🌷🦚 *ಕೃಷ್ಣವೇಣೀ ತೀರಸಂಸ್ಥಂ| ಕಾರ್ಪರ ಗ್ರಾಮವಾಸಿನಂ||*
*ತತ್ತೀರೇ ಪಿಪ್ಪಲಸ್ಥಂ| ಶ್ರೀ ನೃಸಿಂಹಂ ಮನಸಾ ನಮೇ||*🦚🌷
🌷🦚 *ನಿತ್ಯ ಪಂಚಾಂಗ NITYA PANCHANGA 22.02.2022 TUESDAY ಮಂಗಳವಾರ*🦚🌷
🦚⚜️🦚⚜️🦚⚜️🦚⚜️🦚⚜️🦚
*SAMVATSARA :* PLAVA.
*ಸಂವತ್ಸರ:* ಪ್ಲವ.
*AYANA:* UTTARAYANA.
*ಆಯಣ:* ಉತ್ತರಾಯಣ.
*RUTHU:* SHISHIRA.
*ಋತು:* ಶಿಶಿರ.
*MAASA:* MAGHA.
*ಮಾಸ:* ಮಾಘ.
*PAKSHA:* KRISHNA.
*ಪಕ್ಷ:* ಕೃಷ್ಣ.
⚖️🐴⚖️🐴⚖️🐴⚖️🐴⚖️🐴⚖️
*TITHI:* SHASHTI.
*ತಿಥಿ:* ಷಷ್ಠೀ.
*SHRADDHA TITHI:* SHASHTI.
*ಶ್ರಾದ್ಧ ತಿಥಿ:* ಷಷ್ಠೀ.
🐎🌸🐎🌸🐎🌸🐎🌸🐎🌸🐎
*VAASARA:* BOUMAVAASARAA.
*ವಾಸರ:* ಬೌಮವಾಸರ.
*NAKSHATRA:* SWATI.
*ನಕ್ಷತ್ರ:* ಸ್ವಾತೀ.
*YOGA:* VRADDHI.
*ಯೋಗ:* ವೃದ್ಧಿ.
*KARANA:* GARAJA.
*ಕರಣ:* ಗರಜ.
🌞🌼🌞🌼🌞🌼🌞🌼🌞🌼🌞
*ಸೂರ್ಯೊದಯ (Sunrise):* 06.50
*ಸೂರ್ಯಾಸ್ತ (Sunset):* 06.32
🌙⭐🌙⭐🌙⭐🌙⭐🌙⭐🌙
*ರಾಹು ಕಾಲ (RAHU KAALA) :* 03:00PM To 04:30PM.
*ದಿನ ವಿಶೇಷ (SPECIAL EVENT'S)*
*22.02.2022*
*ಪೂರ್ವೇದ್ಯುಶ್ರಾದ್ಧ (ಶ್ರೀಮದುತ್ತರಾದಿ ಮಠಕ್ಕೆ ಮಾತ್ರ), ಶ್ರಿಸುಪ್ರಜ್ಞೆಂದ್ರ ತೀರ್ಥರ ಪು (ನಂಜನಗೂಡು), ಕಾಳಿಕಾ ಪರಮೇಶ್ವರಿ ಪ್ರತಿಷ್ಠಾ ವರ್ಧಂತಿ (ಗಾಂಧಿಬಜಾರ್ ಶಿವಮೊಗ್ಗ).*
*POORVEDYU SHRADDHA (Only For SMUM), SHRI SUPRAJNENDRA Theertara Pu (NANJANGUD), KALIKA PARAMESHWARI PRATISHTA VARDHANTI (GANDHIBAZAAR SHIVAMOGGA).*
🦄🌷🦄🌷🦄🌷🦄🌷🦄🌷🦄
🌹 *ಸುಭಾಷಿತ ಮಂಜರೀ* 🌹
💐 *ಸಾಮಾನ್ಯ ನೀತಿ* 💐
*ಶತ್ರೋರಪಿ ಗುಣಾ ವಾಚ್ಯಾ ದೋಷಾ ವಾಚ್ಯಾ ಗುರೋರಪಿ |*
*ಸರ್ವದಾ ಸರ್ವಯತ್ನೇನ ಪುತ್ರೇ ಶಿಷ್ಯವದಾಚಾರೇತ್ ||*
-- ಸುಭಾಷಿತರತ್ನಭಾಂಡಾಗಾರ
ಶತ್ರುವಿನ ಗುಣಗಳನ್ನು ಹೇಳಬೇಕು. ಗುರುವಾದರೂ ಅವನದೋಷಗಳನ್ನು ಹೇಳಬೇಕು. ಯಾವಾಗಲೂ ಸರ್ವಪ್ರಯತ್ನದಿಂದ ಪುತ್ರನಲ್ಲಿ , ಶಿಷ್ಯನಲ್ಲಿ ಹೇಗೋ ಹಾಗೆ ನಡೆದುಕೊಳ್ಳಬೇಕು.
✋🏻🪓✋🏻🪓✋🏻🪓✋🏻🪓✋🏻🪓✋🏻
ಕೈಯಲ್ಲಿ ಪಾಶವನ್ನು ಹಿಡಿದು ಹೊರಟ ತನ್ನ ದೂತನನ್ನು ಕಂಡು ಯಮ ಅವನ ಕಿವಿಯಲ್ಲಿ ಗುಟ್ಟಾಗಿ ಹೇಳುತ್ತಾನೆ...ಭಾಗವತವನ್ನು ಕೇಳುವ ಮೂಲಕ ಭಗವತ್ಕಥಾಮೃತದಲ್ಲಿ ಮುಳುಗಿ ಹೋದವರ ಬಳಿ ಹೋಗಬೇಡ...ಬೇರೆಯವರಿಗೆ ಶಿಕ್ಷೆ ನೀಡಲು ನಾನು ಸಮರ್ಥನಿದ್ದೇನೆ...ವಿಷ್ಣು ಭಕ್ತರಿಗಲ್ಲ
"ಸ್ವಪುರುಷಮಪಿ ವೀಕ್ಷ್ಯ ಪಾಶಹಸ್ತಂ..ವದತಿ ಯಮಃ ಕಿಲ ತಸ್ಯ ಕರ್ಣಮೂಲೇ..ಪರಿಹರ ಭಗವತ್ಕಥಾಸು ಮತ್ತಾನ್..ಪ್ರಭುರಹಮನನ್ಯನೃಣಾಂ ನ ವೈಷ್ಣವಾನಾಂ"
(ಪದ್ಮಪುರಾಣ)
ಇಲ್ಲಿ ಯಾರದ್ದೋ ದಡ್ಡರ ಮಾತು ಕೇಳಿ ನಾಸ್ತಿಕರಾಗಿ ಬದುಕಿ ಮುಂದೊಂದು ದಿನ ಯಮಭಟರ ಕೈಯ್ಯಲ್ಲಿ ಒದ್ದಾಟಪಡುವುದಕ್ಕಿಂತ ಭಾಗವತವನ್ನೊಮ್ಮೆ ಕೇಳಿ ಮೇಲಿನ ಲೋಕದ ಬಗೆಗೆ ಅಧಿಕೃತವಾಗಿ ಕೇಳಿ ತಿಳಿಯುವುದು ಚಂದ ಅಲ್ಲವೇ!!?....ಈ ದೇಶದ ಇತಿಹಾಸವನ್ನು ನಾವೇ ತಿಳಿಯದೆ ಬಿಟ್ಟರೆ ಇದಕ್ಕಿಂತಲೂ ಬೇರೆ ದುರಂತವುಂಟೆ!!?
