[17/06, 11:59 PM] Rss Lokesh Anna. mallm: 🕉️ ಓಂ ಶ್ರೀ ಗುರುಭ್ಯೋ ನಮಃ 🕉️
*ಆಷಾಢ ಶುಕ್ರವಾರ: ಯಾವ ಶುಕ್ರವಾರ ಯಾವ ದೇವಿಯ ಆರಾಧನೆ ಮಾಡಬೇಕು ?*
ಈ ಸಂವತ್ಸರದ ಆಷಾಢ ಮಾಸ ಜೂನ್ 19 ರಿಂದ ಜುಲೈ 17 ರವರೆಗೆ ಇರುತ್ತದೆ.
ಈ ವರ್ಷ 4 ಆಷಾಢ ಶುಕ್ರವಾರ ಸಿಗುವುದು. ಈ ನಾಲ್ಕು ಆಷಾಢ ಶುಕ್ರವಾರ ಲಕ್ಷ್ಮೀ ದೇವಿಯ ಪೂಜೆಗೆ ತುಂಬಾ ಶ್ರೇಷ್ಠ ಎಂದು ಹೇಳಲಾಗುವುದು.
ಆಷಾಢ ಮಾಸದಲ್ಲಿ ದೇವಿ ಶಕ್ತಿಗಳನ್ನು ಆರಾಧಿಸಲಾಗುವುದು. ಈ ತಿಂಗಳಿನಲ್ಲಿ ದೇವಿಯ ಶಕ್ತಿ ಭೂಮಿಯ ಮೇಲೆ ಅಧಿಕವಿರುತ್ತದೆ, ಇದರಿಂದಾಗಿ ದೇವಿಯನ್ನು ಆರಾಧಿಸುವುದರಿಂದ ಅನೇಕ ಪ್ರಯೋಜನಗಳು ಸಿಗುವುದು.
ಆಷಾಢ ಮಾಸದ ನಾಲ್ಕು ವಾರಗಳಲ್ಲಿ ದೇವಿಯ ಯಾವ ಸ್ವರೂಪ ಆರಾಧಿಸಲಾಗುವುದು ಎಂಬ ಮಾಹಿತಿ ಇಲ್ಲಿದೆ.
*ಆಷಾಢ ಮೊದಲನೇ ಶುಕ್ರವಾರ:* "ಸ್ವರ್ಣಾಂಬಿಕಾ ದೇವಿಯ ಆರಾಧನೆ"
ಆಷಾಢ ಮಾಸದ ಮೊದಲನೇ ಶುಕ್ರವಾರ ಸ್ವರ್ಣಾಂಬಿಕಾ ದೇವಿಯನ್ನು ಆರಾಧಿಸಲಾಗುವುದು. ಇದು ಪಾರ್ವತಿಯ ಒಂದು ರೂಪವಾಗಿದೆ. ಸ್ವರ್ಣಾಂಬಿಕಾ ದೇವಿಯನ್ನು ಭಕ್ತಿಯಿಂದ ಆರಾಧಿಸುವುದರಿಂದ ಐಶ್ವರ್ಯ ವೃದ್ಧಿಸುವುದು.
*ಆಷಾಢ ಎರಡನೇ ಶುಕ್ರವಾರ:* "ಕಾಳಿ ದೇವಿಯ ಆರಾಧನೆ"
ಕಾಳಿ ಸ್ವರೂಪವನ್ನು ಆರಾಧಿಸುವುದರಿಂದ ಜ್ಞಾನ ಹೆಚ್ಚುವುದು, ಬುದ್ಧಿ ಶಕ್ತಿ ಹೆಚ್ಚುವುದು. ವಿದ್ಯಾರ್ಥಿಗಳು, ಅಧ್ಯಯನ ಮಾಡುವವರು ಒಳ್ಳೆಯ ಫಲ ಕಾಣಬಹುದು.
*ಆಷಾಢ ಮೂರನೇ ಶುಕ್ರವಾರ:* "ಕಾಳಿಂಕಾಂಬ ದೇವಿಯ ಆರಾಧನೆ"
ಪಾರ್ವತಿ ದೇವಿಯ ಈ ಅವತಾರವನ್ನು ಆರಾಧಿಸುವುದರಿಂದ ದೇವಿಯು ಧೈರ್ಯ ಹಾಗೂ ಆರೋಗ್ಯ ನೀಡಿ ಕರುಣಿಸುತ್ತಾಳೆ.
*ಆಷಾಢ ನಾಲ್ಕನೇ ಶುಕ್ರವಾರ:* "ಕಾಮಾಕ್ಷೀ ದೇವಿ ಆರಾಧನೆ ಹಾಗೂ ಲಕ್ಷ್ಮೀ ಪೂಜೆ"
ಶಿವ ಶಕ್ತಿಯ ಸ್ವರೂಪವಾದ ಕಾಮಾಕ್ಷಿ ದೇವಿಯನ್ನು ಆರಾಧಿಸಲಾಗುವುದು. ಇನ್ನು ಕೊನೆಯ ಆಷಾಢ ಶುಕ್ರವಾರದಂದು ಲಕ್ಷ್ಮಿಯನ್ನು ಕೂಡ ಆರಾಧನೆ ಮಾಡಲಾಗುವುದು. ಈ ದಿನ ಲಕ್ಷ್ಮಿಯು ನಮ್ಮ ಬೇಡಿಕೆಗಳನ್ನು ಆಲಿಸುತ್ತಾಳೆ, ಮಹಿಳೆಯರು ಭಕ್ತಿಯಿಂದ ಪೂಜೆ ಮಾಡಿ ಬೇಡಿಕೊಂಡರೆ ಅವರ ಇಷ್ಟಾರ್ಥಗಳು ನೆರವೇರುವುದು, ಕುಟುಂಬ ನೆಮ್ಮದಿ, ಸಂತೋಷ, ಐಶ್ಚರ್ಯ ಕರುಣಿಸುವಳು.
