆ ಮಾಡುವುದರೊಂದಿಗೆ   ಹಲವು ಯೋಜನೆಗಳನ್ನು ರೂಪಿಸಲಾಗಿದೆ.
ಮೊದಲ ಸಚಿವ ಸಂಪುಟದಲ್ಲಿಯೇ ರೈತ ವಿದ್ಯಾನಿಧಿ ಜಾರಿಗೆ ತರಲಾಯಿತು.  ಈ ವರ್ಷ ಎಲ್ಲಾ ರೈತ ಬಾಂಧವರಿಗೆ  ಜೀವವಿಮೆ, ಆರೋಗ್ಯ ವಿಮೆಯನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ನೀಡಲಾಗಿದೆ.
3 ಲಕ್ಷದಿಂದ 5 ಲಕ್ಷ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡುವ ಯೋಜನೆ, ರೈತರಿಗೆ ಬೀಜ ಗೊಬ್ಬರಕ್ಕಾಗಿ 10 ಸಾವಿರ ರೂ, ರೈತ ಸಮ್ಮಾನ್  ಯೋಜನೆಯಡಿ ನೀಡಲಾಗಿದೆ. ನಾಲ್ಕು ವರ್ಷಗಳ ಲ್ಲಿ 16 ಸಾವಿರ ಕೋಟಿ ರೂ.ಗಳನ್ನು 54 ಲಕ್ಷ ರೈತರಿಗೆ ನೀಡಲಾಗಿದೆ. ಪಿ.ಯುಸಿ ಹಾಗೂ ಪದವಿ ಕಲಿಯುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, 8 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ ಮಾಡಲಾಗಿದೆ ಎಂದರು.

*ಸಮಗ್ರ ಅಭಿವೃದ್ಧಿ*
ಶಿಗ್ಗಾಂವಿ -ಸವಣೂರು ಭಾಗದಲ್ಲಿ 100 ಕ್ಕಿಂತಲೂ ಹೆಚ್ಚು ಕೆರೆಗಳನ್ನು ತುಂಬಿಸುವ ಯೋಜನೆ ರೂಪಿಸಿದ್ದು,  ಸವಣೂರಿನಲ್ಲಿ 67 ಕೋಟಿ ರೂ.ಗಳನ್ನು ವೆಚ್ಚ ಮಾಡಿ ಆಯುರ್ವೇದ ಕಾಲೇಜು ನಿರ್ಮಾಣ ಮಾಡಲಾಗುತ್ತಿದೆ. 30 ಕೋಟಿ ವೆಚ್ಚದಲ್ಲಿ ಐಟಿಐ ನಿರ್ಮಾಣ, 100 ಕೋಟಿ ಗಿಂತ ಹೆಚ್ಚು ವೆಚ್ಚದಲ್ಲಿ ತಾಯಿ - ಮಗು ಆಸ್ಪತ್ರೆ, ಮುಂತಾದ ಕಾರ್ಯಗಳನ್ನು ಸವಣೂರು ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಲಾಗಿದೆ ಎಂದರು. ಉಳಿದೆಲ್ಲಾ ಕ್ಷೇತ್ರಗಳಿಗಿಂತ ಅತ್ಯುತ್ತಮ ಸಂಪರ್ಕ ರಸ್ತೆಗಳು,  ಎಲ್ಲಾ ಸಮುದಾಯಗಳಿಗೆ ನ್ಯಾಯ ನೀಡುವ ಕೆಲಸವನ್ನು ಮಾಡಲಾಗಿದೆ ಎಂದರು. 

*ಮೀಸಲಾತಿ ಹೆಚ್ಚಳ*
ಕುರಿಗಾಹಿಗಳಿಗೆ ವಿಶೇಷ ಯೋಜನೆ, ಕುರಿಗಾಹಿ ಸಂಘಗಳಿಗೆ ಹಣ ಬಿಡುಗಡೆಯಾಗಲಿದ್ದು, ಕುರಿಗಳನ್ನು ಕೊಳ್ಳಬಹುದಾಗಿದೆ. ಪರಿಶಿಷ್ಟ ರ ಮೀಸಲಾತಿ ಹೆಚ್ಚಳ ಮಾಡಿ ನ್ಯಾಯ ನೀಡಲಾಗಿದೆ. ರೈತಾಪಿ ವರ್ಗಕ್ಕೆ ಮೀಸಲಾತಿ ಹೆಚ್ವಿಸಿ ಅವರ ಬಹುದಿನಗಳ ಬೇಡಿಕೆ ಈಡೇರಿಸಲಾಗಿದೆ ಎಂದರು. 

*ಬೇಧಭಾವವಿಲ್ಲದೆ ಅಭಿವೃದ್ಧಿ*
ಸವಣೂರಿನಲ್ಲಿ ಎಲ್ಲಾ ಅಲ್ಪಸಂಖ್ಯಾತರ ಅಂದರೆ ದರ್ಗಾ, ಬಸದಿಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿದೆ.  ತಾಲ್ಲೂಕಿನ ಪ್ರಮುಖ 500  ದೇವಾಲಯಗಳಿಗೆ ಅನುದಾನ ಕಳೆದ 15 ವರ್ಷಗಳಲ್ಲಿ ಒದಗಿಸಲಾಗಿದೆ. ಮೂಲಭೂತ ಸೌಕರ್ಯ, ಸಂಸ್ಥೆಗಳ ನಿರ್ಮಾಣ, ಮುಂತಾದ ಕಾರ್ಯಕ್ರಗಳನ್ನು ಮಾಡಲಾಗಿದೆ. ಬಾಡಾದಲ್ಲಿ ಕನಕದಾಸರ ಅರಮನೆ ಅಭಿವೃದ್ಧಿ,  ಶಿಶುನಾಳ ಶರೀಫರ ಜನ್ಮಸ್ಥಳದ ಅಭಿವೃದ್ಧಿ, ಸವಣೂರು ನವಾಬರ ಅರಮನೆಯ ಅಭಿವೃದ್ಧಿಯನ್ನು ಬೇಧಭಾವವಿಲ್ಲದೆ ಮಾಡಲಾಗಿದೆ ಎಂದರು. ಪ್ರತಿ ಊರಿನಲ್ಲಿ ಫೋಟೋ ಸಮೇತ  ಅಭಿವೃದ್ಧಿ ಕಾರ್ಯಗಳ ಪಟ್ಟಿ ಮಾಡಿ ಹಂಚುವಂತೆ ಸೂಚಿಸಲಾಗಿದೆ ಎಂದರು. ಅಭಿವೃದ್ಧಿಯ ಹೆಸರಿನಲ್ಲಿ ಜನ ನಮಗೆ ಮತ ನೀಡಬೇಕಿದೆ ಎಂದರು. 

*ಶಿಗ್ಗಾವಿ - ಸವಣೂರಿನ ಶಕ್ತಿ ಪ್ರದರ್ಶಿಸಿ*
19 ನೇ ತಾರೀಖು ಬಹಳ ದೊಡ್ಡ ಸಂಖ್ಯೆಯಲ್ಲಿ ಜನ ಬರಬೇಕು. ದೊಡ್ಡ ಪ್ರಮಾಣದಲ್ಲಿ ಜನ ಬಂದು ಅಂದಿನ ಕಾರ್ಯಕ್ರಮ ಯಶಸ್ವಿಗೊಳಿಸಿ, ಶಿಗ್ಗಾವಿ - ಸವಣೂರಿನ ಶಕ್ತಿ ಅಂದು ತೋರಿಸಬೇಕು ಎಂದರು.

Post a Comment

Previous Post Next Post