ಕೆಐಎಡಿಬಿಯ ಇವರೇನು ಎಸ್ಟೇಟ್ ಏಜೆನ್ಸಿ ನಡೆಸುತ್ತಿದ್ದಾರಾ?ಕೆಐಎಡಿಬಿ ಸಿಎ ಸೈಟ್ ನೀಡುವ ವೇಳೆ ಸ್ವಜನಪಕ್ಷಪಾತ: ಛಲವಾದಿ ನಾರಾಯಣಸ್ವಾಮಿ ಆಕ್ಷೇಪ



ಸಂಘಟನೆಗಳ ಬೇಡಿಕೆ ಕುರಿತು ಸದನದಲ್ಲಿ ಪ್ರಸ್ತಾಪ-ವಿಜಯೇಂದ್ರ

ಬೆಳಗಾವಿ: ಇಲ್ಲಿ ವಿವಿಧ ಬೇಡಿಕೆ ಮುಂದಿಟ್ಟು ಹೋರಾಟ ಮಾಡುತ್ತಿರುವ ಸಂಘಟನೆಗಳ ಅಹವಾಲು, ಬೇಡಿಕೆ ಕುರಿತ ಮನವಿಪತ್ರಗಳನ್ನು ಸ್ವೀಕರಿಸಿದ್ದು, ಇವುಗಳ ಕುರಿತು ಸದನದಲ್ಲಿ ಪ್ರಸ್ತಾಪ ಮಾಡಲು ಪ್ರಯತ್ನಿಸುವುದಾಗಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಡಪದ ಅಪ್ಪಣ್ಣ ಸಮಾಜದ ಸ್ವಾಮೀಜಿಗಳು, ಮುಖಂಡರು ಬಂದಿದ್ದಾರೆ. ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ವಿಕಲಚೇತನರು, ಕಿವುಡರೂ ಬಂದಿದ್ದರು. ಅವರ ಮನವಿಯನ್ನೂ ಸ್ವೀಕರಿಸಿದ್ದೇನೆ ಎಂದು ತಿಳಿಸಿದರು.
ಪಿಯುಸಿ ಅತಿಥಿ ಉಪನ್ಯಾಸಕರಲ್ಲಿ ನೋವಿದೆ. 20-30 ವರ್ಷಗಳಿಂದ ಸೇವೆ ಮಾಡುತ್ತಿದ್ದರೂ ಅತಿಥಿ ಉಪನ್ಯಾಸಕರಿಗೆ ಭದ್ರತೆ ಇಲ್ಲ; ಕನಿಷ್ಠ 25 ಸಾವಿರದಿಂದ 30 ಸಾವಿರ ಗೌರವಧನ ಸಿಗಬೇಕೆಂಬ ಬೇಡಿಕೆ ಅವರದೂ ಇದೆ ಎಂದು ವಿವರಿಸಿದರು.
ಕೂಡು ಒಕ್ಕಲಿಗರ ಸಮುದಾಯದ ಬೇಡಿಕೆಗಳನ್ನು ಕುರಿತ ಮನವಿಯನ್ನೂ ಸ್ವೀಕರಿಸಿದ್ದೇನೆ. ಚರ್ಮಗಾರ ಸಮಾಜದ ಮನವಿಯನ್ನೂ ಸ್ವೀಕರಿಸಿದ್ದೇನೆ. ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು, ಶಾಸಕರಾದ ಹರೀಶ್ ಪೂಂಜ, ಶೈಲೇಂದ್ರ ಬೆಲ್ದಾಳೆ ಅವರು ಸೇರಿ ಬಂದಿದ್ದೇವೆ. ಇವರೆಲ್ಲರ ಧ್ವನಿಯಾಗಿ ಸದನದಲ್ಲಿ ಮಾತನಾಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.
ಅನ್ವರ್ ಮಾಣಿಪ್ಪಾಡಿ ಅವರು ನನ್ನ ಬಗ್ಗೆ ಹೇಳಿದ್ದನ್ನು ಒಪ್ಪಿ, ಆದರೆ, ಅವರ ವರದಿ ಒಪ್ಪುವುದಿಲ್ಲ ಎಂದರೆ ಅದು ದ್ವಿಮುಖ ನೀತಿಯಲ್ಲವೇ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಸವಾಲು ಹಾಕಿದ್ದೇನೆ ಎಂದು ನುಡಿದರು.
ನನ್ನ ಮೇಲಿನ ಆರೋಪ, ಅನ್ವರ್ ಮಾಣಿಪ್ಪಾಡಿ ವರದಿ, ಯಾರ್ಯಾರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೋ, ಅದೆಲ್ಲದರ ಸಮಗ್ರ ತನಿಖೆ ಆಗಬೇಕು. ವಕ್ಫ್‍ನಲ್ಲಿ ಲೂಟಿ ಹೊಡೆದವರು ಕಾಂಗ್ರೆಸ್ ಮುಖಂಡರು. ಸಿಬಿಐನಿಂದ ಇದೆಲ್ಲದರ ಸಮಗ್ರ ತನಿಖೆ ಆಗಬೇಕೆಂದು ನಾವು ಕೂಡ ಒತ್ತಾಯ ಮಾಡಿದ್ದೇವೆ ಎಂದು ಹೇಳಿದರು.




