ಈ ಬಾರಿ ಒಟ್ಟು 22 ಮಂದಿ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಗಳಿಸಿದ್ದಾರೆ. ದೇವನಹಳ್ಳಿಯ ಸಿ. ಭಾವನಾ, ಮಾಗಡಿ ಮೇನ್ ರೋಡ್ ನ ಧನಲಕ್ಷ್ಮಿ ,ಮೈಸೂರಿನ ಧನುಷ್, ಗಿರಿನಗರದ ಜಾಹ್ನವಿ, ಮಲ್ಲೇಶ್ವರದ ಮಧುಸೂಧನ್ ಹಾಗೂ ಕಲ್ಯಾಣ ನಗರದ ನಮಿತಾ ಅತಿ ಹೆಚ್ಚು ಅಂಕ ಗಳಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಶೇ 62.7 ರಷ್ಟು ಫಲಿತಾಂಶ ಬಂದಿದ್ದು, ಅನುದಾನಿತ ಶಾಲೆಗಳಲ್ಲಿ ಶೇ 58 ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಶೇ 75 ರಷ್ಟು ಫಲಿತಾಂಶ ಬಂದಿದೆ.
ಎಂದಿನಂತೆ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದು ಶೇ 74 ರಷ್ಟು ವಿದ್ಯಾರ್ಥಿನಿಯರು, ಶೇ 58 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.
625/625 ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ 22, 624 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 65 ಹಾಗೂ 623 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 108 ಆಗಿದೆ. 189 ವಿದ್ಯಾರ್ಥಿಗಳು 622 ಅಂಕ ಪಡೆದಿದ್ದಾರೆ.
Post a Comment