ಪಾಕ್‌ ನಾಯಕರ ಸ್ವಾರ್ಥಕ್ಕೆ ದೇಶ ಬಲಿ..imran Khan

ಆದರೆ ಈ ಎಲ್ಲದರ ನಡುವೆಯೇ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ತಮ್ಮದೇ ದೇಶದ ನಾಯಕರನ್ನು ಟೀಕಿಸುವ ಮೂಲಕ ಪಾಕಿಸ್ತಾನದ ಆಂತರಿಕ ಕಚ್ಚಾಟವನ್ನು ಬಯಲಿಗೆ ತಂದಿದ್ದಾರೆ.

ಪಾಕ್‌ ನಾಯಕರ ಸ್ವಾರ್ಥಕ್ಕೆ ದೇಶ ಬಲಿ..

ನವಾಜ್ ಷರೀಫ್ ಮತ್ತು ಆಸಿಫ್ ಜರ್ದಾರಿ ಅವರಂತಹ ಸ್ವಾರ್ಥ ವ್ಯಕ್ತಿಗಳಿಂದ ಯಾವುದೇ ಬಲವಾದ ನಿಲುವನ್ನು ನಿರೀಕ್ಷಿಸುವುದು ಮೂರ್ಖತನ. ಅವರ ಅಕ್ರಮ ಸಂಪತ್ತು ಮತ್ತು ವ್ಯಾಪಾರ ಹಿತಾಸಕ್ತಿಗಳು ವಿದೇಶಗಳಲ್ಲಿ ಇರುವುದರಿಂದ ಅವರು ಭಾರತದ ವಿರುದ್ಧ ಎಂದಿಗೂ ಮಾತನಾಡುವುದಿಲ್ಲ. ಅವರು ವಿದೇಶಿ ಹೂಡಿಕೆಗಳಿಂದ ಲಾಭ ಪಡೆಯುತ್ತಾರೆ, ಆ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು, ವಿದೇಶಿ ಆಕ್ರಮಣ ಮತ್ತು ಪಾಕಿಸ್ತಾನದ ವಿರುದ್ಧದ ಆಧಾರರಹಿತ ಆರೋಪಗಳ ಮುಂದೆ ಅವರು ಮೌನವಾಗಿರುತ್ತಾರೆ. ಅವರ ಭಯದಲ್ಲಿ ತಪ್ಪಿಲ್ಲ, ಭಾರತದಿಂದ ಲಾಭ ಪಡೆಯುವ ಜನರು ಸತ್ಯವನ್ನು ಮಾತನಾಡಲು ಧೈರ್ಯ ಮಾಡಿದರೆ ಅವರ ಕಡಲಾಚೆಯ ಆಸ್ತಿಗಳಿಗೆ ತೊಂದರೆಯಾಗಬಹುದು ಎಂಬ ಭಯ ಇವರಿಗಿದ ಎಂದು ಇಮ್ರಾನ್‌ ಖಾನ್‌ ರೊಚ್ಚಿಗೆದ್ದಿದ್ದಾರೆ.

ಆಂತರಿಕ ವಿಭಜನೆ ಸಾಮೂಹಿಕ ಒಗ್ಗಟ್ಟು ಬಲಹೀನ..!

