ವಿಶೇಷ ಅಂದ್ರೆ ಈ ಬಾರಿ ಪಾಕಿಸ್ಥಾನ ವಿರುದ್ಧ ಯುದ್ಧ ಆರಂಭವಾದ್ರೆ ನಮ್ಮ ಕರುನಾಡಿನ ಹೆಮ್ಮೆ ಕಾರವಾರವೂ ನಿರ್ಣಾಯಕ ಪಾತ್ರವಹಿಸಿಲಿದೆ.

ವಿಶೇಷ ಅಂದ್ರೆ ಈ ಬಾರಿ ಪಾಕಿಸ್ಥಾನ ವಿರುದ್ಧ ಯುದ್ಧ ಆರಂಭವಾದ್ರೆ ನಮ್ಮ ಕರುನಾಡಿನ ಹೆಮ್ಮೆ ಕಾರವಾರವೂ ನಿರ್ಣಾಯಕ ಪಾತ್ರವಹಿಸಿಲಿದೆ.

ಅರಬ್ಬೀ ಸಮುದ್ರದ ಕಾವಲಿಗೆ ನಿಂತ ಐಎನ್ ಎಸ್ ವಿಕ್ರಾಂತ್
ಉಗ್ರರ ಸಂಹಾರಕ್ಕೆ ಯಾವ ಕ್ಷಣದಲ್ಲಾದ್ರೂ ಫರ್ಮಾನು ಹೊರಬೀಳಬಹುದು. ಹೀಗಾಗಿಯೇ ಭಾರತೀಯ ಸೇನೆಯ ಮೂರು ವಿಭಾಗಗಳೂ ಸರ್ವ ಸನ್ನದ್ಧವಾಗಿವೆ. ಕಾಶ್ಮೀರ ಗಡಿಯಲ್ಲಿ ಸೇನೆ ಜಮಾವಣೆ ಆಗ್ತಿದ್ರೆ ಇತ್ತ ರಫೇಲ್, ಸುಖೇಯ್ ಸೇರಿ ಎಲ್ಲ ಬಲಶಾಲಿ ವಿಮಾನಗಳು ಗಡಿಯಲ್ಲಿ ಗಸ್ತು ಕಾಯುತ್ತಿವೆ. ಇತ್ತ ನೌಕಾಪಡೆಯ ನೂರಾನೆ ಬಲದ ಭೀಮ ಅಂತಲೇ ಕರೆಸಿಕೊಳ್ಳೋ ಐಎನ್ ಎಸ್ ವಿಕ್ರಾಂತ್ ಕೂಡಾ ಟೊಂಕಕಟ್ಟಿ ನಿಂತಿದ್ದಾನೆ. ಅದೂ ಕೂಡಾ ನಮ್ಮ ಕರ್ನಾಟಕದ ಕಾರವಾರದಲ್ಲಿ ಅನ್ನೋದು ವಿಶೇಷ.

1500 ಕಿಲೋಮೀಟರ್ ದೂರಕ್ಕೆ ಸಿಡಿಯುತ್ತೆ ಕ್ಷಿಪಣಿ
ವಿಕ್ರಾಂತ್…ಭಾರತೀಯ ನೌಕಾಪಡೆಯ ನಂಬಿಕೆಯ ಬಲ ಭೀಮ…ಕುರುಕ್ಷೇತ್ರದ ಅಕ್ಷೋಹಿಣಿ ಸೈನ್ಯವಿದ್ದಂತೆ. 262 ಮೀಟರ್ ಉದ್ದ, 59 ಮೀಟರ್ ಅಗಲದ ವಿಕ್ರಾಂತ್ 45 ಸಾವಿರ ಟನ್ ತೂಕವಿದ್ದಾನೆ. ತನ್ನೊಡಲಲ್ಲಿ 40 ಯುದ್ಧ ವಿಮಾನಗಳನ್ನು ಹೊತ್ತು ಸಾಗುವ ಶಕ್ತಿವಂತ. ಇನ್ನು ವಿಕ್ರಾಂತ್ ನ ಶಕ್ತಿ ಹೆಚ್ಚಿಸಲು ನೌಕೆಯೊಳಗೆ 1.10 ಲಕ್ಷ ಹಾರ್ಸ್ ಪವರ್ ನ ಇಂಜಿನ್ ಗಳು ಕೆಲಸ ಮಾಡುತ್ತಿವೆ. ಅಷ್ಟೇ ಅಲ್ಲದೆ, ಮಿಗ್ 29, ಅಷ್ಟೇ ಯಾಕೆ ರಫೇಲ್ ವಿಮಾನವನ್ನೇ ತನ್ನ ಮೇಲ್ಮೈಯಿಂದ ಹಾರಿಸುವ ಮತ್ತು ಲ್ಯಾಂಡಿಂಗ್ ಮಾಡುವ ಸಾಮರ್ಥ್ಯ ಹೊಂದಿದೆ.

