[10/06, 12:01 AM] Rss Lokesh Anna. mallm: 🕉️ ಓಂ ಶ್ರೀ ಗುರುಭ್ಯೋ ನಮಃ 🕉️ *ಕಾಲಭೈರವ ಅಷ್ಟಕಮ್*
ದೇವರಾಜಸೇವ್ಯಮಾನಪಾವನಾಙ್ಘ್ರಿಪಙ್ಕಜಂ
ವ್ಯಾಲಯಜ್ಞಸೂತ್ರಮಿನ್ದುಶೇಖರಂ ಕೃಪಾಕರಮ್
ನಾರದಾದಿಯೋಗಿವೃನ್ದವನ್ದಿತಂ ದಿಗಂಬರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ|| ೧||
ಭಾನುಕೋಟಿಭಾಸ್ವರಂ ಭವಾಬ್ಧಿತಾರಕಂ ಪರಂ
ನೀಲಕಣ್ಠಮೀಪ್ಸಿತಾರ್ಥದಾಯಕಂ ತ್ರಿಲೋಚನಮ್ |
ಕಾಲಕಾಲಮಂಬುಜಾಕ್ಷಮಕ್ಷಶೂಲಮಕ್ಷರಂ
ಕಾಶಿಕಾ ಪುರಾಧಿನಾಥ ಕಾಲಭೈರವಂ ಭಜೇ||೨||
ಶೂಲಟಙ್ಕಪಾಶದಣ್ಡಪಾಣಿಮಾದಿಕಾರಣಂ
ಶ್ಯಾಮಕಾಯಮಾದಿದೇವಮಕ್ಷರಂ ನಿರಾಮಯಮ್ |
ಭೀಮವಿಕ್ರಮಂ ಪ್ರಭುಂ ವಿಚಿತ್ರತಾಣ್ಡವಪ್ರಿಯಂ
ಕಾಶಿಕಾ ಪುರಾಧಿನಾಥ ಕಾಲಭೈರವಂ ಭಜೇ ||೩||
ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂ
ಭಕ್ತವತ್ಸಲಂ ಸ್ಥಿತಂ ಸಮಸ್ತಲೋಕವಿಗ್ರಹಮ್ |
ವಿನಿಕ್ವಣನ್ಮನೋಜ್ಞಹೇಮಕಿಙ್ಕಿಣೀಲಸತ್ಕಟಿಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||೪||
ಧರ್ಮಸೇತುಪಾಲಕಂ ತ್ವಧರ್ಮಮಾರ್ಗನಾಶಕಂ
ಕರ್ಮಪಾಶಮೋಚಕಂ ಸುಶರ್ಮದಾಯಕಂ ವಿಭುಮ್ |
ಸ್ವರ್ಣವರ್ಣಶೇಷಪಾಶಶೋಭಿತಾಙ್ಗಮಣ್ಡಲಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || ೫||
ರತ್ನಪಾದುಕಾಪ್ರಭಾಭಿರಾಮಪಾದಯುಗ್ಮಕಂ
ನಿತ್ಯಮದ್ವಿತೀಯಮಿಷ್ಟದೈವತಂ ನಿರಞ್ಜನಮ್ |
ಮೃತ್ಯುದರ್ಪನಾಶನಂ ಕರಾಳದಂಷ್ಟ್ರಮೋಕ್ಷಣಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||೬||
ಅಟ್ಟಹಾಸಭಿನ್ನಪದ್ಮಜಾಣ್ಡಕೋಶಸನ್ತತಿಂ
ದೃಷ್ಟಿಪಾತನಷ್ಟಪಾಪಜಾಲಮುಗ್ರಶಾಸನಮ್ |
ಅಷ್ಟಸಿದ್ಧಿದಾಯಕಂ ಕಪಾಲಮಾಲಿಕನ್ಧರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||೭||
ಭೂತಸಙ್ಘನಾಯಕಂ ವಿಶಾಲಕೀರ್ತಿದಾಯಕಂ
ಕಾಶಿವಾಸಲೋಕಪುಣ್ಯಪಾಪಶೋಧಕಂ ವಿಭುಮ್ |
ನೀತಿಮಾರ್ಗಕೋವಿದಂ ಪುರಾತನಂ ಜಗತ್ಪತಿಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||೮||
ಕಾಲಭೈರವಾಷ್ಟಕಂ ಪಠನ್ತಿ ಯೇ ಮನೋಹರಂ
ಜ್ಞಾನಮುಕ್ತಿಸಾಧನಂ ವಿಚಿತ್ರಪುಣ್ಯವರ್ಧನಮ್ |
ಶೋಕಮೋಹದೈನ್ಯಲೋಭಕೋಪತಾಪನಾಶನಂ
ತೇ ಪ್ರಯಾನ್ತಿ ಕಾಲಭೈರವಾಙ್ಘ್ರಿಸನ್ನಿಧಿಂ ಧ್ರುವಮ್ ||೯||
ಇತಿ ಶ್ರೀಮಚ್ಛಙ್ಕರಾಚಾರ್ಯವಿರಚಿತಂ ಕಾಲಭೈರವಾಷ್ಟಕಂ ಸಂಪೂರ್ಣಮ್ ||
[10/06, 12:01 AM] Rss Lokesh Anna. mallm: 🕉️ ಓಂ ಶ್ರೀ ಗುರುಭ್ಯೋ ನಮಃ 🕉️
*ನಮ್ಮ ಕಾಲ ನಿಯಂತ್ರಕನೇ ಕಾಲ ಭೈರವ..! ಭೈರವ ಪೂಜೆಯ ಪ್ರಯೋಜನವೇನು ಗೊತ್ತೇ..?*
ಕಾಲ ಭೈರವನ ಬಗ್ಗೆ ತಿಳಿದಿರುವವರು ಬಹಳ ಕಡಿಮೆ. ಕಾಲವನ್ನು ನಿಯಂತ್ರಿಸುವ ಕಾಲ ಭೈರವನ ಬಗ್ಗೆ ನಿಮಗೆಷ್ಟು ಗೊತ್ತು..? ಕಾಲ ಭೈರವನನ್ನು ಪೂಜಿಸುವುದರಿಂದಾಗುವ ಪ್ರಯೋಜನವೇನು ಗೊತ್ತೇ..? ತಪ್ಪದೇ ಕಾಲ ಭೈರವನನ್ನು ಪೂಜಿಸಿ.