ಗಂಗೆ ಊರಿನ ಬಾಗಿಲಿಗೆ ಬಂದಿರುವಾಗಲೂ ನಾವು ಮುಳುಗಲು ಉದಾಸೀನ ಮಾಡಬಾರದಲ್ಲವೇ?
ಸಮಯ ಯಾರಿಗೂ ಇರುವುದಿಲ್ಲ...ಹಾಗಂತ ಯಾವತ್ತೂ ಊಟೋಪಚಾರಗಳಿಂದ ದೂರವಾಗಿಲ್ಲ...ಹಾಗೆಯೇ ದೃಢವಾದ ಮನಸ್ಸನ್ನು ಮಾಡಿಕೊಂಡು ಏಳು ದಿನದ ಮುಳುಗುವಿಕೆಯಲ್ಲಿ ಸಣ್ಣವರು ದೊಡ್ಡವರೆನ್ನುವ ಹೆಣ್ಣುಗಂಡೆನ್ನುವ ಭೇದವಿಲ್ಲದೆ ಊರಿನವರೆಲ್ಲ ಭಾಗಿಯಾಗಿ...ಭಗವದನುಗ್ರಹಕ್ಕೆ ಪಾತ್ರರಾಗಿ...
ಕೃಷ್ಣಸಖ
🍃🥭🍃🥭🍃🥭🍃🥭🍃🥭🍃
*||ಪಿಬತ ಭಾಗವತಂ ರಸಮಾಲಯಂ||*
*✍ಶ್ರೀ ಕೃಷ್ಣ ಪರಮಾತ್ಮನನ್ನು ಕರೆತರಲು ಕಂಸನ ಆಜ್ಞೆಯನ್ನು ಪಾಲಿಸಲೋಸುಗ ಅಕ್ರೂರ ಗೋಕುಲ ಪಟ್ಟಣಕ್ಕೆ ಹೊರಟಿದ್ದಾನೆ.*.
ಶ್ರೀ ಕೃಷ್ಣ ಪರಮಾತ್ಮನ ದರುಶನ ವಾಗಿದೆ.ಬಂದ ಉದ್ದೇಶ ಹೇಳಿದ್ದಾನೆ.
ಮರುದಿನ ಶ್ರೀ ಕೃಷ್ಣ ಬಲರಾಮರು ಅಕ್ರೂರನ ಜೊತೆಗೆ ಮಥುರಾ ಪಟ್ಟಣಕ್ಕೆ ಹೊರಟಿದ್ದಾರೆ.
*ಮಧ್ಯಾಹ್ನದ ಸಮಯದಲ್ಲಿ ಯಮುನಾ ನದಿ ತೀರಕ್ಕೆ ರಥ ಬಂದಿದೆ.ಅಕ್ರೂರ ರಥವನ್ನು ನಿಲ್ಲಿಸಿದ.ಭಗವಂತನ ಅಪ್ಪಣೆ ತೆಗೆದುಕೊಂಡು ಮಧ್ಯಾಹ್ನದ ಸ್ನಾನ ಸಂಧ್ಯಾವಂದನೆ ಮಾಡಲು ಅಕ್ರೂರ ಯಮುನಾ ನದಿಯಲ್ಲಿ ಇಳಿದಿದ್ದಾನೆ.*
ಅಘಮರ್ಷಣ ಸೂಕ್ತ ಎಂದು ಒಂದು ಸೂಕ್ತ ಇದೆ.ಅದನ್ನು ಹೇಳಿಕೊಂಡು ಪುರುಷರು ನದಿ ಇತ್ಯಾದಿ ಗಳಲ್ಲಿ ಸ್ನಾನ ಮಾಡಬೇಕು. ಅದು ನಮ್ಮ ಪಾಪವನ್ನು ತೊಳೆಯತಕ್ಕಂತಹ ಸೂಕ್ತ.
*ಯಮುನಾ ನದಿಯಲ್ಲಿ ಅಕ್ರೂರ ಒಂದು ಮುಳುಗು ಹಾಕಿದ್ದಾನೆ.ನೋಡುತ್ತಾನೆ ರಥದಲ್ಲಿ ಕುಳಿತ ಶ್ರೀಕೃಷ್ಣ ಪರಮಾತ್ಮ ಅವನ ಎದುರಿಗೆ ಬಂದು ನಿಂತಿದ್ದ. ಇವನಿಗೆ ಆಶ್ಚರ್ಯಕರ. ರಥದಲ್ಲಿ ಕೃಷ್ಣ ಇದ್ದಾನೆ ಇಲ್ಲವೋ ಎಂದು ಮೇಲೆ ಬಂದು ನೋಡಿದರೆ ಶ್ರೀ ಕೃಷ್ಣ ರಥದಲ್ಲಿ ಕುಳಿತಿದ್ದಾನೆ.*
*ಮತ್ತೆ ಯಮುನಾ ನದಿಯಲ್ಲಿ ಮುಳುಗಿ ದಾಗ ಆ ಶ್ರೀಕೃಷ್ಣ ರೂಪ ಅದೃಶ್ಯ ವಾಗಿದೆ.*
*ಆ ಜಾಗದಲ್ಲಿ ಭಗವಂತನ ಮೂಲ ರೂಪವಾದ ಶ್ರೀ ಅನಂತ ಪದ್ಮನಾಭ ದೇವರ ರೂಪ ಪ್ರತ್ಯಕ್ಷವಾಗಿದೆ.*
ನೋಡುತ್ತಾ ನಿಂತಿದ್ದಾನೆ.ಭಕ್ತಿ ಭಾವದಿಂದ ಕೈ ಮುಗಿದುಕೊಂಡು.
*ಈ ಶ್ರೀರಾಮ ಕೃಷ್ಣಾದಿ ರೂಪಗಳಿಗೆಲ್ಲ ಮೂಲ ರೂಪ ಎಂದರೆ ಶ್ವೇತ ದ್ವೀಪದಲ್ಲಿ ಇರುವ ಶ್ರೀ ಅನಂತ ಪದ್ಮನಾಭ ರೂಪ.ಅದೇ ಮೂಲ ರೂಪ.*
*ಎಲ್ಲಾ ಭಗವಂತನ ರೂಪಗಳು ಆ ಶ್ರೀಪದ್ಮನಾಭ ರೂಪದಿಂದಲೇ ಬರುತ್ತದೆ.*
*ಅಕ್ರೂರ ಯಮುನಾ ನದಿಯಲ್ಲಿ ಮುಳುಗಿದಾಗ ಅವನ ಎದುರಿಗೆ ಆ ಭಗವಂತನ ರೂಪ
*ಹೇಗೆ ಇತ್ತು ಎಂದರೆ ಅವನ ಎದುರಿಗೆ ಶೇಷದೇವರು.ಆ ಶೇಷದೇವರ ಮೇಲೆ ಭಗವಂತ ಮಲಗಿದ್ದಾನೆ.*
*ಶ್ರೀ ಲಕ್ಷ್ಮಿ ದೇವಿಯು ಭಗವಂತನ ಕಾಲು ಒತ್ತುತ್ತಾ ಸೇವೆಯನ್ನು ಮಾಡುತ್ತಾ ಇದ್ದಾಳೆ.ಬ್ರಹ್ಮಾದಿ ದೇವತೆಗಳು ಮೊದಲುಗೊಂಡು ಭಗವಂತನ ಸೇವೆ,ನಾಮ ಸಂಕೀರ್ತನೆ ಮಾಡುತ್ತಾ ಇದ್ದಾರೆ.*
*ಸುನಂದ,ಮತ್ತು ನಂದ ಎನ್ನುವ ದ್ವಾರಪಾಲಕರು,*
*ಸನಕಾದಿಗಳು, ಪ್ರಹ್ಲಾದ, ನಾರದರು,ಇನ್ನೂ ಅನೇಕ ಭಗವಂತನ ಭಕ್ತರು..*
*ಹೀಗೆ ಅನಂತಾನಂತ ದೇವತಾ ಪರಿವಾರದ ಸಮೂಹ ಮತ್ತು ಅವರಿಂದ ವಂದಿಸಲ್ಪಟ್ಟ ಭಗವಂತನ ಆ ಮೂಲ ರೂಪ ವನ್ನು ನೋಡಿ ಅಕ್ರೂರ ಆ ಸಮಯದಲ್ಲಿ ಒಂದು ಸ್ತೋತ್ರ ರಚಿಸಿದ.ಸ್ತೋತ್ರ ಮಾಡುತ್ತಾ ಮೈ ಮರೆತು ನಿಂತ.*
ನಂತರ ಭಗವಂತ ಆ ರೂಪವನ್ನು ತಿರೋಹಿತಗೊಳಿಸಿದ.ನಂತರ ಅಕ್ರೂರ ಸ್ನಾನ ಮಾಡಿ ಮೇಲೆ ಬಂದಿದ್ದಾನೆ.