ಹೊರಗಿನ ಶತ್ರುವಿನ ವಿರುದ್ಧದ ಯುದ್ಧವನ್ನು ಗೆಲ್ಲಲು, ರಾಷ್ಟ್ರವು ಮೊದಲು ಒಗ್ಗಟ್ಟಾಗಿರಬೇಕು ಎಂದು ಹೇಳಬೇಕಾಗಿಲ್ಲ. ರಾಷ್ಟ್ರವನ್ನು ಒಡೆಯುವ ಎಲ್ಲಾ ಕ್ರಿಯೆಗಳನ್ನು ನಿಲ್ಲಿಸುವ ಸಮಯ ಇದು. ಈ ನಿರ್ಣಾಯಕ ವೇಳೆಯಲ್ಲಿ ರಾಜಕೀಯದ ಪರಿಣಾಮದಿಂದ ಬಲಿಯಾದವರ ಮೇಲೆ ರಾಜ್ಯಗಳು ಅತಿಯಾದ ಗಮನ ಹರಿಸುವುದರಿಂದ ಆಂತರಿಕ ವಿಭಜನೆಗಳು ಹೆಚ್ಚಾಗುತ್ತಿವೆ. ಇದರಿಂದ ಬಾಹ್ಯ ಬೆದರಿಕೆಗಳನ್ನು ಎದುರಿಸುವ ರಾಷ್ಟ್ರದ ಸಾಮೂಹಿಕ ಸಾಮರ್ಥ್ಯವನ್ನು ಈ ನೀತಿ ದುರ್ಬಲಗೊಳಿಸುತ್ತಿದೆ ಎಂದು ಪಾಕ್‌ ನಾಯಕರಿಗೆ ಎಚ್ಚರಿಸುವುದರ ಜೊತೆಗೆ, ಪಾಕ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಶ್ಮೀರಿಗರು ಸ್ವಾತಂತ್ರ್ಯ ಬಯಸುತ್ತಿದ್ದಾರೆ..

ಅಲ್ಲದೆ ಭಾರತದ ವಿರುದ್ಧ ಬಾಯಿ ಬಡಿದುಕೊಂಡಿರುವ ಖಾನ್‌, ಫಾಲ್ಸ್ ಫ್ಲ್ಯಾಗ್ ಪುಲ್ವಾಮಾ ಘಟನೆ ಸಂಭವಿಸಿದಾಗ, ನಾವು ಭಾರತಕ್ಕೆ ಸಂಪೂರ್ಣ ಸಹಕಾರವನ್ನು ನೀಡಲು ಮುಂದಾಗಿದ್ದೇವು, ಆದರೆ ಭಾರತವು ಯಾವುದೇ ಸೂಕ್ತವಾದ ಪುರಾವೆಗಳನ್ನು ನೀಡಲು ವಿಫಲವಾಗಿದೆ. 2019 ರಲ್ಲಿ ನಾನು ಊಹಿಸಿದಂತೆ, ಪಹಲ್ಗಾಮ್ ಘಟನೆಯ ನಂತರವೂ ಈಗಲೂ ಹೀಗೆ ಆಗುತ್ತಿದೆ. ಆತ್ಮಾವಲೋಕನ ಮತ್ತು ತನಿಖೆಯ ಬದಲು, ಮೋದಿ ಸರ್ಕಾರ ಮತ್ತೆ ಪಾಕಿಸ್ತಾನದ ಮೇಲೆ ಆರೋಪ ಹೊರಿಸುತ್ತಿದೆ. ಆರ್‌ಎಸ್‌ಎಸ್ ಸಿದ್ಧಾಂತದ ನೇತೃತ್ವ ಹೊಂದಿರುವ ಭಾರತವು ಈ ಕಾಶ್ಮೀರಕ್ಕೆ ಮಾತ್ರವಲ್ಲದೆ ಅದರಾಚೆಗೂ ಗಂಭೀರ ಬೆದರಿಕೆಯಾಗಿದೆ ಎಂಬ ಅಂಶವನ್ನು ನಾನು ಎತ್ತಿ ತೋರಿಸುತ್ತಿದ್ದೇನೆ. 370 ನೇ ವಿಧಿಯನ್ನು ಅಕ್ರಮವಾಗಿ ರದ್ದುಗೊಳಿಸಿದ ನಂತರ ಕಾಶ್ಮೀರದಲ್ಲಿ ಭಾರತೀಯ ದಬ್ಬಾಳಿಕೆ ತೀವ್ರಗೊಂಡಿದ್ದು, ಇದು ಕಾಶ್ಮೀರಿ ಜನರ ಸ್ವಾತಂತ್ರ್ಯದ ಆಸೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಇಮ್ರಾನ್‌ ಖಾನ್‌ ಬೊಗಳಿದ್ದಾನೆ.

ಮೋದಿ ಯುದ್ಧೋನ್ಮಾದ ಶಾಂತಿಗೆ ಧಕ್ಕೆ..

