ಇದು ಕೇವಲ ಪ್ರಾತಿನಿಧಿಕ ಚಿತ್ರ..
ಹುಬ್ಬಳ್ಳಿ-ಧಾರವಾಡದಲ್ಲಿ ಹೀಗೆ #blackbucks ಗಂಡು ಕೃಷ್ಣ ಮೃಗಗಳ ಕೊಂಬನ್ನು #headgear ಆಗಿ ಅಲಂಕರಿಸಿಕೊಂಡ ೨೯ ರಿಕ್ಷಾಗಳಿವೆ.
೨೯ ರಿಕ್ಷಾಗಳು ಇದ್ದಾಗ, ೩೦ ನೇಯ್ದು ಇರಬಹುದಲ್ಲ!?
ಸಾಂದರ್ಭಿಕವಾಗಿ ಗಣತಿ ನಡೆಸಿದಾಗ, ಕಳೆದೊಂದು ವಾರದಲ್ಲಿ ಇಷ್ಟು ರಿಕ್ಷಾಗಳು ಕಂಡುಬಂದಿವೆ. ಸುರುಳಿಯಾಕಾರದ ಕೊಂಬಿಗೆ ಡಾಂಬರ್, ಕಪ್ಪು ಬಣ್ಣ ಅಥವಾ ಹರಳೆಣ್ಣೆ ಲೇಪಿಸಿ #artificialhorn ಥರಹ ಕಾಣುವಂತೆ ಮಾಡಲಾಗಿದೆ. ಫೈಬರ್ ಅಥವಾ ಪ್ಲಾಸ್ಟಿಕ್ ನಿಂದ ತಯಾರಿಸಿದ ಕೊಂಬು ಎಂಬ ಸಬೂಬಿಗೆ!

(ಕಳೆದ ಬಾರಿ ಹಾಗಂತ ನಮಗೆ ಮೌಖಿಕವಾಗಿ ಅರಣ್ಯ ಇಲಾಖೆಯಿಂದ ಮತ್ತು ಸಂಚಾರ ಪೊಲೀಸ್ ಠಾಣೆಯಿಂದ ಮಾಹಿತಿ ನೀಡಲಾಗಿದೆ. ತಜ್ಞರಾರೋ? ಪರೀಕ್ಷೆಯ ವಿಧಾನ ಯಾವುದೋ?! ದೇವರೇ ಬಲ್ಲ.. ಹಾಗಾಗಿ, ಎಫ್.ಆಯ್.ಆರ್. ಅಥವಾ ಎಫ್.ಓ.ಸಿ. ಯಾರ ಮೇಲೂ ದಾಖಲಾಗಿಲ್ಲ. ಕೇವಲ ಕೊಂಬು ತೆರವುಗೊಳಿಸಿ, ಕಳುಹಿಸಿದ ಚಿತ್ರ ವಾಟ್ಸ್ ಆಪ್ ಮಾಡಲಾಗಿತ್ತು. ದಂಡ ಸಹ ವಿಧಿಸಿರಲಿಲ್ಲ.. ವ್ಯವಸ್ಥೆ ಹಾಗಿದೆ. ಕಾರಣಗಳೂ ಹಂಗೇ ಇವೆ!)
ಇದು ಬೇಕೆ?! ಪಾಪದ ಪ್ರಾಣಿಯ ಕೊಂಬು ಅಲಂಕಾರಿಕ ವಸ್ತುವೇ?! ಕಾನೂನಿ ಅವಜ್ಞೆ ಅಥವಾ ತಿಳಿವಳಿಕೆ ಇಲ್ಲದಿರುವುದು ಕ್ಷಮ್ಯವೇ?!
ಆದರೆ ಬಹುತೇಕ ಅಸಲಿ ಕೊಂಬುಗಳೇ ಈ ರಿಕ್ಷಾಗಳ ಮುಡಿ ಏರಿವೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ -೧೯೭೨ರ ಅಡಿ; (Chapter V-A, Sections 49-A to 49-C, Prohibition of Trade or Commerce in Trophies, Animal Articles, etc, derived from certain animals/ Scheduled animals/ Declaration by dealers - Indian Wildlife Protection Act - 1972 with effect from 2.10.1991 & Subsection 33 & 35) ಕೊಂಬುಗಳನ್ನು ಹೊಂದುವಂತಿಲ್ಲ. ಮಾರಾಟ ಮಾಡುವಂತಿಲ್ಲ. ಪ್ರದರ್ಶನಕ್ಕೆ ಅಣಿಗೊಳಿಸುವಂತಿಲ್ಲ. ಅಲಂಕಾರಿಕ ವಸ್ತುವಂತೆ ಬಳಸುವಂತಿಲ್ಲ.
ಆದರೆ, ಅವಳಿ ನಗರದಲ್ಲಿ ರಾಜಾರೋಷವಾಗಿ ಕೊಂಬುಗಳನ್ನು #mountedtrophy ತರಹ ಬಳಸಲಾಗುತ್ತಿದೆ. ಮೂರು ವರ್ಷಗಳ ಹಿಂದೆ ನೇಚರ್ ರಿಸರ್ಚ್ ಸೆಂಟರ್ ಧಾರವಾಡ ವತಿಯಿಂದ ಜಾಗ್ರತಿ ಕಾರ್ಯಕ್ರಮ ನಡೆಸಿ, ಅವುಗಳನ್ನು ತೆಗೆದು ಹಾಕಿ, ಅರಣ್ಯ ಇಲಾಖೆ ಸುಪರ್ದಿಗೆ ನೀಡುವಂತೆ #OneTimeDrive ನಡೆಸಲಾಗಿತ್ತು. ಕೋವಿಡ್ -೧೯ ರ ಲಾಕ್ ಡೌನ್ ಬಳಿಕ ಮತ್ತೆ ಇದು ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದೆ.