*ಶ್ರೀಕೃಷ್ಣ ಪರಮಾತ್ಮನನ್ನು ಕುರಿತು ಪ್ರಾರ್ಥನೆ ಮಾಡಿದ್ದಾನೆ.*
ಇಲ್ಲಿ ಶ್ರೀ ಮದ್ಭಾಗವತ ನಮಗೆ ತಿಳಿಸುವುದು ಏನೆಂದರೆ
*ಸಾಕ್ಷಾತ್ ಭಗವಂತ ಎದುರಿಗೆ ಇದ್ದರು ಅವನನ್ನು ರಥದಲ್ಲಿ ಕುಳ್ಳಿರಿಸಿ ತಾನು ತನ್ನ ನಿತ್ಯ ಕರ್ಮಗಳನ್ನು ಮಾಡಲು ಅಕ್ರೂರ ಹೊರಟ.*
*ನಿಜವಾದ ಭಕ್ತರ ಲಕ್ಷಣಗಳು ಏನೆಂದರೆ ಭಗವಂತನ ಆಜ್ಞೆಯನ್ನು ಪರಿಪಾಲಿಸುವದು.*
*ನಮಗೆ ಮಾತಾಪಿತೃಗಳಲ್ಲಿ,ಗುರು ಹಿರಿಯರಲ್ಲಿ ಭಕ್ತಿ ಇದೆ.ಆದರೆ ಅವರು ಹೇಳಿದ ಧಾರ್ಮಿಕ ಆಚರಣೆಗಳನ್ನು, ಮತ್ತು ನಿತ್ಯ ಕರ್ಮಗಳನ್ನು ಮಾಡುವದೇ ಇಲ್ಲ.ಸಂಧ್ಯಾವಂದನೆ,ದೇವಪೂಜೆ,ಇನ್ನು ಅನೇಕ ನಿತ್ಯ ನೈತಿಕ ಕರ್ಮಗಳನ್ನು ಮಾಡಬೇಕು ಎಂದು ಭಗವಂತನ ಆಜ್ಞೆ. ಅದಕ್ಕೆ ಒಂದು ಸಮಯ ಇದೆ.ಆ ಸಮಯದಲ್ಲಿ ಮಾಡಬೇಕು ಎಂದು ಭಗವಂತ ಹೇಳಿದ್ದಾನೆ.* ಅದರ ಆಚರಣೆ ಕೆಲವೊಮ್ಮೆ ನಾವು ಮಾಡುವದೇ ಇಲ್ಲ.
*ಆದರೆ ಅದರಂತೆ ಆಚರಣೆ ಮಾಡಿದವ ಅಕ್ರೂರ.*
*ಅಕ್ರೂರನಿಗೆ ಆದ ಭಗವಂತನ ದರುಶನ ನಮಗೆ ಸಹ ಆಗಬೇಡವೇ??*
🙏ಶ್ರೀ ಕೃಷ್ಣಾರ್ಪಣಮಸ್ತು🙏
*ಹಾಳು ಹರಟೆಯಾಡಿ ಮನವ* |
*|ಬೀಳು ಮಾಡಿ ಕೊಳ್ಳಲು ಬೇಡಿ|*
*|ಏಳು ದಿನದ ಕಥೆಯು ಕೇಳಿ|*
*|ಏಳಿರೋ ವೈಕುಂಠಕೆ*
🙏ಶ್ರೀ ಕಪಿಲಾಯ ನಮಃ🙏
🐒🩸🐒🩸🐒🩸🐒🩸🐒🩸🐒
ಆಂಜನೇಯ ಸ್ವಾಮಿಯ ಸಿಂಧೂರ
ಆಂಜನೇಯ ಸ್ವಾಮಿಯ ಸಿಂಧೂರವನ್ನು ಹಚ್ಚಿಕೊಳ್ಳುವುದರಿಂದ ಆಗುವ ಲಾಭಗಳು
1) ಯಾರದಾದರೂ ಮನೆಯಲ್ಲಿ ದಂಪತಿಗಳು ಪ್ರತಿನಿತ್ಯ ಜಗಳವಾಡುತ್ತಿದ್ದರೆ, ಪ್ರತಿನಿತ್ಯ ಆಂಜನೇಯ ಸ್ವಾಮಿಯ ಸಿಂಧೂರವನ್ನು ಧಾರಣೆ ಮಾಡಿದರೆ ಎಲ್ಲಾ ದಾಂಪತ್ಯ ಸಮಸ್ಯೆಗಳು ದೂರವಾಗುತ್ತವೆ.
2) ಯಾರ ಮನೆಯಲ್ಲಾದರೂ ಭಯ, ಭೀತಿ, ಅಂಜಿಕೆ ಇದ್ದರೆ ಅವರು ಸಿಂಧೂರವನ್ನು ಧಾರಣೆ ಮಾಡಿದರೆ ಎಲ್ಲಾ ಭಯವೂ ನಾಶವಾಗುತ್ತದೆ.
3) ಮನೆಯಲ್ಲಿ ಗಂಡ, ಹೆಂಡತಿ, ಮಕ್ಕಳ ನಡುವೆ ಸೌಖ್ಯತೆ ಇಲ್ಲದಿದ್ದರೆ ಅಂತವರು ಸಿಂಧೂರವನ್ನು ಧರಿಸಿದರೆ ಸುಖಿ, ಸಂತೋಷ, ಪ್ರಶಾಂತತೆ ಲಭಿಸುತ್ತದೆ.
4) ಸಣ್ಣ ಮಕ್ಕಳಿಗೆ ಬಾಲಗ್ರಹ ದೋಷವಿದ್ದರೆ ಆ ಮಕ್ಕಳಿಗೆ ಸಿಂಧೂರವನ್ನು ಹಚ್ಚಿದರೆ ಭಯ, ಭೀತಿ, ರೋಗಬಾಧೆ ಯಾವುದೂ ತಗಲದೇ ಆರೋಗ್ಯವಾಗಿರುತ್ತಾರೆ.
5) ವಿವಾಹದ ನವದಂಪತಿಗಳು ಸಿಂಧೂರವನ್ನು ಧರಿಸಿದರೆ ಧೈರ್ಯವಂತ ಮಕ್ಕಳು ಹುಟ್ಟುತ್ತಾರೆ.
