“ದೇವಾಯತನಂ-ಭಾರತೀಯ ದೇವಾಲಯ ವಾಸ್ತುಶಿಲ್ಪ ಅದ್ಭುತ ಮಹಾಕಾವ್ಯ” ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನಹಂಪಿಯಲ್ಲಿ

 


ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್ ವತಿಯಿಂದ ಹಂಪಿಯಲ್ಲಿ ದೇವಾಲಯ ವಾಸ್ತುಶಿಲ್ಪ  “ದೇವಾಯತನಂ-ಭಾರತೀಯ ದೇವಾಲಯ ವಾಸ್ತುಶಿಲ್ಪ ಅದ್ಭುತ ಮಹಾಕಾವ್ಯ” ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ

ಹೊಸಪೇಟೆ, 24 ಫೆಬ್ರವರಿ 2022

ರಾಷ್ಟ್ರವ್ಯಾಪಿ ನಡೆಯುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್ ಐ) ಹಂಪಿ (ಕರ್ನಾಟಕ)ಯಲ್ಲಿ  2022ರ ಫೆಬ್ರವರಿ25-26ರಂದು ಎರಡು ದಿನಗಳ “ದೇವಯಾತನಂ-ಭಾರತೀಯ ದೇವಾಲಯ ವಾಸ್ತುಶಿಲ್ಪ ಅದ್ಭುತ ಮಹಾಕಾವ್ಯ” ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ.

ಕೇಂದ್ರ ಸಂಸ್ಕೃತಿ ಸಚಿವರಾದ ಶ್ರೀ ಜಿ. ಕಿಶನ್ ರೆಡ್ಡಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.  ಸಂಸ್ಕೃತಿ ಖಾತೆ ರಾಜ್ಯ ಸಚಿವ ಗೌರವಾನ್ವಿತ ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರು ವರ್ಚುವಲ್ ಮುಲಕ  ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಉದ್ಘಾಟನಾ ಸಮಾರಂಭವು ಹಂಪಿ ಪಟ್ಟಾಭಿರಾಮ ದೇವಸ್ಥಾನದಲ್ಲಿ ನಡೆಯಲಿದ್ದುಶೈಕ್ಷಣಿಕ ಅಧಿವೇಶನಗಳನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸಮ್ಮೇಳನಕ್ಕೆ ಆಯ್ಕೆಮಾಡಿರುವ ಸ್ಥಳ ಹಂಪಿ1336 ರಿಂದ 1556 ವರೆಗೆ ಎರಡು ಶತಮಾನಕ್ಕೂ ಅಧಿಕ ಕಾಲ ವಿಜಯನಗರದ ಮಹಾ ಮಧ್ಯಕಾಲೀನ ಯುಗದ ಸಾಮ್ರಾಜ್ಯದ ರಾಜಧಾನಿಯಾಗಿ ವೈಭವ ಮೆರೆದಿತ್ತು.

ದೇವಾಲಯವು ತನ್ನದೇ ಆದ ರೀತಿಯಲ್ಲಿ ಭಾರತೀಯ ಜೀವನದ ಅವಿಭಾಜ್ಯ ಅಂಗವಾಗಿದೆ. ದೇವಾಲಯದ ನಿರ್ಮಾಣವು ಉಪಖಂಡದಲ್ಲಿ ಮಾತ್ರವಲ್ಲದೆ ಆಗ್ನೇಯ ಮತ್ತು ಪೂರ್ವ ಏಷ್ಯಾದಂತಹ ಹತ್ತಿರದ ನೆರೆಹೊರೆ ರಾಷ್ಟ್ರಗಳಿಗೂ ಹರಡಿದೆ. ಆದ್ದರಿಂದದೇವಾಲಯದ ವಾಸ್ತುಶಿಲ್ಪದ ಕಲೆ ಮತ್ತು ತಂತ್ರವು ಹೇಗೆ ಹರಡಿತು ಎಂಬುದು ಆಸಕ್ತಿಕರ ಅಧ್ಯಯನವಾಗಿದೆ. ಭಾರತವು ಇತರ ಪ್ರದೇಶಗಳಿಗೆ ಮತ್ತು ಸ್ಥಳೀಯ ಅಗತ್ಯಗಳಿಗೆ ಸರಿಹೊಂದುವಂತೆ ಈ ಕಲೆಯನ್ನು ಹೇಗೆ ಮಾರ್ಪಡಿಸಲಾಗಿದೆ ಮತ್ತು ಅದು ಹೇಗೆ ಹೊಸ ವಾಸ್ತುಶಿಲ್ಪದ ಶೈಲಿಗಳ ಅಭಿವೃದ್ಧಿಗೆ ಸ್ಫೂರ್ತಿ ನೀಡುತ್ತದೆ ಎಂಬುದು ಮುಖ್ಯವಾಗಿದೆ.