ಕೃಷ್ಣ ಮೃಗದ ಕೊಂಬು ಸಾಮಾನ್ಯವಾಗಿ ಸಂತಾನೋತ್ಪತ್ತಿ ಹಕ್ಕು ಸ್ಥಾಪನೆ ಸಂದರ್ಭದಲ್ಲಿ, ವ್ಯಾಪ್ತಿಯ ನಿರ್ಣಯಕ್ಕಾಗಿ ನಡೆಯುವ ಗಂಡುಗಳ ಮಧ್ಯದ ಸೆಣಸಾಟದಲ್ಲಿ, ಮುರಿದು ರೈತಾಪಿ ವರ್ಗಕ್ಕೆ ಹೊಲದಲ್ಲಿ ಅನಾಯಾಸವಾಗಿ ಸಿಕ್ಕ ಉದಾಹರಣೆಗಳಿವೆ. ಚುಕ್ಕೆ ಜಿಂಕೆಯ ಕೊಂಬು ಸಹ..
ಆದರೆ, ಇಷ್ಟೊಂದು ಸಂಖ್ಯೆಯಲ್ಲಿ ರಿಕ್ಷಾಗಳ ಮೇಲೆ ಕೃಷ್ಣ ಮೃಗದ ಕೊಂಬು ಅಲಂಕರಿಸಬೇಕಾದರೆ, ಕೊಂಬುಗಳು ಲಭ್ಯವಾಗುತ್ತಿರುವ ಮೂಲ ಯಾವುದು? ಬೇಟೆಯಾಡಿದ ಬಳಿಕ ಹಸ್ತಾಂತರ ಗೊಳ್ಳುತ್ತ ಬಂದು, ಹೀಗೆ ನಮ್ಮೂರ ಹದ್ದು ತಲುಪಿರಬಹುದು. ಒಟ್ಟಾರೆ, ಅವುಗಳ ಕೊಂಬೇ ಮರಣ ಶಾಸನವಾಗುತ್ತಿದೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕೃಷ್ಣ ಮೃಗಗಳ ವನ್ಯಧಾಮ,ಧಾರವಾಡದಿಂದ ಕೇವಲ ೧೨೦ ಕಿ.ಮೀ. ದೂರವಷ್ಟೇ..?!
ಅಬ್ಬರದ ಸ್ಪೀಕರ್ ಗಳು, ಕರ್ಕಷ ಏರ್ ಹಾರ್ನ್ ಮತ್ತು ಇಡೀ ಕನ್ನಡಿ ಮೇಲೆ ಚಿತ್ತಾರ, ಅಲಂಕಾರದ ಗೊಂಡೆಗಳು, ಚಿತ್ತಾಕರ್ಷಕ ನಂಬರ್ ಪ್ಲೇಟ್, ಮೀಟರ್ ಬಳಕೆಯಲ್ಲಿ ಇಲ್ಲದಿರುವುದು.. ಎಲ್ಲವೂ ಕಾನೂನು ಬಾಹಿರ.. ಇಲಾಖೆಗಳ ಮಧ್ಯೆ ಸಹಕಾರ ಮತ್ತು ಸಮನ್ವಯತೆ ಕೊರತೆ ಸುಧಾರಿಸುವುದು ಎಂದೋ?
ಅವಳಿ ನಗರದಲ್ಲಿ ೯,೦೦೦ ರಿಕ್ಷಾಗಳಿವೆ ಎಂಬ ಅಂದಾಜಿದೆ! ಯಾವ ರಸ್ತೆ, ನಿಲ್ದಾಣ ಮತ್ತು ನಿಲುಗಡೆ ಸ್ಥಳ ಸಾತೀತು ನಮ್ಮಂತಹ ಬಡಪಾಯಿಗಳಿಗೆ?! ನೀವೇ ಹೇಳಿ..
ಸಂಚಾರ ವ್ಯವಸ್ಥೆ ಮತ್ತು ರಸ್ತೆಗಳ ಧಾರಣಾ ಶಕ್ತಿ ಲೆಕ್ಕಿಸದ ಆರ್.ಟಿ.ಓ. ಪರವಾನಿಗೆ ನೀಡಿ, ಬಳಿಕ ಯೋಚಿಸುವ ಜಾಯಮಾನದವರು ಎನಿಸುತ್ತದೆ..
ಶ್ರೀ ಸಾಮಾನ್ಯನ ಬದುಕು #smartcity ಯಲ್ಲಿ ಸಹ್ಯವಾಗುವ ಲಕ್ಷಣಗಳಂತೂ ಸದ್ಯಕ್ಕಿಲ್ಲ..
ಏನಾದರೂ ಮಾಡಿ ಸರ್..
Deputy Commissioner Dharwad
Dcf Dharwad
Hdmc Controlroom
🙆😢🙏

Post a Comment