 (ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
 ಬಿಜೆಪಿ ಕರ್ನಾಟಕ
[17/12, 6:27 PM] Prashanth Bjp Media State Coordinator Prashanth Bjp. Media State. Coordinator. Abvp: 17-12-2024
ಗೆ, 
ಸಂಪಾದಕರು / ವರದಿಗಾರರು.
ಪ್ರಕಟಣೆಯ ಕೃಪೆಗಾಗಿ

ಕೆಐಎಡಿಬಿಯ ಇವರೇನು ಎಸ್ಟೇಟ್ ಏಜೆನ್ಸಿ ನಡೆಸುತ್ತಿದ್ದಾರಾ?

ಕೆಐಎಡಿಬಿ ಸಿಎ ಸೈಟ್ ನೀಡುವ ವೇಳೆ ಸ್ವಜನಪಕ್ಷಪಾತ: ಛಲವಾದಿ ನಾರಾಯಣಸ್ವಾಮಿ ಆಕ್ಷೇಪ

ಬೆಂಗಳೂರು: ಕೆಐಎಡಿಬಿ ಸಿಎ ಸೈಟ್ ನೀಡುವ ವೇಳೆ ಸ್ವಜನಪಕ್ಷಪಾತ ಆಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.
ಬೆಳಗಾವಿ ಸುವರ್ಣ ಸೌಧದ ಕೊಠಡಿ ಸಂಖ್ಯೆ 101ರಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಇಂದು ಚುಕ್ಕಿ ಗುರುತಿನ ಪ್ರಶ್ನೆಯನ್ನು ಸಚಿವ ಎಂ.ಬಿ.ಪಾಟೀಲರಿಗೆ ಕೇಳಿದ್ದರು. ಇದು ಕೆಐಎಡಿಬಿ ಕುರಿತ ಪ್ರಶ್ನೆಯಾಗಿತ್ತು. ಕೆಐಎಡಿಬಿಯಿಂದ ಸಿಎ ಸೈಟ್ ಹಂಚಿಕೆ ಮಾಡುವ ಸಂದರ್ಭದಲ್ಲಿ ಇಡೀ ರಾಜ್ಯದ ಉದ್ದಗಲಕ್ಕೆ 193 ಸೈಟ್‍ಗಳನ್ನು ಕೊಡಲು ಪತ್ರಿಕೆಯಲ್ಲಿ ಜಾಹೀರಾತು ಕೊಡಲಾಗಿತ್ತು ಎಂದು ತಿಳಿಸಿದರು.
283 ಅರ್ಜಿಗಳು ಬಂದಿದ್ದವು. ಕೇವಲ ಬೆಂಗಳೂರು ವಿಮಾನನಿಲ್ದಾಣದ ಆಸುಪಾಸಿನ ಅತಿ ಬೆಲೆಬಾಳುವ ಪ್ರದೇಶದ ಬೆಂಗಳೂರು ವಲಯ 1, 2, 3ರಲ್ಲಿ ಅರ್ಜಿಗಳು ಬಂದಿದ್ದು, 43 ಸೈಟ್‍ಗಳನ್ನಷ್ಟೇ ವಿತರಿಸಿದ್ದಾರೆ. ಇಲ್ಲಿ ಒಂದೇ ವಿಳಾಸದಲ್ಲಿ 4 ನಿವೇಶನಗಳನ್ನು ನೀಡಿದ್ದಾರೆ ಎಂದು ಆರೋಪಿಸಿದರು.
