[11/08, 7:58 AM] Pandit Venkatesh. Astrologer. Kannada: ಅಷ್ಟ ದಿಕ್ಪಾಲಕರು
ಎಂಟು ದಿಕ್ಕುಗಳನ್ನು ಕಾಯುವ ದೇವತೆಗಳೇ ಅಷ್ಟ ದಿಕ್ಪಾಲಕರು. ದಿಕ್ಪಾಲಕ ಅಂದರೆ ರಕ್ಷಣೆ ನೀಡುವವ ಎಂದರ್ಥ.
ಬ್ರಹ್ಮಾಂಡ ಅನಂತವಾದುದು. ಮಾಪನಕ್ಕೇ ನಿಲುಕದ ಬ್ರಹ್ಮಾಂಡವನ್ನು ಎಂಟು ದಿಕ್ಕುಗಳಿಂದ ಗುರುತಿಸುತ್ತಾರೆ. ಸನಾತನ ಪರಂಪರೆಯ ಪ್ರಕಾರ ಬ್ರಹ್ಮಾಂಡವನ್ನು ಪೊರೆಯುವಾತನೇ ಭಗವಂತ. ಅಂತೆಯೇ ಪ್ರತಿಯೊಂದು ದಿಕ್ಕಿಗೂ ಒಬ್ಬೊಬ್ಬರು ಅಧಿ ದೇವತೆಗಳಿದ್ದಾರೆ.
ವಾಸ್ತುಶಾಸ್ತ್ರದ ಪ್ರಕಾರ ಅಷ್ಟದಿಕ್ಪಾಲಕರು: ಇಂದ್ರ-ಪೂರ್ವ, ಕುಬೇರ-ಉತ್ತರ, ಯಮ-ದಕ್ಷಿಣ, ವರುಣ-ಪಶ್ಚಿಮ, ಈಶಾನ (ಶಿವ)- ಈಶಾನ್ಯ, ಅಗ್ನಿ-ಆಗ್ನೇಯ, ವಾಯು-ವಾಯುವ್ಯ, ನಿರುಋುತಿ(ರಾಕ್ಷಸ)- ನೈಋುತ್ಯ.
ಇಂದ್ರ: ಇಂದ್ರನು ದೇವತೆಗಳ ರಾಜ. ಸ್ವರ್ಗಲೋಕದ ಒಡೆಯ. ಮಳೆ ಮತ್ತು ಮಿಂಚುಗಳ ಅಧಿಧಿದೇವತೆ. ಐರಾವತ ಇವನ ವಾಹನ. ವಜ್ರಾಯುಧ ಇವನ ಆಯುಧ. ಅಧಿತಿಯ ಇಬ್ಬರು ಮಕ್ಕಳಲ್ಲಿ ಒಬ್ಬನಾದ ಇವನನ್ನು ಆದಿತ್ಯ ಎಂತಲೂ ಕರೆಯುತ್ತಾರೆ.
ಅಗ್ನಿ: ಬೆಂಕಿಯ ದೇವತೆ. ಅವನೇ ಯಜ್ಞ ಪುರುಷ. ಹೋಮ, ಹವನಗಳಲ್ಲಿ ಅರ್ಪಣೆಯಾಗುವ ಹವಿಸ್ಸನ್ನು ಸಂಬಧಿಂಧಿತ ದೇವತೆಗಳಿಗೆ ಮುಟ್ಟಿಸುತ್ತಾನೆ. ದೇವತೆಗಳ ಸಂದೇಶವಾಹಕನಾಗಿ ಕೆಲಸ ನಿರ್ವಹಿಸುತ್ತಾನೆ. ಅಗ್ನಿಯು ಪೃಥ್ವಿಗೆ ಅಧಿಧಿಪತಿಯಾದ ದೇವತೆ ಎಂದೂ ಪ್ರಸಿದ್ಧ.
ಯಮ: ಹಿಂದೂ ಪುರಾಣಗಳ ಪ್ರಕಾರ ಯಮರಾಜನೇ ಮೃತ್ಯುದೇವತೆ. ಕಾಲಪುರುಷ ಎಂತಲೂ ಕರೆಯುತ್ತಾರೆ. ಈತ ದಕ್ಷಿಣ ದಿಕ್ಕಿನ ಅಧಿಧಿಪತಿ. ಇವನು ಸೂರ್ಯನ ಮಗ. ಶನಿಯ ತಮ್ಮ. ಈತನ ಆಯುಧ ದಂಡ.