ಭೈರವನು ಭಗವಾನ್ ಶಿವನ ಆಕ್ರಮಣಕಾರಿ ರೂಪವಾಗಿದೆ. ಮತ್ತು ಭೈರವನು ದುಷ್ಟರನ್ನು ನಿರ್ಮೂಲನೆ ಮಾಡಲು, ನಕಾರಾತ್ಮಕ ಶಕ್ತಿಯನ್ನು ನಾಶಮಾಡಲು ಮತ್ತು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಟ್ಟಾರೆ 64 ಭೈರವರಿದ್ದಾರೆ. ಪ್ರತಿಯೊಂದು ಭೈರವರು ವಿಭಿನ್ನ ದಿಕ್ಕನ್ನು ನಿಯಂತ್ರಿಸುತ್ತಾರೆ ಎನ್ನುವ ನಂಬಿಕೆಯಿದೆ. 64 ಭೈರವರಲ್ಲಿ ಕಾಲ ಭೈರವನು ಪ್ರಮುಖನು. ಕಾಲಭೈರವನು ಎಲ್ಲಾ ಭೈರವರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುತ್ತಾನೆ.
*ಕಾಲ ಭೈರವನ ರೂಪ:*
ಕಾಲ ಭೈರವನು ಗಾಢವಾದ ಬಣ್ಣವನ್ನು ಹೊಂದಿರುತ್ತಾನೆ. ಉಗ್ರವಾದ ಮುಖವನ್ನು, ಮೂರು ಕಣ್ಣುಗಳನ್ನು, ತಲೆ ಬುರುಡೆ ಮತ್ತು ಹಾವಿನ ಹಾರವನ್ನು ಧರಿಸಿರುತ್ತಾನೆ. ಮತ್ತು ತಲೆಯ ಮೇಲೆ ಅರ್ಧಚಂದ್ರನನ್ನು ಇಟ್ಟುಕೊಂಡಿರುತ್ತಾನೆ. ಒಂದು ಕೈಯಲ್ಲಿ ತ್ರಿಶೂಲವನ್ನು, ಇನ್ನೊಂದು ಕೈಯಲ್ಲಿ ಭಿಕ್ಷಾ ಪಾತ್ರೆಯನ್ನು ಹಿಡಿದಿರುತ್ತಾನೆ. ಕಪ್ಪು ಬಣ್ಣದ ನಾಯಯನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾನೆ.
ಕಾಲ ಭೈರವನು 'ಕಾಲ' ಅಂದರೆ ಸಮಯವನ್ನು ಸೂಚಿಸುವವನಾಗಿದ್ದಾನೆ. ಅವನು ಸಮಯ ರಹಿತ ಕಾಲಘಟ್ಟವನ್ನು ಸೂಚಿಸುವವನಾಗಿದ್ದಾನೆ. ಭವಿಷ್ಯವನ್ನು ತಿಳಿದಿರುವವನೇ ಕಾಲ ಭೈರವ. ಸಮಯವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುತ್ತಾನೆ. ಕಾಲ ಕಾಲಕ್ಕೆ ಏನಾಗಬೇಕೆಂಬುದನ್ನು ಕಾಲ ಭೈರವನು ನಿರ್ಧರಿಸುತ್ತಾನೆ.
*ಕಾಲ ಭೈರವ ಸೃಷ್ಟಿಯ ಹಿಂದಿದೆ ಪೌರಾಣಿಕ ಕಥೆ:*
ಒಮ್ಮೆ ಬ್ರಹ್ಮ ಮತ್ತು ವಿಷ್ಣು ನಮ್ಮಿಬ್ಬರಲ್ಲಿ ಯಾರು ಪ್ರಬಲರು ಎನ್ನುವ ಚರ್ಚೆಗೆ ಒಳಗಾಗುತ್ತಾರೆ. ಇವರಿಬ್ಬರ ನಡುವಿನ ದ್ವಂದ್ವತೆಯನ್ನು ನಿವಾರಿಸಲು ಶಿವನು ಬ್ರಹ್ಮಾಂಡವನ್ನು ಮೀರಿ ವಿಸ್ತರಿಸಿದ ಬೆಳಕಿನ ಬೃಹತ್ ಸ್ಥಂಭವಾಗಿ ಹೊರಹೊಮ್ಮಿದನು. ಈ ಕಂಭದ ಅಂತ್ಯವನ್ನು ಯಾರು ಮೊದಲು ನೋಡುತ್ತಾರೋ ಅವರೇ ಅತ್ಯಂತ ಪ್ರಭಾವಶಾಲಿಯೆಂದು ಶಿವನು ಷರತ್ತನ್ನು ನೀಡುತ್ತಾನೆ.
