Abu Azmi:ನಾನು 'ವಂದೇ ಮಾತರಂ​' ಹೇಳಲ್ಲ, ನನ್ನ ಧರ್ಮ ಅವಕಾಶ ಕೊಡಲ್ಲ! ಎಸ್​ಪಿ ಶಾಸಕ ಅಜ್ಮಿ ವಿವಾದಾತ್ಮಕ ಹೇಳಿಕೆ

 ಸಮಾಜವಾದಿ ಪಕ್ಷದ (Samajavadi Party) ಶಾಸಕ ಅಬು ಅಜ್ಮಿ (Abu Azmi) 'ವಂದೇ ಮಾತರಂ' (Vande Bharat) ಕುರಿತು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಅಜ್ಮಿ, ನಾವು ವಂದೇ ಮಾತರಂ ಹಾಡುವುದಿಲ್ಲ, ಇದಕ್ಕೆ ನಮ್ಮ ಧರ್ಮದಲ್ಲಿ ಅವಕಾಶವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.ನಂತರ ಬಿಜೆಪಿ ಶಾಸಕರು ಅಸಮಾಧಾನ ವ್ಯಕ್ತ ಪಡಿಸಿದ ನಂತರ ಮಹಾರಾಷ್ಟ್ರ ವಿಧಾನಸಭೆಯ (Maharashtra Assembly) ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಗಿತ್ತು.

ವಂದೇ ಮಾತರಂ ಹೇಳಲು ಇಸ್ಲಾಂನಲ್ಲಿ ಅವಕಾಶವಿಲ್ಲ

ಸಂಭಾಜಿನಗರ ಜಿಲ್ಲೆಯಲ್ಲಿ ನಡೆದ ಗಲಭೆಗಳ ವಿಚಾರವನ್ನು ಪ್ರಸ್ತಾಪಿಸಿದ ಎಸ್‌ಪಿ ಶಾಸಕ ಅಬು ಅಜ್ಮಿ, 'ವಂದೇ ಮಾತರಂ' ಘೋಷಣೆಯನ್ನು ಹೇಳಿವುದು ನನಗೆ ಸ್ವೀಕಾರಾರ್ಹವಲ್ಲ ಎಂದು ಹೇಳಿದರು. ಭಾರತದಲ್ಲಿ ಬದುಕಬೇಕಾದರೆ ವಂದೇ ಮಾತರಂ ಹೇಳಬೇಕು ಎಂದು ಕೆಲವರು ಹೇಳುತ್ತಾರೆ. ಆದರೆ ನಮ್ಮ ಧರ್ಮ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ನಾವು ಒಬ್ಬನೇ ದೇವರನ್ನು ನಂಬುತ್ತೇವೆ ಎಂದಿದ್ದರು. ನಂತರ ಬಿಜೆಪಿ ಶಾಸಕರು ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಸದನದಲ್ಲಿ ಕೋಲಾಹಲ ಉಂಟಾಯಿತು.

Viral ಬಿಜೆಪಿ ನಾಯಕನ ಅಶ್ಲೀಲ ವಿಡಿಯೋ ವೈರಲ್! ನಾನವನಲ್ಲ, ನಾನವನಲ್ಲ ಎಂದ ಸೋಮಯ್ಯ

ಅಧಿವೇಶನದಲ್ಲಿ ಗದ್ದಲ ಮೂಡಿಸಿದ ಹೇಳಿಕೆ

ವಿಧಾನಸಭೆ ಅಧಿವೇಸನದ 3ನೇ ದಿನ ಅಜ್ಮಿ ಈ ಹೇಳಿಕೆ ನೀಡಿ ಗದ್ದಲ ಸೃಷ್ಟಿಗೆ ಕಾರಣರಾದರು. ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಶಾಸಕರನ್ನು ಶಾಂತಗೊಳಿಸುವಂತೆ ಮನವಿ ಮಾಡಿದರು. ಅಜ್ಮಿ ಅವರ ಹೇಳಿಕೆಗಳು ವಿಷಯಕ್ಕೆ ಸಂಬಂಧಿಸಿಲ್ಲ ಎಂದು ನಾರ್ವೇಕರ್ ಹೇಳಿದರು. ಅವರು ಚರ್ಚೆಗೆ ಪಟ್ಟಿ ಮಾಡಲಾದ ವಿಷಯದ ಮೇಲೆ ಕೇಂದ್ರೀಕರಿಸಬೇಕು. ಶಾಂತಿ ಕಾಪಾಡುವಂತೆ ಸ್ಪೀಕರ್ ಮನವಿ ಮಾಡಿದರೂ ವಿವಾದದ ಬಿಸಿ ಮುಂದುವರಿಯಿತು. ಎಸ್‌ಪಿ ಶಾಸಕರ ವಿರುದ್ಧ ಪ್ರತಿಭಟನೆ ಮುಂದುವರಿದಿದ್ದು, ಸ್ಪೀಕರ್ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.

