ದೇಶದಲ್ಲಿ ರಾಷ್ಟ್ರ ಧ್ವಜ ಹರಿಸಬಾರದೆಂದು ನಿಯಮವಿದೆಯೇ ?.. ಸಂಸದೆ ಸುಮಲತಾ ಪ್ರಶ್ನೆ.

ದೇಶದಲ್ಲಿ ರಾಷ್ಟ್ರ ಧ್ವಜ ಹರಿಸಬಾರದೆಂದು ನಿಯಮವಿದೆಯೇ ?.. ಸಂಸದೆ ಸುಮಲತಾ ಪ್ರಶ್ನೆ. 
ಬಜೆಟ್ ಅಧಿವೇಶನದ ಕೊನೆಯ ದಿನವಾದ ನಿನ್ನೆ ಸಂಸದೆ ಸುಮಲತಾ ಅಂಬರೀಷ್ ಮಾತನಾಡಿದ್ದಾರೆ. ರಾಜ್ಯದ ವಿವಿಧ ಸಮಸ್ಯೆಗಳ ಕುರಿತಂತೆ ಬೆಳಕು ಚೆಲ್ಲಿದ ಅವರು, ತ್ರಿವರ್ಣ ಧ್ವಜ ಹಾರಾಟಕ್ಕೆ ಅಡ್ಡಿ ಪಡಿಸಿರುವ ವಿಚಾರವಾಗಿ ತಮ್ಮ ಧ್ವಜ ಹಾರಾಟಕ್ಕೆ ಅಡ್ಡಿ ಪಡಿಸಿರುವ ವಿಚಾರವಾಗಿ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಜನವರಿ 26ರಂದು ಗಣರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ತ್ರಿವರ್ಣ ಧ್ವಜ ಹಾರಾಟ ಮಾಡಲು ಅಡ್ಡಿ ಪಡಿಸಿರುವ ಘಟನೆ ಬಗ್ಗೆ ಮಂಡ್ಯದ ಸಂಸದೆ ಸುಮಲತಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಕಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿರುವ ಸಂಸದೆ, ಅದ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿರುವ ಜನ್ನಾ ಟವರ್ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಮುಂದಾದ ವೇಳೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎಂದರು. ಇಂತ ಘಟನೆ ಕಾರನಾಟಕದಲ್ಲೂ ನಡೆದಿದೆ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ. ದೇಶದಲ್ಲಿ ತ್ರಿವರ್ಣ ಧ್ವಜ ಹರಿಸಬಾರದು ಎಂಬ ನಿಯಮ ಇದೆಯೇ ?ಎಂಬ ಪ್ರಶ್ನೆ ಮಾಡಿರುವ ಅವರು. ಈ ವಿಚಾರವನ್ನೂ ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿದರು. ಇದೆ ವೇಳೆ ಜಮ್ಮು ಕಶ್ಮೀರದ ಲಾಲ್ ಚೌಕ್ನಲ್ಲಿ ತ್ರಿವರ್ಣ ಧ್ವಜ ಹಾರಿಸುವ ವಿಚಾರವನ್ನು ಪ್ರಸ್ತಾಪಿಸಿ, ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Post a Comment

Previous Post Next Post