ಪುರಾಣವನ್ನೇ ಅನುಸರಿಸಿ
ಭಗವಾನ್ ವಿಷ್ಣು ಕಾಡುಹಂದಿಯ ರೂಪವನ್ನು ಧರಿಸಿ ಸ್ಥಂಭದ ಕೆಳಭಾಗದ ಅಂತ್ಯವನ್ನು ಹುಡುಕಲು ಸ್ಥಂಭದ ಕೆಳಭಾಗದತ್ತ ಸಾಗುತ್ತಾನೆ. ಆದರೆ ವಿಷ್ಣುವಿಗೆ ಅಂತ್ಯವನ್ನು ಹುಡುಕಲು ಸಾಧ್ಯವಾಗುವುದಿಲ್ಲ. ಇನ್ನೊಂದೆಡೆ ಬ್ರಹ್ಮನು ಹಂಸದ ರೂಪವನ್ನು ಧರಿಸಿ ಹೊಳೆಯುವ ಸ್ಥಂಭದ ಮೇಲ್ಭಾಗದ ಅಂತ್ಯವನ್ನು ನೋಡಲು ಹೊರಡುತ್ತಾನೆ. ಬ್ರಹ್ಮ ದೇವನಿಗೂ ಕೂಡ ಸ್ಥಂಭದ ಅಂತ್ಯವು ಸಿಗುವುದಿಲ್ಲ.
ಬ್ರಹ್ಮನು ಒಂದು ಹೂವನ್ನು ಹಿಡಿದುಕೊಂಡು ನೀರಿನಿಂದ ಮೇಲಕ್ಕೆ ಬಮದು ನಾನು ಸ್ಥಂಭದ ಅಂತ್ಯವನ್ನು ನೊಡಿದ್ದೇನೆ. ನಾನೇ ಶ್ರೇಷ್ಟನೆಂದು ಹೇಳಿಕೊಳ್ಳಲು ಸರ. ಬ್ರಹ್ಮನ ಸುಳ್ಳು ನುಡಿಗಳನ್ನು ಕೇಳಿದ ಶಿವನು ಕೋಪಗೊಂಡು ತನ್ನ ಮೂರನೇ ಕಣ್ಣಿನಿಂದ ಭೈರವನನ್ನು ಸೃಷ್ಟಿಸುತ್ತಾನೆ. ಈ ಉಗ್ರ ರೂಪದಲ್ಲಿದ್ದ ಭೈರವನು ಬ್ರಹ್ಮನ 5ನೇ ತಲೆಯನ್ನು ಕತ್ತರಿಸುತ್ತಾನೆ. ನಂತರ ಬ್ರಹ್ಮನು ತಾನು ಹೇಳಿದ ಸುಳ್ಳಿಗೆ ಪ್ರಾಯಶ್ಚಿತವನ್ನು ಕೋರಿದನು.
*ಕಾಲ ಭೈರವನ ಪೌರಾಣಿಕ ಕಥೆ*
ಬ್ರಹ್ಮನ ದೇಹದಿಂದ ಬೇರ್ಪಟ್ಟ ತಲೆಬುರುಡೆಯ ಭೈರವನ ಕೈಗೆ ಅಂಟಿಕೊಳ್ಳುತ್ತದೆ. ಇದೇ ಮುಂದೆ ಬ್ರಹ್ಮಹತ್ಯೆ ದೋಷಕ್ಕೆ ಮುಖ್ಯ ಕಾರಣವಾಗುತ್ತದೆ ಎನ್ನುವ ನಂಬಿಕೆಯಿದೆ. ಅವನ ಕೈಗೆ ಅಂಟಿಕೊಂಡ ತಲೆಯನ್ನು ತೆಗೆಯಲು ಭೈರವನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅಲೆದಾಡುತ್ತಾನೆ. ಭೈರವನು ಬ್ರಹ್ಮನ ತಲೆಯನ್ನು ಕೈಯಲ್ಲಿಟ್ಟುಕೊಂಡು ಭಿಕ್ಷೆಗೆ ಹೋದಾಗ ಭಗವಾನ್ ವಿಷ್ಣು ಮತ್ತು ಆತನ ಪತ್ನಿ ಲಕ್ಷ್ಮಿ ದೇವಿಯು ಆಹಾರವನ್ನು ತಲೆಬುರುಡೆಯಲ್ಲಿ ತುಂಬಿಸಿದರು. ಆಗ ತಲೆಬುರುಡೆಯು ಭೈರವನ ಕೈಯಿಂದ ಕೆಲಗೆ ಬಿದ್ದು ಆತನಿಗಿದ್ದ ಬ್ರಹ್ಮಹತ್ಯ ದೋಷ ದೂರಾಗುತ್ತದೆ. ಈ ಕಾರಣಕ್ಕಾಗಿ ಭೈರವನನ್ನು ಶಿವನ ಅಲೆದಾಡುವ ರೂಪವೆಂದು ಪರಿಗಣಿಸಲಾಗುತ್ತದೆ.
*ಕಾಲ ಭೈರವ ಪೂಜೆಯ ಪ್ರಯೋಜನ:*
1) ಕಾಲ ಭೈರವನ್ನು ಆರಾಧಿಸುವುದರಿಂದ ಉತ್ತಮ ಸಮಯ ನಿರ್ವಹಣಾ ಕೌಶಲ್ಯ ಮತ್ತು ಪ್ರಯತ್ನಗಳಲ್ಲಿ ಸಮಯೋಚಿತ ಯಶಸ್ಸನ್ನು ಪಡೆಯಬಹುದು.
2) ಅವನು ನಿಮ್ಮ ಕೆಟ್ಟ ಸಮಯವನ್ನು ಉತ್ತಮ ಸಮಯಕ್ಕೆ ಬದಲಾಯಿಸಬಹುದು ಮತ್ತು ನಿಮ್ಮ ಹಣೆಬರಹವನ್ನು ಬದಲಾಯಿಸಬಹುದು.
3) ಧರ್ಮಗ್ರಂಥಗಳ ಪ್ರಕಾರ, ಕಾಲ ಭೈರವನನ್ನು ಪೂಜಿಸುವುದರಿಂದ ಸಾಲಗಳು, ಕೆಟ್ಟ ಕರ್ಮಗಳು, ಸಾವಿನ ಭಯ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು.
4) ಭೈರವನನ್ನು ಶನಿಯ ಆಡಳಿತ ದೇವತೆ ಎಂದೂ ಪರಿಗಣಿಸಲಾಗುತ್ತದೆ. ಆದ್ದರಿಂದ, ಶನಿವಾರ ಭೈರವನಿಗೆ ಪ್ರಾರ್ಥನೆ ಸಲ್ಲಿಸುವುದರಿಂದ ಕೆಟ್ಟ ಗ್ರಹದ ದುಷ್ಪರಿಣಾಮಗಳಿಂದ ಪರಿಹಾರ ಸಿಗುತ್ತದೆ.
5) ಚಿನ್ನ ಮತ್ತು ವಸ್ತು ಸಂಪತ್ತನ್ನು ಆಕರ್ಷಿಸಲು ನೀವು ಸ್ವರ್ಣ ಭೈರವನನ್ನು ಪೂಜಿಸಬಹುದು.
6) ಭೈರವನ ಈ ಸರ್ವೋಚ್ಚ ರೂಪವನ್ನು ಆರಾಧಿಸುವುದರಿಂದ ಆರ್ಥಿಕ ಸಮಸ್ಯೆಗಳು ದೂರಾಗುವುದು, ಸಮೃದ್ಧಿ ಸಿಗುವುದು, ಲೌಕಿಕ ಸೌಕರ್ಯಗಳನ್ನು ಸಿಗುವುದು ಮತ್ತು ತೃಪ್ತಿಕರ ಮತ್ತು ಆನಂದದಾಯಕ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
7) ಸಮಯವನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ ಬರುತ್ತದೆ.
8) ಅದೃಷ್ಟ ಮತ್ತು ಒಟ್ಟಾರೆ ಸಮೃದ್ಧಿ ನಿಮ್ಮದಾಗುತ್ತದೆ.
9) ಆರ್ಥಿಕ ಸ್ಥಿರತೆ ಪ್ರಾಪ್ತವಾಗುತ್ತದೆ.
10) ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುವುದು.
11) ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಸಾಧಿಸುವಿರಿ.
ಕಾಲ ಭೈರವನನ್ನು ನೀವು ಆರಾಧಿಸುವುದರಿಂದ ಈ ಮೇಲಿನ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳುವಿರಿ. ಕಾಲ ಭೈರವನು ಮುಖ್ಯವಾಗಿ ನಮ್ಮ ಕಾಲವನ್ನು ಅಥವಾ ಸಮಯವನ್ನು ನಿಯಂತ್ರಿಸುವ ದೇವನಾಗಿದ್ದಾನೆ.
[10/06, 12:01 AM] Rss Lokesh Anna. mallm: 🕉️ ಓಂ ಶ್ರೀ ಗುರುಭ್ಯೋ ನಮಃ 🕉️ *ಶ್ರೀ ಕಾಲಭೈರವ ಅಷ್ಟೋತ್ತರ ಶತನಾಮಾವಳಿ*
ಓಂ ಭೈರವಾಯ ನಮಃ
ಓಂ ಭೂತನಾಥಾಯ ನಮಃ
ಓಂ ಭೂತಾತ್ಮನೇ ನಮಃ
ಓಂ ಕ್ಷೇತ್ರದಾಯ ನಮಃ
ಓಂ ಕ್ಷೇತ್ರಪಾಲಾಯ ನಮಃ
ಓಂ ಕ್ಷೇತ್ರಜ್ಞಾಯ ನಮಃ
ಓಂ ಕ್ಷತ್ರಿಯಾಯ ನಮಃ
ಓಂ ವಿರಾಜೇ ನಮಃ
ಓಂ ಸ್ಮಶಾನ ವಾಸಿನೇ ನಮಃ
ಓಂ ಮಾಂಸಾಶಿನೇ ನಮಃ
ಓಂ ಸರ್ಪರಾಜಸೇ ನಮಃ
ಓಂ ಸ್ಮರಾಂಕೃತೇ ನಮಃ
ಓಂ ರಕ್ತಪಾಯ ನಮಃ
ಓಂ ಪಾನಪಾಯ ನಮಃ
