ಹಿಂದೂ ಕಾರ್ಯಕರ್ತರ ಸಾವಿನ ಸರಣಿ 2015ರಿಂದ 2022

ಭಾರತೀಯ ಜನತಾ ಪಕ್ಷ(ಬಿಜೆಪಿ) ಹಾಗೂ ರಾಷ್ಟ್ರೀಯ ಸ್ವಯಂಸೇವಕರ ಸಂಘ(ಆರ್ ಎಸ್ ಎಸ್) ಸೇರಿದಂತೆ ಹಿಂದೂ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡ ಕಾರ್ಯಕರ್ತರ ಹತ್ಯೆಗಳ ಸರಣಿ ಮುಂದುವರೆದಿದೆ. ಬಹುಶಃ 2016ರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಹಿಂದು ಪರ ಕಾರ್ಯಕರ್ತರ ನೆತ್ತರು ಹರಿದಿತ್ತು. ಸರ್ವಜನಾಂಗದ ಶಾಂತಿಯ ತೋಟ ಎನಿಸಿಕೊಂಡಿರುವ ಕರ್ನಾಟಕದತ್ತ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳು ಕಣ್ಣು ನೆಟ್ಟವು.

ಬೆಂಗಳೂರಿನಲ್ಲಿ ನಡೆದ ರುದ್ರೇಶ್ ಕೊಲೆ ಪ್ರಕರಣದ ತನಿಖೆ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ವಹಿಸಲಾಯಿತು. ಪರೇಶ್ ಮೆಸ್ತಾ ಪ್ರಕರಣ ನಿಗೂಢವಾಗಿ ಉಳಿಯಿತು. ಪಕ್ಷಗಳು ಬದಲಾದರೂ ಕಳೆದ ಏಳೆಂಟು ವರ್ಷಗಳಲ್ಲಿ ದ್ವೇಷ ರಾಜಕೀಯ, ಸಂಘರ್ಷಗಳಿಗೆ ನಡೆದ ಹತ್ಯೆಗಳ ಪ್ರಕರಣಗಳ ಸರಣಿ ಮುಗಿದಿಲ್ಲ. ಹತ್ಯೆಯಾದ ಕಾರ್ಯಕರ್ತರ ಮನೆಯವರ ಆಕ್ರಂದನಕ್ಕೆ ಅಂತ್ಯ ಎಂಬುದಿಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ.

ಶಿವಮೊಗ್ಗ ಈಗ ಬೂದಿ ಮುಚ್ಚಿದ ಕೆಂಡ: ಪೊಲೀಸರು ನೆಟ್ಟಗಿದ್ದಿದ್ದರೆ ಹರ್ಷ ಉಳಿಯುತ್ತಿದ್ದಶಿವಮೊಗ್ಗ ಈಗ ಬೂದಿ ಮುಚ್ಚಿದ ಕೆಂಡ: ಪೊಲೀಸರು ನೆಟ್ಟಗಿದ್ದಿದ್ದರೆ ಹರ್ಷ ಉಳಿಯುತ್ತಿದ್ದ

ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುವ ರಸ್ತೆ ಪಕ್ಕದ ಬಡಾವಣೆಯ ಬಳಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯಾಗಿರುವ ಸುದ್ದಿ ಈಗ ಕರ್ನಾಟಕದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರದ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

List of Hindutva activists Killed in Karnataka from 2015 to 2022

ರಾಜ್ಯದ ವಿವಿಧೆಡೆ ಹತ್ಯೆಗೀಡಾದ ಹಿಂದೂಪರ ಸಂಘಟನೆಗಳ ಸದಸ್ಯರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

2015
ಮಡಿಕೇರಿಯ ಡಿ.ಎಸ್.ಕುಟ್ಟಪ್ಪ
ವಿಶ್ವ ಹಿಂದೂ ಪರಿಷತ್ (ಮಡಿಕೇರಿ) ಸಂಘಟನಾ ಕಾರ್ಯದರ್ಶಿಯಾಗಿದ್ದ ಕುಟ್ಟಪ್ಪ ಅವರು ನವೆಂಬರ್ 10, 2015ರಲ್ಲಿ, ಟಿಪ್ಪು ಸುಲ್ತಾನ್ ಜಯಂತಿಯಂದು ಮೆರವಣಿಗೆ ವೇಳೆ , ಹಳ್ಳಕ್ಕೆ ಬೀಳಿಸಿ ಹತ್ಯೆ ಮಾಡಲಾಯಿತು

