ಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ನಾಳೆ ಡಿಸೆಂಬರ್‌ 22ರಂದು ನಡೆಯಲಿದ್ದು, ಈ ದಿನ ಏನೆಲ್ಲ ಕಾರ್ಯಕ್ರಮಗಳು ನಡೆಯಲಿವೆ? ಯಾರೆಲ್ಲಾ ಅತಿಥಿಗಳು ಭಾಗವಹಿಸಲಿದ್ದಾರೆ ಎನ್ನುವುದರ ಮಾಹಿತಿ ಇಲ್ಲಿದೆ.


ಡಿಸೆಂಬರ್ 22 ರಂದು ಬೆಳಿಗ್ಗೆ 9.30 ರಿಂದ 11 ಗಂಟೆಯವರೆಗೆ ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ವಿಷಯದ ಬಗ್ಗೆ ಗೋಷ್ಠಿ ನಡೆಯಲಿದೆ.

ಅಮೆರಿಕಾದ ಅಮರನಾಥ ಗೌಡ ಅವರು ಅಧ್ಯಕ್ಷತೆ ವಹಿಸಲಿದ್ದು, ಬಹರೇನ್ ನ ಕಿರಣ್ ಉಪಾಧ್ಯಾಯ ಅವರು ಆಶಯ ನುಡಿ ಆಡಲಿದ್ದಾರೆ.


ವಿದೇಶದಲ್ಲಿರುವ ಕನ್ನಡಿಗರ ಸಮಸ್ಯೆಗಳು, ಪರಿಹಾರಗಳು ವಿಷಯದ ಬಗ್ಗೆ ಕತಾರ್‌ನ ಎಚ್.ಕೆ.ಮಧು ಅವರು, ಜಗತ್ತಿನ ರಾಷ್ಟ್ರಗಳಲ್ಲಿ ಮಾತೃಭಾಷೆಯನ್ನು ನೋಡುವ ಕ್ರಮ ವಿಷಯದ ಬಗ್ಗೆ ಇಂಗ್ಲೆಂಡ್ ನ ಅಶ್ವಿನ್ ಶೇಷಾದ್ರಿ, ಹೊರನಾಡಿನಲ್ಲಿ ಕನ್ನಡದ ಅಸ್ತಿತ್ವ, ಸವಾಲುಗಳು ವಿಷಯದ ಬಗ್ಗೆ ಮಹಾರಾಷ್ಟ್ರದ ಕಮಲಾಕರ ಕಡವೆ, ವಿದೇಶದಲ್ಲಿರುವ ಕನ್ನಡ ಶಾಲೆಗಳ ಸ್ಥಿತಿಗತಿಗಳು ವಿಷಯದ ಬಗ್ಗೆ ಯುಎಇ ಶಶಿಧರ ನಾಗರಾಜಪ್ಪ ಹಾಗೂ ಜರ್ಮನಿಯ ರಶ್ಮಿ ನಾಗರಾಜ್ ಅವರು ವಿಷಯ ಮಂಡನೆ ಮಾಡಲಿದ್ದಾರೆ.


ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚಿಸಿದರೆ ವಿಶೇಷ ಕಾಣಿಕೆ: ನೀವೂ ಭಾಗವಹಿಸಿ


ಕ.ಸಾ.ಪ ಅಂತರಾಷ್ಟ್ರೀಯ ಸಮನ್ವಯಾಧಿಕಾರಿ ನಿವೇದಿತ ಹಾವನೂರ - ಹೊನ್ನತ್ತಿ ಅವರು ವಿಶೇಷ ಉಪಸ್ಥಿತಿ ವಹಿಸಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆ - ಪೋಲೆಂಡ್ ನ ಪಂಚಾಕ್ಷರಿ ಎಲ್, ಸ್ವಾಗತ - ಕತಾರ್ ನ ಮಹೇಶ್ ಗೌಡ, ನಿರೂಪಣೆ - ಹಾಲೆಂಡ್ ನ ಲೀಲಾಧರ ಕೆ ಆರ್, ವಂದನಾರ್ಪಣೆ - ಆಸ್ಟ್ರೇಲಿಯಾದ ಸುನಯನಾ ಗಾಡಗೋಳಿ ಅವರು ನೆರವೇರಿಸಲಿದ್ದಾರೆ.


ಬೆಳಿಗ್ಗೆ 11 ರಿಂದ 12:30 ಗಂಟೆಯವರೆಗೆ ಸ್ತ್ರೀ ಎಂದರೆ ಅಷ್ಟೇ ಸಾಕೇ? ವಿಷಯದ ಬಗ್ಗೆ ಗೋಷ್ಠಿ ನಡೆಯಲಿದೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿ ಡಾ. ಹೇಮಾ ಪಟ್ಟಣಶೆಟ್ಟಿ ಅವರು ಆಶಯ ನುಡಿಯನ್ನಾಡಲಿದ್ದಾರೆ.