5.65 ಎಕರೆ ಜಾಗವನ್ನು ಮೆಸರ್ಸ್ ಎಡಿಯು ಇನ್‍ಫ್ರಾ ಪಾರ್ಟ್‍ನರ್‍ಶಿಪ್ ಸಂಸ್ಥೆಗೆ ನೀಡಿದ್ದು, ನಂಬರ್ 22, ಕೆಎಚ್‍ಬಿ ಕಾಲೊನಿ, ಸೋಲಾಪುರ್ ರೋಡ್, ಬಿಜಾಪುರ ವಿಳಾಸವುಳ್ಳ ಸಂಸ್ಥೆ ಅದಾಗಿದೆ ಎಂದರು. ಏರ್ ಕಾರ್ಗೊ ಕಾಂಪ್ಲೆಕ್ಸ್ ಉದ್ದೇಶಕ್ಕೆ ಇದನ್ನು ನೀಡಿದ್ದಾರೆ ಎಂದು ವಿವರಿಸಿದರು. 2.8 ಎಕರೆ ಜಾಗವನ್ನು ಮೆಸರ್ಸ್ ರೇಖಾ ಎಂಟರ್‍ಪ್ರೈಸಸ್ ಪಾರ್ಟ್‍ನರ್‍ಶಿಪ್ ಸಂಸ್ಥೆಗೆ 22, ಕೆಎಚ್‍ಬಿ ಕಾಲೊನಿ, ಸೋಲಾಪುರ್ ರೋಡ್, ಇವರಿಗೆ ಏರ್ ಕಾರ್ಗೊ ಕಾಂಪ್ಲೆಕ್ಸ್ ಉದ್ದೇಶಕ್ಕೆ ಜಾಗ ಕೊಡಲಾಗಿದೆ ಎಂದು ಟೀಕಿಸಿದರು.
7.75 ಎಕರೆ ಜಾಗವನ್ನು ಮೆಸರ್ಸ್ ಎಡಿಯು ಇನ್‍ಫ್ರಾ ಪಾರ್ಟ್‍ನರ್‍ಶಿಪ್ ಸಂಸ್ಥೆಗೆ ನೀಡಿದ್ದು, ನಂಬರ್ 22, ಕೆಎಚ್‍ಬಿ ಕಾಲೊನಿ, ಸೋಲಾಪುರ್ ರೋಡ್, ಬಿಜಾಪುರ (ವಿಜಯಪುರ) ಕೊಡಲಾಗಿದೆ. ಇದು ಕೂಡ ಏರ್ ಕಾರ್ಗೊ ಕಾಂಪ್ಲೆಕ್ಸ್ ಉದ್ದೇಶವನ್ನೇ ಹೊಂದಿದೆ. 1.44 ಎಕರೆ ಜಾಗವನ್ನು ಶುಭಾಹದ ಸಂತೋಷ್ ಗನಿ ಹೆಸರಿನಲ್ಲಿದ್ದರೂ ಇದು ಕೂಡ ಬಿಜಾಪುರದ ಕೆಎಚ್‍ಬಿ ಕಾಲೊನಿ ವಿಳಾಸವುಳ್ಳದ್ದಾಗಿದೆ ಎಂದು ಟೀಕಿಸಿದರು. ಇದನ್ನು ಟೆಕ್ನಿಕಲ್ ಇನ್‍ಸ್ಟಿಟ್ಯೂಟಿಗೆ ಕೊಟ್ಟಿದ್ದು, ಒಂದೇ ವಿಳಾಸದಲ್ಲಿ 4 ನಿವೇಶನ ಮಂಜೂರು ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಇನ್ನೊಂದು ಕೂಡ ಬಿಜಾಪುರದ್ದೇ ಆಗಿದೆ. 2.22 ಎಕರೆಯನ್ನು 3 ಸ್ಟಾರ್ ಹೋಟೆಲ್‍ಗಾಗಿ ಕೊಟ್ಟಿದ್ದಾರೆ. ಹೋಟೆಲ್ ಐಪಿಕಾನ್, ಮಾಲೀಕರು ಈಶ್ವರ ಸಂಗಪ್ಪ ಬದ್ರಿ ಎಂದಿದೆ. ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರು ಅಧ್ಯಕ್ಷರಿರುವ, ಪ್ರಿಯಾಂಕ್ ಖರ್ಗೆ ಅವರು ಟ್ರಸ್ಟಿ ಆಗಿರುವ, ಸಂಸದ ರಾಧಾಕೃಷ್ಣ, ರಾಹುಲ್ ಖರ್ಗೆಯವರು ಟ್ರಸ್ಟಿ ಆಗಿರುವ- ಅವರ ಮನೆಯವರೇ ಟ್ರಸ್ಟಿಗಳಾಗಿರುವ ಟ್ರಸ್ಟ್‍ಗೆ 5 ಎಕರೆ ಜಾಗವನ್ನು ಆರ್ ಆಂಡ್ ಡಿ ಸೆಂಟರ್, ಸೆಂಟರ್ ಆಫ್ ಎಕ್ಸಲೆನ್ಸ್ ಎಂಬ ಉದ್ದೇಶಕ್ಕೆ ಕೊಟ್ಟಿದ್ದರು ಎಂದು ವಿವರ ನೀಡಿದರು. ಇದರ ಹೆಸರು ಸಿದ್ಧಾರ್ಥ ವಿಹಾರ ಟ್ರಸ್ಟ್ ಎಂದರಲ್ಲದೆ, ನಾವು ಆರೋಪ ಮಾಡಿದ ಬಳಿಕ ಇದು ಕಾನೂನು ಬಾಹಿರ ಎಂಬ ಕಾರಣಕ್ಕೆ ಇವರು ಇದನ್ನು ವಾಪಸ್ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಸಿಎ ಸೈಟ್‍ಗಳನ್ನು ಟ್ರಸ್ಟ್‍ಗೆ, ಅಸೋಸಿಯೇಶನ್‍ಗೆ ಕೊಡಲಾಗುತ್ತದೆ. ಆದರೆ, ಸಿಎ ಸೈಟ್‍ಗಳನ್ನು ಸ್ವಂತಕ್ಕೆ ಕೊಡುವುದಿಲ್ಲ. ಇಲ್ಲಿ ಎಲ್ಲ ಕಂಪೆನಿಗಳಿಗೆ ಕೊಟ್ಟಿದ್ದಾರೆ ಎಂದ ಅವರು, ಏರ್ ಕಾರ್ಗೊ ಉದ್ದೇಶಕ್ಕೆ ಎಷ್ಟು ಜನರಿಗೆ ಕೊಡಲು ಸಾಧ್ಯ? ಎಲ್ಲ ಒಂದೇ ವಿಳಾಸ ಇದ್ದು, ಸಂಪೂರ್ಣ ಸ್ವಜನಪಕ್ಷಪಾತ ಆಗಿದೆ ಎಂದು ಆರೋಪಿಸಿದರು.
9.60 ಎಕರೆ ಜಾಗವನ್ನು ಅಪಾರ್ಟ್‍ಮೆಂಟ್ ನಿರ್ಮಾಣಕ್ಕೆ ಕೊಟ್ಟಿದ್ದಾರೆ. ಇದು ಬೆಂಗಳೂರಿನ ಜಿ.ಎನ್.ಮೂರ್ತಿ, ಸನ್ ಆಫ್ ಲೇಟ್ ಎನ್.ಗೋವಿಂದಯ್ಯ, ಬನಶಂಕರಿ ಕೆಮಿಕಲ್ಸ್ ಪ್ರೈವೆಟ್ ಲಿಮಿಟೆಡ್‍ಗೆ ಕೊಟ್ಟಿದ್ದಾರೆ. ಕೆಮಿಕಲ್ಸ್ ಫ್ಯಾಕ್ಟರಿಗೂ ಅಪಾರ್ಟ್‍ಮೆಂಟ್ ನಿರ್ಮಾಣಕ್ಕೂ ಏನು ಸಂಬಂಧ ಇದೆ ಎಂದು ಪ್ರಶ್ನೆಯನ್ನು ಮುಂದಿಟ್ಟರು.
1.20 ಎಕರೆ ಜಾಗವನ್ನು ಬೆಂಗಳೂರಿನಲ್ಲಿ ಸಿ.ಎಂ ಕೃಷ್ಣ, ಎಕೋಲೈಟ್ ಪ್ರಾಜೆಕ್ಟ್ ಸಂಸ್ಥೆಗೆ ಕೊಡಲಾಗಿದೆ. ಇವರಿಗೂ ಕೂಡ ಅಪಾರ್ಟ್‍ಮೆಂಟ್ ನಿರ್ಮಾಣಕ್ಕಾಗಿ ಜಾಗ ನೀಡಿದ್ದು, ಒಂದು ಲೇಔಟಿನಲ್ಲಿ ನೀವು ಎಷ್ಟು ಅಪಾರ್ಟ್‍ಮೆಂಟ್ ಮಾಡುತ್ತೀರಿ ಎಂದು ಪ್ರಶ್ನಿಸಿದರು. 
ಫ್ಲ್ಯಾಟ್ ನಂಬರ್ 101, ಪ್ಲೋಟ್ ನಂಬರ್ 410, ಮಾತೃಶ್ರೀ ನಗರ, ಮಿಯಾಪುರ, ಹೈದರಾಬಾದ್‍ನ ವಿಳಾಸವುಳ್ಳ ಹರಿತಾ ಲಾಜಿಸ್ಟಿಕ್ಸ್ ವೇರ್‍ಹೌಸ್ ಪ್ರೈವೆಟ್ ಲಿಮಿಟೆಡ್‍ಗೆ 10.64 ಎಕರೆಯನ್ನು ಸೆಲ್ಫ್ ಸಸ್ಟೈನೇಬಲ್ ಸ್ಮಾರ್ಟ್ ಆಫೀಸಿಗಾಗಿ ಹಾಗೂ ರೆಸಿಡೆನ್ಶಿಯಲ್ ಪ್ರಾಜೆಕ್ಟಿಗೆ ಕೊಟ್ಟಿದ್ದಾರೆ. ಇದು ಕೂಡ ಅಪಾರ್ಟ್‍ಮೆಂಟ್; ನೀವು ಸಿಎ ಸೈಟ್‍ಗಳನ್ನು ಸ್ಥಳೀಯರಿಗೆ ಕೊಡಬೇಕಿತ್ತು. ಅಮೆರಿಕದಲ್ಲಿ ಇರುವವರನ್ನು ಕರೆತಂದು ಅವರಿಗೆ ನೀವು ಕೆಐಎಡಿಬಿನಲ್ಲಿ ಹೂಡಿಕೆಗೆ ಅವಕಾಶ ಕೊಡಿ; ಜನರಿಗೆ ಒಳ್ಳೆಯದಾಗಲಿ. ಸಿಎ ಸೈಟುಗಳನ್ನು ಸ್ಥಳೀಯರಿಗೆ ಕೊಡಬೇಕಿತ್ತು ಎಂದರು.
ವೈಗೈ ಇನ್‍ವೆಸ್ಟ್‍ಮೆಂಟ್ ಪ್ರೈವೆಟ್ ಲಿಮಿಟೆಡ್‍ಗೆ 7.80 ಎಕರೆ ಜಾಗ ಕೊಟ್ಟಿದ್ದಾರೆ. ಬಾಗ್ಮನೆ ಟೆಕ್ ಪಾರ್ಕಿನಲ್ಲಿ ಇವರು ಇದ್ದು, ಆರ್ ಆಂಡ್ ಡಿ ಸೆಂಟರಿಗೆ ಎಂದು ತಿಳಿಸಿದ್ದಾರೆ. ಒಂದು ವಿಷಯಕ್ಕೆ ಒಂದು ಸೈಟ್ ಕೊಡಬೇಕಿತ್ತು. ಆದರೆ, ಒಂದೇ ವಿಷಯಕ್ಕೆ ಮೂರು- ನಾಲ್ಕು ಸಂಸ್ಥೆಗೆ ಕೊಟ್ಟಿದ್ದಾರೆ ಎಂದು ಟೀಕಿಸಿದರು. ಇದು ದಂಧೆ ಎಂದು ಆಕ್ಷೇಪಿಸಿದರು.
ಖರ್ಗೆ ಮತ್ತು ಕುಟುಂಬಕ್ಕೆ ಜಾಗ ಕೊಟ್ಟ ವಿಚಾರ ದೊಡ್ಡ ವಿಷಯವಾಗುವುದು ಬೇಡ ಎಂದು ವಾಪಸ್ ಕೊಟ್ಟಿದ್ದಾರೆ. ಎಂಎಸ್ ಐರವ್ ಎಂಟರ್‍ಪ್ರೈಸಸ್‍ನ ಶಿವಲಿಂಗೇಗೌಡರಿಗೆ ಅಪಾರ್ಟ್‍ಮೆಂಟ್‍ಗಳಿಗೆ ಜಾಗ ಕೊಡಲಾಗಿದೆ. ಕೈಗಾರಿಕಾ ಪ್ರದೇಶದಲ್ಲಿ ಇಂಥ ಮನೆಗಳ ನಿರ್ಮಾಣಕ್ಕೆ ಅವಕಾಶ ಕೊಟ್ಟಿದ್ದಕ್ಕೆ ಕಾರಣವೇನು ಎಂದು ಕೇಳಿದರು.
ಹಿಂದೆ ಎಕರೆಗೆ 3.60 ಕೋಟಿ ಇದ್ದ ಜಾಗದ ಬೆಲೆಯನ್ನು ಈಚೆಗೆ 2.50 ಕೋಟಿ ಮಾಡಿದ್ದರು. ಸೆಪ್ಟೆಂಬರ್ ಅಕ್ಟೋಬರ್‍ನಲ್ಲಿ ಬೇರೆ ಸೈಟಿಗೆ 5.60 ಕೋಟಿ ಎಂದು ನಮೂದಿಸಿದ್ದಾರೆ. ಕೆಐಎಡಿಬಿಯ ಇವರೇನು ಎಸ್ಟೇಟ್ ಏಜೆನ್ಸಿ ನಡೆಸುತ್ತಿದ್ದಾರಾ? ಜನರು ಅದನ್ನೇ ಮಾತನಾಡುವಂತಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕೆಐಎಡಿಬಿ ರಿಯಲ್ ಎಸ್ಟೇಟ್ ಕಚೇರಿಯಾಗಿದೆ ಎಂದು ಟೀಕಿಸಿದರು. ಇದೆಲ್ಲವನ್ನೂ ಕೇಳಿದರೆ ಹಾರಿಕೆಯ ಉತ್ತರ ಕೊಡುತ್ತಾರೆ ಎಂದು ದೂರಿದರು.