ನಿಋುತಿ: ನೈಋುತ್ಯ ದಿಕ್ಕಿನ ಒಡೆಯ. ನಿಋುತಿಯ ಆಯುಧ ಖಡ್ಗ. ದುಷ್ಟ ಶಕ್ತಿಗಳಿಂದ ರಕ್ಷಿಸುತ್ತಾನೆ. ಆರಾಧನೆಯಿಂದ ದೀರ್ಘಾಯಸ್ಸು ಲಭಿಸುತ್ತದೆ.
ವಾಯು: ವಾಯುವ್ಯ ದಿಕ್ಕಿನ ದೇವತೆ. ಇವನ ಆಯುಧ ಅಂಕುಶ. ಹನುಮನ ತಂದೆ. ಈತನನ್ನು ಪವನ, ಪ್ರಾಣ ಎಂತಲೂ ಕರೆಯುತ್ತಾರೆ. ಭಗವದ್ಗೀತೆಯ ಹತ್ತನೆಯ ಅಧ್ಯಾಯವಾದ ವಿಭೂತಿಯೋಗದಲ್ಲಿ ಶ್ರೀಕೃಷ್ಣನು ತನ್ನ ಭಾವ ವಾಯುವಿನಂತೆ ಇದೆ ಎಂದು ಹೇಳುತ್ತಾನೆ.
ಕುಬೇರ: ಕುಬೇರ ಮಿಶ್ರವಶುವಿನ ಮಗ. ಈತನ ಆಯುಧ ಗಧೆ. ಕುಬೇರ ಹಿಂದೂ ಪುರಾಣಗಳ ಪ್ರಕಾರ ಯಕ್ಷ ಮತ್ತು ಧನ ದೇವತೆ.
ವರುಣ: ವರುಣನ ಆಯುಧ ಪಾಶ. ಹಿಂದೂ ಪುರಾಣಗಳ ಪ್ರಕಾರ ನೀರಿನ ದೇವತೆ.
ಈಶಾನ: ಇವನ ಆಯುಧ ತ್ರಿಶೂಲ. ಸಂಪತ್ತು, ಆರೋಗ್ಯ ಹಾಗೂ ಯಶಸ್ಸಿನ ದೇವತೆ. ಈತ ಜ್ಞಾನವನ್ನು ಕೊಟ್ಟು, ದುಃಖವನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ ಇದೆ.
[11/08, 8:08 AM] Pandit Venkatesh. Astrologer. Kannada: ಆತ್ಮದ ಬಗ್ಗೆ ನಮ್ಮಲ್ಲಿ ಅಂತ್ಯವಿಲ್ಲದಷ್ಟು ವ್ಯಾಖ್ಯಾನಗಳು, ಟಿಪ್ಪಣಿಗಳು ಬಂದಿವೆ, ಬರುತ್ತಲೇ ಇವೆ. ಭಾರತದ ಪುರಾಣೇತಿಹಾಸಗಳಲ್ಲಿ ಈ ಬಗ್ಗೆ ವಿವರಣೆ ಇದೆ. ಅಷ್ಟಕ್ಕೂ, ನಮ್ಮದು ಪಾಶ್ಚಿಮಾತ್ಯರ ಹಾಗೆ ಭೋಗ ಬದುಕಿನ ಪರಿಕಲ್ಪನೆಯಲ್ಲ. ನಮ್ಮದು ತ್ಯಾಗ, ಯೋಗದ ಆದರ್ಶ. ಹೀಗಾಗಿ ಬಹುತೇಕ ಭಾರತೀಯರ ಜೀವನದ ಆತ್ಯಂತಿಕ ಬಯಕೆ ಮೋಕ್ಷವೇ ಆಗಿರುತ್ತದೆ. ಅರಿಷಡ್ವರ್ಗಗಳೆಂಬ ವೈರಿಗಳು ಯಾರನ್ನೂ ಬಿಡುವುದಿಲ್ಲ; ಆದರೂ ಅವುಗಳನ್ನು ಮೀರುವ ಕೀಲಿಕೈಯನ್ನೂ ಪೂರ್ವಜರು ನಮಗೆ ನೀಡಿದ್ದು ಭಾಗ್ಯವಿಶೇಷವೇ ಸರಿ.