6) ವಿದ್ಯಾರ್ಥಿಗಳು ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಸಿಂಧೂರವನ್ನು ಹಚ್ಚಿಕೊಂಡು ಬಂದು ಓದಿದರೆ ಪರೀಕ್ಷೆ ಸಮಯದಲ್ಲಿ ಓದಿದ್ದು ಮರೆತು ಹೋಗುವುದಿಲ್ಲ.
7) ರಕ್ತಹೀನತೆಯಂತಹ ರೋಗಿಗಳು ಆಂಜನೇಯ ಸ್ವಾಮಿಯ ತೀರ್ಥ ಸೇವಿಸಿ, ಸಿಂಧೂರವನ್ನು ಧರಿಸಿದರೆ ಆರೋಗ್ಯ ಭಾಗ್ಯ ಸಿದ್ಧಿಸುತ್ತದೆ.
8) ಗ್ರಹಬಾಧೆ ಇದ್ದವರು ಸಿಂಧೂರವನ್ನು ಧರಿಸಿದರೆ ಗ್ರಹಬಾಧೆಗಳು ದೂರವಾಗುತ್ತವೆ
9) ಮನೆಯಲ್ಲಿ ಆಂಜನೇಯ ಸ್ವಾಮಿಗೆ ಗಂಧ, ಪುಷ್ಪಗಳಿಂದ ಅರ್ಚನೆ ಮಾಡಿ ಆಮೇಲೆ ಅವುಗಳನ್ನು ಪ್ರಸಾದರೂಪದಲ್ಲಿ ಸ್ವೀಕರಿಸಿದರೆ ಸಕಲ ಮನೋಕಾಮನೆಗಳು ಈಡೇರುತ್ತವೆ.
*ಈ ಕೆಳಗಿನ ಸರಳ ಸಲಹೆಗಳನ್ನು ಪಾಲಿಸಿದರೆ ಸಮಸ್ಯೆ ಇದ್ದಲ್ಲಿ ಪರಿಹಾರ ಲಭ್ಯವಾಗುತ್ತದೆ.*
ಮನೆಯಲ್ಲಿ ಹೊಂದಾಣಿಕೆ ಇಲ್ಲದೆ ಸಾಮರಸ್ಯವಿಲ್ಲದೆ ಕಷ್ಟವಾಗುತ್ತಿದ್ದರೆ:
"ಓಂ ನಮೋ ಭಗವತೇ ರಾಮಕೃಷ್ಣಾಯ"
ಸರ್ಪ ಹತ್ಯಾ ದೋಷ, ನಾಗ ದೋಷ, ರಾಹುದೋಷ, ಕುಜ ದೋಷ, ಕಾಳಸರ್ಪ ದೋಷ, ಜನ್ಮಾಂತರದ ನಾಗ ದೋಷಗಳಿಗೆ:
" ಓಂ ಶ್ರೀ ವಾಸುಕಿ ದೇವಾಯ ನಮಃ"
ದುಷ್ಟ ಶಕ್ತಿಗಳ ಬಾಧೆ, ಶ್ರಾದ್ಧ ಕ್ರಿಯೆಗೆ ಸಂಬಂಧಿಸಿದ ಪಿತೃಕಾರ್ಯ ಲೋಪ, ಪಿತೃ ಶಾಪ:
"ಓಂ ನಮೋ ದತ್ತಾತ್ರೇಯ"
ಅಪಮೃತ್ಯು ಭಯ, ಗುಣ ಪಡಿಸಲಾಗದ ರೋಗ, ದುಷ್ಟ ಅಗೋಚರ ಶಕ್ತಿಯ ಪ್ರಯೋಗ, ತಂತ್ರ,ಮಂತ್ರ:
ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮಿವಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್
ಮೇಲಿನದು ಮೃತ್ಯುಂಜಯ ಜಪದ ಮಂತ್ರ. ಇದರ ಬೀಜ ಮಂತ್ರ: ಓಂ ಜೂಂ ಸ: ರಕ್ಷಯ ರಕ್ಷಯ
ಓಂ ಜೂಂ ಸ: ಪಾಲಯ ಪಾಲಯ.
ನಿತ್ಯವೂ ಕನಿಷ್ಠ ಒಂದು ಗಂಟೆ ಕಾಲ ಸಮಸ್ಯೆಗೆ ಒಳಗಾದ ವ್ಯಕ್ತಿ ಧ್ಯಾನಿಸಿ ಪೂಜಿಸಿ, ಶರಣಾಗತಿ ಯಿಂದ ಪ್ರಾರ್ಥಿಸುವುದು.
🌿🌳🌿🌳🌿🌳🌿🌳🌿🌳🌿
ಬನ್ನಿ ಮರ/ಶಮೀವೃಕ್ಷದ ಉಪಯೋಗ
* ಸಂತತಿ ಸೌಭಾಗ್ಯ - ಅಥರ್ವಣ ವೇದದಲ್ಲಿ ಶಮೀವೃಕ್ಷ ಸಂತತಿ ಸೌಖ್ಯವನ್ನು ನೀಡುವುದಾಗಿ ಹೇಳಿದೆ..
* ಮೂಲವ್ಯಾಧಿ ಯಿಂದ ಬಳಲುವವರು ಬನ್ನಿಯ ಎಲೆಯ ಕಷಾಯವನ್ನು ತಣ್ಣೀರಿನ ಟಬ್ಬಿನಲ್ಲಿ ಹಾಕಿ ಅದರಲ್ಲಿ ಕುಳಿತುಕೋಳ್ಳಬೇಕು
* ಮುಖದ ಮೇಲಿನ ಅನಗತ್ಯ ರೋಮ ವು ಬೇಳೆಯುತ್ತಿದ್ದರೆ ಬನ್ನಿ ಕಾಯಿಯನ್ನು ನೀರಿನಲ್ಲಿ ತೇಯ್ದು ಲೇಪಿಸುತ್ತಿದ್ಧಲ್ಲಿ ಬೆಳವಣಿಗೆ ತಗ್ಗುತ್ತದೆ
* ಬನ್ನಿ ತೋಗಟೆಯ ಕಷಾಯವು ಬೇದಿ, ಕೆಮ್ಮು, ತಲೆಸುತ್ತು, ಚರ್ಮ ರೋಗ, ರಕ್ತಸ್ರಾವ, ಜಂತುಹುಳುಗಳ ತೊಂದರೆ ಗೆ ಉಪಯುಕ್ತ
* ಬನ್ನಿಯ ಕಾಯಿ ಪಿತ್ತ ವೃದ್ಧಿ ಮಾಡುವುದಲ್ಲದೆ ಮೆದುಳಿನ ಟಾನಿಕ್ ಆಗಿ ಕೆಲಸ ಮಾಡುತ್ತದೆ
* ಬನ್ನಿ ಮರದ ತೊಗಟೆ ಕಷಾಯ ರುಮಾಡಿಸಂ ಇಂದ ಬಳಲುತ್ತಿರುವವರಿಗೆ ಉತ್ತಮ
* ಬನ್ನಿ ಮರದ ಹೂವುಗಳನ್ನು ಸಕ್ಕರೆಯೊಂದಿಗೆ ಬೆರೆಸಿ ಸೇವಿಸಿದರೆ ಗರ್ಭಪಾತ ವನ್ನು ತಡೆಗಟ್ಟಬಹುದು
* ತೊಗಟೆಯನ್ನು ಪುಡಿ ಮಾಡಿ ಪೇಸ್ಟನ್ನು ಚೇಳು ಕಡಿದ ಜಾಗಕ್ಕೆ ಹಚ್ಚಿದರೆ ವಿಷ ಪ್ರಭಾವ ಕಡಿಮೆ ಆಗುತ್ತದೆ
* ತೊಗಟೆಯ ಪುಡಿಯನ್ನು ಅರಿಷಣ ಮತ್ತು ಹಾಲಿನೊಂದಿಗೆ ಕಳಿಸಿ ಹಚ್ಚಿದರೆ ಚರ್ಮ ಕಾಂತಿ ಯುತವಾಗುತ್ತದೆ.