 (ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
 ಬಿಜೆಪಿ ಕರ್ನಾಟಕ
[17/12, 6:50 PM] Prashanth Bjp Media State Coordinator Prashanth Bjp. Media State. Coordinator. Abvp: 17-12-2024
ಗೆ, 
ಸಂಪಾದಕರು / ವರದಿಗಾರರು.
ಪ್ರಕಟಣೆಯ ಕೃಪೆಗಾಗಿ

ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕರಿಗೆ ವಿಶೇಷ ಅನುದಾನಕ್ಕೆ ಮನವಿ

ಬೆಳಗಾವಿ: ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕರ ಕ್ಷೇತ್ರಗಳಿಗೆ ವಿಶೇಷ ಅನುದಾನ ನೀಡುವಂತೆ ಕೋರುವ ಮನವಿಯನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಡುಪಿ ಕ್ಷೇತ್ರದ ಶಾಸಕ ಯಶ್‍ಪಾಲ್ ಎ.ಸುವರ್ಣ ಅವರ ನೇತೃತ್ವದಲ್ಲಿ ಸಲ್ಲಿಸಲಾಯಿತು.
ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ 1 ವರ್ಷ 7 ತಿಂಗಳು ಕಳೆದಿದ್ದು, 5ನೇ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಕ್ಷೇತ್ರದ ಜನರಿಗೆ ನೂತನವಾಗಿ ಆಯ್ಕೆಯಾದ ನಮ್ಮೆಲ್ಲ ಶಾಸಕರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳು, ನಿರ್ವಹಣಾ ಕಾಮಗಾರಿಗಳಿಗೆ ಜನರಿಂದ ದಿನಂಪ್ರತಿ ಮನವಿಗಳನ್ನು ಸ್ವೀಕರಿಸುತ್ತಿದ್ದೇವೆ ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ.
ನಾವು ಶಾಸಕರಾದಾಗಿನಿಂದ ಯಾವುದೇ ಗಮನಾರ್ಹ ಅನುದಾನ ಲಭಿಸಿಲ್ಲ. ಇದರಿಂದ ಜನರ ಆದ್ಯತೆಯ ಬೇಡಿಕೆಗಳು, ತುರ್ತು ಅಗತ್ಯಗಳು ಹಾಗೂ ಮೂಲಭೂತ ಸೌಕರ್ಯಗಳ ನಿರ್ವಹಣೆಗೆ ಮತ್ತು ಅಭಿವೃದ್ಧಿಯ ಕಾಮಗಾರಿಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಮನವಿ ಗಮನ ಸೆಳೆದಿದೆ.
ವಿವಿಧ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ 2023-24 ಮತ್ತು 2024-25ನೇ ಸಾಲಿಗೆ ತಲಾ ರೂ. 50 ಕೋಟಿ, ಒಟ್ಟಾರೆ ರೂ. 100 ಕೋಟಿ ಅನುದಾನ ಮಂಜೂರು ಮಾಡಿಸಿ, ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕೆಂದು ಕೋರಲಾಯಿತು.




 (ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
 ಬಿಜೆಪಿ ಕರ್ನಾಟಕ

Post a Comment

Previous Post Next Post