‘ಬುದ್ಧಿಯು ತಿಳಿದುಕೊಳ್ಳಲಾರದ್ದನ್ನು ಅರಿಯಲು ಆತ್ಮ ತನ್ನ ಕಿವಿಗಳನ್ನು ತೆರೆದಿಡುತ್ತದೆ’ ಎಂದಿದ್ದಾನೆ, ರೂಮಿ. ಎಂಥ ಅರ್ಥವತ್ತಾದ ಮಾತು.
‘ಕೆಲಸ ಎಷ್ಟೇ ಸಣ್ಣದಿರಲಿ, ಅದರಲ್ಲಿ ನಿಮ್ಮ ಹೃದಯ, ಮನಸ್ಸು, ಬುದ್ಧಿ ಮತ್ತು ಆತ್ಮವನ್ನೂ ಸಂಪೂರ್ಣವಾಗಿ ತೊಡಗಿಸಿ ಆ ಕೆಲಸ ಮಾಡಿ. ಆಗ ಯಶಸ್ಸು ನಿಮ್ಮ ಬಳಿಸಾರುತ್ತದೆ’ ಎಂದಿದ್ದಾರೆ. ಅಂದರೆ ನಮ್ಮ ನಮ್ಮ ಕೆಲಸಗಳನ್ನು ಮೇಲುಕೀಳು ಎಂದೆಣಿಸದೆ ಆತ್ಮವತ್ತಾಗಿ ಮಾಡುವುದು.
[11/08, 8:16 AM] Pandit Venkatesh. Astrologer. Kannada: 🙏"ಕಾಲಭೈರವೇಶ್ವರ ಗಾಯತ್ರಿ ಮಂತ್ರ"🙏
ಸೂರ್ಯ ಉದಯಿಸುವ ಮುನ್ನ ಈ ಮಂತ್ರ ಹೇಳಿಕೊಂಡರೆ ಕಾಲಭೈರವನ ಅನುಗ್ರಹ,ಸರ್ವ ಕಷ್ಟ ಕಳೆದು ಏಳಿಗೆ ಕಾಣುಬಹುದು ಎನ್ನಲಾಗುತ್ತದೆ.
ಶಕ್ತಿ ಶಾಲಿ ಕಾಲಭೈರವ ಮಂತ್ರ ನಮ್ಮ ಜೀವನವನ್ನು ಬದಲಾಯಿಸುತ್ತದೆ.ಪ್ರತಿನಿತ್ಯ ಬೆಳಗ್ಗೆ ಸೂರ್ಯೋದಯಕ್ಕೆ ಮೊದಲೇ ಭಕ್ತಿ ಶ್ರದ್ಧೆಗಳಿಂದ ಈ ಒಂದು ಮಂತ್ರವನ್ನು ಪಠಿಸುತ್ತಾ ಬಂದರೆ ವಿಶೇಷವಾಗಿ ಕಾಲ ಭೈರವೇಶ್ವರ ಸ್ವಾಮಿಯ ಅನುಗ್ರಹ ಸಂಪೂರ್ಣವಾಗಿ ಪ್ರಾಪ್ತಿಯಾಗುತ್ತದೆ.ಜೀವನದಲ್ಲಿ ವಿಪರೀತವಾದ ಹಣಕಾಸಿನ ಬಾಧೆಗಳನ್ನು ಅನುಭವಿಸುತ್ತಿದ್ದರೆ, ಮನೆಯಲ್ಲಿ ಎಷ್ಟು ಸಂಪಾದನೆ ಮಾಡಿಕೊಂಡು ಬಂದರು ಕೂಡ ಹಣ ನಿಲ್ಲುತ್ತಿಲ್ಲ ಅಂದರೆ, ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ನಷ್ಟವಾಗುತ್ತಿದೆ, ಜೀವನದಲ್ಲಿ ಯಾವುದೇ ರೀತಿಯಾದಂತಹ ಏಳಿಗೆ ಇಲ್ಲ, ಮಾಟ ಮಂತ್ರದ ಸಮಸ್ಯೆಗಳು, ಶತ್ರುಗಳ ಬಾಧೆ ಇದ್ದರೆ,ಎಲ್ಲಾ ಕೆಟ್ಟ ಶಕ್ತಿಗಳು ತೊಲಗಿ ವಿಶೇಷವಾಗಿ ಏಳಿಗೆ ಕಾಣಬೇಕಾದರೆ ಪ್ರತಿನಿತ್ಯ ಕಾಲಭೈರವ ಗಾಯತ್ರಿ ಜಪಿಸಿ ಕಷ್ಟಗಳನ್ನು ಹತೋಟಿಯಲ್ಲಿ ಇಡಬಹುದು ಎನ್ನಲಾಗುತ್ತದೆ.