 


ಭ್ರೂಣ ಹತ್ಯೆ ವಿಷಯದ ಬಗ್ಗೆ ಸುಮತಿ ಜಿ, ವರ್ತಮಾನದ ತಲ್ಲಣಗಳು ವಿಷಯದ ಬಗ್ಗೆ ಡಾ ಶುಭಶ್ರೀ ಪ್ರಸಾದ್, ವಿವಾಹ ಮತ್ತು ಮರ್ಯಾದಾ ಹತ್ಯೆ ವಿಷಯದ ಬಗ್ಗೆ ಡಾ. ತಾರಿಣಿ ಶುಭದಾಯಿನಿ ಅವರು ವಿಷಯ ಮಂಡನೆ ಮಾಡಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆ - ರತ್ನಪ್ರಭಾ ವಿಶ್ವನಾಥ ಬೆಲ್ಲದ, ಸ್ವಾಗತ - ಪ್ರೊ ಮಲ್ಲಮ್ಮ ಆರ್. ರ್ಪಾಟೀಲ, ನಿರೂಪಣೆ - ಭಾರತಿ ಬಿ ಮುದಭಾವಿ, ವಂದನಾರ್ಪಣೆ - ಜೆ.ಲತಾ ಮುದ್ದು ಮೋಹನ್ ಅವರು ನೆರವೇರಿಸಲಿದ್ದಾರೆ.


ಮಧ್ಯಾಹ್ನ 12:30 ರಿಂದ 2.10 ಗಂಟೆಯವರೆಗೆ ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣ: ಸಾಧ್ಯತೆ ಮತ್ತು ಸವಾಲುಗಳು ವಿಷಯದ ಬಗ್ಗೆ ಗೋಷ್ಠಿ - 10 ನಡೆಯಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಎಲ್. ಎನ್. ಮುಕುಂದರಾಜ್ ಅವರು ಆಶಯ ನುಡಿಯನ್ನಾಡಲಿದ್ದಾರೆ.


ಡಾ ನಿರಂಜನಾರಾಧ್ಯ ವಿ. ಪಿ. ಅವರು ಸರ್ಕಾರಿ ಕನ್ನಡ ಶಾಲೆಗಳ ಇಂದಿನ ಸ್ಥಿತಿಗತಿಯ ಅವಲೋಕನ ವಿಷಯದ ಬಗ್ಗೆ, ಎಫ್. ಸಿ. ಚೇಗರಡ್ಡಿ ಅವರು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಸವಾಲುಗಳು, ಆನಂದ್ ಜಿ. ಅವರು ಸರ್ಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳಿಗೆ ವೃತ್ತಿ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳು ಹಾಗೂ ಸೋಮಣ್ಣ ಬೇವಿನ ಮರದ ಅವರು ಗಡಿ ಭಾಗದ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆ - ಚಂದ್ರಕಾಂತ, ಸ್ವಾಗತ - ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ನಿರೂಪಣೆ - ಡಾ. ಧನಂಜಯ ಕುಂಬ್ಳೆ, ವಂದನಾರ್ಪಣೆ - ಜೆ. ಕೆ. ತಳವಾರ ಅವರು ನೆರವೇರಿಸಲಿದ್ದಾರೆ.


ಮಧ್ಯಾಹ್ನ 3:30 ರಿಂದ 4:30 ಗಂಟೆಯವರೆಗೆ ಬಹಿರಂಗ ಅಧಿವೇಶನ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಬಿ. ಎಂ. ಪಟೇಲ್ ಪಾಂಡು ಅವರು ನಿರ್ಣಯ ಮಂಡನೆ ಮಾಡಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆ - ಕನ್ನಡ ಸಾಹಿತ್ಯ ಪರಿಷತ್ತಿನ ವ್ಯವಸ್ಥಾಪಕ ಪಾರ್ಶ್ವನಾಥ, ಸ್ವಾಗತ - ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ. ಭ. ರಾಮಲಿಂಗ ಶೆಟ್ಟಿ, ನಿರೂಪಣೆ - ಪ್ರೊ ಡಿ ಕೆ ನಟರಾಜ್, ವಂದನಾರ್ಪಣೆ - ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ ಪದ್ಮಿನಿ ನಾಗರಾಜು ಅವರು ನೆರವೇರಿಸಲಿದ್ದಾರೆ.


Mallika P Oneindia

source: oneindia.com

Post a Comment

Previous Post Next Post