[16/01, 8:55 AM] Pandit Venkatesh. Astrologer. Kannada: ಭಕ್ತಿ
ದೇವರು ನಿಷ್ಕಲ್ಮಶ ಭಕ್ತಿಯುಳ್ಳ ಭಕ್ತನಿಗೇ ದಾಸನಾಗುತ್ತಾನೆ.....
ಒಮ್ಮೆ ಅರ್ಜುನನು ಕೃಷ್ಣನ ತೊಡೆಯ ಮೇಲೆ ಮಲಗಿ ನಿದ್ದೆ ಮಾಡುತ್ತಿರುತ್ತಾನೆ. ಮಲಗಿದ ಅರ್ಜುನನಿಗೆ ಶ್ರೀಕೃಷ್ಣ ಮೃದುವಾಗಿ ತಟ್ಟುತ್ತಾ ಹಾಡನ್ನು ಹೇಳುತ್ತಿರುತ್ತಾನೆ. ಅಷ್ಟೇ ಅಲ್ಲ ಅರ್ಜುನನ ಕಾಲನ್ನು ನವಿರಾಗಿ ಮೆತ್ತಗೆ ಒತ್ತುತ್ತಿರುತ್ತಾನೆ.
ಅದೇ ಸಂದರ್ಭದಲ್ಲಿ ನಾರದ ಮಹರ್ಷಿ ಅತ್ತ ಸಾಗುತ್ತಿರುತ್ತಾನೆ. ಈ ದೃಶ್ಯವನ್ನು ಕಂಡು ಆಶ್ಚರ್ಯವಾಗುವುದರ ಜೊತೆಗೆ ಅವರಿಗೆ ಕೋಪವೂ ಬರುತ್ತದೆ.
ಶ್ರೀಮನ್ನಾರಾಯಣನ ಅಪರಿಮಿತ ಅಂತರಂಗದ ಭಕ್ತ ನಾನಲ್ಲದೇ ಮತ್ಯಾರು ಆಗಲು ಸಾಧ್ಯ? ಎಂದುಕೊಳ್ಳುತ್ತಾನೆ.
ಶ್ರೀಕೃಷ್ಣ ಅರ್ಜುನನ ಮೇಲೆ ತೋರಿಸುತ್ತಿರುವ ಪ್ರೀತಿಯನ್ನು ನಾರದರಿಂದ ಸಹಿಸಲು ಆಗುವುದಿಲ್ಲ. ನಾರದನ ಮನಸ್ಥಿತಿಯನ್ನು ಅರಿತ ಶ್ರೀಕೃಷ್ಣ
ಯಾವುದೇ ಶಬ್ದ ಮಾಡದಂತೆ ತನ್ನ ಬಳಿ ಬರುವಂತೆ ಸೂಚಿಸುತ್ತಾನೆ. ಕೃಷ್ಣನ ಬಳಿ ಬಂದ ನಾರಾದರಿಗೆ ಕೆಳಗೆ ಬಿದ್ದ ಅರ್ಜುನನ ಒಂದು ಕೂದಲನ್ನು ತೆಗೆದುಕೊಳ್ಳುವಂತೆ
ಶ್ರೀಕೃಷ್ಣ ಸೂಚಿಸುತ್ತಾನೆ. ನಾರದನಿಗೆ ಮತ್ತೂ ಕೋಪ ಬರುತ್ತದೆ. ಇದೇನು ಶ್ರೀಕೃಷ್ಣ ಪದೇ ಪದೇ ನನ್ನನ್ನು ಅವಮಾನಿಸುತ್ತಿದ್ದಾನಲ್ಲಾ?ದೇವರ್ಷಿಯಾದ ನಾನೆಲ್ಲಿ?ಯಃಕಶ್ಚಿತ್ ಮನುಷ್ಯನಾದ ಅರ್ಜುನನಲ್ಲಿ? ದೇವ ಮಾನವನಾದ ನಾನು ಹುಲು ಮಾನವನ ಕೂದಲನ್ನು ಮುಟ್ಟುವುದೇ? ಥೂ ಅಸಹ್ಯ ಎಂದುಕೊಳ್ಳುತ್ತಾನೆ. ಆದರೆ ಕೃಷ್ಣ ಮತ್ತೆ ನಾರದನಿಗೆ ಸನ್ನೆಯ ಮೂಲಕ ಆ ಕೂದಲನ್ನು ತೆಗೆದುಕೊಂಡು ನಿನ್ನ ಕಿವಿಯಲ್ಲಿ ಇಟ್ಟುಕೋ ಎನ್ನುತ್ತಾನೆ. ತುಂಬಾ ಅಸಹ್ಯದಿಂದಲೇ ನಾರದ ಕೆಳಗೆ ಬಿದ್ದ ಅರ್ಜುನನ ಕೂದಲನ್ನು ಕೈಗೆತ್ತಿಕೊಂಡು ತನ್ನ ಕಿವಿಯ ಮೇಲೆ ಇಟ್ಟುಕೊಳ್ಳುತ್ತಾನೆ. ರೋಮವು ಕೃಷ್ಣ ಕೃಷ್ಣ, ಕೃಷ್ಣ: ಎಂದು ಹೇಳುತ್ತಿರುವುದನ್ನು ಕೇಳಿದ ನಾರದ ತಬ್ಬಿಬ್ಬಾಗುತ್ತಾನೆ. ನಂತರ ನಾರದನಿಗೆ ಈ ರೀತಿಯಾಗಿ ಹೇಳುತ್ತಾನೆ,"ಅರ್ಜುನನ ಮನಸ್ಸು ಹಾಗೂ ದೇಹದ ಪ್ರತಿ ಕಣ ಕಣವು ಕೃಷ್ಣ ಧ್ಯಾನವ ಮಾಡುತಿದೆ. ಅಂದ ಮೇಲೆ ಆತನ ಭಕ್ತಿಗೆ ನಾನು ದಾಸನಾಗಿ ಅವನ ಸೇವೆ ಮಾಡುವುದರಲ್ಲಿ ಅಶ್ಚರ್ಯವೆನಿದೆ?" ಎಂದಾಗ ನಾರದನಿಗೆ ಎಲ್ಲವೂ ಅರ್ಥವಾಗುತ್ತದೆ.....
ಭಕ್ತಿ ಯಾರಲ್ಲಿ ಅಲ್ಲಿ ನಾನಿರುವೆ ಎಂಬ ಸಂದೇಶದ ಇನ್ನೊಂದು ಪ್ರಸಂಗ...
ಶ್ರೀ ಕೃಷ್ಣನಿಗೆ ರಾಧೆಯನ್ನು ಕಂಡರೆ ಅಪಾರ ಪ್ರೀತಿ.ಇದು ಎಲ್ಲರಿಗೂ ತಿಳಿದ ವಿಷಯವೇ.ರಾಧೆಗೂ
ಶ್ರೀಕೃಷ್ಣನನ್ನು ಕಂಡರೆ ಅಷ್ಟೇ ಪ್ರೀತಿಯಿದ್ದರೂ, ಅವನ ಕೈಯಲ್ಲಿರೋ ಕೊಳಲನ್ನು ನೋಡಿ ಆ ಕೊಳಲಿಗಿರುವ ಭಾಗ್ಯ ತನಗಿಲ್ಲವಲ್ಲ ಎಂದು ಕೊರಗುತ್ತಿದ್ದಳು.ಕಾರಣ ಕೃಷ್ಣ ಎಚ್ಚರವಿರುವಾಗ ಕೊಳಲು ಅವನ ಕೈಯಲ್ಲಿದ್ದರೆ ಮಲಗಿರುವಾಗ ಅವನ ಸೊಂಟದಲ್ಲಿ ರಾರಾಜಿಸುತ್ತಿರುತ್ತಿತ್ತು. ಹೀಗೆ
ಶ್ರೀಕೃಷ್ಣ ಮತ್ತು ಕೊಳಲಿನ ಅವಿನಾಭಾವ ಸಂಬಂಧವ ನೋಡಿ ರಾಧೆ ನನಗಿಂತ ಹೆಚ್ಚು ಪುಣ್ಯವಂತನಾದ ಕೊಳಲನ್ನು ಇದರ ಬಗ್ಗೆ ಕೇಳಬೇಕು ಎಂದು ಕಾತುರದಿಂದ ಕಾಯುತಿದ್ದಳು.
ಆದರೆ ಆ ಕೊಳಲು ಆ ಮಾಧವನ ಕೈಯಿಂದ ಕೆಳಗಿಳಿದರೆ ತಾನೇ? ಇಲ್ಲ ಅವಕಾಶವೇ ಸಿಗುತ್ತಿಲ್ಲ. ರಾಧೆಯ ಅಭಿಲಾಷೆಯನ್ನು ಅರಿತ ಕೃಷ್ಣನು ಒಮ್ಮೆ ಕೊಳಲನ್ನು ಪಕ್ಕಕ್ಕಿಟ್ಟು ನಿದ್ರೆ ಬಂದವನಂತೆ ಮಲಗಿದ.