ಸಮ್ಮೇಳನವು ದೇವಾಲಯಗಳ ತಾತ್ವಿಕಧಾರ್ಮಿಕಸಾಮಾಜಿಕಆರ್ಥಿಕತಾಂತ್ರಿಕವೈಜ್ಞಾನಿಕಕಲೆ ಮತ್ತು ವಾಸ್ತುಶಿಲ್ಪದ ಅಂಶಗಳನ್ನು ಚರ್ಚಿಸುವ ಉದ್ದೇಶ ಹೊಂದಿದೆ. ಅಲ್ಲದೆನಾಗರವೇಸರದ್ರಾವಿಡಕಳಿಂಗಾ ಮತ್ತು ಇತರ ದೇವಾಲಯಗಳ ವಾಸ್ತುಶಿಲ್ಪದ ನಾನಾ ಶೈಲಿಗಳ ಉದಯ ಮತ್ತು ಅಭಿವೃದ್ಧಿಯ ಕುರಿತು ಸಂವಾದ ಆಯೋಜಿಸಲಾಗಿದೆ.

ಭಾರತದ ದೇವಾಲ‌ಯದ ವಾಸ್ತುಶಿಲ್ಪದ ನಾನಾ ಆಯಾಮಗಳು ಅಂದರೆ ದೇವಾಲಯ- ರೂಪವಿಲ್ಲದಿರುವುದಕ್ಕೆ ರೂಪ‌ ನೀಡುವುದುದೇವಾಲಯ-ದೇಗುಲ ವಾಸ್ತುಶಿಲ್ಪದ ಉದಯದೇವಾಲಯ- ಪ್ರಾದೇಶಿಕ ಸ್ವರೂಪ ಮತ್ತು ವಿನ್ಯಾಸದ ಅಭಿವೃದ್ಧಿದೇವಾಲಯ- ಕಲೆಸಂಸ್ಕೃತಿಶಿಕ್ಷಣಆಡಳಿತ ಮತ್ತು ಆರ್ಥಿಕತೆಯ ಕೇಂದ್ರ ಬಿಂದುದೇವಾಲಯ- ಪರಿಸರ ಸಂರಕ್ಷಣೆದೇವಾಲಯ-ಆಗ್ನೇಯ ಏಷ್ಯಾದಲ್ಲಿ ಸಂಸ್ಕೃತಿ ಪ್ರಸರಣ ಸೇರಿದಂತೆ ನಾನಾ ವಿಷಯಗಳ ಗೋಷ್ಠಿಗಳು ನಡೆಯಲಿವೆ.

ಈ ಸಮ್ಮೇಳನ  ಭಾರತೀಯ ಇತಿಹಾಸದ ವಿದ್ವಾಂಸರು ಹಾಗೂ ವಿದ್ಯಾರ್ಥಿಗಳುಪುರಾತತ್ವಸಂಸ್ಕೃತಿ ಮತ್ತು ವಾಸ್ತುಶಿಲ್ಪ ಮತ್ತು ಸಾಮಾನ್ಯ ಜನರಿಗೆ  ಅನುಕೂಲವಾಗಲಿದೆ. ನಮ್ಮ‌ಪರಂಪರೆಯ ಬಗ್ಗೆ ತಿಳಿಯಲು ಮತ್ತು ಕಲಿಕೆ ಸೇರಿದಂತೆ ವಿದ್ಯಾರ್ಥಿಗಳು ಮತ್ತು ವಿದ್ವಾಂಸರಿಗೆ ಆಸಕ್ತಿ ಬೆಳೆಸುವ ಗುರಿಯನ್ನು ಸಮ್ಮೇಳನ ಹೊಂದಿದೆ.

ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯು ಭಾರತದ ಸಾಮಾಜಿಕ-ಸಾಂಸ್ಕೃತಿಕರಾಜಕೀಯ ಮತ್ತು ಆರ್ಥಿಕ ಗುರುತು ಮತ್ತು ಸ್ವಾತಂತ್ರ್ಯದ ನಂತರದ ಪ್ರಗತಿಯನ್ನು ಗುರುತಿಸುವುದಾಗಿದೆ.

Post a Comment

Previous Post Next Post