ಕಾಲ ಭೈರವೇಶ್ವರಸ್ವಾಮಿಗೆ ಸಂಬಂಧಪಟ್ಟಂತಹ ಈ ಒಂದು ಕಾಲಭೈರವೇಶ್ವರ ಗಾಯತ್ರಿ ಮಂತ್ರಕ್ಕೆ ಅತ್ಯಂತ ಶಕ್ತಿ ಇದೆ. ಜೀವನದ ಮುಂದೆ ಯಾವ ದಾರಿ ಕಾಣುತ್ತಿಲ್ಲ,ಹೇಗೆ ಜೀವಿಸಬೇಕು ಎಂಬುದು ಗೊತ್ತಾಗುತ್ತಿಲ್ಲ,ಬಾಧೆ ಅನುಭವಿಸುತ್ತಿದ್ದೇನೆ ನನಗೆ ಯಾಕೆ ಈ ರೀತಿಯ ಕಷ್ಟಗಳು ಬರುತ್ತಿದೆ ಅಂದರೆ.ಮನೆಯಲ್ಲಿ ಗಂಡ,ಹೆಂಡತಿ,ಅತ್ತೆ ಸೊಸೆ, ಕಲಹ ಯಾವ ರಂಗದಲ್ಲಿ ಕೂಡ ಯಶಸ್ಸು ಸಿಗುತ್ತಿಲ್ಲ,ಶತ್ರುಗಳು ಹೆಚ್ಚಾಗಿದ್ದಾರೆ ಪದೇ ಪದೇ ಜೀವನದಲ್ಲಿ ಎಲ್ಲಾ ಕಷ್ಟಗಳಿಗೆ ನೊಂದು ಹೋಗಿದ್ದೇವೆ ಅಂದರೆ ಈ ಮಂತ್ರವನ್ನು ಶ್ರದ್ಧೆ,ಭಕ್ತಿಯಿಂದ ಜಪಿಸಿದರೆ,ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಭಕ್ತರದು.ಪ್ರತಿ ನಿತ್ಯ ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಎದ್ದು ಸ್ನಾನ ಮಾಡಿ ಪ್ರಶಾಂತ ಜಾಗದಲ್ಲಿ ಕುಳಿತುಕೊಂಡು ಶ್ರೀ ಕಾಲಭೈರವೇಶ್ವರ ಸ್ವಾಮಿಯನ್ನು ಮನಸ್ಸಿನಲ್ಲೇ ನೆನೆಸಿಕೊಂಡು ದೇವರಿಗೆ ಸಂಕಲ್ಪವನ್ನು ಮಾಡಿಕೊಂಡು ಈ ಒಂದು ಮಂತ್ರವನ್ನು 21 ಬಾರಿ ಅಥವಾ 108 ಬಾರಿ ಜಪಿಸಿದರೆ ಕಷ್ಟಗಳೆಲ್ಲ ಮಂಜಿನಂತೆ ಕರಗಿ ಹೋಗುತ್ತದೆ ಎಂದು ಪರಿಗಣಿಸಲಾಗಿದೆ.
