[11/08, 4:35 PM] ExCm Ps: *ರಾಹುಲ್ ಗಾಂಧಿ ಎಟಿಎಂ ಕಾಂಗ್ರೆಸ್ ಸರ್ಕಾರದ ಮುಲಾಜಿನಲ್ಲಿದ್ದಾರೆ: ಬಸವರಾಜ ಬೊಮ್ಮಾಯಿ ಆರೋಪ*
*ರಾಜ್ಯ ಸರ್ಕಾರದ ಭ್ರಷ್ಟಾಚಾರಗಳ ವಿರುದ್ದ ಕಾನೂನಾತ್ಮಕ ಹೋರಾಟ: ಬಸವರಾಜ ಬೊಮ್ಮಾಯಿ*
ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕದ ಎಟಿಎಂ ಸರ್ಕಾರದ ಮುಲಾಜಿನಲ್ಲಿದ್ದಾರೆ. ಹೀಗಾಗಿ ಅವರು ಗುತ್ತಿಗೆದಾರರಿಗೆ ಬಿಲ್ ಕೊಡಿಸಲು ಮಧ್ಯ ಪ್ರವೇಶ ಮಾಡುವುದಿಲ್ಲ. ರಾಜ್ಯ ಸರ್ಕಾರದ ಭ್ರಷ್ಟಾಚಾರಗಳ ವಿರುದ್ದ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ಡಿಸಿಎಂ ಡಿಕೆ ಶಿವಕುಮಾರ್ ಅವರು ವಿಷಯ ಡೈವರ್ಟ್ ಮಾಡುತ್ತಿದ್ದಾರೆ. ನಮ್ಮ ಕಾಲದಲ್ಲಿ ಬಿಡುಗಡೆಯಾಗುರುವ 650 ಕೋಟಿ ಯಾಕೆ ಇಟ್ಟುಕೊಂಡಿದ್ದಾರೆ. ತನಿಖೆ ಮಾಡುತ್ತೇವೆ ಅಂತ ಹೇಳಿ ಹಣ ಇಟ್ಟು ಕೊಂಡಿ ದ್ದಾರೆ. ಇದು ಅನುಮಾನಕ್ಕೆ ಕಾರಣವಾಗಿದೆ ಎಂದರು.
ಕಾಂಟ್ರಾಕ್ಟರ್ ಕಡೆಯವರೇ ಆಣೆ ಪ್ರಮಾಣ ಮಾಡುವಂತೆ ಹೇಳಿದ್ದಾರೆ. ಅದನ್ನು ವಿಷಯಾಂತರ ಮಾಡುವ ಬದಲು, ಸರ್ಕಾರ ಗುತ್ತಿಗೆದಾರರ ಹಣ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಸಚಿವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ನಿನ್ನೆ ಶಾಂಗ್ರಿಲಾದಲ್ಲಿ ಕಮಿಷನ್ ಮಾತುಕತೆ ನಡೆಯುತ್ತಿದೆ ಅಂತ ಹೇಳಿದ್ದರು. ಅವರ ಮೇಲೆ ಏನು ಒತ್ತಡ ಇದೆಯೋ ಗೊತ್ತಿಲ್ಲ. ಈಗ ಯಾರೂ ಕಮಿಷನ್ ಕೇಳಿಲ್ಲ ಅಂತ ಹೇಳುತ್ತಿದ್ದಾರೆ ಎಂದರು.
ನಾವು ಮಾರ್ಚ್ ನಲ್ಲಿ ಹಣ ಬಿಡುಗಡೆ ಮಾಡಿದ್ದೇವೆ. ನಾವೇನು ಸುಳ್ಳು ಹೇಳಬೇಕಿಲ್ಲ. ಅವರು ಹಣ ಬಿಡುಗಡೆ ಮಾಡದ ಕಾರಣ ಈಗ ಕಾಂಟ್ರಾಕ್ಟ್ ರ್ಸ್ ಸಿಎಂ, ಡಿಸಿಎಂ, ರಾಜ್ಯಪಾಲರ ಬಳಿ ಓಡಾಡುತ್ತಿದ್ದಾರೆ. ಈಗ ಬಿಬಿಎಂಪಿಯಲ್ಲಿ ತೆರಿಗೆ ಸಂಗ್ರಹ ಮಾಡಿದ್ದಾರೆ. ಅದರಲ್ಲಿ ಗುತ್ತಿಗೆದಾರರ ಹಣ ಕೊಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಇಲ್ಲಿ ಮಧ್ಯ ಪ್ರವೇಶಿಸಲು ಮನಸಿಲ್ಲ. ಎಟಿಎಂ ಅಂತ ಏನು ಹೆಸರಿದೆಯೋ ಅದು ಸತ್ಯವಾಗಿರುವುದರಿಂದ ಅವರು ರಾಜ್ಯ ಸರ್ಕಾರದ ಮುಲಾಜಿನಲ್ಲಿದ್ದಾರೆ. ಹೀಗಾಗಿ ಅವರು ಇಲ್ಲಿ ಮದ್ಯಪ್ರವೇಶ ಮಾಡಲು ಬರುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಜನರಿಗೆ ಬೇಕಾಗಿರುವ ಕಾಮಗಾರಿ ಮಾಡದಿದ್ದರೆ ಬ್ರ್ಯಾಂಡ್ ಬೆಂಗಳೂರು ಯೋಜನೆ ಯಶಸ್ವಿಯಾಗುವುದಿಲ್ಲ. ನಮ್ಮ ಅವಧಿಗೂ ಹಿಂದಿನಿಂದಲೂ ಬಾಕಿ ಉಳಿದಿದೆ. ನಾವು ಹಿರಿತನದ ಆಧಾರದಲ್ಲಿ ಬಿಲ್ ಪಾವತಿ ಮಾಡಲು ನಿಯಮ ಮಾಡಿದ್ದರಿಂದ ವ್ಯವಸ್ಥಿತವಾಗಿ ಹಣ ಬಿಡುಗಡೆಯಾಗುತ್ತಿತ್ತು. ಈ ಸರ್ಕಾರ ಇಲ್ಲದ ಸಬೂಬು ಹೇಳದೇ ಗುತ್ತಿಗೆದಾರರ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ, ರಾಜ್ಯ ಸರ್ಕಾರದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
[11/08, 5:21 PM] ExCm Ps: *ಲೋಕ ಕಲ್ಯಾಣಕ್ಕಾಗಿ ಯಾಗಗಳು ನಿರಂತರ ನಡೆಯಲಿ: ಬಸವರಾಜ ಬೊಮ್ಮಾಯಿ*
ಬೆಂಗಳೂರು:ಲೋಕ ಕಲ್ಯಾಣಕ್ಕಾಗಿ ಯಾಗಗಳು ನಿರಂತರ ನಡೆಯಲಿ. ಚಾತುರ್ಮಾಸ್ಯ ಸಂದರ್ಭದಲ್ಲಿ ಲೋಕಕಲ್ಯಾಣಕ್ಕಾಗಿ ನಡೆಯುವ ಚಂಡಿಕಾ ಯಾಗದಿಂದ ಎಲ್ಲರಿಗೂ ಒಳಿತಾಗಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ನಡೆಯುತ್ತಿರುವ ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಚ್ಮೀ ನರಸಿಂಹ ಪೀಠಾಧೀಶ್ವರರಾದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತ ಹಾಗೂ ಚಂಡಿಕಾ ಯಾಗದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನೂರು ದಿನಗಳಿಗಿಂತಲೂ ಹೆಚ್ಚು ನಡೆತುವ ಈ ಚಾತುರ್ಮಾಸ್ಯಕ್ಕೆ ಗೋಪಾಲಯ್ಯ ಕುಟುಂಬ ಸೇವಾಕಾರ್ಯ ಮಾಡುತ್ತಿದೆ. ಅವರಿಗೆ ಶ್ರೇಯಸ್ಸು ದೊರಕಲಿ, ಈ ಚಂಡಿಕಾ ಯಾಗದಿಂದ ಎಲ್ಲರಿಗೂ ಒಳಿತಾಗಲಿ. ಕಾಲಕಾಲಕ್ಕೆ ಋಷಿ ಮುನಿಗಳು ನಾಡಿನ ಶ್ರೇಯೋಭಿವೃದ್ದಿಗಾಗಿ ಯಾವ ಮಾಡುತ್ತ ಬಂದಿರುವುದು ನಮ್ಮ ಸಂಸ್ಕೃತಿಯಲ್ಲಿ ನಡೆಯುತ್ತಿದೆ.
ಯಾವಾಗ ಅಗತ್ಯ ಇದೆ ಆಗ ಋಷಿ ಮುನಿಗಳು ಯಾಗ ಮಾಡುತ್ತ ಬಂದಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಇಂತ ಯಾಗಗಳು ನಿರಂತರ ನಡೆಯಲಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ. ಗೋಪಾಲಯ್ಯ, ಶಾಸಕ
ಸಿ.ಕೆ. ರಾಮಮೂರ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ. ಲಕ್ಷ್ಮೀ ನಾರಾಯಣ ಮತ್ತಿತರರು ಹಾಜರಿದ್ದರು
[12/08, 6:08 PM] ExCm Ps: *ರೈತರ ದುಡಿಮೆಗೆ ಬೆಲೆ ಸಿಗುವಂತೆ ಸಹಕಾರಿ ಬ್ಯಾಂಕ್ ಕಾರ್ಯ ನಿರ್ವಹಿಸಬೇಕು: ಬಸವರಾಜ ಬೊಮ್ಮಾಯಿ*
ಹಾವೇರಿ: (ಶಿಗ್ಗಾವಿ) ರೈತರ ದುಡಿಮೆಗೆ ಬೆಲೆ ಸಿಗುವಂತೆ ಸಹಕಾರಿ ಬ್ಯಾಂಕ್ ಕಾರ್ಯ ನಿರ್ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಹೇಳಿದ್ದಾರೆ.
