ಸಂಸ್ಕೃತ ಪದವಿಯಲ್ಲಿ 5ಚಿನ್ನದ ಪದಕ ಪಡೆದ ಮುಸ್ಲಿಂ ವಿದ್ಯಾರ್ಥಿನಿ.

ಸಂಸ್ಕೃತ ಪದವಿಯಲ್ಲಿ 5ಚಿನ್ನದ ಪದಕ ಪಡೆದ ಮುಸ್ಲಿಂ ವಿದ್ಯಾರ್ಥಿನಿ. 
ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯೊಬ್ಬಳು ಲಕ್ನೌ ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಪದವಿ ಎಂ. ಎ. ಸಂಸ್ಕೃತ ವಿಷಯದಲ್ಲಿ 5ಚಿನ್ನದ ಪದಕ ಪಡೆದು ಆಚರಿಗೆ ಕರಣರಾಗಿದ್ದಾಳೆ ಲಕ್ನೌ ವಿಶ್ವವಿದ್ಯಾನಿಲಯದ (ಎಲ್ ಸಿ )ವಿದ್ಯಾರ್ಥಿನಿ ಗಜಾಲಾ ಎಂಬಾಕೆ ಈ ಸಾಧನೆ ಮಾಡಿದ್ದಾಳೆ. ಕಳೆದ ವರ್ಷ ನೆವೆಂಬರ್ನಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಈ ಕುರಿತು ಘೋಷಣೆ ಮಾಡಲಾಗಿತ್ತು..ಕೋವಿಡ್ ಕಾರಣದಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಪದಕ ನೀಡಲು ಸಾಧ್ಯವಾಗಿರಲಿಲ್ಲ ಆದರೆ ಈಗ ಈ ಪದಕ ವಿತರಣೆ ಮಾಡಲಾಗಿದೆ. ದಿನಗೂಲಿ ನೌಕರನ ಮಗಳಾದ ಗಜಾಲಾ 5ಭಾಷೆಯನ್ನು (ಹಿಂದಿ, ಇಂಗ್ಲಿಷ್, ಉರ್ದು, ಅರೇಬಿಕ್,ಸಂಸ್ಕೃತ )ಬಲ್ಲವಳಾಗಿದ್ದಾಳೆ.

Post a Comment

Previous Post Next Post