ಯೋಧ್ಯೆ: ದಶಕಗಳಿಂದ ಕಾಯುತ್ತಿದ್ದ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ದಿನಗಣನೆ ಶುರುವಾಗಿದ್ದು, ಅಯೋಧ್ಯೆ ಸಜ್ಜಾಗಿದೆ. ಜ.22 ರಂದು ಶ್ರೀರಾಮಲಲ್ಲಾ ದೇವರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವು ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ರಾಮಮಂದಿರ ಉದ್ಘಾಟನೆ ಸಹ ಇದೇ ಸಂದರ್ಭದಲ್ಲಿ ನಡೆಯಲಿದೆ.

ಕ್ರಿಸ್​ಮಸ್​ ಕೇಕ್​ನಲ್ಲಿ ಮೂಡಿತ್ತು ರಾಮಮಂದಿರ; ವಿಡಿಯೋ ವೈರಲ್

ಅತ್ಯಂತ ಪ್ರತಿಷ್ಠೆಯಿಂದ ನಿರ್ಮಾಣವಾಗುತ್ತಿರುವ ರಾಮಮಂದಿರ ಹಲವು ವೈಶಿಷ್ಟ್ಯ ಮತ್ತು ವಿಶೇಷತೆಗಳನ್ನು ಹೊಂದಿದೆ. ಭೂಕಂಪ ಸೇರಿ ಎಂತಹ ಅನಾಹುತ ಬಂದರೂ ದೇವಸ್ಥಾನ ಅಲುಗಾಡುವುದಿಲ್ಲ, ಅಷ್ಟೇ ಅಲ್ಲ, ಹಾಳಾಗುವುದಿಲ್ಲ. that remained intact for 2500 years

ಎಷ್ಟೇ ದೊಡ್ಡ ಪ್ರಾಕೃತಿಕ ವಿಕೋಪ ಬಂದರೂ 2,500 ವರ್ಷಗಳವರೆಗೆ ತಡೆದುಕೊಳ್ಳುವಂತೆ ಈ ದೇವಾಲಯವನ್ನು ವಿನ್ಯಾಸಗೊಳಿಸಲಾಗಿದೆ ಎಂದು ವಾಸ್ತುಶಿಲ್ಪಿ ಆಶಿಶ್ ಸೋಂಪುರ ಇತ್ತೀಚೆಗೆ ಹೇಳಿದ್ದಾರೆ. ಉತ್ತರ ಭಾರತದ ಸಂಸ್ಕೃತಿಯನ್ನು ಬಿಂಬಿಸುವ ನಾಗರ ಶೈಲಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಪ್ರಮುಖ ದೇವಾಲಯದ ಗರ್ಭ ಗುಡಿಯನ್ನು ಅಷ್ಟಭುಜಾಕೃತಿಯಲ್ಲಿ ವಿನ್ಯಾಸಗೊಳಿಸಲಾಗುತ್ತಿದ್ದು, ಈ ರೀತಿಯ ಗರ್ಭಗುಡಿ ಹೊಂದಿದ ದೇವಾಲಯಗಳು ಕಡಿಮೆ ಎಂದು ಸೋಂಪುರ ವಿವರಿಸಿದರು.

ದೇವಾಲಯದ ಶಿಖರವೂ ಅಷ್ಟಭುಜಾಕೃತಿಯಲ್ಲಿದೆ ಎಂದ ಅವರು, ಮುಖ್ಯ ದೇವಾಲಯದ ಸಂಕೀರ್ಣಕ್ಕೆ ಕಾರಿಡಾರ್‌ನಲ್ಲಿ 35-40 ಸಾವಿರ ಭಕ್ತಾದಿಗಳು ಹೋಗಬಹುದಾಗಿದೆ. ವೃದ್ಧರು, ಅಂಗವಿಕಲರಿಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ದೇವಾಲಯದ ಸಂಕೀರ್ಣದೊಳಗೆ ಕಡಿಮೆ ಕಟ್ಟಡಗಳು ಇರುತ್ತವೆ. ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರ ಮತ್ತು ಪ್ರಾರ್ಥನಾ ಮಂದಿರದಂತಹ ಇತರ ಸೌಲಭ್ಯಗಳನ್ನು ಹೊರಗೆ ಸ್ಥಾಪಿಸಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.