ಇದೇ ಸಮಯ ಕಾಯುತ್ತಿದ್ದ ರಾಧೆ ಕೊಳಲನ್ನು ಕೈಗೆತ್ತಿಕೊಂಡು ''ಕೊಳಲೇ, ನೀನೆಷ್ಟು ಪುಣ್ಯವಂತ ಮಾಧವನು ನಿನ್ನನ್ನು ಒಂದು ಗಳಿಗೆಯೂ ಅಗಲಿರಲಾರ.ಆದರೆ ನಿನ್ನ ಭಾಗ್ಯ ನನಗಿಲ್ಲ'' ಎಂದು ಕೊರಗುತ್ತಾ ಹೇಳಿದಳು. ಆಗ ಕೊಳಲು, ''ಮಹಾತಾಯಿ ಏನಿದು ನಿನ್ನ ಕೊರಗು? ನೀನೇ ನೋಡು ಏನಿದೆ ನನ್ನಲ್ಲಿ? ನಾನೊಂದು ಬಿದಿರಿನ ಕೋಲು.ಈ ಕೋಲಿನಲ್ಲಿ ಹತ್ತಾರು ರಂಧ್ರಗಳು. ನನ್ನ ದೇಹವೆಲ್ಲ ಖಾಲ ಖಾಲಿ.ಶ್ರೀಕೃಷ್ಣನು ನನ್ನನ್ನು ಕೈಗೆತ್ತಿಕೊಂಡು ನುಡಿಸುವಾಗ ಅವನ ಉಸಿರು ನನ್ನಲ್ಲಿ ಬೆರೆತು ಅವನ ಉಸಿರಲ್ಲಿ ಉಸಿರಾಗುವೆ. ಅವನ ಉಸಿರು ಬೆರೆತ ನನ್ನ ದೇಹ ಅದ್ಭುತ ರಾಗವನ್ನು ಹೊರಸೂಸುತ್ತದೆ.
ಇದೆಲ್ಲವೂ ಅವನ ಕೃಪೆಯೇ ಹೊರತು ನನ್ನದೇನಲ್ಲ.ಆ ಮುರುಳೀಧರನು ಎಲ್ಲರ ಸಮೀಪದಲ್ಲೇ ಇದ್ದಾನೆ. ಆದರೆ ಯಾರ ಹೃದಯದಲ್ಲಿ ಸೇಡು, ಕಪಟ, ಸಿಟ್ಟು ಇರುತ್ತದೆಯೋ ಅವರ ಹೃದಯದಲ್ಲಿ ಅವನು ನೆಲೆಸಲಾರ'' ಎಂದಿತು.
ಹೌದಲ್ಲವೇ? ದೇವರು ಭಕ್ತನಲ್ಲಿರುವ ಸಮರ್ಪಣಾ
ಭಕ್ತಿಗೆ ದಾಸನಾಗುತ್ತಾನೆಯೇ ಹೊರತು ಅವನಲ್ಲಿರುವ ಪಾಂಡಿತ್ಯ, ಸ್ಥಾನಮಾನಗಳಿಗಲ್ಲ....
[16/01, 8:55 AM] Pandit Venkatesh. Astrologer. Kannada: ಮೌಲ್ಯ: ಭಕ್ತಿ
ಉಪಮೌಲ್ಯ: ನಂಬಿಕೆ, ಬೇಷರತ್ತಾದ ಪ್ರೀತಿ
ಭಗವಾನ್ ಕೃಷ್ಣನ ಸ್ನೇಹಿತ ಉದ್ಧವ ಜ್ಞಾನದ ಹಾದಿಯಲ್ಲಿ ಪ್ರವೀಣನಾಗಿದ್ದ. ಈ ಜ್ಞಾನವನ್ನು ಗೋಪಿಕೆಯರಿಗೆ ಕಲಿಸಬೇಕು ಎಂಬ ಇಚ್ಚೆಯಿಂದ ಅವನು ಕೃಷ್ಣನನ್ನು ಸಂಪರ್ಕಿಸಿದನು.
ಕೃಷ್ಣನು ಮುಗುಳ್ನಕ್ಕು, “ಭಕ್ತಿ ಮತ್ತು ಪರಿಶುದ್ಧತೆಯು ಗೋಪಿಕರಿಗೆ ಮೂಲಭೂತವಾಗಿದೆ – ಅವರು ನನ್ನಲ್ಲಿದ್ದಾರೆ, ನಾನು ಯಾವಾಗಲೂ ಅವರ ಹೃದಯದಲ್ಲಿ ಪ್ರತಿಷ್ಠಾಪಿಸುತ್ತಿದ್ದೇನೆ, ನಿನಗೆ ಅರ್ಥವಾಗದಿರಬಹುದು!”