ಮೂಡಬಿದರೆ ವಾಮನ್ ಪೂಜಾರಿ
ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಮೂಡಬಿದರೆ ವಾಮನ್ ಪೂಜಾರಿ ಸೆಪ್ಟೆಂಬರ್ 20 ರಂದು ಹತ್ಯೆಯಾಗಿದ್ದರು.

ಮೂಡಬಿದರೆ ಪ್ರಶಾಂತ್
ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹೊಸಬೆಟ್ಟು ಗ್ರಾಮದ ಪ್ರಶಾಂತ್ ಪೂಜಾರಿ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆಯಲ್ಲಿ ಅಕ್ಟೋಬರ್ 9, 2015ರಲ್ಲಿ ಹತ್ಯೆಯಾಗಿದ್ದರು.


2016

ಮೈಸೂರಿನ ರಾಜು
ಕ್ಯಾತಮಾರನಹಳ್ಳಿ ವಾಸಿ, ವಿಶ್ವ ಹಿಂದೂ ಪರಿಷತ್-ಬಿಜೆಪಿ ಕಾರ್ಯಕರ್ತ ರಾಜು ಅವರನ್ನು ಮೈಸೂರಿನ ಎಂ.ಜಿ.ರಸ್ತೆಯ ವಿನಾಯಕ ಟೀ ಸ್ಟಾಲ್ ಬಳಿ ಮಚ್ಚಿನಿಂದ ಹಲ್ಲೆ ನಡೆಸಿ, ಕೊಲ್ಲಲಾಗಿತ್ತು.

ಉಳ್ಳಾಲದ ರಾಜು
ದಕ್ಷಿಣ ಕನ್ನಡದ ಉಳ್ಳಾಲದ ಹಿಂದೂ ಪರ ಸಂಘಟನೆ ಕಾರ್ಯಕರ್ತ ರಾಜು ಕೋಟ್ಯಾನ್ ಎಂಬುವರನ್ನು ಏಪ್ರಿಲ್ 12ರಂದು ಹತ್ಯೆ ಮಾಡಲಾಗಿತ್ತು.

ಅತ್ತಿಬೆಲೆಯ ಅಶ್ವಥ್
ಕರ್ನಾಟಕದ ಗಡಿ ಭಾಗದ ಅತ್ತಿಬೆಲೆಯಲ್ಲಿ ಬಿಜೆಪಿ ಕಾರ್ಯಕರ್ತ ಅಶ್ವಥ್ ಎಂಬುವವರನ್ನು ಮೇ 1ರಂದು ಹತ್ಯೆ ಮಾಡಲಾಗಿತ್ತು.

ಧಾರವಾಡದ ಯೋಗೇಶ್ ಗೌಡ
ಬಿಜೆಪಿಯಿಂದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ ಗೌಡ ಜೂನ್ 15, 2016ರಲ್ಲಿ ಹತ್ಯೆಯಾಗಿದ್ದರು. ಧಾರವಾಡದ ಹೆಬ್ಬಳ್ಳಿ ಕ್ಷೇತ್ರದ ಸದಸ್ಯರಾಗಿದ್ದ ಯೋಗೇಶ್ ಗೌಡ, ಸಪ್ತಾಪುರ ಪ್ರದೇಶದಲ್ಲಿರುವ ಉದಯ್ ಜಿಮ್ ನಲ್ಲಿ ಕೊಲೆಯಾಗಿದ್ದರು.

ಮಡಿಕೇರಿಯ ಪ್ರವೀಣ್ ಪೂಜಾರಿ
ಮಡಿಕೇರಿಯ ಗುಡ್ಡೆಹೊಸೂರು ಸಮೀಪದ ಅತ್ತೂರು ಗ್ರಾಮದ, ಆರ್ ಎಸ್ ಎಸ್ ಕಾರ್ಯಕರ್ತರಾಗಿದ್ದ ಪ್ರವೀಣ್ ಪೂಜಾರಿ 2016ರ ಅಗಸ್ಟ್ ನಲ್ಲಿ ಕೊಲೆಯಾದರು. ಸಂಕಲ್ಪ ಯಾತ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ವೇಳೆ ಪ್ರವೀಣ್ ಪೂಜಾರಿ ಅವರ ಹತ್ಯೆಯಾಗಿತ್ತು.

