ಮಾನ್ಯರೇ,
ಇಂದು ಬಿಜೆಪಿ, ಬೆಂಗಳೂರು ಕೇಂದ್ರ ಮಹಿಳಾ ಮೋರ್ಚಾ ವತಿಯಿಂದ ಜೆಮ್ ಪೋರ್ಟಲ್ ಕಾರ್ಯಾಗಾರವನ್ನು ಬೆಂಗಳೂರು ನಗರ ಕಾರ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಕಾರ್ಯಾಗಾರದ ಉದ್ಘಾಟನೆಯನ್ನು ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಶ್ರೀ ಮಂಜುನಾಥ್ ರವರು ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಮೋರ್ಚಾ ಜೆಮ್ ಪೋರ್ಟಲ್ ನ ಪ್ರಮುಖರಾದ ಕು.ನಿಶ್ಚಿತಾ ಮತ್ತು ಶ್ರೀಮತಿ ದೀಪಿಕಾ ಮಂಜುನಾಥ್ ರೆಡ್ಡಿ ರವರು, ಬೆಂಗಳೂರು ಕೇಂದ್ರ ಉಪಾಧ್ಯಕ್ಷರಾದ ಶ್ರೀಮತಿ ಮಮತಾ ಉದಯ್ ರವರು, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀಮತಿ ರೇಖಾ ಕೆ.ಗೋವಿಂದ ರವರು, ಜಿಲ್ಲಾ ಪದಾಧಿಕಾರಿಗಳು, ಮಹಿಳಾ ಉದ್ಯಮಿಗಳು ಉಪಸ್ಥಿತರಿದ್ದರು.
ಜೆಮ್ ಪೋರ್ಟಲ್ ಬಗ್ಗೆ ಮಾಹಿತಿ, ಮಹಿಳಾ ಉದ್ಯಮಿಗಳ ನೊಂದಣಿ ಹಾಗೂ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮಾಡಲಾಯಿತು.
ಇಂತಿ
ಶ್ರೀನಾಥ್, ಮಾಧ್ಯಮ ಸಂಚಾಲಕರು, ಬೆಂಗಳೂರು ಕೇಂದ್ರ ಜಿಲ್ಲೆ
Post a Comment