"ಕಾಲಭೈರವ ಗಾಯತ್ರಿ ಮಂತ್ರ"
“ ಓಂ ಕಾಲಕಾಲಾಯ ವಿದ್ಮಹೇ ಕಾಲಾತೀತಾಯ ಧೀಮಹೀ ತನ್ನೋ ಕಾಲಭೈರವ ಪ್ರಚೋದಯಾತ್”
"ಸರ್ವ ಜನೇ ಸುಖಿನೋ ಭವಂತು"
(ಆಧಾರ)🙏🙏🙏
[11/08, 9:29 PM] Pandit Venkatesh. Astrologer. Kannada: 🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* 🪔🪔🪔🪔🪔🪔🪔🪔🪔🪔🪔 🎆 ದಿನದ ವಿಶೇಷ : *ಸರ್ವೇಶಾಮೇಕಾದಶೀ, ಪರಮ ಏಕಾದಶಿ* 🪔🪔🪔🪔🪔🪔🪔🪔🪔🪔🪔 ದಿನಾಂಕ : *12/08/2023*
ವಾರ : *ಶನಿ ವಾರ* ಸಂವತ್ಸರ : *ಶ್ರೀ ಶೋಭಕೃತ್ ನಾಮ* : ಆಯನ : *ದಕ್ಷಿಣಾಯಣೇ* *ವರ್ಷ* ಋತೌ
*ಅಧಿಕ ಶ್ರಾವಣ* ಮಾಸೇ *ಕೃಷ್ಣ* : ಪಕ್ಷೇ *ಏಕಾದಶ್ಯಾಂ* (ಪ್ರಾರಂಭ ಸಮಯ *ಶುಕ್ರ ಮುಂಜಾನೆ 05-05 am* ರಿಂದ ಅಂತ್ಯ ಸಮಯ : *ಶನಿ ಹಗಲು 06-30 am* ರವರೆಗೆ) *ಸ್ಥಿರ* ವಾಸರೇ ವಾಸರಸ್ತು *ಆರಿದ್ರಾ* ನಕ್ಷತ್ರೇ (ಪ್ರಾರಂಭ ಸಮಯ : *ಶನಿ ಹಗಲು 06-01 am* ರಿಂದ ಅಂತ್ಯ ಸಮಯ : *ರವಿ ಹಗಲು 08-25 am* ರವರೆಗೆ) ನಂತರ *ಪುನರ್ವಸು* *ಹರ್ಷಣ* ಯೋಗೇ (ಶನಿ ಹಗಲು *03-20 pm* ರವರೆಗೆ) *ಬಾಲವ* ಕರಣೇ (ಶನಿ ಹಗಲು *06-30 am* ರವರೆಗೆ) ಸೂರ್ಯ ರಾಶಿ : *ಕಟಕ* ಚಂದ್ರ ರಾಶಿ : *ಮಿಥುನ* 🌅 ಸೂರ್ಯೋದಯ - *06-08 am* 🌄ಸೂರ್ಯಾಸ್ತ - *06-41 pm*
*ರಾಹುಕಾಲ* *09-16 am* ಇಂದ *10-51 am* *ಯಮಗಂಡಕಾಲ*
*01-59 pm* ಇಂದ *03-33 pm* *ಗುಳಿಕಕಾಲ*
*06-08 am* ಇಂದ *07-42 am* *ಅಭಿಜಿತ್ ಮುಹೂರ್ತ* : ಶನಿ ಹಗಲು *11-59 am* ರಿಂದ *12-50 pm* ರವರೆಗೆ *ದುರ್ಮುಹೂರ್ತ* : ಶನಿ ಹಗಲು *07-49 am* ರಿಂದ *08-39 am* ರವರೆಗೆ *ವರ್ಜ್ಯ* ಶನಿ ಹಗಲು *03-13 pm* ರಿಂದ *04-59 pm* ರವರೆಗೆ *ಅಮೃತ ಕಾಲ* : ಶನಿ ರಾತ್ರಿ *09-26 pm* ರಿಂದ *11-12 pm* ರವರೆಗೆ 🚩🚩🚩🚩🚩🚩🚩🚩🚩🚩 ಮರು ದಿನದ ವಿಶೇಷ : *ಪ್ರದೋಷ ಪೂಜೆ*
🚩🚩🚩🚩🚩🚩🚩🚩🚩🚩 ಶುಭಮಸ್ತು...ಶುಭದಿನ
Post a Comment