ನೇಪಾಳದಿಂದ ವಿಶೇಷ ಉಡುಗೊರೆ: ರಾಮ ಮಂದಿರದ ಉದ್ಘಾಟನೆಗೆ ನೇಪಾಳ ಹಲವು ವಿಶೇಷ ಉಡುಗೊರೆಗಳನ್ನು ಕಳುಹಿಸಲಿದೆ. ವಿವಿಧ ರೀತಿಯ ಆಭರಣಗಳು, ಪರಿಕರಗಳು, ಬಟ್ಟೆ ಮತ್ತು ಸಿಹಿತಿಂಡಿಗಳು ಒಳಗೊಂಡಿವೆ. ಜನಕಪುರಧಾಮ-ಅಯೋಧ್ಯಧಾಮ ಯಾತ್ರೆಯು ಜ.18ರಂದು ಆರಂಭವಾಗಲಿದ್ದು, ಜ.20ರ ವೇಳೆಗೆ ಅಯೋಧ್ಯೆ ತಲುಪಲಿದೆ. ಅದೇ ದಿನ, ಉಡುಗೊರೆಗಳನ್ನು ರಾಮಮಂದಿರ ಟ್ರಸ್ಟ್‌ಗೆ ಹಸ್ತಾಂತರಿಸಲಾಗುವುದು ಎಂದು ಜಾನಕಿ ದೇವಸ್ಥಾನದ ಮಹಂತ ರಾಮರೋಷನ್ ದಾಸ್ ವೈಷ್ಣವ್ ತಿಳಿಸಿದ್ದಾರೆ.

ಇನ್ನು ನೇಪಾಳದ ಕಾಳಿಗಂಡಕಿ ನದಿಯ ದಡದಿಂದ ಸಂಗ್ರಹಿಸಿದ ಸಾಲಿಗ್ರಾಮ ಕಲ್ಲುಗಳನ್ನು ಅಯೋಧ್ಯೆಯ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದ ಶ್ರೀರಾಮನ ವಿಗ್ರಹವನ್ನು ಮಾಡಲು ಅಯೋಧ್ಯೆಗೆ ಕಳುಹಿಸಲಾಗಿದೆ.

ಸಮಾಜವಾದಿ ಪಕ್ಷದವರಿಗೆ ಬೇಡ ಆಹ್ವಾನ: ಏತನ್ಮಧ್ಯೆ, ದೇವಾಲಯದ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಸುಭ್ರತಾ ಪಾಠಕ್ ಸಂವೇದನಾಶೀಲ ಕಾಮೆಂಟ್​ಗಳನ್ನು ಮಾಡಿದ್ದಾರೆ. ರಾಮಭಕ್ತರ ಮೇಲೆ ಗುಂಡಿನ ದಾಳಿ ನಡೆಸಿದ ಸಮಾಜವಾದಿ ಪಕ್ಷದ ನಾಯಕರಿಗೆ ಆಹ್ವಾನ ಕಳುಹಿಸದಂತೆ ರಾಮಮಂದಿರ ಟ್ರಸ್ಟ್‌ಗೆ ಪತ್ರ ಬರೆದಿದ್ದಾರೆ.

ಸಬ್​ ಕಾ ರಾಮ: ರಾಮ ಮಂದಿರ 'ಪ್ರಾಣ ಪ್ರತಿಷ್ಠಾ' ಸಮಾರಂಭದಲ್ಲಿ ಸರ್ವರನ್ನು ತಲುಪಲು ಆರ್​ಎಸ್​ಎಸ್​ ಪ್ಲ್ಯಾನ್

Post a Comment

Previous Post Next Post