ಏನಿದು ಗರ್ಲ್ ಫ್ರೆಂಡ್ ಸ್ವ್ಯಾಪಿಂಗ್ ಅಂತೀರಾ ಹಾಗಿದ್ರೆ ಈ ಸ್ಟೋರಿಯನ್ನು ಮಿಸ್ ಮಾಡ್ದೆ ಪೂರ್ತಿ ಓದಿ.

ಎಸ್, ಹೊಸ ವರ್ಷ ಅಂದ ಕೂಡಲೇ ಪಾರ್ಟಿ, ಸೆಲೆಬ್ರೇಷನ್ ಇದ್ದೇ ಇದೆ. ಅದರಲ್ಲೂ ಇಂದಿನ ಯುವಕರು ಕೇಳ್ಬೇಕಾ ಮೋಜು ಮಸ್ತಿಯಲ್ಲಿ ಮುಂದಿರುತ್ತಾರೆ.

ಆದರೆ ನಗರದಲ್ಲಿ ಹೀಗೊಂದು ವಿಚಾರ ಬೆಳಕಿಗೆ ಬಂದಿದ್ದು, ಅದೇ ಗರ್ಲ್ ಫ್ರೆಂಡ್ ಸ್ವ್ಯಾಪಿಂಗ್ ಮ್ಯಾಟರ್. 'ಸ್ವಿಂಗರ್ಸ್' ಅನ್ನೋ ಹೆಸರಿನಲ್ಲಿ ಪಾರ್ಟಿಗೆ ಅಂತಾ ಕರೆದು ಪರಸ್ಪರ ಗರ್ಲ್ ಫ್ರೆಂಡ್ ಎಕ್ಸ್ ಚೇಂಜ್ ಮಾಡಿಕೊಳ್ಳೋ ಈ ದಂಧೆ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಹೌದು, ಯುವಕನೋರ್ವ ಪರಿಚಯಸ್ಥ ಯುವತಿಯನ್ನ ಪಾರ್ಟಿಗೆ ಅಂತ ಕರೆದು ಬಳಿಕ ಸ್ನೇಹಿತನ ಜೊತೆಗೆ ಸಹಕರಿಸುವಂತೆ ಬಲವಂತ ಮಾಡಿದ್ದಾನೆ. ಇದಕ್ಕೆ ಒಪ್ಪದಿದ್ದಕ್ಕೆ ಸ್ನೇಹಿತರ ಜೊತೆಗೆ ಸೇರಿ ಯುವತಿ ಮೇಲೆ ಅತ್ಯಾಚಾರ ನಡೆದಿದೆ.

ಇನ್ನೂ ನೊಂದ ಯುವತಿ ಘಟನೆ ಸಂಬಂಧ ಸಿಸಿಬಿಗೆ ದೂರು ನೀಡಿದ್ದು, ಕೂಡಲೇ ಅಲರ್ಟ್ ಆದ ಪೊಲೀಸರು ಕರಾಳ ದಂಧೆ ನಡೆಸುತ್ತಿದ್ದ ಕಾಮುಕರನ್ನು ಅರೆಸ್ಟ್ ಮಾಡಿದ್ದಾರೆ.

ಬಂಧಿತರನ್ನು ಹರೀಶ್,ಹೇಮಂತ್ ಎಂದು ಗುರುತಿಸಲಾಗಿದೆ. ಹರೀಶ್ ಎಂಬಾತ ಯುವತಿಯನ್ನ ಪರಿಚಯ ಮಾಡಿಕೊಂಡಿದ್ದ. ಅಲ್ಲದೇ ಆಕೆಯನ್ನ ಲೈಂಗಿಕವಾಗಿ ಬಳಸಿಕೊಂಡಿದ್ದ. ಜೋಡಿ ಹಕ್ಕಿಯಂತೆ ಎಲ್ಲಾ ಕಡೆ ಸುತ್ತಾಡಿದ್ದಾರೆ. ಬರುಬರುತ್ತಾ ಹರೀಶ್ ತನ್ನ ಅಸಲು ಮುಖ ತೋರಿಸಿದ್ದ.

ವಾಟ್ಸ್ ಗ್ರೂಪ್ ಮಾಡಿಕೊಂಡಿದ್ದ 'ಸ್ವಿಂಗರ್ಸ್' ಟೀಂ, ಬೆಂಗಳೂರು ಹೊರ ವಲಯದಲ್ಲಿ ಪಾರ್ಟಿ ಆಯೋಜನೆ ಮಾಡಿದ್ದರು. ಪಾರ್ಟಿಗೆ ಕಪಲ್ಸ್ ಜೊತೆಗೆ ಆಸಾಮಿಗಳು ತಮ್ಮ ಪ್ರಿಯತಮೆಯರನ್ನು ಪರಸ್ಪರ ಎಕ್ಸ್ ಚೇಂಜ್ ಮಾಡಿಕೊಳ್ಳುತ್ತಿದ್ದರು

ಅಷ್ಟೇ ಅಲ್ಲ ಒಬ್ಬನ ಗರ್ಲ್ ಫ್ರೆಂಡ್ ಜೊತೆಗೆ ಮತ್ತೊಬ್ಬ ಬೆಡ್ ಶೇರ್ ಮಾಡ್ತಿದ್ದ. ಇದೇ ರೀತಿ ಯುವತಿಯನ್ನ ಹರೀಶ್ ಎಂಬಾತ ಕೂಪಕ್ಕೆ ದೂಡಿದ್ದ. ಒಪ್ಪದಿದ್ದಾಗ ಸ್ನೇಹಿತರ ಜೊತೆಗೆ ಸೇರಿ ಅತ್ಯಾಚಾರ ಮಾಡಿದ್ದಾನೆ.

ಘಟನೆಯಿಂದ ಬೇಸತ್ತ ಯುವತಿ ಸಿಸಿಬಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಸಿಸಿಬಿ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳ ಮೊಬೈಲ್‌ ಪರಿಶೀಲನೆ ವೇಳೆ ಭಯಾನಕ‌ ಸತ್ಯ ಬಯಲಾಗಿದೆ. ಮೊಬೈಲ್ ನಲ್ಲಿ ಹತ್ತಾರು ಯುವತಿಯರ ಬೆತ್ತಲೆ ಫೋಟೊ ಪತ್ತೆಯಾಗಿದೆ. ಅಷ್ಟೇ ಅಲ್ಲ ಏಕಾಂತದಲ್ಲಿದ್ದ ವಿಡಿಯೋಗಳನ್ನು ಆರೋಪಿಗಳು ಮಾಡಿಟ್ಟುಕೊಂಡಿದ್ದರು.

ಅದೇ ವೀಡಿಯೋ ತೋರಿಸಿ ಯುವತಿಗೆ ಬ್ಲಾಕ್ ಮೇಲ್ ಮಾಡ್ತಿರೋದಾಗಿಯೂ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

ಒಟ್ಟಾರೆಯಾಗಿ ಇಂತಹ ನೀಚ ಕಾಮುಕರನ್ನು ನಂಬಿ ಪಾರ್ಟಿ, ಮೋಜು ಮಸ್ತಿ ಅಂತ ಹೋಗೋ ಹೆಣ್ಮಕ್ಕಳು ಸ್ವಲ್ಪ ಹುಷಾರಾಗಿದ್ದರೆ ನಿಮಗೆ ಒಳಿತು.

Post a Comment

Previous Post Next Post