[18/07, 6:30 AM] +91 99012 96226: 🌸ಶುಭೋದಯ🌸
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ
[18/07, 9:47 AM] +91 88845 12024: *🌸🌼ಪ್ರಾತಃ 🌅 ಸುಭಾಷಿತ🌼🌸*
*ಯೇನಕೇನಚಿದಾಛ್ಛಿನ್ನೋ*
*ಯೇನಕೇನಚಿದಾಶಿತಃ |*
*ಯತ್ರ ಕ್ವಚನಶಾಯೀ ಸ್ಯಾತ್*
*ತಂ ದೇವಾ ಬ್ರಾಹ್ಮಣಂ ವಿದುಃ ||*
_"ಹೊದೆಯಲು ಏನು ಸಿಕ್ಕಿತೋ ಅದನ್ನೇ ಹೊದ್ದುಕೊಂಡು, ತಿನ್ನಲು ಏನು ಸಿಕ್ಕಿತೋ ಅದನ್ನೇ ತಿಂದುಂಡು, ಎಲ್ಲಿ ಮಲಗಲು ತಾವು ಸಿಕ್ಕಿತೋ ಅಲ್ಲಿಯೇ ಮಲಗಿ ತನ್ನ ಆನಂದವನ್ನು ತಾನೇ ಅನುಭವಿಸುತ್ತಿರುವವನು ಬ್ರಾಹ್ಮಣನೆನಿಸುತ್ತಾನೆ."_
ಹೊರಗಿನ ವಿಷಯಗಳಾಗಲೀ, ಪರಿಸ್ಥಿತಿಗಳಾಗಲಿ ಹೇಗಾದರೂ ಇರಲಿ ನಮ್ಮ ಮನಸ್ಸು ಪ್ರಸನ್ನವಾಗಿದ್ದರೆ ಸಾಕು, ಅಲ್ಲಿ ಆನಂದವು ತಾನೇ ತಾನಾಗಿ ತೋರಿಕೊಳ್ಳುತ್ತದೆ ಎಂಬುದಾಗಿ ಹೇಳುತ್ತಾ, ಆ ವಿಚಾರಕ್ಕೆ ಪೂರಕವಾಗಿ ತಮಗೆ ಪರಿಚಿತರಾಗಿದ್ದ ಬೆಟಗೇರಿ ಕೃಷ್ಣಶರ್ಮರೆಂಬ ಪುಣ್ಯಪುರುಷರೊಬ್ಬರ ಬದುಕಿನ ನೈಜಘಟನೆಯನ್ನು ಹೊಳೆನರಸೀಪುರದ ಶ್ರೀ ಶ್ರೀಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು ವಿವರಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನಲ್ಲಿ ಬೆಟಗೇರಿ ಎಂಬ ಪಟ್ಟಣವೊಂದಿದೆ. ಅಲ್ಲಿ ಶ್ರೀಗಳ ಸಮಕಾಲೀನರಾಗಿ ಬೆಟಗೇರಿ ಕೃಷ್ಣಶರ್ಮ ಎಂಬ ಮಹಾತ್ಮರೊಬ್ಬರಿದ್ದರು. ಅವರು ಕರ್ಮಯೋಗಿಗಳೂ, ಶಾಸ್ತ್ರಜ್ಞರೂ, ಭಕ್ತಶಿರೋಮಣಿಗಳೂ ಆಗಿದ್ದರು. ಅವರು ಶ್ರೀರಾಮನಾಮಾಕ್ಷರಗಳು ಒತ್ತಿದ್ದಂತಹ ರುಮಾಲನ್ನು ಯಾವಾಗಲೂ ಧರಿಸುತ್ತಿದ್ದರು. ಆಗಾಗ ರಾಮನಾಮವನ್ನು ಉಚ್ಚರಿಸುತ್ತಲೂ ಇರುತ್ತಿದ್ದರು. ಅವರ ದರ್ಶನ ಮಾಡಿದರೆ ಸಾಕು, ಎಂತಹವರಿಗಾದರೂ ಅವರ ಮನಸ್ಸಿನ ತಾಪವು ಹರಿದು ಹೋಗುತ್ತಿತ್ತು.
