ಮಾಲ್ಡೀವ್ಸ್ ರಕ್ಷಣೆಗೆ ಭಾರತ ಈ ಹಿಂದಿನ ಅಧ್ಯಕ್ಷರ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈಗ ಹೊಸ ಅಧ್ಯಕ್ಷ ಮೊಹಮ್ಮದ್ ಮುಯಿಝು ಎಲ್ಲಾ ಉಲ್ಟಾ ಮಾಡ್ತಿದ್ದು, ಅಲ್ಲಿ ಇರುವ ಭಾರತದ ಸೇನೆಯನ್ನ ಹೊರಗೆ ಹಾಕಲು ಕಾಯುತ್ತಿದ್ದಾರೆ. ಈ ಮೊದಲಿನಿಂದಲೂ ತಾವು ಭಾರತ ವಿರೋಧಿ ಎಂಬುದನ್ನ ಮೊಹಮ್ಮದ್ ಮುಯಿಝು ತೋರಿಸುತ್ತಾ ಬಂದಿದ್ದು ಈಗ ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.
ಹಳ್ಳಕ್ಕೆ ಬಿತ್ತಾ ಮಾಲ್ಡೀವ್ಸ್ ಆಡಳಿತ?
ಮಾಲ್ಡೀವ್ಸ್ ವಿಚಾರದಲ್ಲಿ ಭಾರತ ಮತ್ತು ಚೀನಾ ಪೈಪೋಟಿ ಹೊಸದಲ್ಲ ಆದ್ರೂ ಈ ಚುನಾವಣೆ ಭಾರತಕ್ಕೆ ಹಿನ್ನಡೆ ಉಂಟುಮಾಡಿದೆ. ಹಿಂದಿನ ಸರ್ಕಾರವು ಭಾರತದ ಪರವಾಗಿಯೇ ಇತ್ತು. ಈ ಕಾರಣಕ್ಕೆ ಭಾರತ ಮಾಲ್ಡೀವ್ಸ್ ಜೊತೆ ಉತ್ತಮ ಒಡನಾಟವನ್ನ ಹೊಂದಿತ್ತು. ರಕ್ಷಣಾ ಒಪ್ಪಂದ ಕೂಡ ವಿಸ್ತರಣೆ ಮಾಡಿತ್ತು. ಆದರೆ ಈಗ ಬೇರೆಯದ್ದೇ ರಾಜಕೀಯ ಮೇಲಾಟವು ಶುರುವಾಗಿದೆ. 5.21 ಲಕ್ಷ ಜನಸಂಖ್ಯೆ ಹೊಂದಿರುವ ಮಾಲ್ಡೀವ್ಸ್‌ಗೆ ಭಾರತ ಪ್ರಮುಖ ಶಸ್ತ್ರಾಸ್ತ್ರ ರಫ್ತು ಮಾಡುವ ದೇಶವಾಗಿದೆ. ಹೀಗೆ ಎಲ್ಲವೂ ಸರಿಯಿದ್ದಾಗ ಮಾಲ್ಡೀವ್ಸ್ ಖುದ್ದಾಗಿ ಹಳ್ಳಕ್ಕೆ ಬಿದ್ದಂತೆ ಕಾಣ್ತಿದೆ.
ಮಾಲ್ಡೀವ್ಸ್‌ಗೆ ಭಾರತ ಸಾಕಷ್ಟು ವಸ್ತು ಸರಬರಾಜು ಮಾಡುತ್ತೆ ಹೀಗೆ ರಫ್ತು ಮಾಡುವ ವಸ್ತು ಪೈಕಿ ಶಸ್ತ್ರಾಸ್ತ್ರಗಳು ಕೂಡ ಸೇರಿವೆ. ಕಳೆದ ಸಾಲಿನಲ್ಲಿ 2 ದೇಶಗಳ ನಡುವೆ, 498 ಮಿಲಿಯನ್ ಅಮೆರಿಕನ್ ಡಾಲರ್ ವ್ಯವಹಾರ ನಡೆದಿದೆ. ಈ ಪೈಕಿ ಬಹುತೇಕ ಮೊತ್ತವು ಶಸ್ತ್ರಾಸ್ತ್ರ ಖರೀದಿಗೆ ಖರ್ಚು ಮಾಡಲಾಗಿದೆ. ಇಷ್ಟೆಲ್ಲಾ ಒಡನಾಟ ಇದ್ದರೂ ಖುದ್ದು ಮಾಲ್ಡೀವ್ಸ್ ನೂತನ ಅಧ್ಯಕ್ಷ & ಚೀನಾ ಪರ ಒಲವು ಹೊಂದಿರುವ ಮೊಹಮ್ಮದ್ ಮುಯಿಝು ತಪ್ಪು ದಾರಿ ತುಳಿದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರೆ ಇದನ್ನೆಲ್ಲಾ ಭಾರತ ಈಗ ಹೇಗೆ ನಿಭಾಯಿಸಲಿದೆ? ಮಾಲ್ಡೀವ್ಸ್ ಜೊತೆಗೆ ಸಂಬಂಧ ಹೇಗೆ ಉಳಿಸಿಕೊಳ್ಳಲಿದೆ? ಎಂಬುದೇ ಯಕ್ಷ ಪ್ರಶ್ನೆಯಾಗಿದ
Post a Comment