ಓಂ ಸಿದ್ಧಿದಾಯ ನಮಃ
ಓಂ ಸಿದ್ಧ ಸೇವಿತಾಯ ನಮಃ
ಓಂ ಕಂಕಾಳಾಯ ನಮಃ
ಓಂ ಕಾಲಶಮನಾಯ ನಮಃ
ಓಂ ಕಳಾಯ ನಮಃ
ಓಂ ಕಾಷ್ಟಾಯ ನಮಃ
ಓಂ ತನವೇ ನಮಃ
ಓಂ ಕವಯೇ ನಮಃ
ಓಂ ತ್ರಿನೇತ್ರೇ ನಮಃ
ಓಂ ಬಹು ನೇತ್ರೇ ನಮಃ
ಓಂ ಪಿಂಗಳ ಲೋಚನಾಯ ನಮಃ
ಓಂ ಶೂಲಪಾಣಯೇ ನಮಃ
ಓಂ ಖಡ್ಗಪಾಣಯೇ ನಮಃ
ಓಂ ಕಂಕಾಳಿನೇ ನಮಃ
ಓಂ ಧೂಮ್ರಲೋಚನಾಯ ನಮಃ
ಓಂ ಅಭೀರವೇ ನಮಃ
ಓಂ ನಾಧಾಯ ನಮಃ
ಓಂ ಭೂತಪಾಯ ನಮಃ
ಓಂ ಯೋಗಿನೀಪತಯೇ ನಮಃ
ಓಂ ಧನದಾಯ ನಮಃ
ಓಂ ಧನಹಾರಿಣೇ ನಮಃ
ಓಂ ಧನವತೇ ನಮಃ
ಓಂ ಪ್ರೀತ ಭಾವನಯ ನಮಃ
ಓಂ ನಾಗಹಾರಾಯ ನಮಃ
ಓಂ ವ್ಯೋಮ ಕೇಶಾಯ ನಮಃ
ಓಂ ಕಪಾಲಭ್ರುತೇ ನಮಃ
ಓಂ ಕಪಾಲಾಯ ನಮಃ
ಓಂ ಕಮನೀಯಾಯ ನಮಃ
ಓಂ ಕಲಾನಿಧಯೇ ನಮಃ
ಓಂ ತ್ರಿಲೋಚನಾಯ ನಮಃ
ಓಂ ತ್ರಿನೇತ ತನಯಾಯ ನಮಃ
ಓಂ ಡಿಂಭಾಯ ನಮಃ
ಓಂ ಶಾಂತಾಯ ನಮಃ
ಓಂ ಶಾಂತಜನಪ್ರಿಯಾಯ ನಮಃ
ಓಂ ವಟುಕಾಯ ನಮಃ
ಓಂ ವಟು ವೇಷಾಯ ನಮಃ
ಓಂ ಘಟ್ವಾಮ್ಗವರಧಾರಕಾಯ ನಮಃ
ಓಂ ಭೂತಾದ್ವಕ್ಷಾಯ ನಮಃ
ಓಂ ಪಶುಪತಯೇ ನಮಃ
ಓಂ ಭಿಕ್ಷುದಾಯ ನಮಃ
ಓಂ ಪರಿಚಾರಕಾಯ ನಮಃ
ಓಂ ದೂರ್ತಾಯ ನಮಃ
ಓಂ ದಿಗಂಬರಾಯ ನಮಃ
ಓಂ ಶೂರಾಯ ನಮಃ
ಓಂ ಹರಿಣಾಯ ನಮಃ
ಓಂ ಪಾಂಡುಲೋಚನಾಯ ನಮಃ
ಓಂ ಪ್ರಶಾಂತಾಯ ನಮಃ
ಓಂ ಶಾಂತಿದಾಯ ನಮಃ
ಓಂ ಸಿದ್ಧಿ ದಾಯ ನಮಃ
ಓಂ ಶಂಕರಾಯ ನಮಃ
ಓಂ ಪ್ರಿಯಬಾಂಧವಾಯ ನಮಃ
ಓಂ ಅಷ್ಟ ಮೂರ್ತಯೇ ನಮಃ
ಓಂ ನಿಧೀಶಾಯ ನಮಃ
ಓಂ ಜ್ಞಾನಚಕ್ಷುವೇ ನಮಃ
ಓಂ ತಪೋಮಯಾಯ ನಮಃ
ಓಂ ಅಷ್ಟಾಧಾರಾಯ ನಮಃ
ಓಂ ಷಡಾಧರಾಯ ನಮಃ
ಓಂ ಸತ್ಸಯುಕ್ತಾಯ ನಮಃ
ಓಂ ಶಿಖೀಸಖಾಯ ನಮಃ
ಓಂ ಭೂಧರಾಯ ನಮಃ
ಓಂ ಭೂಧರಾಧೀಶಾಯ ನಮಃ
ಓಂ ಭೂತ ಪತಯೇ ನಮಃ
ಓಂ ಭೂತರಾತ್ಮಜಾಯ ನಮಃ
ಓಂ ಕಂಕಾಳಾಧಾರಿಣೇ ನಮಃ
ಓಂ ಮುಂಡಿನೇ ನಮಃ
ಓಂ ನಾಗಯಜ್ಞೋಪವೀತವತೇ ನಮಃ
ಓಂ ಜ್ರುಂಭನೋಮೋಹನ ಸ್ತಂಧಾಯ ನಮಃ
ಓಂ ಭೀಮ ರಣ ಕ್ಷೋಭಣಾಯ ನಮಃ
ಓಂ ಶುದ್ಧನೀಲಾಂಜನ ಪ್ರಖ್ಯಾಯ ನಮಃ
ಓಂ ದೈತ್ಯಜ್ಞೇ ನಮಃ
ಓಂ ಮುಂಡಭೂಷಿತಾಯ ನಮಃ
ಓಂ ಬಲಿಭುಜೇ ನಮಃ
ಓಂ ಭಲಾಂಧಿಕಾಯ ನಮಃ
ಓಂ ಬಾಲಾಯ ನಮಃ
ಓಂ ಅಬಾಲವಿಕ್ರಮಾಯ ನಮಃ
ಓಂ ಸರ್ವಾಪತ್ತಾರಣಾಯ ನಮಃ
ಓಂ ದುರ್ಗಾಯ ನಮಃ
ಓಂ ದುಷ್ಟ ಭೂತನಿಷೇವಿತಾಯ ನಮಃ
ಓಂ ಕಾಮಿನೇ ನಮಃ
ಓಂ ಕಲಾನಿಧಯೇ ನಮಃ