ಒಮ್ಮೆ ಕೃಷ್ಣಶರ್ಮರು ತಾವೊಬ್ಬರೇ ಬೆಟಗೇರಿಯಿಂದ ಕಾಲ್ನಡಿಗೆಯಲ್ಲಿ ಹೊರಟು ತಕ್ಕಷ್ಟು ದೂರದ ಮತ್ತೊಂದು ಗ್ರಾಮವನ್ನು ಸೇರಬೇಕಾಗಿತ್ತು. ಆದರೆ ಮಾರ್ಗಮಧ್ಯದಲ್ಲಿ ಕತ್ತಲು ಆವರಿಸಿ, ಅವರು ಗಾಢಾಂಧಕಾರದಲ್ಲಿ ಸಿಕ್ಕಿಬಿದ್ದರು. ಮುಂದಕ್ಕೆ ದಾರಿ ಕಾಣಿಸದಂತಾಯಿತು. ಆ ಹೊತ್ತಿನಲ್ಲಿ ಅವರು ಒಬ್ಬಂಟಿಗರಾಗಿದ್ದರು. “ಈಗ ಮಾಡುವುದೇನಿದೆ. ಇಲ್ಲಿಯೇ ಮಲಗಿಬಿಡುತ್ತೇನೆ. ಬೆಳಕು ಹರಿದ ಬಳಿಕ ಪಯಣವನ್ನು ಮುಂದುವರಿಸುತ್ತೇನೆ” ಎಂದು ನಿಶ್ಚಯಿಸಿಕೊಂಡು, ಅಲ್ಲಿಯೇ ಒಂದಾನೊಂದು ಮರದ ಬುಡದಲ್ಲಿ ಹಾಸಿಕೊಂಡು, ರಾಮನಾಮವನ್ನು ಸ್ಮರಿಸುತ್ತಾ ಮಲಗಿ ನಿದ್ರೆಹೋದರು. ನಿದ್ರೆಯೇನೋ ಚೆನ್ನಾಗಿಯೇ ಬಂದಿತು. ಬೆಳಕುಹರಿದಾಗ ರಾಮಸ್ಮರಣೆಯಲ್ಲಿಯೇ ಕಣ್ಣುಬಿಟ್ಟು ಮೇಲೆದ್ದರು. ಸುತ್ತಲೂ ಕಣ್ಣುಹಾಯಿಸಿದಾಗ ಅದೊಂದು ರುದ್ರಭೂಮಿಯೆಂಬುದು ಗೋಚರಿಸಿತು. ಅದರಿಂದೇನೂ ಅವರು ವಿಚಲಿತರಾಗಲಿಲ್ಲ. ತಮ್ಮ ಪ್ರಯಾಣವನ್ನು ಮುಂದುವರೆಸಿ, ತಾವು ಗುರಿಯಾಗಿಸಿಕೊಂಡಿದ್ದ ಗ್ರಾಮವನ್ನು ನೆಮ್ಮದಿಯಿಂದ ಸೇರಿಕೊಂಡರು. “ಮನಸ್ಸು ಪ್ರಸನ್ನವಾಗಿದ್ದವರಿಗೆ ಸ್ಮಶಾನದಲ್ಲಿಯೂ ಆನಂದಕ್ಕೆ ಕೊರತೆಯಿರುವುದಿಲ್ಲ” ಎಂಬ ಚಿಂತನೆಯತ್ತ ಸದ್ಗುರುಗಳು ಜಿಜ್ಞಾಸುಗಳ ಮನಸ್ಸನ್ನು ಸೆಳೆದಿದ್ದಾರೆ. ಈ ಸಂದರ್ಭಕ್ಕೆ ಹೊಂದುವಂತೆ ಸದ್ಗುರುಗಳು ಬ್ರಾಹ್ಮಣನೆಂದರೆ ಹೇಗಿರಬೇಕು ಎಂಬುದನ್ನು ತಿಳಿಯಪಡಿಸುವ ಸ್ಮೃತಿಶ್ಲೋಕವೊಂದನ್ನು ಮೇಲಿನಂತೆ ಉಲ್ಲೇಖಿಸಿದ್ದಾರೆ. ಬೆಟಗೇರಿ ಕೃಷ್ಣಶರ್ಮರಿಗೆ (1900-1982) ಈ ಶ್ಲೋಕವು ಚೆನ್ನಾಗಿ ಅನ್ವಯಿಸುತ್ತದೆ.