* ತೊಗಟೆಯ ಕಷಾಯವು ಆಮಶಂಕೆ, ಬೇದಿಗೆ ಉತ್ತಮ ಔಷಧಿ
* ತೊಗಟೆಯ ಕಷಾಯದಿಂದ ಬಾಯಿ ಮುಕ್ಕಳಿಸಿದ್ದಲ್ಲಿ ಗಂಟಲು ನೋವು, ಹಲ್ಲು ನೋವು ಪರಿಹಾರವಾಗುತ್ತದೆ
* ಅರ್ಧಗಂಟೆ ಅಥವಾ ಒಂದು ಗಂಟೆ ಈ ಶಮೀವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡಿದರೆ ದೀರ್ಘಕಾಲೀನ ರೋಗಗಳಿದ್ದರೆ ಗುಣವಾಗುವುದು.
ಹೃದ್ರೋಗ ಇದ್ದರೆ ಈ ಮರದ ಗಾಳಿಯನ್ನು ಪ್ರತಿದಿನ ಸೇವಿಸಿದ್ದರೆ ತೊಂದರೆ ನಿವಾರಣೆ ಆಗುವುದು.
* ಶಮೀ ವೃಕ್ಷ ಇರುವ ಸ್ಥಳದಲ್ಲಿ ಬಾವಿ ತೋಡಿಸಿದರೆ ಸಿಹಿ ನೀರು ಸಿಗುತ್ತದೆ. ( ಗ್ರಾಮಿಣ ಹಿರಿಯರ ನಂಬಿಕೆ/ ಅನುಭವ & ಯಶಸ್ವಿ ಪ್ರಯೋಗ)
ವಾಸ್ತುದೋಷ ಇರುವ ಮನೆಯಲ್ಲಿ ಶಮೀವೃಕ್ಷದ ಎಲೆಯನ್ನು ದೇವರ ಮನೆಯಲ್ಲಿಟ್ಟರೆ ದೋಷ ನಿವಾರಣೆ.
ಸಂತಾನಭಾಗ್ಯ ಇಲ್ಲದವರು ಈ ಶಮೀವೃಕ್ಷವನ್ನು ಬೆಳಗಿನ ಸಮಯದಲ್ಲಿ ಪ್ರದಕ್ಷಿಣಿ ಹಾಕಿದರೆ ಸಂತಾನ ಭಾಗ್ಯ ದೊರೆಯುವುದು.
( ನಂಬಿಕೆ & ನಾಟಿ ವೈದ್ಯರ ಪ್ರಯೋಗದ ಮಾಹಿತಿ ಆಧರಿಸಿ)
ದೀರ್ಘವಾದ ಕೆಮ್ಮು ಇದ್ದರೆ ಈ ವೃಕ್ಷದ ಚಕ್ಕೆಯಿಂದ ಕಷಾಯ ಮಾಡಿ ಕುಡಿದರೆ ಗುಣಮುಖವಾಗುವುದು.
ವಿವಾಹಕ್ಕೆ ತಡೆಯಾದರೆ 48 ದಿನ ಈ ವೃಕ್ಷವನ್ನು ಪ್ರದಕ್ಷಿಣೆ ಹಾಕಬೇಕು. ( ನಂಬಿಕೆ )
ಮಾಟ-ಮಂತ್ರ ಪ್ರಯೋಗವಾಗಿದ್ದರೆ ಈ ಮರಕ್ಕೆ 21 ದಿನ ಪೂಜೆ ಮಾಡಿದರೆ ಪ್ರಯೋಗದಿಂದ ಹೊರಬರಬಹುದು.
( ನಂಬಿಕೆ )
🐈🕺🏻🐈🕺🏻🐈🕺🏻🐈🕺🏻🐈🕺🏻🐈
*ಬೆಕ್ಕು ದಾರಿಯಲ್ಲಿ ಅಡ್ಡ ದಾಟಿದರೆ ಶುಭ ಅಥವಾ ಅಶುಭ?*
ಬಿಕ್ಕು ದಾರಿಯಲ್ಲಿ ಅಡ್ಡ ದಾಟುವುದರಿಂದ ಶುಭ ಮತ್ತು ಅಶುಭ ಪ್ರಭಾವ ಬಿರುತ್ತದೆ ಎಂದು ಯಾಕೆ ಹೇಳುತ್ತಾರೆ ಎಂದರೆ ನಿಜವಾಗಿಯೂ ಬೆಕ್ಕು ಅಡ್ಡ ಬಂದರೆ ಅಶುಭ ಆಗುತ್ತದೆ. ಜನರ ನಂಬಿಕೆ ಯಾವ ರೀತಿ ಇರುತ್ತದೆ ಎಂದರೆ ಒಂದು ವೇಳೆ ದಾರಿಯಲ್ಲಿ ಬೆಕ್ಕು ಅಡ್ಡ ದಾಟಿ ಹೋದರೆ ಅಪಶಕುನವಾಗುತ್ತದೆ ಎಂದು ಹೇಳುತ್ತಾರೆ.ಈ ಕಾರಣದಿಂದ ಹಲವಾರು ಜನರು ಬೆಕ್ಕು ಅಡ್ಡ ದಾಟಿದಾಗ ಸ್ವಲ್ಪ ನಿಂತುಕೊಳ್ಳುತ್ತಾರೆ.ಎಲ್ಲರು ಈ ನಿಯಮವನ್ನು ನಂಬುತ್ತಾರೆ.ಬೇರೆ ವ್ಯಕ್ತಿಗಳು ಬಂದು ಆ ದಾರಿಯನ್ನು ದಾಟಲಿ ಅಂತ ನಿರೀಕ್ಷೆ ಕೂಡ ಮಾಡುತ್ತಾರೆ.ಇದರಿಂದ ಅಪಶಕುನ ಮುಗಿದು ಬಿಡುತ್ತದೆ ಅಂತ ಅಂದುಕೊಳ್ಳುತ್ತರೆ.ಆದರೆ ಸತ್ಯ ಏನೆಂದರೆ ಪ್ರತಿಯೊಂದು ಸಂದರ್ಭದಲ್ಲಿ ಬೆಕ್ಕು ಅಡ್ಡ ದಾಟುವುದು ಅಶುಭ ಆಗುವುದಿಲ್ಲ.
