ಅವಮಾನದ ದ್ವೇಷದಿಂದ ಕೃತ್ಯವೆಸಗಿ ಜೈಲು ಹೋಗಿದ್ದ ಜುನೈದ್​, ಜೈಲಿನಿಂದ ಹೊರ ಬಂದಿದ್ದು ಜಿಹಾದಿಯಾಗಿ.

ಗಳೂರು: ಸಿಸಿಬಿ ಪೊಲೀಸರಿಂದ ಐವರು ಶಂಕಿತ ಉಗ್ರರ ಬಂಧನ ಪ್ರಕರಣದಲ್ಲಿ ಮಹತ್ವದ ಮಾಹಿತಿಗಳು ಹೊರಬೀಳುತ್ತಲೇ ಇದೆ. ಸದ್ಯ ಪರಾರಿಯಾಗಿರುವ ಪ್ರಕರಣದ ಎ2 ಆರೋಪಿ ಜುನೈದ್​ ಮೋಸ್ಟ್​ ವಾಂಟಡ್​ ಕ್ರಿಮಿನಲ್ ಆಗಿದ್ದು, ಈತನ​ ಹಿನ್ನೆಲೆ ಇದೀಗ ಬೆಳಕಿಗೆ ಬಂದಿದೆ.

ಈತ ಹೆಬ್ಬಾಳದ ಸುಲ್ತಾನ್ ಪಾಳ್ಯದಲ್ಲಿ ವಾಸವಿದ್ದ. ಕುರಿ ವ್ಯಾಪಾರ ಮಾಡ್ಕೊಂಡು ಜೀವನ ನಡೆಸುತ್ತಿದ್ದ. 2017ರಲ್ಲಿ ಜಿ. ಸಿ ನಗರದ ನೂರ್ ಅಹ್ಮದ್ ಎಂಬಾತನ ಜೊತೆ ಜಗಳ ಆಗಿತ್ತು. ಹಣಕಾಸಿನ ವಿಚಾರಕ್ಕೆ ಮನೆಗೆ ಬಂದು ಪತ್ನಿ ಮುಂದೆಯೇ ಜುನೈದ್​ ಅಂಗಿ ಬಿಚ್ಚಿ, ಅವಮಾನಿಸಿ, ಹಲ್ಲೆ ಮಾಡಿ ಹೋಗಿದ್ದ.

ಇಂಡಿಯಾ ನಾಮಕರಣ ಬ್ರೇನ್ ಯಾರದ್ದು?: ಕಮಲ ಪಾಳಯದ ದೇಶಭಕ್ತಿ ಮಂತ್ರಕ್ಕೆ ವಿಪಕ್ಷಗಳ ರಾಷ್ಟ್ರಪ್ರೇಮದ ತಿರುಗೇಟು ತಂತ್ರ

ಅವಮಾನದ ಪ್ರತೀಕಾರವಾಗಿ ಅದೇ ವರ್ಷದ ಸೆಪ್ಟೆಂಬರ್​ನಲ್ಲಿ ನೂರ್​ನನ್ನು ಜುನೈದ್​ ಅಪಹರಿಸಿ ಕೊಲೆ ಮಾಡಿದ್ದ. ಬಳಿಕ ಜೈಲಿಗೆ ಹೋದವ ನೇರ ಸಂಪರ್ಕ ಮಾಡಿದ್ದು, ಶಂಕಿತ ಉಗ್ರ ನಾಸೀರ್ ಎಂಬಾತನನ್ನು. ಜೈಲಿನಿಂದ ಹೊರ ಬಂದು ಮತ್ತೆ 2020ರಲ್ಲಿ ರಕ್ತಚಂದನ ಸಾಗಿಸುವ ಪ್ರಕರಣದಲ್ಲಿ ಒಳ ಹೋಗಿದ್ದ. ನಂತರ ಜಾಮೀನಿನಿಂದ ಹೊರ ಬಂದವ ಸಂಪೂರ್ಣ ಟೀಂ ಕಟ್ಟಿದ್ದ. ಬಳಿಕ ಅವರ ತಂಡ ನೇರ ದುಬೈಗೆ ಹಾರಿತ್ತು.

ವಿದೇಶದಲ್ಲಿ ಕೆಲ ಉಗ್ರ ಸಂಘಟನೆಗಳ ಸಂಪರ್ಕ ಪಡೆದು ಹ್ಯಾಂಡಲ್ ಮಾಡುತ್ತಿದ್ದ. ಸದ್ಯ ದುಬೈನಲ್ಲಿರುವ ಜುನೈದ್ ಪತ್ತೆಗೆ ಸಿಸಿಬಿ ಮತ್ತು ಕೇಂದ್ರ ತನಿಖಾ ಸಂಸ್ಥೆ ಮುಂದಾಗಿದೆ. (ದಿಗ್ವಿಜಯ ನ್ಯೂಸ್​)

ರೂಮ್​ ನಂ. 204ರ ರಹಸ್ಯ ಬಯಲು: ಪಾಕ್​ ಮಹಿಳೆ ಸೀಮಾ ಜತೆ ಸಚಿನ್​ ರೀಲ್ಸ್​, ಮಹತ್ವದ ಮಾಹಿತಿ ಬೆಳಕಿಗೆ

ಇಂಡಿಯಾ ನಾಮಕರಣ ಬ್ರೇನ್ ಯಾರದ್ದು?: ಕಮಲ ಪಾಳಯದ ದೇಶಭಕ್ತಿ ಮಂತ್ರಕ್ಕೆ ವಿಪಕ್ಷಗಳ ರಾಷ್ಟ್ರಪ್ರೇಮದ ತಿರುಗೇಟು ತಂತ್ರ

Post a Comment

Previous Post Next Post