ಇಂದು ಧಾರವಾಡ ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ನ ಶಿಗ್ಗಾಂವಿ ಶಾಖೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ರೈತರ ಬದುಕು ಅನಿಶ್ಚಿತತೆಯಿಂದ ಕೂಡಿದೆ. ನಾವು ರೈತರ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ರೈತರ ಬದುಕಿನಲ್ಲಿ ಒಂದು ಸ್ಥಿರತೆ ಬರಬೇಕಾದರೆ ಕೃಷಿಯಲ್ಲಿ ಹೊಸ ಕ್ರಾಂತಿ ಆದಕಾರಣ ದೇಶದಲ್ಲಿ ಆಹಾರದ ಕೊರತೆ ನೀಗಿದ್ದು, ಆದ್ದರಿಂದ ನಮ್ಮ ದೇಶ ಸ್ವಾವಲಂಬಿಯಾಗಿ ಬೇರೆ ದೇಶಗಳಿಗೆ ಆಹಾರ ಒದಗಿಸಲು ನಮ್ಮ ರೈತ ಬಾಂದವರು ಕಾರಣ ಎಂದು ಹೇಳಿದರು.
ಸಹಕಾರಿ ರಂಗ ಬಹಳ ಮಹತ್ವದ ರಂಗ ಈ ಪ್ರಜಾಪ್ರಭುತ್ವದಲ್ಲಿ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಸಹಕಾರಿ ರಂಗ ಕಾರ್ಯನಿರ್ವಹಿಸುತ್ತದೆ. ಜನರ ದುಡುಮೆಗೆ ಬೆಲೆ ಸಿಗಬೇಕು. ರೈತರ ದುಡಿಮೆ ಬೆಲೆಸಿಗಬೇಕು ಆ ನಿಟ್ಟಿನಲ್ಲಿ ಸಹಕಾರಿ ಬ್ಯಾಂಕ ಕೆಲಸ ಮಾಡಲಿ ಎಂದರು.
ನಮ್ಮ ಸರಕಾರ ಶೂನ್ಯ ಬಡ್ಡಿದರಲ್ಲಿ ರೈತರಿಗೆ ಐದು ಲಕ್ಷದವರೆಗೂ ಸಾಲ ನೀಡಿದ್ದು ನಮ್ಮ ಸರಕಾರದ ಅವಧಿಯಲ್ಲಿ ಆವರ್ತನಿಧಿ ಒಂದು ಸಾವಿರ ಕೋಟಿ ಇತ್ತು. ಆದರೆ, ನಾನು ಬಜೆಟ್ ನಲ್ಲಿ ಮೂರು ಸಾವಿರಕ್ಕೆ ಕೋಟಿಗೆ ಏರಿಕೆ ಮಾಡಿದ್ದೇನೆ.
ಕಳೇದ ವರ್ಷದ ಬಜೆಟನಲ್ಲಿ ರೈತರಿಗೆ ಬೀಜ ಗೊಬ್ಬರ ಕೊಳ್ಳಲು ಹದಿನೈದು ಸಾವಿರ ಹಣವನ್ನು ಭೂಸಿರಿ ಯೋಜನೆ ನೀಡಿದ್ದೇವು. ಜೀವನ ಜ್ಯೋತಿ ಯೋಜನೆಗೆ ನಮ್ಮ ಸರಕಾರ ಹಣವನ್ನು ಇಟ್ಟಿತ್ತು. ಆದರೆ ಈಗೀನ ಸರಕಾರ ಅದನ್ನು ರದ್ದುಮಾಡಿದೆ. ಆ ಯೋಜನೆಯಿಂದ ರೈತರಿಗೆ ವಿಮೆ ನೀಡುವ ಉದ್ದೇಶದಿಂದ ಮಾಡಿರುವದನ್ನು ಈ ಸರಕಾರ ಕಿತ್ತುಕೊಂಡಿದೆ.
ರೈತ ವಿದ್ಯಾನಿಧಿ ಯೋಜನೆ ಕೂಡ ಸ್ಥಗಿತ ಆಗಿದೆ. ರೈತರ ಮಕ್ಕಳ ಅನುಕೂಲಕ್ಕಾಗಿ ರೈತವಿದ್ಯಾನಿದಿ ಯೋಜನೆ ಮುಂದುವರೆಸುವಂತೆ ಆಗ್ರಹಿಸಿದರು.
ಡಿಸಿಸಿ ಬ್ಯಾಂಕ್ ರೈತರ ಪರವಾಗಿ ಕೆಲಸ ಮಾಡಬೇಕು ಎಂದು ಡಿಸಿಸಿ ಬ್ಯಾಂಕ್ ನ ಸಿಂಬಂಧಿಗೆ ಕಿವಿ ಮಾತು ಹೇಳಿದರು.
ಅಲ್ಲದೇ, ಹಾವೇರಿಗೆ ಮೇಗಾ ಡೈರಿ ಸ್ಥಾಪಿಸಿ 100 ಕೋಟಿಗೂ ಹೆಚ್ಚು ಅನುದಾನ ನೀಡಿ ರೈತರಿಗೆ ಕ್ಷೀರ ಕ್ರಾಂತಿ ಮಾಡಿದ ಕಿರ್ತಿ ನಮ್ಮ ಸರಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದರು.
Post a Comment