ನವದೆಹಲಿ : ಕ್ಯಾಶ್ ಫಾರ್ ಕ್ವೆರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಸಮಿತಿಯ ಶಿಫಾರಸಿನ ಮೇರೆಗೆ ತೃಣಮೂಲ ಸಂಸದೆ ಮಹುವಾ ಮೊಯಿತ್ರಾ ಅವರನ್ನ ಸಂಸತ್ತಿನಿಂದ ಉಚ್ಚಾಟಿಸಲಾಗಿದೆ.
MC MP Mahua Moitra expelled from the Lok Sabha in 'cash for query' matter. Ethics Committee report was tabled in the House today.
ಅಂದ್ಹಾಗೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರನ್ನ ಉಚ್ಚಾಟಿಸಲು ಶಿಫಾರಸು ಮಾಡಿದ ವರದಿಯನ್ನು ಲೋಕಸಭಾ ನೈತಿಕ ಸಮಿತಿ ಶುಕ್ರವಾರ ಮಂಡಿಸಿದೆ.ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಮತ್ತು ನೈತಿಕ ಸಮಿತಿಯ ಅಧ್ಯಕ್ಷ ವಿನೋದ್ ಕುಮಾರ್ ಅವರು ನೀತಿ ಸಮಿತಿಯ ಮೊದಲ ವರದಿಯನ್ನ (ಹಿಂದಿ ಮತ್ತು ಇಂಗ್ಲಿಷ್ ಆವೃತ್ತಿಗಳು) ಮೇಜಿನ ಮೇಲೆ ಇಟ್ಟರು.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ಆರೋಪಗಳ ಬಗ್ಗೆ ತನಿಖೆ ನಡೆಸಿದ ನೈತಿಕ ಸಮಿತಿಯು ನವೆಂಬರ್ 9 ರಂದು ತನ್ನ 500 ಪುಟಗಳ ವರದಿಯನ್ನು ಅಂಗೀಕರಿಸಿದ್ದು, ಮೊಯಿತ್ರಾ ಅವರ "ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಘೋರ ಮತ್ತು ಕ್ರಿಮಿನಲ್ ನಡವಳಿಕೆ" ಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು 17 ನೇ ಲೋಕಸಭೆಯಿಂದ ಹೊರಹಾಕುವಂತೆ ಶಿಫಾರಸು ಮಾಡಿದೆ.
Post a Comment