ದುಃಖಕರವೆಂದರೆ, ಮೋಸದ ಫಾರ್ಮ್ -47 ಫಲಿತಾಂಶಗಳ ಮೂಲಕ ಹೇರಲಾದ ಕಾನೂನುಬಾಹಿರ ಸರ್ಕಾರದಿಂದ ರಾಷ್ಟ್ರವು ವಿಭಜನೆಯಾಗಿದೆ. ಆದರೂ, ವಿಪರ್ಯಾಸವೆಂದರೆ, ನರೇಂದ್ರ ಮೋದಿಯವರ ಆಕ್ರಮಣವು ಭಾರತದ ಹಗೆತನದ ವಿರುದ್ಧ ಪಾಕಿಸ್ತಾನದ ಜನರನ್ನು ಏಕ ಧ್ವನಿಯಲ್ಲಿ ಒಗ್ಗೂಡಿಸಿದೆ. ಈ ನಕಲಿ ಆಡಳಿತವನ್ನು ನಾವು ತಿರಸ್ಕರಿಸುತ್ತಿದ್ದರೂ, ನಾವು ಒಂದೇ ಪಾಕಿಸ್ತಾನಿ ರಾಷ್ಟ್ರವಾಗಿ ದೃಢವಾಗಿ ನಿಲ್ಲುತ್ತೇವೆ ಮತ್ತು ಮೋದಿಯವರ ಯುದ್ಧೋನ್ಮಾದ ಮತ್ತು ಪ್ರಾದೇಶಿಕ ಶಾಂತಿಗೆ ಧಕ್ಕೆ ತರುವ ಅವರ ಅಪಾಯಕಾರಿ ಮಹತ್ವಾಕಾಂಕ್ಷೆಗಳನ್ನು ಬಲವಾಗಿ ಖಂಡಿಸುತ್ತೇವೆ ಎಂದು ಅವನು ಭಂಡತನದ ಮಾತುಗಳನ್ನಾಡಿದ್ದಾನೆ.

1.5 ಬಿಲಿಯನ್ ಜನರ ದೇಶವಾಗಿರುವುದರಿಂದ, ಭಾರತವು ಈಗಾಗಲೇ ಪರಮಾಣು ಫ್ಲ್ಯಾಷ್‌ಪಾಯಿಂಟ್ ಎಂದು ಕರೆಯಲ್ಪಡುವ ದೇಶದೊಂದಿಗೆ ಗೊಂದಲಕ್ಕೀಡಾಗುವ ಬದಲು ಜವಾಬ್ದಾರಿಯುತವಾಗಿ ವರ್ತಿಸಬೇಕಾಗಿದೆ. ಶಾಂತಿ ನಮ್ಮ ಆದ್ಯತೆಯಾಗಿದೆ ಆದರೆ ಅದನ್ನು ಹೇಡಿತನ ಎಂದು ತಪ್ಪಾಗಿ ಭಾವಿಸಬಾರದು. 2019 ರಲ್ಲಿ ಇಡೀ ರಾಷ್ಟ್ರದ ಬೆಂಬಲದೊಂದಿಗೆ ನನ್ನ ಸರ್ಕಾರ ಮಾಡಿದಂತೆ, ಯಾವುದೇ ಭಾರತೀಯ ದುಸ್ಸಾಹಸಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವ ಎಲ್ಲಾ ಸಾಮರ್ಥ್ಯಗಳನ್ನು ಪಾಕಿಸ್ತಾನ ಹೊಂದಿದೆ ಎಂದು ಹೇಳಿದ್ದಾನೆ. ಇನ್ನೂ ಮುಖ್ಯವಾಗಿ ಪ್ರಧಾನಿಯಾಗಿದ್ದ ಈ ಇಮ್ರಾನ್‌ ಖಾನ್‌ ಮಾಡಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಕಂಬಿ ಹಿಂದೆ ಇರುವ ಇಮ್ರಾನ್‌ ಖಾನ್‌ ತನ್ನ ವಕೀಲರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಭಾರತದ ವಿರುದ್ಧ ಬುಸುಗುಡುವ ವ್ಯರ್ಥ ಪ್ರಯತ್ನ ಮಾಡಿದ್ದಾನೆ.

Post a Comment

Previous Post Next Post