ಉಡುಪಿಯ ಪ್ರವೀಣ ಪೂಜಾರಿ
ಬಿಜೆಪಿ ಕಾರ್ಯಕರ್ತರಾಗಿದ್ದ ಪ್ರವೀಣ ಪುಜಾರಿ ದನ ಸಾಗಿಸುವಾಗ ಉಡುಪಿಯ ಸಂತೆ ಕಟ್ಟೆ ಬಳಿ ಬಜರಂಗ ದಳ ಹಾಗೂ ವಿಎಚ್ ಪಿ ಕಾರ್ಯಕರ್ತರು ಹತ್ಯೆ ಮಾಡಿದ್ದರು. ಈ ಘಟನೆ ಆಗಸ್ಟ್ 2016ರಲ್ಲಿ ನಡೆದಿತ್ತು.

ಕಾರ್ತಿಕ್ ಕೊಣಾಜೆ
ಪಜೀರಿನ ಸುದರ್ಶನ ನಗರ ನಿವಾಸಿ ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಉಮೇಶ್ ಪೂಜಾರಿ ಅವರ ಪುತ್ರರಾದ ಕಾರ್ತಿಕ್ ರಾಜ್ (27) ಅಸೈಗೊಳಿ ಬಳಿ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದ ಕಾರ್ತಿಕ್ ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಕೊಣಾಜೆ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲೇ ಘಟನೆಯನ್ನು ಮೊದಲಿಗೆ ಹಿಟ್ ಆಂಡ್ ರನ್ ಎಂದು ಪೊಲೀಸರು ಹೇಳಿದ್ದರು.

ಮಾಗಳಿ ರವಿ
ಪಿರಿಯಾಪಟ್ಟಣದ ಯುವ ಮೋರ್ಚಾ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಾಗಳಿ ರವಿ ನವೆಂಬರ್ 4ರ ರಾತ್ರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಪಿರಿಯಾಪಟ್ಟಣದಿಂದ ತಮ್ಮ ಸ್ವಗ್ರಾಮ ಮಾಗಳಿಗೆ ರವಿ ತೆರಳುತ್ತಿದ್ದಾಗ ಮಧ್ಯರಾತ್ರಿ ವೇಳೆ ಈ ಘಟನೆ ಸಂಭವಿಸಿತ್ತು.

ಹಿಂದೂ ಕಾರ್ಯಕರ್ತರು ಆತಂಕ ಪಡಬೇಕಿಲ್ಲ, ಬೆಂಬಲಕ್ಕೆ ನಾವಿದ್ದೇವೆ: : ಡಾ.ಕೆ.ಸುಧಾಕರ್ಹಿಂದೂ ಕಾರ್ಯಕರ್ತರು ಆತಂಕ ಪಡಬೇಕಿಲ್ಲ, ಬೆಂಬಲಕ್ಕೆ ನಾವಿದ್ದೇವೆ: : ಡಾ.ಕೆ.ಸುಧಾಕರ್

ರುದ್ರೇಶ್
ಹೊಸ ಗಣವೇಷ ತೊಟ್ಟು ಪಥ ಸಂಚಲನ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಆರೆಸ್ಸೆಸ್ ಕಾರ್ಯಕರ್ತ 35 ವರ್ಷ ವಯಸ್ಸಿನ ರುದ್ರೇಶ್ ಅವರನ್ನು ಅಕ್ಟೋಬರ್ 16, 2016ರಂದು ಬೆಂಗಳೂರಿನ ಕಾಮರಾಜ ರಸ್ತೆಯಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಚ್ಚಿ ಕೊಂದಿದ್ದರು.