ಹೀಗೆ ಆಷಾಢ ಶುಕ್ರವಾರ ತುಂಬಾ ಪ್ರಮುಖವಾಗಿದ್ದು ಈ ದಿನ ವ್ರತ ಮಾಡುವವರು ದೇವಿ ಮೂರ್ತಿಯನ್ನು ಅಲಂಕರಿಸಿ, ಮಂತ್ರಗಳನ್ನು ಪಠಿಸಿ ಪೂಜೆ ಮಾಡುತ್ತಾರೆ, ನಂತರ ದೇವಿಗೆ ನೈವೇದ್ಯ ಅರ್ಪಿಸಿ, ಮುತ್ತೈದೆಯರನ್ನು ಕರೆದು ಅವರಿಗೆ ತಾಂಬೂಲ ನೀಡಲಾಗುವುದು.
[17/06, 11:59 PM] Rss Lokesh Anna. mallm: 🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* 🪔🪔🪔🪔🪔🪔🪔🪔🪔🪔🪔 🎆 ದಿನದ ವಿಶೇಷ : *ಮಣ್ಣೆತ್ತಿನ ಅಮಾವಾಸ್ಯೆ* 🪔🪔🪔🪔🪔🪔🪔🪔🪔🪔🪔 ದಿನಾಂಕ : *18/06/2023*
ವಾರ : *ರವಿ ವಾರ* ಸಂವತ್ಸರ : *ಶ್ರೀ ಶೋಭಕೃತ್ ನಾಮ* : ಆಯನ : *ಉತ್ತರಾಯಣೇ* *ಗ್ರೀಷ್ಮ* ಋತೌ
*ಜ್ಯೇಷ್ಠ* ಮಾಸೇ *ಕೃಷ್ಣ* : ಪಕ್ಷೇ *ಅಮಾವಾಸ್ಯಾಂ* ತಿಥೌ (ಪ್ರಾರಂಭ ಸಮಯ *ಶನಿ ಹಗಲು 09-10 am* ರಿಂದ ಅಂತ್ಯ ಸಮಯ : *ರವಿ ಹಗಲು 10-06 am* ರವರೆಗೆ) *ಆದಿತ್ಯ* ವಾಸರೇ ವಾಸರಸ್ತು *ಮೃಗಶಿರ* ನಕ್ಷತ್ರೇ (ಪ್ರಾರಂಭ ಸಮಯ : *ಶನಿ ಹಗಲು 04-24 pm* ರಿಂದ ಅಂತ್ಯ ಸಮಯ : *ರವಿ ಹಗಲು 06-05 pm* ರವರೆಗೆ) *ಗಂಡ* ಯೋಗೇ (ಶನಿ ರಾತ್ರಿ *12-57 am* ರವರೆಗೆ) *ನಾಗವಾನ್* ಕರಣೇ ನಿ ಹಗಲು *10-06 am* ರವರೆಗೆ) ಸೂರ್ಯ ರಾಶಿ : *ಮಿಥುನ* ಚಂದ್ರ ರಾಶಿ : *ಮಿಥುನ* 🌅 ಸೂರ್ಯೋದಯ - *05-55 am* 🌄ಸೂರ್ಯಾಸ್ತ - *06-46 pm*
*ರಾಹುಕಾಲ* *05-10 pm* ಇಂದ *06-46 pm* *ಯಮಗಂಡಕಾಲ*
*12-21 pm* ಇಂದ *01-57 pm* *ಗುಳಿಕಕಾಲ*
*03-33 pm* ಇಂದ *05-10 pm* *ಅಭಿಜಿತ್ ಮುಹೂರ್ತ* : ರವಿ ಹಗಲು *11-55 am* ರಿಂದ *12-46 pm* ರವರೆಗೆ *ದುರ್ಮುಹೂರ್ತ* : ರವಿ ಹಗಲು *05-03 pm* ರಿಂದ *05-55 pm* ರವರೆಗೆ *ವರ್ಜ್ಯ* ರವಿ ರಾತ್ರಿ *03-10 am* ರಿಂದ *04-54 am* ರವರೆಗೆ *ಅಮೃತ ಕಾಲ* : ರವಿ ಹಗಲು *08-41 am* ರಿಂದ *10-24 am* ರವರೆಗೆ 🚩🚩🚩🚩🚩🚩🚩🚩🚩🚩 ಮರು ದಿನದ ವಿಶೇಷ : *ಆಷಾಢ ಮಾಸ ಪ್ರಾರಂಭ, ಗುಪ್ತ ನವರಾತ್ರಿ ಪ್ರಾರಂಭ*
🚩🚩🚩🚩🚩🚩🚩🚩🚩🚩 ಶುಭಮಸ್ತು...ಶುಭದಿನ
Post a Comment