ಓಂ ಕಾಂತಾಯ ನಮಃ
ಓಂ ಕಾಮಿನೀವಶಕೃತೇ ನಮಃ
ಓಂ ಸರ್ವಸಿದ್ಧಿ ಪ್ರದಾಯ ನಮಃ
ಓಂ ವೈಶ್ಯಾಯ ನಮಃ
ಓಂ ಪ್ರಭವೇ ನಮಃ
ಓಂ ವಿಷ್ಣವೇ ನಮಃ
ಓಂ ವೈದ್ಯಾಯ ನಾಮ
ಓಂ ಮರಣಾಯ ನಮಃ
ಓಂ ಕ್ಷೋಭನಾಯ ನಮಃ
ಓಂ ಜ್ರುಂಭನಾಯ ನಮಃ
ಓಂ ಭೀಮ ವಿಕ್ರಮಃ
ಓಂ ಭೀಮಾಯ ನಮಃ
ಓಂ ಕಾಲಾಯ ನಮಃ
ಓಂ ಕಾಲಭೈರವಾಯ ನಮಃ
|| ಇತಿ ಶ್ರೀ ಕಾಲಭೈರವ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಂ ||
[10/06, 12:01 AM] Rss Lokesh Anna. mallm: 🕉️ ಓಂ ಶ್ರೀ ಗುರುಭ್ಯೋ ನಮಃ 🕉️
ll *ಶ್ರೀ ಕಾಲಭೈರವ ಅಷ್ಟೋತ್ತರ ಶತನಾಮಾವಳಿ* ll
ಓಂ ಕಾಲಭಕ್ಷಕಾಯ ನಮಃ
ಓಂ ಕಾಲಕಂಠಾಯ ನಮಃ
ಓಂ ಕಾರಣಮೂರ್ತಯೇ ನಮಃ
ಓಂ ಕಾಷ್ಠಾಯೈ ನಮಃ
ಓಂ ಕಾನ್ತಾಯ ನಮಃ
ಓಂ ಕಾಲಹನ್ತ್ರೇ ನಮಃ
ಓಂ ಕಾರ್ಕೋಟಕಾಯ ನಮಃ
ಓಂ ಕಾಲಾನ್ತಕಾಯ ನಮಃ
ಓಂ ಕಾಮರಹಿತಾಯ ನಮಃ
ಓಂ ಕಾಲಕಾಲಾತ್ಮನೇ ನಮಃ 10
ಓಂ ಕಾಲಚಕ್ರಪ್ರವರ್ತಕಾಯ ನಮಃ
ಓಂ ಕಾಲಕಾಲಾಯ ನಮಃ
ಓಂ ಕಾರಣಾಯ ನಮಃ
ಓಂ ಕಾರ್ಯಾಯ ನಮಃ
ಓಂ ಕಾಮಿಕಾಗಮಪೂಜಿತಾಯ ನಮಃ
ಓಂ ಕಾಠಿನ್ಯಮಾನಸಾಯ ನಮಃ
ಓಂ ಕಾಮಭಿನ್ನಾಯ ನಮಃ
ಓಂ ಕಾಲಾಗ್ನಿನಿಭಾಯ ನಮಃ
ಓಂ ಕಾಮಕ್ರೋಧವಿವರ್ಜಿತಾಯ ನಮಃ
ಓಂ ಕಾಮಹನ್ತ್ರೇ ನಮಃ 20
ಓಂ ಕಾಲಕನ್ಧರಾಯ ನಮಃ
ಓಂ ಕಾಮಮೂರ್ತಯೇ ನಮಃ
ಓಂ ಕಾಲಹಸ್ತೀಶಾಯ ನಮಃ
ಓಂ ಕಾಮದಾಯ ನಮಃ
ಓಂ ಕಾಶ್ಯಪಾಯ ನಮಃ
ಓಂ ಕಾಮಶಾಸನಾಯ ನಮಃ
ಓಂ ಕಾರ್ತವೀರ್ಯಾಯ ನಮಃ
ಓಂ ಕಾಮಿನೇ ನಮಃ
ಓಂ ಕಾತ್ಯಾಯನಾಯ ನಮಃ
ಓಂ ಕಾಮಿಕಾಗಮಸಾರಾಯ ನಮಃ 30
ಓಂ ಕಾನ್ತಿಜ್ಞಾಯ ನಮಃ
ಓಂ ಕಾಲಾನಲಸಮಪ್ರಭಾಯ ನಮಃ
ಓಂ ಕಾರಣದ್ವಯರೂಪವತೇ ನಮಃ
ಓಂ ಕಾಮಿನೀವಲ್ಲಭಾಯ ನಮಃ
ಓಂ ಕಾಲಕೃಪಾನಿಧಯೇ ನಮಃ
ಓಂ ಕಾಮ್ಯಾರ್ಥಾಯ ನಮಃ
ಓಂ ಕಾಲೀಪತಯೇ ನಮಃ
ಓಂ ಕಾಮೇಶೀಹೃದಯಂಗಮಾಯ ನಮಃ
ಓಂ ಕಾಲೀಶಾಯ ನಮಃ
ಓಂ ಕಾಮೇಶ್ವರಾಯ ನಮಃ 40
ಓಂ ಕಾಲಿಕಾಸಂಪ್ರದಾಯಜ್ಞಾಯ ನಮಃ
ಓಂ ಕಾಮರೂಪಾಯ ನಮಃ
ಓಂ ಕಾಲಕೋವಿದಾಯ ನಮಃ
ಓಂ ಕಾಮಕಲಾತ್ಮಕಾಯ ನಮಃ
ಓಂ ಕಾಲಾನ್ತಕವಪುರ್ಧರಾಯ ನಮಃ
ಓಂ ಕಾಲಕೂಟವಿಷಾಶನಾಯ ನಮಃ
ಓಂ ಕಾಲನೇತ್ರೇ ನಮಃ
ಓಂ ಕಾಲಚಕ್ರಪ್ರವರ್ತಕಾಯ ನಮಃ
ಓಂ ಕಾಲಜ್ಞಾಯ ನಮಃ
ಓಂ ಕಾಮಾರಯೇ ನಮಃ 50