"ಮನಸ್ಸನ್ನು ನೆಮ್ಮದಿಯಾಗಿಟ್ಟುಕೊಂಡರೆ ಸಾಕು, ಸತ್ವಗುಣದಿಂದ ಅದನ್ನು ಸಂಸ್ಕರಿಸಿಕೊಂಡರೆ ಸಾಕು, ಅದರಲ್ಲಿ ಆತ್ಮನ ಆನಂದವು ಪ್ರತಿಬಿಂಬಿಸುತ್ತದೆ. ಹೊರಗಿನ ವಿಷಯಗಳ ಸಂಪತ್ತಿಯು ನಮ್ಮಲ್ಲಿರಲಿ, ಇಲ್ಲದಿರಲಿ ಜೀವನವು ಸುಖಮಯವಾಗಿರುತ್ತದೆ" ಎಂಬುದು ಶ್ರೀಗಳ ಉಪದೇಶ.
(ಅಧ್ಯಾತ್ಮಪ್ರಕಾಶ)
*🌷🌺🙏 ಶುಭದಿನವಾಗಲಿ! 🙏🌺🌷*
ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್
ನಿತ್ಯ ಪಂಚಾಂಗ NITYA PANCHANGA 19.07.2023 ಬುಧವಾರ WEDNESDAY*
*ಸಂವತ್ಸರ:*ಶೋಭಕೃತ್.
*SAMVATSARA :* SHOBHAKRUT.
*ಆಯಣ:* ದಕ್ಷಿಣಾಯಣ.
*AYANA:* DAKSHINAYANA.
*ಋತು:* ವರ್ಷಾ.
*RUTHU:* VARSHA
*ಮಾಸ:* ಅಧಿಕ ಶ್ರಾವಣ.
*MAASA:* ADHIKA SHRAVANA
*ಪಕ್ಷ:* ಶುಕ್ಲ.
*PAKSHA:* SHUKLA.
*ವಾಸರ:* ಸೌಮ್ಯವಾಸರ.
*VAASARA:* SOUMYAVAASARA.
*ನಕ್ಷತ್ರ:* ಪುಷ್ಯ.
*NAKSHATRA:* PUSHYA.
*ಯೋಗ:* ವಜ್ರ.
*YOGA:* VAJRA.
*ಕರಣ:* ಬಾಲವ.
*KARANA:* BALAVA.
*ತಿಥಿ:* ದ್ವಿತೀಯಾ.
*TITHI:* DVITIYA.
*ಶ್ರಾದ್ಧ ತಿಥಿ:* ದ್ವಿತೀಯಾ.
*SHRADDHA TITHI:* DVITIYA.
*ಸೂರ್ಯೊದಯ (Sunrise):* 06.03
*ಸೂರ್ಯಾಸ್ತ (Sunset):* 07:04
*ರಾಹು ಕಾಲ (RAHU KAALA) :* 12:00PM To 01:30PM.
*ದಿನ ವಿಶೇಷ (SPECIAL EVENT'S)*
*ಅಧಿಕಮಾಸದಲ್ಲಿ ವಿಶೇಷವಾಗಿ ಪ್ರತಿನಿತ್ಯ ಹೇಳಬೇಕಾದ ಮಂತ್ರ*
*ಗೋವರ್ಧನಧರಂ ವಂದೇ ಗೋಪಾಲಂ ಗೋಪರೂಪಿಣಂ |*
*ಗೋಕುಲೋತ್ಸವಮೀಶಾನಂ ಗೋವಿಂದಂ ಗೋಪಿಕಾಪ್ರಿಯಂ ||*
Post a Comment