*ಯಾವ ಸಮಯದಲ್ಲಿ ಬೆಕ್ಕು ದಾಟುವುದರಿಂದ ಫಲ ಸಿಗುತ್ತದೆ, ಯಾವುದು ಅಶುಭ ಎಂದರೆ??*
1, ಬೆಕ್ಕು ರಸ್ತೆಯಲ್ಲಿ ಎಡ ಭಾಗದಿಂದ ಬಲ ಭಾಗಕ್ಕೆ ದಾಟಿದರೆ ಅಶುಭ ಎಂದು ಹೇಳುತ್ತಾರೆ.ಬೇರೆ ಸ್ಥಿತಿಯಲ್ಲಿದಾಟುವುದು ಅಶುಭ ಎಂದು ಹೇಳುವುದಿಲ್ಲ.ಒಂದು ಮಾಹಿತಿ ಪ್ರಕಾರ ನರಿಯ ರೀತಿಯೇ ಬೆಕ್ಕಿನ ಆರನೇ ಇಂದ್ರಿಯವು. ತುಂಬಾನೇ ವಿಕಾಸಗೋಂದಿರುತ್ತದೆ. ಈ ಕಾರಣದಿಂದ ಇವು ಭವಿಷ್ಯದಲ್ಲಿ ನಡೆಯುವಂತಹ ಘಟನೆ ಬಗ್ಗೆಯೂ ಮೊದಲೇ ತಿಳಿದುಕೊಳ್ಳುತ್ತವೆ ಹಾಗೂ ನಿಮಗೆ ಸೂಚನೆಯನ್ನು ನೀಡುತ್ತವೆ.ಯಾವಾಗ ದಾರಿಯಲ್ಲಿ ಬೆಕ್ಕು ಅಡ್ಡ ದಾಟಿದಿಯೋ ಆಗ ನಿಮ್ಮ ಜೊತೆ ಯಾವುದೇ ಒಂದು ಕೆಟ್ಟ ಘಟನೆ ಹೋಗಿದೆ.ಇದು ನಿಜವಾಗಿಯೂ ಸತ್ಯ.
2, ಇದು ತಂತ್ರ ವಿಜ್ಞಾದಲ್ಲಿ ಬೆಕ್ಕನ್ನು ಮಹತ್ವಪೂರ್ಣವಾದ ಜೀವಿ ಅಂತ ಹೇಳಿದ್ದರೆ.ಒಂದು ವೇಳೆ ಬೆಕ್ಕು ಮನೆಗೆ ಬಂದು ಅಳುವುದಕ್ಕೆ ಶುರು ಮಾಡಿದರೆ ಯಾವುದಾದರೂ ದುರದೃಷ್ಟ ಘಟನೆ ನಡೆಯುತ್ತದೆ ಎಂದು ಅರ್ಥ.ಒಂದು ವೇಳೆ ಬೆಕ್ಕುಗಳು ಜಗಳ ಆಡುತ್ತಿದ್ದಾರೆ ಧನ ಸಂಪತ್ತಿನ ಹಾನಿ ಅಥವಾ ಸಾವಿನ ಸುದ್ದಿಯನ್ನು ಕೇಳುವ ಸಾಧ್ಯತೆ ಇದೆ.
3, ಬೆಕ್ಕಿನಿಂದ ಧನ ಸಂಪತ್ತಿನ ಆಗಮನದ ಭವಿಷ್ಯ.ದೀಪಾವಳಿ ದಿನ ಬೆಕ್ಕು ಏನಾದರು ಮನೆಗೆ ಬಂದರೆ ತುಂಬಾ ಶುಭ ಎಂದು ತಿಳಿಯಲಾಗಿದೆ.ಯಾಕೆಂದರ್ ತಾಯಿ ಲಕ್ಷ್ಮಿ ದೇವಿ ಮನೆಗೆ ಬರುತ್ತಾರೆ ಎನ್ನುವ ಸೂಚನೆ ಆಗುತ್ತದೆ.ವರ್ಷವಿಡೀ ಧನ ಸಂಪತ್ತಿನ ಆಗಮನ ಕೂಡ ಇರುತ್ತದೆ.
4.ಒಂದು ವೇಳೆ ಬೆಕ್ಕು ಮನೆಯಲ್ಲಿ ಜನ್ಮ ಕೊಟ್ಟರೆ ಇದು ಕೂಡ ತುಂಬಾನೇ ಶುಭ.
5. ಒಂದು ವೇಳೆ ಬೆಕ್ಕು ಏನಾದರು ಮನೆ ಒಳಗೆ ಬಂದು ಕದ್ದು ಮುಚ್ಚಿ ಹಾಲನ್ನು ಕುಡಿದರೆ ಇದನ್ನು ಹಲವಾರು ಜನ ಅಶುಭ ಎಂದು ಹೇಳುತ್ತಾರೆ.ಆದರೆ ಸತ್ಯ ಏನೆಂದರೆ ಧನ ಸಂಪತ್ತಿನ ಆಗಮನ ಶುಭ ಸಂಕೇತವು ಇದು ಆಗಿರುತ್ತದೆ.ಶಾಸ್ತ್ರಗಳ ಅನುಸರವಾಗಿ ಪದೇ ಪದೇ ಬೆಕ್ಕು ಮನೆಗೆ ಬರುವುದು ಅಶುಭ ಎಂದು ಹೇಳುತ್ತಾರೆ.ಇಂತಹ ಸ್ಥಿತಿಯಲ್ಲಿ ಸತ್ಯ ನಾರಾಯಣ ಕಥೆಯನ್ನು ಹೇಳಬೇಕು.ಇದರಿಂದ ಕೆಟ್ಟ ಪ್ರಭಾವ ನಿಮ್ಮ ಮನೆಯ ಮೇಲೆ ಬೀಳುವುದಿಲ್ಲ.
6, ಗ್ರಹ ದೋಷಗಳಿಂದ ಮನೆಯನ್ನು ಬೆಕ್ಕು ರಕ್ಷಿಸುತ್ತವೆ.ಜೋತಿಷ್ಯ ಶಾಸ್ತ್ರದಲ್ಲಿ ಬೆಕ್ಕನ್ನು ರಾಹುವಿನ ಸವಾರಿ ಅಂತ ತಿಳಿಯಲಾಗಿದೆ.ಯಾರ ಕುಂಡಲಿಯಲ್ಲಿ ರಾಹು ಶುಭ ಇರುವುದಿಲ್ಲವೋ ಅಂತವರು ರಾಹುವಿನ ಕೆಟ್ಟ ಪ್ರಭಾವದಿಂದ ಉಳಿಯಬೇಕು ಎಂದರೆ ಬೆಕ್ಕಿಗೆ ಹಾಲು ಊಟವನ್ನು ತಿನ್ನಿಸಬೇಕು.ಈ ರೀತಿ ಮಾಡುವುದರಿಂದ ರಾಹುವಿನ ದೋಷ ಅಂಟುವುದಿಲ್ಲ.ಈ ರೀತಿ ಮಾಡಿದರೆ ಎಲ್ಲಾ ಕಾರ್ಯಗಳು ಆಶ್ಚರ್ಯ ರೂಪದಲ್ಲಿ ಆಗುತ್ತದೆ.
🪙💦🪙💦🪙💦🪙💦🪙💦🪙
*ನೀರಿಗೆ ನಾಣ್ಯವನ್ನು ಯಾಕೆ ಎಸೆಯಲಾಗುತ್ತೆ ಗೊತ್ತಾ..? ಇಲ್ಲಿದೆ ಇದರ ಉಪಯೋಗ*
ದೇವಾಲಯಗಳಲ್ಲಿ, ತೀರ್ಥಸ್ಥಳಗಳಲ್ಲಿ ನದಿಗೆ ಅಥವಾ ನೀರಿಗೆ ನಾಣ್ಯವನ್ನು ಎಸೆಯಲಾಗುತ್ತದೆ. ನಾಣ್ಯವನ್ನು ಯಾಕೆ ನೀರಿನಲ್ಲಿ ಹಾಕುತ್ತಾರೆನ್ನುವುದರ ಕುರಿತು ಸಾಕಷ್ಟು ಜನರಿಗೆ ಇನ್ನೂ ಕೂಡ ತಿಳಿದಿಲ್ಲ. ಇದಕ್ಕೆ ಕಾರಣವೇನು ಗೊತ್ತಾ..? ಇದರ ಪ್ರಯೋಜನವಾದ್ರೂ ಏನು ಗೊತ್ತಾ..?