ಉದ್ಧವನಿಗೆ ಮನವರಿಕೆಯಾಗಲಿಲ್ಲ, ಆದ್ದರಿಂದ ಶ್ರೀಕೃಷ್ಣನು ಉದ್ಧವನನ್ನು ಗೋಕುಲಕ್ಕೆ ಕಳುಹಿಸಿದನು. ಉದ್ಧವ ಅವರ ಹತ್ತಿರ ಹೋಗಿ, “ದೈವವನ್ನು ಸಾಕಾರಗೊಳಿಸುವ ಬುದ್ಧಿವಂತಿಕೆಯ ಮಾರ್ಗವನ್ನು ನಾನು ನಿಮಗೆ ಕಲಿಸುತ್ತೇನೆ”. ಎಂದು ಹೇಳಿದನು.
ಗೋಪಿಕರು ಉದ್ಧವನಿಗೆ, “ನಾವು ಯೋಗಗಳು ಮತ್ತು ಧರ್ಮಗ್ರಂಥಗಳಲ್ಲಿ ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ. ಶ್ರೀಕೃಷ್ಣ ಒಬ್ಬನೇ ನಮಗೆ ಎಲ್ಲವೂ, ನಮಗೆ ಒಂದು ಸರಳ ವಿಧಾನವನ್ನು ನೀಡಿ. ”
ಗೊಂದಲಕ್ಕೊಳಗಾದ ಉದ್ಧವ ಈಗ ಗೋಪಿಕರನ್ನು ಕೇಳಿದನು, “ನೀವು ಕೃಷ್ಣನೊಂದಿಗೆ ಹೇಗೆ ವಿಲೀನಗೊಳ್ಳುತ್ತೀರಿ?”
ಮುಗ್ಧ ಗೋಪಿಕರು ಪ್ರತಿಕ್ರಿಯಿಸಿ, “ಕೃಷ್ಣ ಹೂವಾಗಿದ್ದರೆ, ನಾವು ಅವನ ಸುತ್ತಲೂ ಸುತ್ತುತ್ತಿರುವ ಜೇನುನೊಣವಾಗುತ್ತೇವೆ. ಕೃಷ್ಣನು ಪರ್ವತವಾಗಿದ್ದರೆ ನಾವು ನದಿಯಾಗುತ್ತೇವೆ. ಅವನು ಆಳವಾದ ಸಾಗರವಾಗಿದ್ದರೆ, ನಾವು ಅವನನ್ನು ಸೇರುವ ಸಣ್ಣ ಹೊಳೆಯಾಗಿರುತ್ತೇವೆ ”.
ಗೋಪಿಕರು ಯಾವಾಗಲೂ ಎಲ್ಲಿಯಾದರೂ ಮತ್ತು ಎಲ್ಲೆಡೆ ಇದ್ದರು ಭಗವಂತನನ್ನು ಆರಾಧಿಸಲು ತಮ್ಮನ್ನು ತಾವು ಶ್ರೀಕೃಷ್ಣನ ಭಕ್ತಿಯಲ್ಲಿ ಮುಳುಗಿ ಹೋಗುವಂತೆ ಮಾಡಿಕೊಳ್ಳುತ್ತಾರೆ ಎಂದು ಉದ್ಧವನು ಅರ್ಥಮಾಡಿಕೊಂಡನು.
ಕಲಿಕೆ:
ಭಕ್ತಿ ಎಂದರೆ ಯಾವುದೇ ನಿರೀಕ್ಷೆಯಿಲ್ಲದೆ ಸಾರ್ವಕಾಲಿಕ ತುಂಬಿ ಹರಿಯುವ ದೈವದ ಮೇಲಿನ ಸಿಹಿ ಪ್ರೀತಿ. ಇದು ಎಲ್ಲೆಡೆ ಇರುವ ರೇಡಿಯೊ ತರಂಗಗಳಂತಿದೆ, ಒಮ್ಮೆ ನಾವು ದೈವದ ಭಕ್ತಿಯಲ್ಲಿ ಮುಳುಗಿ ಹೋದರೆ ಅದು ಶಾಶ್ವತ ಸಂಬಂಧವಾಗುತ್ತದೆ. ಯಾವುದೇ ಅವಕಾಶವು ಸಕಾರಾತ್ಮಕ ಅಥವಾ ನಕಾರಾತ್ಮಕವಾಗಿರಲಿ, ನಮ್ಮ ಮತ್ತು ಭಗವಂತನಲ್ಲಿ ಇರುವ ಈ ಸಂಬಂಧವು ಪ್ರತಿಯೊಂದು ಅವಕಾಶವನ್ನು ಸುಂದರವಾಗಿ ಪರಿವರ್ತಿಸಲು ನಮಗೆ ಸಹಾಯ ಮಾಡುತ್ತದೆ.
Post a Comment