[24/02, 1:37 PM]
ಮುಖ್ಯ ವರದಿಗಾರರಿಗೆ,
ಮಾನ್ಯರೇ,
*ವಿಷಯ: ಮೇಕೆದಾಟು 2.0 ಪಾದಯಾತ್ರೆ ವರದಿಗೆ ಆಗಮಿಸುವವರ ಹೆಸರು, ಫೋನ್ ನಂಬರ್ ನೀಡಲು ಮನವಿ.*
ಕೆಪಿಸಿಸಿ ವತಿಯಿಂದ ದಿನಾಂಕ 27-02-2022 ರಂದು ಭಾನುವಾರದಿಂದ 03-03-2022 ರವರೆಗೆ ಮೇಕೆದಾಟು ಪಾದಯಾತ್ರೆ ಮತ್ತೆ ರಾಮನಗರದಿಂದ ಬೆಂಗಳೂರುವರೆಗೆ ನಡೆಯಲಿದೆ.
ಸದರಿ ಕಾರ್ಯಕ್ರಮದ ವರದಿಗಾಗಿ ವರದಿಗಾರರು, ಫೋಟೋಗ್ರಾಫರ್ಸ್, ವಿಡಿಯೋ ಗ್ರಾಫರ್ ಗಳನ್ನು ಕರೆದೊಯ್ಯಲು ದಿನಾಂಕ 26-02-2022 ರಂದು ಶನಿವಾರ ಸಂಜೆ 5.00 ಕ್ಕೆ ಬೆಂಗಳೂರಿನ ಪ್ರೆಸ್ ಕ್ಲಬ್ ಬಳಿಯಿಂದ ವಾಹನ ವ್ಯವಸ್ಥೆ ಮಾಡಲಾಗಿದೆ.
ದಯಮಾಡಿ ವರದಿಗೆ ಆಗಮಿಸುವವರ ಹೆಸರು ಮತ್ತು ಅವರ ದೂರವಾಣಿ ಸಂಖ್ಯೆಯನ್ನು 25-02-2022 ರಂದು ಶುಕ್ರವಾರ ಸಂಜೆ 5.00 ಗಂಟೆ ಒಳಗೆ ತಿಳಿಸಿದರೆ, ಅವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಅನುಕೂಲವಾಗುತ್ತದೆ.
ಸಂಪರ್ಕಿಸಬೇಕಾದವರ ಹೆಸರು: ರವಿ, ಕೆಪಿಸಿಸಿ ಮಾಧ್ಯಮ ಸಮನ್ವಯಕಾರ, ಮೊಬೈಲ್ ಫೋನ್ ನಂಬರ್: 9008829855.
ಧನ್ಯವಾದಗಳು
ಕೆಪಿಸಿಸಿ ಮಾಧ್ಯಮ ವಿಭಾಗ
[24/02, 7:55 PM] ದೆಹಲಿಯಲ್ಲಿ ಗುರುವಾರ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ, ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್, ಈಶ್ವರ್ ಖಂಡ್ರೆ ಸತೀಶ್ ಜಾರಕಿಹೊಳಿ, ಧ್ರುವ ನಾರಾಯಣ್, ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ ಪಾಟೀಲ್, ಮಾಜಿ ಉಪಮುಖ್ಯಮಂತ್ರಿಗಳಾದ ಡಾ ಜಿ ಪರಮೇಶ್ವರ, ರಾಜ್ಯ ಸಭಾ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಗೋವಾ ರಾಜ್ಯ ಉಸ್ತುವಾರಿ ದಿನೇಶ್ ಗೂಂಡುರಾವ್, ಮಾಜಿ ಕೇಂದ್ರ ಸಚಿವರಾದ ಕೆ ಹೆಚ್ ಮುನಿಯಪ್ಪ, ಎಂ ವೀರಪ್ಪ ಮೊಯ್ಲಿ, ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ಹೆಚ್.ಕೆ ಪಾಟೀಲ್, ಮಾಜಿ ಸಚಿವರಾದ ಕೆ.ಜೆ ಜಾರ್ಜ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ ಶ್ರೀನಿವಾಸ್ , ವಿಧಾನ ಸಭಾ ವಿರೋಧ ಪಕ್ಷದ ಉಪ ನಾಯಕರಾದ ಯು.ಟಿ ಖಾಧರ್ ಮತ್ತಿತರರು ಭಾಗವಹಿಸಿದ್ದರು.
Post a Comment