ಓಂ ಕಾಮಪಾಲಕಾಯ ನಮಃ
ಓಂ ಕಾಲಾತ್ಮನೇ ನಮಃ
ಓಂ ಕಾಲಿಕಾನಾಥಾಯ ನಮಃ
ಓಂ ಕಾರ್ಕೋಟಕವಿಭೂಷಣಾಯ ನಮಃ
ಓಂ ಕಾಲಿಕಾನಾಟ್ಯರಸಿಕಾಯ ನಮಃ
ಓಂ ಕಾಲೀವಾದಪ್ರಿಯಾಯ ನಮಃ
ಓಂ ಕಾಲಾಯ ನಮಃ
ಓಂ ಕಾಲಾತೀತಾಯ ನಮಃ
ಓಂ ಕಾಲವಿವರ್ಜಿತಾಯ ನಮಃ
ಓಂ ಕಾಲಕೂಟಗಲಾಯ ನಮಃ 60
ಓಂ ಕಾಲಭಂಜನಾಯ ನಮಃ
ಓಂ ಕಾರುಣ್ಯಸಾಗರಾಯ ನಮಃ
ಓಂ ಕಾಲಕೂಟಾಯ ನಮಃ
ಓಂ ಕಾಮನಾಶಕಾಯ ನಮಃ
ಓಂ ಕಾಲಕಟಂಕಟಾಯ ನಮಃ
ಓಂ ಕಾಷ್ಠಾಭ್ಯೋ ನಮಃ
ಓಂ ಕಾತ್ಯಾಯನೀಪ್ರಿಯಾಯ ನಮಃ
ಓಂ ಕಾಲಾಧೀಶಾಯ ನಮಃ
ಓಂ ಕಾಲವಿದೇ ನಮಃ
ಓಂ ಕಾಲಕೃತೇ ನಮಃ 70
ಓಂ ಕಾಷ್ಟಾಯೈ ನಮಃ
ಓಂ ಕಾಮಭೃತೇ ನಮಃ
ಓಂ ಕಾರ್ಯಕೋವಿದಾಯ ನಮಃ
ಓಂ ಕಾರಣಕಾರ್ಯಾತ್ಮನೇ ನಮಃ
ಓಂ ಕಾಮಪ್ರದಾಯಕಾಯ ನಮಃ
ಓಂ ಕಾಂಚನಾಭಾಯ ನಮಃ
ಓಂ ಕಾನ್ತಿಯುಕ್ತಾಯ ನಮಃ
ಓಂ ಕಾಮಿತದಾಯಕಾಯ ನಮಃ
ಓಂ ಕಾಲಕೂಟಾಶಿನೇ ನಮಃ
ಓಂ ಕಾಮಸಂಕಲ್ಪವರ್ಜಿತಾಯ ನಮಃ 80
ಓಂ ಕಾಲದರ್ಪದಮನಾಯ ನಮಃ
ಓಂ ಕಾಮಿತಾರ್ಥಪ್ರದಾತ್ರೇ ನಮಃ
ಓಂ ಕಾಲಕೇಯವಿನಾಶಕಾಯ ನಮಃ
ಓಂ ಕಾಮಕೋಟಿಪೂಜಿತಾಯ ನಮಃ
ಓಂ ಕಾಮಾದಿಶತ್ರುಘಾತಕಾಯ ನಮಃ
ಓಂ ಕಾಮ್ಯಕರ್ಮಸುಸಂನ್ಯಸ್ತಾಯ ನಮಃ
ಓಂ ಕಾಲಾಗ್ನಿಸದೃಶಕ್ರೋಧಾಯ ನಮಃ
ಓಂ ಕಾಶಿವಾಸಸೇ ನಮಃ
ಓಂ ಕಾಶ್ಮೀರವಾಸಿನೇ ನಮಃ
ಓಂ ಕಾವ್ಯಲೋಲಾಯ ನಮಃ 90
ಓಂ ಕಾವ್ಯಾನಾಮಧಿಷ್ಠಾತ್ರೇ ನಮಃ
ಓಂ ಕಾಲಾನಲೋಗ್ರಾಯ ನಮಃ
ಓಂ ಕಾಲಾನಲಭಕ್ಷಿಣೇ ನಮಃ
ಓಂ ಕಾಂಚನಾಭಾಯ ನಮಃ
ಓಂ ಕಾನ್ತಿಮುಕ್ತಾಯ ನಮಃ
ಓಂ ಕಾಮಿದಾಯಕಾಯ ನಮಃ
ಓಂ ಕಾಲನಾಥಾಯ ನಮಃ
ಓಂ ಕಾಲನಾಯಕಾಯ ನಮಃ
ಓಂ ಕಾಲಶಾಸನಾಯ ನಮಃ
ಓಂ ಕಾಲಜಲಜಾಯ ನಮಃ 100
ಓಂ ಕಾಲಾಗ್ನಿರುದ್ರಾಯ ನಮಃ
ಓಂ ಕಾಲಾಗ್ನಯೇ ನಮಃ
ಓಂ ಕಾಲೇಶ್ವರಾಯ ನಮಃ
ಓಂ ಕಾರಣಾತೀತವಿಗ್ರಹಾಯ ನಮಃ
ಓಂ ಕಾರಣಪ್ರಿಯಾಯ ನಮಃ
ಓಂ ಕಾಲಾನಲಾಯ ನಮಃ
ಓಂ ಕಾಮಪಲಾಯ ನಮಃ
ಓಂ ಕಾಲಕಂಠಾಯ ನಮಃ 108
ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಕಾಲಭೈರವ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll🙏🙏
[10/06, 12:01 AM] Rss Lokesh Anna. mallm: 🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* 🪔🪔🪔🪔🪔🪔🪔🪔🪔🪔🪔 🎆 ದಿನದ ವಿಶೇಷ : *ಮಾಸಿಕ ಕಾಲಾಷ್ಟಮೀ, ಮಾಸಿಕ ಜನ್ಮಾಷ್ಟಮೀ* 🪔🪔🪔🪔🪔🪔🪔🪔🪔 🪔🪔 ದಿನಾಂಕ : *10/06/2023*