ಕಾರವಾರದಿಂದಲೇ ಸಿಡಿಯಲಿದೆಯಾ ಸಂಹಾರಿ ಕ್ಷಿಪಣಿ
ಅರಬ್ಬಿ ಸಮುದ್ರದ ಕಾವಲಿಗೆ ನಿಂತಿರುವ ವಿಕ್ರಾಂತ್ ಬಲು ದೊಡ್ಡ ಪರಾಕ್ರಮಿ. ಒಂದೊಮ್ಮೆ ಯುದ್ಧಕ್ಕೆ ಸಮ್ಮತಿ ಸಿಕ್ಕರೆ ನಮ್ಮ ಕಾರವಾರದಿಂದಲೇ ಐಎನ್ ಎಸ್ ವಿಕ್ರಾಂತ್ ಬಲಶಾಲಿ ಕ್ಷಿಪಣಿ ದಾಳಿ ನಡೆಸುತ್ತಾನೆ. 1500 ಕಿಲೋಮೀಟರ್ ವ್ಯಾಪ್ತಿ ತಲುಪುವ ಶಕ್ತಿ ಇರುವ ವಿಕ್ರಾಂತ್ ನ ಗುರಿಗೆ ಕೇವಲ 1,342 ಕಿ.ಮೀ ದೂರವಿರುವ ಕರಾಚಿ ಯಾವ ಲೆಕ್ಕ. ಈ ಕ್ಷಿಪಣಿ ದಾಳಿಯಾದರೆ ಸಮಸ್ತ ಕರಾಚಿಯೇ ಸರ್ವನಾಶವಾಗಿ ಬಿಡಬಲ್ಲದು. ಈ ಸತ್ಯ, ಅರೆತಿರುವ ಪಾಕ್ ಈಗಾಗಲೇ ಬೆಚ್ಚಿ ಬಿದ್ದಿದೆ. ಭಾರತಕ್ಕೆ ಕೇವಲ ವಿಕ್ರಾಂತ್ ಮಾತ್ರವಲ್ಲ ಐಎನ್ ಎಸ್ ಕೋಲ್ಕತ್ತಾ, ಐಎನ್ ಎಸ್ ವಿಶಾಖಪಟ್ಟಣಂ, ಐಎನ್ ಎಸ್ ಚೆನ್ನೈ ನಂಥಾ ಹತ್ತಾರು ಭೀಮಸೇನರಿದ್ದಾರೆ. ಆದರೆ, ನಿಜಕ್ಕೂ ಪಾಕ್ ವಿರುದ್ಧ ಪ್ರತೀಕಾರದ ಹೆಜ್ಜೆ ಇಟ್ಟರೆ, ಐಎನ್ ಎಸ್ ವಿಕ್ರಾಂತ್ ನ ಪಾತ್ರ ಬಲುದೊಡ್ಡದಿರಲಿದೆ. ಅದಲ್ಲದೆ ಈ ಐತಿಹಾಸಕ ಸಾಧನೆಗೆ ಕನ್ನಡದ ಮಣ್ಣು ಸಾಕ್ಷಿಯಾಗಲಿರೋದು ಮತ್ತೊಂದು ಮೈಲಿಗಲ್ಲೇ ಸರಿ.

Post a Comment

Previous Post Next Post