ಹಿಂದೂ ಧರ್ಮದಲ್ಲಿನ ಅತ್ಯಂತ ಹಳೆಯ ಸಂಪ್ರದಾಯಗಳಲ್ಲಿ ನದಿಗೆ ನಾಣ್ಯಗಳನ್ನು ಹಾಕುವ ಸಂಪ್ರದಾಯ ಕೂಡ ಅತ್ಯಂತ ಹಳೆಯ ಸಂಪ್ರದಾಯವಾಗಿದೆ. ಹಲವರಿಗೆ ಈ ಸಂಪ್ರದಾಯದ ಬಗ್ಗೆ ತಿಳಿದಿಲ್ಲ. ಆದರೂ ಕೂಡ ನಮ್ಮ ಪೂರ್ವಜರು ನದಿಗೆ ನಾಣ್ಯವನ್ನು ಹಾಕುತ್ತಿದ್ದರೆಂದು ಅವರೂ ಕೂಡ ಹಾಕುತ್ತಾ ಬಂದಿದ್ದಾರೆ. ಯಾವುದೇ ಓರ್ವ ವ್ಯಕ್ತಿಯು ನದಿಯನ್ನು ದಾಟುವಾಗ ತನ್ನ ಪರ್ಸ್‌ನಲ್ಲಿದ್ದ ಒಂದು ನಾಣ್ಯವನ್ನು ತೆಗೆದು ನದಿಗೆ ಹಾಕುವುದು ಅಥವಾ ತೀರ್ಥಸ್ಥಳಗಳಿಗೆ, ದೇವಾಲಯಗಳಿಗೆ ಹೋದಾಗ ಅಲ್ಲಿ ಕೊಳಕ್ಕೆ ನಾಣ್ಯವನ್ನು ಹಾಕುವುದು ಈ ಸಂಪ್ರದಾಯಗಳೆಲ್ಲಾ ನಮ್ಮ ಪೂರ್ವಜರ ಕಾಲದಿಂದಲು ಆಚರಿಸಿಕೊಂಡು ಬಂದ, ನಂಬಿಕೊಂಡು ಬಂದ ಸಂಪ್ರದಾಯವಾಗಿದೆ. ಆದರೆ ಇಂದಿಗೂ ಕೂಡ ಇದಕ್ಕೆ ಕಾರಣವೇನೆಂಬೂದು ತಿಳಿದು ಬಂದಿಲ್ಲ.
*ಇದು ಸಂಪ್ರದಾಯವೇ ಹೊರತು ಮೂಢನಂಬಿಕೆಯಲ್ಲ:*
ನದಿಯಲ್ಲಿ ನಾಣ್ಯಗಳನ್ನು ಹಾಕುವುದು ಇದೊಂದು ಮೂಢನಂಬಿಕೆ ಎಂದು ಹಲವರು ಹೇಳುತ್ತಾರೆ. ಆದರೆ ಇದು ಮೂಢನಂಬಿಕೆಯಲ್ಲ, ಬದಲಾಗಿ ಇದೊಂದು ರೂಢಿಯಾಗಿದೆ. ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರುವಲ್ಲಿ ಒಂದು ಕಾರಣವಿದೆ. ಪ್ರಾಚೀನ ಕಾಲದಲ್ಲೇ ನದಿಗೆ ನಾಣ್ಯವನ್ನು ಹಾಕುವ ಸಂಪ್ರದಾಯ ಆರಂಭವಾಗಿತ್ತು.
ಪ್ರಾಚೀನ ಕಾಲದಲ್ಲಿ ಬೆಳ್ಳಿಯ ನಾಣ್ಯಗಳಾಗಲಿ, ಅಥವಾ ಪ್ರಸ್ತುತ ಚಾಲ್ತಿಯಲ್ಲಿರುವ ನಾಣ್ಯಗಳಾಗಲಿ ಇರಲಿಲ್ಲ. ಬದಲಾಗಿ ಆ ಕಾಲದಲ್ಲಿ ಹೆಚ್ಚಾಗಿ ತಾಮ್ರದ ನಾಣ್ಯಗಳನ್ನು ಉಪಯೋಗಿಸಲಾಗುತ್ತಿತ್ತು. ತಾಮ್ರಕ್ಕೆ ನೀರನ್ನು ಶಿದ್ಧೀಕರಿಸುವ ಗುಣವಿದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಆದ್ದರಿಂದ ಪ್ರಾಚೀನ ಕಾಲದಲ್ಲಿ ಜನರು ನೀರನ್ನು ಶುದ್ಧೀಕರಿಸಲು ತಮ್ಮಲ್ಲಿದ್ದ ತಾಮ್ರದ ನಾಣ್ಯಗಳನ್ನು ಕೆರೆಯಲ್ಲಿ, ನದಿಯನ್ನು ದಾಟುವಾಗ ನದಿಯಲ್ಲಿ, ಕೊಳದಲ್ಲಿ ಹಾಕುತ್ತಿದ್ದರು. ಇಂದಿನ ಕಾಲದಲ್ಲಿ ತಾಮ್ರದ ನಾಣ್ಯಗಳ ಉಪಯೋಗಿವಿಲ್ಲ. ಆದರೂ ಕೂಡ ಜನರು ಇಂದಿಗೂ ನಾಣ್ಯಗಳನ್ನು ದೇವಸ್ಥಾನದಲ್ಲಿರುವ ಕೊಳದಲ್ಲಿ, ತೀರ್ಥಸ್ಥಳಗಳಲ್ಲಿ, ನದಿಗಳಲ್ಲಿ ಹಾಕುತ್ತಾರೆ. ಪ್ರಾಚೀನ ಸಂಪ್ರದಾಯವನ್ನೇ ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ.
*ವೈಜ್ಞಾನಿಕ ಕಾರಣ:*
ಪ್ರಾಚೀನ ಕಾಲದಿಂದಲೂ ಅನುಸರಿಸಿಕೊಮಡ ಬಂದ ಈ ರೂಢಿಗೆ ಸಾಕಷ್ಟು ವೈಜ್ಞಾನಿಕ ಮಹತ್ವವಿದೆ. ತಾಮ್ರವು ನೀರನ್ನು ಶುದ್ಧೀಕರಿಸುವ ಗುಣವನ್ನು ಹೊಂದಿದೆ ಮತ್ತು ಅನೇಕ ರೋಗಗಳನ್ನು ಕೂಡ ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ನಾವಿಂದು ಉಪಯೋಗಿಸುತ್ತಿರುವ ಉಕ್ಕಿನ ನಾಣ್ಯಕ್ಕೆ ಈ ಸಾಮರ್ಥ್ಯವಿಲ್ಲ. ಪ್ರಾಚೀನ ಕಾಲದಲ್ಲಿ ಜನರು ತಾಮ್ರದ ಪಾತ್ರೆಯಲ್ಲಿ ನೀರನ್ನು ಸೇವಿಸುತ್ತಿದ್ದರು. ಇದರಿಂದಾಗಿ ನೀರು ಶುದ್ಧವಾಗುವುದರೊಂದಿಗೆ ಆರೋಗ್ಯದ ದೃಷ್ಟಿಯಲ್ಲೂ ಸಹಕಾರಿಯಾಗಿತ್ತು. ಇದರಲ್ಲಿನ ಆಂಟಿ ಆಕ್ಸಿಡೆಂಟ್ ಗುಣವು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕರಿಸುತ್ತಿತ್ತು.
