ಬೆಂಗಳೂರು: ಚಿಂತಕ, ಲೇಖಕ ಧರ್ಮಪಾಲ್ ಅವರ ಕುರಿತು ವಿವಿಧ ವಿದ್ವಾಂಸರು ಬರೆದ ಲೇಖನಗಳ ಸಂಗ್ರಹ *'ಪರಂಪರಾಧಾರಿತ ಅಭ್ಯುದಯ ದರ್ಶನ - ಧರ್ಮಪಾಲ್ ದೃಷ್ಟಿ*' ಪುಸ್ತಕವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕ ಶ್ರೀ ವಿ ನಾಗರಾಜ್ ಬೆಂಗಳೂರಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ಬಿಡುಗಡೆಗೊಳಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಶ್ರೀ ಮುಕುಂದ, ಅಂಕಣಕಾರ, ಪ್ರಾಧ್ಯಾಪಕ ಡಾ. ರೋಹಿಣಾಕ್ಷ ಶಿರ್ಲಾಲು ಉಪಸ್ಥಿತರಿದ್ದರು. ಚಿಂತಕ ಶ್ರೀ ಎಂ.ಎಸ್. ಚೈತ್ರ ಸಂಪಾದಕರಾಗಿರುವ ಈ ಪುಸ್ತಕವನ್ನು ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿದೆ.
Post a Comment