ವಾರ : *ಶನಿ ವಾರ* ಸಂವತ್ಸರ : *ಶ್ರೀ ಶೋಭಕೃತ್ ನಾಮ* : ಆಯನ : *ಉತ್ತರಾಯಣೇ* *ಗ್ರೀಷ್ಮ* ಋತೌ
*ಜ್ಯೇಷ್ಠ* ಮಾಸೇ *ಕೃಷ್ಣ* : ಪಕ್ಷೇ *ಸಪ್ತಮ್ಯಾಂ* ತಿಥೌ (ಪ್ರಾರಂಭ ಸಮಯ *ಶುಕ್ರ ಹಗಲು 04-20 pm* ರಿಂದ ಅಂತ್ಯ ಸಮಯ : *ಶನಿ ಹಗಲು 02-01 pm* ರವರೆಗೆ) *ಮಂದ* ವಾಸರೇ ವಾಸರಸ್ತು *ಶತಭಿಷ* ನಕ್ಷತ್ರೇ (ಪ್ರಾರಂಭ ಸಮಯ : *ಶುಕ್ರ ಹಗಲು 05-08 pm* ರಿಂದ ಅಂತ್ಯ ಸಮಯ : *ಶನಿ ಹಗಲು 03-37 pm* ರವರೆಗೆ) *ವಿಷ್ಕುಂಭ* ಯೋಗೇ (ಶನಿ ಹಗಲು *12-47 pm* ರವರೆಗೆ) *ಬವ* ಕರಣೇ (ಶನಿ ಹಗಲು *02-01 pm* ರವರೆಗೆ) ಸೂರ್ಯ ರಾಶಿ : *ವೃಷಭ* ಚಂದ್ರ ರಾಶಿ : *ಕುಂಭ* 🌅 ಸೂರ್ಯೋದಯ - *05-54 am* 🌄ಸೂರ್ಯಾಸ್ತ - *06-44 pm*
*ರಾಹುಕಾಲ* *09-07 am* ಇಂದ *10-43 am* *ಯಮಗಂಡಕಾಲ*
*01-55 pm* ಇಂದ *03-32 pm* *ಗುಳಿಕಕಾಲ*
*05-54 am* ಇಂದ *07-30 am* *ಅಭಿಜಿತ್ ಮುಹೂರ್ತ* : ಶನಿ ಹಗಲು *11-53 am* ರಿಂದ *12-45 pm* ರವರೆಗೆ *ದುರ್ಮುಹೂರ್ತ* : ಶನಿ ಹಗಲು *07-37 am* ರಿಂದ *08-28 am* ರವರೆಗೆ *ವರ್ಜ್ಯ* ಶನಿ ರಾತ್ರಿ *09-42 pm* ರಿಂದ *11-13 pm* ರವರೆಗೆ *ಅಮೃತ ಕಾಲ* : ಶನಿ ಹಗಲು *08-54 am* ರಿಂದ *10-24 am* ರವರೆಗೆ 🚩🚩🚩🚩🚩🚩🚩🚩🚩🚩 ಮರು ದಿನದ ವಿಶೇಷ : **
🚩🚩🚩🚩🚩🚩🚩🚩🚩🚩 ಶುಭಮಸ್ತು...ಶುಭದಿನ
[10/06, 12:01 AM] Rss Lokesh Anna. mallm: *ಚಿತ್ರ: ವಿಜಯನಗರದ ವೀರಪುತ್ರ*
*ಬಿಡುಗಡೆ : ೧೯೬೧*
*ಸಂಗೀತ : ವಿಶ್ವನಾಥನ್ ರಾಮಮೂರ್ತಿ*
*ಗಾಯಕರು : ಪಿ ಬಿ ಶ್ರೀನಿವಾಸ್*
*ಕಲಾವಿದರು: ಟಿ ಎನ್ *ಬಾಲಕ್ರಷ್ಣ ಮತ್ತು ಬಿ ಸರೋಜ ದೇವಿ*
[10/06, 12:01 AM] Rss Lokesh Anna. mallm: *ಚಿತ್ರ : ಕವಿರತ್ನ ಕಾಳಿದಾಸ*
*ಬಿಡುಗಡೆ : ೧೯೮೩*
*ಸಂಗೀತ : ಎಂ ರಂಗರಾವ್*
*ಗಾಯಕರು: ಡಾ ರಾಜ್ ಕುಮಾರ್*
*ಕಲಾವಿದರು : ಡಾ ರಾಜ್ ಕುಮಾರ್ ಮತ್ತು ಜಯಪ್ರದಾ*
:
Post a Comment