ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವಂತ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಮಹತ್ವದ ಎರಡು ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ದೊರೆತಿದೆ.ಬಿಬಿಎಂಪಿ (2ನೇ ತಿದ್ದುಪಡಿ) ವಿಧೇಯವನ್ನು ಸರ್ಕಾರ ಮಂಡಿಸಿತ್ತು. ಈ ವಿಧೇಯಕಕ್ಕೆ ಅಂಗೀಕಾರ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಸ್ವತ್ತು ತೆರಿಗೆ, ತೆರಿಗೆ ಬಾಕಿ ವಸೂಲಿಗೆ ಸಂಬಂಧ ಪಟ್ಟ ಉಪ ಬಂಧನಗಳನ್ನು ಹಾಗೂ ಎಲ್ಲಾ ತೆರಿಗೆ ಸುಸ್ತಿದಾರರು, ತೆರಿಗೆ ನಿರ್ಧರಗಳು ಸೇರಿದಂತೆ ವಿವಿಧ ನಿಯಮಗಳು ಈ ವಿಧೇಯಕಕ್ಕೆ ಅಂಗೀಕಾರ ದೊರೆತ ನಂತ್ರ ಜಾರಿಯಾಗಲಿದೆ.
ಇನ್ನೂ ಚಾಣಕ್ಯ ವಿಶ್ವ ವಿದ್ಯಾನಿಲಯ (ತಿದ್ದುಪಡಿ) ವಿಧೇಯಕವನ್ನು ವಿಧಾನ ಸಭೆಯಲ್ಲಿ ಮಂಡಿಸಲಾಗಿತ್ತು. ಈ ತಿದ್ದುಪಡಿ ವಿಧೇಯಕಕ್ಕೂ ಅಂಗೀಕಾರ ದೊರೆತಿದೆ. ಚಾಣಕ್ಯ ವಿವಿ ಅಧಿನಿಯ 2021ರ ಪ್ರಕಾರ ಸರ್ಕಾರದ ಮೂಲಕ ವಿವಿಗೆ ಒಬ್ಬ ವಿಶೇಷ ತಜ್ಞರನ್ನು ನೇಮಕ ಮಾಡುವ ತಿದ್ದುಪಡಿ ವಿಧೇಯಕ ಇದಾಗಿದೆ. ಆಡಳಿತ ಮಂಡಳಿಗೆ ನಾಮ ನಿದರ್ಶನ ಮಾಡಲು ಈ ಬಿಲ್ ಮೂಲಕ ಅವಕಾಶ ನೀಡಲಾಗುತ್ತದೆ.
BREAKING: ಬೆಂಗಳೂರಿನ BGS ಆಸ್ಪತ್ರೆಗೆ ವಾಪಾಸ್ಸಾದ ನಟ ದರ್ಶನ್ | Actor Darshan
ALERT : ಸಾರ್ವಜನಿಕರೇ ಎಚ್ಚರ : ಮೊಬೈಲ್ ನಲ್ಲಿ ಈ `ಗೇಮ್' ಆಡಿದ್ರೆ ನಿಮ್ಮ ಖಾತೆಯಲ್ಲಿ ಹಣ ಖಾಲಿಯಾಗೋದು ಗ್ಯಾರಂಟಿ.!
Post a Comment