ಅಡ್ವಾಂಟೇಜ್ ಸ್ವೀಟ್' ಹಡಗಿನ ಭಾರತೀಯ ನಾವಿಕರು ಇರಾನ್‌ನಿಂದ ಸುರಕ್ಷಿತವಾಗಿ ವಾಪಸ್

ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 10, 2023
7:19PM

'ಅಡ್ವಾಂಟೇಜ್ ಸ್ವೀಟ್' ಹಡಗಿನ ಭಾರತೀಯ ನಾವಿಕರು ಇರಾನ್‌ನಿಂದ ಸುರಕ್ಷಿತವಾಗಿ ವಾಪಸ್

ಫೈಲ್ ಚಿತ್ರ
ಒಮಾನ್ ಕೊಲ್ಲಿಯಲ್ಲಿ ವಶಪಡಿಸಿಕೊಂಡ ಅಡ್ವಾಂಟೇಜ್ ಸ್ವೀಟ್ ಹಡಗಿನ ಎಲ್ಲಾ 23 ಭಾರತೀಯ ನಾವಿಕರು ಸುರಕ್ಷಿತವಾಗಿ ಇರಾನ್‌ನಿಂದ ಭಾರತಕ್ಕೆ ಮರಳಿದ್ದಾರೆ. ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೊವಾಲ್ ಅವರು ಭಾರತೀಯ ರಾಷ್ಟ್ರೀಯ ನಾವಿಕರ ಕಲ್ಯಾಣ ಮತ್ತು ಹಕ್ಕುಗಳನ್ನು ಕಾಪಾಡಲು ಸಚಿವಾಲಯವು ಸಮರ್ಪಿತವಾಗಿದೆ ಎಂದು ಹೇಳಿದರು. ಈ ರಕ್ಷಣಾ ಕಾರ್ಯಾಚರಣೆಯು ಸರ್ಕಾರಿ ಏಜೆನ್ಸಿಗಳ ಸಮರ್ಪಣೆ ಮತ್ತು ಬದ್ಧತೆಗೆ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.
 
ಇರಾನ್ ಸರ್ಕಾರದ ಬೆಂಬಲದೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ನಿರಂತರ ಪ್ರಯತ್ನದ ಫಲವಾಗಿ ಈ ರಕ್ಷಣೆಯಾಗಿದೆ ಎಂದು ಸಚಿವಾಲಯ ಹೇಳಿದೆ.

Post a Comment

Previous Post Next Post