ಚಿಕ್ಕತಿಮ್ಮೇಗೌಡ
ಬೆಂಗಳೂರಿನಲ್ಲಿ ಕಾಮಾಕ್ಷಿ ಪಾಳ್ಯ ಸಮೀಪದ ಲಕ್ಷ್ಮಣ ನಗರ ಬಳಿ ನವೆಂಬರ್ ನಲ್ಲಿ ಬಿಜೆಪಿ ಕಾರ್ಯಕರ್ತ ಚಿಕ್ಕತಿಮ್ಮೇಗೌಡ ಅವರನ್ನು ನವೆಂಬರ್ ನಲ್ಲಿ ಹತ್ಯೆ ಮಾಡಲಾಗಿತ್ತು. ಬಿಜೆಪಿ ಕಾರ್ಯಕರ್ತ ಚಿಕ್ಕತಿಮ್ಮೇಗೌಡ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.

ಸುನಿಲ್ ಡೋಂಗ್ರೆ
ಬೀದರ್ ಜಿಲ್ಲೆ ಔರಾದ್ ತಾಲೂಕಿನ ಸೋನಲ್ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ ಸುನಿಲ್ ಡೋಂಗ್ರೆ ಅವರನ್ನು ನವೆಂಬರ್ ತಿಂಗಳಲ್ಲಿ ಇರಿದು ಕೊಲೆ ಮಾಡಲಾಗಿತ್ತು.


2017

ಪರೇಶ್ ಮೇಸ್ತಾ
2017ರ ಡಿಸೆಂಬರ್ 6ರಂದು ಹೊನ್ನಾವರ ಪಟ್ಟಣದಲ್ಲಿ ನಡೆದಿದ್ದ ಕೋಮು ಗಲಭೆ ವೇಳೆ ಪಟ್ಟಣದ ಉದ್ಯಮ ನಗರ ನಿವಾಸಿ 19 ವರ್ಷದ ಪರೇಶ್ ಮೇಸ್ತಾ ನಾಪತ್ತೆಯಾಗಿದ್ದ. ಡಿಸೆಂಬರ್ 8 ರಂದು ಪರೇಶ್ ಮೇಸ್ತಾ ಮೃತದೇಹ ಪಟ್ಟಣದ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಕೋಮು ಗಲಭೆ ವೇಳೆಯೇ ಅನ್ಯಕೋಮಿನ ಜನರು ಕೊಲೆ ಮಾಡಿರಬಹದೆಂದು ಆರೋಪಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆದು, ಹಲವೆಡೆ ಗಲಭೆಗೆ ಸಹ ಕಾರಣವಾಗಿತ್ತು.

* ಬೊಮ್ಮನಹಳ್ಳಿ ಮುನ್ಸಿಪಾಲಿಟಿ ಸದಸ್ಯ ಶ್ರೀನಿವಾಸ್ ಪ್ರಸಾದ್(ವಾಸು), ಆನೇಕಲ್ ತಾಲೂಕು ಚಂದಾಪುರದ ಹರೀಶ್ 2017ರಲ್ಲಿ ಹತ್ಯೆಯಾದವರು.

* ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳರನ್ನು ಬಿಸಿ ರೋಡ್ ಸಮೀಪ ಜುಲೈ 4ರಂದು ಹತ್ಯೆ ಮಾಡಲಾಗಿತ್ತು.
* ಕಲಬುರಗಿಯ ಅಫ್ಜಲಪುರದ ಬಿಜೆಪಿ ಕಾರ್ಯಕರ್ತ ಮಹಾದೇವ್ ಕಾಳೆ(50), ತಿಪಟೂರಿನ ಮಾಗೇನಹಳ್ಳಿಯ ಬಿಜೆಪಿ ಯುವಮೋರ್ಚಾ ಸದಸ್ಯ ತಿಪ್ಪೇಶ್, ಬಳ್ಳಾರಿಯ ರಮೇಶ್ ಬಂಡಿ ಮುಂತಾದವರನ್ನು ಹೆಸರಿಸಬಹುದು.

2022
ಹರ್ಷ

ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುವ ರಸ್ತೆ ಪಕ್ಕದ ಬಡಾವಣೆಯ ಬಳಿ ಬಜರಂಗದಳ ಕಾರ್ಯಕರ್ತ ಹರ್ಷ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಹರ್ಷನನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ನಡೆದಿದೆ.

Post a Comment

Previous Post Next Post