ಜೈಪುರದಿಂದ ವಾಷಿಂಗ್ಟನ್‌ಗೆ ತೆರಳಿದ ಅಮೆರಿಕ ಉಪಾಧ್ಯಕ್ಷರು
ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಇಂದು ಬೆಳಿಗ್ಗೆ ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ವಾಷಿಂಗ್ಟನ್‌ಗೆ ತೆರಳಿದರು. ಶ್ರೀ ವ್ಯಾನ್ಸ್, ತಮ್ಮ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಸೋಮವಾರ ರಾತ್ರಿ ದೆಹಲಿಯಿಂದ ಜೈಪುರಕ್ಕೆ ಬಂದರು. ಅವರು ಅಂಬರ್ ಫೋರ್ಟ್ ಅರಮನೆಗೆ ಭೇಟಿ ನೀಡಿದರು ಮತ್ತು ಮಂಗಳವಾರ ಭಾರತ-ಯುಎಸ್ ಸಂಬಂಧದ ಕುರಿತು ಭಾಷಣ ಮಾಡಿದರು. ಅವರು ನಿನ್ನೆ ಆಗ್ರಾದ ತಾಜ್ ಮಹಲ್‌ಗೆ ಭೇಟಿ ನೀಡಿ ಮಧ್ಯಾಹ್ನ ಜೈಪುರಕ್ಕೆ ಮರಳಿದರು.
Post a Comment