*ದೇವರಿಗೆ ಉಡುಗೊರೆ ನೀಡುವ ವಿಧಾನವಾಗಿದೆ:*
ನಾಣ್ಯಗಳನ್ನು ನೀರಿಗೆ ಹಾಕುವುದರಿಂದ ಅದು ದೇವರಿಗೆ ಸೇರುತ್ತದೆ ಎನ್ನುವುದು ಹಿಂದೂ ಧರ್ಮೀಯರ ನಂಬಿಕೆ. ನೀರು ದೇವತೆಗಳಿಗೆ ಸೇರಿರುವ ಅಂಶವಾಗಿದೆ. ದೇವಾನು ದೇವತೆಗಳು ಆಕಾಶದಲ್ಲಿ ವಾಸಿಸುತ್ತಾರೆ ಎಂದು ಹೇಗೆ ಹೇಳಲಾಗುತ್ತದೆಯೋ ಹಾಗೇ ನೀರಿನಲ್ಲೂ ವಾಸಿಸುತ್ತಾರೆ ಎಂದು ನಂಬಲಾಗುತ್ತದೆ. ಆದ್ದರಿಂದ ದೈವಿಕ ಶಕ್ತಿಗಳನ್ನು ಮೆಚ್ಚಿಸಲು ದೇವರಿಗೆ ನಾಣ್ಯವನ್ನು ಅರ್ಪಿಸಲಾಗುತ್ತದೆ. ಜನರು ನದಿಗಳಿಗೆ, ಕೊಳಗಳಿಗೆ, ತೀರ್ಥಸ್ಥಳಗಳಲ್ಲಿನ ನೀರಿಗೆ ನಾಣ್ಯವನ್ನು ಹಾಕಿದಾಗ ಆ ನಾಣ್ಯವು ದೇವರಿಗೆ ಸಲ್ಲುತ್ತದೆ ಎಂದು ಭಾವಿಸುತ್ತಾರೆ.
*ಗ್ರಹ ದೋಷ ನಿವಾರಣೆಯಾಗುತ್ತದೆ:*
ಹೆಚ್ಚಿನ ಜ್ಯೋತಿಷಿಗಳು ಹೇಳುವ ಪ್ರಕಾರ ಯಾವುದೇ ಓರ್ವ ವ್ಯಕ್ತಿ ಗ್ರಹ ದೋಷವನ್ನು ಹೊಂದಿದ್ದರೆ ಆ ವ್ಯಕ್ತಿಯು ತನ್ನ ದೋಷವನ್ನು ನಿವಾರಿಸಿಕೊಳ್ಳಲು ನಾಣ್ಯಗಳನ್ನು ಹಾಗೂ ಕೆಲವು ಪೂಜಾ ವಸ್ತುಗಳನ್ನು ನೀರಿನಲ್ಲಿ ಹಾಕಬೇಕು. ನೀರಿನಲ್ಲಿ ಬೆಳ್ಳಿಯ ನಾಣ್ಯವನ್ನು ಹಾಕಿದರೆ ಅಶುಭ ತರುವಂತಹ ದೋಷಗಳು ನಿವಾರಣೆಯಾಗುತ್ತದೆ ಎಂದು ಜ್ಯೋತಿಷ್ಯರು ಹೇಳುತ್ತಾರೆ. ಆದ್ದರಿಂದ ನಿಮ್ಮ ಜೀವನದಲ್ಲಿ ಗ್ರಹ ದೋಷವಿದ್ದರೆ ಅಂತವರು ನಾಣ್ಯಗಳನ್ನು ನೀರಿಗೆ ಹಾಕುವ ಮೂಲಕ ತಮ್ಮ ದೋಷವನ್ನು ನಿವಾರಿಸಿಕೊಳ್ಳಬಹುದು.
*ಆದಾಯ ಹೆಚ್ಚಾಗುತ್ತದೆ:*
ನದಿಯ ನೀರಿಗೆ ನಾಣ್ಯಗಳನ್ನು ಹಾಕುವುದರಿಂದ ಆದಾಯವು ಹೆಚ್ಚಾಗುತ್ತದೆ ಎಮದು ಕೆಲವರು ನಂಬುತ್ತಾರೆ. ಒಬ್ಬ ವ್ಯಕ್ತಿಯು ಗಳಿಸಿದ ಹಣದಲ್ಲಿ ಪ್ರಗತಿಯಾಗದಿದ್ದರೆ, ಹಣದ ಕೊರತೆಯು ಸರಿದಂತೆ ಇನ್ನಿತರ ಹಣದ ಸಮಸ್ಯೆಗಳು ಎದುರಾಗುತ್ತಿದ್ದರೆ ಆ ವ್ಯಕ್ತಿ ಗಳಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನು ನಾಣ್ಯದ ರೂಪದಲ್ಲಿ ನದಿಯ ನೀರಿಗೆ ಹಾಕಬೇಕು. ಈ ರೀತಿ ಮಾಡಿದರೆ ಕೆಲವು ದಿನಗಳಲ್ಲಿ ಆ ವ್ಯಕ್ತಿಯ ಆದಾಯವು ಹೆಚ್ಚಳವಾಗಲು ಪ್ರಾಂಭವಾಗುತ್ತದೆ.
*ಇದರ ಪ್ರಾಮುಖ್ಯತೆಯನ್ನು ಲಾಲ್ ಕಿತಾಬ್‌ನಲ್ಲೂ ಉಲ್ಲೇಖಿಸಲಾಗಿದೆ:*
ವೈದಿಕ ಜ್ಯೋತಿಷ್ಯದ ಪ್ರಮುಖ ಪುಸ್ತಕಗಳಲ್ಲಿ ಒಂದಾದ ಲಾಲ್ ಕಿತಾಬ್‌ನಲ್ಲೂ ಕೂಡ ಇದರ ಕುರಿತು ಉಲ್ಲೇಖವನ್ನು ಮಾಡಲಾಗಿದೆ. ಸೂರ್ಯ ಮತ್ತು ಪಿತೃಗಳನ್ನು ಮೆಚ್ಚಿಸಲು ಹರಿಯುವ ನೀರಿನಲ್ಲಿ ತಾಮ್ರದ ನಾಣ್ಯವನ್ನು ಹಾಕಬೇಕು ಇದರಿಂದ ಅವರ ಆಶೀರ್ವಾದವು ನಮಗೆ ದೊರೆಯುತ್ತದೆ ಎನ್ನಲಾಗಿದೆ.
ಈಗಾಗಲೇ ನಾವು ಹೇಳಿರುವ ಹಾಗೇ ಇತ್ತೀಚಿನ ದಿನಗಳಲ್ಲಿ ತಾಮ್ರದ ನಾಣ್ಯಗಳು ಚಾಲ್ತಿಯಿಲ್ಲ. ಕೇವಲ ಉಕ್ಕಿನ ನಾಣ್ಯಗಳನ್ನು ನಾವು ನೋಡಬಹುದು. ಆದರೂ ಕೂಡ ಇಂದಿನ ಸಾಕಷ್ಟು ಜನರು ಪ್ರಾಚೀನ ಸಂಪ್ರದಾಯವನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ ಮಾತ್ರವಲ್ಲ, ಬರುತ್ತಿದ್ದಾರೆ ಕೂಡ. ಇದೊಂದು ಸಂಪ್ರದಾಯವಾಗಿರುವುದರಿಂದ ಇದನ್ನು ನಾವು ಮೂಢನಂಬಿಕೆಯೆನ್ನಲು ಸಾಧ್ಯವಿಲ್ಲ.
🌴🐘🐎🐄🪔🦚🪔🐄🐎🐘🌴
Post a Comment