ನನ್ನ ಹೇಳಿಗೆ ದೇಶದ ಮೇಲಿನ ಗೌರವ ಕುಗ್ಗಿಸಲ್ಲ

ಬಿಜೆಪಿಯ ಟೀಕೆಗೆ ತಿರುಗೇಟು ನೀಡಿರುವ ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಂ ಅಜ್ಮಿ, ವಂದೇ ಮಾತರಂ ಹೇಳದಿರುವುದು "ನನ್ನ ದೇಶ ಮತ್ತು ನನ್ನ ದೇಶಭಕ್ತಿಯ ಮೇಲಿನ ನನ್ನ ಗೌರವವನ್ನು ಕುಗ್ಗಿಸುವುದಿಲ್ಲ ಮತ್ತು ಇದಕ್ಕೆ ಯಾರೂ ಆಕ್ಷೇಪಿಸಬಾರದು" ಎಂದು ಹೇಳಿದ್ದಾರೆ.

ತಮ್ಮ ಟ್ವೀಟ್​ನಲ್ಲಿ " ನಮ್ಮ ಪೂರ್ವಜರು ಈ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ, ನಾವು ಭಾರತವನ್ನು ತಮ್ಮ ದೇಶವೆಂದು ಪರಿಗಣಿಸಿದ್ದೇವೆ ಹೊರೆತು, ಪಾಕಿಸ್ತಾನವಲ್ಲ. ಇಡೀ ಜಗತ್ತನ್ನು ಸೃಷ್ಟಿಸಿದವನ ಮುಂದೆ ತಲೆಬಾಗಲು ಇಸ್ಲಾಂ ನಮಗೆ ಕಲಿಸುತ್ತದೆ. ನನ್ನ ಧರ್ಮದ ಪ್ರಕಾರ, ನಾನು ವಂದೇ ಮಾತರಂ ಹಾಡಲು ಸಾಧ್ಯವಿಲ್ಲ, ಅದು ನನ್ನ ದೇಶ ಮತ್ತು ನನ್ನ ದೇಶಭಕ್ತಿಯ ಬಗ್ಗೆ ನನಗಿರುವ ಗೌರವವನ್ನು ಕಡಿಮೆ ಮಾಡುವುದಿಲ್ಲ. ಇದರ ಬಗ್ಗೆ ಯಾರೂ ಯಾವುದೇ ಆಕ್ಷೇಪಣೆಯನ್ನು ಹೊಂದಿರಬಾರದು. ನಾವು ನಿಮ್ಮಂತೆಯೇ ಈ ದೇಶದ ಭಾಗವಾಗಿದ್ದೇವೆ " ಎಂದು ಹೇಳಿದ್ದಾರೆ.


ಬಿಜೆಪಿ ಆಕ್ರೋಶ

ನಾನು ವಂದೇ ಮಾತರಂ ಹೇಳುವುದಿಲ್ಲ ಎಂದು ಹೇಳಿರುವ ಎಸ್‌ಪಿ (ಸಮಾಜವಾದಿ ಪಕ್ಷ)ದ ಅಬು ಅಜ್ಮಿ ವಿರುದ್ಧ ಬಿಜೆಪಿ ವಕ್ತಾರ ಶಹಜಾದ್ ಪೂನವಾಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜವಾದಿ ಪಕ್ಷದ ಅಬು ಅಜ್ಮಿ ನಾನು ವಂದೇ ಭಾರತ್​ ಹೇಳುವುದಿಲ್ಲ ಎಂದಿದ್ದಾರೆ. ನನ್ನ ಧರ್ಮವು ಅದಕ್ಕೆ ಅವಕಾಶ ನೀಡದ ಕಾರಣ ನಾನು ತಲೆ ಬಾಗುವುದಿಲ್ಲ ಎಂದಿದ್ದಾರೆ, ಇದು I.N.D.I.A ಕಲ್ಪನೆಯೇ? ಅಥವಾ ದೇಶ ವಿರೋದಿ ಕಲ್ಪನೆಯೇ? ಎಂದು ಟ್ವೀಟ್ ಮಾಡಿದ್ದಾರೆ.

Post a Comment

Previous Post Next Post